ಕಡೆ ಬಾರಿ

ಗಾಯದ ಉರಿ ಆರಿದ ಮೇಲೆ ವಿಮರ್ಶೆಯ ಹರಿವು ತಿಳಿಯಾಗುತ್ತದೆ , nonbiased ಆಗಿ ಪಕ್ವಗೊಳ್ಳುತ್ತದೆ.ಹೆಚ್ಚು ಕಡಿಮೆ ಒಂದು ವರ್ಷ, ಸಾವಿನ ಸೂತಕವು ತೆಳುವಾಗೋಷ್ಟು ದೊಡ್ಡ ಸಮಯ ….
ಅದಾಗಲೇ ಸಿದ್ದಿಸಿದೆಯೊ ಅಥವ ಇನ್ನೂ ಇಲ್ಲವೋ ಗೊತ್ತಿಲ್ಲ…. ಉತ್ತರಗಳಿಲ್ಲದ ಪ್ರಶ್ನೆಗಳಿಗೆ ಸ್ಪಷ್ಟೀಕರಣವನ್ನ ಕಾಲವೇ ನೀಡಬೇಕು ಕಣ್ಣಿಗೆ …

ನನ್ನಂತ ನೇರ ಸಿಂಪಲ್ ಹುಡುಗಿಯನ್ನು ಅಷ್ಟು ಅನುಮಾನಿಸಿದ, ಅವಮಾನಿಸಿದ ಎಂದರೆ ಯಾವ ಪರಿಯ complex ಗಳು ಅವನ್ನ್ನನ್ನು ಕಾಡಿರಬಹುದು.ಅದು ಅವನು ತೋರಿಸಿಕೊಳ್ಳುವಂತೆ superior complexಗಳಾ ಇಲ್ಲವೇ ಅದರ ಹಿಂದೆ ಅಡಗಿದ್ದ inferior complex ಗಳ ?

ಅದೆಲ್ಲದಕ್ಕಿಂತ ನಾನು ಮತ್ತೆ ಮತ್ತೆ ನರ್ವಸ್ ಆಗುವುದು ಯಾವ ರೀತಿಗಳಿಂದಲೂ handle ಮಾಡಲು ಸಾದ್ಯವಿಲ್ಲ ಅನಿಸುವಷ್ಟು ಕ್ಲಿಷ್ಟ , ಕಗ್ಗಂಟು , ಪ್ರಶ್ನಾತೀತವಾಗಿ ಬದುಕ್ಕುತ್ತಾರಲ್ಲ ಮತ್ತು ಅದನ್ನೇ celebrate ಮಾಡಿಕೊಳ್ಳುತ್ತಾರಲ್ಲ ಸಾಮಾರಸ್ಯವೇ ಬೇಕಿಲ್ಲವಲ್ಲ ಅವರಿಗೆ ಅಂತ .ಕೇವಲ ಭಯ, ಭೀತಿ ,disappointment ,ಖಿನ್ನತೆಗಳು ನನ್ನನ್ನಾವರಿಸಿ ಕಾಡುವಂತೆ ನಡೆದುಕೊಳ್ಳುತ್ತಾನೆಂದರೆ , ಗಂಡಸಾಗಿ ಹೆಣ್ಣನ್ನು ಗೆದ್ದ ಸಂತೋಷವನ್ನು ಹೀಗೂ ಪಡೆಯುತ್ತಾನೆಂದರೆ, ಅ ಸ್ವಭಾವದ ಹೆಸರು ನನಗೆ ಗೊತ್ತು !
ಈಗಲೂ ಪಕ್ಕ ಬಂದರೆ ಮತ್ತೆ ಹಾಗೆ ಮನಸು ನಡುಗುತ್ತದಲ್ಲ ,ಮನೆಯಲ್ಲಿ ನಡೆಯುವ ಭಯೋತ್ಪಾದನೆ, ಎಮೋಷನಲ್ terrorismಗಳು ಜಾಗತಿಕ ಮಟ್ಟದ ಸಮಸ್ಯೆಗಿಂತ ಎಷ್ಟು hopeless ಅನಿಸುತ್ತದೆ !!!!
ಆ ದಿನಗಳಲ್ಲಿ ನನ್ನೆದೆ ಮೇಲೆ stethoscope ಇಟ್ಟಿದ್ದಿದರೆ, ಮತ್ತು ಆ ಸದ್ದು ನನ್ನ ತಂದೆ ಬದುಕಿದ್ದು ಅವರ ಕಿವಿಗೆ ಬಿದ್ದಿದ್ದಿದ್ದರೆ ಅವರ ಗುಂಡಿಗೆಯೇ ಒಡೆದುಹೋಗಿರುತ್ತಿತ್ತೇನೊ ….ಸತ್ತ ದುಡ್ಡಲ್ಲಿ ಸಮಾಧಿಕಟ್ಟದೆ ಮದುವೆ ಮಾಡಿಕೊಂಡಿದ್ದೆ , ಎರಡಕ್ಕೂ ವ್ಯತ್ಯಾಸವೇನು ಇರದಂತಾಗಿ ಹೋಯ್ತು …. ನನ್ನಂತ ಹುಡುಗಿಗೆ ಹಾಗಾಗಿದ್ದರೆ ನನಗಿಂತ ನಾಜೂಕ, ಪುಕ್ಕಲುಗಳು ಏನಾಗಿಬಿಡುತ್ತಿದ್ದರೋ….

ಒಳರಾಜಕೀಯ , ಡ್ರಾಮ , mindgamesಗಳನ್ನು ಕಾರಣವೇ ಇಲ್ಲದೆ ಸುಮ್ಮಸುಮ್ಮನೆ extremesಗಳಲ್ಲಿ ಉಪಯೋಗಿಸುತ್ತಾ, ದಿನಾ ಬೆಳಗಾದರೆ ಬಣ್ಣ ಬಳೆದುಕೊಂಡವರಂತೆ attitude ಗಳನ್ನೂ ಧರಿಸಿ ಬದುಕುತ್ತಾರಲ್ಲ , ಸರಳವಾಗಿ,ಹಗುರವಾಗಿ ಬದುಕೋ ಸುಖ, ಖುಷಿ ಅವರಿಗೇನು ಗೊತ್ತು …ಕಡೆಗೆ ಇಂತವರೆಲ್ಲಾ ಏನು ಸಾಧಿಸಿ ಗುಡ್ಡೆ ಹಾಕಿಕೊಳ್ಳುತ್ತಾರೆ ……ಹೋಗುವಾಗ ಏನು ಎತ್ತಿಕೊಂಡು ಹೋಗುತ್ತಾರೆ ?

ಅದೆಲ್ಲಾ ಹಾಳಾಗಿ ಹೋಗಲಿ…ಹೆಣ್ಣೆಂದರೆ ಮೋಹ, ಭೋಗ , ದೇಹದ ವಾಂಛೆ ಅಂತೆಲ್ಲಾ ಗಂಡಸುತನವನ್ನು ಸಮೀಕರಿಸುತ್ತಾರಲ್ಲ, ಅದೆಲ್ಲವನ್ನು ಬಿಟ್ಟು ಆರ್ಭಟದಲ್ಲಿ ಮಾತ್ರ ಗಂಡಸುತನ ತೋರಿಸುತ್ತಾನಲ್ಲ ಯಾರಿಗೆ ಅರ್ಥವಾಗೋಲ್ಲ ಒಳಗಿನ ಟೊಳ್ಳು !!!!
ಪ್ರೀತಿ, ಬಾಂಧವ್ಯ , ಬಂಧನ , ಕರ್ತವ್ಯ , ಧರ್ಮ, ಕರ್ಮ ಯಾವುದು ತಟ್ಟದೆ ಕೇವಲ logic , judgement ,mistake, misunderstandingಗಳು ನಡೆದಾಡುತ್ತವಲ್ಲಾ ,ಅಸಲಿಗೆ ಅವನಿಗೆ ಪ್ರೀತಿಯೇ ಬೇಡವಾಗಿತ್ತಾ ……… ಅಂತವರು ಇರುತ್ತಾರ ?
ಒಂದು ಪಕ್ಷ ದೈಹಿಕ ನ್ಯೂನ್ಯತೆಗಳಿದ್ದಿದ್ದರೂ ಪ್ರೀತಿ ಒಂದಿದ್ದರೆ ಸಾಕು ಅನ್ನುವಷ್ಟು ಒಳ್ಳೆತನ ಇಟ್ಟುಕೊಂಡಿದ್ದೆನಲ್ಲ ಅದು ಕೂಡ ಬೇಕಾಗಿಲ್ಲದ ಸ್ವಾರ್ಥದಿಂದ ಏನು ಸಾಧಿಸಬೇಕಿತ್ತು ?

ಎಲ್ಲದಕ್ಕಿಂತಲೂ ನಾನು ಹೆಚ್ಚು curious ಆಗುವುದು ಅವನ ಮುಂದಿನ ಭವಿಷ್ಯವೇನು … ಇನ್ನೆಂತ ಹುಡುಗಿಯನ್ನು ತಂದು ಕಟ್ಟಿದರೆ ಬಾಳಿಸಬಹುದು ಅವನು ಎನ್ನುವುದರ ಬಗ್ಗೆ …..
ಬೇರುಗಳನೆಲ್ಲಾ ಹೊಕ್ಕಿ ನರನರದ ನಂಬಿಕೆಗಳನೆಲ್ಲ ಆವರಿಸಿರುವುದು ಕೆಟ್ಟ ನೀತಿ, ಹಿಂಸಾತ್ಮಕತೆಯೇ …. ಯಾವ ಹುಡುಗಿಯ ಹೆಣ್ತನ ಎಷ್ಟು ಅಂತ ತಾನೇ ಸಹಿಸಿಕೊಳ್ಳುತ್ತದೆ ..ಒಂದೋ ಹುಡುಗಿ mindgames ಆಡೋಷ್ಟು ತೀರ ಬುದ್ದಿವಂತೆಯಾಗಿರಬೇಕು, ಸುಖ ಎಂದರೆ ಜರತಾರಿ ಸೀರೆ, ಅರ್ದ kg ಚಿನ್ನ , ದೊಡ್ಡ ದೊಡ್ಡ complexu ಅಂತ ನಂಬಿಕೊಂಡು ಕುಶಿಪಡುವವಳಾಗಿರಬೇಕು ಇಲ್ಲ ಯಾವ ಲಾಭಕ್ಕು ನಷ್ಟಕ್ಕು ಸಿಕ್ಕದ ಪೆದ್ದು ಅಸಹಾಯಕಳಾಗಿರಬೇಕು ….. ಓದಿದ ಹುಡುಗಿ ಆಗಿ ಬರೋಲ್ಲ ಆ ಮನೆಗೆ …!!! ಮರ್ಯಾದೆ ಗಳಿಸಿಕೊಳ್ಳಲು , ಮತ್ತೆ ಸೋಲದಿರಲು ಗಂಡನೆಂಬ ಮ್ಯೂಟ್ ರೋಬೋಟ್ ಆಗಬಹುದು ಅವನು..ಆದರೆ ಇನ್ಯಾರೋ ಕಾಯಿ ನಡೆಸಬೇಕು ಎನ್ನುವ ರೀತಿಯಂತು ಬದಲಾಗೋಲ್ಲಾ ಅಲ್ಲಿ ….. ಅಂತ ಹುಡುಗಿ ಎಲ್ಲಿ ಸಿಗಬಹುದು ?
ಅಯ್ಯೋ ಈ ಮಣ್ಣು ಕಂಡ ಎಷ್ಟನೆ ಕತೆಯೋ ಇದು ಸಿಕ್ಕೆ ಸಿಗುತ್ತಾರೆ ….ನಂತರ ಎಲ್ಲವು ಸರಿಯೂ ಆಗಿ ನಡೆಯುತ್ತದೆ …. ಬಾಡಿಗೆ , ಬಡ್ಡಿ, ಸಂಬಳ ಆಸೆ ತೋರಿಸಿದರೆ ಬಡವರ ಮನೆಯವರು ಕಳೆದು ಹೋಗುತ್ತಾರೆ ….
ಆದರೆ ಅವನು ಹೈ ಎಂಡ್ ಫ್ಯಾಷನ್ ನವನು ,ಮೆಚ್ಚುತ್ತಾನ ? ಅವನೇ ಮತ್ಯಾರನ್ನೋ ಬಲೆಗೆ ಬೀಳಿಸಿಕೊಂಡರೆ, ಇಳಿದ ಮೇಲೆ ಆಳ ಗೊತ್ತಾಗೇ ಗೊತ್ತಾಗುತ್ತದೆ ..ಅಂತ ಯಾವ ಹುಡುಗಿ ಅವನ ಹಿಂಸೆ ಸಹಿಸುತ್ತಾಳೆ ..

ಏನೇನೋ ಎಣಿಕೆಗಳು!
ಹೆಂಡತಿಯನ್ನು ಬಿಡುವುದನ್ನು ಗೆಲುವು ಎಂದು ತಿಳಿದುಕೊಂಡಿದ್ದಾನೆ ..ಜನ ಇತ್ತೀಚೆಗೆ ಸೂ…ಮಗ ಸಂಭೋದಿಸದೆ ಅವನನ್ನು ನೆನೆಸಿಕೊಳ್ಳೋದೇ ಇಲ್ಲ….. ಅವರುಗಳೇ ಹಿಡಿದುಕೊಂಡು ಬರೋ ಜನ ಅವನ ಮುಂದೆ ಆಡದ್ದಿದ್ದರು , ನೀತಿ ರೀತಿ ಎರಡು ಸರಿಯಿಲ್ಲ್ಲ ಅಂತ ಹಿಂದೆ ನಿಂತು ಹೇಳುತ್ತಾರೆ ..ಅವರಿಗೆ ಸ್ವಂತದವರು, ಅಕ್ಕಪಕ್ಕದವರು ಉಗಿದ್ದದ್ದೆ ಉಗಿದ್ದದ್ದು …. ಅವರ ಪರ ಎಲ್ಲ ಇದ್ದಾರೆ ಅಂತಲೇ ಇನ್ನು ಅವರ ನಂಬಿಕೆ …….ಅವೆಲ್ಲ ರಾಜಕೀಯ

ನನ್ನಂತ ಹುಡುಗಿಯ ಉತ್ಕಟ ಪ್ರೇಮ ಅನುಭವ ಮಾಡಿಕೊಳ್ಳದೆ ಹೋದನಲ್ಲ ಪಾಪಿಷ್ಟ ಅನ್ನೋ ಹೊಟ್ಟೆ ಉರಿಯೇ ಅಧಿಕ ನನಗೆ ..ಮತ್ತೆ ಸೋತ ಸೋಲುಕೂಡ …. ನನ್ನನ್ನು ದ್ವೇಷಿಸುವ ವೈರಿಗಳಾದರು ಇದ್ದರ ? ನಿನ್ನ ಅಭಿವ್ಯಕ್ತಿ ಸಕ್ಕಾತಾಗಿದೆ, ಎಷ್ಟು ಚೆನ್ನಾಗಿ ಅರ್ಥಮಾಡಿಸುತ್ತೀಯ, ಎದೆಗೆ ತಲೆಗೆ ಧಾಟಿಸುತ್ತೀಯ, ಚೆಂದ ಬರೆಯುತ್ತೀಯ , ಒಂತರ ಟಿಪಿಕಲ್ ನೀನು ….. ಎಲ್ಲಿಗೆ ಹೊರಟು ಹೋಯಿತು ಆ ಶಕ್ತಿ .. ಅವನಿಗೆ ಆಗಿದೆಲ್ಲವು ಬರಿ ಅಪಾರ್ಥಗಳೇ…. ಅರ್ಥವಾಗೋದು ಬೇಕೇ ಇರಲಿಲ್ಲ್ಲ ಅವನಿಗೆ …ಪ್ರಯತ್ನ ಇರಲಿಲ್ಲ , ಸರಿ ,ಆದರೆ ನನ್ನ ಪ್ರಯತ್ನ ಮಾಡಲಾದರೂ ಬಿಡಬಹುದಿತ್ತಲವ, ಬಾಯಿ ಮುಚ್ಚಿಹಾಕಿದ ? ಲಾಭ ಮತ್ತು safety ಗಿಂತ ಮತ್ಯಾವುದು ಅವನಿಗೆ ಬೇಕೇ ಇಲ್ಲಾ!!! ಜೊತೆಗೆ ಪ್ರತಿಷ್ಠೆ , ಭಯ, ದಿಮಾಕು ಬೇರೆ ….ನನ್ನ ತಾಳ್ಮೆಗೂ ಮಿತಿಯಿದೆ ……….

ನಿಜ ಸತ್ತ ಸಂಬಂಧದ ಬೆರಳು ಬಿಡಿಸಿಕೊಳ್ಳೋದು ಕಷ್ಟ…. ಆದರೆ ಅವನು ಅಷ್ಟು ಸುಲಭವಾಗಿ ಪ್ಯಾಂಟ್ ಗೆ ವರೆಸಿಕೊಂಡು ಎದ್ದುಹೋದ ಅಂದಮೇಲೆ ಇನ್ನೆಷ್ಟು ದಿನಾಂತ ಹೆಣಸಿಂಗರಿಸೋದು , ಗೋರಿ ಕಿತ್ತು ಅಳೋದು, ಹೆಣ ಬೆನ್ನಮೇಲೆ ಹೊತ್ತುಕೊಂಡು ನಡೆಯೋದು .. ಪ್ರಾಣ ಹೋದರು ಸಂಸಾರ ಮಾಡಲ್ವಂತೆ ಅವನು … ಅವರ ಮನೆ ಕಾಪಾಡಕ್ಕೆ ಏರಿಯ M.L .A ಯಾ ಕಾವಲು ಬೇರೆ ..!!!!! ಎರಡನೇ ಸಂಬಂಧ ಸಾದ್ಯ ಅಂತ ಅವರಂದ ಮೇಲು ನಾನು ಇನ್ನೂ ಅವನೇ ಬೇಕು ಅಂತ ಹೊರಳಾಡೋದು, ನರಳಾಡೋದು ಯಾಕೆ ?ನಾವು ಹುಡುಗಿಯರೇ ಹೀಗಾ …???
ಮದುವೆ , ತಾಳಿ, ಅರುಂಧತಿ ನಕ್ಷತ್ರ , ಫಸ್ಟ್ nightu ಅವೆಲ್ಲಾ ಅಷ್ಟು ಸುಲುಭಾನ…..? ಅವನಷ್ಟು ????
ಹೆಣ್ಣು ಮಕ್ಕಳನ್ನು ಉಪಯೋಗಿಸಿಕೊಂಡು ಹೀಗೆಲ್ಲ ಬಿಟ್ಟುಬಿಡಬಹುದ …compensation ವಿಷಯಕ್ಕೆ ಬಂದಾಗ ನಂದಲ್ಲ, ನಮ್ಮ ಅಮ್ಮನದು ಅಂತ ತಾರಮಯ್ಯ ಆಡೋದು ಗೊತ್ತು, ಓದಿರುವ ಹುಡುಗಿ ಅಂತ ತಿಪ್ಪೆ ಸಾರಿಸೋದು ಗೊತ್ತು ..ಕಡೆಗೆ ಏನೇನೋ ಲೆಕ್ಕ ತೋರಿಸಿ ನಮಗೆ ಕೊಡಬೇಕು ಅನ್ನೋ ಲೆವೆಲ್ಗು ಇಳಿತಾರೆ, ಇಲ್ಲ ಏನ್ಬೇಕಾದ್ರೂ ಮಾಡಿಕೊಳ್ಳಿ ಆಸ್ತಿ ಉಳಿಸಿಕೊಳ್ಳೋಕೆ ಜೈಲ್ ಗು ಹೋಗ್ತಿವಿ ಅಂತಾರೆ , ಬಂದಮೇಲೆ ಮಜಾ ಮಾಡ್ತೀವಿ ಅಂತಾರೆ …ಕಡೆ ಪಕ್ಷ ನನ್ನನ್ನು ಭೌಧಿಕವಾಗಿ ಮುಗಿಸಿದಕ್ಕೆ ಕಾನೂನಿನ ಪ್ರಕಾರ ಶಿಕ್ಷೆಯಾದರು ಬೇಡವ ?
ಕನಸುಕಂಗಳ ಹುಡುಗಿ ನಾನು… ಇರುವ ಅಷ್ಟು ಹನಿ ರಕ್ತದ ಕಣಕಣದಲ್ಲೂ, ಲಕ್ಷ ಲಕ್ಷ ಇರುವ ಒಂದಾದರು ಸೆಲ್ ನ ಒಳಗು , ನರನಾಡಿಗಳ ತುದಿಯಲ್ಲಿ ಹುಡುಕಿದರೂ ಸಿಗದ ಒಂದುಹನಿ ಜೀವನ ಪ್ರೀತಿ, ಚೈತನ್ಯ ಕಸಿದುಕೊಂಡಿದ್ದಕ್ಕಾದರು ಆದರು ಶಿಕ್ಷೆ ಬೇಡವೇ ??
ಸತ್ತ ಹೆಣಕ್ಕೆ ಒಂದು ಪೋಸ್ಟ್ ಮಾರ್ಟಂ, ಸಂಸ್ಕಾರ, ನಾಲ್ಕು ಕಣ್ಣ ಹನಿಗಳ ಬೀಳ್ಕೊಡುಗೆ ಕೂಡ ಇಲ್ಲದೆ, ಬೀದಿ ಹೆಣ ಮಾಡಿದನಲ್ಲ ಆ ಪಾಪಕ್ಕಾದರು ಒಂದು ಶಿಕ್ಷೆ ?

ಸಂಬಂಧ ಸಾಯಿಸಿದ್ದು ಯಾರು ?? ಕೇಳಿದರೆ ರೂಲ್ಸು regulationnu ಮಾತಾಡುತ್ತಾನೆ ….
ನಾನು ಗಂಡ , ಅವರು ನನ್ನ ಅಮ್ಮ, ನನ್ನ ಅಕ್ಕ, ನನ್ನ ಚಿಕ್ಕಪ್ಪ…. ನನ್ನ !.. ನನ್ನ..!. ನನ್ನ…! ನನ್ನ ಕೇಳದೆ ….. , ನನ್ನ ಇಷ್ಟವಿಲ್ಲದೆ , …ನನ್ನ ಮಾತು ಮೀರಿ … ಎಲ್ಲ ಮುಗಿದು ಹೋಯ್ತು ಚಪ್ಪಡಿ ಕಲ್ಲು ಎಳೆಯುತ್ತಾನೆ !!!!!!

ಅಯ್ಯೋ ನಮ್ಮ ಸಂಬಂಧ ಸತ್ತೆ ಹೋಗಿದೆಯ ? ಅಥವ ಜೀವಂತ ಕೋಮದಲ್ಲಿದೆಯ ? ಒಂದು ವೇಳೆ ಬದುಕಿದರೆ ಹಾಯಾಗಿ ಬಾಳುತ್ತದ , ಇಲ್ಲ ಮತ್ತೆ ಮತ್ತೆ ಸಾಯುತ್ತದ …ಸಾಯುತ್ತಲೇ ಬದುಕುತ್ತದ… ಬದುಕುತ್ತಲೇ ಸಾಯುತ್ತದ .. ಅತವ ಆಗಲೇ ಕೊಳೆತು ಹೋಗಿದೆಯ …. ಇವೆಲ್ಲ ನನ್ನ ಕಲ್ಪನೆಯ.. ಕನಸ..!!!!?
ಕೂತು ತೂಕಡಿಸುತ್ತೇನೆ ನಾನು …. ಮುಂದೆ ಬಂದು ನಿಲ್ಲುತ್ತಾನೆ , ಕಣ್ಣಲ್ಲಿ ನನಗೆ ಗೊತ್ತಿಲ್ಲದೇ ಹನಿ ಮೂಡುತ್ತೆ, ಕರಗುತ್ತಾನೆ, ಕೈ ಚಾಚುತ್ತಾನೆ … ಎಲ್ಲಾ ಮರೆತು, ಎಲ್ಲಾ ಬಿಟ್ಟು ಓಡಿಹೋಗಿ ಬಾಚಿ ತಬ್ಬಿಕೊಂಡು ಬಿಡುತ್ತೇನೆ … ಅವನು ಅಳುತ್ತಾನೆ .. ಜನ ನಾಚಿ ನಗುತ್ತಾರೆ….ಅಲ್ಲಿಂದ ಯಾರು ಮದ್ಯೆ ಬರೋಲ್ಲ ತೊಂದರೆ ಕೊಡಲ್ಲ ….ಮುಂದೆ ಒಂದು ಮೊಗುವಾಗುತ್ತದೆ ……
ಯಾರೋ ತಲೆಗೆ ಮೊಟಕುತ್ತಾರೆ….. ಎಚ್ಚೆತ್ತು ಕೊಳ್ಳುತ್ತೇನೆ
ಅದೇ ಕಚೇರಿ , ಅದೇ ದೌಲತ್ತು , ಬರುತ್ತಾನೆ ಜೊತೇ ಅದೇ ತಲೆಮಾಸಿದ ಇಬ್ಬರು…
ಮತ್ತೆ ಮತ್ತೆ ಯಾರು ಕೂಡಕ್ಷಮಿಸಲಾಗದಷ್ಟು ಕೆಟ್ಟಾಕೊಳಕು ಮಾತಾಡುತ್ತಾನೆ… ಸೂಳೆ, ಭೋಸುಡಿ , ಮುಂಡೆ, ಷೂ, ಚಪ್ಪಲಿ, ಎಲ್ಲದಕ್ಕೂ ಸರಿ !
ಪಡೆದುಕೊಂಡೆಯಿಲ್ಲ ಎಂದ ಮೇಲೆ , ಕಳೆದುಕೊಳ್ಳೋ ಮಾತೆಲ್ಲಿ … ಆಗಲೇ ಡಿಸೈಡ್ ಮಾಡಿಯಾಗಿಹೋಗಿದೆ…

ಎಂತ ಅಗತ್ಯವಿದ್ದರೂ ಯಾರು ಸಹಿಸಲ್ಲ … ಕಡೆಗೆ ನಾನು ಕೂಡ !
ಕಟ್ಟಾ ಕಡೆ ಬಾರಿಗೆ ಗಟ್ಟಿಮನಸು ಮಾಡಿ ನಾನು ಡಿಸೈಡ್ ಮಾಡಿಬಿಡುತ್ತೇನೆ
…. ಈ ಬಾರಿ ನನ್ನದು ಕಡೆ !!! ಕೇಸು ಕೋರ್ಟು ಸಾಕ್ಷಿ ,ಶಿಕ್ಷೆ

ಭಾಕಿ ಇದೆ ಇನ್ನು ……
ಕಡೆಗೂ ಏನು ಬದುಕಿದ … ಎಷ್ಟು ಜನ ಹೆಣದ ಎದುರು ಕುಣಿದರು, ಅವನ congradulate ಮಾಡಿದರು, ಆಸ್ತಿ ಉಳಿಸಿಕೊಂಡರು , ಭವ್ಯವಾಗಿ ಬದುಕಿದರು … ಜನರ ಮನಸಿನ ಸೂ …ಮಗ ಹೋಗಿ ಸಂಸಾರಸ್ತ ಆದನು.. ಯಾವ ಹುಡುಗಿಯ ತಾಯಿ ಮಾಡಿ ಡ್ಯಾಡಿ ಆದನು …. ಎಲ್ಲಾ ನಿಂತು ನೋಡಬೇಕು ನಾನು !!!!!

ಪ್ರೀತಿ ನಿರಾಕರಿಸುವವನಿಗೆ valentines day wishes

ಗೆಳತಿಯರು ಅಸೂಯೆ ಪಡುತ್ತಿದರು ನಿನ್ನ ಪಡೆವವನಿಗೆ ಅದೆಂತಾ ಸುಗ್ಗಿ, ಎಷ್ಟು ಬೆಳ್ಳಗಿದ್ಯ…ಅವೆಲ್ಲಾ ಕೇವಲ ದೇಹಕ್ಕೆ ಸಂಬಂಧಿಸಿದವು…ನನಗೊತ್ತು ನಾ ತುಂಬಾ ಒಳ್ಳೆಯವಳು .ಹೀಗೂ ಇರಬಹುದಾ ಅನಿಸುವಷ್ಟು ಸಿಂಪಲ್ಲು .ಓದು, ದುಡ್ಡು ಯಾವತ್ತು ನನ್ನಲ್ಲಿ ಅಹಂಕಾರ ಬಿತ್ತಲಿಲ್ಲ .ಸಣ್ಣಬುದ್ದಿ ನನ್ನಲ್ಲಿರಲಿಲ್ಲ , ಎಲ್ಲಾರು ಸಂತೋಷವಾಗಿರಲಿ ಎಂದೇ ಬಯಸುತ್ತಿದ್ದೆ.. ಸ್ವಾರ್ಥ ತೀರ minimal .. ಜವಾಬ್ದಾರಿ ಹೊತ್ತು, ಹಠ ತೊಟ್ಟು ಜಯಿಸಬಲ್ಲಂತ ಹುಮ್ಮಸಿತ್ತು..ಹಬ್ಬ, ಹರಿದಿನ, functionnu ಒಬ್ಬಳೇ ಬೇಕಾದರೂ ನೆರವೇರಿಸಿಬಿಡುತ್ತಿದ್ದೆ..ಕವನ, ಕತೆ ಏನೇನೋ ಹೊಸ ಒಳತೋಟಿ ಇತ್ತು… ನೆರವೇರಿಸಿಕೊಳ್ಳಬೇಕಾದ romantic ಕನಸುಗಳು ….. ನೀನು ತುಂಬಾ ನೇರ, ಪ್ರಾಮಾಣಿಕಳು ಹತ್ತಿರದಿಂದ ಬಲ್ಲವರು ಹೇಳಿದ್ದರು ……ನಿಜ ಒಳಗೊಂದು ಹೊರಗೊಂದು ನಾ ಬದುಕಲಾರೆ !!!ನೈಜ್ಯವಾಗಿ ಸರಳವಾಗಿ ಮುಖವಾಡವಿಲ್ಲದೆ ಬದುಕಬೇಕು ಅದೇ ನನ್ನ ಉದ್ದೇಶ , ಗುರಿ ….
ಜನ ಹೇಳುತ್ತಾರೆ ನಿನ್ನಂತ ಹುಡುಗಿಗೆ ಎಷ್ಟೊಂದು ಅನ್ಯಾಯ ಆಗಿ ಹೋಗಿದೆ … ನಿಜ ಅನ್ಯಾಯ ಆಗಿದೆ..ತುಂಬಲಾರದಷ್ಟು.. ನನನ್ನು ಅತಿಯಾಗಿ ನರಳಿಸಿದ್ದು ಅದೇ.. ನನ್ನಂತ ಹುಡುಗಿಗೂ ಅನ್ಯಾಯ ಮಾಡುದ್ರಲ್ಲ ಅನ್ನೋ self pity … ಸ್ವಯಂ ಮರುಕ …. ಇನ್ನೆಂತ ಹುಡುಗಿ ಬೇಕಿತ್ತು ಅವರಿಗೆ ಅನ್ನೋ ಆಶ್ಚರ್ಯ … ಸತ್ತೆ.. ಸತ್ತೆ… ನರಳಿ ನರಳಿ ಸತ್ತೆ.. ಪ್ರತಿ ಕ್ಷಣ ..ಪ್ರತಿ ಕ್ಷಣ .. ಗಾಯದ ನೋವು ಉರಿವಂತೆ ಸದಾ ಮನ !!! ತಿರಸ್ಕಾರ ಪಡುವಂತ ಖಾಲಿ ಖಾಲಿಯಾ ನಾನು …ಬದುಕು ಮುಗಿದು ಹೋಯಿತಾ ಭಯ..ಮುಂದೇನು ದುಗುಡ !!!
ಇದ್ದಕಿದ್ದಂಗೆ ಒಂದು ದಿನ ಅನಿಸಿತು.. ಛೆ ತೆಗಿ, ನನ್ನಂತ ಹುಡುಗಿಯ ಸಾಂಗತ್ಯ ಅನುಭವಿಸಲಾರದ ಅವನಿಗೆ, ನನ್ನೊಂದಿಗೆ ಬದುಕಲಾರದ ಅವನ ಅಹಂಕಾರಕ್ಕೆ , ಅವನ ಅದೃಷ್ಟಕ್ಕೆ ಅನ್ಯಾಯ ಆಗಿರುವುದು. ನಷ್ಟವಾಗಿರುವುದು ನನಗೊಬ್ಬಳಿಗಲ್ಲ…
ಆದರು ಬೆನ್ನು ಬಿಡದ ಬೇತಾಳ….ಏನು ಬೇಕಿತ್ತು ಅವನಿಗೆ ..ಇನ್ನು extra ಇನ್ನು extra ..ಅಷ್ಟೊಂದು ಕೊರತೆ ನನ್ನಲ್ಲೇನಿತ್ತು .
ಅವನು ತಾಳಿ ಬಿಗಿಯುವ ಕೇವಲ 11 ತಿಂಗಳ ಹಿಂದೆ ಹೇಗಿದ್ದೆ .. ಪುಟಿಯುವ ಬುಗ್ಗೆ..ನಗುನಗುತ್ತ ಜೀವಿಸುತ್ತಿದ್ದ ಜೀವನ ಪ್ರೀತಿಯ ಚಿಲುಮೆ ..over confidence ಇರಲಿಲ್ಲ ..ಆದರು confidence ಇತ್ತು…
ಈಗ ಹೇಗಾಗಿ ಹೋಗಿರುವೆ …
ಮುಂಚಿನಿಂದಲೂ ನನಗೆ ಫ್ರೆಂಡ್ಸ್ ಕಡಿಮೆಯೇ … ತೀರ comfortable , safe ಅನಿಸಿದರೆ ಮಾತ್ರ ಪಟಪಟ ಮಾತಾಡಿಬಿಡುತ್ತಿದ್ದೆ.. social animal ನಾನಲ್ಲ … (ಹರೆಯದ ಹೆಣ್ಣುಮಕ್ಕಳ ತಾಯಿ ತಂದೆಯರು socailise ಆಗಲಿಕ್ಕೆ ಬಿಡುವುದಿಲ್ಲ) ..ಹಾಗು ಹೀಗೂ ನನ್ನ ಕಾಲ ಮೇಲೆ ನಿಂತಮೇಲೆ ಒಂದಷ್ಟು ಪ್ರಬುದ್ದ ಫ್ರೆಂಡ್ಸ್ ಸಿಕ್ಕರು . ಇವನ ಭಯಕ್ಕೆ ತೊರೆದುಬಿಟ್ಟೆ , ಎಲ್ಲರಿಂದಲೂ isolate ಮಾಡಿದ….ಅಥವ ಜಾಗ ಬದಲಾದಂತೆ ದೂರದೂರ ಸರಿದು ಹೋದರು …ಒಂಟಿತನ ಹಾಸುಹೊಕ್ಕಂತ ಏಕಾಂಗಿ.. ಮುಳುಗಿ ಹೋದ ದ್ವೀಪ …

ವಿದ್ಯೆ ಇತ್ತು, ಜ್ಞಾನ ಇತ್ತು..ಮನೆಯ ದೊಡ್ಡವರ ಜೊತೆ ಕೂತು ‘quantitative’ಆಗಿ ಚರ್ಚಿಸಬಲ್ಲ ಸರಕ್ಕಿತ್ತು. ಮಾತಿಗೊಂದಿಷ್ಟು ಮನ್ನಣೆ, ತೂಕವಿತ್ತು …
ಆದರೆ ಅವೆಲ್ಲ ಅಲ್ಲಿ ಮೂರು ಕಾಸಿಗೂ ಬೇಕಿರಲಿಲ್ಲ ..ಮನೆಯಲ್ಲಿ ಮನಸುಬಿಚ್ಚಿ ಇದ್ದಕಿದ್ದ ಹಾಗೆ ಮಾತಾಡುವಂತಿರಲಿಲ್ಲ…ಹಿಟ್ಲರ್ ಮನೆ ಅದು….
ಬರಿ ಮನೆಕೆಲಸ ಒಂದೇ ಅವರು ನನ್ನಿಂದ ಬಯಸುತ್ತಿದ್ದಿದ್ದು .ಮನೆಕೆಲಸ ಮಾಡುತ್ತಿರುವುದನ್ನು ಕಣ್ಣಾರೆ ಕಾಣುತ್ತಿದ್ದರೆ ಮಾತ್ರ ಅವನ ಪಿತ್ತ ಹತೋಟಿಯಲ್ಲಿರುತ್ತಿತ್ತು …ನಾನು ಕೀಳು !!!

healthy arguementsನಂತ concept ಅಲ್ಲಿ ಇರಲೇ ಇಲ್ಲ… dictatorship , commandಗಳಷ್ಟೇ…ನನ್ನ ಅಭಿಪ್ರಾಯ , ಯೋಚನೆಗಳ ದ್ವನಿ ಕೇಳದಷ್ಟು ಜೋರಾಗಿ ಅವರೇ judge ಮಾಡಿ, ನಿರ್ಧಾರಮಾಡಿ ಬಿಸಾಕುತ್ತಿದ್ದರು ..ಹಾಗಲಕಾಯಿಗೆ ಬೇವಿನಕಾಯಿ ಸಾಕ್ಷಿ ನುಡಿಯುತ್ತಿತ್ತು ..ಅವರ ಪ್ರಕಾರ ಬುದ್ದಿವಂತರ estimate ಯಾವಾಗಲು ಸರಿಯಿರುತ್ತಿತ್ತು..ಗೆಲ್ಲುತ್ತಿತ್ತು..ಲಾಭ ಮಾಡಿಕೊಡುತ್ತಿತ್ತು …ನಾನು ಶತದಡ್ಡಿ…

ನಮ್ಮ ಮನೆಯ ಬಂಧುವರ್ಗದಲ್ಲೆಲ್ಲ ಆತ್ಮೀಯ, ಆಪ್ತ ಎನಿಸಿಕೊಂಡ ಹುಡುಗಿ ನಾನು .. ನನ್ನ presence ನ , ಕಂಪನಿಯನ್ನ ಸಾದಾರಣವಾಗಿ ಎಲ್ಲಾ ಎಂಜಾಯ್ ಮಾಡುತ್ತಿದ್ದರು..ಅವನಿಗೆ ಮಾತ್ರ ನನ್ನ ಕಂಪನಿ ಇದ್ದಕ್ಕಿದ್ದ ಹಾಗೆ ಕಿರಿಕಿರಿ ,ಸಿಟ್ಟು ತರಿಸಿಬಿಡುತ್ತಿತ್ತು .. ನನ್ನಲ್ಲಿ ಯಾವುದು ಸರಿಕಾಣುತ್ತಿರಲಿಲ್ಲ ಅವನಿಗೆ ..ಕೂರುವುದು, ನಿಲ್ಲುವುದು ಸಹ ಸರಿಯಿರದ ಹಳ್ಳಿಗಮಾರೆ ಮಾಡಿಹಾಕಿದ್ದ ನನ್ನ… ..atleast ಹಾಗೆಲ್ಲ ಹಲ್ಲುಕಚ್ಚಿ ,ಮುಖದಮೇಲೆ ಹೊಡೆದಂಗೆ ಹೇಳಿಬಿಟ್ಟರೆ ಹೊಸ ಹುಡುಗಿಗೆ ನೋವಾಗೋಲ್ವಾ ಅನ್ನೋ ಮಿನಿಮಮ್ ಸೆನ್ಸ್ ಕೂಡ ಅವನಿಗಿರಲಿಲ್ಲ ….ಸರಿ ಅವನು ಬಯಸುವ ಹಾಗೆ ಇದ್ದುಬಿಡೋಣ, ಬೀಸೋ ದೊಣ್ಣೆ ಇಂದ ತಪ್ಪಿಸಿಕೊಳ್ಳೋಣ , afterall ಸಂಗಾತಿಯ ಮನಸಿನ ಇಂಗಿತ ಅರಿತು ಪ್ರಸನ್ನಗೊಳಿಸೋದು, ಮೆಚ್ಚಿಸೊದು ಪ್ರೀತಿಯ ಒಂದು ಭಾಗವೇ ಅಲ್ಲವ ಅಂತ ಸುಮ್ಮನಾಗುತ್ತಿದ್ದೆ ..attitude , ettiquetes ,formalities ಗಳನ್ನ ನನಗಿಂತ ಜಾಸ್ತಿ ಉಪಯೋಗಿಸಲು ಬಲ್ಲ more cultured ಅವನಿರಬಹುದು ಅಂತ ನಂಬಿದ್ದೆ .. ಆ ವಿಷಯಗಳಲ್ಲಿ ನಾನು ಹಿಂದೆಯೇ ಇರಬಹುದು ಎನ್ನುವ ಕಡಿಮೆ ಆತ್ಮಸ್ತೈರ್ಯ ನನ್ನಲ್ಲಿ …ಗಂಡ ಹೇಳಿದಂಗೆ ನಡೆದುಕೊಂಡುಬಿಡಬೇಕು ಎನ್ನುವುದು ಭಾರತಿಯ ಪರಂಪರೆ … ಹಾಗಾದ್ರೂ ನನ್ನ ಪ್ರೀತಿಸ್ತಾನ ಅನ್ನೋ ಆಸೆ ನನಗೆ …ಎಲ್ಲಾ ಆಯ್ಕೆಗಳನ್ನು ಅವನಿಗೆ ಬಿಟ್ಟಿದ್ದೆ, ಅದನ್ನು ಒಪ್ಪಿಕೊಳ್ಳೋ, ತಲೆದೂಗೋದನ್ನಷ್ಟೇ ಮಾಡುತ್ತಿದ್ದೆ .. ನನ್ನತನವನ್ನ, charge of myself ನ ಇಂಚಿಂಚೆ ಕಳೆದುಕೊಳ್ಳುತ್ತಿದ್ದೆ…ಇಬ್ಬರಲ್ಲಿ ಒಬ್ಬರು ಸೋತರೆ ಸಂಸಾರ ನಡೆಯೋದು .ಒಬ್ಬರನ್ನು ಇನ್ನೊಬ್ಬರು ಅನುಕರಿಸಿದರೇನೆ ಪರಿಸ್ತಿತಿ ತಣ್ಣಗೆ ಉಳಿಯೋದು .ಅದೆಷ್ಟು ಓವರ್ dominating ಅವನೆಂದರೆ ಬದುಕುವ ಕಲೆಯನ್ನು ಸಂಪೂರ್ಣವಾಗಿ ವಶಪಡಿಸಿಕೊಂಡವರು, ಗೆದ್ದವರು, ಹೇಗೆ ಆದರು ಗೆಲ್ಲುವವರು ನಾವು, ನಮ್ಮ decision ನಡೆಯಬೇಕು ಎನ್ನುವವರು…ಅಂತವರ ಹತ್ತಿರ ಯಾವುದನ್ನು ಬದಲಾಯಿಸಲು ಸಾದ್ಯವಿಲ್ಲ .. ಅರ್ಥಮಾಡಿಸಲು !!!!

ಒಂದು ದಿನಕೂಡ ಬೇರೆಯವರ ಮನೆಯಲ್ಲಿ ಉಳಿದು ಅಭ್ಯಾಸವಿಲ್ಲದ ನಾನು , ಮದುವೆಮನೆಯಿಂದ ನನ್ನವರ್ಯಾರಿಗೂ ತಿಳಿಸದೇ ನನ್ನ ಹೊಸಮನೆ ತುಂಬಲು ಸಡಗರದಿಂದ ಓಡಿ ಬಂದಿದ್ದೆ..ನನ್ನ ಜೀವನ ಇಲ್ಲಿಂದ ಶುರು ಎನ್ನುವ ಮೈಂಡ್ ಸೆಟ್ prepare ಮಾಡಿಕೊಂಡಿದ್ದೆ.ಅಷ್ಟೆಲ್ಲಾ ಚೆನ್ನಾಗಿ ಮಾತಾಡಿ ನಂಬಿಸಿದ್ದ ಅವನು , ಗೆಳೆಯನಂತ ಬಾಳಸಂಗಾತಿ, ಬದುಕೆಲ್ಲಾ ರಸಗಳಿಗೆ ಎನ್ನುವ ಭ್ರಮೆ ನನ್ನಲ್ಲಿತ್ತು .ದುರಂತವೆಂದರೆ ದಿನ ಕಳೆದಂತೆ ಬಾಂಧವ್ಯ ಬೆಳೆಯಬೇಕಿದ್ದಲ್ಲಿ ಕೇವಲ ಭಯ ಬೆಳೆಯುತ್ತಿತ್ತು ….

ನಾನ್ಯಾರ ಉಸಾಬರಿಗು ತಲೆಹಾಕುತ್ತಿರಲಿಲ್ಲ ಆ ಲೆವೆಲ್ಲಿನ non -interference ನನ್ನದು .ಆದರೆ ಅವರ ಮೈಯಲ್ಲೆಲ್ಲಾ ಸಾವಿರ ಕಣ್ಣುಗಳು, ಸದಾ ಎಚ್ಚರ …ನಾ ಬಚ್ಚಲು ಮನೆಗೆ ತೆಗೆದುಕೊಂಡು ಹೋಗುತ್ತಿದ್ದ ಬಟ್ಟೆ ಸಮೇತ observe ಮಾಡುತ್ತಿದ್ದರು .ಇದು ಅವನಿಗೆ ಇದು ಅವನಿಗೆ ಅಂತ ಅಸಹ್ಯ ಎನಿಸುವ ಮಟ್ಟಿಗೆ ಎತ್ತಿಡುತ್ತಿದ್ದರು .ಸೂರ್ಯ ಹುಟ್ಟೋದು, ಚಂದ್ರ ಮೂಡೋದು ಎಲ್ಲಾ ಅವನ ತೆವಲಿಗೆ ಅನ್ನೋ ತರಹ ಆಡುತ್ತಿದ್ದರು .ಮನೆಯ ಕೇಂದ್ರಬಿಂದು ಅವನು, ಅವನ ಮನಸು ಸದಾ ಸಂಪೂರ್ಣ ಕುಷಿಯಿಂದಿರಬೇಕ್ಕೆನುವ ಸ್ವಾರ್ಥ ಎತ್ತಿಕಾಣಿಸುವ ಹಾಗೆ ನಡೆದುಕೊಳ್ಳುತ್ತಿದ್ದರು .ಮತ್ತು ಅವನ ತೃಪ್ತಿ ಪಡಿಸೋಕೆ ಕೊಂಡುಕೊಂಡು ಹೋದ ನಾನು ಒಂದು ವಸ್ತು ಅಷ್ಟೇ ಅಲ್ಲಿ…ಸ್ವಂತ ಅಸ್ತಿತ್ವ ಹೊಂದುವ ಅರ್ಹತೆಯಿಲ್ಲದ ವಸ್ತು .

ಮೊದಲೆಲ್ಲಾ ಅವನನ್ನು ನನ್ನ ಸ್ವಂತ ಅಂತ ಭಾವಿಸುತ್ತಿದ್ದೆ ….ಅಲ್ಲ, ಅವನು ನಮ್ಮ ಕೈಗೊಂಬೆ , ಅವನ ಜೊತೆಗಿನ ಪ್ರತಿ ಮಾತು,ಕತೆ,ನಡುವಳಿಕೆಯು ನಮ್ಮ ಅನುಮೋದನೆಗೆ ಒಳಪಡಬೇಕು ಎನ್ನುತ್ತಿದರು ಅವರು .ಸುಮ್ನೇಬಿಡಲ್ಲ ಅವನು ಅಂತ ಹೇಳಿ ಹೇಳಿಯೇ ಹೆದರಿಸಿ ಹೆದರಿಸಿಯೆ ಇಬ್ಬರನ್ನು ದೂರಮಾಡುತ್ತಿದ್ದರು.ಅವನ ಆರ್ಭಟಕ್ಕೆ ಬೆದರಿ ನಡುಗಿ ಚದುರಿದಂತೆ ಮಾಡುತ್ತಿದ್ದರು.ನೀನು ಹಾಗೆ ನಡುಗುವುದ ಕಲಿ ಎನ್ನುತ್ತಿದ್ದರು .ಎಲ್ಲಾ ವಿಚಿತ್ರ ಎನಿಸುತ್ತಿತ್ತು ನನಗೆ . ಅರ್ಥೆವೆ ಆಗುತ್ತಿರಲಿಲ್ಲ .ಹುಚ್ಚೆ ಹಿಡಿಸುತ್ತಿತ್ತು ನನಗೆ .ನಾಲ್ಕು ಪ್ರೀತಿ ಮಾತಾಡಲು ವಿಪರೀತ ದುರಂಕಾರ , ego ಬೆಳೆಸಿಕೊಂಡು ಕೂತಿದ್ದ ಅವನು … ನೇರವಾಗಿ ಹೇಳಿದರೆ ಅರ್ಥಮಾಡಿಕೊಳ್ಳುವುದಿಲ್ಲವಂತೆ, ನೇರವಾಗಿ ಹೇಳಲುಬಾರದಂತೆ ..ತಲೆತಗ್ಗಿಸಿ, ಸೆರಗು ನುಳುಚುತ್ತ, ರಾಗ ಎಳೆದು, ಹೆದರಿಕೊಂಡು ದೈನ್ಯವಾಗಿ ಹೇಳಬೇಕಂತೆ.. ನನಗೆ ಬರುವುದಿಲ್ಲ ಹಾಗೆ…ಆದರೆ ನಿಜವಾಗಲು ಭಯವಾಗುತ್ತದೆ , ಬಾಯಿಬಿಡುವುದಕ್ಕೆ .. ವಿಪರೀತ ಎಣಿಸುವಂತ ಕಲ್ಪನೆಗಳು..ಅಸಹಜ ತರ್ಕಗಳು.. ಹೆಂಡತಿಯನ್ನು ಪ್ರೀತಿ ಮಾಡೋದು ಹೇಗೆ ಅಂತ ಯಾರಾದರು ಹೇಳಿಕೊಡೋಕೆ ಆಗುತ್ತಾ ..

ತುಂಬಾ ಪ್ರೀತಿಸಬೇಕು, ಮುದ್ದಾಡಬೇಕು ನನಗಾಸೆ.ಹಾಗೆಲ್ಲಾ ಚೆಲ್ಲಾಟ ಆಡಬಾರದು,ದೂರತಳ್ಳುತ್ತಿದ್ದ ಆ ಸಂಸಾರಸ್ತ .. ಮೈ ಮೇಲೆ ಜ್ಞಾನವಿರಲಿ !!! ನಮ್ಮಪ್ಪನ ವಯಸಿನವರ ಮನಸ್ತಿತಿ ಕೆಲವರೇ ಹೀಗೆ ಅಂದುಕೊಂಡೆ .ನನ್ನ ಪ್ರೀತೀನೆ ಮಾಡಲ್ಲ ಇವಳು ಇದ್ದಕಿದ್ದ ಹಾಗೆ ಜೋರು ರಗಳೆ ತೆಗೆದುಬಿಡುತ್ತಿದ್ದ .ಭಯ, ಜಿಗುಪ್ಸೆ ಗಳಗಳನೆ ವಾಂತಿಯಾಗಿಬಿಡುತ್ತಿತ್ತು ನನಗೆ.ನಾ ವಂಚಿಸಿದ ಆರೋಪಗಳು ಬೇರೆ …ಬೇರೆಯವರ ಎದುರು ಹೆಂಡತಿಯ ಬಗ್ಗೆ ಕೀಳಾಗಿ ಕತೆ ಹೇಳುವುದು ಅವನಿಗೆ ಚೂರು ಮುಜುಗರ , ಪಾಪ ಪ್ರಜ್ಞೆ, ಕರುಣೆ ತರಿಸುತ್ತಿರಲಿಲ್ಲ .. ಆ ಕ್ಷಣಕ್ಕೆ ಗೆದ್ದುಬಿಡಬೇಕು …ಜನ ಅವಳಿಗೆ ಮುಖಭಂಗ ಮಾಡಬೇಕು.. ಏನೇನೋ ಚಾಡಿ ಹೇಳಿಬಿಡುತ್ತಿದ್ದ…ಜೊತೆಗೆ ಅವರಿಬ್ಬರೂ ಸೇರಿಕೊಳ್ಳುತ್ತಿದ್ದರು ಅದೇ ಕತೆ ಹೇಳಲು … ಮತ್ತೆ ಅಲ್ಲಿದ್ದವರಿಗೆ ಹೇಗೆ ಏನು ಮಾತಾಡಬೇಕು, ಕೇಳಬೇಕು, ಹೇಗೆ ಅರ್ಥಮಾಡಿಕೊಳ್ಳಬೇಕು ಚೂರು ವಿವೇಕವಿರಲಿಲ್ಲ … ಕಟಕಟೆಯಲ್ಲಿ ಕೇಳುವಂತೆ ಮುಲಾಜಿಲ್ಲದೆ ಎಂತೆನ್ತದ್ದೋ ಪ್ರಶ್ನೆಗಳನ್ನು ಕೇಳುತ್ತಿದ್ದರು , ನಿನಗೆ ಮರ್ಮಾಂಗದಲ್ಲಿ ಮಚ್ಚೆ ಇದೆಯಾ ಅನ್ನುವ ತರಹ !!!!!!!!!!!!!!!!!!!!!!!!!!!!!!!!!!!!!!!!

ಅವನ ತಿಳುವಳಿಕೆ,ಮಾರ್ಗ ಎಲ್ಲವು ತಪ್ಪೇ ..ಆದರೆ ಅದನ್ಯಾರು ಅವನಿಗೆ ತಿಳಿಸಿ ಹೇಳುತ್ತಿರಲಿಲ್ಲ … ತಮ್ಮ ಕೆಲಸಗಳಿಗೆ ಅವನನ್ನು ಮುಂದೆ ಬಿಟ್ಟು ಸಾಧಿಸಿಕೊಳ್ಳುವುದನ್ನು ಕಲಿತರು… ತಪ್ಪು ರೀತಿಯಲ್ಲಿ ಗೆದ್ದುಬಂದಾಗ ಬುದ್ಧಿವಂತ ಅಂತ ಸಂಭ್ರಮಿಸಿ ಉತ್ತೇಜಿಸಿದ್ದರು…ಅವನಿಗೆ ಗೆಲುವು ಮುಖ್ಯವಾಗ್ಗಿರುತ್ತಿತ್ತೆ ವಿನಃ ಮತ್ತೇನು ಅಲ್ಲ !!!! ಗೆಲ್ಲುವುದು ನಿಜವಾದ ಮೇಲೆ, ನನ್ನದೇ ಸರಿ ಅನ್ನುವ ಭ್ರಮೆ ತುಂಬಿಕೊಳ್ಳತೊಡಗಿತು .. ಮಾನವೀಯತೆ ಕಾಣೆಯಾಗುತ್ತಾ ಹೋಯಿತು… ..ಬೇರೆಯವರ ಕಷ್ಟ ಅರ್ಥವಾಗುತ್ತಿರಲಿಲ್ಲ …..ಹೇಳಿದರೆ ಕೇಳುವ ತಾಳ್ಮೆ,ನಂಬಿಕೆ ಉಳಿದಿರಲಿಲ್ಲ .
ಒಳಗೊಳಗೇ ನಟಿಕೆ ಮುರಿದು ಯಾಕಿಂಗೆ ಆಡುತ್ತಾನೋ ಅಂತ ಬೈದುಕೊಳ್ಳುತ್ತಿದ್ದವರು , ಅವನು ಕರೆದ ತಕ್ಷಣ ಇಲ್ಲಾಪ್ಪ, ನೀನೆ ಸರಿ ಅಂದು ಬಿಡುತ್ತಿದ್ದರು..ಸಂಭಾಳಿಸುವುದ , ನಿಭಾಯಿಸಿಕೊಳ್ಳುವುದ ಕಲಿತರು …. ತಪ್ಪು ಅನಿಸಿದರು ಅದನ್ನು ಹೇಳುವ ಮನಸು,ಧೈರ್ಯ ಮಾಡುತ್ತಿರಲಿಲ್ಲ , ಯಾಕೆಂದರೆ ಒಬ್ಬರಿಗೆ ಕಳೆದುಕೊಳ್ಳುವ ಭಯ …
ಇನ್ನೊಬ್ಬರಿಗೆ ಬುದ್ದಿ ಇತ್ತು, ಸ್ವಾತಂತ್ರ್ಯವಿತ್ತು ,ಅಗತ್ಯ ಗಳು ಇದ್ದವು, ಅಭಾವಗಳೂ .. ಹೆದರಿಕೊಂಡಂತೆ ನಡೆದುಕೊಂಡುಬಿಟ್ಟರೆ , ಆತ್ಮ ಗೌರವವನ್ನ ತಾತ್ಕಾಲಿಕವಾಗಿ ಎತ್ತಿಟ್ಟುಬಿಟ್ಟರೆ ಡಬಲ್ ಧಮಾಕಗಳು ಒದಗುತ್ತಿದ್ದವು, ಅಗತ್ಯಗಳು ಇನ್ನಿಲ್ಲದಂತೆ ಪೂರೈಕೆಯಾಗುತ್ತಿದ್ದವು … ಗಂಡಸರಿಗೆ ಬೇಕಿರುವುದೆಲ್ಲವು ಹೆಣ್ಣನ್ನು ಹತ್ತಿಕ್ಕಿದ ಅಹಂಕಾರ.. ಸೋಲಿಸಿದೆ ಎನ್ನುವ ತೃಪ್ತಿ … ಗೆದ್ದೇ ಎನ್ನುವ ಭ್ರಮೆ ಸೃಷ್ಟಿಸುವ ಕಲೆಕಲಿತುಕೊಂಡರೆ ಮಿಕ್ಕೆಲ್ಲದಕ್ಕೂ ದಾರಿಯಾಗಿಬಿಡುತ್ತದೆ .
ಅವನದು ವಿಕೃತಿಯೇ..ಎದುರಾಕಿಕೊಂಡರೆ ತಾಯಿ,ಅಕ್ಕ,ಹೆಂಡತಿ,ಇನ್ಯಾರೋ ಹೆಣ್ಣು ಯಾರಾದರು ಸರಿ ಮುಖಾಮೂತಿ ನೋಡದೆ ಅಸಹ್ಯವಾಗಿ , ನೀಚವಾಗಿ ಬೈದು,ಆರೋಪಿಸಿ ಬಿಡುತ್ತಾನೆ ,ಎಲ್ಲರೆದುರು ಬಟ್ಟೆಕಳಚಿ ,ಮಾನಹರಾಜು ಕೂಗಿಬಿಡುತ್ತಾನೆ … ಇನ್ನು ತಲೆಕೆಟ್ಟರೆ ದಬದಬ ನಾಲ್ಕು ಹೇರುತ್ತಾನೆ ..ಕಳೆದುಕೊಳ್ಳುವ ಭಯವಿಲ್ಲ ಅವನಿಗೆ ..ಬುದ್ಧಿವಂತನಾದವನಿಗೆ ಹೆಣ್ಣುಮಕ್ಕಳ ಅಸಹಾಯಕತೆ ಗೊತ್ತು … ಬಂಧನಗಳನ್ನ ಅಕ್ಷರಶಃ ಬಂಧನ ಮಾಡಿಬಿಡುತ್ತಾನೆ … ಹಾಗೆಲ್ಲ ಮುಖಕ್ಕೆ ಕೆಸರು ಹಾರಿಸಿಕೊಳ್ಳಬಾರದೆಂದರೆ ತ್ಯಾಗ ಕಲಿಯಬೇಕು. ಸಹಿಸಿಕೊಳ್ಳುವಿಕೆ ಕಲಿಯಬೇಕು.ಕಲಿಸುತ್ತಾನೆ.
ಬೀಗುತ್ತಾನೆ ತನ್ನ ಗಂಡಸುತನಕ್ಕೆ ಸಿಕ್ಕ ಮರ್ಯಾದೆ ಅದು ಎಂದು .ಬೆನ್ನುತಟ್ಟಿಕೊಳ್ಳುತ್ತಾನೆ ನನ್ನನ್ನು ಅವರೆಲ್ಲ ಗೌರವಿಸುತ್ತಿದ್ದಾರೆ ಎಂದು ….

ಇಬ್ಬರಲ್ಲಿ ಪ್ರೀತಿ ,ಹೊಂದಾಣಿಕೆ ಬಂದುಬಿಟ್ಟರೆ ತಲೆಗೆತುಂಬಿಸಿ ,ಮನಸುಕೆಡಿಸಿ ದುಡ್ಡು ಅಧಿಕಾರದ ಚುಕ್ಕಾಣಿಹಿಡಿದು ತವರುಮನೆ ಉದ್ಧಾರ ಮಾಡಿಕೊಳ್ಳುತ್ತಾಳೆ ಅವರ ಭಯ ..ನಮಗೇನು ಲಾಭ ಲೆಕ್ಕಾಚಾರ .ಈಗಲಿಂದಲೇ ಹಾಗಾಗದಂತೆ ತಡೆಯಬೇಕು.ಹೆದರಿಕೆ ತುಂಬಬೇಕು,ಅಧಿಕಾರದ ಆಸೆ ಅಸೂಯೆ ಹುಟ್ಟಿಸಬೇಕು, ಮೊಸವಾದ ವಿಷಬಿತ್ತಬೇಕು,ಜುಟ್ಟನ್ನು ಹಿಡಿಯುವುದ ಇವನಿಗೆ ಕಲಿಸಬೇಕು.
ಅವನಿಗೆ ಅಗತ್ಯಕ್ಕಿಂತ ಹೆಚ್ಚಿನದೇ ಬುದ್ಧಿವಂತಿಕೆ ಇದೆ. ಸರಿಮಾಡು ಎಂದರೆ ಸರಿಮಾಡುವುದು, ಕಿತ್ತುಹಾಕು ಎಂದರೆ ಕಿತ್ತುಹಾಕುವುದು ಅಷ್ಟೇ ನನ್ನ ಕೆಲಸ..ಏನೇ ಆದರು ಅವನ ಇಚ್ಛೆಯನ್ನು ಗೆಲ್ಲಿಸಬೇಕು.ನೀ ಹೇಳಿದಂಗೆ ಮಾಡಿದೆಯಷ್ಟೇ ಅಂತ ಜಾರಿದರೆ ಆಯಿತು .. ಬೆಕ್ಕಿಗೆ ಹುಲಿವೇಷ ಬಳಿದು ಮಿಯಾವ ಎಂದಾಗ ಹೆದರುವಂತೆ ನಟಿಸಿ , ಹುಲಿಯೆಂದು ನಂಬಿಸಿದ್ದೇವೆ ಹೊರತು ಸ್ವತಂತ್ರ್ಯವಾಗಿ ಬದುಕುವುದ ,ಬೇಟೆಯಾಡುವುದ ಕಲಿಸಿಕೊಟ್ಟಿಲ್ಲ.ಕೆಟ್ಟರೆ ರಿಪೇರಿಗೆ ನಮ್ಮ ಬಳಿಯೇ ಬರುತ್ತಾನೆ

ಹೆಣ್ಣೆಂದರೆ ನಮ್ಮಹಾಗೆ ಇರಬೇಕು, ನಮ್ಮ ಹಾಗೆ ಆಡಬೇಕು ಇಲ್ಲಾಂದರೆ ಹೆಣ್ಣೇ ಅಲ್ಲಾ ಅಂತ ರಕ್ತದಲ್ಲಿ ಬಿತ್ತಿಯಾಗಿದೆ ತಲೆ ತುಂಬಿಸಿಯಾಗಿದೆ.ಮಾತಾಡುವುದ ಕಲಿಸಿಯಾಗಿದೆ.ಕೂತು ಪಗಡೆ ಆಡಿಸಬೇಕು ಅಷ್ಟೇ, ಲಾಭವನ್ನ ತಿರುಗಿಸಿಕೊಂಡು ಹೆಸರಿಗೆ ಬರೆಸಿಕೊಳ್ಳಬೇಕು ಅಷ್ಟೇ .
ಒಬ್ಬರನ್ನೊಬ್ಬರು ಸಮರ್ಥಿಸಿಕೊಳ್ಳುವ , ಒಬ್ಬರಿಗೊಬ್ಬರು ಲಾಭಮಾಡಿಕೊಳ್ಳುವ , ಒಬ್ಬರಿಗೊಬ್ಬರು ಮೆರೆಯಲು ಸಹಾಯ ಮಾಡುವ adjustmentಗಳನ್ನು ಹೊಂದಾಣಿಕೆ, ಪ್ರೀತಿ ಅಂತ ನಂಬಿಕೊಂಡಿದ್ದಾನೆ.ಕಾತೆ ಹೆಸರು ಬದಲಾಯಿಸು ಎಂದರೆ ಬಣ್ಣಬದಲಾಗುತ್ತದೆ .. ಬೇಕೇಬೇಕು ಎಂದರೆ ಬೇರೆಹೋಗು ಎನ್ನುವ , ಪ್ರಾಣ ಇರುವವರೆಗೂ ಅದಿಕಾರ ಬಿಟ್ಟುಕೊಡಲ್ಲ ಎನ್ನುವ ದಾಹಕ್ಕೆ ಪ್ರೀತಿಯ ಹೆಸರಿಡುತ್ತಾನೆ.ಕಷ್ಟ ಬಂದರೆ proove ಮಾಡಿ ಬಚಾವಾಗಲು ಸಾಕ್ಷಿ ಸೃಷ್ಟಿ ಮಾಡಿಕೊಳ್ಳುತ್ತಾನೆ .
ಎಷ್ಟು ವಸ್ತು ಖರೀದಿಸಿ ಕೈಗೆ ಕೊಟ್ಟಳು,ಕೂತ ಜಾಗಕ್ಕೆ ಏನೇನು ತಂದುಕೊಟ್ಟಳು,ಏನೆಲ್ಲಾ ಸೇವೆ ಸಲ್ಲಿಸಿದಳು , ಹೇಗೆ ಹೆದರಿಕೊಂಡಳು, ಹೇಳಿದ್ದನ್ನು ಹೇಗೆ ಪಾಲಿಸಿದಳು ಪ್ರೀತಿ ಲೆಕ್ಕಹಾಕಲು ,ಪಟ್ಟಿ ಇಳಿಸುತ್ತಾನೆ !!! ಹೆದರಿಸಿ ಸಾಯಿಸುತ್ತಾನೆ, ತರ್ಕಮಾಡಿ ವಿಕೃತಿ ತೋರಿಸುತ್ತಾನೆ..ಬೆದರಿದ ನಾನು ಹರಿಣಿಯಾಗುತ್ತೇನೆ. ಓಡಿಹೋಗಿ ನೀ ಬೇಡ ಎಂದು ಅರಚುತ್ತಾನೆ. ನಿನ್ನ ನಾ ಕೈ ಬಿಟ್ಟೆ ಎನ್ನುತ್ತಾನೆ . ನಾ ಗೆದ್ದೇ ಎನ್ನುತ್ತಾನೆ

ನಿಜವಾದ ಪ್ರೀತಿಯ ಅರ್ಥವೇ ಅವನಿಗೆ ಗೊತ್ತಿಲ್ಲ… ನಿಜವಾಗಿ ಪ್ರೀತಿಸುತ್ತೇನೆ ಬಾರೋ ಎಂದರೆ ಅವನಿಗೆ ಖಾಲಿ ಪ್ರೀತಿ ಬೇಕೇ ಆಗಿಲ್ಲ …. ಅಧಿಕಾರ,ಹಣ ಒಂದೂ ಬೇಕಾಗಿರಲಿಲ್ಲ ನನಗೆ ..ಪ್ರೀತಿ ಬೇಕಿತ್ತಷ್ಟೇ….. ಅದವನಿಗೆ ಅರ್ಥವೇ ಆಗಲಿಲ್ಲ.ಅವನ ತೆಕ್ಕೆಯಲ್ಲಿ ಬೆಚ್ಚಗೆ ಮಲಗಬೇಕು, ಎದೆಗೆ ತಲೆವರಗಿಸಿ ಕಳೆದುಹೋಗಬೇಕು , ನಾನು ಕಣ್ಣು ಅವನು ರೆಪ್ಪೆ,ಕೂಡಿ ಬಾಳಬೇಕು,ನಗುನಗುತ್ತಾ ನಾಲ್ಕು ಮಾತಾಡಬೇಕು , ಒಟ್ಟಿಗೆ ಕೂತು ಉಣ್ಣಬೇಕು …ಹುಚ್ಚಿ ನಾನು..!!!
ತಾಳಿ ಕಟ್ಟಿದ್ದು , ದೇವರೆದುರು ಪ್ರಮಾಣ ಮಾಡಿ ಏನೇ ಆದರು ಕೈ ಬಿಡಲ್ಲ ಅಂತ ಹೆಂಡತಿಯಾಗಿ ಸ್ವೀಕರಿಸಿದ್ದು, ಹರಿದು ನನ್ನ ಸೇರಿದ್ದು ಅವನಿಗೆ ನೆನಪೇ ಇಲ್ಲ …ನನ್ನ ಮನಸಿಗೆ ಆಗಿರಬಹುದಾದ ಹಿಂಸೆಯ ಅಂದಾಜು ಸಹ ಅವನಿಗೆ ಸಿಕ್ಕಿಲ್ಲ .
ನನಗೊತ್ತು ಮೊಸವಾಗಿರುವುದು ನನಗೆ .ಮಾನಸಿಕವಾಗಿ ಜರ್ಜರಿತಳನ್ನಾಗಿಸಿದ .carrier ನ ಮಣ್ಣುಪಾಲು ಮಾಡಿದ.ಮಾನ,ಮರ್ಯಾದೆ,ಲಜ್ಜಾ ಗೌರವಗಳನ್ನು ಹರಾಜು ಎಸೆದ.ಉಂಡಿದ್ದು fresh ಇರಲಿಲ್ಲ, ರುಚಿಯಿರಲಿಲ್ಲ ಕತೆಕಟ್ಟಿದ.ಅಜೀರ್ಣವಾಯಿತು ಎಂದಲುಬಿದ.ಸಾಮಾಜಿಕವಾಗಿ ಕೆಟ್ಟ ಪಟ್ಟಕಟ್ಟಿ ಬೀದಿಗೆಬಿಟ್ಟ.ದೈಹಿಕವಾಗಿ ಮುಗಿಸಿ ಸೆಕೆಂಡ್ handle ಮಾಡಿದ.ನನಗೆ ಬೇಡ ಎಂದ .

ಗಂಡಸಾಗಿ ಹುಟ್ಟಿದ್ದೇ ಸಾಧನೆ, ನನ್ನ ಮಗನಾಗಿ ಹುಟ್ಟಿದ್ದೇ ದೊಡ್ಡಸ್ತಿಕೆ, ಎಷ್ಟೆಲ್ಲಾ ಆಸ್ತಿಯಿದೆ ಹುಡುಗಿಯರು ಕಾಸಿಗೊಬ್ಬರು, ಕೊಸರಿಗೊಬ್ಬರು ಸಿಗುತ್ತಾರೆ ಅಂತ ಮೆರೆಯುತ್ತಾರೆ ಇನ್ನು .

ನನಗೊತ್ತು ಸೂತಕ ಅರ್ದದಿನ ಅವರ ಮನೆಯಲ್ಲಿ .ಏನೇ ಆದರು ಬದುಕುವ ಹುಮ್ಮಸು, ಶೋಕಿ,ಸುಖ ಬಿಟ್ಟುಕೊಡರು.ಅವರ ಸುಖವನ್ನ ಯಾರು ಕಿತ್ತುಕೊಳ್ಳಲಾರರು. ಮಾತು ಮಾತ್ರ ಹೃದಯ ಕಿತ್ತುಹೋಗುವ ಹಾಗೆ ಆಡುತ್ತಾರೆ . ನನಗೆ ನಷ್ಟವಾಯಿತು, ನನಗೆ ಮೋಸವಾಯಿತು ದೂರುತ್ತಾನೆ ಅವನು.ವಸ್ತುಗಳನ್ನು ಮೋಹಿಸುವ, ವ್ಯಕ್ತಿಗಳನ್ನು ಉಪಯೋಗಿಸುವ ಅವರಿಗೆ ನನ್ನ ಕಂಡರೆ ಅಸಹ್ಯವಂತೆ.ದ್ವೆಷಿಸುತ್ತಾರಂತೆ.ಪ್ರೀತಿಸಲಿಲ್ಲ ಅಂತ ಕೇಸ್ ಹಾಕುತ್ತಾನಂತೆ…!!!!

ನಾನು ದ್ವೇಷಿಸುತ್ತೇನೆ , ಇನ್ಯಾವ ಮನುಷ್ಯರನ್ನು ನಂಬಲಾರದ, ಪ್ರೀತಿಸಲಾರದ, ಕಡೆಗೆ ನನ್ನನ್ನು ಪ್ರೀತಿಸಿಕೊಳ್ಳಲಾರದ ದುರಂತಕ್ಕೆ ತಳ್ಳಿದ ನನ್ನ ನಿಷ್ಠೆ,ಪ್ರೀತಿಯನ್ನು ನಾನು ದ್ವೇಷಿಸುತ್ತೇನೆ ….

ಪ್ರೀತಿಯನ್ನು ನಿರಾಕರಿಸಿ ,ಹೆದರಿಸಿ ,ಪ್ರೀತಿಸಲಿಲ್ಲ ಅಂತ ದೂರುವವನಿಗೆ valentines day ನೆನಪುಗಳು …

ತಿಳಿ ನೀಲಿ ಕನಸು

ಹರೆಯ ಶುರುವಾದಾಗಿಂದ ಒಳಗೊಳಗೇ ರೂಪುಗೊಳ್ಳುತಿದ್ದ ಅವನ ಕನಸು… ಧೈರ್ಯವಾಗಿ  ಕಣ್ಣುಬಿಟ್ಟುಕೊಂಡು ಕಾಣದ್ದಿದ್ದರು ಓದಿ ಓದಿ ಆಯಾಸವಾದಾಗಲೋ, ತಲೆಚಿಟ್ಟು ಹಿಡಿದಾಗಲೋ, ಗೆಳತಿಯರು ಅಕ್ಕಂದಿರು ನಿನ್ನ ವರಿಸುವವ ಹೇಗಿರಬೇಕು ಎಂದಾಗಲೋ, ಸಿನಿಮಾ ನೋಡಿ ಹೊರಬಂದಾಗಲೋ, ಯಾರದೋ ಮದುವೆಗೆ ಹೋದಾಗಲೋ , ಆಟೋಗ್ರಾಫ್ ಗೀಚುವಾಗಲೋ ಕಲ್ಪನೆಯಲ್ಲೇ ಹುಟ್ಟಿ ಮರೆಯಾಗುತ್ತಿದ್ದವ , ನನ್ನ ಕೈ ಹಿಡಿಯುವವ …
scholl ನಲ್ಲಿ ಕೇಳಿದ್ದಿದ್ದರೆ , ತುಂಬು ಶರ್ಟ್ ತೊಡುವ  ಥೇಟ್ ಅಪ್ಪನ ತರಹದ  ಜವಾಬ್ದಾರಿ ಮನುಷ್ಯ ಆಗಿರಬೇಕು ಅಂದು ಬಿಡುತ್ತಿದ್ದೆನೇನೋ.. ಕಾಲೆಜಿನಲ್ಲಾದ್ರೆ ಬೆಳ್ಳಗಿನ, engineeru , ಬುದ್ದಿವಂತ, ಕಾರ್ ಇಟ್ಟವ, ಎನ್ನುತಿದ್ದೆನೇನೋ…. ಬದುಕಿನ ಕಷ್ಟ, ಕಾರ್ಪಣ್ಯ, ವಾಸ್ತವಗಳೊಂದಿಗೆ ನಾನು ಬೆಳೆಯುತ್ತ, ಬಲಿಯುತ್ತಾ  ಹೋದಂತೆ ಅವನೂ  ಬದಲಾದ, ಬೆಳೆದ … ಅಪ್ಪ ಅಮ್ಮನನ್ನು ಸ್ವಂತ ಮಗನಂತೆ ನೋಡಿಕೊಳ್ಳುವ, ಹೆಂಡತಿಯನ್ನು ಪೀಡಿಸದ ಒಳ್ಳೆ ಹುಡುಗ ಆಗಿರಬೇಕೆನ್ನಿಸುವಷ್ಟು ಸಿಂಪಲ್ ಮತ್ತು ಪ್ರಬುದ್ಧವಾಗಿ ಹೋಗಿದ್ದ ಕಾಲಘಟ್ಟದಲ್ಲಿ   ..

ಹುಡುಗನ ಕುರಿತು ಏನೇ ಕನಸು, ಕಲ್ಪನೆಗಳಿದ್ದರು ಮದುವೆ ಆದಮೇಲೆ ಅವನ ಜೊತೆಕೂಡಿ ನೆರವೇರಿಸಿಕೊಳ್ಳಬೇಕಾಗಿದ್ದ  ಅನಿವಾರ್ಯ, ಸಿದ್ಧ ಕನಸುಗಳಿದ್ದವು… ಜೀವನ ಪೂರ್ತಿ ಅವನಿಗಾಗೆ ಕಾದು ಕುಳಿತ್ತಿದ್ದವು .. ಅವನಿಂದಲೇ ಸಾಕಾರಗೊಂಡು ಮುಕ್ತಿ ಪಡೆಯಬೇಕಾಗಿದ್ದವು … .ಮದುವೆ ನಂತರ ಎಂದು ಮುಂದೂಡಿದ ಸುಖಗಳವು…….  

ಹುಟ್ಟಿದ್ದು ಬೆಳೆದಿದ್ದು ಬದುಕಿದ್ದು ಬೆಂಗಳೂರಲ್ಲೇ ಆದರು ಅದನ್ನು ಪೂರ ಅನುಭವಿಸದ ಪಾಪದ ಹುಡುಗಿ ನಾನು…ಫ್ರೆಂಡ್ಸ್ ಜೊತೆ ಸುತ್ತಿರಲಿಲ್ಲ, ಅಪ್ಪ ಅಮ್ಮ ಕರೆದೊಯ್ದು ತೋರಿಸಿರಲಿಲ್ಲ …ಅವರಿವರ ಬಾಯಲ್ಲಿ ಕೇಳಿದ್ದೆ…ಇಂಚಿಂಚು ಬಿಡದೆ ಅನ್ವೇಷಿಸಬೇಕಿತ್ತು ಅವನ ಸಂಗಡ ನಾನು ….ಚಾಟ್ ಸ್ಟ್ರೀಟ್ , ಕಮರ್ಷಿಯಲ್ ಸ್ಟ್ರೀಟ್, brigade ರೋಡ್, ಸಫೀನ plaaza , planetorium , ರಾಗಿ ಗುಡ್ಡ, ಬಸವನ ಗುಡಿ, ರಾಮನಗರ ಬೆಟ್ಟ , sankey ಟ್ಯಾಂಕು ..ಇನ್ನು ಏನೇನೋ… ಸಂಜೆಗಳಲ್ಲಿ ಸುತ್ತಿಬರಬೇಕಿತ್ತು  ..ಬೀದಿ ಬೀದಿ ಅಲೆದು ಪಾನಿಪುರಿ, ಐಸ್ ಕ್ರೀಂ ಮೆಲ್ಲಬೇಕಿತ್ತು , ಥೇಟ್ ಮದ್ಯಮ ವರ್ಗದವರಂತೆ ರಸ್ತೆಮೇಲೆ ಶಾಪಿಂಗ್ ಮಾಡುತ್ತಾ bargain ಮಾಡಿ ಬೆಲೆ ಇಳಿಸಿ ಬೀಗಬೇಕಿತ್ತು…ಆ ದಿನಗಳಲ್ಲಿ ನಮ್ಮಂತವರಿಗಲ್ಲ ಅಂತ  ಮಾಲ್ ನಲ್ಲೆ ಬಿಟ್ಟುಬಂದ   branded itemsಗಳನ್ನ  ಜಂಭದ ಕಾರ್ಡ್ ಉಜ್ಜಿ ನನ್ನದಾಗಿಸಿ ಕೊಳ್ಳಬೇಕಿತ್ತು.ರಿಲೀಸ್ ಆಗೋ ಕನ್ನಡ ಸಿನಿಮಾಗಳನ್ನೆಲ್ಲಾ ಕೈ ಕೈ ಹಿಡಿದು ನೋಡಿ ಬರಬೇಕಿತ್ತು.

ಹದಿನೈದು ದಿನಕೊಮ್ಮೆಯಾದರು ಮನೆಯವರನೆಲ್ಲಾ ಕೂಡಿಕೊಂಡು ಪುಟ್ಟ ಪುಟ್ಟ ಪಿಕ್ನಿಕ್ ಹೊಡೆಯಬೇಕು .ನಂದಿಬೆಟ್ಟ, ಸ್ಕಂದಗಿರಿ, ಸಾವನದುರ್ಗಾ, ಶಿವಗಂಗೆ , ದೇವರಾಯನ ದುರ್ಗಾ .ಸಿನಿಮಾದಲ್ಲಿ ತೋರಿಸುವ ಹಾಗೆ ಕಾರ್ಪೆಟ್ ಮೇಲೆ ಒಂದಷ್ಟು ತಿಂಡಿಗಳು .ಮರದ ಕೊಂಬೆಗೆ ಉಯ್ಯಾಲೆ …ನಾನು ಅವನು, ಒಂದೆರಡು ಮಕ್ಕಳು, ಮದ್ಯೆ ಮದ್ಯೆ ನನ್ನ ಅವನ ಕಣ್ಣಾಮುಚ್ಚಾಲೆ  …ಚಿಕ್ಕಂದಿನಿಂದ ಸವಾಲಾದ ಸಾವನದುರ್ಗ ಬೆಟ್ಟ ಹತ್ತಿ ಜಯಿಸಬೇಕು , ಪಾತಾಳಗಂಗೆಗೆ ಮಕ್ಕಳ ಹರಕೆಹೊರಬೇಕು , ಒಳಕಲ್ಲು ತೀರ್ಥದಲ್ಲಿ ಪುಣ್ಯ ಪರೀಕ್ಷಿಸಬೇಕು ….

ಎರಡು ಮೂರು ತಿಂಗಳಿಗೊಮ್ಮೆಯಾದರೂ ಒಂದು ಲಾಂಗ್ drivu ಬೇಕು …. ಮಡಿಕೇರಿ, ಮಂಗಳೂರು , ಹಾಸನ, ಮರವಂತೆ, ದಾಂಡೇಲಿ  ಯಾವುದಾದರು ಪರವಾಗಿಲ್ಲ… ಸುತ್ತ ಹಸಿರುಕಾಡು , ನಡುವೆ ನಾವು.. ಸ್ಪೀಡು ಕಾರು , ಭಾವಗೀತೆ ಹಾಡು ..ಮದ್ಯೆ ಮದ್ಯೆ ಕಾರು ನಿಲ್ಲಿಸಿ ಗಾಡಿಮೇಲಿನ ಚುರುಮುರಿ , ಪೈನ್ಆಪಲ್ಲು, ಎಳನೀರು ಸವಿಯಬೇಕು  …. ಮದ್ಯ ರಾತ್ರಿಗೊಂದು ಡೇರೆಹಾಕಬೇಕು ..ನಾನು, ಅವನು ಕಪ್ಪು ಆಕಾಶದ ಬೆಳ್ಳಿ ನಕ್ಷತ್ರಗಳು  ಮತ್ತು  ಕಳ್ಳ ಚಂದಿರ …ಎದುರುಗಿನ fire campnalli ನಿಗಿ ನಿಗಿ ಬೇಯುತ್ತಿರುವ ಖಾರ ಹಚ್ಚಿದ ಹಸಿಮೀನು, ಎಳೆ  ಚಿಕೆನ್ನು ..ತಂದೂರಿ ಸ್ಮೆಲ್ಲಿಗೆ cokena ಅಮಲು, ಅವ್ನು ಕುಡಿಯುವವನಾಗಿದ್ದರೆ ಒಂದು ಸ್ಮಾಲ್ chilled  ಬೀರು… ತಿಂದು ತೇಗಿದ ಮೇಲೆ ಆಕಾಶಕ್ಕೆ ಕಣ್ಣ ನೆಟ್ಟು ಚಂದಿರನ ರೇಗಿಸೋದು , ಮಕಾಡೆ ಮಲಗಿ ಕನಸುಗಳ ಮಾತಾಡೋದು , ನೆನಪುಗಳ ಎಳೆದು ಎಬ್ಬಿಸೋದು ….ಹಿನ್ನಲೆಯಲ್ಲಿ ಯೋಗರಾಜ್ ಭಟ್ಟರ ಹಾಡು…ತಿಳಿ ನೀಲಿ ಸೀರೆ , ನಿಧಾನವಾಗಿ ಅವನ ಕಣ್ಣಲ್ಲಿ ಇಳಿಯುವ ಚಂದಿರ , ರಾತ್ರಿಯೆಲ್ಲಾ ಹುಲ್ಲು ಹಾಸಿಗೆಮೇಲೆ ಮೆತ್ತಗೆ ನಗುತ್ತಿರಬೇಕು …ಕವನಗಳು ಹುಟ್ಟಬೇಕು
ಬೆಳದಿಂಗಳಾದರೆ ಇನ್ನೂ preferable ..ಆಗ  ನಾನು ಅವನು ಬೀಚಿನ ದಡದಲ್ಲಿ ..ಕೊರೆವ ಚಳಿಯಲ್ಲಿ ಬರ್ಮುಡಾ  ತೊಟ್ಟು  ನಡೆದಾಡಬೇಕು..ಮನಸ್ಸು ದೇಹವೆಲ್ಲ ಅಲೆಗಳಿಗೆ ಹೊಯ್ದಾಡಬೇಕು ….

ಒಂದಷ್ಟು ಟ್ರೆಕ್ಕಿಂಗ್ ಹೋಗಬೇಕು …adventure ಎನಿಸುವಂತದ್ದನೆಲ್ಲ  ಮಾಡಿಬಿಡಬೇಕು…ಬಂಗಿ jumpu ಸ್ಕೈ divingu ಏನೇನು ಇದೆಯೋ ಅದೆಲ್ಲ …

ಸಾಧ್ಯವಾದರೆ ವರ್ಷಕ್ಕೆರಡು ಬಾರಿಯಾದರೂ ಔಟ್ ಆಫ್ ಸ್ಟೇಟ್ ಹೋಗಿಬರಬೇಕು.. ಕಾಶ್ಮೀರ, ಹಿಮಾಲಯ, ಉದಕಮಂಡಲ , ಕನ್ಯಾಕುಮಾರಿ, ತಾಜ್ ಮಹಲ್  ನೋಡಬೇಕು …

ಒಂದೆರಡು ವರ್ಷಕೊಮ್ಮೆ ಫಾರಿನ್ ಟೂರು…ಚಿಕ್ಕ ಚಡ್ಡಿ ತೊಟ್ಟು , ಕೂಲಿಂಗ್ ಗ್ಲಾಸು ಏರಿಸಿ ,ಕೂದಲು ಇಳೆ ಬಿಟ್ಟು , ಗಂಡನ ತಬ್ಬಿ ಕಾಫಿ ಶಾಪ್ನಲ್ಲಿ ಕೂರಬೇಕು .. ಈ ನೆಲದಲ್ಲಿ ಆಗದ್ದಿದ್ದನೆಲ್ಲ  ಆ ನೆಲದಲ್ಲಿ ಅನುಭವಿಸಿ ಬರಬೇಕು …
ಹುಚ್ಚುಚ್ಚು ಆಸೆಗಳು …

ಸಣ್ಣಪುಟ್ಟ ಹಬ್ಬಗಳಿಗೂ ಸಿಕ್ಕಾಪಟ್ಟೆ ಸಿಂಗರಿಸಿಕೊಂಡು ಗೌರಿಯಾಗಿ ಸಂಭ್ರಮಿಸಬೇಕು..ಹೊಸ ಸೀರೆ , ಮಲ್ಲಿಗೆ ಹೂವು , ಗಲಗಲ ಬಳೆ, ಕಿಣಿಕಿಣಿ ಕಾಲು ಗೆಜ್ಜೆ , ಬಣ್ಣದ ರಂಗವಲ್ಲಿ , ಕೈಯಲ್ಲಿ ಕೆಂಪು ಮೆಹಂದಿ , ಮಿರಮಿರ ಬಳೆ , ಹೂವಿನ ಅಲಂಕಾರ, ದೂಪದ ಪೂಜೆ, ತುಪ್ಪದ ಊಟ …ಇವಳೇನಾ ಅವಳು ಎಂದು ಗಾಬರಿಗೊಂಡು ಇಡಿ ದಿನಾ ನನ್ನನ್ನೇ  ನೋಡಬೇಕು ಅವನು …

ನೆಂಟರ functionಗಳಿಗೆ ಜೋಡಿ ಜೋಡಿ ಹೋಗಬೇಕು …ಮಗು ಯಾವಾಗ ಎನ್ನುವ ಅವರ ಪ್ರಶ್ನೆಗೆ ನಾಚಿ ಕೆಂಪಾಗಬೇಕು   ..ನವ ವಧುವರರಿಗೆ ಹೊಸ ಕನಸು ಬಿತ್ತಿ ಬರಬೇಕು , ಒಂದಷ್ಟು ಪಟ್ಟಾಂಗ ಕೊಚ್ಚಿ, ಕೆಂಪಗೆ ಬೀಡ ಮೆದ್ದು , ಊಟಕ್ಕೆ ಸೊಕ್ಕಿದ ಹೊಟ್ಟೆಗೆ ಜಂಪಾಗೆ ನಿದ್ದೆ ತೆಗೆಯಬೇಕು …   

ಒಂದೆರಡು ವರ್ಷಗಳ ನಂತರ  ನಮಗೂ ಹೊಸ ಪ್ರಮೋಷನ್ ಬೇಕು …ಹತ್ತಿರದ ಪಾರ್ಕಿಗೆ ಶಾಲು ಹೊದೆಸಿಕೊಂಡು ಆವಾ ವಾಕಿಂಗ್ ಎಂದು ಕರೆದೊಯ್ಯಬೇಕು..ಬಯಕೆಗೆ ಕದ್ದುಮುಚ್ಚಿ ಪಾನಿಪುರಿ ತಿನಿಸಬೇಕು .ಬೆಣ್ಣೆ ಮುದ್ದೆಯಂತ ಮುದ್ದಾದ ಕೂಸು, ಕಣ್ಣು ಬಾಯಿ ಅವನಂತೆಯೋ, ನನ್ನಂತೆಯೋ ಇಬ್ಬರಂತೆಯೋ ದೃಷ್ಟಿ ತೆಗೆಯಬೇಕು …ಅಷ್ಟರಲ್ಲಾಗಲೇ ಒಂದು ಸೈಟು, ಹೊಸ ಮನೆ ನಿರ್ಮಾಣವಾಗುತ್ತಿರಬೇಕು ….
ನಾಮಕರಣ, ಗೃಹಪ್ರವೇಶ ಒಟ್ಟೊಟ್ಟಿಗೆ ನೆರವೇರಬೇಕು…. ಮನೆಯ ಜೋಕಾಲಿಯಲ್ಲಿ ಹಸುಕಂದ ನಗಬೇಕು .ಒಂದಷ್ಟು ದುಂಡು ದುಂಡಾದ ನಾನು gymge ಸೇರಬೇಕು …

ಒಂದೆರಡಾದರೂ ವರ್ಷ ಕೆಲಸದ ನಿಮಿತ್ತ ಬೇರೆ ದೇಶದಲ್ಲಿದ್ದು ಬರಬೇಕು..

ನಂತರ retirement ತೆಗೆದುಕೊಂಡು ನಾನು ಫುಲ್ ಹೋಂ ಮೇಕರ್ ಆಗಿಬಿಡಬೇಕು …ಅಡಿಗೆ ಕಾರ್ಯಕ್ರಮ, ಕಸೂತಿ,ಚಿತ್ರಕಲೆ,ಕಾದಂಬರಿ , ಫೋಟೋಗ್ರಫಿ, ಏನೇನೋ ಕಲಿಯಬೇಕು …ಹಳೆ ಫ್ರೆಂಡ್ಸ್ ಗಳ ಜೊತೆ ಸೇರಿಕೊಂಡು ಲೇಡೀಸ್ ಕ್ಲಬ್ ಸೇರಬೇಕು , ಬ್ಯೂಟಿ ಟಿಪ್ಸ್ ಕಲಿಯಬೇಕು …

ಊರಲ್ಲೊಂದು ಸಣ್ಣ out  house ಕಟ್ಟಿಸಬೇಕು …ಹೆಂಚಿನ ಮಂಟಪ, ಮಧ್ಯ  ಬಿದಿರಿನ ನಾಲ್ಕು chairu ..ಆರು ತಿಂಗಳಿಗೊಮ್ಮೆಯಾದರು  ಮನೆಯವರೊಂದಿಗೆ ಒಂದೆರಡು ದಿನಗಳಿದ್ದುಬರಬೇಕು… ಸೂರ್ಯಾಸ್ತದ ವೇಳೆಗೆ ಟೀ ಕುಡಿಯುತ್ತ , ಬಿಸ್ಕೇಟ್ ತಿನ್ನುತ್ತ ಮಾವಿನ ಪಸಲು , ತೆಂಗಿನ ಪಸಲು ಮಾತಾಡಬೇಕು …

ಎಲ್ಲವನ್ನು ಇಬ್ಬರೇ  ಸ್ವಂತ ದುಡಿದು ಒಂದೊಂದೇ ಈಡೇರಿಸಿಕೊಳ್ಳಬೇಕು .. ಇಳಿಗಾಲಕ್ಕೆ  ಒಂದಷ್ಟು ಬ್ಯಾಂಕ್ ಬ್ಯಾಲೆನ್ಸ್ ಉಳಿಸಿಕೊಂಡಿರಬೇಕು .. ಹಳ್ಳಿಯಲ್ಲಿ settleಆಗಿ ಹಸು, ಕೋಳಿ, ಮೊಲ ,ನಾಯಿ, ಬೆಕ್ಕು ಸಾಕಿಕೊಂಡು ಕಾಲಕಳೆಯಬೇಕು ..

ಜೀವನ ಪೂರ್ತಿ ಪ್ಲಾನ್ ಮಾಡಿದ್ದೆ …ಸಾವಿರ ಸಾವಿರ ಕನಸ ಹೆಣೆದ್ದಿದ್ದೆ…

ಒಂದೆರಡನ್ನು ಅವನೊಂದಿಗೆ ಮದುವೆಗೆ ಮುಂಚೆ  ಹಂಚಿಕೊಂಡಿದ್ದೆ..ಕೆಲವೊಂದು ಈಡೇರಿದವು… ಮದುವೆಯ ನಂತರ ನನ್ನ ಕನಸುಗಳ ಹಂಚಿಕೊಳ್ಳೋ ರಸಘಳಿಗೆಯೇ ಒಲಿದು ಬರಲಿಲ್ಲ ,ಇನ್ನು  ನೆರವೇರುವುದೆಲ್ಲಿಂದ ?ಹೇಳಿಕೊಳ್ಳುವುದಿರಲಿ ಮಾತಾಡಿಸಲು ಅಸಾಧ್ಯ ಭಯ ತುಂಬಿಬಿಟ್ಟ….  ಅವಮಾನದಲ್ಲಿ ಕೊಂದೆಬಿಟ್ಟ…!!ಮಿಕ್ಕೆಲ್ಲವೂ ಹಾಗೆ ಸತ್ತೆಹೋದವು…..ಯಾರೋ ಹೇಳಿದರು ಕನಸುಗಳು ಸತ್ತರೆ ನಾವು ಸತ್ತಂತೆ  …ಹಿಂತಿರುಗಿ ನೋಡಿದಾಗ ಬೆಚ್ಚುತ್ತೇನೆ…ಅಪ್ಪಟ  ಕನಸುಗಳ, ಶುದ್ಧ ಕವನಗಳ ಜೀವಂತ ಹುಡುಗಿ ನಾನಾಗಿದ್ದೆ …
ಬದುಕದೆ ಬಿಟ್ಟ ಕನಸುಗಳು , ಬರೆಯದೆ ಬಿಟ್ಟ ಕವನಗಳಂತೆ ನರಳುತ್ತವೆ …ಬೆಂದು ನೊಂದು ಕರಕಲಾಗಿ ಪ್ರಾಣ ಹಿಂಡುತ್ತವೆ … ಅವನ ಕನಸುಗಳೇನ್ನಿದ್ದವೋ……….!!!!!!

ರಾಜನ ಕಥೆ

ಅವನಿಗೇಳುತ್ತೇನೆ plastic ಹೂವಿಗಿಂತ ರಿಯಲ್ ಹೂವು ಚೆಂದ ಅಂತ .ಇಲ್ಲ ಅವನಿಗೆ ಪ್ಲಾಸ್ಟಿಕ್ ಹೂವೆ ಹೆಚ್ಚು ಅಪ್ಯಾಯಮಾನವಂತೆ . ಗಾಢ ಬಣ್ಣ, ಮೋಹಕ ರೂಪ , ತಿದ್ದಿದ shapeu …ಆದರೆ ಅದಕ್ಕೆ ಜೀವವೇ ಇರುವುದಿಲ್ಲವಲ್ಲ ನನ್ನ ಕಳವಳ …ವಿವರಿಸುತ್ತಾನೆ ಜೀವದ ಹೂವಿಗೆ ಮುತುವರ್ಜಿ ಬೇಕು , ಬಾಡಿಹೋಗದಂತೆ ನೋಡಿಕೊಳ್ಳಬೇಕು ,ತೋರಿಸಿಕೊಳ್ಳಲು ಹೋದಾಗ ಪೆಚ್ಚು  .. ಪ್ಲಾಸ್ಟಿಕ್ ಹೂ ನೋಡು ಸದಾ ನಗುತ್ತಿರುತ್ತದೆ, ಪ್ರತಿಷ್ಠೆ ಹೆಚ್ಚಿಸುತ್ತದೆ

ಕೂಗಿ ಕರೆಯುತ್ತೇನೆ ಬಾ ನಾವಿಬ್ಬರು ಕೂಡಿ ಸ್ನೇಹ ಸೃಷ್ಟಿ ಮಾಡಿಕೊಳ್ಳೋಣ ..ಕೈ ಕೈ ಹಿಡಿದು ಮಕ್ಕಳಂತೆ ಬೀದಿ ಸುತ್ತುತ್ತಾ   ಹಾದಿಗುಂಟ ನಡೆದುಹೋಗೋಣ ,  ಟೂ ಬಿಟ್ಟು ಕಚ್ಚಾಡೋಣ..ಮರೆತು ಮತ್ತೆ ಒಂದಾಗೋಣಾ  …ನಿನ್ನೆ ಮೊನ್ನೆಯ  ಕತೆಯನ್ನೆಲ್ಲ ಹೇಳಿಬಿಡುತ್ತೇನೆ ..ನಾಳೆಯ ಕನಸನ್ನೆಲ್ಲ ಹರವಿತೋರಿಸುತ್ತೇನೆ… ಗುಬ್ಬಿ ಗೂಡ ಕಟ್ಟೋಣ , ಮನೆ ಆಟ ಆಡೋಣ …ಉಹೂಂ …ಬೇಕಿಲ್ಲ ಅವನಿಗೆ ಅವೆಲ್ಲಾ … ..ಸೋಲೋ ಗೆಲುವೋ , ಸರಿಯೋ ತಪ್ಪೋ ಖುದ್ದು ಮಾಡಿ ಅನುಭವಿಸುವಾಸೆ   ನನಗೆ…ಸಲಿಗೆ ಸಂಭ್ರಮ ನಿಷಿದ್ದ ಸಾಂಸಾರಿಕ ಸಂಬಂಧಗಳಲ್ಲಿ .. ಸದರ ಕೊಟ್ಟರೆ ವ್ಯವಹಾರ ಕುದುರೋಲ್ಲ … ಹಿಂದೆಯಿಂದ ಯಾರೋ ಲೆಕ್ಕಹಾಕಿ ತಲೆಗೆ ಧಾಟಿಸಿಯಾಗಿದೆ.. …. ಬುದ್ದಿವಂತರು , ಉದ್ಧಾರಕರು   ಎನಿಸಿಕೊಂಡವರ  guidence ,supportಗಳ    ಮೇರೆಗೆ ಮೆರೆಯುತ್ತ, ಘರ್ಜಿಸುತ್ತ,ಆಳುತ್ತ   ತಾನು ಸಿಂಹ ಎಂದು ತೋರಿಸಿಕೊಳ್ಳುವಾಸೆ ಅವನಿಗೆ …

ಅವನ ತಲೆಗೆ ಮೊಟಕಿ ಕೇಳಬೇಕೆನಿಸುತ್ತದೆ ಹುಡುಗ ಯಾಕಿಷ್ಟು ಗಾಬರಿ …ನನಗೇನೂ ಬೇಕಿಲ್ಲ ನಿನ್ನ ಪ್ರೀತಿಯ ಹೊರತು …ಕುಣಿಸೋಕೆ ನಾನು ದೊಂಬರವಳಲ್ಲ , ಕುಣಿಯೋಕೆ ನೀನು ಕೋತಿಯೂ ಅಲ್ಲಾ …ನಿನ್ನ ಆಸ್ತಿ ಪಾಸ್ತಿ ನೀನೆ ಮಜಾ ಮಾಡಿಕೊ , ಬೇಕಿದ್ದರೆ ವಜ್ರದ ಕಿರೀಟ ತೊಟ್ಟುಕೊಂಡೆ ತಿರುಗಾಡು, ಕುದುರೆ ಮೇಲೆ ಮೆರೆದಾಡು .. ಬಾಯಿಮಾತಲ್ಲಾದರು ನಿನ್ನೆದೆ ರಾಣಿ ಮಾಡಿಬಿಡು …ಸುಳ್ಳೋ ನಿಜವೋ , ಅಷ್ಟು ಖುಷಿಯಲ್ಲೇ ಕಾಲ ತಳ್ಳಿಬಿಡುತ್ತೇನೆ …ನನ್ನ ಓದು ನನ್ನ ತಿದ್ದಿದೆ ನಿಜ…ಕೆಲಸ, ಹುದ್ದೆಗೆ ನಾನು ನಿಂತಿದ್ದೇನೆ ಹೊರತು, ಹುದ್ದೆಯೇ ನಾನಲ್ಲ …ಪ್ರೀತಿಯ ಅಭಿವ್ಯಕ್ತಿಗೆ ನಿರ್ಧಿಷ್ಟ ಮಾನದಂಡಗಳಿಲ್ಲ..ಎದೆ ಬಗೆದು ತೋರಲು ಸಾದ್ಯವಿಲ್ಲಾ .ಸಾವಿರ ಬಾರಿ ಹೇಳಲು ಪ್ರಯತ್ನಪಟ್ಟೆ ವ್ಯವಹಾರ ಸಂಸಾರದಲ್ಲಲ್ಲ!!! ನಿಜ ಸಂಸಾರ ನಡೆಸಲು ವ್ಯವಹಾರ ಇರಬೇಕು ಆದರೆ ವ್ಯವಹಾರಿಕವಾಗಬಾರದು ಸಂಸಾರ, ಸಂಬಂಧ !!!
 

ಯಾಕಷ್ಟು ಗೊಂದಲ ಬೆಳಗೆದ್ದು ಬಾಚಿತಬ್ಬಿ  ಹೂ ಮುತ್ತ ನೀಡಿಬಿಡು, ಕಣ್ಣಲ್ಲೇ ಒಂದೆರಡು ಬಾರಿ ನಕ್ಕುಬಿಡು ..ನೀ ಏನೇ ಮಾಡಿದರು ನಿನದೆ ಧ್ಯಾನ ನನಗೆ… ಕೊರಗು-ಜಿಗುಪ್ಸೆಗಳಿಗೆ ನರಳಾಟವಾಗದೆ   ಸಂಭ್ರಮ-ವಿರಹಕ್ಕಿರಲಿ ನಿನ್ನ ಹೆಸರು … ಬೆಳಗೆದ್ದ ಕೂಡಲೇ ಉರಿಗಣ್ಣು, ಗಂಟು ಮುಖ , ಬೆತ್ತದಕೋಲು ಹಿಂದಿನಿಂದ  ಅಟ್ಟಾಡಿಸಿ ಬಂದು ಕೀಳಾಗಿ ಕೆಲಸ ತೆಗೆಸುತ್ತೀಯಲ್ಲ ಭಯಬಿಟ್ಟು ಮತ್ತೇನು ಹುಟ್ಟಬಹುದು.ಮನೆಯೆಂದರೆ ಕೆಲಸಗಳ ಕಾರ್ಖಾನೆಯಲ್ಲ,ಶ್ರೀಮಂತಿಕೆ ಎಂದರೆ  ಕಂತೆ ಕಂತೆ ದುಡ್ಡಲ್ಲ… ದೇಹದಂತೆ ಮನಸಿಗೂ ಆರೋಗ್ಯವಿರುತ್ತದೆ.. ಹದಗೆಡದಂತೆ ವರ್ತಿಸುವುದು ಮಾನವೀಯತೆ.. ಯಾರಿಗೋ ನೀ ಸಾಬೀತು ಮಾಡುವುದೇನು ಯಜಮಾನ ಎಂದು ಮನಸಿಗೆ ಭಾವನೆಗೆ ಸಂಬಂಧಿಸಿದ ವಿಷಯಗಳವು.. ಅಧಿಕಾರ, ಹಕ್ಕು  ವ್ಯವಸ್ತೆಯಲ್ಲಿ ಹಿಣುಕುವಂತವುಗಳೇ   ಹೊರತು  ಸಂಬಂಧಗಳಲ್ಲಿ ನುಸುಳುವಂತದಲ್ಲ    … ಮನೆಯೆಂದರೆ ಕೋರ್ಟು ಕಚೇರಿಯಲ್ಲ …ಎಂದಾದರು ಆತ್ಮಸಾಕ್ಷಿಯ ಕಟಕಟಯಲ್ಲಿ ನಿಂತು  ತರ್ಕಿಸಿನೋಡು ಹೆಣ್ತನದ ಸಾರ್ತಕ ರೂಪ ನೋಡಬಯಸುವ  ನೀನು, ಹೆಣ್ತನದ ಮೃದುತ್ವಕ್ಕೆ ,ಸೂಕ್ಷ್ಮತೆಗೆ,ಮಾನ ಗೌರವಗಳಿಗೆ ಕೊಟ್ಟ ಕೊಡಲಿಪೆಟ್ಟು ಎಂತದ್ದು …  ನೊಂದ ನಾಯಿಗೂ ಸಹ  ಸಿಟ್ಟು ,ಸೆಡವು ,ಆತ್ಮಗೌರವ ಉಳಿದಿರುತ್ತದೆ ….. ಸರಿತಪ್ಪುಗಳಲ್ಲಿ ತೂಗುವಂತದ್ದಲ್ಲ ಜೀವನ,ಕಷ್ಟ ಸುಖಗಳಲ್ಲಿ ತೆವಳುವಂತದ್ದು…ಗೌರವದಿಂದ   ನಡೆಸಿಕೊಳ್ಳುವುದೆಂದರೆ   ಕೈ ವಶವಾದಂತೆ, ಅಧೀರನಾದಂತೆ  ಅಲ್ಲ.. ಅಂಕೆಯಲ್ಲಿಡಲು   ಮಾನ ಅಡ ಇಟ್ಟುಕೊಳ್ಳಬೇಕಿಲ್ಲ .. ಮೇಲರಿಮೆ ಸಾದಿಸಲು ಕೀಳರಿಮೆ ತುಂಬುವುದಲ್ಲ.. ಒಲವಿನ ಪೂಜೆಗೆ ಒಲವೆ ಮಂದಾರ..ತೂತು ಕೊರೆದು ಪೂರಾ ಸುರುವಿಕೊಂಡಮೇಲೆ, ತುಂಬದೆ ಪಡೆಯಲು ಸಾಧ್ಯವಿಲ್ಲ…      

ಬುದ್ಧಿವಂತಿಕೆ ಮೆಚ್ಚುವಂತಿರಬೇಕೇ ವಿನಃ ಚುಚ್ಚುವಂತಲ್ಲ ..ರೆಕಾರ್ಡ್ ಮಾಡೋದು , wardrobe ತಡವೋದು ಸಾಕ್ಷಿ ಸೃಷ್ಟಿಸಬಹುದೇ ವಿನಃ ಸತ್ಯವನಲ್ಲ… ಹೆಣ್ಣಿನ ಮಾನದ ತೂಕ ಬೀದಿಯಲ್ಲಿ ಹಾಕುವ ಗಂಡಸನ್ನು ತಾಯಿ ಹೊಟ್ಟೆಯಲ್ಲಿ ಹುಟ್ಟಿದವ ಎನ್ನುವುದಿಲ್ಲ …
ನಿನ್ನನ್ನು  ಪ್ರೀತಿಸುವುದಕ್ಕೆ ಮನಸಿನದೇ ಸಾಕ್ಷಿ, ಧರ್ಮದೇ ರುಜುವಾತು  …ಆದರದ್ಯಾಕೆ  ಪ್ರೀತಿಯೊಂದನ್ನು ಬಿಟ್ಟು ಬೇಡವಾದವೆಲ್ಲವು ನಿನಗೆ  ದೊಡ್ಡದಾಗಿ ಕಾಣಿಸಿಬಿಡುತ್ತದೆ .ಗುರಿ ಪ್ರೀತಿಯಾದರೆ ದಾರಿಯು ಪ್ರೀತಿಯದ್ದಾಗಿರಬೇಕಷ್ಟೇ ..
ಗೆಲ್ಲಬೇಕೆನ್ನುವ ಶೋಕಿಗೆ ನೀಚತನ, ನಿಷ್ಟುರತೆ , ನಿಷ್ಕರುಣೆಗಳಂತ  , ನಿಕೃಷ್ಟ ಹಾದಿ ತುಳಿದು,ಸೋಲಿಸಬೇಕೆನ್ನುವ ಹಟಕ್ಕೆ ಓಡಿಹೋದರೆ  ಅದಕ್ಕಿಂತ ದೊಡ್ಡಪಲಾಯನ  ಮತ್ತೊಂದಿಲ್ಲ .. ಅಸಹಾಯಕತೆ, ವ್ಯವಸ್ತೆಗಳನ್ನು ಅವಮಾನ ಮಾಡಲು , ಅದರ ಮೂಲಕ ಸ್ವಾರ್ಥಸಾದಿಸಿಕೊಳ್ಳಲು  ಬಳಸುವಂತದ್ದಲ್ಲ .ಚಾಡಿ , ಅವಹೇಳನ , ರುಜುವಾತು …ಸರಿ ಗೆದ್ದು  ಏನು ಮಾಡುತ್ತಿ ? ಮಡದಿ ಮಕ್ಕಳಿಲ್ಲದ ಒಂಟಿ ರಾಜ …

ಗಳಿಸುವುದಕ್ಕು ಕಿತ್ತುಕೊಳ್ಳುವುದಕ್ಕೂ  ವ್ಯತ್ಯಾಸಗಳಿವೆ.. ಮನಸಾರೆ , ಮನಸ್ತುಂಬಿ ನೀಡಿಕೊಳ್ಳಬೇಕು… ಬಲವಂತಕ್ಕೆ, ಹೆದರಿಕೆಗೆ ಅರ್ಪಿಸಿಕೊಂಡು ಬಿಡುವುದಲ್ಲ ..ಕಡೆಪಕ್ಷ ಒಳಗಿನ ಮಾತು ಹೊರಗೆ ಬರಲು ಸಣ್ಣ ಕಿಂಡಿಯನ್ನಾದರು ಉಳಿಸಿಕೊಳ್ಳಬಹುದಿತ್ತು … ವಿರುದ್ದದ  ದನಿ ಕೇಳಿಬರಬಾರದೆಂದರೆ  ಹೆದರಿಸಿ ಹೆದರಿಸಿ  ಉಸಿರುಕಟ್ಟಿಸುವಂತದಲ್ಲ…  ಸಲಿಗೆ ಎಷ್ಟೇ ನೀಡಿದರು ಮೈಮರೆತಾದರು ಗೌರವದ ರೇಖೆ  ಧಾಟದಿರುವಂತದ್ದು .educate  ಮಾಡುವುದಕ್ಕೂ ಭಯಬೀಳಿಸಿ   train ಮಾಡುವುದಕ್ಕೂ ಇರುವ ವ್ಯತ್ಯಾಸವೇ ಅಗಾಧ ..

ಪ್ಲಾಸ್ಟಿಕ್ ನಗು , ಪ್ಲಾಸ್ಟಿಕ್ ಗೌರವ , ಪ್ಲಾಸ್ಟಿಕ್ ದಾಸ್ಯ , ಪ್ಲಾಸ್ಟಿಕ್ ಪ್ರೀತಿಯನ್ನು ತಯಾರಿಸುವುದಲ್ಲ ಜೀವನ ..
ಜೀವದ ಹೂವನ್ನೊಮ್ಮೆ ಮೃದುವಾಗಿ ಮುಟ್ಟಿನೋಡು , ಕಂಪನಗಳೇಳುತ್ತವೆ ನಿನ್ನೊಳಗೂ , ಹೂವೊಳಗು…. ಆಘ್ರಾಣಿಸಿ ನೋಡು ನೈಸರ್ಗಿಕ ಸುಗಂಧಕ್ಕೆ copyrights ಗಳಿಲ್ಲ , ಪ್ರೀತಿಗೆ patent ಕೂಡ…. ವ್ಯತ್ಯಾಸ  ನಿನಗೆ ತಿಳಿಯುತ್ತದೆ …

ನೇರ ದಾರಿಗಳೆಂದರೆ ಹೆಚ್ಚು comfort ಮತ್ತು riskfree ಯಾಗಿರುತ್ತವೆ .ವಾಮಾಮಾರ್ಗಗಳಲ್ಲಿ ಅಡಿಗಡಿಗೂ ಅನುಮಾನ , ಅಡಚಣೆಗಳೇ ..ಸದಾ ಎಚ್ಚರಿಕೆಯಿಂದಿರಬೇಕಾದ ಅನಿವಾರ್ಯತೆ ಬೇರೆ .ನೇರಾ ನೇರಾ ಅರ್ಥೈಸಿಕೊಂಡು  ಐಕ್ಯವಾಗಿ ಜೊತೆ ನಡೆಯೋಣ ಎಂದೆಲ್ಲಾ ಹೇಳಿದೆ .. ಸಹಬಾಳ್ವೆ, ಕೂಡಿ ಬಾಳೋ ಸ್ವರ್ಗ ಸುಖ ನಿರಾಕರಿಸಿದ ಅವನು ..ಜೀವಹಿಂಡುವ ಆಳ್ವಿಕೆ, ಅಂಕೆ, ಶಂಕೆಗಳೆಲ್ಲ ಬೇಕಿತ್ತಾ?

ಗಂಡಸಾದವನು ತನ್ನ ಪೌರುಶವನ್ನು ಇನ್ನೊಬ್ಬ ಗಂಡಸಿನೊಂದಿಗೆ ಸೆಣಸಾಡಿ,ಗೆದ್ದು ತೋರಿಸಬೇಕೆ ಹೊರತು , ಹೆಣ್ಮಕ್ಕಳ ಅದರಲ್ಲೂ ತಮ್ಮದೇ ಮನೆಯ ಹೆಣ್ಮಕ್ಕಳ ಮೇಲೆ ಹಕೀಕತ್ತು ಸಾಧಿಸಿ ಹೆದರಿಸಿ,  ಹೊಡೆದು, ಬಡಿದು ಸ್ತಾಪಿಸುವಂತದ್ದಲ್ಲ.ಹೆಣ್ಣಿನ ಹತ್ತಿರ ಕಾದಾಡಿ ಗೆಲ್ಲುವುದನ್ನು ಉತ್ತರನ ಪೌರುಶವೆನ್ನುತ್ತಾರೆ ನಮ್ಮ ಕಡೆ .ಆದರಿಲ್ಲಿ  ಎಲ್ಲ ಉಲ್ಟಾ ..ಹೊರಗಡೆಯ ಗಂಡಸರು ಕಾಲಿಗೆ ಬೀಳಿಸಿಕೊಳ್ಳುವ  ಅಣ್ಣಂದಿರಾಗಿಬಿಡುತ್ತಾರೆ ..ಮನೆ ಹೆಂಗಸರ ಮೇಲೆ ಗಧಾಪ್ರಹಾರವಾಗುತ್ತದೆ…ಹೆಂಡತಿಯನ್ನು ಸುಖಾಸುಮ್ಮನೆ ಬಡಿಯುವ ಗಂಡಸರು ಒಂದೋ ಸೋಲನ್ನು ಸಹಿಸದವರಾಗಿರುತ್ತಾರೆ ಇಲ್ಲಾ ಕೀಳರಿಮೆಯವರಾಗಿರುತ್ತಾರೆ.ಇನ್ನು ಸರಿಯಾಗಿ ಹೇಳಬೇಕೆಂದರೆ ಕೈಲಾಗದ ದುರಹಂಕಾರಿಗಳಾಗಿರುತ್ತಾರೆ…ನಮ್ಮ ಜ್ಞಾನಕ್ಕೆ ನಿಲುಕಿದ ಅರಿವಿದು ..ಆದರೆ ಆ ನಾಲ್ಕು ಮನೆಗಳಲ್ಲಿ ಮಾತ್ರ ಬೇರೆಯೇ ಸೂತ್ರ, ತಂತ್ರವಂತೆ  …

ತಮ್ಮ ಪ್ರಭಾವ, ಪ್ರಾಮುಖ್ಯತೆ,ಪವರ್ ತೋರಿಸಲು ಓಡಿಹೋಗಬಹುದು ಎಂದು ತೊರಿಸಿದವರೆ ಅವರು  .ಜನ ಕಿಸಿಕಿಸಿ ನಕ್ಕಿದ್ದನ್ನು ಮನೆ ಹೆಂಗಸರು ಕಿವಿಗಳಿಗೆ ಹಾಕಲಿಲ್ಲ ಅನಿಸುತ್ತದೆ…ಗಂಡಸು ಅಷ್ಟು ದಿನ ದೂರವುಳಿದರೆ ಒಳಗಿರಬೇಕಾದ ಒಳತೋಟಿಯ ಮೇಲೆ ಜನಕ್ಕೆ ಅನುಮಾನ… ಯಾರಿಗೆಂತ ನಷ್ಟ ?     
ನೀತಿ, ಮೌಲ್ಯಗಳ ಅಗತ್ಯವಿದೆ ಬದುಕಿಗೆ.ಒಬ್ಬನೇ ಮಗ, ಕೋಟಿ ಆಸ್ತಿ  ಒಡೆಯ ದುಷ್ಟನ್ನನ್ನಾಗಿ ಯಾಕೆ ಮಾರ್ಪಾಡುಮಾಡಬೇಕು … ಎಮೋಷನಲ್ blackmail , ಚಾಡಿ ಹೇಳುವುದು , ದೂರುವುದು, violent ಆಗುವುದು ವ್ಯಕ್ತಿತ್ವದ ನ್ಯೂನ್ಯತೆ ಮತ್ತು ಅಸಹಾಯಕತೆಯನ್ನೆ ತೋರಿಸುತ್ತದೆ.ಮನುಷ್ಯನನ್ನು  ಕಂಟ್ರೋಲ್ ಮಾಡಲು ಅವುಗಳನ್ನು ಉಪಯೋಗಿಸುವುದ ಕಲಿತರೆ ಅದಕ್ಕಿಂತ ಚೀಪ್ tactise ಗಳಿಲ್ಲ .ಮಾಡುವ ಅವಮಾನ ತಮ್ಮ ಮೇಲಿನ ಗೌರವ, ವಿಶ್ವಾಸ ಕ್ಷೀನಿಸುವಲ್ಲಿಯಷ್ಟೇ ಯಶಸ್ವೀಯಾಗುತ್ತದೆ ಹೊರತು  ಮತ್ತೇನು ಪ್ರಯೋಜನವಿಲ್ಲ .ಭಯದಲ್ಲಿ ಸ್ನೇಹ, ನಂಬಿಕೆ ನಾಪತ್ತೆಯಾಗುತ್ತದೆ .ಲೋಕದೆದುರು  ಬಟ್ಟೆ ಕಳಚಿದರೆ ಅಸಹ್ಯ, ನಾಚಿಕೆಯಾಗುತ್ತದೆ .ಹೆಂಗಸರ ಅಳುವ ನಾಟಕ, ಒಡೆದು ಆಳುವ ನಾಟಕ  ಗಂಡಸರು ಮಾಡಿದರೆ ನಾಮರ್ದತನ ಕಾಣಿಸುತ್ತದೆ .ಬಾಳಿಸದೆ, ಬಳಸಿಕೊಳ್ಳಲು ಮುಂದಾದವರಿಗೆ ಮಾತ್ರ ಅಪಾರ್ಥಗಳು ಬಹುಬೇಗ ಸಂಭವಿಸಿ, commodityಯೊಳಗಿನ  defect complaintಗಳು ಶುರುವಾಗುತ್ತವೆ.

ದರ್ಪ ತೋರಿಸಿಕೊಳ್ಳಬೇಕಿತ್ತೋ  ಅಥವ ಒಬ್ಬನೇ ಸಂಸಾರ ಮಾಡಲು ಸೋಮಾರಿತನವಾಗಿ  ಅವರಿಗೆ ಜವಾಬ್ದಾರಿ ಹೊರೆಸಿಕೊಟಿದ್ದನೋ..ಅಥವ  ಅಸಮರ್ಥತೆಯೊ  …. ದೇಹ ಮಾತ್ರ ನಿನ್ನದು ಸಂಸಾರ ನನ್ನದು ಎನ್ನುವ ಮಟ್ಟಿಗೆ ಸೂತ್ರ ಹಿಡಿದು ಕೂತ್ತಿದ್ದರು ಅವರಿಬ್ಬರೂ ….. ಎಲ್ಲ ಕಿತ್ತು ನಿನ್ನ ವಶಮಾಡಿ ಆಳ್ವಿಕೆ ಮಾಡಲು ಅನುವು ಮಾಡಿಕೊಡುವುದೇ ನಿನ್ನ ಮೇಲಿನ ನಮ್ಮ ಪ್ರೀತಿ ಎನ್ನುತ್ತಿದ್ದರು.. ಒಳಗೊಳಗೇ ಪಾಲಿನ ಲೆಕ್ಕ ಹಾಕ್ಕುತ್ತಿದ್ದರು … ಕೈಗಾಕಿ ಕೊಂಡು ಹೇಳಿದಂಗೆ ಕೇಳೋಹಾಗೆ ಮಾಡಿಕೊಂಡು ಬಿಡುತ್ತಾಳೆ ಎಂದು ಸುಮ್ಮಸುಮ್ಮನೆ ಹುಚ್ಚನಂತೆ ಬೆಚ್ಚುವುದ ನೋಡಿದರೆ ಅರಿವಾಗುತ್ತಿತ್ತು ,(ಹೆಣ್ಣೆಂದು)ಹೆದರಿದವನ ಮೇಲೆ ಹೇಗೆ ಹಾವು ಎಸೆದ್ದಿದ್ದಾರೆ ಎಂದು ……..ಮನೆ ಹೆಂಗಸರ ಚಮತ್ಕಾರಗಳನ್ನು  ನೋಡಿನೋಡಿಯೇ   ಹೆಣ್ಮಕ್ಕಳ  judge ಮಾಡುವುದ ಕಲಿತಿರಬೇಕು  ಅವನು ..
ಷರಾ ಬರೆದುಕೊಂಡು ಬದುಕಲು ಶುರು ಮಾಡಿದ್ದರು ಅವರು . ಭೋಗದಲ್ಲಿ, ತೃಪ್ತಿಯಲ್ಲಿ ತೇಲಬೇಕಾದವರು ಹೊಟ್ಟೆಯಲ್ಲಿ ಹುಟ್ಟಿದವರೇ ವಿನಃ ಕಟ್ಟಿಕೊಂಡು ಜೊತೆಗೆ ಬಂದವರಲ್ಲ …ರಾಜಕೀಯ !!! ಅಲ್ಲಿ ಕಿತ್ತು ಇಲ್ಲಿ ಕೊಡುವುದು, ಇರೋಬರುವುದನೆಲ್ಲ ವಾರಸುದಾರರ ಮುಂದಿಡುವುದ ಬಿಟ್ಟು ಹೊಸದಾಗಿ ಸಂಪಾದಿಸುವುದರ ಬಗ್ಗೆ ಯೋಚಿಸಬಹುದಿತ್ತು ಅವರು .ಚಿನ್ನದ ಮೊಟ್ಟೆಯಿಡುವ ಕೋಳಿಯನ್ನು ಚೆನ್ನಾಗಿ ಮೇಯಿಸಿ ದಿನಾ ಒಂದೊಂದು ಪಡೆಯುವುದಕ್ಕೆ ತಾಳ್ಮೆ ಬೇಕು .ಕೇಳಿದ್ದನ್ನು ನೀಡುವ ಕಾಮಧೇನು ,  ಮುಂದೆ ಬಂದರೆ ಹಾಯದ ಹಿಂದೆ ಬಂದರೆ ಒದೆಯದ ಪುಣ್ಯಕೋಟಿ ಮಾಡಬೇಕಿತ್ತು ಅವರು .ಯಾಕಷ್ಟು ಸ್ವಾರ್ಥ ..ಯಾಕಷ್ಟು ಸ್ಪರ್ಧೆ ..ಇಡೀ ಇಂಡಿಯಾದ ರಾಜಕೀಯ , ಕುತಂತ್ರ , ರಣತಂತ್ರ ಮೂವರೇ ಮಾಡಿ ನೀಗಿಕೊಳ್ಳಬಹುದಾದ ಅತಿ ಬುದ್ದಿವಂತಿಕೆ ಅಗತ್ಯವಿತ್ತ ? ಬಿಟ್ಟಿದ್ದಿದ್ದರೆ ರೂಮಿನ ಒಳಗೂ ಕೂತು , ನೋಡಿ ಸರಿಯಾಗಿ ಮಾಡುತ್ತಿಲ್ಲ ಅಂತ ಕೊಂಕುತೆಗೆದು ಊರ ತುಂಬಾ ಹೇಳಿಕೊಂಡು ಬಂದುಬಿಡುತ್ತಿದ್ದರೇನೋ   ಅವರು .ಅಂಗೈನ ಮುಂಗೈ , ಮುಂಗೈನ ಅಂಗೈಯ್ಯ ಮಾಡಿಬಿಡುವ ಶಕ್ತಿಯನ್ನು ಮನೆಯಲ್ಲೇ ಉಪಯೋಗಿಸಿದರೆ ಹಾಳಾಗದೆ ಉಳಿಯಬಹುದ?
ಆರಾಧನೆಯಲ್ಲಿ ಶರಣಾಗತಿ ಬೇಕಿರಲಿಲ್ಲ ಅವರಿಗೆ  ಭಯದಲ್ಲಿ, ದಾಸ್ಯದಲ್ಲಿ ಬೇಕಿತ್ತು …ಆಚರ, ವಿಚಾರ, ಸಂಪ್ರದಾಯ ಸಂಸ್ಕಾರ ಎಲ್ಲವನ್ನು ಉಪಯೋಗಿಸಿಕೊಂಡು ಮಾತಾಡುವುದಬಲ್ಲರು ..ಮಾತು ಮನೆಕೆಡಿಸಿತು ತೂತು ಒಲೆಕೆಡಿಸಿತು ಅನ್ನಂಗೆ ಮಾಡಿಬಿಟ್ಟರು ..ಬೇಕಾಗಿರುವುದು ಬಾಳು, ಬಾಳಿಸು ಸೂತ್ರ… ಅಲ್ಲಿದ್ದಿದ್ದು ಹೆದರಿಸು, ಹೆದರಿಕೊಂಡರು ಹೆದರಿಸು ಸೂತ್ರ….   

ಈ ಜನ್ಮಕ್ಕೆ ಬುದ್ಧಿ ಬರುವ ಹಾಗೆ ಕಾಣಲ್ಲ ಅವನಿಗೆ …
    
ಕೆಮ್ಮಿದರು ಊರುತುಂಬಾ  ಗುಲ್ಲೆಬ್ಬಿಸಿಕೊಂಡು ಬಂದು  ಸಿಂಪತಿಗಿಟ್ಟಿಸುತ್ತಾರೆ …ಹೆಣ್ಣು ಎನ್ನುವ ನಾಚಿಕೆಬಿಟ್ಟು , ಮುಜುಗರಬಿಟ್ಟು ಗುಂಪುಗುಂಪಲ್ಲಿ ನಿಂತು  ಅವತ್ತು ರೂಮಲ್ಲಿ, ಪ್ರಸ್ತದ ದಿನ ಅಂತೆಲ್ಲ  ಕತೆ ಹೇಳುತ್ತಾರೆ…ಒಬ್ಬನೇ ಮಗ ಒಬ್ಬನೇ ಮಗ ತಿನ್ನಿಸಿ ತಿನ್ನಿಸಿ ಅಜೀರ್ಣವಾಗುವಷ್ಟು   ತುರುಕಿಬಿಟ್ಟಿದ್ದಾರೆ …ಕಾಪಾಡುತ್ತೇವೆ ಎಂದು ಬಂದು ಸರಿಪಡಿಸಲಾರದಷ್ಟು ನಷ್ಟಮಾಡಿಟ್ಟಿದ್ದಾರೆ ..ಬೆಳ್ಳಗೆ ಒಗೆಯುತ್ತೇವೆ ಎಂದು ಝಾಡಿಸಿ ಝಾಡಿಸಿ ಹರಿದೆಹಾಕಿದ್ದಾರೆ … ತೇಪೆ ಹಾಕುತ್ತೇವೆ ಅಂತ ಖಾಸಗಿತನ ದೋಚಿದ್ದಾರೆ ..ನಡೆದರೂ ನಿಂತುಹೋದರು   ಅವರಿಗೇನು ನಷ್ಟ ಇಲ್ಲ..ನಡೆದಾಗ ಹಿಂದಿನಿಂದ ಮುರಿದುಕೊಳ್ಳುವುದು, ನಿಂತು ಹೋದರೆ ಮುಂದಿನಿಂದಲೇ ಪಡೆದುಕೊಳ್ಳುವುದು …!!!! ಹಂಗೆಲ್ಲ ಮಾಡಬಾರದು ಹೇಳುವುದ ಬಿಟ್ಟು, ಹಂಗೆ ಮಾಡಲಿ ಎಂದು  ಉಳ್ಳುಳ್ಳಗೆ   ಸುಮ್ಮನಿದ್ದರು… ಮೂವರು ಸಿಕ್ಕಿಹಾಕಿ ಕೊಳ್ಳಬೇಕಾದಾಗ ‘ನಿನ್ನದೇನು ತಪ್ಪಿಲ್ಲ ,ನಿನಗೆ ಮೋಸ ಆಯಿತು ‘ ನಂಬಿಸಿದರು , ತಿಪ್ಪೆಸಾರಿಸಿದರು .. ಕದ್ದು ಮುಚ್ಚಿಟ್ಟರು… ಆತ್ಮಸಾಕ್ಷಿ ಕಾಡಬೇಕಾದಾಗ  ಪ್ರಜ್ಞೆಯನ್ನೇ ತಪ್ಪಿಸಿದರು.. ಒಂಟಿ ರಾಜ ರಾಣಿ ಇಲ್ಲದೆ ಪಾಳುಬಂಗಲೆಯಲ್ಲಿ ಹೋರಾಡುವಂತೆ ಕತೆ ಮಾಡಿದರು ….. ಹಗೆ ತೀರಿತು.. ರಾಜನಿಗೆ ಬದುಕು ಮುಗಿಯಿತು         

 

   

ಯಾರ ಮೇಲೆ ?

ಗಂಡಸು ಜಾತಿಯನ್ನು ಇನ್ನಿಲ್ಲದಂತೆ ಕಾಡುವ ನುಸಿ ‘ಅನುಮಾನ ‘.slumಗೆ ಸೇರಿದ ಗಂಡಸಿನಿಂದ ಹಿಡಿದು ವಿದ್ಯಾವಂತರು ಎನಿಸಿಕೊಂಡವರ ತಲೆಯನ್ನೂ ಬಿಡದೆ ಕೊರೆವ ಕಾಂಡದಹುಳು ಅನುಮಾನ .

ಅವನು ಹೊರತಾಗಿರಲಿಲ್ಲ ಅದಕ್ಕೆ .ಒಮ್ಮೊಮ್ಮೆ ಅನಿಸುತ್ತದೆ ಅದು ಅವನ ತಪ್ಪಲ್ಲ , ಅವನ ಸ್ವಭಾವದ ತಪ್ಪು ಅಂತ .ಬೇರೆಯವರನ್ನು hurt ಮಾಡಲು ಸದಾ ಒಂದಿಲ್ಲೊಂದು ಕಾರಣ ಬೇಕೇಬೇಕು ಅವನಿಗೆ , ಇಲ್ಲದಿದ್ದರೆ ಕಂಟ್ರೋಲ್ ಮಾಡುವುದಾದರೂ ಹೇಗೆ ? !!!ಅವನಿಗೆ ಒಂದು over confidence , ತಾನೊಬ್ಬ ಅತಿ ಬುದ್ಧಿವಂತ, ಮಾನವ ಜಗತ್ತಿನ ಮತ್ತು ಮನಸಿನ ಎಲ್ಲ ವ್ಯಾಪಾರ, ವ್ಯವಹಾರಗಳೂ ತನ್ನ ಊಹೆಗೆ ನಿಲುಕುತ್ತವೆ, ತನಗೆ ಕಂಡಿದ್ದೆ,ತೋಚಿದ್ದೇ  ನಿಜವಾಗಿರುತ್ತದೆ ಅನ್ನುವ ಬಲವಾದ ನಂಬಿಕೆ . ಅವನ ಹತ್ತಿರ ಜಯಿಸಬೇಕು ಎಂದರೆ ಒಂದೋ ಅವನನ್ನು  ignore ಮಾಡುವುದ ಕಲಿತುಕೊಳ್ಳಬೇಕು ಇಲ್ಲ ಸುಳ್ಳೇ ನಂಬಿಸಿ ನಟಿಸುವುದನ್ನು …ನನಗೆ ಎರಡು  ಇಷ್ಟವಾಗುತ್ತಿರಲಿಲ್ಲ, ಸಾಧ್ಯವೂ ಆಗುತ್ತಿರಲಿಲ್ಲ,ಬರುತ್ತಲೂ ಇರಲಿಲ್ಲ  .  
ಏನೇ ಅಪಾರ್ಥಗಳಾದರು ವ್ಯಕ್ತಿಯೊಂದಿಗಿನ “ಸಮಯ  ಸರಿಯುವಿಕೆ” ಎನ್ನುವುದು ಕಾಲದೊಂದಿಗೆ ಮೌನವಾಗಿ ಸಮಜಾಯಿಸಿಗಳನ್ನು ನೀಡುತ್ತಾ ಉತ್ತರಗಳನ್ನು ಒದಗಿಸಿ ನಂಬಿಕೆ ಸರಿಪಡಿಸುತ್ತದೆ ಎನ್ನುವುದು ನನಗಿದ್ದ ಪರಿಜ್ಞಾನ ಮತ್ತು ಮಾರ್ಗ .ಹಾಗೆಂದು ಕೊಂಡೆ ಸುಧಾರಿಸಿದೆ ….ಎಷ್ಟು ದಿನ, ವಾರ, ತಿಂಗಳು, ವರ್ಷಗಳು ಬೇಕಾಗಬಹುದು ‘ನಂಬಿಕೆ’ ಹುಟ್ಟಲು ?
ಚೆನ್ನಾಗಿದ್ದಾಗ ಮನಸಾರೆ ಅನ್ನುತಿದ್ದ ನಂಗೊತ್ತು ಕಣೆ ನೀನು ಒಳ್ಳೆಯವಳು ಎಂದು .ತೃಪ್ತಿ ಹೊಂದಿದ ನಂಬಿಕೆ  ತೇಗಿದ ಸದ್ದು ಕೇಳಿಸುತ್ತಿತ್ತು.ಅಲ್ಲಿಂದಾಚೆಗೆ ಎಲ್ಲವು ಸುಖಾಂತ್ಯ ಅಂತಲೇ ಭಾವಿಸುತ್ತಿದ್ದೆ ..
ಆದರೆ ಅದು ನೀರಮೇಲಿನ ಗುಳ್ಳೆ…
ವ್ಯವಹಾರದ ಹೊಗೆ, ಅಧಿಕಾರದ ಹೊಗೆ … ಏನೇನೋ ಕುತರ್ಕ , ರಗಳೆ …
ಇಮಾಂ ಸಾಬಿಗೂ ಗೋಕುಲಾಷ್ಟಮಿಗೂ ಇರದ ಸಂಬಂಧದಂತೆ “ಎಲ್ಲದಕ್ಕೂ” ಅದನ್ನೇ ವಿಕೃತವಾಗಿ  ಚಲಾಯಿಸುತ್ತಾ  defend ಮಾಡಿಕೊಳ್ಳುವುದರಲ್ಲಿ  ಪಳಗಿಕೊಂಡರು ಅವರೆಲ್ಲರೂ  .ಅದಲ್ಲವ ನಿಜವಾದ ನೀಚತನ !ಅದರಲ್ಲೂ ನಾಲ್ಕು ಗೋಡೆಗಳ ಒಳಗೆ ಏನೇ ಮಾಡಿಕೊಂಡರು ಸರಿ, ಈಚೆಯಿಂದ ಕರೆಸಿ  , ಬಂದವರೆದುರು ಉಯ್ಯಾಲೆ  ಆಡಿಸುವುದ ಕಲಿತರು ..ಅದರಲ್ಲೆಲ್ಲಾ ನಿಸ್ಸೀಮರು …   ನಿಜ ಹೇಳಬೇಕೆಂದರೆ ನನ್ನ ಗಂಡ ಎಂಥಹ ದುಷ್ಟನಾಗಿದ್ದಿದ್ದರು ಸಹಿಸಿಕೊಂಡು ನನ್ನ ಒಳ್ಳೆತನಗಳಲ್ಲಿ   ಸಂಸಾರ ಮಾಡಿ ಜಯಿಸುತ್ತಿದ್ದೆ . ಆದರೆ ಮೂರನೆಯವರ interference ನಾ ಸಹಿಸಲಾರೆ, ಅವಮಾನ ಕೂಡ !!!
(ಅಷ್ಟಕ್ಕೂ ಇಷ್ಟೆಲ್ಲಾ ಅವಾಗ ಏನು ಅರ್ಥವಾಗಿತ್ತು ..)

ಒಂದಿಲ್ಲೊಂದು ಕಷ್ಟ, ದುರಂತ ,ಅಪ್ಪನ strictness , restrictionsಗಳಲ್ಲಿ   ಸವೆದಿದ್ದವಳು ನಾನು .’ಒಳ್ಳೆಯವಳು’ ಅನಿಸಿಕೊಳ್ಳಬೇಕೆಂಬ  ಹೋರಾಟದಲ್ಲಿ ಎಲ್ಲ ಆಸೆ, ಕನಸುಗಳನ್ನು ಮದುವೆ ನಂತರ ಎಂದು ಮುಂದೂಡುತ್ತಿದ್ದವಳು ನಾನು .ಎಲ್ಲರಂತೆ ಸುಖದ agressiveness ಬೆಳೆಸಿಕೊಳ್ಳದೆ , ಸಂಯಮ, ಪ್ರಬುದ್ಧತೆ ರೂಡಿಸಿಕೊಳ್ಳುತ್ತ ವಯೋಸಹಜ ರೋಮಾಂಚನ , ಕಂಪನಗಳನ್ನೂ ಖಾವಿಧಾರಿಗಳಂತೆ ನಿಗ್ರಹಿಸಿ ಬದುಕಲು ಕಲಿತವರು ನಾವು … ಅಪ್ಪನ ಅಂಕುಶದಲ್ಲಿ ಪಳಗಿ ಜಯಿಸಿದವರು ನಾವು .ಕಣ್ಣಿಗೆ ಕಾಡಿಗೆ ಯಾಕೆ, ಹುಬ್ಬಿಗೆ ತಿದ್ದುವುದು ಬೇಕೇ ಎಂಬೆಲ್ಲ ಪ್ರಶ್ನೆಗಳು, ಜಿಜ್ಞಾಸೆ , ಭಯಗಳನ್ನು ನಿವಾರಿಸಿ ‘ನಮ್ಮ ಮನೆಯ ಮಕ್ಕಳು’ ಎಲ್ಲಿಬಿಟ್ಟರು ಶುದ್ಧರು ಎನಿಸುವ ಧನ್ಯತಾ ಭಾವ ಸ್ಪುರಿಸಿದವರು !  ಓಡಿಹೋದ ಯಾರದೋ ಮನೆಯ ಹುಡುಗಿಯಾ ಕುರಿತು “ಅಷ್ಟು urgent ಆಗಿದ್ದಿದ್ರೆ  ತಡೆದುಕೊಳ್ಳೋಕೆ  ಆಗ್ತಿಲ್ಲ  ಅಂತ ಹೇಳಿ ಮನೆಯಲ್ಲಿ ಮಾಡಿಸಿಕೊಂಡಿರಬೇಕಿತ್ತು ” ಅನ್ನೋ ಅಶುದ್ಧ  commentನ ಹೊಡೆದು ಲವ್ ಎಂದರೆ ಅದೇ, ಅಸಹ್ಯ ಎಂದು ನಂಬಿಸಿದ  ಅಪ್ಪನೇ, ನಮ್ಮ ಕಾಲ ಮೇಲೆ ನಾವು ನಿಂತಿದ್ದೀವಿ , ಈಗ ನಿರ್ಧಾರ ಸರಿಯಾಗೇ ಮಾಡುತ್ತೀವಿ ಅನ್ನೋ ನಂಬಿಕೆ ಬಂದ ದಿನ ಎಲ್ಲಾ ಕಟ್ಟಪ್ಪಣೆ ಕಳಚಿಟ್ಟು ಸ್ನೇಹಿತನಂತೆ  ,ಯಾರನ್ನಾದರು ಲವ್ ಮಾಡಿದ್ರೆ ಹೇಳು, ಮದುವೆ ಮಾಡಿಕೊ ಎಂದಾಗ ಅಳಬೇಕೋ , ನಗಬೇಕೋ ಗೊತ್ತಾಗಲಿಲ್ಲ .. ಅಂತು ಒಬ್ಬ ಅಪ್ಪಟ ‘ಗಂಡಸನ್ನು’ ಗೆದ್ದು ‘ಒಳ್ಳೆಯವಳು’ ಎನಿಸಿಕೊಂಡು ಸಾರ್ಥಕತೆ ಪಡೆದ್ದಿದ್ದಾಗಿತ್ತು…..
ಹೀಗಿದ್ದಾಗ ನೋವಾಗೋದು ಸಹಜ ಅಲ್ಲವ ?
ಅವನ ಬಗ್ಗೆ ನನಗು ಹೊಸತು , ಮನೆ ವಾತಾವರಣವೂ ಹೊಸತು, ಜನರೂ ಅಪರಿಚಿತರು ..ಏನೇನೋ ಹೇಳಿ, ಹೆಂಗೆಂಗೋ ಆಡಿಬಿಟ್ಟರೆ ಭಯ, ನೋವು, ಹಿಂಸೆ ಆಗುವುದಿಲ್ಲವ …
ಸುಮ್ಮನಿದ್ದರೆ ಒಪ್ಪಿಕೊಂಡಂತೆ, ರಚ್ಚೆ ಹಿಡಿದು ನಿರಾಕರಿಸಿದರೆ ರಂಪ ಮಾಡಿದಂತೆ … ಸುಮ್ಮನಿದ್ದರೆ ಅವನ ಭಾವಕ್ಕೆ ಪುಷ್ಟಿ ದೊರೆತು ಕೆರಳಬಹುದು .ಗಟ್ಟಿಯಾಗಿ ಹೇಳಿದರೆ ಧೈರ್ಯ ಬರಬಹುದು .ಪದೇ ಪದೇ ಉಪಯೋಗಿಸಿಕೊಳ್ಳಲು ತೊಡಗಿ, ಆಟವಾಡಿಸಲು ಬಳಸಿಕೊಂಡರೆ ಆಗುವ ಹಿಂಸೆಯನ್ನು,ಮೋಸವನ್ನು  stop ಮಾಡಿ ಎನ್ನಲಾದರು ಬಾಯಿ ಕಳೆಯಬೇಕಿತ್ತು ಅಲ್ಲವಾ …?

ಅಷ್ಟು ದೊಡ್ಡ ಆನೆಗೆ ಕಿವಿಯಲ್ಲಿ ಜೀವವಿರುತ್ತಂತೆ, ರಾಕ್ಷಸನ ಜೀವ ಏಳು ಸಮುದ್ರದಾಚೆಗಿನ ಗಿಳಿಯಲ್ಲಿ ನೆಟ್ಟಿರುತ್ತದೆಯಂತೆ…. ಹಾಗೆ ಗೊತ್ತು ಮಾಡಿಕೊಂಡಿದ್ದರು ನನ್ನ ಜೀವ ‘ಮಾನ’ ದಲ್ಲಿದೆ   ಅಂತ….ಅವಾಗವಾಗ ಆನ್ ಅಂಡ್ ಆಫ್ ಮಾಡುತ್ತಾ ಜೀವದೊಂದಿಗೆ ಚೆಲ್ಲಾಟವಾಡುವುದ ಕರಗತ ಮಾಡಿಕೊಳ್ಳುತ್ತಿದ್ದರು… ಅವನೊಬ್ಬನೇ ಆಗಿದ್ದಿದರೆ ಗಂಡಸು ಬಿಡುಹಾಗೆ, ಅಪ್ಪನಂತೆ ಅಂತ ನೀವಾಳಿಸಬಹುದ್ದಿತ್ತೇನೋ  .. ಹೆಂಗಸರು, ವಯಸಾದವರು, ಚಿಕ್ಕ ಹುಡುಗರು ಎಲ್ಲರೂ ಅದೇ category !!!!!!!!
ಹರ್ಟ್ ಮಾಡಲೋ ಅಥವ ನಿಜವಾಗಲೂನೋ ಹೆಂಡತಿಯ ಮೇಲೆ ಅನುಮಾನ ಪಡುವ ಗಂಡಸರನ್ನು ಆತ್ಮ ವಿಮರ್ಶೆ ಮಾಡಿಕೊಳ್ಳಬಿಟ್ಟು ಕೇಳಬೇಕು ಯಾರ ಮೇಲೆ ನಿನಗೆ ನಿಜವಾದ ಅನುಮಾನ ಅಂತ?
ಅವಳ ಮೇಲಾ? ಅವನ ಮೇಲಾ? ಅಥವ  ನಿನ್ನ ಮೇಲೇನಾ  ಅಂತ!!!

ಯಾರ ಮೇಲೆ ಅನುಮಾನ?
ಅವಳ ಮೇಲೆ …
 ವ್ಯಕ್ತಿತ್ವದಲ್ಲಿ ಒಂದು ಗಾಂಭೀರ್ಯ , ಘನತೆ ಇಲ್ಲವೆಂದರೆ ಸಡಿಲ ಜನರು ಸದರವಾಗಿ ಮಾಡಿಕೊಂಡು ಉಡಾಯಿಸಲು ಹವಣಿಸುತ್ತಾರೆ .ಅಂತ ಚೆಲ್ಲು ಚೆಲ್ಲು ವ್ಯಕ್ತಿತ್ವ ಅವಳದ್ದಾ?ಗಂಡಸರನ್ನು ಬೇಟೆಯಾಡಿ ಬಳಸಿಕೊಳ್ಳುವ , ಉಡಾಯಿಸುವ ಚಪಲ , ಅನಿವಾರ್ಯತೆ, ಚಟ ಅವಳಿಗಿದೆಯ? ವಯ್ಯಾರವನ್ನೇ ‘ಮೈಗೂಡಿಸಿಕೊಂಡು’, ಬೆಣಚು ಕಲ್ಲಿನಂತೆ ನುಣುಪಾಗಿ ಜಾರುವ ಶೃಂಗಾರದ ಬೊಂಬೆ ಅವಳು ಎಂದು ಅನುಮಾನವ ?ಸಿಕ್ಕ ಸಿಕ್ಕವರನ್ನು impress ಮಾಡಲು ತುದಿಗಾಲಲ್ಲಿ ನಿಂತು , ಕಣ್ಣಲ್ಲೇ ಗೆದ್ದು ಪತಾಕೆ ಹಾರಿಸುವ ಪತಂಗವ ?
ದುಡ್ಡು ಮಾಡಿಕೊಳ್ಳಲು , ಶೋಕಿ ಮಾಡಲು , ಹೈ ಲೆವೆಲ್ lookku ಹೊಂದಲು ‘ಕೆಲಸವಿಲ್ಲದೇ’ ದಾರಿ ಹುಡುಕಿಕೊಂಡವಳ? ಅವ್ಯಾವು ಅಲ್ಲದೆ intellectual frequency ಮ್ಯಾಚ್ ಮಾಡಿಕೊಳ್ಳಲು ಹವಣಿಸುತ್ತಾಳ….ಇವೆಲ್ಲ ಒಂದು ತರದ ಯೋಚನೆ
ನಿಜವಾಗಲು ಗಟ್ಟಿಯಾದ ಅಯಸ್ಕಾಂತದಂತ ವ್ಯಕ್ತಿತ್ವ , ಗೌರವಾಧಾರಿತ ಗುಣ , ಮನಸೋಲುವ  ರೂಪ, ಅಮ್ಮನಂತ ಮಮತೆ, ಕಾರುನ್ಯವೇ ಮೈತಳೆದಂತ ಹೆಣ್ತನ , ಪಂಚ ಪತಿವ್ರತೆಯರು ನಾಚುವಂತ ಶುಭ್ರತೆ , ಸಂಪ್ರದಾಯ –ಎಲ್ಲಾ ಗಡಿ ಮೀರಿ,ಎಲ್ಲಾ  ಗಂಡಸರು ಬಯಸುವ ‘ಹೆಣ್ಣು’ ಎನ್ನುವ ಅನುಮಾನನಾ ? ?ದುಡ್ಡು,ಆಸ್ತಿ, ‘ಐಟಂ’ ಗಳನ್ನೂ ಎತ್ಹೇಚವಾಗಿ ಹೊಂದಿರುವ ಶ್ರೀಮಂತ ಹುಡುಗಿಯ ?ಸಾಧನೆ , ಬುದ್ಧಿವಂತಿಕೆ ಹೊಂದಿದ ಕೆಲವರು ಮಾತ್ರ appreciate ಮಾಡುವ beauty  with  brains ಅ?   ಇದು ಮತ್ತೊಂದು ವಿಧಾ ….

ಜಗತ್ತಿನ ‘ಅವನ’ ಮೇಲೆ?
ಇರುತ್ತಾರೆ ಅಂತ ಗಂಡಸರು , ನಯವಾಗೆ ಭೇಟೆಯಾಡುವ ಕಲೆಯಲ್ಲಿ ಪಳಗಿದವರು.ಬಲವಂತ ಪಡಿಸಲ್ಲ , ಲಕ್ಷ್ಮಣ ರೇಖೆ ಧಾಟಿಸಲು ರಸಿಕತೆಯಲ್ಲೆ ಮರಳು ಮಾಡುತ್ತಾರೆ .ಹುಚ್ಚು ಹಿಡಿಸಿಬಿಡಬಹುದಾದ ರೀತಿ ಮಾತು-ಕತೆ , ಬಟ್ಟೆ-ಬರೆ ಜೋಡಿಸಿಟ್ಟುಕೊಳ್ಳುವವರು ,6 ಪ್ಯಾಕ್ ,bmw ಗಳ ಒಡೆಯರು .ಜಾನ್ ಅಬ್ರಾಹಿಂ , ಶಾರುಕ್ಕ್ ನಂತಹ ಲವ್ ಐಕಾನ್ ಗಳು .ಅಸಹಾಯಕ ಹುಡುಗಿಗೆ ಮಳೆಯಲ್ಲಿ ಕೊಡೆ ಹಿಡಿದು ಡೈಲಾಗ್ ಹೊಡೆದು ಹೊಡೆದು ನಡೆಯುತ್ತಲೇ ಇನ್ಯಾರದ್ದೋ ಸ್ವತ್ತನ್ನು ಲಪಟಾಯಿಸುವ ಮುಂಗಾರು ಮಳೆ ನಾಯಕನಂತವರು ?    
ಗೊತ್ತೇ ಆಗದಂತೆ ಸಿಂಪತಿ ಗಿಟ್ಟಿಸಿಯೋ,ಸಿಂಪತಿ ಸುರಿಸಿಯೋ ಹತ್ತಿರವಾಗಿ ಮೆತ್ತಗೆ ಮುಟ್ಟುವವರು. ಹೊಂಚು ಹಾಕಿ ಕದಿವ, ಸುಲಿಗೆ ಮಾಡುವ ಅಂತ ಕಳ್ಳಮಳ್ಲರ  ಮೇಲೆ ಅನುಮಾನಾನ ? innosense ನ encash ಮಾಡಿಕೊಂಡು ಉಪಯೋಗಿಸಿಕೊಳ್ಳುವ ಬುದ್ಧಿವಂತರ ಮೇಲಾ?

‘ ತನ್ನ’ ‘ಮೇಲಾ’??
ಹೆಂಡತಿಯನ್ನು   ಸಮಾಧಾನಮಾಡಲಾಗದ , ತೃಪ್ತ ಪಡಿಸಲಾಗದ ತನ್ನ ಮೇಲೇನಾ ಅನುಮಾನ?
ಅವಳ ಎತ್ತರಕ್ಕೆ  ಬೆಳೆಯಲಾರದ, ತೂಕಕ್ಕೆ ತೂಗಲಾರದ  ತನ್ನ ಮಿತಿಗಳ ಮೇಲಾ  ?ಜಗತ್ತಿನ ಬಲಿಷ್ಠ ಗಂಡಸರನ್ನು ಸೆದೆ ಬಡಿದು ಮೀಸೆ ತಿರುಗಿಸಲಿಲ್ಲ ಎಂದರೆ ಅವಳು ಕೊಂಕು ಕುಣಿಯುತ್ತಾಳೆ ಎನ್ನುವ ಅನುಮಾನಾನ ?
ತನ್ನ ಕೆಟ್ಟತನ , ಧೂರ್ತತನ , ವಂಚನೆಗಳು ಅವಳನ್ನು ಪ್ರೀತಿಯಿಂದ ವಿಮುಖಗೊಳಿಸಿ ಮತ್ತೆಲ್ಲೋ ಸೆಳೆದು ಬಿಡಬಹುದು ಎನ್ನುವ ಅನುಮಾನಾನ ?
ತನ್ನ ಬಡತನ, ರೂಪ, ಕೆಲಸ, ವಿದ್ಯೆಗಳ ಕೀಳರಿಮೆಯ ಮೇಲೆ ಅನುಮಾನಾನ ?ಅಥವ ತನ್ನಂತ ಶ್ರೀಮಂತ , ಸ್ಪುರದ್ರೂಪಿ , ವಿದ್ಯಾವಂತ jackpot ನನ್ನು ಹೊಡೆಯಲು ಮೋಸಮಾಡಿ ಬಲಿಹಾಕಿಕೊಂಡು ತಾಳಿ ಬಿಗಿಸಿಕೊಂಡಳು  ಎನ್ನುವ ಕರುಬಿನ ಅನುಮಾನಾನ?

ಕೂತುಕೊಂಡು ಬಿಡಿಸಿ ಬಿಡಿಸಿ ಕೇಳಬೇಕಿತ್ತು ಅವನನ್ನು … ಆದರೆ ಪಕ್ಕ ಇದ್ದಾಗ ನಂಬುತ್ತಿದ್ದವನು, ನೆಂಟರ ಎದುರು ಭೀಕರವಾಗಿ  ‘ನೊಂದು’ವನಾಗಿ ಬಿಡುತ್ತಿದ್ದನು …

ನಾನಂತೂ  ವಯ್ಯಾರದ ಬೊಂಬೆಯಲ್ಲ  … ಒಂತರ ನಿಗಿ ನಿಗಿ ಕೆಂಡ …ಬೆಂಕಿಯಲ್ಲಿ ಅರಳಿದ ಹೂ
ನಗಬೇಕೆಂಬ ಆಸೆ ಏನೋ ಇತ್ತು .. ಆದರೆ ಅಪ್ಪ ಅಂದಿದ್ದರು ‘ಮಾತು ಮಾತಿಗೂ ,ಸುಮ್ಮ ಸುಮ್ಮನೆ ನಗುವ ಹೆಂಗಸನ್ನು ಅಳುವ ಗಂಡಸನ್ನು ಯಾವತ್ತು ನಂಬಬಾರದು ಎಂದು ‘ .ಹಾಗಾಗಬಾರದೆಂದು ನಗೆಯನ್ನು ತಡೆಹಿಡಿದ್ದಿದ್ದವಳು, ಅಷ್ಟು ಸುಲಭನಲ್ಲದ ಅಪ್ಪನನ್ನು ಕಡೆಗೂ ನಂಬಿಸಿ ಗೆದ್ದಿದ್ದೆನು…ಅಪ್ಪನ ಮೆಚ್ಚಿಸಿದ ಮಗಳ ಆ  certificate  ಸಾಕಿತ್ತು ಅವನಿಗೆ.. ಆದರೆ ಮತ್ತೆ lkg ಯಿಂದ ಶುರುಮಾಡಿದ !!!!!!! ಭಯ … ನಗಲಾರದ ಭಯ … ಈ ಹಿಂದೆ ಹೀಗೆ ನಕ್ಕು ಎಷ್ಟು experience ಇದೆಯೋ ಎಂದು ಕಣಿ ಕೇಳುತ್ತಾನೇನೋ ಎನ್ನುವ ಭಯ !!!!!
ಈಗೀಗ ಅನ್ನಿಸುತ್ತದೆ ನಗುತ ನಗುತ್ತಲೇ ಕೊಲ್ಲುವ ,ಉಗಿಯುವ ಕಲೆಯನ್ನು ನಮ್ಮಮ್ಮ ಕಳಿಸಬೇಕಿತ್ತು ನನಗೆ ಅಂತ ….

ಅವನ ಅನುಮಾನ ‘ಆ’ ಹುಡುಗರ ಮೇಲಾ?
ನನಗೆ ಗೊತ್ತು ಗಂಡಸರ ಒಂದು ಗುಂಪಿದೆ ….. jeans ತೊಡುವ , ಕೂದಲು ಇಳೆ ಬಿಡುವ , ಕಾರ್ ಓಡಿಸುವ , makeup , attitude ಗಳ confident  ರಾಣಿಯರನ್ನು ನಿರ್ಲಕ್ಷಿಸಿ ದೂರಸರಿಸಿ  , ತಲೆ ಕೆಳಗಾಕಿ ಸೆರಗೊದ್ದು  ಬಿಚ್ಚೋಲೆ ಗೌರಮ್ಮನಂತೆ   innocence ಆಗಿದ್ದುಬಿಡುವ  time ಬಂದರೆ   ಚೆನ್ನಮ್ಮನಂತೆ  ಹೋರಾಡುವ ಪ್ಯೂರ್ & ನ್ಯಾಚುರಲ್ ಹುಡುಗಿಯರ ಹಿಂದೆ ಬೀಳುವವರದ್ದು  .ಫಿದಾ ಆಗಿ ಏನೇ ಆದರು ಅವಳೇ ಬೇಕು ಎನ್ನುವವರು ಅವರು .ಇನ್ನು ಕೆಲವರು  ಸುತ್ತಾಡಲು ಮಜಾಮಾಡಲು ಬೇರೆ categoryಯಾ ಹುಡುಗಿಯರ ಸಂಗಬಯಸಿದರು, ಮದುವೆಯಾಗಿ ಮನೆ ತುಂಬಿಸಿಕೊಳ್ಳಲು ‘ಒಳ್ಳೆ’  ಹುಡುಗಿಯರನ್ನೇ  ಬಯಸುತ್ತಾರೆ.ಅದೇ ತರದ ಕಾರಣಕ್ಕೆ ಒಂದಿಬ್ಬರು ಹಿಂದೆ ಬಿದ್ದಿರಬಹುದು .ಅದೆಲ್ಲವನ್ನು ದಾಟಿ, ಯವ್ವನ, ಕೌಮಾರ್ಯ ಮೀರಿ ಪ್ರಬುದ್ಧತೆಗೆ ಹೊರಳಿದ ಮೇಲೇನೆ ಅಲ್ಲವ ಮದುವೆಗೆ ready ಯಾಗಿದ್ದು … ಆತರದ ಭಯವಿದ್ದಿರಬಹುದ ಅವನಿಗೆ?
ಅದ್ಯಾಕೋ ನನ್ನ ಕಣ್ಣಿಗಂತೂ ಒಂದೇ ತರಗತಿಯ ಸಹಪಾಟಿಗಳು, ಜೊತೆಗೆ ಕೆಲಸ ಮಾಡುವವರು ತಮ್ಮಂದಿರಂತೆ ಕಂಡು ಬಿಡುತ್ತಿದ್ದರು ..ಡಾಳು ಡಾಳಾಗಿ.. ಪೀಚು ಪೀಚಾಗಿ …. ಯಾರನ್ನಾದರು ಮೋಹಿಸಿದ್ದಿದ್ದರೆ ಅಪ್ಪನನ್ನು ಎದುರು ಹಾಕಿಕೊಂಡಿಯಾದರೂನು ಓಡಿಸಿಕೊಂಡು ಹೋಗಿರುತ್ತಿದ್ದೆ …ಅಷ್ಟಕ್ಕೂ ಅಪ್ಪ ಇರುವಾಗಲೇ  ಅವರ ಕಣ್ಣಲ್ಲಿ ನಾನು ‘ದೊಡ್ಡವಳಾಗಿ’ ಬಿಟ್ಟಿದ್ದೆ. 2  ವರ್ಷ ಗಂಡು ಹುಡುಕೋ ಪರಿಶ್ರಮ ತಪ್ಪಿ , ‘ಸಾಯೋಷ್ಟರಲ್ಲಿ ತಲೆಮೇಲೆ ಅಕ್ಷತೆ’ ಹಾಕಬೇಕು ಎನ್ನುವ ಅಪ್ಪನ ಕೊನೆಯಾಸೆಯನ್ನು easyಯಾಗಿ ಈಡೇರಿಸಿಬಿಡುತ್ತಿದ್ದೆ …..
ಜಗತ್ತಿಗೆ ನನ್ನ ಮೇಲೆ interest ಇರಲಿಲ್ಲವೋ , ಇಂಟರೆಸ್ಟ್ ಇದ್ದವರು ನನಗೆ ಸರಿಹೋಗಲಿಲ್ಲವೋ ಗೊತ್ತಿಲ್ಲ .. ಅಪ್ಪ ಸತ್ತಮೇಲಾದರು ನನಗೆ ‘ಆ ಬುದ್ಧಿ ‘ ಬರಲಿಲ್ಲ …
ಅಷ್ಟಕ್ಕೂ history ತೆಗೆದುಕೊಂಡು ಇವನೇನು ಮಾಡುತ್ತಾನೆ ?
ಯಾರಾದರು  ಮೆಚ್ಚಿದ , cute crush ನ ಕತೆ ಹೇಳಿದರೆ ಅದು ಹಾದರ ಮಾಡಿದಂಗೆ ?ಯಾರು ಯಾರನ್ನು atleast  ಮೆಚ್ಚದೆ ಖಾಲಿಖಾಲಿ ಕಳೆದುಬಿಡುತಾರ ?  

ಇನ್ಯಾರನ್ನು ಮೆಚ್ಚಲಿಲ್ಲ ಅಂತ ಇವನನ್ನು ಮೆಚ್ಚಿಯೇ ಅಲ್ಲವ ಕೊರಳೊಡ್ಡಿದ್ದು  ? ಎಷ್ಟು ಚಂದ ಮಾತಾಡ್ತಾನೆ  ,ಎಷ್ಟು ಚಂದ ಇದ್ದಾನೆ, ಎಷ್ಟು ಚಂದ ಬಾಳಿಸ್ತೀನಿ ಅಂತಾನೆ ಅಂತ …ಇವನನ್ನ ನನ್ನ ಪುರುಷ ಅಂತ ಒಪ್ಪಿಕೊಂಡ ಮೇಲೆ, ಒಪ್ಪಿಸಿಕೊಂಡ ಮೇಲೆ ಪ್ರಪಂಚದ  ಇನ್ನೆಲ್ಲಾ ಗಂಡಸರು ಕೇವಲ ವಿರುದ್ದಲಿಂಗಿಗಳಾಗಿ ಹೋಗುತ್ತಾರಲ್ಲ , ಅಷ್ಟು ಮಟ್ಟಿಗಿನ ತೂಕ ನನ್ನ ಸಂಸ್ಕೃತಿಗಿದೆ ಅಂತ ಇವನಿಗ್ಯಾಕೆ ಅನಿಸಲಿಲ್ಲ …. ಯಾರ ಹತ್ತಿರ ಎಷ್ಟು ಮಾತಾಡಬೇಕು, ಏನು ಮಾತಾಡಬೇಕು, ಯಾವಾಗ ಮತ್ತು ಯಾಕೆ ಮಾತಾಡಬೇಕು ಎನ್ನುವ ವಿವೇಕ, ವಿವೇಚನೆ ಇಟ್ಟುಕೊಳ್ಳದೆ , ಇವನಿಂದ ನಿರ್ದೇಶನ ಪಡೆಯುವಂತಹ ಅಗತ್ಯ ನನಗಿತ್ತಾ ?   

actually ಹೊಳೆದಂಡೆಯಲ್ಲಿ ನಗುನಗುತ್ತ ಎಲ್ಲವನ್ನು ಅವನೇ ಬಾಯಿಬಿಡಲಿ, ಹುಸಿ ಕೋಪಿಸಿಕೊಂಡು ಕ್ಷಮಿಸಿ ಬಿಡುತ್ತೇನೆ ಎನ್ನುವ ಅಪ್ಪಟ ಕನಸೊಂದಿತ್ತು… ನೆರವೇರುವ ಮೊದಲೇ ಅವರಮ್ಮ , ಅಕ್ಕನ ದೆಸೆಯಿಂದ ಹರಿದು ಹೋಯಿತು ….

ಅಥವ ಮಡಿವಾಳನ ಮಾತು ಕೇಳಿಕೊಂಡು ,ಹೆಂಡತಿಯನ್ನು ಬೆಂಕಿಗೆ ಹಾಕಿದ  ರಾಮನಂತ ‘ಊರು ಉದ್ಧಾರ’ ಮಾಡುವ ಘನ ಆದರ್ಶ, ಅನಿವಾರ್ಯತೆ ಇವನಿಗಿತ್ತಾ ?
ನನ್ನ ಕೈಗೆ ರಾಮ ಸಿಕ್ಕರೆ ಕೇಳಬೇಕು…  ಬೆಂಕಿಯಿಂದ ಸುಡದೆ ಪರಿಶುದ್ಧಳಾಗಿ ಹೊರಗೆ ಬಂದಳಲ್ಲ ನಿನ್ನ ಹೆಂಡತಿ ಸೀತೆ , ಆಮೇಲೆ ನಿನಗೆ ಮುಖಭಂಗವಾಗಲಿಲ್ಲವ ಅಂತ …ನಿನ್ನ ಅಲ್ಪ ಜನರ ಜೊತೆಗೆ ನಿನ್ನಂತ ಆಧರ್ಶ ಪುರುಷನ ಸಂಘವೂ ಬೇಡಾ ಅಂತ ಭೂಮಿಯೊಳಗೆ ಹುದುಗಿಹೋದಳಲ್ಲ , ಅದಾದ ಮೇಲೂ ಒಬ್ಬನೇ ಹತ್ತು ಸಾವಿರ ವರ್ಷಗಳು ಆಳ್ವಿಕೆ ಮಾಡಿದೆಯಲ್ಲ ಯಾವತ್ತು ಏಕಾಂಗಿತನ, ವಿರಹ, ಪಾಪಪ್ರಜ್ಞೆ, ಅವಳ ನೆನಪು ನಿನ್ನನ್ನು  ಕಾಡಲಿಲ್ಲವ ಅಂತ.. ಅದಕ್ಕೆ ರಾಮನನ್ನು ದೇವರು ಎನ್ನುತ್ತಾರೇನೋ ?
divorce ಪಡೆದು ಇನ್ನೊಂದು ಮದುವೆಯಾಗುವ ತಯಾರಿಯಲ್ಲಿರುವ ಇವನನ್ನು ಎನ್ನೆನ್ನಬಹುದು ?

ಹಾಗಿದ್ದರೆ ಇವನ ಅನುಮಾನ ಇದ್ದದ್ದು ಯಾರಮೇಲೆ?????????

 

ಇಲ್ಲ ನನಗೇನೂ ಅಂತ ಅನುಮಾನ ಇಲ್ಲ…  ಅದು ಅಸಲಿಗೆ ಅನುಮಾನಾನು ಅಲ್ಲ, ನನ್ನವನ  ಓವರ್ ‘Possessive ನೆಸ್ಸ್’ , ಓವರ್ smartness  ಅಷ್ಟೇ  

    
 

            
    

ಅವಳಿಗೆ ಬುದ್ಧಿ ಹೇಳುವುದು !!!

ಕಾಲದಿಂದಲೂ ಅದೇ ಬುದ್ಧಿಮಾತುಗಳ ಸರಣಿ ಸರಪಳಿ ಕಿತ್ತು ಹೋಗದಂತೆ ತಲೆಮಾರಿನಿಂದ ತಲೆಮಾರಿಗೆ ಹರಿದು ಬರುತ್ತಲೇ ಇದೆ .
‘ಹೆಣ್ಣಾದವಳಿಗೆ ತಾಳ್ಮೆ ಇರಬೇಕು… ಸಹನೆ ಇರಬೇಕು… ತಗ್ಗಿ ಬಗ್ಗಿ ನಡೆಯಬೇಕು ..ಗಂಡನ ಮನೆಯಲ್ಲೇ ಬಾಳಬೇಕು “..ಎಲ್ಲ ದುರಂತಗಳಿಗೂ ಹೆಣ್ಣನ್ನೇ ಕಾರಣಮಾಡಿ ಕೈ ತೊಳೆದುಕೊಂಡುಬಿಡುತ್ತಾರೆ .
ದೊಡ್ಡವರೆಂದು ಕರೆದುಕೊಳ್ಳುವ ಹೆಂಗಸರು ಕೂಡ ಪ್ರತಿಪಾದಿಸುವುದು ಇದನ್ನೇ .
ಅದಕ್ಕಾಗೆ ಅವನು ಮಾತ್ತೆತ್ತಿದರೆ ಪಂಚಾಯ್ತಿಗೆ ದೊಡ್ಡವರನ್ನು ಕರೆಯುತ್ತಿದ್ದ .ಅಧುನಿಕ ಎನಿಸುವ counsellingಗೆ ಬರಲು ಸುತಾರಾಂ ಅವನು ಒಪ್ಪುತ್ತಿರಲಿಲ್ಲ..ಕಾರಣ ಅಲ್ಲಿ ಸಮಾನತೆಯ ಉಪದೇಶವಿರುತ್ತದೆ.ಮನುಷ್ಯ ಮನುಷ್ಯನನ್ನು ಹೇಗೆ ನಡೆಸಿಕೊಳ್ಳಬೇಕು , ಹೇಗೆ ನಡೆಸಿಕೊಳ್ಳಬಾರದು ಎಂಬ ಪಾಠವಿರುತ್ತದೆ…ಸಂಗಾತಿಗಳ ಸಾಂಗತ್ಯದ ಅರಿವು ತಿಳುವಳಿಕೆ ಇರುತ್ತದೆ !!! ಅದರಿಂದ ಪ್ರಯೋಜನವಿಲ್ಲ!! ಆದ್ದರಿಂದ ಅವನಿಗೆ ಅದ್ಯಾವುದೊ ಬೇಕಿರಲಿಲ್ಲ.
ತಾನೇ ಕಿತಾಪತಿ ಮಾಡಿ, ನಾಲ್ಕು ಜನರನ್ನು ಕರೆದು ಹೆಂಡತಿಗೆ ಬುದ್ದಿ ಹೇಳಿಸುವ ಮೂಲಕ, ತನ್ನ ಅಧಿಕಾರ ಸ್ಥಾಪಿಸಿಕೊಳ್ಳಬೇಕಿತ್ತು ..ನನಗೆ ಅವಮಾನ ಮಾಡಬೇಕಿತ್ತು ಅಥವ ಭಯಪಡಿಸಬೇಕಿತ್ತು…ಅಷ್ಟೇ ..!!

ದೊಡ್ಡವರ ಆ ವೇದ ವಾಕ್ಯದಲ್ಲಿ ‘ತಾರತಮ್ಯ’ ಇದೆ ಎನಿಸಿದರು ಬಹಳಷ್ಟು ಆಯಾಮ,ಅರ್ಥಗಳಿವೆ ಅದಕ್ಕೆ .ನಮ್ಮ ಸಮಾಜದ , ವ್ಯವಸ್ತೆಯ ,ಸಂಸ್ಕೃತಿಯ ,ವಿಜ್ಞಾನದ ಹಲವಾರು ಮಜಲುಗಳಿವೆ .
ನಾನೂ ಕೂಡ ಪರೋಕ್ಷವಾಗಿ ಅದನ್ನು ಬೆಂಬಲಿಸುತ್ತೇನೆ .

ಎಷ್ಟೇ ಆದರು ನಮ್ಮದು ಪುರುಷಪ್ರಧಾನ ಸಮಾಜ .ಈಚೆ ಹೋಗಿಬರಬೇಕಾದರು ಗಂಡ , ಅಪ್ಪ, ಸ್ನೇಹಿತ, ಅಣ್ಣ, ಕಡೆಗೆ ತಮ್ಮನಾದರು ‘ಗಂಡಸು’ ಎಂದು ಜೊತೆಗಿರಲಿ ಎಂದು ಆಶಿಸುತ್ತೇವೆ . ಗಂಡಿನ influence ಸೃಷ್ಟಿ ಮಾಡುವ ಸುರಕ್ಷಾ ವಲಯದಲ್ಲಿ ಸುಭದ್ರವಾಗಿ, ತ್ರಾಸವಿಲ್ಲದೆ ಬದುಕಲು ಇಚ್ಚಿಸುತ್ತೇವೆ .ಸಂಸಾರದ ನೊಗಹೊತ್ತ ಒಂಟಿ ತಾಯಿ ಕೂಡ ಮೊಗುವಿನ ರೂಪದಲ್ಲಾದರೂ ಮನೆಗೊಂದು ಗಂಡು ದಿಕ್ಕಿರಲಿ ಎಂದು ನಿಡುಸ್ಸುಯ್ಯುತ್ತಾಳೆ .ಅಭದ್ರತೆ ಸೃಷ್ಟಿಸುವ ಅನಿವಾರ್ಯತೆ ನಮ್ಮದು, ಈ ವ್ಯವಸ್ತೆ ಅಂತದ್ದು .

ಇನ್ನು ಮದುವೆಯ ದೃಷ್ಟಿಗೆ ಬಂದಾಗ, ತಂದೆ ತಾಯಿಯರು ಮಗನನ್ನು asset ನಂತೆ ಬೆಳೆಸಿರುತ್ತಾರೆ .ಒಳ್ಳೆ ವಿದ್ಯಾ, ಲಂಚ ಕೊಟ್ಟಿಯಾದರು ನೌಕರಿ , ಆಸ್ತಿಪಾಸ್ತಿ ಎಲ್ಲವನ್ನು ಅವನಿಗಾಗಿ ಮಾಡಿಟ್ಟಿರುತ್ತಾರೆ.ವಿಧುರನಾಗಿಯೊ , divorcee ಯಾಗಿಯೂ ಮರುಮದುವೆಗೆ ಅವನು ನಿಂತರೆ ಅದೇ asset ನ resource ಮಾಡಿ ಪಾಪ, ನೊಂದವನು ಎಂದು ಮತ್ತೆ ಗೆಲ್ಲಿಸಿಬಿಡುತ್ತಾರೆ .
ಆದರೆ ಹೆಣ್ಣಿಗೆ ಮರುಮದುವೆ ಎನ್ನುವುದು ಗಂಡಿನಷ್ಟು ಸುಲಭವಲ್ಲ.ಕನ್ಯಾಪೊರೆ ಕಳೆದುಕೊಂಡ ಹೆಣ್ಣನ್ನು ಸೆಕೆಂಡ್ handle commodityತರ ನೋಡುತ್ತಾರೆ .ಅವಳು asset ಆಗಿರುವುದಿಲ್ಲ ಅಥವಾ ಹಳೆ ಸಂಬಂಧ ಮಾಡಿದ damage ಹಾಗೆ ಉಳಿದುಬಿಟ್ಟಿರುತ್ತದೆ !.

ಇನ್ನು ವ್ಯಜ್ಞಾನಿಕವಾಗಿ ನೋಡುವುದಾದರೆ ಗಂಡಸರುಗಳ ಟಫ್ ಇಮೇಜ್ ಗೆ ದೇಹರಚನೆ, harmones ಗಳಂತ ಕಾರಣಗಳಿವೆ, ಸಾಮಾಜಿಕ ಪ್ರಭಾವಗಳಿವೆ .ಅವನ ಕೋಪ , ರಾಕ್ಷಸತ್ವ ,dominating nature ಎಲ್ಲವನ್ನು ಗಂಡಸುತನಕ್ಕೆ ಸಮೀಕರಿಸಿಕೊಂಡು ಸಹಜವೆಂಬಂತೆ ಒಪ್ಪಿಕೊಂಡುಬಿಟ್ಟಿರುತ್ತದೆ ಜನಮಾನಸ.
ಎಷ್ಟೆಷ್ಟೋ ಡಿಗ್ರಿ ಗಳನ್ನು ಪೇರಿಸಿಕೊಂಡ , ದೊಡ್ದಂಕಿ ಸಂಬಳ , ಸಮಾಜದಲ್ಲಿ ಮನ್ನಣೆ, ಗೌರವ ಪಡೆದ ಗಂಡಂದಿರು ಕೂಡ ಮನೆಯಲ್ಲಿ ಹೆಂಡತಿ ಮೇಲೆ ಮಾನಸಿಕ, ದೈಹಿಕ ದೌರ್ಜನ್ಯ ಎಸಗುತ್ತಲೇ ಇರುತ್ತಾರೆ .

ಕುಟುಂಬಕ್ಕೆ ಬಂದರೆ ‘ಎದೆ ಎತ್ತರ ಬೆಳೆದ ಮಗನಿಗೆ ಬುದ್ಧಿ ಹೇಳಲು , ಒಡೆದು ಬಡೆದು ತಿದ್ದಲು ‘ ಆಗದ ಅಸಹಾಯಕ ಪೋಷಕರಿರುತ್ತಾರೆ. ತಮ್ಮ ವಾರಸುದಾರ ,ವಯಸಾದ ಕಾಲಕ್ಕೆ ಆಸರೆಯಾಗಬೇಕಾದವನ್ನನ್ನು ಮುದ್ದು ಮಾಡಿ ಮುದ್ದು ಮಾಡಿ ಉಡಾಳನನ್ನಾಗಿ ಮಾಡಿ , ಹೆಂಡತಿ ಬಂದು ಸರಿಮಾಡಿಕೊಳ್ಳಲಿ ಎಂದು ಸುಮ್ಮನಾಗಿ ಬಿಟ್ಟವರಿರುತ್ತಾರೆ . ಒಂಟಿ ತಾಯಂದಿರು, ಜೊತೆ ಹುಟ್ಟಿದ ಸೋದರಿಯರು ‘ಗಂಡು’ ಆಶ್ರಿತರಾಗಿ ಅವಲಂಬಿತರಾಗಿರುತ್ತಾರೆ.ದುಡಿಯುವ ಮಗನ ಮೇಲೆ depend ಆಗಿರುತ್ತಾರೆ.ಬುದ್ಧಿ ಹೇಳಿ ಎದುರು ಹಾಕಿಕೊಳ್ಳುವ ಪರಿಸ್ಥಿತಿಗೆ ಹೋಗುವುದಿಲ್ಲ .ಬಹಳಷ್ಟು ಬಾರಿ ಮಗನೆಲ್ಲಿ ಹೆಂಡತಿ ಸೆರಗು ಹಿಡಿದು ತನ್ನನು ಒಂಟಿಮಾಡಿ ಹೊರಟುಹೋಗುತ್ತಾನೋ ಎನ್ನುವ ಭಯದಲ್ಲಿ ಇನ್ನಿಲ್ಲದ ಶುಶ್ರೂಷೆ ಮಾಡುತ್ತಿರುತ್ತಾರೆ . ದುಡ್ಡಿನ ಧಿಮಾಕು ಇರುವವರಂತೂ ನೂರು ಹೆಣ್ಣುಗಳನ್ನು ಕೊಂಡುಕೊಳ್ಳುವೆವು, ಅವಳು ಹಾಳಾಗಿಹೋದರೆ ಹೋಗಲಿ ಎನ್ನುತ್ತಿರುತ್ತಾರೆ .

ಹೆಣ್ಣಿಗೆ ಸ್ವಾಭಿಮಾನ , ಸ್ವಾವಲಂಬನೆ ಏನೇ ಇದ್ದರು ಸಮಾಜದ,ವ್ಯವಸ್ತೆಯ,ಸಂಸ್ಕೃತಿಯ ವಿರುದ್ಧ ಬದುಕಲು ಹುಚ್ಚು ದೈರ್ಯ, boldnessಬೇಕು. ಹೆಣ್ಣು ಸ್ವಭಾವತಹ ಭಾವನ ಜೀವಿ, ಎಷ್ಟೇ ಒರಟಂತೆ ತೋರಿಸಿಕೊಂಡರು , ಮನಸ್ಸು ಮೃದು .ಅಂತ ಸುಲಭದ ವಿಷಯವಲ್ಲ ಅದು. .ಮದುವೆಯ ಬಂಧನ ಕಳಚಿಕೊಂಡು ವ್ಯವಸ್ತೆಯ ವಿರುದ್ಧ್ಹ ಈಜಲು ದೃಡಶಕ್ತಿ ಬೇಕಾಗುವುದರಿಂದ , ಬಗ್ಗಿ ನಡೆಯುವುದೊಂದೇ ಉಳಿದ ಬೆಸ್ಟ್ ಮಾರ್ಗವಾಗುತ್ತದೆ. ಉತ್ತಮ ಸಂಗಾತಿ ಸಿಕ್ಕಿದರೆ ಬಾಳು ಸ್ವರ್ಗವಾಗಬಹುದು .ಕೆಟ್ಟ ಸಂಗಾತಿ ಸಿಕ್ಕರೆ ಬಾಳು ನರಕವಾಗಿ ಪರಿಣಮಿಸಿಬಿಡಬಹುದು .ಬಟ್ಟೆ ಹೋಗಿ ಮುಳ್ಳಿನಮೇಲೆ ಬಿದ್ದರು, ಮುಳ್ಳೇ ಬಟ್ಟೆಗೆ ತಾಗಿದರೂ ಹರಿಯುವುದು ಬಟ್ಟೆಯೇ ಎನ್ನುವ ಹಾಗೆ ಹೆಣ್ಣಿನ ಬದುಕು .ಈ ಎಲ್ಲಾ ಕಾರಣಗಳಿಂದ ಮದುವೆ ಎನ್ನುವುದು ಮುಖ್ಯವಾಗಿ ಮಹತ್ವದ್ದಾಗಿರುವುದು ಹೆಣ್ಣಿಗೆ!!
ಆದ್ದರಿಂದ ಹೆಣ್ಣಾದವಳು ತಾಳ್ಮೆ, ಸಹನೆ ಇಟ್ಟುಕೊಂಡು , ನಿಧಾನವಾಗಿ ಗಂಡನ ಮನಸನ್ನು ಗೆದ್ದು, ಕೈಗೆ ತೆಗೆದುಕೊಂಡು ಬಾಳಿ, ನಿಂದನೆಯಂತಹ ಪೀಡನೆಗೆ ದೊರಕದೆ ಜಯಿಸಬೇಕು ಎಂದು ಹೇಳುತ್ತಾರೆ ತಿಳಿದವರು .ಅದು ಸರಿಯೇ .

ಪಂಚಾಯ್ತಿಗೆ ಕೂತಾಗ ಸಂಬಂಧ ಉಳಿಸಲು ಬಹುತೇಕರು ಹೇಳುವ ‘ಹೆಣ್ಣು ತಗ್ಗಬೆಕು’ ಎನ್ನುವ ಹಿತಶೊಕ್ತಿ ಕೊಂಚ crude ಎನಿಸಿದರು , ಅದನ್ನೇ ಹೇಳುವ ಮತ್ತೊಂದು ರೀತಿಯಿದೆ .ಹಿಂದೆಗಡೆಯ ಹಿತ್ತಲಿಂದ ಕಿವಿಯೊಳಗೆ ಹೇಳುವ ಟಿಪ್ಪಣಿ ಅದು ..
ಗಂಡನನ್ನು ಹೆಂಡತಿ ಹೇಗೆ ಒಲಿಸಿಕೊಂಡು ಸೆರಗಿನಲ್ಲಿ ಇಟ್ಟುಕೊಳ್ಳಬೇಕು — ರಹಸ್ಯ!!! .

ಹೆಣ್ಣಿನ ರೂಪ, ಲಾವಣ್ಯ, ವಯ್ಯಾರ , ಬಳಕು, ಮಧುರ ಮಾತುಗಳಿಗೆ ತಪಸ್ಸಿಗೆ ಕೂತ ಋಷಿವರ್ಯರೇ ಸೋತು ಭಂಗಗೊಳ್ಳುತ್ತಿದ್ದರಂತೆ ,ಇನ್ನು ಸಾಮಾನ್ಯ ಗಂಡಸೇನು ಮಹಾ ?
ದಿನ ಬೆಳಗೆದ್ದು ಅವನೇಳುವ ಮುಂಚೆಯೇ ಮಡಿಯುಟ್ಟು , ಸಂಜೆ ಮನೆಗೆ ಬರುವ ಮುಂಚೆಯೇ ಮುಖ ತೊಳೆದು , ಫೇರ್ & ಲವ್ಲೀ ಬಳಿದು, ನೀಟಾಗಿ ತಲೆ ಬಾಚಿ ಹೂ ಮುಡಿದು, ಪೂಜೆ ಮಾಡಿ ,ಕುಂಕುಮ ಇಟ್ಟು ಮುಗುಳ್ನಗುತ್ತ ಎದುರುಗೊಳ್ಳುವ ಹೆಂಡತಿಗೆ ಮರುಳಾಗದವರು ಯಾರು ?
ಕೂತರು ನಿಂತರು ಗಂಡನ ಕ್ಷೇಮಾಭಿವೃದ್ದಿ ,ಊಟ , ಉಪಚಾರದ ಕಾಳಜಿ ಹೊತ್ತು ಓಡಾಡುವ ಹೆಂಡತಿಗೆ ಮನಸೋಲದವರು ಯಾರು ?
ಗಂಡನ ಆಯಸ್ಸು , ಅರೋಗ್ಯ , ವ್ಯವಹಾರ ,ಐಶ್ವರ್ಯ ಎಲ್ಲವು ವೃದ್ಧಿಯಾಗಲಿ ಎಂದು ಪೂಜೆ, ಪುನಸ್ಕಾರ, ಜಪ, ತಪ, ಉಪವಾಸ, ದೇವಸ್ತಾನ ಮಾಡುವ ಹೆಂಡತಿಗೆ ಶರಣಾಗದವರು ಯಾರು ?
ಮನೆ ತುಂಬಿದವಳು ಅವನ ಕುಟುಂಬವನ್ನು ತನ್ನದೆಂದು ಭಾವಿಸಿ , ಅವನ ಬಂಧುಗಳನ್ನು ತನ್ನವರೆಂದು ಉಪಚರಿಸುವ ಹೆಂಡತಿಗೆ ದಾಸರಾಗದವರು ಯಾರು ?
ಗಂಡನ ತಪ್ಪುಗಳನ್ನು ಹೊಟ್ಟೆಗೆ ಹಾಕಿಕೊಳ್ಳುತ್ತಾ , ತನ್ನ ಮನೆ, ತನ್ನ ಸಂಸಾರ, ತನ್ನ ಮಕ್ಕಳು ಎಂದು ಬಡಿದಾಡುವ, ಹೋರಾಡುವ ಹೆಂಡತಿಯನ್ನು ಯಾವ ಮುಟ್ಟಾಳ ತಾನೇ ದೂರಮಾಡುತ್ತಾನೆ.
ಅವನಿಷ್ಟದ ಅಡುಗೆ, ಅವನಿಷ್ಟದ ಬಣ್ಣ , ಅವನಿಷ್ಟದ ಸಿನಿಮಾ ಎಲ್ಲವನ್ನು ತನ್ನದಾಗಿ ಮಾಡಿಕೊಂಡು ಅಭಿರುಚಿಬೆಳೆಸಿಕೊಂಡ ಹೆಂಡತಿಯೇ ಅವನ ಪ್ರೇಯಸಿ .
ಎಲ್ಲದಕ್ಕಿಂತ ಹೆಚ್ಚಾಗಿ ಗಂಡ ಏನೇ ಅಂದರು, ಒಂದು ಹೊಡೆತವನ್ನೇ ಹೊಡೆದರು ಎದುರಾಡದೆ ತಣ್ಣಗೆ ಇದ್ದುಬಿಡುವಂತ ಹೆಣ್ಣನ್ನು ಎಂದಾದರು ಗಂಡ ದೂರ ಮಾಡುತ್ತಾನೆಯೇ …ಗಂಡನ ಮರ್ಯಾದೆಯನ್ನು ಪ್ರಾಣ ಹೋಗುತ್ತಿದ್ದರು ಕಳೆಯದ ಅರಿಶಿನ ಕುಂಕುಮ ಶೋಭಿತೆ ಸಹಧರ್ಮಿಣಿಯನ್ನು ಗಂಡ ಕೈ ಬಿಡುತ್ತಾನ ?
ಅಂತ ಹೆಣ್ಣನ್ನು ನಿರಾಕರಿಸುವ ತಾಕತ್ತು ಯಾವ ಗಂಡಸಿಗೆ ಇರುತ್ತದೆ ?
ಇವೆಲ್ಲ ಮನಸಿನ ಒಳಗೆ ಇರದ್ದಿದ್ದರು ಇದೆ ಎನ್ನುವಂತೆ ಹೊರಗೆ ತೋರಿಸಿಕೊಳ್ಳುತ್ತಾ , ನಿಜ ಎನ್ನುವಂತ environment create ಮಾಡಿಕೊಳ್ಳುವ ಜಾಣ್ಮೆ , ಬುದ್ಧಿವಂತಿಕೆ ಹೆಣ್ಣಿಗೆ ಇರಬೇಕು .ಶಕ್ತಿಯಿಂದ ಆಗದಿರುವಾಗ ಯುಕ್ತಿಯಿಂದ ಮಣಿಸಬೇಕು, ಸೋತು ಗೆಲ್ಲಬೇಕು ..ಒಂದು ಕಾಲದಲ್ಲಿ ಇಂತ ಟಿಪ್ಸ್ ಗಳನ್ನು ಯಥೇಚವಾಗಿ ನೀಡುತ್ತಿದ್ದ ಗೃಹಶೋಭದ ಎಲ್ಲಾ ಲೇಖನಗಳನ್ನು ನಾನು ಓದುತ್ತಿದ್ದೆ .ಬಹಳ ಜನಪ್ರಿಯವೂ, ಮಹಿಳಾಪ್ರಿಯವೋ ಆಗಿತ್ತು ಆ ಮಾಸಪತ್ರಿಕೆ !

ರುಡಾಲಿ ಬೀಳುವ , ಗಂಡುಬೀರಿತನದ, ಚಂಡಿಹಿಡಿವ , ಆತ್ಮಾಭಿಮಾನ , ಹೆಣ್ಣಿನ ಹಕ್ಕು, ಹೋರಾಟ ಎನ್ನುವ ಸ್ವಾವಲಂಬಿ ‘ಮಹಿಳಾವಾದಿಗಳನ್ನು’ ಗಂಡು ಸಮುದಾಯ ನಿರಾಕರಿಸಿ ,ದೂರವೇ ಇಡುತ್ತದೆ !!!

ಅವನೆಲ್ಲ exaguarate ಮಾಡಿ ತೋರಿಸಿಕೊಳ್ಳದ್ದಿದ್ದರು, ಅದನ್ನು ಮೀರಿದ , ನಿಜಾವಾಗಲು ಅವನನ್ನು ಪ್ರೀತಿಸುತ್ತಿದ್ದ ಒಳ್ಳೆ ಮನುಷ್ಯಳಂತೂ ಆಗಿದ್ದೆ !!! ಹೆಣ್ಣು ಗಂಡೆಂಬ ಭಾವನೆ ಮನಸಿಗೆ, ದೇಹಕ್ಕೆ ಸಂಬಂಧಿಸಿದ್ದೇ ವಿನಃ ತೋರ್ಪಡಿಕೆಗೆ ಅಲ್ಲ ಎನ್ನುವ ಮಾನವತಾವಾದಿ ನಾನು ! ನಾಟಕವಾಡುತ್ತ ಒಳಗೊಂದು ಹೊರಗೊಂದು ನಾ ಬದುಕಲಾರೆ.. ಪ್ರತಿ ಕ್ಷಣ consicious ಆಗಿ ಬಾಳಲಾರೆ..
ಒಳ್ಳೆತನ ಕಾಣುವ ಕಣ್ಣಿರಲಿಲ್ಲ ಅಷ್ಟೇ ಅವರಿಗೆ –ಹೆಣ್ಣೇ ಅಲ್ಲ ಎಂದರು !!!

ನಿಜ ಬಹುತೇಕ ಗಂಡಂದಿರು ಹಾಗೆ . ಕೋಪ, ದುಷ್ಟತನ , ಕ್ರೌರ್ಯ , ದುಡ್ದುಭಾಕತನ ,ಅನುಮಾನ , ಕುಡಿತ, ಬಡಿತ, ಹೆಣ್ಣು, ಅಮಲು , ದುಡ್ಡಿನ ದುರಹಂಕಾರ, ದರ್ಪ, ಜ್ಞಾನದ –ಸಂಪಾದನೆಯ ದರ್ಪ , sadist ಮನಸ್ಥಿತಿ ಹೊಂದಿರುತ್ತಾರೆ ……ಹಾಗಿದ್ದವರು ಕೂಡ ‘ಗೃಹಶೋಭದ ‘ ಅಪೂರ್ವ ಗೃಹಿಣಿಯನ್ನು ಹೆಂಡತಿಯಲ್ಲಿ ಕಾಣಬೇಕು ಅಂತ ಗರ್ಜಿಸುತ್ತಿರುತ್ತಾರೆ .
ಅಂಥವರನ್ನು ಮಮತೆ, ಪ್ರೀತಿ, dependency , ಹೆಣ್ತನಗಳ ದೆಸೆಯಿಂದ ‘Line ‘ ತೆಗೆದುಕೊಂಡು ಸಂಸಾರ ಹೂಡಿ , ಮಕ್ಕಳನ್ನು ಹೆತ್ತು , social status ಗಿಟ್ಟಿಸಿಕೊಂಡು ಸಂಸಾರಸ್ತೆಯಾಗುವ ಕರ್ತವ್ಯ ,ಜವಾಬ್ದಾರಿ ಹೆಂಡತಿಯ ಮೇಲೆ ಇರುತ್ತ್ತದೆ .ಅವರವರ ಬುದ್ಧಿವಂತಿಕೆ , ಸಂಯಮ , ಯುಕ್ತಿಗೆ ಬಿಟ್ಟ ವಿಷಯ ಅವು .

ಎಲ್ಲವು ಅರಿತ್ತಿದ್ದ ನನ್ನ ಮದುವೆ ಯಾಕೆ ಮುರಿಯಿತು ….

ಇಂತಹ ಸಂಕಷ್ಟದಲ್ಲಿ ಸಿಕ್ಕಿ ಹಾಕಿಕೊಂಡಿರುವವಳು ನಾನೊಬ್ಬಳೆ ಎಂದು ಕಂಗಾಲಾಗಿದ್ದಾಗ , ಸರಿಪಡಿಸಿಕೊಳ್ಳುವ ಹತ್ತುಹಲವು ಪ್ರಯತ್ನ ಪಡುತ್ತಿದ್ದಾಗ, ನನ್ನೆದುರು ಬೇರೆ ಪ್ರಪಂಚವೇ ತೆರೆದುಕೊಂಡಿತು …. ಥೇಟ್ ಎನಿಸುವಂತ, almost similar ಎನಿಸುವಂತ ಅವವೇ ಕತೆಗಳ ನೂರಾರು ದುರಂತನಾಯಕಿಯರ ವ್ಯಥೆ ಹರವಿಕೊಂಡಿತು .

ಅವರನ್ನು ಕೇಳಿದೆ ಕಾರಣ, ಸಂಸಾರ ಹೇಗೆ ಹಾಳಾಗುತ್ತದೆ ಎಂದು !!! ಎಲ್ಲರಿಂದಲೂ ಅದೇ similar ಉತ್ತರ–” ಮೂರನೆಯವರ ಹಿಡಿತದ ಸೂತ್ರ , ಮತ್ತು ಹೆಣ್ಣಿನ ದುಡಿಮೆ” !!!!

ಗಂಡು ಹೆಣ್ಣು ಅನ್ಯೋನ್ಯತೆ ಸಂಪಾದಿಸಬೇಕೆಂದರೆ ಅಲ್ಲಿ ಸಾಕಷ್ಟು privacy ಬೇಕು.. privacy ಎಂದರೆ physical privacy ಅಲ್ಲ !!!! ಭಾವನಾತ್ಮಕ privacy .ನೂರಾರು ಜನರಿರುವ ಒಟ್ಟು ಕುಟುಂಬದಲ್ಲಿ ಇದ್ದಾಗಲೂ ಅನ್ಯೋನ್ಯ ಬದುಕುವ ಜೋಡಿಗಳಿರುತ್ತವೆ. ಇರವ 3 ಜನರಲ್ಲೇ ರಂಪರಾಮಾಯಣಗಳು ಆಗಿ ಒಡೆದುಹೋದವು ಇರುತ್ತವೆ .
ಸಂಬಂಧಗಳು ಸೂಕ್ಷ್ಮ .
ಭಿನ್ನ ಹಿನ್ನಲೆ ಇರುವ ನವಜೋಡಿಗಳಲ್ಲಿ ಮೊದಮೊದಲು ಗರ್ಷಣೆ ಸಹಜ .ಇಬ್ಬರಲ್ಲಿ ಒಬ್ಬರು kiddish , ಅಪ್ರಬುದ್ಧರೋ ಆಗಿರಬಹುದು .ಯಾವ ಹೆಣ್ಣು ಸಂಸಾರ ಹಾಳುಮಾಡಿಕೊಳ್ಳಬೇಕು ಎಂದು ಮನೆ ತುಂಬಿರುವುದಿಲ್ಲ .ಯಾವ ಗಂಡು divorceಗೆ apply ಮಾಡಬೇಕು ಎಂದು ತಾಳಿ ಕಟ್ಟಿರುವುದಿಲ್ಲ.
ಕೆಲವು ಸಂಸಾರಗಳನ್ನು ನೋಡ್ಡಿದ್ದೀನಿ.ಮುಗಿದೇ ಹೋಯಿತು ಎನ್ನುವ ಹಂತಕ್ಕೆ ತಲುಪಿದಾಗ ದೊಡ್ಡವರು ಕೂಡಿಸಿರುತ್ತಾರೆ. ತಂದೆ ತಾಯಿಗಳು,ಸಂಬಂಧಿಕರು ಸಂಬಂಧ ಕಳಚಿಕೊಳ್ಳದಂತೆ ಹಾಗು ಹೀಗೂ ತೇಪೆ ಹಾಕಿರುತ್ತಾರೆ .ದಿನಗಳೆದಂತೆ ಗಂಡ ಹೆಂಡತಿಯ ಮಧ್ಯೆ ಸ್ನೇಹ, ಅನ್ಯೋನ್ಯತೆ ತಾನೇ ಮೂಡುತ್ತದೆ . ಸುಖಾಂತ್ಯವಾಗುತ್ತದೆ.

ಮುರಿದು ಬೀಳುವ ಮದುವೆಗಳ pattern ಗಮನಿಸಿದೆ .
ಗಂಡ/ಹೆಂಡತಿ ಅನುಮಾನ ಬೀಳುತ್ತಾ , ಸಕ್ಕತ್ತು expect ಮಾಡುತ್ತಾ , ಸುಮ್ಮಸುಮ್ಮನೆ ರಗಳೆ ಮಾಡಿ ಹರ್ಟ್ ಆಗುವ ಮಟ್ಟಕ್ಕೆ abuse ಮಾಡುತ್ತಾ ,violent ಆಗಿ, ದುಡ್ಡಿನ ಪೀಡನೆ ಮಾಡಿಕೊಂಡು ಇನ್ನೊಬ್ಬರ ಭಾವನೆಗಳನ್ನು ಗಾಸಿಗೊಳಿಸುತ್ತಿರುತ್ತಾರೆ. ಒಂದುವೇಳೆ ಅಲ್ಲಿ ಅವರಿಬ್ಬರಿಗೆ handle ಮಾಡಿಕೊಳ್ಳುವ space ಇದ್ದರೆ ಅವರವರ ರೀತಿಯಲ್ಲಿ ಅವರು handle ಮಾಡಿಕೊಂಡು ಗೆದ್ದು ಬಿಡುತ್ತಾರೆ .,ಅಥವಾ ಬಹುಶ ಒಂದು ಹಂತ ಅಂತ ಸಂಬಂಧ ತಲುಪಿಬಿಟ್ಟರೆ ತಂತಾನೇ ಕಾಲಕ್ರಮೇಣ ಎಲ್ಲವೂ ಸರಿಹೋಗುತ್ತದೆ .ಕಡೆ ಪಕ್ಷ ಕಳಚದೆ ಉಳಿಯುತ್ತದೆ !!!
ಆದರೆ ಅದಾಗದೆ ಯಡವಟ್ಟು ಆಗುವುದೇ ಅಲ್ಲಿ ಬೇರೆಯವರ ಪ್ರವೇಶವಾದಾಗ . ಹೆಣ್ಣಿನ ಮನೆಯವರ ಓವರ್ interference ಇರಬಹುದು ಅಥವಾ ಗಂಡಿನ ಮನೆಯವರಾಗಿರಬಹುದು ,IRREVERTIBLE BREAKDOWN ಗೆ ಕಾರಣವಾಗಿಬಿಡುತ್ತದೆ . ಕೆಲವೊಮ್ಮೆ ದುಡ್ಡಿನ ವ್ಯವಹಾರಿಕ ದಾಹವೋ ಅದರಲ್ಲಿ ಶಾಮೀಲಾಗಿರುತ್ತದೆ !!!
ಬಹುತೇಕ ಸಂಧರ್ಭಗಳಲ್ಲಿ ಅಲ್ಲಿ single parent ಇರುತ್ತಾರೆ , ತುಂಬಾ ಪೊಸ್ಸೆಸ್ಸಿವೆ ಅಕ್ಕ, ತಂಗಿಯರಿರುತ್ತಾರೆ .ಬೆಳಗ್ಗೆ ನಡೆದು ರಾತ್ರಿಗೆ ಸರಿಹೋಗಿರಬಹುದಾದ ಗಂಡಹೆಂಡತಿಯ ಸಣ್ಣ ಅಸಮಾಧಾನ ಕೂಡ ಬೇರೆಯವರ ಪ್ರವೇಶದಿಂದ ದೊಡ್ಡರಂಪ ಆಗಿಬಿಟ್ಟಿರುತ್ತದೆ .ಮನುಷ್ಯನ ಗರ್ವ ದೊಡ್ಡದು !!!
ಯಾಕೆ ಹೀಗಾಗುತ್ತದೆ …. ?
ಮದುವೆಗೆ ಮುಂಚೆ ಓವರ್ attachement ಇರುವ ಪೋಷಕರು ಮತ್ತು ಮಕ್ಕಳ ಸಂಬಂಧಗಳಲ್ಲಿ ಅನಗತ್ಯ ಧಾವಂತ, ಭೀತಿಗಳಿರುತ್ತವೆ … ಸಂಗಾತಿ ಬಂದ ನಂತರ ತಾನೆಲ್ಲಿ ಹೆತ್ತವರನ್ನು ದೂರ ಮಾಡುತ್ತಿದ್ದೇನೋ ಎನ್ನುವ guilt , ಎಲ್ಲಿ ತನ್ನ ಪೋಷಕರನ್ನು ಹೊಸದಾಗಿ ಬಂದವಳು ಕಡೆಗಣಿಸಿ , ನೋಯಿಸಿಬಿಡುತ್ತಾಳೋ ಎನ್ನುವ ಭಯ …. ಇನ್ನು ಹೆತ್ತವರಿಗೆ ತಮ್ಮ ಮಗನಿಗೆ/ಮಗಳಿಗೆ ಸರಿಯಾದ ಉಪಚಾರ ನಡೆಯುತ್ತಿಲ್ಲ ಎನ್ನುವ ಅಸಮಾಧಾನ , ಹೊಸದಾಗಿ ಸಿಕ್ಕ ಸುಖದಲ್ಲಿ ಮುಳುಗಿಹೋಗಿ ತನ್ನನ್ನು ಎಲ್ಲಿ ದೂರಮಾಡಿ ಬಿಡುತ್ತಾನೋ ಎನ್ನುವ ಚಿಂತೆ ….
ಅನಗತ್ಯ insecurity ಗಳು !!!
ಅದನ್ನು ದೂರಮಾಡಲೆಂದೇ ಅತಿ ಅನವಶ್ಯಕವಾಗಿ ಮೂಗು ತೂರಿಸಿಕೊಂಡು ಹೋಗಿ ಅನಾಹುತಕ್ಕೆ ಕಾರಣರಾಗಿಬಿಡುತ್ತಾರೆ .ಗಂಡ/ಹೆಂಡತಿಯೇ ಬೇರೆಯವರನ್ನು ಮಧ್ಯೆಕರೆದು ತಂದಿರುತ್ತಾರೆ , ಅಥವ ಬೇರೆಯವರೇ ಅತಿಕ್ರಮವಾಗಿ ಬಂದು ಬಿಟ್ಟಿರುತ್ತಾರೆ ..ಅವರಿಗೆ ಅದರಿಂದ ಆಗಬಹುದಾದ damages ಗೊತ್ತೇ ಆಗುವುದಿಲ್ಲ … ಅದೇ ಸರಿಯಾದ ಮಾರ್ಗ ಎಂದೇ ನಂಬಿಕೊಂಡುಬಿಟ್ಟಿರುತ್ತಾರೆ …ಖಾಸಗಿತನದ ಅಗತ್ಯವೇ ಅವರಿಗೆ ಅರಿವಾಗಿರುವುದಿಲ್ಲ !!!

ಇನ್ನು ದುಡಿಯುವ ಹೆಂಡತಿ ಇದ್ದಾಗ ಹೆಚ್ಚುತ್ತ್ತ ಹೋಗುವ expectationsಗಳು !!
ಏನೇ ದುಡಿದರು ಗಂಡನಿಗೆ ತನ್ನನ್ನು ಕಾಳಜಿವಹಿಸುವ ‘ಗೃಹಶೋಭಾ’ದ Perfect ಹೆಂಡತಿಯೇಬೇಕು !!… ಅವಳ ದೈಹಿಕ ಶ್ರಮದಮಿತಿ , ಮನೆಗೆಲಸ ಕಲಿತಿರದ ಅಸಹಾಯಕತೆಗಿಂತ expectationಗಳು ಜಾಸ್ತಿಯಾಗಿ,ನಿರೀಕ್ಷೆಗಳು ಹೇರಿಕೆಯಾಗಿ ಬಿಟ್ಟಿರುತ್ತದೆ .ಅಮ್ಮ ಮಾಡುವುದೆಲ್ಲವನ್ನು ಅವಳು ಮಾಡಬಹುದು , ಪ್ರೀತಿಯಿದ್ದರೆ ಮಾಡಲೇಬೇಕೂ ಎಂದು ತಿಳಿದಿರುತ್ತಾರೆ ..insecuritiesಗಳು ಅದಕ್ಕೆ ಒಂದು ಕಾರಣ .
ಇನ್ನು ಅಲ್ಲಿ ದುಡ್ಡಿನ ಅಪೇಕ್ಷೆ ಸೇರಿಕೊಂಡು ಬಿಟ್ಟರೆ ಅದೋಗತಿ. ಬಹುತೇಕ ಕುಟುಂಬಗಳಲ್ಲಿ ಹೆಣ್ಣು ಮನೆನಿಭಾಯಿಸಬೇಕು , ಅಥವ ಈಚೆ ದುಡಿಯುತ್ತಲಿದ್ದರೆ ಮನೆಗೆ ಹಣಕಾಸು ಒದಗಿಸಬೇಕು ,ಇನ್ನು ಕೆಲವೆಡೆ ಎರಡನ್ನು ಮಾಡಬೇಕು ಎನ್ನುವ ನಿರೀಕ್ಷೆಗಳಿರುತ್ತವೆ .ಅಲ್ಲಿ ಶುರುವಾಗುವ ತಿಕ್ಕಾಟ , ಗಂಡಸಿನ ಸಹಜ roughness ನೊಂದಿಗೆ ಮಿಳಿತಗೊಂಡು , ಜೊತೆಗೆ ಅವನ ಕುಟುಂಬದವರ interference ಸೇರಿಕೊಂಡು ಒಳಗೊಳಗೇ ಮುಸುಕಿನ ಗುದ್ದಾಟ ಶುರುವಾಗಿಬಿಟ್ಟಿರುತ್ತದೆ.
ಅನುಮಾನದ ಕಾಯಿಲೆ ಇದ್ದವರದ್ದು ಮತ್ತೊಂದು ರಗಳೆ . ಏನೋ ಮೆಸೇಜ್ , ಮೇಲ್, ಕಾಲ್ ಗಳನ್ನೂ , ಕಲೀಗ್ಸ್, ಫ್ರೆಂಡ್ಸ್ ಜೊತೆಗಿನ ಮಾತುಕತೆಯನ್ನು ತಪ್ಪಾಗಿ ಅರ್ಥ ಮಾಡಿಕೊಂಡು ಮನಸ್ಸು ಕೆಡಿಸಿಕೊಂಡು ಒದ್ದಾಡುತ್ತಿರುತ್ತಾರೆ.
ಮದ್ಯೆ ಬರುವ ಅಮ್ಮ, ಅಕ್ಕ, ತಂಗಿ, ತಮ್ಮಂದಿರು ತೀರ ಚೀಪ್ ಎನಿಸುವಂತಹ hurtings ಮಾಡಿಬಿಡುತ್ತಾರೆ .
ಏನೇ ಆದರು ‘ಅವನದ್ದೇ’ ಸರಿ ಎನ್ನುವ ಹೆತ್ತವರು, ಸುತಾರಾಂ ಬಿಟ್ಟುಕೊಡಲು ಸಿದ್ದವಿರುವುದಿಲ್ಲ .
ಹುಡುಗಿಯ character assasination ನಂತಹ ಹೇಯ ,ಅಮಾನವೀಯ ಕೃತ್ಯವನ್ನೂ ಎಲ್ಲರೆದುರು ಮಾಡಲು ಚೂರು ಹಿಂಜರಿಯುವುದಿಲ್ಲ !!
ಬಹುಷ್ಯ ದುಡಿಯುವ ಹೆಣ್ಣು ಮತ್ತೇನನ್ನನ್ನಾದರು ಸಹಿಸಬಲ್ಲಳು, ಆದರೆ ತನ್ನ ಚಾರಿತ್ರ್ಯದ ಕುರಿತ ಅವಹೇಳನ ಮತ್ತು ತನ್ನ ತಂದೆತಾಯಿಯರ ಬಗೆಗಿನ ಕೀಳುಮಾತುಗಳನ್ನು ಸಹಿಸಲಾರಳು!!!!
ಆದರೆ ಆ ವಿಷಯಗಳೇ ಹೆಚ್ಚು ಗಾಸಿಗೊಳಿಸುವ ಸಾದ್ಯತೆ ಹೊಂದಿರುವುದರಿಂದ , ಅದನ್ನೇ ಅಸ್ತ್ರವನ್ನಾಗಿ hurt ಮಾಡಲು ಬಳಸಿಕೊಳ್ಳುತ್ತಾರೆ .ಏನೇ ಆದರು ಅವಳು ಮನೆತೊರೆಯದ ಅಸಹಾಯಕಳು ಎಂದು ಅದನ್ನು ವ್ಯವಸ್ತಿತವಾಗಿ ಉಪಯೋಗಿಸಿಕೊಳ್ಳುತ್ತಾ , ತಮ್ಮ ಹಿಡಿತಕ್ಕೆ ಒಳಪಡಿಸಿಕೊಳ್ಳಲು ಅಂಕುಶವನ್ನಾಗಿ ಮಾಡಿಕೊಂಡುಬಿಟ್ಟಿರುತ್ತಾರೆ .
ಅದನ್ನೆಲ್ಲಾ ಮೀರಿ ಹೆಣ್ಣು ಯೋಚಿಸಿದ್ದೆ ತಡ , LARGE SCALE ನಲ್ಲಿ ಅದೇ ತಂತ್ರ ಅವಳ ವಿರುದ್ದ ಬಳಸಲ್ಪಟ್ಟು ಅವಳನ್ನು ಯಾವುದಕ್ಕೊ ಬೇಡದನಿಕೃಷ್ಟ ಜೀವಿಯಾಗಿಸಿಬಿಡುತ್ತದೆ …ಪ್ರತಿ ದಿನ ಹಿಂಸಿಸಿ ಹಿಂಸಿಸಿ ಕೊಲ್ಲುವ ರಿವಾಜಾಗಿ ಬಿಡುತ್ತದೆ ಪರಿಸ್ಥಿತಿ !!!

ನಂತರ ಅದೇ ಒಬ್ಬರ ಮೇಲೆ ಒಬ್ಬರು complaint , courtu , ಕೇಸ್ ಅಂತ ಹಾಕಿಕೊಂಡು ವರ್ಷಗಟ್ಟಲೆ ನರಳಾಡುತ್ತಿರುತ್ತಾರೆ ……

ಶ್ರುತಿ ತಪ್ಪುವುದು ಎಲ್ಲಿ !!!!
ಹುಡುಗನಿಗೆ ಏನೇ ಆಸ್ತಿ, ವಿದ್ಯೆ , ಸಂಬಳ ಇದ್ದರು , ಹುಡುಗಿಗೆ ಏನೇ backgroundಗಳಿದ್ದರು ಸಂಬಂಧ ನಿಲ್ಲುವುದು ವಿಶ್ವಾಸದ ಮೇಲೆ … ಹೇಗೆ ಒಬ್ಬರನ್ನು ಒಬ್ಬರು ಕಾಣುತ್ತಾರೆ, ನಡೆಸಿಕೊಳ್ಳುತ್ತಾರೆ ಎನ್ನುವುದರ ಮೇಲೆ .ಕೆಲವೆಡೆ ಶುರುವಿನಿಂದಲೇ ದೈಹಿಕ ಆಕರ್ಷಣೆಯ ಕಾರಣದಿಂದ ವಿಶ್ವಾಸ, ಅವಲಂಬನೆಗಳು ತಂತಾನೇ ಬೆಳೆದುಬಿಡುತ್ತವೆ .ಸಂಸ್ಕಾರವೋ, ಜ್ಞಾನವೊ ಪರಸ್ಪರರನ್ನು ಗೌರವ , ಕಾಳಜಿಯಿಂದ ನಡೆಸಿಕೊಳ್ಳುವ ನಡೆನುಡಿ ಕಲಿಸಿರುತ್ತದೆ .
ಆದರೆ ಕೆಲವು ಕಡೆ ಇಬ್ಬರಲ್ಲಿ ಒಬ್ಬರದ್ದು complicated ಎನಿಸುವಂತ ವ್ಯಕ್ತಿತ್ವವಿರುತ್ತದೆ .ಅಷ್ಟು ಸುಲಭವಾಗಿ ಅವರು ಯಾರನ್ನು accept ಮಾಡಿಕೊಳ್ಳರಾರರು… ಯಾರೇನೆ ಹೇಳಿದರು ಅವರೇ ಅವರ ವಿಧಾನದಲ್ಲಿ ಪರೀಕ್ಷಿಸಿ ಗೊತ್ತುಮಾಡಿಕೊಳ್ಳಬೇಕು … ಇನ್ನು ಕೆಲವರದ್ದು ನಿರಂತರ ಅಪಾರ್ಥಮಾಡಿಕೊಳ್ಳುವ volatile personality ಗಳಾಗಿರುತ್ತವೆ .. ಮತ್ತೆ ಸಣ್ಣದನ್ನು ದೊಡ್ಡದುಮಾಡಿ ಗುಲ್ಲೆಬಿಸಿ ಅಧಿಕಾರ ಸ್ತಾಪಿಸುವ ಖಯಾಲಿಯಾಗಿ ಬಿಟ್ಟಿರುತ್ತದೆ …. ಒಬ್ಬರೇ ನಿರ್ಣಯ ತೆಗೆದುಕೊಳ್ಳಲು , ಸಮರ್ಥವಾಗಿ ಸಂಬಂಧವನ್ನು ನಿಭಾಯಿಸಿಕೊಳ್ಳಲು ಅಸಮರ್ಥರಿರುತ್ತಾರೆ ..! ತೀರ ಚಿಕ್ಕದಕ್ಕು ಮೂರನೆಯವರ ಅಭಿಪ್ರಾಯ ಕೇಳಿಕೊಂಡು ಅವರು ನಿರ್ದೇಶಿಸಿದಂತೆ ನಡೆಯುತ್ತಿರುತ್ತಾರೆ .ಸುಲಭವಾಗಿ ಅಪಾರ್ಥ ಮಾಡಿಕೊಂಡು ವಿಷಮಯವಾಗಿ ಬಿಡುತ್ತಾರೆ…
ಅಂತ special ಸಂಬಂಧಗಳಲ್ಲಿ ವಿಶ್ವಾಸ ಮೂಡಲು ಸುದ್ದೀರ್ಘ ಸಮಯವೇ ಬೇಕು …

ಆದರೆ ಹಾಗಾಗುವುದಿಲ್ಲ:

ಸಮಯ ಕೊಟ್ಟುಕೊಳ್ಳುವಿಕೆ ಸಾಧ್ಯವಾಗುವುದಿಲ್ಲ .ಸಾಮಾನ್ಯವಾಗಿ ಮದುವೆಯಾಗಿ ಹೋದ ಮನೆಯಲ್ಲಿ, ಗಂಡಿನದ್ದೆ ಕಾರುಬಾರು .ಅವರ ರೀತಿ-ರಿವಾಜುಗಳದ್ದೆ ಮೇಲುಗೈ….. ಅಂತ complicated behaviour ಹುಡುಗನ ಮನೆಯ ಸದಸ್ಯರಲ್ಲಿದ್ದರೆ , ಗಂಡನಾಗಿ ಅವನೇ ಹುಶಾರಾಗಬೆಕು . ದಾಂಪತ್ಯ ಉಳಿಸಿಕೊಳ್ಳಬೇಕು ಎಂದರೆ ದಂಪತಿಗಳ ನಡವಿನದ್ದನ್ನು solve ಮಾಡಿಕೊಳ್ಳಲು ಅವನೇ ಉಳಿಸಿಕೊಳ್ಳಬೇಕು …ಆ ರೀತಿಯ complicated behaviour ಹುಡುಗನದ್ದೆ ಆದರೆ ಸಾಕಷ್ಟು ಕಷ್ಟವೇ ಅದು …
ಇತರ ಮನೆಯ ಸದಸ್ಯರಿಗೆ ಅದು ಗೊತ್ತಿರುತ್ತದೆಯಾದರಿಂದ ಮದುವೆ ಕೆಡುವುದು , ಬಿಡುವುದೂ ಮನೆಯವರು ಹೇಗೆ ವರ್ತಿಸುತ್ತಾರೆ ಎನ್ನುವುದರ ಮೇಲೆ ಅವಲಂಭಿತವಾಗಿ ,ಬಹಳಷ್ಟು ಸಮಯ ಅವರ ಕೈನಲ್ಲೆ ಇರುತ್ತದೆ … ಆದಷ್ಟು ಬುದ್ಧಿ ಹೇಳಿ ನಾಲ್ಕು ಗೋಡೆಯಿಂದಾಚೆ ಜಗಳಗಳು ಬಾರದಂತೆ ತಾಕೀತು ಮಾಡಿ, ಜವಾಬ್ದಾರಿ ಹೊರೆಸಿ ,ಹದ ತಪ್ಪದಂತೆ ತಡೆಯಬೇಕು.ಮದ್ಯೆ ಬಂದರೆ ಹದಕೆಡುತ್ತದೆ, ನೀವೇ ಅರ್ಥಮಾಡಿಕೊಂಡು ಬದುಕಿ, ಹೊಂದಿಕೊಂಡು ಹೋಗಿ ಎಂದು ಬುದ್ಧಿ ಹೇಳಬೇಕು . ಜೊತೆ ಸೇರದೆ ಶಾಮೀಲಾಗದೆ , ಹೊರನಿಂತು ಅವರವರಿಗೆ ರಿಪೇರಿ ಮಾಡಿಕೊಳ್ಳಲು ಬಿಟ್ಟುಬಿಡಬೇಕು .ಆದರೆ ಅದಾಗುವುದಿಲ್ಲ!!! over curiosity , over interference ನ ಹತ್ತಿಕ್ಕಲು ಸಾಧ್ಯವಿಲ್ಲ !!!

ಶಾಮೀಲಾಗುವಿಕೆ ತಡೆಯಲು ಸಾದ್ಯವಿಲ್ಲ !!!!
complaint ವರೆಗೂ ಹೋಗಲು ಕಾರಣವೇ ತಡೆಗಟ್ಟಲಾಗದ ಶಾಮೀಲಾಗುವಿಕೆ !
ಅಲ್ಲಿನ ಸಮಸ್ಯೆ ಎಂದರೆ ಒಂದು ಮನೆಯವರ behaviour ಒಂದೇ mainsetನ subsetಗಳಂತೆ ,ಹೆಚ್ಚುಕಮ್ಮಿ ಎಲ್ಲರದ್ದು ಅದೇ ರೀತಿ ಇದ್ದು complicated behaviourಗಳಾಗಿರುತ್ತವೆ . ಒಬ್ಬರ ಸಮಸ್ಯೆ ಎಲ್ಲರದ್ದು ಆಗಿರುತ್ತದೆ . ಶಮನಗೊಳಿಸಿ ಸಂಘರ್ಷ ಬಗೆಹರಿಸುವ ಬದಲು, ಒಬ್ಬರಲ್ಲಿ ಶುರುವಾದದ್ದು ಮತ್ತೆಲ್ಲರಲ್ಲೂ echo ಆಗುತ್ತಾ, ದೊಡ್ಡದಾಗುತ್ತ, exaguarate ಆಗುತ್ತಾ ಅನುರಣಿತಗೊಳ್ಳುತ್ತಿರುತ್ತದೆ..ಸಣ್ಣ ಸಮಸ್ಯೆಗೆ ಮನೆಯವರೆಲ್ಲರ ದ್ವನಿ ಸೇರಿಕೊಂಡು ದೊಡ್ಡ ಚೀತ್ಕಾರವಾಗಿಬಿಡುತ್ತದೆ … ಹೊಸದಾಗಿ ಹೋದವಳಿಗೆ ಅಘಾತವಾಗುವುದೆ ಆಗ.. ಎಲ್ಲರೂ ಒಂದಾಗಿ ತನ್ನ ವಿರುದ್ಧ ಷಡ್ಯಂತ್ರ ರೂಪಿಸಿ , ತನ್ನನ್ನು ಹೊರಗೆ ನಿಲ್ಲಿಸಿ ಶತ್ರುತರಹ ನಡೆಸಿಕೊಳ್ಳುತ್ತಿದ್ದಾರೆ ಎನ್ನುವ ಆ ಭಯ, ಅವಮಾನ, ಅತ್ಯಾಚಾರದಂತೆ ಬಾಸವಾಗಿಬಿಡುತ್ತದೆ.

ಕಾರಣ ಸಿಂಪಲ್ !!
ಇನ್ನೊಬ್ಬರ ಭಾವನೆಗೆ ಸ್ಪಂದಿಸದೇ, ಹಗುರವಾಗಿ ಪರಿಗಣಿಸಿ ಹೇಗೆಂದರೆ ಹಾಗೆ, ಒರಟು ಒರಟಾಗಿ ನಡೆದುಕೊಳ್ಳುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ ಒಂದೇ –“taken for granted ” !!!
ಅವಳು ತನ್ನ ಸ್ವತ್ತು ,ಏನೇ ಆದರು ಗಂಡನನ್ನು ಬಿಟ್ಟು ಹೋಗಲು ಸಾಧ್ಯವಿಲ್ಲವಲ್ಲಾ ಎಂಬ ಅಸಡ್ಡೆಯಲ್ಲಿ ಆನೆ ನಡೆದದ್ದೇ ದಾರಿ ಎಂಬಂತೆ ತುಳಿಯುತ್ತ ನಡೆದಿರುತ್ತಾನೆ ಗಂಡ .!!!!
ಅವನನ್ನು ಹಿಂಬಾಲಿಸಿ ನಾವು ಗಂಡಿನ ಕಡೆಯವರು, ನಮಗೆ ಹಕ್ಕಿದೆ, ನಮ್ಮದೇ ಅಧಿಕಾರ, ಎಲ್ಲ ನಮ್ಮ ಅನುಮತಿಗೆ, ಕುತೂಹಲಕ್ಕೆ, ಶಾಮೀಲಾಗುವಿಕೆಗೆ ಒಳಪಡಬೇಕು, ನಮ್ಮ ಮಾತು ಬೆಲೆಪಡೆದುಕೊಳ್ಳಬೇಕು, ಚಲಾವಣೆ ಆಗಬೇಕು ಎನ್ನುವಂತೆ ಮನೆಯವರು ನಡೆದುಬಿಡುತ್ತಾರೆ ಹೆಚ್ಚಿನ ವೇಳೆ , ಅಲ್ಲಿ ರಾಜಕೀಯ ಏರ್ಪಟ್ಟಿರುತ್ತದೆ .ಏನೇ ಆದರು ಅವನನ್ನು ಬೆಂಬಲಿಸಬೇಕು.ಅವನು ಸ್ವಂತ , ಅವಳು ಹೊರಗಡೆಯವಳು.ಅವನು ಮಾಡುತ್ತಿರುವುದು ವಶಮಾಡಿಕೊಳ್ಳುವುದಕ್ಕೆ, ಲಾಭಕ್ಕೆ.ಅದೇ ಒಳ್ಳೆಯದು. ಅವನಿಗೆ ಬೇಕಾದಂಗೆ ಅವಳು ನಡೆಯಬೇಕು .. ಅವನ ಜೊತೆ ನಾವು ಒಳ್ಳೆಯವರಾಗಿರುವುದು ಮುಖ್ಯ ಅಷ್ಟೇ ನಮಗೆ .. ..ಅವಳ ಜಾಗಕ್ಕೆ ಬೇರೆಯವರನ್ನು ತಂದುಕೂಡಿಸುವ option ನಮಗಿದೆ, ಆದರೆ ಅವಳಿಗಿಲ್ಲ ..ಆದ್ದರಿಂದ ಅವಳೇ ಬಗ್ಗಬೇಕು ….ಏನೇನೋ ರಾಜಕೀಯಗಳು ..ಸಾಮಾನ್ಯವಾಗಿ ಈ ತರದ ಭಾವನಾತ್ಮಕ ರಾಜಕೀಯ ಮನೆಹೆಂಗಸರಲ್ಲೆ ಜಾಸ್ತಿ …ಗಂಡಸರು ಕೊಂಚ practical ಆಗಿ ವರ್ತಿಸುತ್ತಾರೆ .

ಒಬ್ಬರು ಇನ್ನೊಬ್ಬರ ಮನೆಗೆ ಹೋಗಬೇಕಾದರೂ, ವಿದೇಶಗಳಲ್ಲಿ ಮುಂಚಿತವಾಗಿ permission ತೆಗೆದುಕೊಳ್ಳಬೇಕು. ಆ ಸಂಸ್ಕೃತಿ ನಮ್ಮಲ್ಲಿಲ್ಲ ಎಂದರು ಕಡೆಪಕ್ಷ ಇನ್ನೊಬ್ಬರ ಖಾಸಗಿ ಪ್ರಪಂಚಕ್ಕೆ ಲಗ್ಗೆ ಇಡುವುದು ಅತಿಕ್ರಮವಾಗಬಹುದು ಎನ್ನುವ sense ಆದರು ಇಟ್ಟುಕೊಳ್ಳಬಹುದು.ಬಂದರೆ comfortable ಆಗಿದ್ದಾರ ಗಮನಿಸಬಹುದು .
ಅದರಲ್ಲೇನು ತಪ್ಪು , ಒಂದೇ ಮನೆಯವರು ಎಂದ ಮೇಲೆ ಎಲ್ಲದರಲ್ಲೂ default permission ಇರುತ್ತದೆ , ನಾವೆಲ್ಲಾ ಒಂದೇ ಅಲ್ವಾ, ಒಂದೇ ಕುಟುಂಬ ಅಲ್ವಾ,ಒಬ್ಬರ ಸಮಸ್ಯೆ ಎಲ್ಲರದ್ದು ಅಲ್ಲವ ಎಂದು ವಾದ ಮಾಡಿಬಿಡುತ್ತಾರೆ … ಬಗೆಹರಿಸುವ ಪ್ರಕ್ರಿಯೆ , ಶಮನಗೊಳಿಸುವ ಕಾರ್ಯ ಅಲ್ಲಿ ನಡೆಯುವಂತಿದ್ದರೆ ಒಪ್ಪಿಕೊಳ್ಳಬಹುದು..ಆದರೆ ಅವಮಾನ, ಪ್ರತೀಕಾರ, ಶಿಕ್ಷೆಯಂತಹ ಹಿನ್ನಲೆ ಉದ್ದೇಶವಿರುವೆಡೆ ಪ್ರವೇಶ, ಅತಿಕ್ರಮವೆನಿಸಿ ಹಿಂಸೆಯಾಗಿಬಿಡುತ್ತದೆ.

ತಿದ್ದುಕೊಳ್ಳಬಹುದಿತ್ತು!!-watch out for symptoms ಯಾವುದು ಒಮ್ಮೆಲೇ ಸಂಭವಿಸುವಂತದಲ್ಲ…ಪದೆ ಪದೇ ಅದೇ ನಡೆದಾಗಲೇ ಪರಿಸ್ಥಿತಿ ಬುಗಿಲೇಳುವುದು !!!
ಒಬ್ಬಬ್ಬರ ಮನಸ್ಸು ಒಂದೊಂದು ರೀತಿಯಿರುತ್ತದೆ .ನೋವನ್ನು ಭರಿಸುವ ಶಕ್ತಿಯಲ್ಲಿ ಒಬ್ಬರಿಂದ ಒಬ್ಬರಿಗೆ ವ್ಯತ್ಯಾಸಗಳಿರುತ್ತವೆ .ಕೆಲವರು ಸಣ್ಣ ಮಾತಿಗೆ ತೀರ ತಲೆಕೆಡಿಸಿಕೊಂಡರೆ ದಿನಗಟ್ಟಲೆ ಕೊರಗಿದರೆ , ಕೆಲವರು ಬಹುಬೇಗ ಹೊರಗೆ ಬಂದುಬಿಡುತ್ತಾರೆ .
ಎಷ್ಟೇ ಉಗಿಸಿಕೊಳ್ಳುತ್ತಿದ್ದರು ತಲೆಗೆ ಹಾಕಿಕೊಳ್ಳದೆ ಎಮ್ಮೆ ಮೇಲೆ ಮಳೆ ಹೂಯ್ದಂಗೆ ಬದುಕುವ ಜನರು ಇರುತ್ತಾರೆ, ಸಣ್ಣ ಮಾತಿಗೆ ಮನನೊಂದು ಆತ್ಮಹತ್ಯೆ ಮಾಡಿಕೊಳ್ಳುವವರು ಇದ್ದಾರೆ !!
ಹಲವಾರು ಬಾರಿ ನಿಲ್ಲಿಸಿ ಎಂಬ ದ್ವನಿ ಮೊಳಗಿರುತ್ತದೆ .ಆಲಿಸುವ ವ್ಯವಧಾನವಿದ್ದಿರುವುದಿಲ್ಲ.
ವಿವಾಹದ ಸಂಬಂಧ ಗಾಢವಾಗಿ ಸುತ್ತಿರುವುದೇ ಗಂಡಹೆಂಡತಿಯ ಮದ್ಯೆಯಾದ್ದರಿಂದ ,ಒಬ್ಬರ ಮಿತಿ ಇನ್ನೊಬ್ಬರಿಗೆ ಅರ್ಥವಾಗಬೇಕು !! ಅರ್ಥಮಾಡಿಕೊಳ್ಳುವ effort ಇಬ್ಬರು ಹಾಕಬೇಕು !
ಹಿಂಸೆಯಾಗುತ್ತಿದೆ ಎಂದು ಪದೇ ಪದೇ ಹೇಳುತ್ತಾ , ಕೊರಗು, ನೋವು ಹತ್ತಿಸಿಕೊಂಡು ದಿನದಿಂದ ದಿನಕ್ಕೆ ಮೌನಕ್ಕೆ, ಕೀಳರಿಮೆಗೆ , ಖಿನ್ನತೆಗೆ ಜಾರುತ್ತಿರುವುದು ಅರಿವಿಗೆ ಬಂದರೆ its time to stop it !!!!!!

ಮದುವೆಯಂಬುದು ಸ್ವರ್ಗದ ಕೀಲಿಕೈ ..ಸರಿಯಾಗಿ ಉಪಯೋಗಿಸಿಕೊಂಡರೆ ಮದುವೆಯಂಬುದು ಸ್ವರ್ಗದ ಕೀಲಿಕೈ ಹೌದು …ಇಲ್ಲವಾದರೆ ನರಕದ್ದು …
ಏನೇ ಆದರು ಮಾತನಾಡಿ ಬಗೆಹರಿಸಿಕೊಳ್ಳುವ attittude ಇರಬೇಕು…ಹಾಗೆ ಸಂಗಾತಿಯ ಮಾತುಗಳು ಮನಸುಬಿಚ್ಚಿ ಹೊರಬರಲು ಮುಕ್ತ ಅವಕಾಶ ,ಸಲಿಗೆ ಕಲ್ಪಿಸಬೇಕು . ಭಾವನೆಗಳನ್ನು ಹಂಚಿಕೊಳ್ಳುವುದರಲ್ಲಿ ಸ್ನೇಹ, ಸಲಿಗೆ,ನಂಬಿಕೆ,ಖಾಸಗಿತನ ಉಳಿಸಿಕೊಳ್ಳಬೇಕು ..ಸಾಕಷ್ಟು ಸಮಸ್ಯೆಗಳು ಅಲ್ಲೇ ಬಗೆಹರಿದು ಬಿಡುತ್ತದೆ.ಮುಖ್ಯವಾಗಿ ಮೂರನೆಯವರ ಹತೋಟಿಗೆ ಸಂಬಂಧ ಹೊರಳದಂತೆ ತಾವೇ ಬಿಗಿಮಾಡಿಕೊಳ್ಳಬೇಕು.ಇಬ್ಬರಲ್ಲೆ ನಿಭಾಯಿಸಲು ಸಾಧ್ಯವಾಗದಿದ್ದರೆ trusted ಎನಿಸುವ , ಹೆಚ್ಚಿನ ಸಂಬಂಧವಿರದ experts ಬಳಿ ಹೋಗಬಹುದು …
ಮದುವೆ ಏನೆಲ್ಲ ಕೊಡುಗೆಗಳನ್ನು ಕೊಡುತ್ತದೆ … ಮುಕ್ತ ಲೈಂಗಿಕತೆ , ಜೀವನ ಸಂಗಾತಿ, ಗೆಳತಿ/ಗೆಳೆಯ, ಅಳಲು ಹೆಗಲು, ನಗಲು ಕಾರಣ , ಕಷ್ಟ ಸುಖಕೆಲ್ಲ ಜೊತೆಗಾರ, ಮಕ್ಕಳು,ಸಂಸಾರ,ಸಾಯುವವರೆಗೂ ಬೆಂಬಲ ……
ದುಡ್ಡೇ ಬೇಕೆಂದೇನಿಲ್ಲ enjoy ಮಾಡಲು .. ಗಂಜಿ ಕುಡಿವ ದಂಪತಿಗಳು ಕೂಡ ಸಾಕಷ್ಟು ಸಂತೃಪ್ತಿಯಿಂದ ಬದುಕುವುದನ್ನು ನೋಡಿದ್ದೇನೆ…ಒಳ್ಳೆ ಮನಸಿನ ಸಾಂಗತ್ಯಕೊಡುವ ಸುಖ ದ್ರವ್ಯಗಳಲ್ಲಿ , ಪದಾರ್ಥಗಳಲ್ಲಿ ಸಿಗುವುದಿಲ್ಲ …
most admirable relationship is marriage ….

ಇಬ್ಬರು workout ಮಾಡಬೇಕು …

ಮದುವೆ ಆದ ಕೂಡಲೇ , ಹೆಂಡತಿ ಗಂಡನನ್ನು ಒಲಿಸಿಕೊಳ್ಳಬೇಕು… ಉಂಡು ಸಂತುಷ್ಟನಾದವ, ಪ್ರೀತಿ ಚಿಮುಕಿಸಬೇಕು ಎಂದೇನು ಇಲ್ಲ !!! ಕಾಲ ಬದಲಾಗಿದೆ… ಮುಂಚಿನ ತರಹ ದುಡ್ಡಿಗಾಗಿ , ಊಟಕ್ಕಾಗಿ ಡಿಪೆಂಡ್ ಆಗಬೇಕಾದ ಸೆಕ್ಯೂರಿಟಿ ಅಲ್ಲ ಗಂಡ …!!! role exchange ಆಗಿವೆ.ಹೆಣ್ಣು ಕೇವಲ ಶೃಂಗಾರದ ಗೊಂಬೆಯಾಗಿ ಉಳಿದಿಲ್ಲ . ಹೊರಗೆ ದುಡಿವ ಹೆಂಡತಿಗೂ ಕೂಡ ಸಮಸ್ಯೆಗಳು,challengesಗಳು ಇರುತ್ತವೆ…ಪರಸ್ಪರ ಸ್ಪಂದಿಸಬೇಕಾದ ಅನಿವಾರ್ಯತೆ ಇಬ್ಬರಿಗೂ ಇದೆ .
ಆದರೆ ಬಹುಪಾಲು ಗಂಡಸರು ಮದುವೆ ಆದ ಕೂಡಲೇ ಇನ್ನೇನೆ ಇದ್ದರು ಹೆಂಡತಿ workout ಮಾಡಬೇಕು , ನಾನು ಕೇವಲ judge ಎಂಬಂತೆ ಆಡಲು ಶುರುಮಾಡಿಬಿಡುತ್ತಾರೆ .

ಒಲಿಸಿಕೊಳ್ಳುವುದು ಎಂದರೆ ಕೇವಲ ಗಿಫ್ಟ್ ಕೊಡುವುದು , ಅಡುಗೆಮಾಡಿ ಉಪಚರಿಸುವುದು , ಫಿಲಂಗೆ ಕರೆದುಕೊಂಡು ಸುತ್ತಾಡುವುದು ಅಲ್ಲ ..ಒಬ್ಬರು ಇನ್ನೊಬ್ಬರನ್ನು ಹೇಗೆ ಭಾವಿಸುತ್ತಾರೆ ಎನ್ನುವುದೇ ಮುಖ್ಯ … ಸ್ಪಂದನೆ ಎನ್ನುವುದನ್ನು ಹೃದಯ ಅರಿಯಬೇಕು , ಆತ್ಮ ಅನುಭವಿಸಬೇಕು !!!!
ಆದ್ದರಿಂದಲೇ ಮದುವೆಯನ್ನು ದಿನಕಲಿಕೆಯ institute ಎನ್ನುತ್ತಾರೆ !!! ಮುಕ್ಯವಾಗಿ ಆತ್ಮಗೌರವಕ್ಕೆ ದಕ್ಕೆತರಬಾರದು !!!

ಹಿಂಸಾತ್ಮಕ ಯಾಕೆ?
ಎಷ್ಟೇ ಕೋಟಿ ಆಸ್ತಿ ಇದ್ದರು, ಗಂಡನಿಗೆ/ ಹೆಂಡತಿಗೆ ಎಷ್ಟೇ ಅಧಿಕಾರ , influence ಇದ್ದರು at the end of the day matter ಅಂತ ಆಗುವುದು ಬೆಳಗ್ಗೆಯಿಂದ ಎಷ್ಟು ಕ್ಷಣ ನೆಮ್ಮದಿಯಾಗಿ,ಸಂತೋಷವಾಗಿದ್ದೆ ಎನ್ನುವುದು! ಸಂಗಾತಿಯ ಸಾನಿದ್ಯ ಎಷ್ಟು ಬೆಚ್ಚಗೆ , ಹಿತಕರವಾಗಿತ್ತು ಅಪ್ಯಾಯಮಾನವಾಗಿತ್ತು ಎನ್ನುವುದು!ಅಷ್ಟೇ , ಅದಕ್ಕೆ ದುಡ್ಡಿನ ಹಂಗಿಲ್ಲ .ದುಡ್ಡು comfort , luxury ಗಳನ್ನು ನೀಡಬಹುದು,ಅವೆಲ್ಲಾ ಹೆಚ್ಚುವರಿ ಅಷ್ಟೇ , ನಮ್ಮಂತ ಮಧ್ಯಮ ವರ್ಗದವರ್ಯಾರು ಪ್ರತಿದಿನ ಮೃಷ್ಟಾನ ತಿನ್ನುತ್ತ , ಪೀತಾಂಬರಿ ರೇಶಿಮೆ ಸೀರೆ ಉಟ್ಟು , ಕಾರಿನಲ್ಲಿ ಓಡಾಡುತ್ತ ಸುಖಿಸುತ್ತಿರುವುದಿಲ್ಲ ….
ಹಾಗೆ ನೋಡಿದರೆ ಅಂತ fancy ಕಲ್ಪನೆಗಳು ಗಂಡಸರಿಗೆ ಹೆಚ್ಚು ..ಗಂಡಿನ ತಾಯಿಗೆ ಮಗನನ್ನು ಹಾಗೆ ಕಾಣುವುದೇ ಹುಚ್ಚು !!!!
ಹೆಣ್ಣು ಮಕ್ಕಳ needs ಇಷ್ಟು simple ಆಗಿರುವಾಗ ಗಂಡ ಯಾಕೆ ಹಿಂಸಾತ್ಮಕವಾಗಿ ನಡೆದುಕೊಳ್ಳಬೇಕು ? ಹಿಂಸೆಯಿಂದ ಭಯ ಹುಟ್ಟಿಸಿ controlಗೆ ತೆಗೆದುಕೊಳ್ಳಬಹುದೇ ವಿನಃ ಯಜಮಾನನಾಗಿ ವಿರಾಜಮಾನನಾಗಲು ಸಾದ್ಯವಿಲ್ಲ .. ಪ್ರೀತಿ, ಗೌರವ , ಕರುಣೆ, ಕಾಳಜಿ, ಕಾಪಾಡುವಿಕೆ ಮಾತ್ರ ಮನುಷ್ಯನ್ನನ್ನು ಎತ್ತರಕ್ಕೆ ನಿಲ್ಲಿಸಿ , ಸಂಗಾತಿಯನ್ನು ನಿಜವಾಗಲು ಭಾವನಾತ್ಮಕ control ಗೆ ಒಳಪಡಿಸುತ್ತದೆ ……

ಜವಾಬ್ದಾರಿ ಇರಬೇಕು !!!
ಮದುವೆ ಸುಖದ ಜೊತೆಗೆ ಜವಾಬ್ದಾರಿಯನ್ನು ಹೊರೆಸುತ್ತದೆ .ಹೆಣ್ಣುಮಕ್ಕಳು ಒಂದು ಕುಟುಂಬದ ಜನರ ಊಟಉಪಚಾರ,ಒಳಿತು -ಕೆಡುಕು , ಮನೆ ನಿರ್ವಹಣೆಯ ಜವಾಬ್ದಾರಿ ಹೊರಬೇಕಾದರೆ, ಗಂಡಸರು ಸಂಪಾದಿಸಿ ಮನೆಖರ್ಚುಗಳಿಗೆ ದುಡ್ಡುಹೊಂದಿಸುವ ಸಾಮಾಜಿಕ ಹೊಣೆಹೊರಬೇಕಾಗುತ್ತದೆ .ಅಷ್ಟಷ್ಟೇ ಜವಾಬ್ದಾರಿಗೆ ಗಂಡ, ಹೆಂಡತಿ ಸೀಮಿತರಾದರೆ ಅಲ್ಲೇನು ಅಂತ ತಿಕ್ಕಾಟವಿರುವುದಿಲ್ಲ . ಆದರೆ Role exchange ಎನ್ನುವುದು ಸಾಂಸ್ಕೃತಿಕವಾಗಿ , ಭಾವನಾತ್ಮಕವಾಗಿ ಇನ್ನು accept ಆಗಿಲ್ಲ …
ಅದಾಗಲೇ ತಕ್ಕಮಟ್ಟಿಗೆ ಆಸ್ತಿವಂತರಾದ ಮನೆಗಳಲ್ಲಿ ಅಂತ ಹೊರೆಯೂ ಇರುವುದಿಲ್ಲ .ಹೆಣ್ಣು ದುಡಿಯುವಾಗ ಹಣಕಾಸಿನ ಹೊರೆ ಗಂಡಸಿಗೆ ಕಡಿಮೆಯೇ ಇರುತ್ತದೆ .
ಅವೆಲ್ಲ ಜವಾಬ್ದಾರಿ ಏನೇ ಇದ್ದರು ಸಪ್ತಪದಿತುಳಿದ ಕಾರಣಕ್ಕೆ ಸತಿಪತಿಗಳಾದವರು ಮುಖ್ಯವಾಗಿ ಹೊರಬೇಕಾದ ನೈತಿಕ ಜವಾಬ್ದಾರಿಗಳಿರುತ್ತವೆ .ಅದನ್ನು ಮೊದಲು ಅರಿಯಬೇಕು .
ಒಂದು ಹೆಣ್ಣು ಬದುಕುವ ಕನಸುಹೊತ್ತು ತನ್ನನ್ನು ನಂಬಿಕೊಂಡು ಮನೆಯವರನ್ನೆಲ್ಲ ತ್ಯಜಿಸಿ ಗಂಡನ ಹಿಂದೆ ಬಂದಿರುತ್ತಾಳೆ ಎಂದರೆ , ಗಂಡಸಾದವನಿಗೆ ಅವಳನ್ನು ತನ್ನವಳೆಂದು ಸ್ವೀಕರಿಸಿ,ಕಾಪಾಡುತ್ತಾ ಬಾಳಿಸುವ ಜವಾಬ್ದಾರಿ ಇರಬೇಕು. ಅದನ್ನು ಅಸಹಾಯಕತೆಗೆ ಸಮೀಕರಿಸಿಕೊಂಡು , ಹಿಂಸಿಸುವುದು , ಮನನೋಯಿಸುವುದು , control ಮಾಡುವುದು ಮಾಡದೆ ಸಂತೋಷದಿಂದ , ನೆಮ್ಮದಿಯಿಂದ , ನಗುನಗುತ್ತ ಬಾಳಿಸಲು ಪ್ರಯತ್ನಿಸಬೇಕು .

missguide ಮಾಡುವವರು ಇರುತ್ತಾರೆ !!!!
ಎಲ್ಲದಕ್ಕೂ ಮೂಲಕಾರಣ ತಪ್ಪಾಗಿ ನಿರ್ದೆಶಿಸುವವರು ಮನೆಯಲ್ಲೇ ಇರುವುದು!! ಅದರಲ್ಲೂ ಹೆಚ್ಚು attach ಆಗಿರುವ ಮನೆಯ ಹೆಂಗಸರುಗಳೇ ಗೊತ್ತೇ ಆಗದಂತೆ ನೀಚವಾಗಿ ಗೈಡ್ ಮಾಡುವುದು !!! ಹೊಟ್ಟೆ ಉರಿ ಎನ್ನುವುದಕಿಂತ, ತೀವ್ರವಾದ ಶಿಪ್ರ calculationsಗಳು ….!!.ಜೊತೆಗೆ ದುಡ್ಡಿನ , ವ್ಯವಹಾರದ ಕೀಲಿ ಕೈ ಭದ್ರಪಡಿಸಿಕೊಳ್ಳಲು ಅವಳನ್ನು compitator ತರಹ ನೋಡುತ್ತಿರುತ್ತಾರೆ .ಅಸ್ಸೂಯೆ ತಾಂಡವವಾಡುತ್ತಿರುತ್ತದೆ !! ಅವಳು ಏನೋ ಕಡಿಮೆ ಮಾಡುತ್ತಿದ್ದಾಳೆ ಎನ್ನುವ ಅಸಮಾಧಾನ ಕಾಡುತ್ತಿರುತ್ತದೆ .ಹೇಳಿಕೊಡುವುದು ಸಹಜ.ತಮ್ಮೆಲ್ಲ ಕಣ್ಣೀರು , sentiments , ಅನುಭವದ ಬೆಣ್ಣೆ ಮಾತುಗಳನ್ನು ಉಪಯೋಗಿಸಿ ‘ಎಚ್ಚರ!. ಹೀಗೆ control ಮಾಡು, ಹೀಗೆ ಬಿಗಿಯಾಗಿರು , ಇಲ್ಲಾಂದರೆ ಅಷ್ಟೇ …’ ಅಂತೆಲ್ಲ ಹೆದರಿಸುವುದು ಸಾದ್ಯ . ಹೊಸದಾಗಿ ಬಂದವಳ ಬಗ್ಗೆ ಅವರುಗಳಿಗೆ ಅಂತ ಪ್ರೀತಿ, ಕಾಳಜಿ ಇನ್ನು ಬಂದಿರುವುದಿಲ್ಲ.ಅದಕ್ಕಿಂತ ಹೆಚ್ಚಿಗೆ ಮಗನ ಕ್ಷೇಮಾಭಿವೃದ್ದಿಯೆ ಮುಖ್ಯ .ಅವನು ಸುಖವಾಗಿರುವುದು ಮುಖ್ಯ .ಅದು ಅವನಿಗೆ ಚೆನ್ನಾಗಿ ತಿಳಿದಿರುವುದರಿಂದಲೇ ಅವರ ಹೇಳಿಕೆಗಳನ್ನು ತನ್ನ ಉದ್ದಾರಕ್ಕೆ ಎಂದು ನಂಬಿಕೊಂಡು ಹೆಚ್ಚುಕಿವಿಕೊಡುತ್ತಿರುತ್ತಾನೆ .ಅದರಲ್ಲೂ ಹೇಳಿಕೊಡುತ್ತಿದ್ದಾರೆ ಎನ್ನುವುದು ಅರಿವಿಗೆ ಬರದಹಾಗೆ ಅಚ್ಚುಕಟ್ಟಾಗಿ ತಲೆಗೆ ದಾಟಿಸಿರುತ್ತಾರೆ. ಎದುರಿಗಿದ್ದಾಗ ಅತಿ ಕಾಳಜಿ ತೋರಿಸಿ , ಮಾತಿನಲ್ಲೆಲ್ಲ ಅವಳ ಪರವಾಗೇ ಪ್ರೀತಿ ತೋರಿಸಿ, ನಿನಗೆ ಅನ್ಯಾಯ ಆಗುತ್ತಿದೆ ಎನ್ನುವ ತರಹ brain wash ಮಾಡಿರುತ್ತಾರೆ…ವ್ಯವಹಾರ, ಅಧಿಕಾರದ ಬಗ್ಗೆ ಆಸೆ ಹುಟ್ಟಿಸಿ , compare ಮಾಡಿ ತೆಲೆಕೆಡಿಸಿರುತ್ತಾರೆ.ಯಾಕೆ ಅನ್ಯೋನ್ಯತೆ ಬರಲಿ ಅನ್ನುವುದಕ್ಕೆ ಅವಕಾಶ ಮಾಡಿಕೊಡದೆ ಈ ರೀತಿ ಎಲ್ಲ ಮಾಡುತ್ತಾರೋ ದೇವರೇ ಬಲ್ಲ…
ಆದರೆ ಎಷ್ಟು ಕೇಳಬೇಕು, ಎಷ್ಟು ಅಳವಡಿಸಿಕೊಳ್ಳಬೇಕು, ಹೇಗೆ ಯಾರಿಗೂ ಹಿಂಸೆಯಾಗದಂತೆ handleಮಾಡಿ ಎಲ್ಲರನ್ನು ಸುಸ್ತಿತಿಯಲ್ಲಿಡಬೇಕು ಎನ್ನುವ ಅರಿವು ಗಂಡಸಾದವನಿಗೆ ಇರಬೇಕು ….
ಅದಕ್ಕೂ

ಅಲ್ಲಿರುವುದು ಭಯ !!!

ಅದ್ಯಾಕೆ ಹೊಸ ಗಂಡಂದಿರು ಆ ಪರಿ ಭಯ, ಜಿಗುಪ್ಸೆಗಳನ್ನು ಅನುಭವಿಸುತ್ತಾರೊ ದೇವರೇ ಬಲ್ಲ …
ಪ್ರೀತಿಯಿಂದ ‘ನನ್ನೆದೆ ಅರಸಿ ನೀನು’ ಎಂದು ತಬ್ಬಿಬಿಟ್ಟರೆಸಾಕು , ಹೆಂಡತಿಯಾದವಳು ಗಂಡನ್ನನ್ನು ಇನ್ನಿಲ್ಲದಂತೆ ಶುಶ್ರೂಷೆ ಮಾಡಿಬಿಡುತ್ತಾಳೆ .
ಅದು ಬಿಟ್ಟು ಓದಿರೋ ಹೆಣ್ಣು ಎಲ್ಲಿ dominate ಮಾಡುತ್ತಾಳೋ , ಅವಮಾನ ಮಾಡಿಬಿಡುತ್ತಾಳೋ, ಯಾರೊಂದಿಗೆ ಓಡಿ ಹೋಗುತ್ತಾಳೋ , ತಾಯಿಯನ್ನು ಕಡೆಗಣಿಸುತ್ತಾಳೋ , ಮನೆಗೆ ದುಡ್ಡುಕೊಡದೆ ಶೋಕಿ ಮಾಡುತ್ತಾಳೋ , ವ್ಯವಹಾರ ಕೈಗೆ ತೆಗೆದುಕೊಂಡು ಮೂಲೆ ಗುಂಪು ಮಾಡಿಬಿಡುತ್ತಾಳೋ ಎನ್ನುವ ಗಾಭರಿ, ಬೀತಿಗಳಿಗೆ ಬಿದ್ದಂತೆ ಪ್ರತಿಕ್ಷಣ ನೋಯಿಸಿ, ಕೀಳರಿಮೆ ತರಿಸಿ , ಅವಮಾನಮಾಡಿ, ಹೆದರಿಸಿ control ಮಾಡಲು ತೊಡಗುತ್ತಾರೆ … ಹೇಳಿಕೊಟ್ಟಿರುತ್ತಾರಲ್ಲ, ಅದನ್ನು ಆ ಪರಿ ಮನಸಿನಾಳಕ್ಕೆ ಅರ್ಥೈಸಿಕೊಂಡು ತಮಗೆ ಗೊತ್ತೇ ಆಗದಂತೆ ಪ್ರತಿ ಕ್ಷಣ ನಲುಗಿಸುತ್ತಿರುತ್ತರೆ …

ಮದ್ಯೆ ಬಂದವರು ಶಾಶ್ವತ ಅಲ್ಲ !!!!
ಗಂಡ ಹೆಂಡತಿಯ ಮದ್ಯೆ ಬಂದು ಕಿತಾಪತಿ ಮಾಡುವ ನೆಂಟರು , ಸ್ನೇಹಿತರು ಎಂದಿಗೂ ಶಾಶ್ವತವಲ್ಲ … ಈ ಸತ್ಯ ಅರಿವಿದ್ದರೆ ಬೇರೆಯವರಿಗೆ ಮಣೆಹಾಕಬೇಕಿಲ್ಲ …
ಕಿವಿಚುಚ್ಚುವವರು , ಹೇಳಿಕೊಡುವವರು “ಮಾತು” ಒಂದನ್ನು ಬಿಟ್ಟು ಮತ್ತೇನು ಖರ್ಚುಮಾಡಿರುವುದಿಲ್ಲ …ಕಡೆಗೆ ಅವರಿಗೆ ಯಾವುದೇ ನಷ್ಟವೂ ಆಗಿರುವುದಿಲ್ಲ..ಎಲ್ಲ ಮುಗಿದ ಮೇಲೆ ತಮ್ಮ ತಮ್ಮ ಮನೆಗೆಹೋಗಿ, ತಮ್ಮ ಬದುಕಿಗೆ ಮರಳಿರುತ್ತಾರೆ….ಅವರಿಗೇನು differnece ಆಗುವುದಿಲ್ಲ ..ಆದರು ವಿಕೃತ ಆನಂದ ಅನುಭವಿಸಲು ಮದ್ಯೆ ಬಂದು ಆಟ ಆಡಿಸಿರುತ್ತಾರೆ… ಇಲ್ಲ ಸಲ್ಲದನ್ನು ಮನಸಲ್ಲಿ ತುಂಬಿ , ಪರಿಣಾಮ ನೋಡಿ ಖುಶಿಪಟ್ಟಿರುತ್ತಾರೆ..
ಅಂತವರೇ ನಿಜವಾದ ಶತ್ರುಗಳು !!!!
ಕಡೆವರೆಗೂ ಜೊತೆ ಇರುವುದು ಗಂಡನಿಗೆ ಹೆಂಡತಿ , ಹೆಂಡತಿಗೆ ಗಂಡ !!! ಅದನ್ನು ಮನಗೊಂಡುಬಿಟ್ಟರೆ ಒಬ್ಬರು ಇನ್ನೊಬ್ಬರಿಗೆ ಹಿಂಸೆಯಾಗದಂತೆ ನಡೆಯಬೇಕಾದ ಜವಾಬ್ದಾರಿ ತಿಳಿಯುತ್ತದೆ . ಜೀವನ ಸ್ವರ್ಗವಾಗಿಬಿಡುತ್ತದೆ ….ಅಕ್ಕ, ತಂಗಿ , ಅಮ್ಮ, ನೆಂಟರು ಎಲ್ಲರಿಗು limits ಇರುತ್ತದೆ ….ಭಾವನಿಗೆ ಅತ್ತೆಮನೆಯ ಮೇಲೆ ಮುನಿಸು ಬಂದರೆ ಅಕ್ಕನನ್ನು ತವರಿಗೆ ಕಳಿಸುವುದಿಲ್ಲ, ಅವರವರ ಜೀವನದ ಸಮಸ್ಯೆಗಳಿಗೆ ನೆಂಟರು ಸಿಲುಕಿಕೊಂಡರೆ , ಮಾಡಲು ಹೆಚ್ಚುವರಿ ಕೆಲಸ ಬಿದ್ದರೆ ಬೇರೆಯವರ ಮನೆಯ ವಿಚಾರಗಳಿಗೆ ಬೆರಳಾಡಿಸಲು ಬರುವುದಿಲ್ಲ

ಗುರಿ ಸರಿ, ದಾರಿ ತಪ್ಪು
ತನ್ನ ಸಂಗಾತಿಯನ್ನು ತಾನು ವಶಮಾಡಿಕೊಳ್ಳಬೇಕು, ಆಳಬೇಕು , ಪ್ರತಿಯೊಂದು ತನಗೆ ತಿಳಿಯಬೇಕು , ತನ್ನಿಚ್ಚೆಯಂತೆ ನಡೆದುಕೊಳ್ಳುವ ಹಾಗಾಗಬೇಕು ಎಂದೆಲ್ಲ ಬಯಸುವುದು ತಪ್ಪಲ್ಲ .ಪ್ರತಿಯೊಬ್ಬರೂ ಸಂಗಾತಿಗಳ ಸ್ವಾಧೀನವನ್ನು ಒಂದಲ್ಲ ಒಂದು ರೀತಿಯಲ್ಲಿ ಬಯಸುವವರೆ ಆಗಿರುತ್ತಾರೆ.ಕೆಲವರ ಜಾಯಮಾನವೇ ಹಾಗಿರುತ್ತದೆ .ಕೆಲವರಲ್ಲಿ ಅದು ಹೆಚ್ಚ್ಜಗೆ ಇರಬಹುದು,ಆದರೆ ಕಂಡಿತ ಅದು ತಪ್ಪಲ್ಲ .
ಆದರೆ ಅತಿ ಶೀಘ್ರದಲ್ಲಿ , ಮದುವೆಯಾದ ಮರುಘಳಿಗೆಯಿಂದಲೇ ತ್ವರಿತಗತಿಯಲ್ಲಿ ಆಚರಣೆಗೆ ತಂದುಕೊಳ್ಳಲು ಹಿಡಿಯುವ ದಾರಿಗಳಿವೆಯಲ್ಲ ಅವೇ ಭಯಾನಕ !!! ಬಲವಂತದಿಂದ , ಅಧಿಕಾರದಿಂದ , ಹಕ್ಕಿನಿಂದ , ಭಯಪಡಿಸುವ ಮೂಲಕ , ಕೆಟ್ಟದಾರಿಗಳಾದ ಅನುಮಾನ, ಬೈಯ್ಗುಳ,ಚಾಡಿ , ಅವಹೇಳನ ,ಶಿಕ್ಷೆ , dictatorship , ಮಾಟಮಂತ್ರ , ಪತ್ತೇದಾರಿ ಗಳನ್ನು ಪ್ರಯೋಗಿಸುವುದರ ಮೂಲಕ ….ಎಲ್ಲಾ ಸಮಸ್ಯೆಗಳು ಶುರುವಾಗುವುದು ಅಲ್ಲೇ .ಎಂತವರಿಗೂ ಇವುಗಳು ನೋವನ್ನೇ ಉಂಟು ಮಾಡುತ್ತವೆ .ಕೆಲವರಿಗೆ ಹಿಂಸೆ, ಉಸಿರುಕಟ್ಟಿ ಹೋಗುತ್ತಿರುವ ಅನುಭವವಾಗಬಹುದು,ಆತ್ಮಸ್ಥ್ಯರ್ಯ ಕುಂದಿ,ಜೀವನ ಪ್ರೀತಿ deterior ಆಗಬಹುದು , ಮಾನಸಿಕ ಖಾಯಿಲೆಗಳಿಗೆ ಒಳಗಾಗಬಹುದು ….ಹಿಂಸೆ ಎನಿಸುವ ಮಟ್ಟಿಗೆ ಎಲ್ಲೇ ಮೀರಬಾರದು ಅಷ್ಟೇ !
ಗಂಡ ಅಥವ ಹೆಂಡತಿ ಎಂದರೆ ತಾನು ಹೇಳಿದಂಗೆ ಕೇಳಬೇಕು,ನಡೆಯಬೇಕು ಎನ್ನುವ ಖಾನೂನಲ್ಲ, ಅಧಿಕಾರ ಚಲಾಯಿಸುವ ಹುದ್ದೆಯಲ್ಲ ..ಆಜ್ಞೆ ಹೊರಡಿಸುವ ಫರ್ಮಾನಲ್ಲ … ಯಾರು ಹೆಚ್ಚಲ್ಲ..ಯಾರು ಕಡಿಮೆಯಲ್ಲ.. ಯಾರು ಮುಖ್ಯರೂ ಅಲ್ಲ ಯಾರು ಅಮುಖ್ಯರೂ ಅಲ್ಲ !!!
ನಿಜವಾದ ದಾಂಪತ್ಯದ ಸಾರ್ಥಕತೆಯೇ ಆರಾಧನೆ ಮತ್ತು ಶರಣಾಗತಿ. ಸಂಗಾತಿಗಳಿಗೆ ಮುಖ್ಯವಾಗಿ ಬೇಕಿರುವುದೇ ಮಾನಸಿಕ, ಮತ್ತು ದೈಹಿಕ ಸಾಂಗತ್ಯ . ಅನ್ಯೋನ್ಯತೆ ಸಾದಿಸಿರುವ ದಂಪತಿಗಳು , ಪ್ರತಿಯೊಂದನ್ನು ಮುಚ್ಚುಮರೆ ಇಲ್ಲದೆ share ಮಾಡಿಕೊಳ್ಳುತ್ತಿರುತ್ತಾರೆ. ಒಬ್ಬರ ಮೇಲೆ ಇನ್ನೊಬ್ಬರು ಮಾನಸಿಕವಾಗಿ ಅವಲಂಬಿತರಾಗಿರುತ್ತಾರೆ , ಆರಾಧಿಸುತ್ತಿರುತ್ತಾರೆ , ಒಬ್ಬರ ಕ್ಷೇಮ ಸೌಖ್ಯವನ್ನು ಪ್ರತಿಪಾದಿಸುತ್ತಿರುತ್ತಾರೆ …ಅವೆಲ್ಲ ಸಾಧ್ಯವಾಗುವುದು ಪರಸ್ಪರ ಪ್ರೀತಿ, ಗೌರವ, ಕಾಳಜಿಗಳಿಂದ ಮಾತ್ರ.. ಪ್ರೀತಿಯ ಉತ್ಕೃಷ್ಟ ಭಾವವೇ ಶರಣಾಗತಿ, ಮತ್ತು ಆರಾಧನೆ.. ದೇವರಿಗೆ ಶರಣಾದಂತೆ !!!! ದೇವರನ್ನು ಯಾಕೆ ಆರಾಧಿಸುತ್ತೇವೆ ಎಂದರೆ ,ನಮ್ಮನ್ನು ಕಾಪಾಡುತ್ತಾನೆ ಎನ್ನುವ ಅಭಯ, ನಂಬಿಕೆ ಇರುತ್ತವೆ.ಅದೇ ಬೆಚ್ಚನೆಯ ಭದ್ರತಾ ಭಾವವನ್ನು ಸಂಗಾತಿಯ ಮನಸಲ್ಲಿ ಸೃಷ್ಟಿಸಿದರೆ ಒಬ್ಬರಲ್ಲಿ ಒಬ್ಬರು ಐಕ್ಯವೆ ಆಗಿಬಿಡುತ್ತಾರೆ !!!
ಇಷ್ಟು ಸಿಂಪಲ್ concept ನ ಅರ್ಥಮಾಡಿಕೊಂಡು ಬಾಳದೆ , ಅಮ್ಮ, ಅಕ್ಕ ಕೂಡ ಹೆಂಡತಿಯನ್ನು control ಮಾಡಲು ತೊಡಗಬೇಕು , ಅವರೇ ಹೆಂಡತಿಗಿಂತ ಮುಖ್ಯ, ದುಡ್ಡಿನ ಸುಖವೇ ಪರಮಸುಖ ಎಂದು ನಂಬಿಕೊಂಡವರು ತಮ್ಮ ಕೈಯ್ಯಾರೆ ತಾವೇ ತಲೆಮೇಲೆ ಕಲ್ಲು ಹಾಕಿಕೊಳ್ಳುತ್ತಿರುತ್ತಾರೆ…ತಾವು ನೆಮ್ಮದಿಯಿಂದ ಇರಲಾರರು , ಇತರರನ್ನು ಇಡಲಾರರು….!!!!

ಹಾಳುಮಾಡಿದವರು ಸರಿ ಮಾಡಲಾರರು !!!

ಒಂದು ತೊಟ್ಟು ಹುಳಿಸಾಕು ಎಂತಾ ದೊಡ್ಡ ಗಡಿಗೆಯ ಹಾಲನ್ನು ಒಡೆಯಲು .ಆದರೆ ಒಡೆದ ಹಾಲನ್ನು ಮತ್ತೆ ಸರಿಪಡಿಸುವುದು ಸಾಧ್ಯವಿಲ್ಲ .ತಲೆ ತೂರಿಸಿ ಬಂದವರ ಮಾತು,ಸಣ್ಣತನ,ಕಿತಾಪತಿಗಳು ಮದುವೆಯನ್ನೇ ಮುರಿದು ಬಿಡಬಹುದು.ಕ್ಷುಲ್ಲಕ ಕಾರಣ ಎಲ್ಲೆಲ್ಲೊ ಹೋಗಿ ಏನೇನೋ ಆಗಿ ಎಲ್ಲರ ತಲೆಗೂ ಬರಬಹುದು. ಗಂಡ ಹೆಂಡತಿ ನಡುವೆ ಜಗಳವೆ ಆಗಿರದ್ದಿದ್ದರು , ಅತ್ತೆ, ನಾದಿನಿಯ ಜಗಳಗಳು ಕೂಡ ಅಹಂನಿಂದ ಗಂಡ ಹೆಂಡತಿಯನ್ನು ಬೇರೆ ಮಾಡಲು ಶಕ್ತವಾಗಿರುತ್ತವೆ .ಭಯ,ಪ್ರಭಾವಕ್ಕೊಳಗಾದ ಗಂಡನಿಗೆ ಹೆಂಡತಿಗಿಂತ ಆಗ ಬೇರೆಯವರೇ ಮುಖ್ಯ ಎನಿಸುತ್ತಿರುತ್ತದೆ ….
ಬೇರೆಯವರನ್ನು ದೂರುವುದು , ನೋಯಿಸುವುದು , ಅವಮಾನಿಸುವುದು , ಅಧಿಕವಾಗಿ expect ಮಾಡುವುದು ಬಹಳ ಸುಲಭ ..ನಾಲ್ಕು ಜನರನ್ನು ಸೇರಿಸಿಕೊಂಡು ಸಮರ್ಥಿಸಿಕೊಳ್ಳುವುದು , ಆಚಾರ, ವಿಚಾರ , ಸಂಪ್ರದಾಯ , ಜವಾಬ್ದಾರಿಗಳ ಹೆಸರೇಳಿ ಶೋಷಿಸುವುದು ಸುಲಭ.. ಜಿ .ಎಸ್ .ಎಸ್ ಹೇಳುವ ಹಾಗೆ ಎಷ್ಟು ಕಷ್ಟವೋ ಹೊಂದಿಕೆ ಎಂಬುದು ನಾಲ್ಕು ದಿನದ ಈ ಬಾಳಿನಲಿ ಆಗಿಬಿಡಬಹುದು ಜೀವನ .ಇನ್ನೊಬ್ಬರ ಕಷ್ಟ ಅರಿತು, ಸ್ಪಂದಿಸಿ , ಸಹಾಯ ಮಾಡಿ, ಅರ್ಥಮಾಡಿಕೊಂಡು , ಆತ್ಮ ಗೌರವದಿಂದ , ಹೆಮ್ಮೆ, ತೃಪ್ತಿಯಿಂದ ಬಾಳಲು ಬಿಡುವುದೇ ನಿಜವಾದ ಮನುಷ್ಯತ್ವ !!!
ಮುರಿದವರು ತಮ್ಮಿಂದಾದ ಅಚಾತುರ್ಯದ ಪಾಪಪ್ರಜ್ಞೆಯಿಂದ, ಅಪಾಧನೆಯಿಂದ ಹೊರಬರಲು ಇನ್ನಷ್ಟು ತುಪ್ಪ ಸುರಿದು ದೊಡ್ಡದು ಮಾಡಿ, ಕಿಚ್ಛು ನಂದದಂತೆ ನೋಡಿಕೊಳ್ಳುತ್ತಿರುತ್ತಾರೆ ,ದಿ ಎಂಡ್ ಮಾಡಲು ನಿರ್ಧರಿಸುತ್ತಾರೆ …ಆದರೆ ಅವರ್ಯಾರು ಖಾಲಿಯಾದ ಜಾಗ ತುಂಬಲು ಸಾದ್ಯವಿಲ್ಲ… ಸರಿಪಡಿಸುವುದು ಮುರಿದವರಿಂದ ಸಾಧ್ಯವಾಗುವುದಿಲ್ಲ …

ನಷ್ಟ ಅವರಿಬ್ಬರಿಗೆ ಮಾತ್ರ !!!>
ಗಂಡು ಮರುಮದುವೆಯಾಗಬಹುದು , ಹೆಣ್ಣಿಗೆ ಸಾಧ್ಯವಿಲ್ಲ …ತವರು ಮನೆಯಲ್ಲಿ ಉಳಿದ ಹೆಣ್ಣನ್ನು ಮರ್ಯಾದೆಯಿಂದ ಸಮಾಜ ಕಾಣುವುದಿಲ್ಲ ಇವೆಲ್ಲ ಕೇವಲ mythಗಳು … ನೈಜ್ಯ ವಾಗಿ ನೋಡಿದರೆ, ಇಬ್ಬರಿಗೂ ಭರಿಸಲಾರದ ನಷ್ಟವಾಗಿರುತ್ತದೆ.ಕಾನೂನಿನ ಪ್ರಕಾರ ಸಂಬಂಧ ಕಡೆದುಕೊಳ್ಳುವುದು ಅಷ್ಟು ಸುಲುಭವು ಅಲ್ಲ, ಶೀಘ್ರವು ಅಲ್ಲ … ಮರು ಮದುವೆ ಎನ್ನುವುದು ಯಾರಿಗೂ ಅಷ್ಟು ಸುಲಭವಲ್ಲ ..ಒಂದು ವೇಳೆ ಆದರು ಅದು ಗೆಲ್ಲುವ probability ಕಡಿಮೆಯೇ … .ಯಾವ ಮನುಷ್ಯನು ಸಂಗಾತಿಯಿಲ್ಲದೆ ಇಡಿ ಜೀವನವನ್ನು ಏಕಾಂಗಿಯಾಗಿ ಬದುಕಲಾರ… ಮರ್ಯಾದೆ ಎನ್ನುವುದು ಎಲ್ಲರಿಗು ಮುಖ್ಯವೇ !!!! ಎಲ್ಲದಕಿಂತ ಭಯ , ಜಿಗುಪ್ಸೆಗಳಲ್ಲಿ ನರಳುವುದು , ಮೋಸ , ತಿರಸ್ಕಾರದಂತ ಭಾವನೆಗಳಲ್ಲಿ ಬಂಧಿಯಾಗಿ ಪರಿತಪಿಸುವುದು ಎಂತ ಕಟಿಣ ಶಿಕ್ಷೆಗಿಂತ ಅಧಿಕವೇ !!! ತಮ್ಮ personal life ನ ನೋವನ್ನು , ಭಾರವನ್ನು ತಾವೊಬ್ಬರೇ ಹೊರಬೇಕು …!!ನಿಜವಾಗಿ ನಷ್ಟವಾಗುವುದು ಕಡೆಗೆ ಗಂಡ ಹೆಂಡತಿಗೆ ಮಾತ್ರ … ಒಂಟಿಯಾಗಿ ಪರಿತಪಿಸುವುದು ಅವರಿಬ್ಬರ ಅತೃಪ್ತ ಆತ್ಮಗಳೇ…
ಆ ಜ್ಞಾನೋದಯವಾಗುವಷ್ಟರಲ್ಲಿ ಪರಿಸ್ಥಿತಿ ಕೈ ಮೀರಿರುತ್ತದೆ …. ಆ ನೋವಿಗೆ ಸಮೀಕರಿಸಿಕೊಂಡರೆ ಪ್ರೀತಿಯಿಂದ ಬಾಳುವುದು ಎಷ್ಟು ಸುಲಭ !

never the late !!
ಅರಿತು ಬಾಳುವುದು, ತಪ್ಪನ್ನು ಒಪ್ಪಿಕೊಂಡು ತಿದ್ದಿಕೊಳ್ಳುವುದು , ಮತ್ತೊಂದು chance ತೆಗೆದುಕೊಂಡು ನೋಡುವುದು ವರ್ಷಗಟ್ಟಲೆ ಅಭಾವದಲ್ಲಿ ನರಳುವುದಕ್ಕಿಂತ ಹೆಚ್ಚು better .ನಿರಂತರವಾಗಿ ಪಲಾಯನ ಯಾರು ಮಾಡಲಾಗುವುದಿಲ್ಲ .
ಒಬ್ಬರಿಗೆ ಬೇಡ ಎನಿಸಿದರು, ಇನ್ನೊಬ್ಬರಿಗೆ ಬೇಕು ಎನಿಸಿದರು ಎರಡಕ್ಕೂ ಇಬ್ಬರ ಸಮ್ಮತಿ ಬೇಕೇ ಬೇಕು.. ಅದನ್ನು ಪಡೆಯುವ , ಒಪ್ಪಿಸುವ ಮುಂದಾಳತ್ವವನ್ನು ಅವರೇ ತೆಗೆದುಕೊಳ್ಳಬೇಕು .ಕಾನೂನಿನಲ್ಲೂ, ಧಾರ್ಮಿಕವಾಗಿಯೂ ಮದುವೆಯ ಬಂಧ ಮುಕ್ಯವಾಗಿ ಗಂಡ ಹೆಂಡತಿಯ ನಡುವೆಯೇ difine ಆಗಿರುವುದು . ಯಾರೆಷ್ಟೇ ಶಕ್ತರಾಗಿದ್ದರು , ಮೂರನೆಯವರ ಅಸಮ್ಮತಿಯಿದ್ದರು ಕಡೆಗೆ sign ಹಾಕಬೇಕಿರುವುದು ಅವರಿಬ್ಬರೇ.. ಆದ್ದರಿಂದ ಜವಾಬ್ದಾರಿ ಹೊತ್ತು ನಡೆಯಬೇಕಾದವರು,ತಮಗೇನು ಬೇಕು, ಏನು ಬೇಡ ನಿರ್ಧಾರ ಮಾಡಬೇಕಾದವರು ಅವರಷ್ಟೇ .

ಒಳ್ಳೆತನ ಅಷ್ಟೊಂದು ಅಮೂಲ್ಯವ ??

ನಾನು ಅವನನ್ನನ್ನು ಪ್ರೀತಿಸಿದರಲ್ಲಿ ಶೇಕಡಾ 5 % ನನ್ನನ್ನು ಅವನು  ಪ್ರತಿ ಪ್ರೀತಿಸಿದ್ದಿದ್ದರು ಎಷ್ಟು ಸುಂದರವಾಗಿರುತ್ತಿತ್ತು !!!!
ಛೇ ಎಂತವನು  ಅವನು ?
ನನ್ನಷ್ಟು ಒಳ್ಳೆ ಹುಡುಗಿ ಅವನಿಗೆ ಸಿಗಲು  ಸಾದ್ಯವೇ ಎಲ್ಲ .. ಕಳೆದುಕೊಂಡು ಬಿಟ್ಟ, ಒಂದು ಕರಣ ಕೂಡ ಇಲ್ಲದೆ …!!! ಅವರಿವರ ರಾಯಭಾರಿ , ರಾಜಕಾರಣ, ಕುಂಟುನೆಪಗಳಿಗೆ   …!!!!

ನಾನೆಂದು ಅವನಿಗೆ ಯಾವುದಕ್ಕೂ ತಡೆ ಹಿಡಿದಿದ್ದೆ ಇಲ್ಲ ..ಅವನ ಸ್ಪೇಸ್ ಅವನಿಗೆ ಉಳಿಸಿದ್ದೆ.. ಅವನಿಗಿಷ್ಟವಾದದ್ದನ್ನೇ ಮಾಡಲು ಬಿಟ್ಟು ಅವನ ಸಂತೋಷದಲ್ಲಿ ನನ್ನ ಸಂತೋಷ  ಕಾಣುತ್ತಿದ್ದೆ …ಅವನಿಗೆ ಬೇಕಿದ್ದನ್ನು ಹೊಂದಿಸುತ್ತಿದ್ದೆ..ಅವನದೇ ಧ್ಯಾನ , ಅವನ ಪ್ರೀತಿಯದ್ದೇ ಅಂಗಲಾಚುವಿಕೆ …ಎಂತೆಂತ romantic ways  of  expression  ನಲ್ಲಿ ಪ್ರೀತಿ  ಮಾಡಬೇಕು ಅನಿಸಿದರು , ಬಿಗಿ ವಾತಾವರಣ… ಅವನಿಗೆ ಇಷ್ಟ ಆಗದ romance !!!    ತಲೆತುಂಬಾ , ಮನಸಿನ ತುಂಬಾ ಅವನ ಹುಂಬತನಾನ ರೆಪೈರ್ ಮಾಡುವುದು ಹೇಗೆ ಎನ್ನುವ ಕಳವಳವೇ .. ಎಲ್ಲವು ಅವನೇ ಅವನೇ ಅವನೇ ….. ಅವನಿಗೆ ಗೊತ್ತೇ ಆಗಲಿಲ್ಲ ಎಂದಿಗೂ  ಅವನನ್ನು ಎಷ್ಟು ದೇನಿಸುತ್ತಿದ್ದೆ ನಾನು  ಎಂದು.. ನನ್ನಲ್ಲಿ , ನನ್ನ ಬದುಕಲ್ಲಿ ಎಷ್ಟು ಆಕ್ರಮಿಸಿಕೊಂಡಿದ್ದ ಅವನು ಎಂದು … ಹೇಳಿಕೊಳ್ಳಲು ಮತ್ತೆಂದು ಅವಕಾಶವೇ ಸಿಗುವುದಿಲ್ಲವೇನೋ .. ಈ ಹಿಂದೆ ಕೂಡ ಹೀಗೆ ..ಯಾಕೆ ಮಾತಾಡಲು ಸಹ ‘ಸೂಕ್ತ’ ವಾತವರಣೆ, ಸಲಿಗೆ,ಸಮಯ,ಅವಕಾಶ  ಕೊಡದೆಹೋದ ..ಅವನು ಮಾಡಿದ ದೊಡ್ಡ ತಪ್ಪೇ ಅದು …ಅದೇ ಮೂಲ …

ಪ್ರೀತಿ ಮಾಡೋದು ಅಷ್ಟು ಕಷ್ಟವಾಗಿತ್ತ ಅವನಿಗೆ?
hurt ಆಗದೆ ಇರುವ ಹಾಗೆ, ಕಡೆ ಪಕ್ಷ ಹಿಂಸೆ ಆಗದ ಹಾಗೆ ಜೀವನ ಸಂಗಾತಿಯ ಹತ್ತಿರ ವರ್ತಿಸೋದು ಹೇಗೆ ಎಂದು  ನ್ಯಾಯ ಪಂಚಯ್ತಿಲಿ ಯಾರಾದರು ಹೇಳಿಕೊಡಬೇಕಾ?

ಕೆಲಸಕ್ಕೆ ಬರದ ಕಾರಣಗಳಿಗೆ ಅಪಾರ್ಥ ಮಾಡಿಕೊಳ್ಳುತ್ತಿದ್ದ … ನಿಜವಾಗಲು ಕೆಲಸಕ್ಕೆ ಬಾರದವ ಅವು?ಅಥವಾ  ಅವನಿಗೆ ಬೇಕಾದ ಕೆಲಸ ಈಡೇರಿಸಿಕೊಳ್ಳಲು  ಬೇಡವಾದದನ್ನು ಬೇಕಾದಂಗೆ ಮಾಡಿಕೊಂಡನ ?
ಏನು ಬೇಕಿತ್ತು ಅವನಿಗೆ ? ಎಲ್ಲಾ ನೀಡಲು ಸಿದ್ದಳಿದ್ದೆ ಅವನಿಗೋಸ್ಕರ , ಕೇವಲ ಅವನ ಪ್ರೀತಿ, ವಿಶ್ವಾಸಕ್ಕೋಸ್ಕರ….. ಹಾಗೆ ನಾನಾಗೆ ನಾನು ಹೇಳಿಕೆ ನೀಡಿ ಬದುಕುಳಿಯುವಂತೆ ಸ್ಥಿತಿ ನಿರ್ಮಾಣ ಮಾಡಿದ್ದು ಅವನ ಬುದ್ಧಿವಂತಿಕೆ ಇರಬೇಕು  !!! ಮತ್ತು  ಹಾಗೆ ಹೇಳಿದಕ್ಕೆ ಇರಬೇಕು ಏನೆಲ್ಲಾ ಮಾಡಬಲ್ಲೆ ಎಂದು monitor ಮಾಡಲು, ಇನ್ನಷ್ಟು ಮಾಡಬೇಕು ಎಂದು expect ಮಾಡಲು, ಇನ್ನೇನೋ ಮಾಡಿಲ್ಲ ಎಂದು measure ಮಾಡಲು ಅವನು ಮತ್ತು  ಅವರು ಶುರುಮಾಡಿದ್ದು ..
ಯಾರೋ ಅಂದರು ಮದುವೆ ಎಂದ ಮೇಲೆ ಇಬ್ಬರು ಪರಸ್ಪರ ಒಬ್ಬರನ್ನೊಬ್ಬರು  unconditionally  ಪ್ರೀತಿಸಬೇಕು …its  two   way ,ಕಾರಣ ಯಾಕೆ ಬೇಕು?
ನಾನು ಹಾಗೆ ಅಂದುಕೊಂಡಿದ್ದೆ ಮುಂಚೆ …
ಆದರೆ ಇವನು, ಇವನ ಕಡೆಯವರು ಕೊಂಚ different !
ಪ್ರೀತಿಯನ್ನು,ಕಾಳಜಿ,ಗೌರವ ,ಸೇವಾಕೈಂಕರ್ಯಗಳನ್ನು , ಅಭಿವೃದ್ದಿಪರ ಯೋಜನೆಗಳನ್ನು  ಹೆಂಡತಿ ಯಥೇಚವಾಗಿ ಮಾಡುತ್ತಿದ್ದಾಳೆ ಎಂದು confirm ಆದಮೇಲೇನೆ , ಅನುಭವಕ್ಕೆ ಸಂಪೂರ್ಣ ದಕ್ಕಿದ ಮೇಲೇನೆ ಹೆಂಡತಿ ಮೇಲೆ ಪ್ರೀತಿ ಮೂಡೋದು ಅಂತೆ .. ಆದರೆ ಅದಕ್ಕೆ ಲಿಮಿಟ್ಸ್ ಇದ್ಯ?measure ಇದ್ಯ ? ಎಲ್ಲಿಂದಾದರೂ ಶುರು, ಮೊದಲು ಎನ್ನುವ ಗುರುತು ಇದೆಯಾ   .. ಅವತ್ತಿನದು ಅವತ್ತಿಗೆ … ಇಡೀ ದಿನ  ಮಾಡಿದ್ದು ರಾತ್ರಿಗೆ ಮಾತ್ರ .. ನಾಳೆಯಿಂದ ಮತ್ತೆ ಹೊಸ ಖಾಲಿ ಹಾಳೆ… ಮುಂದಿನ ತಿಂಗಳಿಂದ ಮತ್ತೆ ಅದೇ cycle !!!!

ನಿಜಕ್ಕೂ  ನಾನು ಮನಸಾರೆ ಅವನನ್ನು ಪ್ರೀತಿಸುತ್ತಿದ್ದೆ .. ಪ್ರತಿಕ್ಷಣ ಅವನು  ಸಂತೋಷವಾಗಿರಲಿ ಎಂದು ಹರಸುತ್ತಿದ್ದೆ .. ಆದರೆ ಅವನು?
ಪೀತಿಯ ಅಭಿವ್ಯಕ್ತಿ ಎಂದರೆ ಏನು?
ಅವರ ಪ್ರಕಾರ ಪ್ರೀತಿ ಎಂದರೆ  , ಕೂತರು ನಿಂತರು ಅವನು ದಣಿಯದಂಗೆ ಸೇವೆ ಮಾಡುವುದು ..ಹಲ್ಲುಜ್ಜಿ , ತಲೆಬಾಚಿ, ಬಟ್ಟೆ ಹಾಕಿ, ಅಡಿಗೆ ಮಾಡಿ, ಮನೆ ಕೆಲಸ ಮಾಡಿ , ಆಸ್ತಿಮಾಡಿ ಅವನಿಗೆ ಕೊಡುವುದು !!!
ಅಷ್ಟೇನಾ ?ಹಾಗಾದರೆ  ಅವನು ನನಗೆ ಮಾಡಿದ್ದೇನು? ನನ್ನ ಮೇಲೆ ಪ್ರೀತಿ ಇದೆ ಎಂದಾದರೆ ಪ್ರತಿಯಾಗಿ ನನಗೇನು ಮಾಡುವ ಹಾಗೆ ಇಲ್ಲವ  ? ?infact ನನಗೆ ಅಂತಹ  ಯಾವ fantasy ಕಲ್ಪನೆಗಳೂ ಇರಲಿಲ್ಲ ..  manipulate  ಮಾಡದೆ , mutate  ಮಾಡದೆ ನನ್ನನ್ನು ನಾನಾಗಿ ಇರಲು ಬಿಟ್ಟು , ಅಸ್ವಾಧಿಸಲು ಅವಕಾಶ ನೀಡಿದ್ದಿದರೆ ಅಷ್ಟೇ ಸಾಕಿತ್ತು ನನಗೆ !!!!!!!
ಗಂಡಸಾಗಿ  ಅವನು  ನನಗೆ ಮಾಡಬೇಕಿರುವುದು,ಮಾಡಲು ಸಾಧ್ಯವಿರುವುದು  ಬರಿ ಮಕ್ಕಳಷ್ಟೇನಾ? ಅತವಾ ಕಾರ್ ನಲ್ಲಿ ಮುಂದಿನ ಸೀಟು ಬಿಟ್ಟುಕೊಟ್ಟು, filmಗೆ , shoppingಗೆ, functionsಗೆ  ಹೆಂಡತಿ ಎನ್ನುವ ಸಾಮಾಜಿಕ ಮರ್ಯಾದೆ  ಹೊರಿಸಿಕೊಂಡು ಕರೆದುಕೊಂಡು ಹೋಗಿಬರುವುದು , ನನ್ನ ಮಕ್ಕಳ ತಾಯಿ ಎಂದು ಪರಿಚಯಿಸುವುದು ?
ಇದ್ದರು ಇರಬೇಕು ನನ್ನ ಹೆಂಡತಿಗೆ ಯಾವನೊಂದಿಗೋ ಅಕ್ರಮ ಸಂಬಂಧವಿತ್ತು ಅಂತ ನೆಂಟರ ಹತ್ತಿರ ಹೇಳಿಕೊಂಡು ಮನೆಯಿಂದ ಹೊರಗೆನೂಕಿ , ‘ಗಂಡ ಬಿಟ್ಟವಳು’ ಅನಿಸಿ , divorce ಕೇಳುವುದ compare ಮಾಡಿದರೆ ಹೆಂಡತಿ ಎಂದರೆ ಎಷ್ಟೊಂದು   !!!..ಸಾಮಾಜಿಕ ಮರ್ಯಾದೆ, ಬಿರುದು, ಪಟ್ಟ   !!!    ಅದಕ್ಕಿಂತ ಹೆಚ್ಚುವರಿ ಬಯಸಲು ಸಾಧ್ಯವಾ …, ಒಮ್ಮೆ ಕಳೆದುಕೊಂಡರೆ ಪಡೆದುಕೊಳ್ಳಲಾಗದ  ಅದಕ್ಕಿಂತ ಅಮೂಲ್ಯ ವಸ್ತು ಮತ್ತೊಂದಿದೆಯ ?

ಸಂಸಾರಸ್ತೆ ಎಂದರೆ ಬರೀ ಮನೆಕೆಲಸ, ಮನೆ cleanu  ಅಷ್ಟೆನ ? ನೀಟಾಗಿ ದಿನಕ್ಕೆರಡು ಸರ್ತಿ ಗುಡಿಸಿ , ವರೆಸಿ, ತೊಳೆದು ,ಪೂಜೆ ಮಾಡಿ ,  ಕೈನಲ್ಲಿ ರುಬ್ಬಿ, ಬೇಯಿಸಿದರೆ ಹೆಂಡತಿ ಸದ್ಗೃಹಿಣಿಯಾದಂಗ?
ಮಾಡಬಾರದು ಎನ್ನುವ ಅಹಂಕಾರವೇನು ಖಂಡಿತ  ನನಗಿರಲಿಲ್ಲ  …..ಆದರೆ ನನಗೆ ನನ್ನದೆ ಆದ  ಸಮಸ್ಯೆಗಳಿವೆ  ,ಸುಸ್ತುಗಳಿವೆ   …ಸಮಯದ ಅಭಾವವಿದೇ   …. ಕೊಂಚ ಚೇಂಜ್ ಮಾಡಿಕೊಂಡು ಮಾಡಲು  ನನ್ನದೇ  ವಿಧಾನಗಳಿವೆ … ನನ್ನದೇ frequency ಇದೆ..ಅದನ್ನೆಲ್ಲಾ ಅರ್ಥಮಾಡಿಕೊಳ್ಳಬೇಕಾಗಿದ್ದವರು  ಯಾರು ….ಮಾಡಿಕೊಂಡನ ?  …..
ಅವರಮ್ಮ ಅವರಕ್ಕ ಮಾಡಿದಂಗೆ ಮಾಡಬೇಕ? ಅಷ್ಟಕ್ಕೂ ಅವರಮ್ಮ ಮಾಡಿದಂಗೆ ಯತಾವತ್ತಾಗಿ   ಅವರಕ್ಕ ಮಾಡುತ್ತಿದ್ದಾಳ ? ಎಂತಾ  ಮರಳು, ಎಂತ innocence ??
ಅವರ ಮನೆಯ ಹೆಂಗಸರ ತರವೇ ಆಡಬೇಕು, ವರ್ತಿಸಬೇಕು ಎಂದರೆ ಅವರ clone ನಂತಹ ಹುಡುಗಿಯನ್ನೇ ವರಿಸಬೇಕು …
ಅವರುಗಳು ಕೇವಲ ಅವರಷ್ಟೇ ಆಗಿ ಉಳಿದ್ದಿದ್ದಾರೆ … ಭಾರ ಇಲ್ಲ ಅಲ್ಲಿ ….
ನಾನು ಹೊರಗೆ ಮತ್ತೇನೋ ಆಗಿದ್ದೇನೆ .. ಮತ್ತೇನೊ ಆಗಿರುವುದು bychance ಅಲ್ಲ… bychoice …ಎಷ್ಟೋ ವರ್ಷಗಳ ಶ್ರಮ, ಕನಸು, ತಪಸ್ಸು !!!
ಮತ್ತೇನೂ ಆಗಿರುವುದು ಅವನಿಗಿಷ್ಟ ಇರಲಿಲ್ಲ ಎಂದರೆ , ಅದರ ಬಗ್ಗೆ ಗೌರವ-ಮರ್ಯಾದೆ ಇರಲಿಲ್ಲ ಎಂದರೆ ಅರಿಶಿನ ದಾರ ಬಿಗಿಯಬಾರದಿತ್ತು … ಕಣ್ಣಿಗೆ ಕಟ್ಟಿ ಯಾರು ಮಣ್ಣೆರಚಿರಲಿಲ್ಲ  !!!ತುಂಬಾ ಸುಲಭ ..ಅವರ ಮನೆಯ ಹೆಂಗಸರು ನನ್ನಂತೆ ಆಗಲು ಹೇಗೆ ಸಾಧ್ಯವಿಲ್ಲವೋ ಹಾಗೆ ನಾನು ಅವರಂತೆ  ಥೇಟ್ ಆಗಲು ಸಾದ್ಯವಿಲ್ಲ… ಯಾಕೆ compare ಮಾಡಬೇಕು?
ಒತ್ತಾಯ ಪಡಿಸಬೇಕು ?

 ನಾನು ಯಾರ ತಂಟೆಗೂ ಹೋಗುತ್ತಿರಲಿಲ್ಲ, ಯಾರಲ್ಲೂ ತಪ್ಪು ಹುಡುಕಿ ಜಗಳಕ್ಕೂ ಕಾಲುಕೆರೆಯುತ್ತಿರಲಿಲ್ಲ…ಯಾರನ್ನು ತಿದ್ದಲು ಹೋಗಲಿಲ್ಲ, ಕಡೆಗೆ ತೋರಿಸಲೂ ಹೋಗಿರಲಿಲ್ಲ..ಯಾವತ್ತು  ನಾನ್ಯಾರನ್ನು ದ್ವೇಷಿಸಲು ಹೋಗಲಿಲ್ಲ …
ಅವರವರ ನಂಬಿಕೆ ಅವರವರಿಗೆ …ಅವರಿಗೆ ಸರಿ ಎನಿಸಿದು ನನಗೆ ಹಿತವಾಗದೇ ಹೋಗಬಹುದು  ?ಅವರಿಗೆ ತಪ್ಪು ಅನ್ನಿಸಿದ್ದರಲ್ಲಿ ನನಗೇನು ತಪ್ಪಿಲ್ಲ ಅನಿಸಿಬಹುದು ?
ತಮ್ಮ ಪ್ರಪಂಚದಲ್ಲೇ ಇನ್ನೊಬ್ಬರು ತಮ್ಮಂತೆ  ಬದುಕಬೇಕು , ತಾವು ಕಂಡ  ಬಣ್ಣವನ್ನು ಬೇರೆಯವರ ಕಣ್ಣು ಕಾಣಬೇಕು ಎನ್ನುವುದು, ಅನಗತ್ಯ interfere ಆಗಿ ತೀರ್ಪು ಕೊಡುವುದು, ಕಂಡಿಸುವುದು ಮಾನವೀಯತೆಗೆ ಬಿಟ್ಟ ವಿಷಯ .

ಗಂಡು ಹೆಣ್ಣಿನ ಸಹಜ ಮೋಜು, ಮಸ್ತಿ ಹೇಗೆ ಮಾಡಬೇಕೆಂದು ಯಾರು clue ಕೊಟ್ಟಿರಲಿಲ್ಲ, ಮದುವೆಯ ರಾತ್ರಿ ಏನು  ಮಾಡಬೇಕು ಯಾರು  ತಿಳಿಸಿರಲಿಲ್ಲ.. ಸಂಸಾರ ಮಾಡಲು ಮೂರು ಹೊತ್ತು ಬೇರೆಯವರ guidence ಯಾಕೆಬೇಕು…?
ಬೇರೆಯವರು ಹಾಕಿಕೊಟ್ಟ rules ಯಾಕೆ ಪಾಲಿಸಬೇಕು …
ಅವರ ಮನೆ  ವ್ಯವಹಾರ, ದುಡ್ಡು, ದೌಲತ್ತು , ಅಹಂಕಾರ, ಅಧಿಕಾರ, ಇನ್ಯಾರನ್ನೋ ಪಳಗಿಸೋ, ಹೇಳಿದಂಗೆ ಕೇಳುವ ಹಾಗೆ ಮಾಡಿಕೊಳ್ಳೋ ಯಾವ  ಸುಖವೂ ನನಗೆ ಬೇಕಿರಲಿಲ್ಲ…  
ಅಷ್ಟು ಒಳ್ಳೆತನವಿದ್ದಾಗಲು ಕೂರಲು, ನಿಲ್ಲಲು, ಮಲಗಲು, ಹೊರಗೆ ಹೋಗಲು ಹೆದರಬೇಕು, ಬೇಡಬೇಕು ಎಂದರೆ ಉಸಿರು ಕಟ್ಟುವುದಿಲ್ಲವ?

ಹೆಂಡತಿಯನ್ನು ಗಂಡ ಬಾಳಿಸಬೇಕು , ಅತ್ತೆ ಬಾಳಿಸಬೇಕು ಕೇಳಿದ್ದೆ … ಸಂಸಾರ ಮಾಡಲು ತವರು ಮನೆಯವರು ಹದಮಾಡಿ, ಅವನ ಅಗತ್ಯ, ಅವಶ್ಯಕತೆಗೆ ಅನುವುಮಾಡಿಕೊಡಬೇಕು ಕೇಳಿರಲಿಲ್ಲ …!!

ನಂಬಿ ಬಂದವಳನ್ನು  ಸಂತೋಷವಾಗಿ , ಸುಖವಾಗಿಡಬೇಕು, ನೆಮ್ಮದಿಯಾಗಿ  ಬಾಳಿಸಬೇಕೆಂದು ಯಾರು ಅವನಿಗ್ಯಾಕೆ ಹೇಳಿರಲಿಲ್ಲ …..ಪ್ರೀತಿಸೋದು ಅಷ್ಟೊಂದು ಕಷ್ಟವಾಗಿತ್ತ ಅವನಿಗೆ ? ದ್ವೇಷಿಸದೆ ಉಳಿಯೋದು ಪ್ರೀತಿಮಾಡಿದಂಗೆ  ಅನಿಸುವ ಹಾಗೆ ಬದುಕಿಬಿಟ್ಟನಲ್ಲ.. ಒಳ್ಳೆತನ ಅಷ್ಟೊಂದು ಅಮೂಲ್ಯವ ??

 

   

 

ಬಹುಷ್ಯ ಸಾಕಷ್ಟು ಸುಲಭವಿತ್ತು !!

ಯಾಕೆ ಬೇಕಿತ್ತು ಈ ನ್ಯಾಯ ಪಂಚಾಯ್ತಿಗಳ ಹಗರಣ ?
ಇಬ್ಬರು ವಯಸ್ಕರು ,ವಿದ್ಯಾವಂತರು , ದುಡಿಯುವ ಶಕ್ತಿ ಇರುವವರು ಒಬ್ಬರನ್ನೊಬ್ಬರು ಸಂಬಾಳಿಸಿಕೊಳ್ಳಲಾರದೆ ಎಲ್ಲರೆದುರು ಬಟ್ಟೆ ಕಳಚಿ ಮಸಿ ಬಳೆಯುತ್ತಾರೆ ಎಂದರೆ ಅದಕ್ಕಿಂತ ವ್ಯಫಲ್ಯ, ಅಸಹ್ಯ ಯಾವುದಿದೆ ?
ಅವನಕ್ಕ ನುಣುಪಾಗಿ ಮಾತಾಡುತ್ತಾಳೆ, ಗೆಲ್ಲಿಸುತ್ತಾಳೆ ಎನ್ನುವುದು ಅವನಿಗೆ ಗೊತ್ತಿದ್ದ ಸಂಗತಿ .ಇನ್ನು ಅವನಮ್ಮ ಬಾಯಿಜೋರು ಮಾಡಿ ರುಡಾಲಿ ಏಬ್ಬಿಸಿಯಾದರು ಜಾರಿಕೊಳ್ಳುತ್ತಾರೆ, ಜಾರಿಸುತ್ತಾರೆ ಎನ್ನುವುದು ಅವನಿಗೆ ತಿಳಿದ್ದಿದ್ದ ಸತ್ಯ .ಅವನ ಸುಖ ಸಂತೋಷ ಬಯಸುವವರು ಅವನ ಪರನಿಂತು ವಾಗ್ವಾದಕ್ಕಿಳಿಯುತ್ತಾರೆ ಎನ್ನುವುದು ನಿಶ್ಚಿತ …
ಅವರು ಹೊರೆಸುವ ಆರೋಪಗಳು ಹಿಂಸೆ ಮಾಡುವಂತವು ಎನ್ನುವುದು ಸಾಮಾನ್ಯ ಜ್ಞಾನ .ನನ್ನ ಬಗ್ಗೆ ತಿಳಿದ ನನ್ನವರು ಅದನ್ನೆಲ್ಲ ಅಲ್ಲಗಳೆಯುತ್ತಾರೆ ಎನುವುದು ಸಹಜ .
ತಮ್ಮದ್ದು ಸರಿ ಎಂದು ಸಾಬೀತು ಮಾಡಿಕೊಳ್ಳಲು , clean ಎಂದು ತೋರಿಸಿಕೊಳ್ಳಲು ಬೇರೆಯವರಿಗೆ ಮಸಿಬಳೆದು ಬಿಡುವುದು ನೀಚತನ .ತಾವು ಪಾಲಿಸದ್ದಿದ್ದ ಆದರ್ಶಗಳನ್ನು ಬೇರೆಯವರಿಂದ ಬಯಸುವುದು ದುಷ್ಟತನ .
ಗಂಡ ಹೆಂಡತಿ ಎಂದರೆ ಎರಡು ಬೇರೆಬೇರೆ ವಿಭಿನ್ನ ಸಂಸ್ಕೃತಿ , ಹಿನ್ನಲೆ, ಆದರ್ಶ , ವಾತಾವರಣ , ನಂಬಿಕೆ, ನೆಲೆಗಟ್ಟಿಂದ ಬಂದಿರುತ್ತಾರೆ .
ಅವರ ಮಧ್ಯೆ ಗರ್ಷಣೆ ಏರ್ಪಡುವ ಸಾಧ್ಯತೆಗಳು ಇದ್ದೇ ಇರುತ್ತದೆ .
ಇನ್ನು ಅವರ ಕಡೆ ಅಷ್ಟು ಜನ, ಇವರ ಕಡೆ ಇಷ್ಟು ಜನರನ್ನು ಸೇರಿಸಿಕೊಂಡುನಿಂತರೆ, ಅವರವರ ರೀತಿಯಲ್ಲಿ ಅವರವರು ಸರಿ ಇರುವುದರಿಂದ ಒಮ್ಮತ ಮೂಡುವುದಿಲ್ಲ .
ಒಬ್ಬರ ಮೇಲೊಬ್ಬರು ಹೇಳಿದಾಗ ಅವರವರ ಆತ್ಮಾಭಿಮಾನ , ಗೌರವಗಳು ದಕ್ಕೆಗೊಳಗಾಗಿ ಗಂಡಹೆಂಡತಿ ನಡುವಣದ ಸಣ್ಣ ಅಸಮಾಧಾನದ ಕಿಂಡಿ ದೊಡ್ಡ ಕಂದರವಾಗಿಬಿಡುತ್ತದೆ .ನ್ಯಾಯ ಎನ್ನುವುದು ಕೇವಲ ಒಂದು ಬಳಗದ ಬಲಾಬಲ,ವಾಕ್ಶಕ್ತಿಗಳ ಮೇಲೆ, ಸಮಾಜದ ಅವಶ್ಯಕತೆಗಳ ಮೇಲೆನಿಂತು ಅವಕಾಶವಾದಿಯಾಗಿಬಿಡುತ್ತದೆ .ನಂಬಿಕೆಗಳ ಪರವಿರುದ್ದದ ಯುದ್ಧವಾಗಿಬಿಡುತ್ತದೆ!
ಪ್ರತಿ ಮನುಷ್ಯನಲ್ಲೂ ಆತ್ಮಾಭಿಮಾನ, ಆತ್ಮಗೌರವ ಇದ್ದೆ ಇರುತ್ತದೆ .ಅದನ್ನು ಘಾಸಿಗೊಳಿಸದೇ ಬದುಕುವುದೇ ನಿಜವಾದ ಸರಿವಿಧಾನ
ಪ್ರತಿ ಹೆಣ್ಣಿನ್ನಲ್ಲೂ ಹೆಣ್ತನವಿರುತ್ತದೆ.ಅವಳ ನಿಷ್ಠೆಯನ್ನು ಪ್ರಶ್ನಿಸಿ , ಚಾರಿತ್ರೆಯನ್ನು ವಧೆಮಾಡಿ, ಅಭಿಮಾನ, ಲಜ್ಜಾ ಗೌರವಗಳನ್ನು ಮಣ್ಣುಪಾಲುಮಾಡಿ ಚಂಡಿ ಎಬ್ಬಿಸಿ ಶರಣಾಗತಿ ಬಯಸುವುದು ಅತೀ ಸಂಕುಚಿತ ಮನೋಭಾವ .
ಹಾಗೆ ಗಂಡಸು, ಗಂಡಿನ ಕಡೆಯವರೆಂದು ಶರಣಾಗತಿ ಬಯಸಿ , ಗೆಲ್ಲಬೇಕ್ಕೆನ್ನುವುದು ರಾಜಕೀಯ, ದಾಸ್ಯ .
ಒಂದು ಸೂಳೆಯನ್ನು ಗರತಿಯಾಗಿಸ ಬಲ್ಲ ರಸಿಕತೆ, ವ್ಯಕ್ತಿತ್ವ ಒಂದು ಗಂಡಿಗಿರಬೇಕು.ಹಾಗೆ ಒಬ್ಬ ಲಫಂಗನ್ನನ್ನು ಮಮತೆಯಿಂದ ದಾರಿಗೆ ತರುವ ಹೆಣ್ತನ ಹೆಣ್ನಿಗಿರಬೇಕು.ಅದಕೆಲ್ಲ ಸಾಕಷ್ಟು privacy ಮತ್ತು noninterference ವಾತಾವರಣಬೇಕು .
ಸಂಸಾರ ಬಹುಪಾಲು ಹಾದಿ ತಪ್ಪುವುದು ಮೂರನೆಯವರ ಪ್ರವೇಶದಿಂದಲೇ !!!!!
ಅದು ಯಾವ ರೂಪದ ವ್ಯಕ್ತಿಯಾದರು ಆಗಿರಬಹುದು .
ತಾಳ್ಮೆ, ವಿವೇಚನೆ, ಅನುಕಂಪ , ಸಹಾನುಬೂತಿ ಇಲ್ಲದ ದಾಂಪತ್ಯಗಳು ಒಬ್ಬರೊಬ್ಬರನ್ನು ಹಿಂಸಿಸುತ್ತವೆ .
ಮನೆಯವರಾದವರು ಸಂಸಾರದ ಹಾದಿ ತಪ್ಪದಂತೆ ಸಹಾಯಕ್ಕೆ ನಿಲ್ಲಬೇಕು .
ಅಧಿಕಾರ, ಹಕ್ಕುಗಳ ನೆಪಗಳನ್ನು ಇಟ್ಟುಕೊಂಡು ಮದ್ಯೆನುಗ್ಗದಿರುವುದೆ ಒಳ್ಳೆಯದು !!
ತಮ್ಮ ಸಂಬಂಧದ ಜವಾಬ್ದಾರಿಯನ್ನು ಸಂಗಾತಿಗಳೇ ವಹಿಸಿಕೊಳ್ಳಬೇಕು .ಆ ಹೊಣೆಯನ್ನು ಮನೆಯವರು ಹೊರೆಸಿ ಬಿಟ್ಟುಬಿಡಬೇಕು.
ಬೆಳಗ್ಗೆ ಕಚ್ಚಾಡಿ ರಾತ್ರಿ ಒಂದಾಗುವ ಗಂಡಹೆಂಡತಿ ಸಂಬಂಧದ ಮದ್ಯೆ ‘ಗೆಲ್ಲಿಸಬೇಕು’,’ ಒಳ್ಳೆಯವರಾಗಬೇಕು’ , ‘ಲಾಭ ಮಾಡಿಕೊಳ್ಳಬೇಕು ‘ ಎಂದು ಮಧ್ಯೆಬಂದರೆ , ಮುಚ್ಚಲಾಗದಷ್ಟು ಹರೆದು ಹೋಗುತ್ತದೆ ಸಂಬಂಧ ..ಕಡೆಗೆ ನಷ್ಟವಾಗುವುದು ಗಂಡು ಹೆಣ್ಣಿಗೆ ಮಾತ್ರ !!!!!
ಮನುಷ್ಯತ್ವ ಎಂದರೆ ಬೇರೆ ವ್ಯಕ್ತಿಗೆ ನರಳಾಟವಾಗದಂತೆ ನಡೆಯುವುದು ಅಷ್ಟೇ !!!

ಗೆಲ್ಲಲು ಅವೆಷ್ಟು ಹೊಂಚು !!!

ಅಲ್ಲಿದ್ದ ಪೊಲೀಸರು ಕೊಂಚ ನಿರ್ದಾಕ್ಷಿಣ್ಯವಾಗಿಯೇ ಹೇಳುತ್ತಿದ್ದರು —“ಅವರು ಡಿಸೈಡ್ ಮಾಡಿಕೊಂಡುಬಿಟ್ಟಿದ್ದಾರೆ, ನೀವು ಬೇಡ, ಏನೇ ಆದರು ಮನೆಗೆ ಸೇರಿಸಲ್ಲ ಅಂತ. ಪ್ರಯೋಜನ ಇಲ್ಲ. ಸುಮ್ನೆ ಕಂಪ್ಲೇಂಟ್ ಕೊಟ್ಟುಬಿಡಿ  ”

ಅಷ್ಟು ಜನರ ಎದುರು ಹೇಳಿದ್ದ “ಎಷ್ಟೇ costly ಯಾದರೂನು ಅಷ್ಟೇ   ಒಂದು ಸರ್ತಿ  ಬೇಡ  ಅಂತ  ಬಿಸಾಕಿದ  ಮೇಲೆ  ಮುಗಿಯಿತು ,ಇನ್ಯಾವತ್ತು ಅಂತ  ಶೂ ಹಾಕಲ್ಲ  ,ಅವಳೂ ಅಷ್ಟೇ ..!!!”
“ಸೂಳೆಮುಂಡೇ , ನಿನ್ನ ಅಮ್ಮನ್ನ—- ನಿನ್ನ ಅಕ್ಕನ್ನಾ—-, ಇವತ್ತು ಏನೇ ಆದರು ಜೀವಸಹಿತ ಉಳಿಸಲ್ಲ, ಕೊಂದೇಹಾಕುತ್ತೇನೆ ….” ಅಂತೆಲ್ಲ  ಕೆಟ್ಟದಾಗಿ  ಆರ್ಭಟಿಸಿದ್ದ
ನಟ್ಟ ನಡುರಸ್ತೆಯಲ್ಲಿ “ಡೈವೋರ್ಸ್ ಕೊಡಲು ಒಪ್ಪಿಕೊ, ಇಲ್ಲ ಅಂದ್ರೆ ಗ್ರಹಚಾರ ನೆಟ್ಟಗಿರಲ್ಲ” ಅಂತ ಹೇಳಿ ಬೀಳಿಸಿ, ಹೊಡೆದು ಓಡಿ ಹೋದವನ ಕುರಿತು  ಅವರಿವರು ಹೇಳುತ್ತಿದ್ದರು , ನಿನಗೆ ಇನ್ನೂ ಬುದ್ದಿ ಬಂದಿಲ್ಲ, ಇನ್ನೆಷ್ಟು ಅವಮಾನ ಸಹಿಸಿಕೊಳ್ಳಬೇಕೂ ಅಂತ ಕಾಯ್ತಾಯಿದ್ದೀಯ ?ಅಂತವನೇ  ಬೇಕು ಎನ್ನುವ  ನಿನಗೆಲ್ಲೋ ಹುಚ್ಚು      !!!!

ನಮ್ಮ ಮನೆಯ ಜನ ಒಂತರಾ ಟಿ ಏನ್  ಸೀತಾರಾಮ್ ಸೀರಿಯಲ್ ನವರಂತೆ ,—‘ಅವನಿಗೆ ಇಂದಲ್ಲ ನಾಳೆ ಆತ್ಮಸಾಕ್ಷಿ  ಕಾಡೇಕಾಡುತ್ತದೆ, ಚುಚ್ಚುತ್ತೆ , ಕೊಲ್ಲುತ್ತೆ !!!  ಅನ್ನುತ್ತಿರುತ್ತಾರೆ !!

ಹ ಹ ಹ … ಅವರಂತಹ ಜನರಲ್ಲ!!!!! ಆತ್ಮಸಾಕ್ಷಿಯ ದಿಕ್ಕನ್ನೇ ತಿರುಚಿ, ಪ್ರಜ್ಞೆಯನ್ನೇ ತಪ್ಪಿಸಿಬಿಡುತ್ತಾರೆ!!!

ಎಷ್ಟು ನಿರ್ಲಿಪ್ತನಾಗಿ ಹೇಳುತ್ತಾನೆ ನಾನೇನೂ ಅನ್ಯಾಯ ಮಾಡಿಲ್ಲ ! ಎಲ್ಲಾ ತಪ್ಪು ನಿನ್ನದೇ. ನನಗೆ ಇನ್ನು ನೀನು ಬೇಕಾಗಿಲ್ಲ  ….

ಮೂರು ಜನ ಕೂತುಕೊಂಡು ಒಬ್ಬರಿಗೊಬ್ಬರು motivate  ಮಾಡಿಕೊಂಡಿರುತ್ತಾರೆ  , ನಂಬಿಸಿ ನಂಬಿಕೊಂಡಿರುತ್ತಾರೆ  …ನಾವೇ ಸರಿ..ಅವರದ್ದೇ ಎಲ್ಲಾ  ತಪ್ಪೂ !!!

ಬಾವಿಯೊಳಗಿನ ಕಪ್ಪೆಗೆ ಪ್ರಪಂಚದಲ್ಲಿನ ನ್ಯಾಯ ನೀತಿ ಧರ್ಮದ ಬಗ್ಗೆಗಿನ ಚಿಂತೆ ಇರುವುದಿಲ್ಲ !!
ಎರಡನೆಯ ಮದುವೆಯನ್ನೂ ಅಂಗೀಕಾರ ಮಾಡುವ ಸಮುದಾಯವಿದೆ, ದಿನಾ ಕುಡಿದು ಹೆಂಡತಿಗೆ ಬಡಿದು ಹೊಡೆಯುವ ಜಾಗಗಳಿವೆ ….
ವ್ಯಕ್ತಿಯ ನಂಬಿಕೆ, ಆದರ್ಶಗಳು ಒಂದು ವರ್ಗದ ನಂಬಿಕೆಗೆ ಸೇರಿರುತ್ತವೆ.. ಅಲ್ಲಿನ ಆ ನಾಲ್ಕು ಮನೆಯ ಜನರ ನಿರ್ಣಯ, ಆದರ್ಶಗಳೇ ಇವರ ದಾರಿದೀಪ …ಒಂದಷ್ಟು ಹೆಂಗಸರು ಮುದ್ದು ಮಾಡಿರುತ್ತಾರೆ.. ಗಂಡಸರು ಮೀಸೆ ತಿರುವಿರುತ್ತಾರೆ , ನಿಮ್ಮದೇ ಸರಿ ಅಂತ !!!

ಅಷ್ಟಕ್ಕೂ —ಪ್ರಾಣ ಬಿಟ್ಟರು ಪ್ರತಿಷ್ಠೆ ಬಿಡಲ್ಲ ಎನ್ನುವಂತಹ ರಕ್ತ ಮೈನಲ್ಲಿ  ಹರಿಯುತ್ತಿರುವಾಗ,ಎಷ್ಟೇ  ಖರ್ಚುಮಾಡಿಯಾದರೂ  ಬಚಾವು ಮಾಡುತ್ತೀನೆ ಎನ್ನುವ ತಾಯಿ, ಏನೇ ಆದರು ಬಿಟ್ಟು ಕೊಡಲ್ಲ ಎನ್ನುವ ಅಕ್ಕ ಇದ್ದಾಗ, ಸ್ವಂತ ಬುದ್ಧಿ ಇಲ್ಲದಾಗ ಹೆಂಡತಿ ಬೇಕಾಗುವುದಿಲ್ಲ  !  

ಅವರ ಸಮಜಾಯಿಸಿಗಳನ್ನು ಯಾರಾದರು ತಪ್ಪೆಂದು ಗುರುತಿಸಲು ಸಾಧ್ಯವೇ …ಎಲ್ಲದಕ್ಕೂ ಇವೆ !!

ಅನುಮಾನ ಪಡುತ್ತಿದ್ದದ್ದು ?
ಸುಮ್ಮ ಸುಮ್ಮನೆ ಅನುಮಾನ ಪಡುತ್ತಾನ ….ಹುಡುಕಿದರೂ, ಸಿಕ್ಕಿದರು ವ್ಯತ್ಯಾಸ ಏನು?ಎಲ್ಲಾ ಗಂಡಸರು ಹಿಂಗೇನೆ !!! ಹೆಣ್ಣು   ಬಾಳಬೇಕು ಎಂದರೆ ಸುಮ್ಮನೆ ತಾಳಬೇಕು …

ಅವನ ಅಮ್ಮ ಅಕ್ಕ ವಿನಾಕಾರಣ ತಲೆತೂರಿಸಿ ದೊಡ್ಡದು ಮಾಡಿ,ಅತಿಕ್ರಮವಾಗಿ ಖಾಸಗಿ ಪ್ರಪಂಚದೊಳಗೆ ಪ್ರವೇಶಿಸಿ  ಹಿಂಸಿಸುತ್ತಿದ್ದದ್ದು  
10  ಲಕ್ಷ   ಖರ್ಚು ಮಾಡಿ  ಮದುವೆ  ಮಾಡಿಲ್ಲವ. ಒಬ್ಬನೇ ಮಗನ್ನನ್ನು 27  ವರ್ಷ ಬೆಳೆಸಿ ಈಗ ಬಿಟ್ಟುಕೊಟ್ಟುಬಿಡಬೇಕ, ತಲೆಹಾಕಲು ತಾಯಿಗೆ ಹಕ್ಕಿದೆ    .
 ಓಡಾಡಿ ಮದುವೆ ಮಾಡಿರುವ  ಅವನಕ್ಕನಿಗೂ  ಹಕ್ಕಿದೆ ,ಮದುವೆ ಮುರಿಯಲೂ …!!!

ನನ್ನ ನೆಂಟರು  ಕರೆದಾಗಲ್ಲೆಲ್ಲ ಬರಬೇಕು ಅಂತ condition ಹಾಕೋದು ?
ಹೌದು ಬರಲೇಬೇಕೂ.. ಮದುವೆ ಮಾಡಿಕೊಟ್ಟು ಬಿಟ್ಟರೆ ಮುಗಿದುಹೋಯಿತಾ ?…ಜವಾಬ್ದಾರಿ ತಗೋಳೋಕೆ 24 * 7   ಸದಾ ಸೇವೆಯಲ್ಲಿರಬೇಕು .ಹೆಣ್ಣು ಮಗಳು ಗಂಡನ ಜೊತೆ  ಮರ್ಯಾದೆಯಿಂದ ಬಾಳಬೇಕೆಂದರೆ, ನಾವು ಕೇಳಿದ್ದನೆಲ್ಲ ಕೊಡಬೇಕು ಹೇಳಿದ್ದನೆಲ್ಲ ಮಾಡಬೇಕು.ಅವರು ಆಗ ಸಹಕರಿಸಲಿಲ್ಲ.ಈಗ ನಾವು ಸಹಕರಿಸುವುದಿಲ್ಲ ….

ಹುಡುಗನಿಗೆ ಸ್ವಂತ ಶಕ್ತಿ, ಸ್ವಂತ  ಬುದ್ದಿ ಬೇಕಲ್ವ…ಎಲ್ಲವನ್ನು  ಅಮ್ಮ ಅಕ್ಕ ಸೂತ್ರ ಹಿಡಿದು ಆಡಿಸುತ್ತಾರೆ ಅಂದರೆ
-ದೊಡ್ಡವರನ್ನು ಬಿಟ್ಟು ಏನು ಮಾಡಲ್ಲ ಅವನು.ದೊಡ್ಡವರು ಹಾಕಿದ ಗೆರೆದಾಟ್ಟಲ್ಲ.ದೊಡ್ಡವರು ಮಾಡೋದೆಲ್ಲ ಅವನ ಲಾಭಕ್ಕೆ, ಒಳ್ಳೆಯದಕ್ಕೆ….ಅದು ಚೆನ್ನಾಗಿ ಗೊತ್ತಿದೆ ಅವನಿಗೆ .

ನಾನು ಮಾಡಿದ ಘನ ಘೋರ  ತಪ್ಪು ಅಪರಾಧಗಳೇನು ?
ಸಾವಿರ ಇದೆ…
ನೀನು ಏನೇ ಓದಿ ದಬಾಕಿ,ಎಷ್ಟು ಕಷ್ಟಪಟ್ಟು  ಪ್ರಾಜೆಕ್ಟು ಕೆಲಸ ಮಾಡುತ್ತಿದ್ದರು, ಏನೇ dependency ಗಳಿದ್ದರು ,ಗಂಡು ಕೊಲೀಗ್ ಜೊತೆ ಅವನಿಗೆ ಇಷ್ಟ ಇಲ್ಲ ಅಂದ್ರೆ ಮಾತಾಡಬಾರದು .
ಗಂಡ ಉಸಿರಾಡುವುದನ್ನು ನಿಲ್ಲಿಸು ಅಂದರು ನಿಲ್ಲಿಸುವುದು ಪತಿವ್ರತೆಯ ಧರ್ಮ …
ಕಂಪ್ಲೇಂಟ್ ಕೊಟ್ಟ ಮೇಲೆ ಮುಗಿಯಿತು , ನಿನ್ನಿಂದ ಯಾವುದೇ ಹಿತ ಗತಿ ಇಲ್ಲ ಇನ್ನು

ಒಂದು ಒಂಟಿ ಹುಡುಗಿಗೆ ,ಅವನ ಚಿಕ್ಕಪ್ಪ ತೊಡೆತಟ್ಟುವುದು, ಮಾವನ ಮಗ ತುಳಿದುಹಾಕುತ್ತೇವೆ ಎನ್ನುವುದು, ಅಜ್ಜಿ ಪೊರಕೆಯಲ್ಲಿ ಹೊಡೆಯಬೇಕು ಎನ್ನುವುದು ಕ್ರೌರ್ಯ ಅಲ್ಲವೇ ?
ಇಲ್ಲ ದೊಡ್ಡವರು ಏನೇ ಅಂದರು ಅದು ತಪ್ಪಲ್ಲ!!! ಅದರಲ್ಲೂ ಗಂಡಿನ ಕಡೆಯವರು ಇರುವುದೇ ಅನ್ನುವುದಕ್ಕೆ… ಹೆಣ್ಣು ಹಾಗೆಲ್ಲ ಅನ್ನಿಸಿಕೊಳ್ಳದೆ  ತಗ್ಗಿ ಬಗ್ಗಿ ಸಂಸಾರ ಮಾಡಬೇಕು,ಅದೇ ಅವಳ ಜೀವನದ ಏಕೈಕ್ಯ ದ್ಯೇಯ, ಗುರಿ, ಸಾಧನೆ ,ಉದ್ದೇಶ , ಸಾರ್ಥಕತೆ ….!!! (applies only  to ಆ ಮನೆಗೆ ಈಚೆ ಇಂದ ಬಂದವರು !)

ನನ್ನ ಬಗ್ಗೆ ಇಲ್ಲ ಸಲ್ಲದ ಅಕ್ರಮ ಸಂಬಂಧಗಳ  ಆರೋಪ ಹೊರಿಸಿ  ಅವಮಾನ, ಹಿಂಸೆ ಮಾಡುತ್ತಿದ್ದದ್ದು ?
ಬೆಂಕಿ ಇಲ್ಲದೆ ಹೊಗೆ ಆಡುತ್ತದ ? ಹೆಣ್ಣನ್ನು ಬಗ್ಗಿ ಬಡಿಯಲು ಇರುವ ಆಯುಧ ಎಂದರೆ ಅದೊಂದೇ ….ನೀನು ಸರಿಯಾಗಿರುವುದು ನಿನಗೆ ಗೊತ್ತಲ್ವಾ.. ಆರಾಮಾಗಿ ಇರು … ಹಾಗೆಲ್ಲ ಅಂದು ಬೀದಿಗೆಬಿಟ್ಟು, ಗಂಡ ಬಿಟ್ಟವಳು ಅನ್ನಿಸಿದರೇನೆ , ಬುದ್ಧಿ ಬರುವುದು , ಗೆದ್ದಂಗೆ ಆಗುವುದು , ಪ್ರತೀಕಾರ ತೀರುವುದು …!!!!!!

ಗಂಡನಾಗಿ ಆಕ್ರಮಣಕಾರಿಯಾಗಿರುವುದು , violent ಆಗಿರುವುದು ಹುಡುಗಿಗೆ  ಭಯ ಆಗುವುದಿಲ್ಲವ?
ಗಂಡಸು ಹಾಗೆ ಇರಬೇಕು..ನಮ್ಮೆಲ್ಲ ನಾಲ್ಕು ಜನರ ಮನೆಗಳಲ್ಲೂ ಗಂಡಸರು  ಹಾಗೆ ಇರೋದು…ನಾವೆಲ್ಲಾ ಬಾಳುತ್ತಿಲ್ಲ್ವ ?

ಅಕ್ಕನಿಗೆ ಮಾತ್ರ ಎಲ್ಲಿಗಾದರೂ ತಿರುಗಲು  ಸಂಪೂರ್ಣ ಸ್ವಾತಂತ್ರ್ಯ , ದಿನ ತವರಿಗೆ ಬರಬಹುದು?
ಲಾಭದ ಕಾರಣಗಳಿವೆ ಅಲ್ಲಿ…ನಿನಗೆ ಅವೆಲ್ಲ ಬೇಕಿಲ್ಲ.. ಅವಳು ನಂಬಿಕೆ ಉಳಿಸಿಕೊಂಡಿದ್ದಾಳೆ ಅಷ್ಟೇ ತಿಳಿದಿಕೋ…!!!!

ಸಣ್ಣಸಣ್ಣದಕ್ಕೂ ಅತ್ತೆ, ಮತ್ತು ಗಂಡ  ವಿಪರೀತ ಜಗಳ ತೆಗೆಯುವುದು, ಹೆಂಗೆಂದರೆ ಹಾಗೆ ಬೈಯ್ಯುವುದು ,ರಗಳೆ, ಪಂಚಾಯ್ತಿ ಮಾಡಿಸುವುದು ?
ಅದು ಆ ಮನೆಯ ಸಂಪ್ರದಾಯ  , ರೀತಿನೀತಿ .ಪ್ರೀತಿಯನ್ನು, ಜಗಳವನ್ನೂ ಹೊಡೆದಾಡಿಕೊಂಡೆ ಮಾಡುವುದು ಅಲ್ಲಿ.

ಮಗ ಯಾವಾಗಲು ಅಮ್ಮನಿಗೆ ಹೇಳಿ ಜಗಳ ಮಾಡಿಸುವುದು…
ಅವರಮ್ಮ ತುಂಬಾ innocent ….

ಎಷ್ಟೆಲ್ಲಾ ಕತೆಗಳನ್ನು ನೇಯ್ದು , ತೇಲಿಬಿಟ್ಟಿದ್ದರು!!! ಒಂದಲ್ಲ ಎರಡಲ್ಲ ಎಲ್ಲಾ source ಗಳಿಂದಲೂ confirm ಆದ ಅವವೇ ರೋಚಕ storyಗಳು…ನಾನೇ  ನಾಯಕಿ , ನಾನೇ  ಖಳ ನಾಯಕಿ    !!!

story 1:ಯಾವುದೋ ಹುಡುಗನನ್ನು  ಕಾಲೇಜಿನಲ್ಲೇ ಲವ್ ಮಾಡುತ್ತಿದ್ದೆ  .ಮದುವೆಯಾಗುವ ಆಸೆ ಇತ್ತು, ಗಂಟೆಗಟ್ಟಲೆ ಫೋನ್ ನಲ್ಲಿ ರಾತ್ರಿಯೆಲ್ಲಾ ಮಾತಾಡುತ್ತಿದ್ದೆ ,ಅಪ್ಪನಿಗೆ ಇಷ್ಟವಿರಲಿಲ್ಲ .ನಾಮಕಾವಸ್ತೆಗೆ ಅಂತ protectionಗೆ ಒಬ್ಬ ಗಂಡ  ಬೇಕು ಅಂತ ಇವನನ್ನು ಮದುವೆಯಾಗಿರುವುದು .ಯಾರ್ಯಾರೋ ಮನೆಗೆ ಬಂದು ಹೋಗುತ್ತಿದ್ದರು , ಅದು ಗೊತ್ತಾಗಬಾರದು ಅಂತ ಮದುವೆ ಸೆಟ್ ಆದ ತಕ್ಷಣ ಮನೆ ಖಾಲಿ ಮಾಡಿಬಿಟ್ಟೆವು

story 2 :ಅಷ್ಟೇ ಅಲ್ಲ ಕೆಲಸದ ಆಫೀಸ್ ಹತ್ತಿರವೂ ಒಬ್ಬನ ಜೊತೆ ಅಫೇರ್ ಇತ್ತು .ಪ್ರಸ್ತದ ದಿನವೇ ಅವನು ಏನೇನೋ msg  ಕಳಿಸಿದ್ದ.ಗಂಡನ  ಕಾಲಿಗೆ ಬಿದ್ದು ಇದನೆಲ್ಲ ದೊಡ್ಡವರ ಬಳಿ ಹೇಳಬೇಡ ಎಂದು ಬೇಡಿಕೊಂಡಿದ್ದೆ..’ನಿನ್ನನ್ನು ಮುಟ್ಟುವಾಸೆ ‘ ಅಂತ ಅವನು ನನ್ನ ಮೇಲೆ ಕವನ ಬರೆದಿದ್ದ .ಮದುವೆಗೆ ಮುಂಚೆಯೂ ಮದುವೆಯಾದ ನಂತರವೂ ಅವನ ಜೊತೆ ಬೈಕ್ ನಲ್ಲಿ ಸುತ್ತಾಡುತ್ತ ಮಜಾ ಮಾಡುತ್ತಿದ್ದೆ .ಗಂಡನ ಬಗ್ಗೆ ಅವನ ಹತ್ತಿರ ಕೀಳಾಗಿ ಹೇಳಿದ್ದೆ . ಎಷ್ಟು ಬಾರಿ ಬಿಡು ಎಂದರು ಅವನನ್ನು ಬಿಟ್ಟಿರಲೇ  ಇಲ್ಲ.    ಎಲ್ಲಾದಕ್ಕೂ ಪ್ರೂಫ್ ಇದೆ , ಲವ್ ಲೆಟರ್ಸ್ ಇದೆ, ಜನ ಸಾಕ್ಷಿಗಿದ್ದಾರೆ .

story 3  :ಹಳೆ ಗೆಳೆಯನನ್ನು ಕೂಡಿಕೊಳ್ಳಲು ಯಾರನ್ನು  ಹೇಳದೆ ಕೇಳದೆ ಕಂಪನಿ ಬದಲಾಯಿಸಿದೆ .ಅತ್ತೆ ಮೇಲೆ ದೂರು ತಂದಿಕ್ಕಿ , complaint ಕೊಟ್ಟುಬಿಟ್ಟೆ!!!!

(ಯಾವ  ಹುಡುಗನ  ಜೊತೆ  ನನಗೆ  ಸಂಬಂಧವಿತ್ತು ಅಂತ ನನಗೆ ಅರ್ಥ ಆಗಿಲ್ಲ,ಸ್ಪಷ್ಟವೂ ಆಗಿಲ್ಲ   ಇದುವರೆಗೂ ….!!!!!)
ಒಬ್ಬನ?? ಎಲ್ಲ ಹುಡುಗರ ಜೊತೆಯೂ ಇತ್ತು .. cabmate , collegues … ಯಾವ  ಹುಡುಗನನ್ನೂ ಬಿಟ್ಟಿರಲಿಲ್ಲ ..
(ಹಾಗಿದ್ದರೆ ನಾನು Aishwarya rai ಇರಬೇಕು !!!! )

story 4 : ಆರು ತಿಂಗಳು ಅಷ್ಟೇ .ಆಮೇಲೆ ದಿನಾ ಗಂಡನನ್ನು  ಹಿಡಿದು ಬಡಿಯುತ್ತಿದ್ದೆ, ಹೊಡೆಯುತ್ತಿದ್ದೆ.(ನಾನೇನಾದರು ನನಗೆ ಗೊತ್ತಿಲದೇ ಕುಡಿದು ಕೊಂಡು ಮನೆಗೆ ಹೋಗುತ್ತಿದ್ದೆನ? )ಯಾವ ಮನೆ ಕೆಲಸವನ್ನು ಮಾಡುತ್ತಿರಲಿಲ್ಲ .ಗಂಡನಿಗೆ ಉಪಚಾರ ಮಾಡದೆ ಅಗೌರವಿಸುತ್ತಿದ್ದೆ.ಯಾವಾಗಲು ತವರು ಮನೆ ಅಂತ ಹೊರಟು ಹೋಗುತ್ತಿದ್ದೆ .ಎಲ್ಲರನ್ನು ಹೆದರಿಸುತ್ತಿದ್ದೆ .ಮನೆಗೆ ಒಂದು ಚೂರು ದುಡ್ಡು ಕೊಡುತ್ತಿರಲಿಲ್ಲ.ಮಧ್ಯ ರಾತ್ರಿಯಲ್ಲಿ ಎದ್ದು ‘ಪ್ರಿಯತಮ’ ಅಂತ ಕವನ ಬರೆಯುತ್ತಿದ್ದೆ .ನಾನೇ separate ಆಗಿ ಇನ್ನೊಂದು ನಾಷ್ಟ ಮಾಡಿಕೊಂಡು ತಿನ್ನುತಿದ್ದೆ .ಡಾಕ್ಟರ್ ಕೂಡ ಇಂತಹವರನ್ನು ತಿದ್ದಲು ಆಗುವುದಿಲ್ಲ, ನೀವೇ ಅನುಸರಿಸಿಕೊಂಡು ಹೋಗಬೇಕು ಅಂತ ಕೈ ಚೆಲ್ಲಿಬಿಟ್ಟಿದ್ದರು  .ಮಕ್ಕಳನ್ನು ಮಾಡಿಕೊಳ್ಳದೆ ಮಾತ್ರೆ ನುಂಗುತ್ತಿದ್ದೆ .ನನ್ನ ಜನರೇ ಹುಡಿಗಿಗೆ ಕೋಪ ಹುಷಾರು ಎನ್ನುತ್ತಿದ್ದರು .

story 5  :ಅವನನ್ನು , ನಾದಿನಿಯನ್ನು, ಅತ್ತೆಯನ್ನು ನಾನು ನನ್ನ ನೆಂಟರುಗಳು ಎಲ್ಲಾ ಸೇರಿಕೊಂಡು  ರಕ್ತ ಬರುವಹಾಗೆ ಹೊಡೆದು ಬಿಟ್ಟಿದ್ದೆವು   !!!!

ಏನೆಲ್ಲಾ ಆಗಿ ಹೋದೆ ಕೇವಲ 11 ತಿಂಗಳುಗಳಲ್ಲಿ …ಅಥವಾ   ಯಾವೊಂದು ಕ್ಷುದ್ರ ಜೀವಿಯಾಗದೆ ಉಳಿದ್ದಿದ್ದೆ?
ಮೊದಲು ಒಂದು ಮೆಸೇಜ್ ಮಾತ್ರದಿಂದ , ಬರೆದ ಕತೆಯಿಂದ ಸೂಳೆಯಾಗಿಹೋದೆ!!!
ನಂತರ ಅವರುಗಳ  ವಿರುದ್ದ ಸುಳ್ಳು ಹೇಳುವ ಸುಳ್ಳಿಯಾದೆ!!!
ಸುಳ್ಳು ಲೆಕ್ಕ ತೋರಿಸುವ, ತವರಿಗೆ ದುಡ್ಡು ಸಾಗಿಸುವ ಕಳ್ಳಿಯಾದೆ   !!!!!
ದೊಡ್ಡವರಿಗೆ ಮರ್ಯಾದೆ ಕೊಡದ ಸಂಸ್ಕಾರ ಹೀನಳಾದೆ !!!!
ಓದಿದ್ದೇನೆ, ದುಡಿಯುತ್ತೇನೆ ಎಂದು ಮೆರೆಯುವ ದುರಹಂಕಾರಿಯಾದೆ !!!
ಎಲ್ಲರನ್ನು ಹೆದರಿಸುವ, ಹೊಡೆಯುವ ದುಷ್ಟ  ರಾಕ್ಷಸಿಯಾದೆ  !!!
ಮನೆಗೆಲಸಗಳನ್ನು  ಒಂದೂ ಮಾಡದ ಸೋಮಾರಿಯಾದೆ !!!
ಗಂಡನನ್ನು ಅಗೌರವಿಸುವ , ಅವಮಾನ ಮಾಡುವ  ಅಸಂಪ್ರದಾಯವಾದಿಯಾದೆ !!!
ಅತ್ತೆ, ನಾದಿನಿಯನ್ನು ಪೀಡಿಸುವ ಪಿಶಾಚಿಯಾದೆ !!!
ಎಲ್ಲದಕ್ಕೂ out  of control  ಹೋಗುವ ಹುಚ್ಚಿಯಾದೆ !!

ಹೆಣ್ಣೇ ಅಲ್ಲದ ಹೆಣ್ಣಿನ ರೂಪದ ನರಭಕ್ಷಕಿಯಾಗಿ ಹೋದೆ !!!

ಅವರೆಲ್ಲ ಎಂತ ಸಂಪ್ರದಾಯವಾದಿಗಳು , ಸಂಸಾರಸ್ತರು , ದೊಡ್ದಮನಸಿನವರು , ಮೃದುಸ್ವಭಾವದವರು , ಸೂಕ್ಷಮನಸಿನವರು , ಜೀವನದಲ್ಲಿ ಏನೊಂದು ತಪ್ಪು ಮಾಡದ ಪ್ರಾಮಾಣಿಕರು, ಭೂಮಿತೂಕದವರು , ಅಹಂಕಾರ ಇಲ್ಲದ down to earth ಜನರು, ಮುಗ್ದರು , ಮಿತಭಾಷಿಯರು ,ಸತ್ಯವಂತರು , ಮೆಲುಮಾತಿನವರು  , ಒಬ್ಬರ ವಿಷಯಕ್ಕೆ ಇನ್ನುಬ್ಬರು ಹೋಗದ Decent ಜನರು !!!!

ಅಂತ ಜಾಗದಲ್ಲಿ ಬದುಕಲಾರದ ನಾನು ಅಯೋಗ್ಯೆ !!!

ಏನೇ ಆದರು ನಾನು ಅವನನ್ನು ತುಂಬಾ ಪ್ರೀತಿಸುತ್ತೇನೆ .ಗಂಡ ಎನ್ನುವ ಒಂದು ಕಾರಣ ಸಾಕು  .ಧರ್ಮದ ಪ್ರಕಾರ ಆದ  ಮದುವೆಯ ಬಂಧನವನ್ನು , ದಾಂಪತ್ಯದ ಜೀವನವನ್ನು ನಾನು ಪ್ರೀತಿಸುತ್ತೇನೆ , ಕನಸುಗಳನ್ನು ಸಾವಿರ ಹೆಣೆದುಬಿಟ್ಟಿದ್ದೇನೆ .

ತಮಾಷೆಯಂದರೆ ಅವರು ಹೂಡುತ್ತಿದ್ದ ಪ್ರತಿ ರಣತಂತ್ರವೂ, ಮೋಸವೂ ನನ್ನ ಅರಿವಿಗೆ ಬರುತ್ತಿತ್ತು …ಆದರು ಮನಸು ಅದನ್ನೆಲ್ಲಾ ಲಘುವಾಗಿ ತೆಗೆದು ಕೊಂಡುಬಿಡುತ್ತದೆ… (ಅಂದರೆ ನಾನು ಸಂಸಾರಸ್ತೆಯಾಗಿ ಹೋದೆನ 🙂 ?)

ಮೊದಲೆಲ್ಲ ಮನೆ ಖಾಲಿ ಮಾಡಬೇಕು ಅಂತ ನಿರ್ಧಾರ ಮಾಡಿಬಿಟ್ಟಿದ್ದೀವಿ , ನಮ್ಮಮ್ಮನಿಗೆ ನಿನ್ನ ಮುಖ ನೋಡಲೂ ಇಷ್ಟವಿಲ್ಲ, ಮನೆ ಹೊಸ್ತಿಲನ್ನು ನಿನ್ನಿಂದ ತುಳಿಸದಂತೆ ಪ್ರತಿಜ್ಞೆ ಮಾಡಿದ್ದಾರೆ, ಅವರು ಸತ್ತರೂ ನೀನು ಮುಖ ನೋಡುವಂತೆ ಇಲ್ಲ, ನನ್ನಿಡೀ ಜೀವನವನ್ನು ತಾಯಿಯ ಪ್ರತೀಕಾರಕ್ಕೆ ಮುಡುಪಿಟ್ಟು  , ಅಕ್ಕನ ಮಕ್ಕಳನ್ನೇ ತನ್ನ ಮಕ್ಕಳೆಂದು ಸಾಕಿ   ದೊಡ್ಡವರನ್ನಾಗಿ ಮಾಡುತ್ತೀನೆ…. ಎನ್ನುತಿದ್ದ!!   

ಅವನಮ್ಮ ಮಗನಿಂದ ಮರ್ಯಾದೆ ಹೋಯಿತು ಅಂತ ಮನೆಬಿಟ್ಟು ಕಳಿಸಿಬಿಟ್ಟಿದ್ದೀನಿ  ಅಂದರು.. ಅವನು ಅದೇ ಕತೆ ಹೇಳಿದ.. ಅವರ ಮನೆಯಲ್ಲಿ 3  ದಿನ ಇವರು ಮನೆಯಲ್ಲಿ 3  ದಿನ ಊಟ ಮಾಡಿಕೊಂಡು ಪಾರಾಯಣ ಮಾಡಿಕೊಂಡು ಬದುಕ್ಕುತ್ತಿದ್ದೇನೆ ಎಂದ…

ಮನೆ ಹತ್ತಿರ ಅವನನ್ನು ಹುಡುಕಿ ಹೋದವರಿಗೆ, ಮಗನನ್ನು ರೂಮಿನ ಬಾತ್ ರೂಂನಲ್ಲಿ ನಿಲ್ಲಿಸಿ , ಮಗ ಮನೆಯಲ್ಲಿ ಇಲ್ಲ, ದಿಲ್ಲಿಗೆ ಹೋಗಿದ್ದಾನೆ ಅಂದರು  …

ನಾನು ಹೋಗಿದ್ದು ತಿಳಿದೊಡನೆ ಎದುರು ಮನೆಯ ಸಾಲಮ್ಮ, ಮತ್ತು ಪಕ್ಕದ ಮನೆಯ ಹೆಂಗಸಿನ ಸಹಾಯದಿಂದ ಒಳಗೆ ಸೇರಿಕೊಂಡು ಈಚೆ ಇಂದ ಬೀಗ ಹಾಕಿಸಿದರು .ಒಳಗಿಂದ screen ಇಳೆ ಬಿಟ್ಟು  ಕಿವಿಕೊಟ್ಟು ಕೇಳಿಸಿಕೊಳ್ಳುತ್ತಿದ್ದರು .

ಮಾವನ ಮಗನನ್ನು ಛೂ ಬಿಟ್ಟು ವೀಡಿಯೊ recording ಮಾಡಿಸುತ್ತಿದ್ದರು .

ಎಲ್ಲಿಯಾದರೂ ಪಂಚಾಯ್ತಿ ಏರ್ಪಟ್ಟರೆ ನೆಂಟರನ್ನು ಕಳಿಸಿ ಲೈವ್ commentary ತೆಗೆದುಕೊಳ್ಳುತ್ತಿದ್ದರು  ..

ಏನೇ ಮಾತು ಕತೆ ಇದ್ದರೂ ಯಾರೇ ಫೋನ್ ಮಾಡಿದರೂ , ಅದೆಲ್ಲ ರೆಕಾರ್ಡ್ ಮಾಡಿಕೊಳ್ಳುತ್ತಿದ್ದರು .
ಫೋನ್ ನಂಬರ್ ಬದಲಾಯಿಸಿ ನಾನು ಫೋನನ್ನೇ ಉಪಯೋಗಿಸುತ್ತಿಲ್ಲ ಅಂತ ನಿಜದ ತಲೆಮೇಲೆ  ಹೊಡೆದಂಗೆ ಸುಳ್ಳು ಹೇಳುತ್ತಿದ್ದ.
ನನ್ನ ಪ್ರತಿ ಇಮೇಲ್ ,message ಗಳನ್ನೂ evidence view point ನಿಂದ ನೋಡಿ,  ಅದರಲ್ಲಿ ನನ್ನ ವಿರುದ್ದ ತಿರುಗಬಹುದಾದ ವಿಷಯಗಳನ್ನು ಗುರುತು ಹಾಕಿಕೊಂಡು , ಅವನ body gaurd ಗಳಲ್ಲಿ ಓದಿ ತೋರಿಸಿ ಎತ್ತಿಟ್ಟುಕೊಳ್ಳುತ್ತಿದ್ದನು .ಫೋನ್ ಮಾಡಿ mutual divorceಗೆ ಬೇಕಾದ compensation ನನ್ನು ಮೇಲ್ ನಲ್ಲಿ ಕೇಳುವಂತೆ ತಿಳಿಸಿದ್ದನು.ಒಂದು ವೇಳೆ ನಾನು ಕೇಳಿದ್ದೆ ಆದರೆ ಅದನ್ನು ನಾನು money extortion  ಗೆ ಮಾಡುತ್ತಿರುವ black mail ಎಂದು ತೋರಿಸುವ ಹುನ್ನಾರವೂ ಇತ್ತು .ನನ್ನ ವಿರುದ್ದ ಹೇಳಬಹುದಾದ ಕತೆಗೆ ಇನ್ನೂ ಕಾಲ್ history ಗಳನ್ನೂ   ತೆಗೆಸುತ್ತಿದ್ದನು .ಕೇಶವ್ ಎನ್ನುವ ಹೆಸರಲ್ಲಿ ಚಾಟ್ ರಿಕ್ವೆಸ್ಟ್ ಕಳಿಸಿ, flirt  ಮಾಡಿ ಅದನ್ನು ಪ್ರೂಫ್ ಮಾಡಿಕೊಳ್ಳಲು ಪ್ರಯತ್ನಪಟ್ಟಿದ್ದನು.ರೌಡಿ ಫ್ರೆಂಡ್ಸ್ ಗಳ ಹತ್ತಿರ ಕತೆ ಹೇಳಿಕೊಂಡು ಸಿಂಪತಿ ಗಿಟ್ಟಿಸುಕೊಂಡು ಅವರ ಸಹಾಯವನ್ನೂ ಕೇಳಿಕೊಂಡಿದ್ದ .ಪೊಲೀಸರಿಗೆ 20  ಸಾವಿರ ಲಂಚ ಕೂಡ ತಲುಪ್ಪಿತ್ತು .
ಅವನನ್ನು ಕಾಪಾಡುತ್ತೇನೆ ಎಂದು ಅಭಯವಿತ್ತಿದ್ದ god father ಗಳನ್ನು ಚೆನ್ನಾಗಿ ಇಟ್ಟುಕೊಳ್ಳಲು , ಅವರ ಮಕ್ಕಳಿಗೆ ಬಟ್ಟೆಗಳನ್ನು ತೆಗೆದುಕೊಂಡು ಹೋಗಿ ಕೊಡುತ್ತಿದ್ದನು , ಮನೆಯವರನ್ನೆಲ್ಲ ಕಾರ್ ನಲ್ಲಿ ಊರು ಸುತ್ತಿಸಲು ಕರೆದುಕೊಂಡು ಹೋಗುತ್ತಿದ್ದನು , ಮಾಲ್ ನಲ್ಲಿ  ಸಿನಿಮಾ ತೋರಿಸುತ್ತಿದ್ದನು .ಅಂತ ಒಬ್ಬ ದೊಡ್ಡ ಮನುಷ್ಯನಿಗೆ ನಾನು ಮರ್ಯಾದೆ ಕೊಡಲಿಲ್ಲ ಎಂದು ದೂರಿದ್ದವನು , ಅದೇ ಮನುಷ್ಯ ಅವನ ವಿರುದ್ಧ  ಮಾತಾಡಿದ್ದೆ ತಡ   ಲುಚ್ಚ ಆಗಿಹೋಗಿದ್ದನು.ತೊಡುತ್ತಿದ್ದ ಹೆಲ್ಮೆಟ್ ನು ಸಹ ಬದಲಾಯಿಸಿ ಗುರುತು ಸಿಗದಂಗೆ ಮಾಡಿಕೊಂಡಿದ್ದನು.
ಆಫೀಸ್ ನ ಸಹೋದ್ಯೋಗಿಗಳೊಂದಿಗೆ ಹೆಂಡತಿಯ ದುಷ್ಟತನವನ್ನು ಹೇಳಿಕೊಂಡು, ಸಹಾಯ ಕೇಳಿಕೊಂಡಿದ್ದನು .ತಿನ್ನಲು  ಪ್ರೀತಿಯಿಂದ ನಾನೇನಾದರು ಕೊಡಲು ಹೋದರೂ , ಮಾಟ ಮಂತ್ರ , ಮದ್ದು ಹಾಕಿಸಿ ಬಿಟ್ಟಿದ್ದಾಳೆ ಎಂದು ಕಲ್ಪಿಸಿಕೊಂಡು ನಿರಾಕರಿಸುತ್ತಿದ್ದ !!!!

ಇನ್ನು ಅವನಕ್ಕ ಬೇರೆ ರೀತಿಯಲ್ಲೇ precaution  ತೆಗೆದುಕೊಂಡಿದ್ದಳು .
ಕಂಪ್ಲೈಂಟ್ ಆದ ದಿನದಿಂದಾಚೆಗೆ ಯಾರೇ ಕೇಳಿದರು ‘ ನನ್ನ ಗಂಡ ನನ್ನನ್ನು ಈಚೆಗೆ ಬಿಡುತ್ತಿಲ್ಲ , ತವರು ಮನೆಗೆ ಕಳಿಸುತ್ತಿಲ್ಲ, ನನ್ನ ಸಂಸಾರ ಹಾಳಾಗಿ ಬಿಡುತ್ತದೆ  , ನನಗು ಅದಕ್ಕೂ ಸಂಬಂಧವಿಲ್ಲ ,ಅವರೆಲ್ಲ ಏನಾದರೋ ಎಲ್ಲಿಗೋದರೋ ಗೊತ್ತಿಲ್ಲ, ನನ್ನ ಮಾತು ಈಗ ಏನು ನಡೆಯುತ್ತಿಲ್ಲ  ‘ ಎಂದೆಲ್ಲ ಹೇಳುತ್ತಿದ್ದಳು .
ಆದರೆ ಪ್ರತಿಯೊಂದರಲ್ಲೂ ಮುಖ್ಯ ಪಾತ್ರ ಅವಳೇ …..ಎಲ್ಲಾ ಮಾಡುತ್ತಿದ್ದವಳು ಅವಳೇ  .
ತಮ್ಮನನ್ನು ಕರೆದುಕೊಂಡು ನೆಂಟರ ಮನೆಗಳಿಗೆ ಹೋಗಿ ಚಾಡಿಹೇಳಿ, ಷಡ್ಯಂತ್ರ ರೂಪಿಸುತ್ತಿದ್ದಳು.
ಬಹಳಷ್ಟು ಜನಕ್ಕೆ  ಫೋನ್ ಮಾಡಿ ‘ಹುಡಿಗಿಗೆ ಲವ್ ಅಫೈರ್ ಇತ್ತು, ಪ್ರಸ್ತದ ದಿನವೇ ಅದು ಸಾಬೀತಾಯಿತು ,ನಾವು ಮೋಸ ಹೋದೆವು ಎಂದು ಗೋಳಾಡುತ್ತಿದ್ದಳು’
ಕಾಂಟಾಕ್ಟ್ ಗಳನೆಲ್ಲ ಉಪಯೋಗಿಸಿಕೊಂಡು god father ಗಳನ್ನೂ ಸೃಷ್ಟಿ ಮಾಡಿ, ಅವರ ಹತ್ತಿರ ದುಖ ತೋಡಿಕೊಂಡು ಆಮೀಷವೊಡ್ಡಿ, ಸಿಂಪತಿಗಿಟ್ಟಿಸಿಕೊಂಡು ತಮ್ಮನಿಗೆ ಸುರಕ್ಷತೆ ಒದಗಿಸಿದ್ದಳು .ಪೋಲಿಸ್ನವರೊಂದಿಗೆ ಡೀಲ್ ಮಾಡಿಸಿದ್ದು ಅವಳೇ  .ನನ್ನ documentgsನೆಲ್ಲ handle  ಮಾಡುತ್ತಾ  ಇಲ್ಲಿಂದಲ್ಲಿಗೆ ಅಲ್ಲಿಂದಿಲ್ಲಿಗೆ ಓಡಾಡುತ್ತ  ಲಾಯರ್ ,ಎಲ್ಲಾರನ್ನೂ ನಿಭಾಯಿಸಿದ್ದಳು  !! ನನ್ನ ಮೇಲೆ harraasment complaint ಕೂಡ ಕೊಟ್ಟಿದ್ದಳು , ಮುಂದೆ ಅವಳ ತಮ್ಮ ಹೂಡಬಹುದ್ದಾದ  divorce  ದಾವೆಗೆ ಪುರಾವೆ ಒದಗಿಸಲು !!

ನನಗೆ ಆ ಮನೆಯ ಒಳಹರಿವು ಬಹಳ ಚೆನ್ನಾಗೆ ತಿಳಿದಿತ್ತು. ಆ ಮನೆಯ ಎಲ್ಲಾ ನಿರ್ಧಾರಗಳು  ಅವಳ ನಿರ್ಧಾರಗಳಾಗಿರುತ್ತಿದ್ದವು.ಅವಳ ಟಸ್ಸೆ ಬೀಳದೆ ಆ ಮನೆಯ ಕವಡೆಯೂ ಮಿಸುಕಾಡುತ್ತಿರಲಿಲ್ಲ. ಆ ಮನೆಯ ಒಳಿತನ್ನು ಬಯಸಿ, ಪ್ರಾಣ ತೊರೆದು ಹೋರಾಟ ಮಾಡುವ ಆಪತ್ಭಾಂಧವಳು ಅವಳಾಗಿದ್ದಳು .ಮನೆಯ ಯಜಮಾನಿಯು ಅವಳಾಗಿದ್ದಳು .ತಮ್ಮನಂತೂ  ವ್ಯವಹಾರಚತುರೆ ಅಕ್ಕನ  ಮಾತನ್ನು ಉಲ್ಲಂಗಿಸುತ್ತಿರಲಿಲ್ಲ .

ಇನ್ನು ನನ್ನ ಅತ್ತೆಯಂತು ಯಾವ ಮಟ್ಟಕ್ಕಾದರೂ ಇಳಿದು ಹೋರಾಡಲು ಸಿದ್ದರಿದ್ದರು .
ನನ್ನ ಮೇಲೆ ಅವರು ಪ್ರತ್ಯೇಕ complaint ದಾಖಲಿಸಿದ್ದರು !ಹುಡುಗಿಗೆ ಮದುವೆಯಾಗಲು ಇಷ್ಟವಿರಲಿಲ್ಲ , ಇದು ಬಲವಂತದ ಮದುವೆ ಎಂದು ಸಾವಿರ ಬಾರಿ ನನ್ನ ಬಳಿಯೇ ಹೇಳುತ್ತಿದ್ದಳು , ಯಾವಾಗಲು ರಗಳೆ, ರಂಪ , ಜಗಳ ಮಾಡುತ್ತಿದ್ದಳು , ಎಷ್ಟೇ ಬಾರಿ ಬುದ್ಧಿ ಹೇಳಿಸಿದರೂ, ಹೇಳದೆ  ಕೇಳದೆ  ಮನೆ ಬಿಟ್ಟು ಓಡಿಹೋದಳು, ಈಗ ನೆಂಟರೊಡನೆ ಬಂದು ದುಡ್ಡುಕೊಡದ್ದಿದ್ದರೆ ವರದಕ್ಷಿಣೆ ಕೇಸ್ ಹಾಕುವುದಾಗಿ ಹೆದರಿಸುತ್ತಿದ್ದಾಳೆ ಎನ್ನುವುದು ಅದರ ಸಾರಾಂಶವಾಗಿತ್ತು .
ಮನೆಯ ಹತ್ತಿರ ಹೋದರೆ ಅಲ್ಲಿದ್ದ ಸಾಲಮ್ಮ, ಮತ್ತಿತರ ಸಹಾಯ ದಿಂದ, ನನ್ನ ನಾದಿನಿಗೆ ಫೋನ್ ಹೋಗಿ, ಅವಳಿಂದ ಮಾವನ ಮಗನಿಗೆ ಕಾಲ್ ಹೋಗಿ , ಅಲ್ಲಿಂದ ಕಂಟ್ರೋಲ್ ರೂಮಿಗೆ ಕಾಲ್ ಹೋಗಿ ಅಲ್ಲಿಂದ ಪೊಲೀಸರು ದಾವಿಸುತ್ತಿದರು .
 ಹಾದಿರಂಪ ಬೀದಿರಂಪ ಮಾಡುತ್ತಾ ನನ್ನ ಅತ್ತೆ ಲಾಯೆರ್ ಹೇಳಿಕೊಟ್ಟಿದ್ದ 4  ಪಾಯಿಂಟ್ಗಳನ್ನಷ್ಟೇ   ಹೇಳುತ್ತಿದರು.
೧. ಸುಮಾರು 25  ಜನರು  3 -4   ಕಾರುಗಳಲ್ಲಿ   ಬಂದು ನನ್ನನು ಹೆದರಿಸಿ , ಒಡೆದು ಹೋದರು .
೨. ನನ್ನ ಮಗ ಸುಮ್ಮ ಸುಮ್ಮನೆ ಅನುಮಾನ ಪಡುತ್ತಿದ್ದನ ?
೩. ನನ್ನ ಮಗನ ಕೆಲಸ ಹೊರಟುಹೋಯಿತು
೪. ನನ್ನನ್ನು ಕಸಗುಡಿಸುವವಳು ಎಂದು ಹೀಯಾಳಿಸುತ್ತಿದ್ದಳು.
ಬರುತ್ತಿದ್ದ ಪೊಲೀಸರು ಸಾಕಷ್ಟು ತಿಂದ್ದಿದ್ದರಿಂದ ಅವರ ಪರವಾಗೇ ನಿಂತು , ನಮ್ಮನ್ನು ಅಲ್ಲಿಂದ ಕಳಿಸುತ್ತಿದ್ದರು.
ಕೆಲವೇ ನಿಮಿಷಗಳಲ್ಲಿ ಅದಕೆಲ್ಲ ಕುಮ್ಮಕ್ಕಾಗಿದ್ದ ವ್ಯಕ್ತಿ ಅಲ್ಲಿಗೆ ಬಂದು, ನನ್ನ ಅತ್ತೆ ಅವರೊಡನೆ ಗೆದ್ದ ಸಂಭ್ರಮವನ್ನು ಹಂಚಿಕೊಳ್ಳುತ್ತಿದ್ದರು .ಹೇಗೆ ಅವಳಿಗೆ ಬುದ್ದಿ ಕಲಿಸಿದೆ , ಹೇಗೆ ಓಡಿಸಿದೆ ಎನ್ನುವ ಜಯಭೇರಿ ಸಂತೋಷಕ್ಕೆ ಕಾರಣವಾಗಿತ್ತು.   

ನನಗ ತಿಳಿದಿತ್ತು ಅದರ ಹಿಂದಿನ ಪ್ರತಿ ಉದ್ದೇಶ ..!!! ನಾನು ಅಲ್ಲಿಗೆ ಹೋಗದಂತೆ ತಡೆಯುವುದು, ಕೇಸ್ ಏನಾದರು ಹಾಕಿದರೆ ಅದನ್ನು ವೀಕ್ ಮಾಡುವುದು , ಇನ್ನೆರಡು ವರ್ಷ ಬಿಟ್ಟು ಹೆಂಡತಿಯೇ ಮನೆ ಬಿಟ್ಟು ಹೊರಟುಹೋಗಿದ್ದಾಳೆ ಎಂದು ಕೇಸ್ ಹಾಕಿಸಿ  divorce  ಪಡೆಯುವುದು …..
ಅಷ್ಟಲ್ಲದೇ  ನಾವೇನಾದರೂ ಕಂಪ್ಲೈಂಟ್ ಕೊಟ್ಟರೆ ಅದಕ್ಕೆ ಪ್ರತಿಯಾಗಿ ನಮ್ಮ ಮನೆಯರ ಮೇಲೆಲ್ಲಾ ಕಂಪ್ಲೈಂಟ್ಕೊಟ್ಟು ಹೇಗೆ ನರಳಾಡಿಸಿ ಕೆಲಸದಿಂದತೆಗೆಸಿ ಗೋಳಾಡಿಸಬೇಕು , ರೌಡಿಗಳನ್ನೂ ಬಿಟ್ಟು ಹೇಗೆ ಬುದ್ಧಿಕಲಿಸಬೇಕು ಎನ್ನುವ ಲಿಸ್ಟ್ ಗಳನ್ನೂ ತಯಾರು ಮಾಡಿಟ್ಟುಕೊಂಡ್ಡಿದ್ದರು  !!!!! 🙂

ಇನ್ನು ನನ್ನ ಗಂಡನಿಗೆ ಬುದ್ಧಿ ಭ್ರಮಣೆಯಾದಂತೆ ತಿಳಿದ್ದಿದ್ದೆಲವು ಒಂದೇ , ಹೆಂಡತಿಯನ್ನು ನರಳಿಸಿ divorce  ಪಡೆಯಬೇಕು .. ತನ್ನದೇನು ತಪ್ಪಿಲ್ಲ …
ಅದಕ್ಕಾಗಿ ಬೇಕಾದ ತಯಾರಿಗಳನ್ನು ಮಾಡಿಕೊಳ್ಳುತ್ತಿದ್ದ…
ಲಾಯರ್ ತಿಳಿಸಿದ್ದ ಮೆಂಟಲ್ cruelity ಯಾ ground ಸೃಷ್ಟಿ ಮಾಡಿಕೊಳ್ಳುವಸಲುವಾಗಿ ಸಿಕ್ಕಿದಾಗಲೆಲ್ಲ record ಮಾಡಿಕೊಳ್ಳುತ್ತ  ಹೇಳುತಿದ್ದ
–ನಾನು ಏನು ಅನ್ಯಾಯ ಮಾಡಿಲ್ಲ. ಕಾನೂನೆಲ್ಲ ಹುಡುಗಿಯರ ಪರವಾಗೇ ಇದೆ .
–ಗಂಡನಿಗೆ ಇಷ್ಟವಿಲ್ಲದ್ದಿದರು ಪರ ಪುರ್ರುಷನೊಂದಿಗೆ ಯಾಕೆ ಮಾತಾಡಿದೆ?(mental cruelity grounds)
–ನಿನ್ನ ಭಾವ ಚಿಪ್ಪಕ್ಕ ಸೇರಿಕೊಂಡು ನನ್ನನ್ನು ರಕ್ತ ಬರುವ ಹಾಗೆ ಒಡೆದರು (mental cruelity grounds)
–ಮನೆಗೆಲಸ, ಅಡಿಗೆ , ತಿಂಡಿ ಯಾವ ಜವಾಬ್ದಾರಿಯನ್ನು ನಿಭಾಯಿಸದೇ ಬರಿ ತವರು ಮನೆಗೆ ಹೋಗುತ್ತಿದೆ(conjugal rights not fullfilled)
–ಮಕ್ಕಳನ್ನು ಮಾಡಿಕೊಳ್ಳಲು ನಿರಾಕರಿಸುತ್ತಿದ್ದೆ  (non-consummated marriage)    
–ನಿನ್ನ ಭಾವ ಪೋಲಿಸ್ ಡಿಪಾರ್ಟ್ಮೆಂಟ್ನಲ್ಲಿ ಇದ್ದಾರೆಂದು, ಅಧಿಕಾರ ದುರುಪಯೋಗಪಡಿಸಿಕೊಂಡು   ಒತ್ತಡ ಹಾಕಿಸುತ್ತಿದ್ದಾರೆ (influence)

   ಸಂಬಂಧಗಳು ಯಾರ್ಯಾರದ್ದೋ ರಾಜಕೀಯ , ಅನೀತಿ , ನಾಟಕಗಳಿಂದ ವಿನಾಕಾರಣ ಹೇಗೆ ಸಾವನ್ನಪ್ಪುತ್ತವೆ  ಎನ್ನುವುದಕ್ಕೆ ಇದೆ ನಿದರ್ಶನ !!!
ಕಂಗಾಲಾದವನು ಯಾರೇನೆ ಹೇಳಿದರು ನಂಬುವಂತೆ ಅವರಿವರು ಹೇಳಿದ್ದನ್ನು ನಂಬಿಕೊಂಡು  , ತಲೆಗೆ ತುಂಬಿಸಿದ್ದನ್ನೆಲ್ಲ ತುಂಬಿಕೊಂಡು ಪ್ರತಿಕಾರಕ್ಕಾಗಿ ಹಾತೊರೆಯುತ್ತಿದ್ದ  .
ಅವನಿಗೆ ಬೇಕಿದ್ದುದ್ದು risk ಇಲ್ಲದ ಬದುಕು… ಅಷ್ಟೇ.. ಲಾಭವಿಲ್ಲದಾಗ ಯಾವ ಬಂಧವು, ಯಾವ ಧರ್ಮವು , ಯಾವ ನೆನಪುಗಳು  ಅವನ್ನನ್ನು ತಡೆಯುತ್ತಿರಲಿಲ್ಲ .
ಆದರೆ ನಾನು ಅವನು ಗಂಡ ಹೆಂಡತಿ,ಹೆಣ್ಣು ಗಂಡು ಎನ್ನುವ ಒಂದು ಬಂಧನ ಸಾಕಿತ್ತು ನನಗೆ ಎಲ್ಲಿಂದಲಾದರೂ , ಹೇಗಾದರೂ ಶುರುಮಾಡಿ  ಚೆಂದಾಗಿ ಸಂಸಾರ ಮಾಡುತ್ತೇನೆ ಎನ್ನುವ  ಶಕ್ತಿ,ಕನಸು,ಆಸೆ ಹುಟ್ಟಿಸಲು …
ಆದರೆ ಅವನಿಗೆ ಬೇಕಿದ್ದೆಲ್ಲವು ಅವನ ಅಮ್ಮ, ಅಕ್ಕನ ಶಾಮೀಲಾಗುವಿಕೆ…    ಮತ್ತು ರಣತಂತ್ರ !!!!!  

   
 
    

 
   

 

 

ಮನಸಿನ ಕೊಲೆ ಮತ್ತು ಕಂಪ್ಲೇಂಟ್

ಒಂದು ರೀತಿಯಲ್ಲಿ  ಸೆರಗಿನಲ್ಲಿ ಬಚ್ಚಿಟ್ಟು ಬಿಟ್ಟಿದ್ದರು ಅವನ್ನನ್ನು , ನನ್ನ ಕೈಗೆ ಸಿಗದಂತೆ …!

ನಾವೆಲ್ಲಾ ಎಂತಹ ಸಜ್ಜನರು,ಸಂಸಾರಸ್ತರು ,ಎಷ್ಟೆಲ್ಲಾ ಮಾಡಿದೆವು, ಹೇಗೆಲ್ಲ ನೋಡಿಕೊಂಡೆವು,ನನ್ನ ಒಬ್ಬನೇ ಮಗ,ನನ್ನ ಒಬ್ಬನೇ ತಮ್ಮ—   ತಂದೆ ಇಲ್ಲದ ಹುಡುಗ ಕಾಪಾಡೋಕೆ ಅಂತ ಮಧ್ಯ ಬರುತ್ತೇವೆ ಎಂದು ಕಣ್ಣೀರು ಸುರಿಸುತ್ತಾ,  ಮಾತುಮಾತಿಗೂ ಅವನು ಗಂಡಸು ,ಅವನು ಗಂಡಸು ಎನ್ನುತ್ತಾ ಅವನ ಗಂಡಸುತನವನ್ನು ಮಾತಿನಲ್ಲೇ ನೆನಪಿಸಿ ನೆನಪಿಸಿ ಗಂಡಸಾಗಿಸಿ,ಅಮ್ಮ ಮಗಳು ಪ್ರತಿಷ್ಟಾಪಿಸುತ್ತಿರುತ್ತಿದ್ದರು .ಜೊತೆ ಜೊತೆಗೆ ಹೆಣ್ಣಾದವಳು ಹೀಗೆ ಮಾಡುವುದ, ಹಾಗೆ ಮಾಡುವುದ ಎನ್ನುವ ಹೆಣ್ತನ  ಉಲ್ಲಂಘನೆ ಮಾಡಿದ ಆರೋಪಗಳು ಬೇರೆ ನನ್ನ ಮೇಲೆ  .
ಕೂಗಿ ಕಿರುಚಾಡಿ ಬಿಡಬೇಕೆನಿಸುವಷ್ಟು  ಕುದಿದು ಹೋಗುತ್ತಿತ್ತು,  –‘ಅವನ ಹೆಂಡತಿ ನಾನು , ಅವನು ಗಂಡಸು ಹೌದೋ ಅಲ್ಲವೋ ಹೇಳಬೇಕಾದವಳು  , ಹೇಳಲು ಸಾಧ್ಯವಿರುವವಳು ನಾನಷ್ಟೇ………’

‘ಇಲ್ಲ,ಇವಳ ಜೊತೆ ಸಂಸಾರ ಮಾಡಲು ನನ್ನಿಂದ ಆಗೋದಿಲ್ಲ, ಸತ್ತೆ ಹೋಗುತ್ತೀನೆ’ ಅಂತ ವೇಷ ಹಾಕಿ ಕುಣಿದಾಡುತ್ತಿದ್ದರೆ,ಕೇಳಿಬಿಡಬೇಕೆನಿಸುತ್ತಿತ್ತು ‘ಯಾವ ತೆವಲಿಗೆ ಅಂದು ತಾಳಿ ಕಟ್ಟಿದೆಯೋ?’, ಅಂತ ….

ಸುಮಾರು ವರ್ಷ ಆಗುತ್ತಲೇ ಬಂತು , ಕೈಗೆ ಸಿಗುತ್ತಿಲ್ಲ ಮಾರಾಯ ,ಕಡೆಪಕ್ಷ ಕಟ್ಟಿಕೊಂಡ ಹೆಂಡತಿಗೆ ಫೋನ್ ನಂಬರ್ ಕೂಡ ಕೊಟ್ಟಿಲ್ಲ .ಕಷ್ಟಪಟ್ಟು ಭೇಟಿಮಾಡಿದರೆ ಮತ್ತದೇ ಹುಲಿವೇಷ ….”ನಾನು ಗಂಡಸು ,ಹತ್ತು ಮನೆಯಲ್ಲಿ ಹೊಟ್ಟೆ ಹೊರೆದು ತಿನ್ನುತ್ತೇನೆ ,ನಾನು ಗಂಡಸು ಫುಟ್ಪಾತ್ ಮೇಲೆ ಮಲಗಿ ತೋರಿಸುತ್ತೇನೆ,ನಿನ್ನ ಹುಟ್ಟು ನೋಡು ,ನಿನ್ನ ಗತಿ ನೋಡು ….ನಮ್ಮಮ್ಮನೆ ನನ್ನ ಸಾಕಬೇಕು ಅಂತ ಏನು ಇಲ್ಲ ,ನಾನು ಗಂಡಸು ಸ್ವಾತಂತ್ರಿ! ನನ್ನನ್ನು ನಾನೇ ಸಾಕಿಕೊಳ್ಳುತ್ತೇನೆ  …ನಾನು ಗಂಡಸು …”

ಅಳಬೇಕೋ ನಗಬೇಕೋ ಗೊತ್ತಾಗುವುದಿಲ್ಲ ನನಗೆ …ನನಗೆ ಗೊತ್ತು ಇವೆಲ್ಲ ಅವನ ಮಾತಗಳಲ್ಲ …ಅವನ ಅಮ್ಮ, ಅಕ್ಕ ನಾಲಿಗೆಯಲ್ಲಿ ಕೂತು ಆಡಿಸುತ್ತಿರುವಂತಹವುಗಳು   …ಆಕ್ರೋಶ ,ಕೋಪ ,ಅಸಹ್ಯ ಎಲ್ಲ ಒಟ್ಟೊಟ್ಟಿಗೆ ನುಗ್ಗಿ ಬರುತ್ತದೆ ..ಆದರು ಅಸಹಾಯಕಳು ನಾನು..ನನಗೆ ಅವನು ಬೇಕು !
ಅವರುಗಳ ಪ್ರಕಾರ ಹೆಣ್ಣು ಗಂಡನಮನೆ ಬಿಟ್ಟು ತವರುಮನೆ ಸೇರಿದರೆ ,ಸಮಾಜದಲ್ಲಿ ಮಾನಹೋಗಿ ,ಜನ ಕಲ್ಲುತೆಗೆದುಕೊಂಡು ಹೊಡೆದು ಹೊಡೆದು ಸಾಯಿಸಿಬಿಡುತ್ತಾರೆ .ಅಥವ ಈ  ಸಿನಿಮಾದಲ್ಲಿ ತೋರಿಸುವ ಹಾಗೆ,  ನಡೆದು ಹೋಗುತ್ತಿದ್ದರೆ ಗುಂಪುಗಟ್ಟಿ  ಅತ್ತಿತ್ತ ನಿಂತ ಜನರು , ಇವಳು ಹಂಗಂತೆ,ಕತೆ ಹಿಂಗಂತೆ,ಅವಳ ಅಮ್ಮ ಮಗಳನ್ನು ಬಾಳಿಸಲಿಲ್ಲವಂತೆ ಅಂತೆಲ್ಲ ಮಾತಾಡುತ್ತಾರೆ.ಹಾಗೆ ಹೇಳಿಹೇಳಿಯೇ ಹೆದರಿಸಿಬಿಟ್ಟಿದ್ದರು , ನಿಜವೇನೋ ಅನ್ನುವ ಹಾಗೆ ನಂಬಿದ್ದ ನನಗೆ , ಆಫೀಸಿನಲ್ಲಿಯೂ ತಲೆ ಎತ್ತಿ ನಡೆಯುಲಾಗುತ್ತಿರಲಿಲ್ಲ ,ಸತ್ತಂತೆ ಆಗಿಬಿಟ್ಟಿದ್ದೆ!!!
ಮತ್ತು ಆ ರೀತಿ ಆಗಬಾರದೆಂದರೆ, ಎಲ್ಲವನ್ನು ಸಹಿಸಿಕೊಂಡು ಸಂಸಾರ ಮಾಡಬೇಕಿತ್ತು.ಸಹಿಸಲಾಗದಿದ್ದ ದಿನ ಪೋಲಿಸ್ ವರೆಗೂ ಹೋದೆನಾದರಿಂದ, ಇಂದು ಅಂತ ಸನ್ನಿವೇಶವನ್ನು ಸೃಷ್ಟಿಮಾಡುವ ಸನ್ನಿಹಿತದಲ್ಲಿದ್ದಾರೆ.ನಿಜ ಬೆಂಗಳೂರಲ್ಲಿ ಬದುಕಲು ಬೇಕಿರುವುದು ದುಡ್ಡು ಒಂದೇ ,ಮಿಕ್ಕೆಲ್ಲ ಏನೇ ಆದರು –ಹೆಣ್ಣಾದರು,ಗಂಡಾದರು ,ಎರಡು ಆಗದೆ ಇದ್ದರು ಬದುಕಿಬಿಡಬಹುದು.ಅವನನ್ನು ಅವನ ದುರಹಂಕಾರವನ್ನು ದಿಕ್ಕರಿಸಿದ ನಾನು  ಧೃತಿಗೆಟ್ಟಿದ್ದೆ.ಅಲ್ಲಿ ಇಲ್ಲಿ ಸುದ್ದಿಗಳು ತೂರಾಡಿ , ಹಾರಾಡಿ ,ಕತೆಗಳು ಸೃಷ್ಟಿಯಾಗಿ ,ಸರಿದಾಡಿ,ಡಿಕ್ಕಿ ಹೊಡೆದು ಮರಳಿ ನನ್ನನ್ನೇ ಅಪ್ಪಳಿಸುವವರೆಗೂ –‘ ಹುಡುಗಿಗೆ ಯಾರೊಂದಿಗೋ ಸಂಬಂಧವಿತ್ತಂತೆ,character ಸರಿ ಇರಲಿಲ್ಲವಂತೆ  , ಓಡಿ ಹೋದಳಂತೆ ‘ ಕುಸಿದೇ  ಬಿದ್ದೆ ….ಅವರ ಮಾತುಗಳಿಗೆ ಬೇರೆಯವರನ್ನು ಕೊಲ್ಲುವಷ್ಟು  ಶಕ್ತಿ ಇತ್ತು…ಯಾವುದಕ್ಕೂ ಮಣಿಯದ ಹೆಣ್ಣು ಬೆದರುವುದು ಇಂತ ಅಪಾಧನೆಗಳಿಗೆ ಅಲ್ಲವೇ ….
ಗಂಡಿನ ಕಡೆಯವರಾಗಿ ಅಡ್ಡಿ ಆತಂಕ,ಅಡಚಣೆ ,ಅವಮಾನಗಳನ್ನೂ ಸೃಷ್ಟಿಮಾಡುತ್ತಲಿರುವುದು t.v ಧಾರಾವಾಹಿಗಳಲ್ಲಂತೆ ಬದುಕಿನಲ್ಲೂ    ನೈಜ್ಯ ! ಮದುವೆ ಮಾಡುವುದು ಮತ್ತು ಮುರಿಯುವುದು as usual ಮನೆ ಹೆಂಗಸರ ಕೈನಲ್ಲೇ ಇರುತ್ತದೆ ,especially ನಾದಿನಿಯ ಕೈನಲ್ಲಿ .ನನ್ನ ಗಂಡನಂತ ಪುರುಷನಿಗೆ ತಲೆಗೆ ತುಂಬುವುದು ಅತಿ ಸುಲಭವಾದರಿಂದ ,’ಅವಳು ಹೆಣ್ಣೇ ಅಲ್ಲ ,ಸಂಸಾರಸ್ತೆಯ ಗುಣ ಕಿಂಚಿತ್ತು ಇಲ್ಲ ,ನಮಗೆಲ್ಲ ಗೌರವ ಕೊಡದೆ ಅವಹೇಳನ ಮಾಡಿದವಳನ್ನು ನೀನು ಕ್ಷಮಿಸಬಾರದು,ಸರಿಯಾಗಿ ಬುದ್ದಿಕಲಿಸಬೇಕು ,ಸುಮ್ಮನೆ ಬಿಡಬಾರದು, ಬಿಟ್ಟರೆ ನಿನ್ನನ್ನು ಕೈ ಗೊಂಬೆ ಮಾಡಿಕೊಂಡು ಮೂಲೆಯಲ್ಲಿ ಕೂಡಿಸಿ ಬಿಡುತ್ತಾಳೆ,ನಾವೆಲ್ಲಾ ಅವಳು ಹೇಳಿದಂಗೆ ಕೇಳಬೇಕಾಗುತ್ತದೆ ‘ ಏನೇನೋ ತಲೆ ತುಂಬಿಸಿಯಾಗಿತ್ತು  ….  

ಉಟ್ಟ ಬಟ್ಟೆಯಲ್ಲಿ ಮಧ್ಯರಾತ್ರಿ ಪೋಲಿಸ್ ಸ್ಟೇಷನ್ನಿಂದ ಅಮ್ಮನ ಮನೆಗೆ ಬಂದವಳು ನಾನು , ಆಫೀಸಿಗೆ ತೊಡಲು ಸಹ ಬಟ್ಟೆಗಳಿರಲಿಲ್ಲ…ಎರಡು ದಿನ ಬಿಟ್ಟು ಅವನ ಆಫೀಸ್ ಹತ್ತಿರಹೋಗಿ ಕೇಳಿಕೊಂಡಿದ್ದೆ ಮನೆಗೆ ಕರೆದುಕೊಂಡು ಹೋಗು ..ಅಂತಿಪ್ಪ ಗಂಡಸು ತನ್ನ ಹೆಂಡತಿಯನ್ನು ತನ್ನ ಮನೆಗೆ ಕರೆದುಕೊಂಡು ಹೋಗಲು,ಅವನ್ಯಾರೋ ದೊಣ್ಣೆನಾಯಕ ಚಿಕ್ಕಪ್ಪನ ಅಪ್ಪಣೆಯನ್ನು ಕೇಳಿದ್ದ …ಅವನೂ, ಮೆತ್ತಗೆ ವಿಷಸರ್ಪ ಬಿಟ್ಟಿದ್ದ . ‘ಅವಳಿಗೆ ಬೇಕಿರುವುದು ಗಂಡನಲ್ಲ, ಒಬ್ಬ ಗಂಡಸು ಮಾತ್ರ’  .ಮಖೇಡಿ ಗಂಡ ಹಿಂದಿನ ಬಾಗಿಲಿನಿಂದ  ಕಾಣದಂತೆ ಜಾರಿಕೊಂಡು ನನ್ನ ಒಬ್ಬಳನ್ನೇ ಅಲ್ಲೇ ಬಿಟ್ಟು ಓಡಿಹೋಗಿದ್ದ.ಕಾದೂ  ಕಾದೂ  ಹಿಂದಿರುಗಿದ್ದೆ ನಾನು  .
ಮೇಲ್ ಕಳಿಸಿದ್ದೆ ,ಮಾರಾಯ ಬಟ್ಟೆಗಳನ್ನಾದರು  ದಯಪಾಲಿಸು … ಅದೆಲ್ಲಿ ಅಡಗಿ ಹಾಳಾಗಿ ಹೋಗಿದ್ದನೋ , ಎದುರಿಗೆ ಬರುತ್ತಿರಲಿಲ್ಲ,reply ಸಹ ಇಲ್ಲ . ಮನೆ ಹತ್ತಿರ ಹೋದರೆ ಅವನಮ್ಮನದು ಅದೇ ಹಾದಿರಂಪ ಬೀದಿ ರಂಪ , ಮನೆಯಲಿ ಮಗ ಇಲ್ಲ, ಎಲ್ಲಿದ್ದಾನೋ ಗೊತ್ತಿಲ್ಲ ,ಈ ಮನೆ ನನ್ನದು, ನಿಂಗೆ ಹಕ್ಕಿಲ್ಲ ….!!!
ಯಾಕೆ ಹೀಗೆಲ್ಲ ಸುದ್ದಿ ಎಬ್ಬಿಸಿದ್ದೀರಿ ಎಂದು ಜೋರು ಮಾಡಿ ಕೇಳಿದರೆ , ಎಷ್ಟು ಸುಲಭವಾಗಿ ,ಮಹಾನ್ ಸಾದ್ವಿಯಂತೆ ಹೇಳಿತ್ತಿದ್ದ ,ಯಾರು ಹೇಳಿದ್ದು,ಅವರನ್ನು  ನನ್ನೆದುರಿಗೆ ಕರೆಸು, ಕಪಾಳಕ್ಕೆ ಹೊಡೆಯುತ್ತೀನಿ–ಆ ಕ್ಷಣಕ್ಕೆ  ನಾನು ಮರುಳಾಗಿಬಿಡುತ್ತಿದ್ದೆ  .ಮತ್ತೆ ಗುಂಪಿನಲ್ಲಿ ಸೇರಿಕೊಂಡಾಗ ಮಧ್ಯದಿಂದ ಅವನೇ “ಯಾವನ ಜೊತೆಗೋ ಯಾಕೆ ……” ಅಂತೆಲ್ಲ ಏನೇನೋ ಅಂದುಬಿಡುತ್ತಿದ್ದ .ನಮ್ಮ ಅಕ್ಕಂದಿರೇನಾದರು ಮುಜುಗರಕ್ಕೊಳಗಾಗಿ  ‘ನೀವೇ ಹೀಗೆಲ್ಲ ಹೆಂಡತಿ ಮೇಲೆ ಹೇಳಿದರೆ ಹೇಗೆ’ ಎನ್ನಲು , ‘ನಿಮಗೆ ಅವಳ ಮೇಲೆ ನಂಬಿಕೆ ಇದೆಯಲ್ಲವ ?ನಾವೇನೇ ಹೇಳಿದರು ಯಾಕೆ ತಲೆ ಕೆಡಿಸಿಕೊಳ್ಳುತ್ತೀರಿ’ ಎಂದು ದೂರ್ತ  ಲಕ್ಷಣ  ತೋರಿಬಿಡುತ್ತಿದ್ದ.
ಹೇಸಿಗೆ ಮೇಲೆ ಹೊರಳಾಡಿದಂತ  ಅನುಭವ !!!!
ಅವನಮ್ಮ,ಮತ್ತು ಅವನಕ್ಕ ಸೇರಿಕೊಂಡು ನನ್ನಮೇಲೆ  ಹೊಸ ಹೊಸ ಪದಪುಂಜಗಳನ್ನೇ ಸೃಷ್ಟಿಸಿದ್ದರು ,’ಲಿಂಕ್ ಇತ್ತಂತೆ,ಕನೆಕ್ಷನ್ ಇತ್ತಂತೆ ,ಅಫೇರ್ ಇತ್ತಂತೆ …..’ 
ಯಾರಾದರು ನಂಬಲು ಕೊಂಚ ತಡ ಮಾಡಿ  ‘ಹುಡುಗಿ ಹಾಗೆ ಕಾಣಲ್ವಲ್ಲ , ಅವಳಪ್ಪ ಸತ್ತು  ವರ್ಷವೇ ಆಗಿತ್ತು  ಅಲ್ವಾ , ಹಂಗೇನಾದ್ರು ಇದ್ದಿದ್ದರೆ ಓಡಿಹೋಗಿ ಮದುವೆ ಆಗಿರಬಹುದಿತ್ತು ‘ ಅಂತ  ಆಕ್ಷೇಪಣೆ ತೆಗೆದರೆ , ಸ್ವತಹ ಕಣ್ಣಾರೆ ಕಂಡು  ,ಪ್ರಮಾಣಿಸಿದಂತೆ  ‘ಇಲ್ಲಾಣ್ಣ…. ನಮ್ಮತ್ರ ಎಲ್ಲಾ ಪ್ರೂಫು ಇದೆ, ಲವ್ ಲೆಟರ್ಸ ಇದೆ, ಫೋಟೋ ಇದೆ, ನಾವೇ ನೋಡಿದ್ದೀವಿ ಗಾಡಿಲಿ ಕೂತು ಹೋಗೋದನ್ನ,  ನಾಮಕಾವಸ್ತೆಗೆ ಇವನನ್ನು ಮದುವೆ  ಆಗಿರೋದು ,protection ಗೆ ಒಬ್ಬ ಗಂಡಬೇಕು ಅಂತ , ನಮ್ಮ ಹಣೆಬರಹ ಮೋಸಹೋದೆವು ‘ ಎಂದು ನಂಬಿಸುತ್ತಿದ್ದರು ..
ಅದರಲ್ಲೂ ಹೆಂಗಸರ ಮಧ್ಯವೇ ಈ ರೀತಿ ಕತೆಗಳು ಹೆಚ್ಚು ಚಲಾವಣೆಗೊಂಡು  ನಂಬಲ್ಪಡುತ್ತಿದ್ದದ್ದು.ಕತೆ ಎಲ್ಲಾ ಕೇಳಿ ಲೊಚಗುಟ್ಟಿ ,ಎಂತೆಂತ ಹುಡುಗೀರು ಇರ್ತಾರಪ್ಪ ,ಕಾಲಕೆಟ್ಟೋಯ್ತು,ನಿಮ್ಮ ಮನೇನೆ ಬೇಕಿತ್ತಾ ಹಾಳು ಮಾಡಲು ಅವಳಿಗೆ , ನೀವೆಂತಹ  ಜನ ಎಂದು ಸಮಾಧಾನಪಡಿಸಿ, ಜೊತೆಗೊಂದಿಷ್ಟು  ತಮ್ಮ ಪಾತಿವ್ರತ್ಯದ ಸ್ವಗುಣಗಾನ ಮಾಡಿಕೊಂಡು ಗಂಡ ಎಂದರೆ ತಮಗೆ ಎಂತ ನಿಷ್ಠೆ,ಭಯ ,ಭಕ್ತಿ ಎಂದೆಲ್ಲ ಕೆನ್ನೆಗೆ ಬಡಿದುಕೊಂಡು ,ಕಾಫಿ ಕುಡಿದು ಮುಂದಿನ ಮನೆಗೆ ಸುದ್ದಿ  ದಾಟಿಸಲು ಎದ್ದು ಹೋಗುತ್ತಿದ್ದರು .
ಎಷ್ಟು ದಿನಾಂತ ಜನ ನನ್ನ ಬಗ್ಗೆಯೇ ಮಾತಾಡುತ್ತಾರೆ …ನಿಧಾನವಾಗಿ ಆದರು , ಕಡೆಪಕ್ಷ ಕೆಲವರಿಗಾದರೂ ಬೇರೆ ಮಾತು ಸಿಕ್ಕಿತು …
ಕೆಲ ಗಂಡಸರು ಒಳಗೊಳಗೇ ಮಾತನಾಡಲು ಶುರು ಮಾಡಿದರು ಕೊಂಚ ನನಗೆ ಕೇಳಿಸುವಂತೆ …’ಹುಡುಗಿ ಮೇಲೆ ಅನುಮಾನ ಅಂದರೆ, ಇನ್ಯಾರೊಂದಿಗೋ ಅಂದರೆ, ಇವನಿಗೇನಾದರು ಕಡಿಮೆ ಆಗಿತ್ತ …?ಕೈಲಾಗುತ್ತಿರಲಿಲ್ಲವ ?’
ನಂತರ ಜೋರಾಗೆ ಗೇಲಿ ಮಾಡಿಕೊಂಡು ನಗಲು ಶುರು ಮಾಡಿದರು ‘ಇವನಿಗೆ ಇಷ್ಟು ತಿಂಗಳುಗಳಾದರೂ ಹೆಂಡತಿ ಬೇಕು ಅನ್ನಿಸುವುದಿಲ್ಲವ , ಹುಡುಗಿ  ಚೆನ್ನಾಗಿ ಇದ್ದಳು ಏನು ಕಡಿಮೆ ಆಗಿತ್ತು ,ಷಂಡ ಏನ್ರಿ ಇವನು ..ಅಮ್ಮನನ್ನು ಎದುರು ಹಾಕಿಕೊಳ್ಳಲಾಗದೆ ಹೆಂಡತಿಯನ್ನು ಬಿಟ್ಟಿದ್ದಾನೆ,ಸ್ವಂತ ನಿರ್ಧಾರಮಾಡಲು,ಸ್ವತಂತ್ರವಾಗಿ ಸಂಸಾರಮಾಡಲು ಅವನಿಗೆ ಸಾಧ್ಯ ಇಲ್ಲಾ  ರೀ ..’
ಕುಡಿದು ಚಿತ್ತ್ ಆದವರು ಜೋರಾಗೆ ಅಂದರು,’ ಅವನು ಅದೇ.. ಹೆಣ್ಣೇ ಬೇಡಾ ಹಂಗೆ ಬದುಕ್ತೀನಿ ಅಂದ್ರೆ ..ಇನ್ನೊಂದು ಮದುವೆ ಆದರು ಆಗಬೇಕಪ್ಪ …!’
ನನ್ನ ಗೋಳು ನೋಡಿದ ಹೆಂಗಸರು  ಕೂಡ,’ ಇಲ್ಲ ಬಿಡಮ್ಮ, ಅಮ್ಮ ,ಅಕ್ಕನ್ನ ಬಿಟ್ಟುಕೊಡದ್ದಿದ್ದರೆ  ಹೋಗಲಿ  ,ಇವನಿಗೆ ಸ್ವಂತ ಬುದ್ದಿ ಬೇಡ್ವಾ ,ಇಷ್ಟು ದಿನ ಆದ ಮೇಲಾದರೂ ಹೆಂಡತಿ ಸಂಸಾರ ಬೇಕೂ ಅನ್ನಿಸಲ್ವ ?  …’
ಇಲ್ಲ  ಸಾಧ್ಯವಾಗುತ್ತಿರಲಿಲ್ಲ , ಅವನೊಬ್ಬನಿಗೆ ನಿಭಾಯಿಸಿಕೊಳ್ಳಲು  ….ಅಮ್ಮ ,ಅಕ್ಕನನ್ನು ಬಿಟ್ಟು ಒಂದು ಸಣ್ಣ ನಿರ್ಧಾರವನ್ನು ಮಾಡಿ ,ಒಬ್ಬನ್ನೇ ಮುಂದುವರೆಯುವ ತಾಕತ್ತು ಇರದ ಪುಕ್ಕಲ ಅವನು …ಎಂತ ದುಷ್ಟಾಂತ ಅದಕ್ಕೆ, ‘ನಾನು ದೊಡ್ಡವರನ್ನು ಬಿಟ್ಟು ಏನೂ ಮಾಡಲ್ಲ ,ಅವರ ಮಾತನ್ನು ಮೀರಲ್ಲ ……!!!!!!’
ತಪ್ಪೆಲ್ಲ ನನ್ನದೆ ,ಯಾಮಾರಿದ್ದು ನಾನೇ .ಮದುವೆಗೆ ಮುಂಚೆ ಒಮ್ಮೆ ಕೇಳಿದ್ದೆ , ‘ಕಷ್ಟ ಬಂದರೆ  ಹೇಗೆ ನೋಡಿ ಕೊಳ್ಳುತೀಯ?ಕೈ ಬಿಡೋದಿಲ್ಲ ತಾನೇ ?’
ಎಷ್ಟು ಚೆನ್ನಾಗಿ ಗಿಣಿಪಾಠ ಒಪ್ಪಿಸಿದ್ದ ‘ಏನೇ  ಆದರು ನಮ್ಮಮ್ಮ ಇಬ್ಬರನ್ನು ಸಾಕುತ್ತಾರೆ , ಹಂಗೇನಾದರು ಹೆಚ್ಚು ಕಮ್ಮಿಯಾದರೆ ನಮ್ಮ ಅಮ್ಮ ಕೊಟ್ಟಿದ್ದರಲ್ಲೇ ನಿನಗೂ ಸಮಪಾಲು ಕೊಡುತ್ತೇನೆ …  ‘
ಇನ್ನೊಮ್ಮೆ ಅಂದಿದ್ದ ,’ನಮ್ಮ ಫ್ಯಾಮಿಲಿಯಲ್ಲಿ female domination ,ಎಲ್ಲ ಹೆಂಗಸರ ಕೈನಲ್ಲೇ …’ ಒಳಗೊಳಗೇ ಖುಷಿ ಆಗಿದ್ದು ಸುಳ್ಳಲ್ಲ .
ಮತ್ತೂ ಸೇರಿಸಿದ್ದ ‘ನಾನೇನಾದರು ಕೋಪ ಮಾಡಿಕೊಂಡು ಕೂಗಾಡಿ,ಹೊಡೆದರೂ ನಮ್ಮ ಮನೆಯವರೆದುರು ಸುಮ್ಮನಿದ್ದು ಬಿಡು, ಒಳಗೆ ರೂಮನಲ್ಲಿ ಬೇಕಾದರೆ ಹಿಡಿದು ಕುಕ್ಕಿಬಿಡು ..’. ಆಗಲೇ ಅರಿವಾಗ ಬೇಕಿತ್ತು ನನಗೆ, ಇವನ ಮನಸ್ಥಿತಿ  ಮತ್ತು ಮನೆಸ್ಥಿತಿ  … ಎಷ್ಟೆಲ್ಲಾ ಯಾಮಾರಿದ್ದೆ  !!!!
ಅಲ್ಲೆಲ್ಲ ನಡೆಯುತ್ತಿದ್ದಿದ್ದು ಅಷ್ಟೇ..ಸುಳ್ಳೇ ನಟಿಸುವುದನ್ನು ಕರಗತ ಮಾಡಿಕೊಂಡಿದ್ದರು ಹೆಂಗಸರು, ಮತ್ತು ಅದನ್ನು ನಂಬುವುದನ್ನು ಅಭ್ಯಾಸ ಮಾಡಿಕೊಂಡಿದ್ದರು ಗಂಡಸರು .ಹೂಂಕರಿಸಿ ,ವೇಷತೊಟ್ಟು ಎರಡು ಹೆಜ್ಜೆ ಗಂಡಸರು  ಇಡುತ್ತಿದ್ದಂತೆ,ಮೈಮೇಲೆ ಬಂದ ದೇವರಿಗೆ ಕೈಮುಗಿದು ‘ನನ್ನಪ ಕ್ಷಮಿಸಿ ಬಿಡಪ್ಪ ,ಏನೋ   ತಪ್ಪಾಗಿದೆ ದೊರೆ ,ಹೊಟ್ಟೆಗಾಕೋ,ನಿನ್ನ ಬಿಟ್ಟರೆ ನಮಗೆ ಸದ್ಗತಿ ಉಂಟೆ ?’ಎಂದು ಶಿರಸಾ ಬಗ್ಗಿಸಿ ತಲೆ ತಗ್ಗಿಸಿ ನಿಂತುಬಿಡುವಂತೆ ನಿಂತುಬಿಡುತ್ತಿದ್ದರು.ಗಂಡಸುತನಕ್ಕೆ ಎಷ್ಟು ಮರ್ಯಾದೆ ಸಲ್ಲುತ್ತಿತ್ತು ಎಂದರೆ ಕೊನೆಗೆ ಪುಲ್ಲಿಂಗ ಹೊತ್ತುಹುಟ್ಟಿದ ಚಿಕ್ಕ ಮೊಗುವಿನ ಮಾತಿಗೂ ಆಸಾಧ್ಯ ಮನ್ನಣೆ , ಈಡೇರಿಕೆ ದಕ್ಕಿಬಿಡುತ್ತಿತ್ತು .ಹೀಗೆ ಬದುಕುವುದೇ ಹೆಣ್ತನದ ಸಾಕಾರ,ಸಾಕ್ಷಾತ್ಕಾರ ,ಗುಣ,ಲಕ್ಷಣ ,ಚಹರೆ ಎಂದು ಹೊಸ ವಾಕ್ಯೆಯನ್ನೇ ಬರೆದ್ದಿದ್ದರು ಹೆಣ್ಮಕ್ಕಳು !!!
ಅದು ಅಷ್ಟು ಸುಲಭವಾದದ್ದು,ನೈಜ್ಯವಾದದ್ದು ಆಗಿರಲಿಲ್ಲ ,ಮರ್ಮ ಇದ್ದದ್ದೇ ಅಲ್ಲಿ !!
ಇಡೀ  ಸುತ್ತಲಿನ ಭೂಮಿಯನ್ನು ತಮ್ಮ ಅಳು,ನಗು ,ನುಲಿತ ,ಒಯ್ಯಾರ ,ವನಪು ಮಾತು,ಅಸಹಾಯಕತೆ ಮತ್ತು ಯಾವುದೂ ನೆರವೇರದ್ದಿದ್ದರೆ ಒಡಕು ಗಯ್ಯಾಳಿ ಬಾಯಿಗಳಿಂದ ಬಗ್ಗಿಸಿ,ಬಡಿದು,ಜಯಿಸಿ ದುಡ್ಡು ಬಾಚುತ್ತಿದ್ದ ಆ ಪ್ರಳಯಾನ್ಕಿತ ಹೆಂಗಸರಿಗೆ ಊರು ತಿರುಗಲು ,ವ್ಯವಹಾರ ಕುದುರಿಸಲು ,ಬಾಡಿಗೆ,ಬಡ್ಡಿ,ಚೀಟಿ,ಒಡವೆ,ಸೀರೆ ಇನ್ನು ಹಲವು ವ್ಯವಹಾರಕ್ಕೆ   ಕೈ ತುಂಬಾ  ಕಾಸು, ತಲೆತುಂಬ  ಶ್ರೀಮಂತಿಕೆ,ಮತ್ತು ಸ್ವಾತ್ಯಂತ್ರ ಸಿಗಬೇಕಾದರೆ ,ಹೀಗೆ ಮನೆ ಗಂಡಸರೆದುರಿಗೆ ತಗ್ಗಿ ಬಗ್ಗಿ , ಇವರ ಚಾಕಚಕ್ಯತೆಗಳೆದುರು, ಗಂಡಸರ  ಕೈಕೆಳಗಾಗದಂತೆ ,ಅವರ ಗಂಡಸುತನ ಮುಕ್ಕಾಗದಂತೆ ಕಾಪಡಬೇಕಿತ್ತು ಅಷ್ಟೇ . ಸಮಾಜದ ಎದುರು ಗಂಡಿನ ಹತೋಟಿಗೆ ಒಳಪಟ್ಟು ಬಾಳುತ್ತಿರುವ ಸತಿ ಶಿರೋಮನಿಯ  ಐಡೆಂಟಿಟಿ ಕಾರ್ಡ್ ಬೇಕಿತ್ತು .ಎಲ್ಲಕಿಂತ ಹೆಚ್ಚಿಗೆ ಆ ಸೋಗಲಾಡಿ ಗಂಡಸರಿಗೆ  ಶೋಕಿ ಮಾಡಲು ಕಪ್ಪಕಾಣಿಕೆ ಸಲ್ಲಬೇಕಿತ್ತು…ಯಾರ್ಯಾರ ಪಾಲು ಎಷ್ಟೆಷ್ಟೋ !!!
ಇಡೀ ಊರೆ ಹೆದರಿ, ನಡುಗಿ ,ಚದುರಿ ಮಣಿಯಲ್ಪಡುವಷ್ಟು  ರುಡಾಲಿ ಶಕ್ತಿ ಇದ್ದ ಆ ಶಕ್ತಿದೇವತೆಗಳು,ತಮ್ಮ ಮನೆ ಗಂಡಸರ ಮುಂದೆ ಮಾತ್ರ ಕೈಮೇಲಿನ ಹುಳುವಿನಂತೆ ಆಡಿ ಬಿಡುತ್ತಿದ್ದರು.ಅಷ್ಟಲ್ಲದೇ ಏನಾದರು ತಂಟೆ ತಕರಾರು ಮಾಡಿಕೊಂಡು ಸಿಕ್ಕಿಹಾಕಿಕೊಳ್ಳುವ ಸಂಕಷ್ಟ ಮಾಡಿಕೊಂಡ ಗಂಡಸರನ್ನು ,ಹೇಗಾದರೂ ಮಾಡಿ ತಮ್ಮ ‘ಹೆಣ್ತನ’ಗಳ ಎಲ್ಲಾ  ಶಕ್ತಿಯನ್ನು ಉಪಯೋಗಿಸಿ ಪಾರು ಮಾಡಿಬಿಡುತ್ತಿದ್ದರು ..ಹಾಗೆ ಗಂಡಸರು ಕೂಡ, ತಮ್ಮ ‘ಗಂಡು’ ಸಹಜ ಭಯ,ಗುಲ್ಲೆಬ್ಬಿಸಿ ಇವರುಗಳ ವ್ಯವಹಾರ ಸರಾಗವಾಗಿ ನಡೆಯುವಂತೆ ಸಹಕರಿಸುತ್ತಿದ್ದರು ..  ಗಮ್ಮತ್ತು ಇದ್ದದ್ದೇ ಅಲ್ಲಿ , ಸುಲಭ ಶೋಕಿ ಬಯಸಿದ ಗಂಡಸರು,ಮತ್ತು ವ್ಯವಹಾರಪ್ರಿಯ ಚತುರ  ಹೆಂಗಸರು,ಈ  ಕಪ್ಪುಕಾಣಿಕೆಯ ನಿಮ್ಮಿತ್ತ ಸಂಧಾನ ಮಾಡಿಕೊಂಡಂತೆ,ಒಳಗೊಳಗೇ ಒಬ್ಬರಿಗೊಬ್ಬರು ಒತ್ತಾಸೆ, ಬಲ,ಬೆನ್ನೆಲುಬು,ಶಕ್ತಿಯಾಗಿ ಬೆಂಬಲಕ್ಕಿದ್ದರು …         
  
ನಾನೋ ಶುದ್ದ ದಡ್ಡಿ .ಈ ರೀತಿ ನೀತಿ ಒಂದು ಅರೆಯದ ಅಮಾಯಕಿ!! ಒಂದೇ ಮನೆಯಲ್ಲಿ ಮುಖವಾಡ ತೊಡದೆಯೇ ಸಹಜವಾಗಿ ,ಸರಳವಾಗಿ ಪರಸ್ಪರ ಪ್ರೀತಿ ಗೌರವ ವಿಶ್ವಾಸಗಳಿಂದ ಬದುಕಬೇಕು ಎನ್ನುವ ಪರಂಪರೆಯಿಂದ  ಬಂದವಳು .ಮತ್ತು ಹೊಸದಾಗಿ ಮದುವೆಯಾದ ಪ್ರತಿ ಹೆಂಗಸಿಗು ಇರುವಂತೆ ,’ಆವಾ  ನನ್ನನ್ನು ಮುದ್ದುಗರೆಯಬೇಕು ,ಮರುಗಿ ಮಿಡಿಯಬೇಕು ,ಕಾಪಾಡಿ ಪೊರೆಯಬೇಕು ‘ ಎನ್ನುವಂತಹ ಶುದ್ಧ ಕನಸುಗಳು .ಅವನಿಗೆ ಬೇಕಿದ್ದಿದ್ದು ಕೇವಲ ಕಪ್ಪುಕಾಣಿಕೆ ಮತ್ತು ತನ್ನ ಗಂಡಸುತನದ ಗೊಟರು ,ಗತ್ತು ಸಾಬೀತು ಪಡಿಸುವಿಕೆಗಳಷ್ಟೇ  .
ನಮಗಿದ್ದ ಕಲ್ಪನೆಗಳೇ ಬೇರೆ — ‘ನಿಜವಾದ ಗಂಡಸಾದವನು ಹೆಣ್ಣನ್ನು ಪ್ರೀತಿ,ವಿಶ್ವಾಸ,ಸ್ನೇಹ,ಕಾಳಜಿಗಳಿಂದ ಒಲಿಸಿಕೊಳ್ಳುತ್ತಾನೆ.ಸಂತೋಷಪಡಿಸಿ ,ಸಂತ್ರುಪ್ತಿಗೊಳಿಸಿ ಮುಖದಲ್ಲಿಯೇ ಸಂತುಷ್ಟಿಭಾವ ಹೊಮ್ಮುವಂತೆ ಮಾಡುತ್ತಾನೆ ,ಜವಾಬ್ದಾರಿ ನಿಭಾಯಿಸಿ ಗೌರವಾಧಾರಗಳಿಗೆ ಪಾತ್ರನಾಗಿ ಹೆಣ್ಣೊಬ್ಬಳಿಗೆ ಆರಾಧನೆಯ ವಸ್ತುವಾಗುತ್ತಾನೆ ,ಅವಳ ಮಾನ,ಗೌರವ,ಪ್ರಾಣಗಳಿಗೆ ರಕ್ಷಯಾಗಿ,ಜೀವನಕ್ಕೆ ಆಸರೆಯಾಗುತ್ತಾನೆ …..’ ‘ಕೈಲಾಗದವನು ಮಾತ್ರ ಹೆಣ್ಣಿನ ಮೇಲೆ ಕೈ ಮಾಡುತ್ತಾನೆ ,ಜಭರುದಸ್ತು ಮಾಡುತ್ತಾನೆ …’
ಅದೆಲ್ಲ ಪುಸ್ತಕದ ಬದನೆಕಾಯಿ , ಇಲ್ಲಿನ  ಪ್ರತೀತಿಯೇ ಉಲ್ಟಾ ಇತ್ತು ,’ ಹೆಂಡತಿ ಜೊತೆ ಸಿಹಿಸಿಹಿ  ಮಾತಾಡುತ್ತ ಅನ್ಯೋನ್ಯವಾಗಿರುವುದೆಂದರೆ ಅವನು ಅಮ್ಮಾವ್ರ ಗಂಡ ,ಹೆಂಡತಿಯನ್ನು ಭಯಕ್ಕೆ ಒಳಪಡಿಸದೆ ಹತೋಟಿಯಲ್ಲಿ ಇಡದೆ ಇರುವವನು ಶಾಮಂಡಿ ,ಎಲ್ಲರೆದುರು ಹೆಂಡತಿಗೆ ಎರಡೇಟು ಹಾಕದವನು ಕೈಲಾಗದವನು ,ಅವಮಾನ ಮಾಡದೆ ಇರುವವನು ಹೆಣ್ಣಿಗ  …..ಹೀಗೆ’
ಏನೆಲ್ಲಾ ವ್ಯತ್ಯಾಸಗಳಿರಲಿ, ಕಡೆಪಕ್ಷ ಹೆಂಡತಿಯ ಚಾರಿತ್ರ್ಯವಧೆ ಮಾಡುವ ಮಟ್ಟಕ್ಕೆ  ಇಳಿಯಬಾರದಿತ್ತು  …
ದಾಂಪತ್ಯದಲ್ಲಿ ಏನೇನೋ ಇದೆ ಎಂದು ಬಲವಾಗಿ ನಂಬಿದ್ದವಳು ನಾನು….ಬೆಚ್ಚನೆಯ ಸಂಸಾರದಲ್ಲಿ ನೆಚ್ಚುಗೆಯ secuirtyಯಲ್ಲಿ  ,ಪ್ರೀತಿಯನ್ನಷ್ಟೇ ಹೊಟ್ಟೆ ತುಂಬಾ ಉಂಡುಂಡು ಬೆಳೆದವಳು …ಸಂಸಾರದಲ್ಲಿನ ರಾಜಕೀಯ ಎಂದು ಕಂಡಿರಲಿಲ್ಲ ..
ಆಫೀಸರ್ ಆಗಿದ್ದ ಇಂಜಿನಿಯರ್ ಬುದ್ಧಿವಂತ ಅಪ್ಪ, ಕೇವಲ s.s.l.c ಪಾಸಾದ ,ಹಳ್ಳಿಗಮಾರೆ ಮತ್ತು ಪೆದ್ದು ಅಮ್ಮನ ಜೊತೆ  ಬೆಳ್ಳಂಬೆಳ್ಳಗೆ ಆಫೀಸಿಗೆ ರೆಡಿಯಾಗುತ್ತ ಹರಟುತ್ತಿದ್ದರೆ ,ಕಂಬಳಿಯೊಳಗಿಂದಲೇ  ಮುಗುಳ್ನಗುತ್ತ ಸೋಜಿಗಪಡುತ್ತಿದ್ದೆ.ಸಂಜೆ ಇಬ್ಬರು ಕಾಫಿ ಹೀರುತ್ತಾ ಊರು,ರಾಜಕೀಯ,ಮಕ್ಕಳ ಭವಿಷ್ಯ ಅಂತೆಲ್ಲ ಹರಡಿಕೊಂಡು ಹಂಚಿಕೊಳ್ಳುತ್ತಿದ್ದಾರೆ ಅವರ ಸ್ನೇಹಕ್ಕೆ ಮರುಳಾಗಿದ್ದೆ .35  ವರ್ಷಗಳ ಸುಧೀರ್ಘ ಸಾಂಗತ್ಯದಲ್ಲೂ ಅಪ್ಪ ನೆಪಗಳಿಗೆ  ಮುನಿಸಿಕೊಂಡಾಗ,ಅಮ್ಮ ಒಳಗೊಳಗೇ ಬಿಕ್ಕುತಿದ್ದಿದ್ದು ನೋಡಿ   ಎಷ್ಟು ಗಾಢ  ,ದಟ್ಟ,ಆಗಾಧ   ಎನಿಸಿತ್ತು ಪ್ರೀತಿ  …
ಇನ್ನು ಮೊದಲನೇ ಅಕ್ಕ ಭಾವ 20 -30  ನಿಮಿಷಕೊಮ್ಮೆ ಕರೆಯಾನಿಸಿಕೊಂಡು , ಕುಶಲ -ಕ್ಷೆಮಾಧಿಗಳನ್ನು exchange  ಮಾಡುತ್ತಾ ,ಊಟ ಆಯ್ತಾ ,ನೆಗಡಿ ಕಮ್ಮಿ ಆಯ್ತಾ ಅಂತ ಅಪ್ಡೇಟ್ ಆಗ್ತಾ ,15  ವರ್ಷ ಆಗೆಹೊಗಿದ್ದರು ನೆನ್ನೆಮೊನ್ನೆಯ ಮಧುಮಕ್ಕಳಂತೆ ಪಾಪು,ಪುಟ್ಟು ಅಂತ ಹೆಸರು ಸ್ಟೋರ್ ಮಾಡಿಕೊಂಡು   ,ಸಮಸ್ಯೆಗಳಿಗೆ ಇಬ್ಬರು ಕೂತು ಅತ್ತು,ಜನರೆದುರು ನಗು ನಗುತ್ತ ಸುಮ್ಮನಾಗಿಬಿಡುವುದು ,ಇಡಿ ಜಗತ್ತೇ ಬಹಿಷ್ಕರಿಸಿದರು ನನಗೆ ನೀನು ನಿನಗೆ ನಾನು ಎನ್ನುತ್ತಾ  ಇದ್ದುಬಿಡುತ್ತೀವಿ ಎನ್ನುವಷ್ಟು ನಿರ್ಲಿಪ್ತತೆಯನ್ನು ಸಮಾಜದಲ್ಲಿ ಬೆಳೆಸಿಕೊಂಡಿರುವುದನ್ನು  ನೋಡಿದರೆ ಹೊಟ್ಟೆಕಿಚ್ಚು ಮತ್ತು ಆನಂದ ಎರಡು ಒಟ್ಟಿಗೆ ಆಗುತ್ತಿತ್ತು….
ಇನ್ನು ಎರಡನೇ ಅಕ್ಕ ಭಾವ ಮೊದಮೊದಲು ಎಷ್ಟೆಲ್ಲಾ ಜಗಳ,ರಗಳೆ  ಮಾಡಿಕೊಂಡರು, ಈಗೀಗ ಅವರು ಖುಷಿ ಆಗ್ತಾರೆ ಅಂತ birthday ಗೆ ಕೇಕ್ ಒಯ್ಯುವ ಅವಳು, ಶಾಪಿಂಗ್ ಹೋಗಿ ಬರುತ್ತಾ ಉಂಗುರ ತಂದು ಬಿಡುವ ಭಾವ!!!
ಮತ್ತು  ಆಫೀಸಿನಿಂದ ತಡವಾದರೆ ಅಲ್ಲೇ ಪ.ಜಿ ಯಲ್ಲಿದ್ದು ಬಾ ಎನ್ನುವಾಗ, ಅವಳೆಷ್ಟನೆಯ ಬಾರಿಯೋ ವಾಚಾಮಗೊಚಾರವಾಗಿ ನಿನಗೆ ಜವಾಬ್ದಾರಿ ಇಲ್ಲ ಅಂತ ಬೈಯುತ್ತಲಿರುವಾಗಲು,ಸುಳ್ಳು ಸುಳ್ಳೇ  ಕಣ್ಣು ಮಿಟುಕಿಸಿ ನಗುವಾಗ ,ಏನಾದರೊಂದು ನೆಪ ಮಾಡಿಕೊಂಡು ಅಮ್ಮನ ಮನೆಯಲ್ಲೇ ಉಳಿದು ಬಿಟ್ಟರು ರೇಗದೆ,ರೇಜಿಗೆ ಪಡದೆ ಸುಮ್ಮನಾಗುವಾಗ  , ಕೆಲಸಕ್ಕೋಗುವ ಅವಳನ್ನು ಕಾಡಿಸದೆ ಅತ್ತೆ ಮನೆಯಲ್ಲಿ ಊಟ ಮಾಡಿಕೊಂಡು,ಅವಳಿಗೂ ಒಂದು ಬಾಕ್ಸ್ ಕಟ್ಟಿಸಿಕೊಂಡು, ಮೊಗು ಎತ್ತಿಕೊಂಡು ಹೋಗುವಾಗ ಸೋಜಿಗವಾಗುತ್ತದೆ .. ಅಡಿಗೆ,ಪೂಜೆ,ತಿಂಡಿ ,ಮನೆಕ್ಲೀನು ಎನ್ನುವ ಯಾವ ಸಿದ್ದ ಸೂತ್ರಗಳಿಗೂ ಒಳಪಡದೆ ಇವರ ಮದ್ಯೆ attachment,commitment ಯಾವುದು ಇಲ್ಲವ ಅಂತ ಅನುಮಾನ ಪಡುತ್ತಿರುವಾಗಲೇ , ‘ಏನೇ ಆದರು ನಿನ್ನ ಬಿಡಲ್ಲ ಕಣೆ!’ ಅಂತ ನಮ್ಮೆಲರೆದುರೆ ಭಾವ ಅಂದಾಗ ನಮಗೂ ನಾಚಿಕೆ ಆಗದೆ ಇರುವುದಿಲ್ಲ …
ಎಷ್ಟೆಲ್ಲಾ ವೈವಿದ್ಯ ಪ್ರೀತಿಯಲ್ಲಿ,ಸಂಸಾರದಲ್ಲಿ ….
ಇವನಂತೆ ಕೆಟ್ಟ ಕೋಪಿಷ್ಟನು   ,ದೋರ್ವಾಸಮುನಿಯು ಆಗಿದ್ದ ಚಿಕ್ಕಪ್ಪನಿಗೆ ಹೆದರಿ ಊರೆಲ್ಲ ನಡುಗುತ್ತಿದ್ದರು  , ಹೆಂಡತಿಯನ್ನು ನೋಯದಂಗೆ ನಡೆಸಿಕೊಂಡು , ಸಂಸಾರ ಕಟ್ಟಿಕೊಂಡು ,ಮನೆ ಕಟ್ಟಿ,ಊರಿಗೆ ಯಜಮಾನನಾಗಿ ಕಳೆಕಟ್ಟುವಂತೆ ಬದುಕುವುದು ಇನ್ನೊಂದು ವಿದ  …
… ನಿಜ ಯಾವ ಗಂಡ ಹೆಂಡತಿಯು fairytale  ನಂತೆ ಅಲ್ಲಿಂದಾಚೆಗೆ ಸಂತೋಷದಿಂದ ಬದುಕಿದರು ಎನ್ನುವಂತೆ ಬದುಕುವುದಿಲ್ಲ , ಎಡರು ತೊಡರುಗಳಿಲ್ಲದೆ  ಬಾಳುವುದಿಲ್ಲ …ಎಲ್ಲ ಕಡೆ ಏಳು ಬೀಳು,ನೋವು ನಲಿವು,ಕಷ್ಟ ಸುಖ ಜಗಳ,ಮನಸ್ತಾಪ, ಮುನಿಸು,ರಗಳೆ ಎಲ್ಲ ಬಂದಿರುತ್ತದೆ ..ಆದರೆ ಅವರ್ಯಾರು ಇವನು ನಿಭಾಯಿಸಿದಂಗೆ ನಿಭಾಯಿಸಿರುವುದಿಲ್ಲ …
 
     ————————————————————————————————————————————————————————
 
ಕುಣಿದು ಕುಣಿದು ಆದ ಮದುವೆ ಇದಾಗಿತ್ತು, ಮನಸಾರೆ ಪ್ರೀತಿಸಿ ಒಪ್ಪಿದ್ದೆ, ಅವನ smartness ಇಷ್ಟವಾಗಿತ್ತು , ನೇರವಂತಿಕೆ ಅಂತ ನಂಬಿದ್ದೆ , ಪಟಪಟ ಮಾತು , ಇಷ್ಟು ಒಳ್ಳೆಯ ಮನಸಿದೆ ಅನ್ನಿಸುವಂತೆ ನೀಡಿದ್ದ ಭರವಸೆಗಳು , ಅದೆಷ್ಟು ಹೊಗಳಿ ಹಾಡಿ ಅಟ್ಟಕ್ಕೆ ಏರಿಸಿದ್ದ ….ಮದುವೆ ನಂತರ ಹಾಗೆ ಪಾತಳಕ್ಕು ನೂಕಿದ್ದ!
ಆದರೆ  ದೇಹ,ಪ್ರಜ್ಞೆ,ಮನಸು,ಅಂತರಾತ್ಮ,ಸುಪ್ತ ಮನಸು ಎಲ್ಲಾ  ಅವನ್ನನ್ನು ಗಂಡ ಅಂತ ಬಲವಾಗಿ  ಒಪ್ಪಿಕೊಂಡುಬಿಟ್ಟಿತ್ತು  ,   ಬದಲಾಯಿಸೋದು ಅಂದ್ರೆ ಅಷ್ಟು ಸುಲಭಾನ ಅವನು ಡೈವೋರ್ಸ್ ಕೇಳುವಹಾಗೆ …
ಕಾರಣ ಕೇಳಿದ ಜನಕ್ಕೆ ಎಷ್ಟು ಹೇಳೋಕಾಗುತ್ತೆ…
ಇವೆಲ್ಲ ನನ್ನ ತುಮುಲಗಳು..
ಕೆಲಜನ ಹೇಳುತ್ತಾರೆ  ಸಮಾಜದ ಬಗ್ಗೆ ಚಿಂತೆ ಮಾಡಬೇಡ ,ಎನು ಮಾಡಿದರು ಮಾತಾಡೆಕೊಳ್ಳುತ್ತೆ ಅದು, ಬದಲಾವಣೆ ನಿನ್ನಿಂದಲೇ ಆಗಬೇಕು , ನಾನೇನಾದರು ಆಗಿದ್ದಿದ್ದರೆ….. ನಿನಗೆ ಆತ್ಮಾಭಿಮಾನ ಇಲ್ಲ ,ಛಲ ಇಲ್ಲ …ಇನ್ನು ಏನೇನೋ…
ಅವನು ತಿರಸ್ಕರಿಸುತ್ತಿರಬಹುದು ,ಬೇಡ ಅನ್ನುತ್ತಿರಬಹುದು, ಆದರೆ ನಾನು ಪ್ರೀತಿಮಾಡಿದ್ದು ಸುಳ್ಳ ?ಈಗಲೂ ಗಂಡ ಎನ್ನುವ ಭಾವ ಕಾಡುವದು ಸುಳ್ಳ?
ಅವನನ್ನು ಕೇಳಿದ್ದಾದರು ಏನು ನಾನು, ರಾಕ್ಷಸನ ತರಹ ಮನಸನ್ನು ದ್ವಂಸ ಮಾಡದೆ, ಮನುಷ್ಯನಂತೆ ಇರು ಅಷ್ಟೇ ….!
ಸಾಕಷ್ಟು ಅರ್ಥಮಾಡಿಕೊಳ್ಳಲು ,ಅನುಸರಿಸಲು ಶಕ್ತಿಮೀರಿ ಪ್ರಯತ್ನಿಸಿದ್ದೆ ..ಅವನ ಬಾಲ್ಯ, ಅತಿ ಬೇಗ ಸಂಭವಿಸಿದ ತಂದೆಯ ಧಾರುಣ ಸಾವು ,ಅದರೊಂದಿಗೆ ಹುಟ್ಟಿಕೊಂಡ ಅಭದ್ರತೆ ,ಬಡತನ,ತಾಯಿಯ ಅಸಹಾಯಕತೆ ,ಹತ್ತಿರದ ನೆಂಟರ ನಯವಂಚನೆ ,ಸಂಬಂಧಿಕರ ಭೋಳೆತನ ,ಬದುಕುವ ಛಲ ಎಲ್ಲವು ಸೇರಿ ಅವನ್ನನ್ನು ತಯಾರಿಸಿವೆ ಕೊಂಚ ಭಿನ್ನವಾಗಿ ..ಅವನ್ನನ್ನು ನಿರಂತರ ಎಚ್ಚರದಿಂದಿರುವಂತೆ ,ವಂಚನೆಗಳ ಹುಡುಕುತ್ತ ಚಡಪಡಿಸುವಂತೆ ,ಮುಖವಾಡ ತೊಟ್ಟು ಕೋಪಿಸಿ,ಕಂಪಿಸಿ ,ಹೆದರಿಸಿ ದುಷ್ಟಶಕ್ತಿಗಳನ್ನು ದೂರ ಓಡಿಸಿ ಭದ್ರತೆ ಸ್ಥಾಪಿಸಿಕೊಳ್ಳುವಂತೆ ,ದರ್ಪ ಅಹಂಕಾರ,ಗತ್ತು ನೀಡುವ rough  image ,ಅದರೊಂದಿಗೆ ಸುಲಭವಾಗಿ ಆಗುತ್ತ ಹೋಗುವ ಕೆಲಸಗಳು ,ದಕ್ಕುವ ಸುಲಭದ ಲಾಭಗಳು ಅವನ್ನನ್ನು ಪ್ರರೇಪಿಸಿವೆ……
ಸಾಕಷ್ಟು ಬಾರಿ ಅನ್ನಿಸುತ್ತಲು ಇತ್ತು , ಹೊಸ ಪಾತ್ರ ಮನೆಗೆ ಬಂದಾಗ ,ಹೇಗೋ ಏನೋ ಅನ್ನುವಂತ ಗಾಬರಿ, ಸಣ್ಣಸಣ್ಣದ್ದರಲ್ಲೂ  judge ಮಾಡುತ್ತಾ ಅರ್ಥಮಾಡಿಕೊಳ್ಳಲು ಎತ್ನಿಸುವ ಮನೋಸಹಾಜ ಗುಣ ,ಅಮ್ಮನಂತೆ,ಅಕ್ಕನಂತೆ ಇರಬೇಕು ಎನ್ನುವ comparision ,ನಾನೇ ಮೇಲಾಗಬೇಕು ಎನ್ನೋ ಹಂಬಲ  ಸೃಷ್ಟಿಸುವ  ಸಂಘರ್ಷಗಳು ಇವೆಲ್ಲ ಸಹಜ , ಒಂದೆರಡು ವರ್ಷ ಸುಮ್ಮನಿದ್ದುಬಿಟ್ಟರೆ ಮೊನೋಭೂಮಿಕೆಯ ಅನುಭವಗಳಿಂದ  ತಂತಾನೇ ನಂಬಿಕೆಹುಟ್ಟಿ, ಬಾಂಧವ್ಯ   ಬೆಳೆದು,ಸಾಮರಸ್ಯ ಏರ್ಪಟ್ಟು,ಸಂಸಾರ ಕುದುರುತ್ತದೆ . ನನ್ನ ಮೇಲೆ ನನಗೆ ನಂಬಿಕೆ   ಇತ್ತು , ಸಣ್ಣ ಬುದ್ಧಿ ,ಕ್ಲಿಷ್ಟತೆಗಳಿಲ್ಲದ ಸರಳ ಹುಡುಗಿ ನಾನು ….
ಅದರೇನಾಯಿತು…..?
ಮತ್ತೇನೇನೋ ಅನುಭವಗಳು ಆಗತೊಡಗಿದವು ,ನಾನಂದುಕೊಳ್ಳುವಷ್ಟು ನೇರವಾಗಿ,ಸರಳವಾಗಿರಲ್ಲಿಲ್ಲ ವಿಷಯಗಳು …ಮತ್ತೇನೋ ಷಡ್ಯಂತ್ರ ಇದ್ದ ಹಾಗಿತ್ತು …
 ಅಷ್ಟು ಸುಲಭವ ಹೊಸ ಹೆಂಡತಿಯ ಮನಸನ್ನು ಘಾಸಿಗೊಳಿಸುವುದು …?
ಎಂತಹ  ದರ್ಪ ಅದು … !! ಟೀ ಬಿಸಿಯಲ್ಲಾಗಲಿ, ಪ್ರಮಾಣದಲ್ಲಾಗಲಿ ಕೊಂಚ ಹದತಪ್ಪಿದರು ,ಅಡಿಗೆಯಲ್ಲಿ ಉಪ್ಪು ಖಾರ ಚೂರೇ ಏರುಪೇರಾದರೂ ,ಕ್ಷಮಿಸಲಾಗದ ಅಪರಾಧ ! ಅವನೆದ್ದು ಹಾಸಿಗೆಯಿಂದ ಇಳಿದ ಕೂಡಲೇ ಗಮನಿಸಿ ಓಡಿ ಬಂದು ಅವನು ಹೊದ್ದುಕೊಂಡಿದ್ದ ಮೇಲುಹೊದಿಕೆಯನ್ನು ಮಡಚಿಟ್ಟು ಶುಚಿ ಮಾಡಿಬಿಡಬೇಕು … mosquito coil  ಆಫ್ ಮಾಡಿರದ್ದಿದ್ದರೆ ,ಕೂಗಿ ಕರೆದು ಪಕ್ಕದಲ್ಲಿ ನಿಲ್ಲಿಸಿಕೊಂಡು ಬೈದು,ಆಜ್ಞೆ ಮಾಡಿ ನನ್ನ ಕೈಯಿಂದಲೇ ಆಫ್ ಮಾಡಿಸುತ್ತಿದ್ದ, ನೆಲ್ಲಿಯಲ್ಲಿ ನೀರು ಪೋಲಾಗಿ 4  ಬಿಂದಿಗೆ ಹರಿದುಹೋಗುತ್ತಿದ್ದರು , ಅಡಿಗೆ ಮನೆಯಿಂದ ಹೆಂಡತಿಯೇ ಬಂದು  ನಿಲ್ಲಿಸಬೇಕು , ನ್ಯೂಸ್ ಪೇಪರ್,tv  ಇರುವುದು ಅವನಿಗೆ ಮಾತ್ರ, ಹೆಣ್ಣುಮಕ್ಕಳಿಗೆ ಸಲ್ಲದು…ಕೆಲಸಕ್ಕೆ ಹೋಗಬೇಕಂದರೆ ಕಸತೆಗೆದು,ಮನೆವರಿಸಿ ,ಅಡುಗೆ ಮಾಡಿ –‘ನನಗೆ ಓದ್ದಿದ್ದರು,ದುರಹಂಕಾರವಿಲ್ಲಾ’ ಅಂತ  ಸಾಬೀತುಪಡಿಸಿ  ಹೊರಾಡಬೇಕು,ಆಫೀಸಿನಿಂದ ನೆನ್ನೆಗಿಂತ 5 ನಿಮಿಷ  ತಡವಾದರೆ ಅದರಲ್ಲಿನ ವಂಚನೆಯ ವಾಸನೆ ಹತ್ತುತ್ತಿತ್ತು ,ಸಾರು ಚೆಲ್ಲಿದ್ದು ತಪ್ಪು,ಆದರೆ ಅದರ ಮೇಲೆ  ಓಡಿ ಹೋಗಿ ಬಟ್ಟೆ ತರದೇ ನಿಧಾನವಾಗಿ ತಂದು ವರೆಸಿದ್ದು ಅಹಂಕಾರ,    …ಕಾರಣವೇ ಬೇಕಿರಲಿಲ್ಲ ..ಏನೇನೋ ಕಟ್ಟಪ್ಪಣೆಗಳು … ಇದ್ದಕ್ಕಿದ್ದಂತೆ ಸ್ಪೋಟನೆ, ಘರ್ಜನೆ — ಒಂದೇ ಮಾತಿನಲ್ಲಿ ಕೆಲಸಕ್ಕೆ ಬರದವಳನ್ನಾಗಿ ಹೀಯಾಳಿಸಿ,ತುಚ್ಚವಾಗಿ ವಗೆದುಬಿಡುತ್ತಿದ್ದ ..ಬರಬರುತ್ತ ಅದೆಂತ ಭಯ ಆವರಿಸತೊಡಗಿತು… ಒಂದು ದಿನ ಹಲ್ಲುಜ್ಜುವುದನ್ನು ತಪ್ಪಿಸಿದರು ಪರವಾಗಿಲ್ಲ  , ಸುಸ್ತು ಸಂಕಟ ಅಂತ ಒಂದು ದಿನ ಅಡಿಗೆ ಮನೆಗೆ ಪ್ರವೇಶಿಸುವುದನ್ನು ತಪ್ಪಿಸುವುದು ಬೇಡ ಎನಿಸಿಬಿಟ್ಟಿತ್ತು …ಆದಿನ ಅದೇನೋ ಆಯಾಸ, ಕೂತಿದ್ದೆ ತೂಕಡಿಸುತ್ತಾ ,..ಅರಚಿದ್ದ –‘govt ಲಾಡ್ಜ್   ಆಗೋಯ್ತು ಮನೆ , ಬರಿ ತಿನ್ನುವುದು ,ಹಾಯಾಗಿ ಮಲಗುವುದು,ಇಷ್ಟೇ ‘. ಬಹುಷ್ಯ 14  ಗಂಟೆ ಹೊರಗೆ ದುಡಿದು ಬರುವ ಯಾವ ಹೊಸ ಹೆಂಡತಿಗೂ ಗಂಡ ಹೀಗೆ ಅಂದಿರಲಾರ  …. ಎಷ್ಟೋ ಕೋಟಿಗೆ ಬದುಕುವವನು , ಯಾವುದೊ ಬಿಸಿನೆಸ್ tensionalli , ಕೂಲಿಗೆ ಕಾಲಲ್ಲಿ ಜಾಡಿಸುವಂತಿರುತ್ತಿತ್ತು…
ಗಂಡು ಹೆಣ್ಣು ಎನ್ನುವ ಒಂದು ಕಾರಣ ಸಾಕಿತ್ತು ಪ್ರೀತಿ ಹುಟ್ಟಲಿಕ್ಕೆ …ನವ ವರನಿಗೆ ಯಾಕೆ ಇಂತ ಕಲ್ಲೆದೆ …ಹೆಣ್ಣನ್ನು ಒಲಿಸಿಕೊಳ್ಳುವುದರ  ಬದಲು ,ಅವಳ ಮನಸನ್ನು ಹೀಗೆ ಹಿಂದೆ ಮುಂದೆ ನೋಡದೆ ,ಮುರಿದು ಹಾಕುವಾಗ ,ಸಿಗುವ ಖುಷಿಯಾದರು ಎಂತದ್ದು .
ಪರವಾಗಿಲ್ಲ ಅವನಿಗೇನೋ ಆತಂಕ ,ನನ್ನನ್ನು ನಾನೇ ಸಮಾಧಾನ ಮಾಡಿಕೊಳ್ಳಲು ಪ್ರಯತ್ನಪಡುತ್ತಿದ್ದೆ, software  ಸೊಸೆ ,ತನ್ನ ಶ್ರಮಜೀವಿ ಅಮ್ಮನಿಗೆ ಮದದಲ್ಲಿ ಸೆಡ್ಡು ಹೊಡೆದು ಕಡೆಗಣಿಸುತ್ತಾಳೆ  ಅಂತ ಅವನಿಗೆ ಭಯ, ಹೋಗುತ್ತಾ ಹೋಗುತ್ತಾ  ಅರಿವಿಗೆ ಬರುತ್ತದೆ ನನ್ನ ತಲೆಯಲ್ಲಿ ಆ ತರದ ಅಹಂಕಾರಗಳು ಇಲ್ಲವೆಂದು ….
..ಕೆಲವರು ಹಾಗೆ , ನಡೆದು ಬಂದ್ದದ್ದು ,ಕಾರಣ ಸಿಗುವುದಿಲ್ಲ, ಒಪ್ಪಿಕೊಳ್ಳುವುದ,ಸಹಿಸಿಕೊಳ್ಳುವುದ ಬಿಟ್ಟು ಅನ್ಯತ ಮಾರ್ಗವಿಲ್ಲ ಮದುವೆಯಲ್ಲಿ  ….
ನನ್ನ ಹತ್ತಿರ ಅವನ ಮನೆಗೆ ಪ್ರವೇಶಿಸುವಾಗ ಏನಿತ್ತು ? ಎಲ್ಲವನ್ನು ಅವನಿಗೆ  ಸಂಪೂರ್ಣವಾಗಿ ಕೊಟ್ಟಿದ್ದೆ,ತುಂಬು ಪ್ರೀತಿ ,ತುಂಬು ಯವ್ವನ ,account ನಲ್ಲಿ ಇದ್ದ ಬದ್ದ ಹಣ ….ತವರು ಮನೆ ದುಡ್ಡು !
ಮತ್ತೇನು ಬೇಕಿತ್ತು ಅವನಿಗೆ ?ಹುಡುಕುತ್ತಲೇ ಇರುತ್ತಿದ್ದ ತನಗೆ ಯಾವುದೋ ಕಡಿಮೆಯಾಯಿತು,ಲೋಪವಾಯಿತು ,ಏನೋ ಮುಚ್ಚಟ್ಟೆ ಮಾಡುತ್ತಿದ್ದಾಳೆ ,ಸಂಪೂರ್ಣ ದಕ್ಕುತ್ತಿಲ್ಲ ಎನ್ನುವಂತೆ  …….
ಮದುವೆಗೆ ಮುಂಚೆಯೇ ನನ್ನ ಕಾಲ್ ಹಿಸ್ಟರಿ ತೆಗೆಸಿದ್ದ , ಯಾರ ಜೊತೆಗಿನ ಸ್ನೇಹ,ಯಾಕೆ ದೀರ್ಘ ಮಾತು ವಿಚಾರಣೆ ಮಾಡಿದ್ದ…
ಅಲ್ಲೇ ಕಸಿವಿಸಿಯಾಗಿದ್ದ ನಾನು ದಿಟ್ಟವಾಗಿ ಹೇಳಿದ್ದೆ , ಸಮಸ್ಯೆ ಏನು?ಯಾಕೆ ತೆಗೆಸಿದ್ದು,ನೀನಾ?, ಹಾಗಾದರೆ ಮದುವೆ ಕ್ಯಾನ್ಸಲ್ !!!
–ನಾನಲ್ಲ, ನನ್ನ ಕಸಿನ್ಸ್ ,ಕೇಳಿದೆನಷ್ಟೆ.. ಅನ್ಯತ ಭಾವಿಸಬೇಡ ,ಯಾರಿಗೂ ತಿಳಿಸಬೇಡ ……
ಮೊದಲ ವಾರದಲ್ಲೇ ಇಮೇಲ್ ಪಾಸ್ ವರ್ಡ್, ಐ. ಡಿ ಕೊಡುವಂತೆ ಅಜ್ನಾಪಿಸಿದ್ದ …
ನಂಬಿಕೆ ಇಲ್ಲ  ಅಂದರೆ ಮದುವೆ ಯಾಕೆ ಆದೆ, ನಾನ್ಯಾಕೆ ಕೊಡಬೇಕು ,ಕೇಳೋದಕ್ಕೆ ಒಂತರ ಅನ್ನಿಸಲ್ವ ? ದ್ವನಿ ಏರಿಸಿದ್ದೆ …
ಮಧ್ಯ ಅವರಮ್ಮ ಬಂದರು , ಅವನಕ್ಕನನ್ನು ಕರೆಸಿದರು — ಅಷ್ಟೇ ತಾನೇ ಕೊಟ್ಟು ಬಿಡು, ಏನು ಇಲ್ಲ ಅಂದ ಮೇಲೆ ಯಾಕೆ ಪ್ರತಿರೋಧ ಮಾಡುವೆ, ನೋಡಿ ಸುಮ್ಮನಾಗುತ್ತಾನೆ, ಹೀಗೆ ಒಲ್ಲೆ ಎಂದರೇನೆ   ಅವನ ಅನುಮಾನ ಇನ್ನಷ್ಟು ಕೆರಳುವುದು , ಆಸಕ್ತಿ ಹೆಚ್ಚುವುದು — ಎಷ್ಟು ಚಂದ ಸಮಜಾಯಿಸಿ ನೀಡಿದ್ದರು! ಕೊಟ್ಟೆ , ನೋಡೋಣ ಅದೇನು ಹೆಕ್ಕಿ ತೋರಿಸುತ್ತಾನೋ  ಎಂದು ….
ಹಾಗದಮೇಲೆ ನನ್ನ ಮೊಬೈಲ್ ಇನ್ಬಾಕ್ಸ್ ನೋಡಿ ,ಕೆಲಸಕ್ಕೆ ಬಾರದ ಮೆಸೇಜ್ ಗೆ ಅಪಾರ ಅರ್ಥಗಳನ್ನು   ಕಲ್ಪಿಸಿ ಪೆಟ್ಟು ತಿಂದ ಮೃಗದಂತೆ ಭೂಮಿ ಆಕಾಶವನ್ನು ಒಂದು ಮಾಡಿ ಘೀಳಿಟ್ಟಿದ್ದು , accident ಅಲ್ಲ , ಸುಮ್ಮನೆ ನೋಡಿದ್ದಲ್ಲ !!!
ನನಗೊತ್ತು ನಾನಿಲ್ಲದ ಸಮಯದಲ್ಲೆಲ್ಲ ನನ್ನ ಫೋನ್ ಶೋಧನೆಗೊಳಪಡುತ್ತಿರುತ್ತದೆ … ಹಾಗೆ ನೋಡಿಯಾದರು ನಿಸೂರಗಲಿ ಎಂದು ಯಾವ ಪಿನ್ ಗಳನ್ನೂ ಸೆಟ್ ಮಾಡಲು ಹೋಗಲಿಲ್ಲ …
ಎಷ್ಟೇ ವಾಲ್ಯುಮ್ ಕೊಟ್ಟುಕೊಂಡು ಹೆಡ್ ಫೋನ್ ಸಿಕ್ಕಿಸಿಕೊಂಡು ಮೈ ಮರೆತ್ತಿದ್ದರು , ಗೆಳತಿಯದೋ , ತವರು ಮನೆಯವರದ್ದೋ ಫೋನ್ ಬಂದೊಡನೆ , ಸೌಂಡ್ ಮ್ಯೂಟ್ ಆಗಿರುತ್ತದೆ …ಏನು ಮಾತಾಡಿದೆ ಮನಸ್ಸು ಹೀರಿಕೊಳ್ಳುತ್ತಿರುತ್ತದೆ.. ನಾನೇನಾದರು ಕೊಂಚ ಅಸಮಾದಾನ, ಅಸಂತುಷ್ಟಿ ತೋರಗೊಟ್ಟೆನೋ ಮತ್ತೊಂದು ರಣರಂಗದ ವೇದಿಕೆ ಸಜ್ಜು ….. ನ್ಯಾಯ ಪಂಚಾಯ್ತಿ ನೆರವೇರುತ್ತದೆ ….
ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ, ಹೊಲೆಯ ಐತ , ತನ್ನ ಹೆಂಡತಿಯ ಬಗ್ಗೆ ಅವನ ಸ್ನೇಹಿತ ತೆಗೆದ ಕೊಂಕು, ಅನುಮಾನಗಳನ್ನು ಪರಿಹರಿಸಿಕೊಳ್ಳಲು, ತನ್ನ ಪ್ರೀತಿಯ ಹೆಂಡತಿ ಯಜಮಾನನ್ನನ್ನು ಸಂಧಿಸುವುದನ್ನು , ದೈಹಿಕ ಸಂಭಂದಕ್ಕೆ ಆರೋಪಿಸಿಕೊಂಡು ,ಮರ ಏರಿ ಕದ್ದು ನೋಡುತ್ತಿರುತ್ತಾನೆ …
ಅನುಮಾನ ಬಗೆಹರಿದ ಮೇಲೆ ,ಏನೋ ಮಾತಾಡುತ್ತ ತಾನು ಮರ ಹತ್ತಿ ಕದ್ದು ನೋಡಿದ್ದನ್ನು ಹೆಂಡತಿ ಎದುರು ಬಿಟ್ಟುಕೊಟ್ಟು ಬಿಡುತ್ತಾನೆ … ಹೊಲೆಯಳಾದರೇನು,ಪೀಂಚಲುವಿಗೆ ಆತ್ಮಾಭಿಮಾನ, ಸ್ವಾಭಿಮಾನಗಳಿರುವುದಿಲ್ಲವ? ಹೊಂಚು ಹಾಕಿ ನೋಡುವ ಬುದ್ಧಿಬೇರೆ ಕಲಿತ್ತಿದ್ದೀಯ ಎಂದು ಹೌಹಾರುತ್ತಾಳೆ …..
    
ಹೊಂಚು ಹಾಕಿ ಹಾಕಿ ಎಷ್ಟೆಲ್ಲಾ evidence collect  ಮಾಡಿಟ್ಟುಕೊಂಡಿದ್ದ …. ನನ್ನೆದುರಿಗಿಂತ , ನೆಂಟರ ಎದುರೆ ಅದು ಚಲಾವಣೆಯಾಗುತ್ತಿದ್ದಿದ್ದು ,ಸಾಕ್ಷಿ ನುಡಿಯುತ್ತಿದ್ದಿದ್ದು…!!!!
ಅವನಿಗೆ ಗೊತ್ತಿತ್ತು ನನ್ನೊಲೊಬ್ಬ ಬರಹಗಾರ್ತಿ ಇದ್ದಾಳೆಂದು … ಟ್ಯಾಲೆಂಟ್ ಎಂದು ಕೊಂಡು,ಮದುವೆಗೆ ಮುಂಚೆಯೇ ತಿಳಿಸಿದ್ದೆ, ಅದನ್ನು ತೋರಿಸಿಯೂ ಇದ್ದೆ , ಮದುವೆ  ನಿಶ್ಚಯವಾದಾಗ , ನನಗೆ ಸಿಕ್ಕ ನಿಧಿ ಇವನು ಎಂದು ಡೈರಿಯಲ್ಲಿ ಬರೆದಿಟ್ಟುಕೊಂಡಿದ್ದು…..
ಅದೆಲ್ಲಿ ಅನ್ವೇಷಿಸಿದ್ದನೋ  ,ಅವನ ಪ್ರಕಾರ ಎಲ್ಲ ತಾನಾಗೆ ಕೈಗೆ ಸಿಗುತ್ತಿತ್ತು… ಇದ್ದರು ಇರಬಹುದು , ಮುಚ್ಚಿಡುವಂತದ್ದು ನನಗೇನು ಇರಲಿಲ್ಲ …… ನನ್ನ ಕೇಳಿದರೆ ಸರಿ, ಆದರೆ ಗೊತ್ತಿತ್ತಲ್ಲ ಅವನಿಗೆ …ಅವನಮ್ಮ, ಅಕ್ಕ, ಮತ್ತು ಅವನು ಸೇರಿಕೊಂಡು ನನ್ನ ಬಳಗವನೆಲ್ಲ ಕರೆದು ಜೆರಾಕ್ಸ್ ಗಳನ್ನೂ ಮಾಡಿಸಿ , yellow  ಮಾರ್ಕರ್ ನಲ್ಲಿ ತೋರಿಸಿ , ಸಮಜಾಯಿಸಿ ಕೇಳಿದ್ದರು ….
….
ಮದುವೆಗೆ ಮುಂಚೆ ನನ್ನ ಆಫೀಸ್ ಹತ್ತಿರ ವಿಚಾರಿಸಿದೆ , ಜನರ ಫೀಡ್ ಬಾಕ್ ತೆಗೆದುಕೊಂಡೆ ಎನ್ನುತ್ತಿದ್ದದ್ದು, ಬಿಲ್ಡಿಂಗ್ ಓನರ್ ಪರಿಚಯದ ಮೂಲಕ ಅಲ್ಲ ಬಹುಷ್ಯ private detectives ಕೈಚಳಕ ಅದು ….
ನಂಬಿಕೆ ಮೇಲೆ ಭೂಮಿ ನಡೆಯುತ್ತೆ… ಹುಟ್ಟಿದಾಗ ತಂದೆ ತಾಯಿ ಅಂತ ಯಾರು ಮುಂದೆ ಬರುತ್ತಾರೋ ಅದನ್ನೇ ನಂಬಿಕೊಂಡು ಬದುಕು ನಡೆಯುತ್ತೆ … ನಂಬಿಕೆ ಇಲ್ಲದೆ ತಾಳಿ ಕಟ್ಟುವುದೇಕೆ , ಪಕ್ಕ ಮಲಗುವುದೇಗೆ ?
ತುಂಬು ಪ್ರೀತಿ, ತುಂಬು ಕನಸುಹೊತ್ತು ಅರ್ಪಿಸಿಕೊಂಡಾಗ , ಮಗ್ಗುಲಿಂದ ಹೊರಳಿ ಇನ್ನೇನ್ನೋ  ತಡಕುತ್ತಿದ್ದಾನೆ ಎನಿಸಿದರೆ ಆಗುವುದು ನಂಬಿಕೆ ದ್ರೋಹವೋ , ಜಿಗುಪ್ಸೆಯೋ …!!
ನನ್ನ ನಂಬಿಕೆಯ ಪ್ರಪಂಚ ಕುಸಿದ್ದಿದ್ದು , ಅವನು ಗಿಫ್ಟ್  ಅಂತ ಕೊಡಿಸಿದ್ದ ,ಸಿಮ್ ಕಾರ್ಡ್ಅನ್ನು  , ಪ್ರತಿ ತಿಂಗಳು ರೂಮು ಬಾಗಿಲು ಹಾಕಿಕೊಂಡು ಒಂದು ಕಡೆಯಿಂದ ಯಾರ್ಯಾರ ನಂಬರ್ ,ಎಷ್ಟೆಷ್ಟು ಹೊತ್ತು , ಯಾಕೆ ಎಂದು ಬಿಲ್ ನೋಡಿ  ಹುಡುಕುವುದಕ್ಕೆ …… !!! ಅನ್ನುವುದು ಖಾತ್ರಿಯಾದಾಗ .ಎಂತ ನಯವಂಚನೆ ….
ಎಂದಾದರು ನಾನು ಈ ರೀತಿಯೆಲ್ಲ ಅವನ ಬಗ್ಗೆ ಯೋಚಿಸಿದ್ದೆನ? ನಂಬಿಕೆ ಇಡದೆ  ಕೊಟ್ಟುಕೊಳ್ಳುವಿಕೆ ಹೇಗೆ ಸಾಧ್ಯ,25  ವರ್ಷ ಅಪರಿಚಿತನಾಗಿದ್ದವನಿಗೆ … ತೆಗೆದುಕೊಳ್ಳುವವನೆ ಎಷ್ಟೆಲ್ಲಾ quality check ಮಾಡುತ್ತಾನೆ ಅಂದರೆ …!!!
ನಮ್ಮವರನ್ನು ಅನುಮಾನಿಸುವುದೆಂದರೆ ,ಅವಮಾನ ಮಾಡಿದಂತೆ ಆಗುತ್ತದೆಯಲ್ಲವ …? ಮುಲಾಜೆ ಇರಲಿಲ್ಲ ಅವನಿಗೆ …
ಜಿಗುಪ್ಸೆಗೊಳ್ಳುವುದು, ನೋವು ಪಟ್ಟುಕೊಳ್ಳುವುದು ಬಿಟ್ಟರೆ ಬೇರೇನೂ ಮಾರ್ಗವಿರಲಿಲ್ಲ ನನಗೆ!
ಗಂಡ ತಾನೇ… ಹೋಗಲಿ ಬಿಡು ಕೆಲ ಗಂಡಸರೇ ಹೀಗೆ , ಹೆಂಡತಿ ಮೇಲೆ ವಿಪರಿತ ಪ್ರೀತಿ , possessiveನೆಸ್ ಹೀಗೆಲ್ಲ ಆಡಿಸುತ್ತದೆ … ಒಂದೆರಡು ವರ್ಷ , ಆಮೇಲೆ ನನ್ನ frigidity  ನೋಡಿ ಅವನೇ ತಣ್ಣಗಾಗಿಬಿಡುತ್ತಾನೆ ಸಮಾಧಾನ, ಮತ್ತು ನೋವಿನಂಚಿನಲ್ಲಿ ಒಂದು ಭರವಸೆ , ಹೆಣ್ಣು ಮಕ್ಕಳಿಗೆ ಮತ್ತೇನು ಆಸರೆ ?
————————————————————————————————————————————————————————————-
ನನ್ನ ಸ್ಪೇಸ್ ಅಂತ ನನಗೆ ಏನು ಉಳಿದಿರಲಿಲ್ಲ ..!!!
ಮನಸ್ಸು ಅಕ್ಷರಸಹ ನಡುಗುತ್ತಿತ್ತು , ಅವನು ಫೋನ್ ಮಾಡಿದಾಗ ನನ್ನ ನಂಬರ್ ಕಸ್ಟಮರ್ ಕಾಲ್ ಸೆಂಟರ್ ಜೊತೆ ಬ್ಯುಸಿ ಇದ್ದರು , ನನ್ನಿಂದಲೇ  ಏನೋ ಅಚಾತೂರ್ಯ ಆಗಿಹೋಯಿತು ಎನ್ನುವಂತೆ … ಒಂದು ಕಾಲ್ ಬಂದರೆ , ಇದು ಮುಗಿಯುವವರೆಗೂ ಅವನು ಮಾಡದಿರಲಿ ಎನ್ನುವಂತ ಮೊರೆ ,ಭೀತಿ …… ದಿಗಿಲು ….
ಅವನಿಗೂ ಬೇಕ್ಕಿದ್ದುದ್ದೆ ಅದು , ಗಂಡನನ್ನು ನೆನೆದರೆ ಭಯಗೊಂಡು ಸೆರಗು ಸರಿಮಾಡಿಕೊಳ್ಳುವ ಸಿರೋಮಣಿ …v

ಇವತ್ತು ಬರುತ್ತೇನೆ ಅಮ್ಮನ ಮನೆಯಿಂದ ಅಂದು, ಹುಷಾರಿಲ್ಲ ಅಂತ ಅಲ್ಲೇ ಉಳಿದದ್ದು , ಎಂತ ನಂಬಿಕೆ ವಿದ್ರೋಹ !!!
ಸೆಂಡ್ ಆಫ್ ಪಾರ್ಟಿ ಅಂತ ಹೇಳಿ ಪರ್ಮಿಷನ್ ತಗೆದುಕೊಂಡು ಹೋದರು, ದಿನಬರುವ ವೇಳೆಗಿಂತ 10 ನಿಮಿಷ ತಡವಾಗಿದ್ದಕ್ಕೆ ಸಂಸಾರಸ್ತೆ ಹುಡುಗರ ಜೊತೆ ನಡುರಾತ್ರಿಲಿ ಪಾರ್ಟಿಮಾಡಬೇಕ ಅಂತ ಆಯಿತು …
ಎಥ್ನಿಕ್ ಡೇ ದಿನ ಸೀರೆ ಉಡಬೇಕು ಅಂತ ನಿರ್ಧಾರ ಮಾಡಿದ್ದು ಕಡೆಗಳಿಗೆಯಲ್ಲಿ, ಸಮಯ ಇತ್ತು ಅಂತ , ಆದರೆ ಗಂಡನಿಗೆ ಹೇಳದೆ ಉಟ್ಟುಕೊಂಡು ಹೋದರೆ, ಮುಚ್ಚು ಮರೆ!!!!
ಇನ್ನು ಜಗಳವಾಡಿದ್ದಾಗ ಪರ್ಮಿಷನ್ ತೆಗೆದುಕೊಳ್ಳದೆ ಟ್ಯಾಕ್ಸ್ ಸೇವಿಂಗ್ಸ್ ಎಂದು ಹಣ ವಿನಿಯೋಗಿಸಿದ್ದು ಗಂಡನನ್ನು ಕಡೆಗಣಿಸಿ ನಿರ್ಧಾರ ಮಾಡಿದಂಗೆ …
ಕ್ರೆಡಿಟ್ ಕಾರ್ಡ್ ಅಪ್ಲೈ ಮಾಡಿದ್ದು ಗಂಡನನ್ನು ಮೂಲೆಗುಂಪು ಮಾಡಿದಂಗೆ …..

ಹೆಲ್ಪ್ ಮಾಡುತ್ತೇನೆ ಅಂತ ಹೇಳಿದ್ದೆಲ್ಲ ಬರಿ ಬಾಯಿ ಮಾತಿಗೆ ಆಯಿತು, ನಿಜವಾಗಲು ಸಪೋರ್ಟ್ ಮಾಡುತ್ತಿಲ್ಲ, 2 -3 ಲಕ್ಷ ಆಗಿರಬಹುದು ದುಡಿದು , ಎಲ್ಲಿ ಹೋಯಿತು ಲೆಕ್ಕ…
—ಇನ್ನು ಮದುವಣಗಿತ್ತಿ ಅಲ್ವಾ , ಇನ್ನು ಗುಂಗಿನಿಂದ ಹೊರಬಂದಿಲ್ಲ , ಅಷ್ಟು ಬೇಗ ದುಡ್ಡು,ಲೆಕ್ಕ,ವ್ಯವಹಾರ ಮನಸು ಹೊರಳಿರಲಿಲ್ಲ….
—ಕಾಗದದ ಮೇಲೆ ಬರೆದು ತೋರಿಸಿದ್ದು ಸುಳ್ಳುಲೆಕ್ಕವಂತೆ , ಸೆಟಲ್ಮೆಂಟ್ ಹಣ ಬೇರೆ , ಸಂಬಳ ಬೇರೆ…
—ಇಲ್ಲ ನೋಟೀಸ್ periodna ಸಂಬಳವನ್ನೇ setttlement ಅಂತ ಕೊಡುವುದು …
ದೊಡ್ಡ ಭಾವನಿಗೆ ಕೊಟ್ಟಿದ್ಯೇನೆ?

ಅಮ್ಮನ ಮನೆಗೆ ವಾರಕ್ಕೆ 3 ದಿನ ಹೋಗಬಹುದು, ಯಾಕಂದ್ರೆ ಅಕ್ಕ ದಿನಾ ಮನೆಗೆ ಬರುತ್ತಾಳೆ ಅಂತ ಮದುವೆಗೆ ಮುಂಚೆ ಆಮಿಷ ಒಡ್ಡಿದ್ದು , ನಿನ್ನ ತಾಯಿ ಒಬ್ಬರೇ ಪಾಪ, ವೈದವ್ಯ ಕಾಡುತ್ತೆ, ಚೆನ್ನಾಗಿ ನೋಡಿಕೋ ಅನ್ನುತ್ತ ಸಿಂಪತಿ ಸುರಿಸಿ ಒಳ್ಳೆಯವನು ಅನ್ನಿಸಿಕೊಂಡಿದ್ದು ಮದುವೆಗೆ ಮುಂಚೆ ಅಲ್ಲವ …?
ಈಗ ಕೇಳಿದರೆ ಅಕ್ಕ ದಿನಾ ಬರೋದೆ ಇಲ್ಲ, ಮಕ್ಕಳನ್ನು ಸ್ಕೂಲ್ ಗೆ ಬಿಡೋಕೆ ಕಾರಣಾಂತ ಬರುತ್ತಾಳೆ , ಅಮ್ಮನ ಮನೆಗೆ ಹೋಗೋಕೆ ಕಾರಣಬೇಕು, ಡಬಲ್ ಪರ್ಮಿಷನ್ ಬೇಕು,..
ಮತ್ತೆ ಮುಂಚೆ ಹಾಗೆ ಅಂದಿದ್ದು,ಸಿಗ್ಗಿಲ್ಲದೆ ಹೇಳುತ್ತಾನೆ —‘ಅದು ನಿನ್ನ ಹಣೆ ಬರಹ ….’
ಎಂತ ಭೀಕರತೆ ಇರುತ್ತಿತ್ತು ಅವನ ಮಾತಿಗೆ, ತರ್ಕಕ್ಕೆ !! bmtc ಬಸ್ಸಿಗೆ ಇಂಡಿಕೇಟರ್ ಸದ್ದು ಸೂಕ್ತವಾಗುತ್ತಿರಲಿಲ್ಲ , ಪಕ್ಕದಲ್ಲಿ ನಮ್ಮ ಗಾಡಿಗೆ ಆತುಕೊಂಡೇ ಬಂದ ಟಾಟ ಸುಮೋದಲ್ಲಿ ನನ್ನ ಒಬ್ಬ ಭಗ್ನಪ್ರೇಮಿ ಇರಬಹುದು , ನನ್ನನ್ನು ನೋಡುವಂತೆ  ಹುಡುಗನಿಗೆ ಪ್ರಚೋದಿಸಿದ್ದೆ ಉಬ್ಬಿಸಿ  ನಿಂತುಕೊಂಡಿದ್ದ ನನ್ನ ನಿಲುವು ,ನಮ್ಮ ಮನೆಯ ನಾಯಿ ಬೇರೆ ಮನೆಗೆ ಹೋಗಿ ಬಾಲ ಅಲ್ಲಾಡಿಸಿದರೆ  ಸರಿಯಾಗಿ ಭದ್ರವಾಗಿ ಕಟ್ಟದ್ದಿದ್ದುದ್ದು ಒಡೆಯನ ತಪ್ಪು , Stopನಿಂದ  ಕ್ಯಾಬ್ pass ಆಯ್ತಾ ಅಂತ 2  ದಿನ ಮೆಸೇಜ್ ಮಾಡಿದ ಸ್ನೇಹಿತನಲ್ಲದ ಸಹೋದ್ಯೋಗಿಯನ್ನೂ  ನಾನು ಮಡಗಿಕೊಂಡಿದ್ದೆ,ನನ್ನನ್ನು ಗುರಾಯಿಸುವ ಹುಡುಗನ ಜೊತೆ ನಾನು ಓಡಿಹೋಗುವೆ, ಇಂತ ಜಾಗದಲ್ಲಿ ಇದ್ದೇನೆ ಅಂತ ನಾ ಹೇಳಿದರು ಆಟೋ ಅಣ್ಣ ನಿಜ ನುಡಿದು ಪ್ರಮಾಣಿಸಬೇಕಿತ್ತು, ಕಡೆ ಕಡೆಗೆ ಮದುವೆಯ ಸಮಯದಲ್ಲಿ ನಾವು ಮನೆ ಬದಲಾಯಿಸಿದಕ್ಕು ಏನೋ ಬಲವಾದ ಕಾರಣವಿತ್ತು , ಮೊಗು ಮಾಡಿಕೊಳ್ಳಲು ,ಕಡಿಮೆ ಪ್ರಯಾಸದ ಪ್ರಯಾಣವಿರುವ ಕಂಪನಿ ಹುಡುಕಿಕೊಂಡರೆ,ಅದರಲ್ಲಿ  ಹಳೆ ಗೆಳೆಯನ ಕಾರಣ ಗೋಚರಿಸುತ್ತಿತ್ತು !!!!
ಅದೆಷ್ಟನೆಯೋ ಬಾರಿಯೋ ಕೇಳಿದ್ದ , ಯಾಕೆ ಒಂದು ಕಾಲ್ ಮಾಡಿದ್ದೆ?   … ಕೆಲಸದ ನಿಮಿತ್ತ , ತಮ್ಮನಂತ ಹುಡುಗು ಅವನು…. ಉಹೂ …   ಬೆನ್ನಿಗೆ ಬಿದ್ದ ಬೇತಾಳ,ಮತ್ತೆ ಮತ್ತೆ ಅದೇ  … ಸಾಕಾಗಿ ಒಮ್ಮೆ ಅಂದೇ, ಏನಿವಾಗ , ನನ್ನ ಪರ್ಸನಲ್ ವಿಷಯ …… ರೆಕಾರ್ಡ್ ಮಾಡಿದ್ದ , ನೆಂಟರೆದುರು ಹಾಕಿ ತೋರಿಸಿದ … ಅವನ ಕಡೆಯವರೆಂದರು ‘ಗಂಡನ ಹತ್ತಿರ ಹೆಂಡತಿಗೆ ಪರ್ಸನಲ್ ಏನು?’ … ನನ್ನ ಕಡೆಯವರು ಅಂದರು , ‘ಅದರಲ್ಲೇನಿದೆ ರೇಗಿ ಮಾತಿಗೆ ಅಂದಿದ್ದು ಅಷ್ಟೇ …. ‘
–ಅಷ್ಟೇನಾ…???? ಕತ್ತಿ ಜಳಪಿಸಿ  ಕಟಕಟನೇ  ಹಲ್ಲುಕಡಿಯುತ್ತಿದ್ದ  …ಇವತ್ತು ಏನೇ ಆದರು ಉಳಿಸಲ, ಈ ಸೂಳೆಮುಂಡೆನಾ……
ಅವನಕ್ಕ ಕುಮ್ಮಕ್ಕು ಹೇಳಿದ್ದಳು , ಈ ಕೆಲಸ ಅವತ್ತೇ ಮಾಡಿದ್ದಿದ್ದರೆ , ಪೋಲಿಸ್ ವರೆಗೂ ಹೋಗುತ್ತಿದ್ದಳ ?
ಮಿಕ್ಕಿದೆಲ್ಲ ಸರಿ ಆದರೆ ,ಈ ಆಪಾಧನೆಗಳಿವೆಯಲ್ಲ  !!!ಹಲವು ಬಾರಿ ಹೇಳಿದ್ದೆ ಕೂಗಾಡುತ್ತ , ಕಿರುಚಾಡುತ್ತ , ಅಳುತ್ತ , ಕೈ ಸುಟ್ಟುಕೊಳ್ಳುತ್ತಾ, ಕೈ ಕೂಯ್ದುಕೊಳ್ಳುತ್ತಾ, ಮನೆ ದೇವರು, ತೀರಿಕೊಂಡ ತಂದೆ ಎಲ್ಲರ ಮೇಲೆ ಆಣೆ ಮಾಡುತ್ತಾ , ನನಗೆ ಯಾರೊಂದಿಗೂ ಕೆಟ್ಟ ಸಂಬಂಧವಿಲ್ಲಾ , ಇರಲಿಲ್ಲ, ಒಳ್ಳೆ ಹುಡುಗಿ  ನಾನು !!!!!!!!!!!!!
 
 ——-

ನನ್ನೇ ಕೇಳುತ್ತಾನೆ — ‘ಗಂಡನ್ನನ್ನ ಹೇಳದೆ ಕೇಳದೆ ಇಂಟರ್ವ್ಯೂ ಅಟೆಂಡ್ ಮಾಡಿದ್ದು ಮಹಾಪರಾಧ ಅಲ್ಲದೆ ಮತ್ತೇನು ?’
… ಮನೆ ದೇವರಾಣೆ ನಿದ್ದೆಯಿಂದೆಬ್ಬಿಸಿ ಹೇಳಿದೆ , ನೀನು ಕೇಳಿಸಿಕೊಂಡಿಲ್ಲ ಅಷ್ಟೇ ….
‘ಇಂಟರ್ವ್ಯೂಗೆ ಹೋಗುತ್ತೇನೆ ಅಂದು ಬಿಟ್ಟರೆ ಸಾಕ , ಯಾಕೆ, ಎಲ್ಲಿ, ಹೇಗೆ ಅಂತೆಲ್ಲ ವಿವರಣೆ ಬೇಡವ? …. ‘
‘…ಹೋಗಿದ್ದು ಇಂಟರ್ವ್ಯೂ ಉತ್ತರಿಸೋಕೆ ಅಷ್ಟೇ ಅಲ್ಲವ ,ಕಂಪನಿ ಸೇರಿಯೇ ಬಿಡುತ್ತೇನೆ, ಸೇರಲೇಬೇಕು ಅಂತ ಏನು ಇಲ್ಲವಲ್ಲ! ಅಷ್ಟಕ್ಕೇ ಯಾಕೆ ದಂಡಿಸಬೇಕು , ನಿಮ್ಮಮ್ಮ ವಾಚಾಮಗೋಚರ ಯಾಕೆ ಜಗಳ ತೆಗೆಯಬೇಕು…?’
‘ಇಲ್ಲ ಬೀದಿ ಸುತ್ತಕ್ಕೆ ಬೀದಿ ಬಸವಿನ ಬಿಟ್ಟು ಬಿಡಬೇಕು ಅಲ್ವಾ ನಿನಗೆ….?’
ಅತ್ತೆ ಬೈದರು ಅಂತ ಅಳುತ್ತ ಫೋನ್ ಮಾಡಿದರೆ , ಸಮಾಧಾನದ ಮಾತಿರಲಿ , ಹೋಗಲಿ ಬಿಡು ಇರಲಿ, ‘ಎಲ್ಲರನ್ನು ಬರಹೇಳುತ್ತೇನೆ ನ್ಯಾಯ ಪಂಚಾಯ್ತಿ ಮಾಡೋಣ …’
ಅವರು ಬೈದಿದ್ದಕ್ಕಿಂತ ,ಈ ಅನ್ಯಾಯದ ಪಂಚಾಯ್ತಿಯಾ ಮಾತೆ ಅಲ್ಲವ, ನನ್ನನ್ನು ಚೂರು ಮಾಡಿದ್ದು !!!

ವ್ಯಕ್ತಿಯೊಬ್ಬನಿಗೆ ಕಸಿದುಕೊಳ್ಳದೆ ಉಳಿಸಬೇಕಾಗಿದ್ದ ಕನಿಷ್ಠ ಮಟ್ಟದ ಸ್ವಾತಂತ್ರ್ಯ , ವ್ಯಕ್ತಿ ಮಟ್ಟದ ನಿರ್ಧಾರಗಳನ್ನು ತಾನೇ ಮಾಡಲುಬೇಕಾದ ಸ್ಪೇಸ್ ..ಅದ್ಯಾವುದರ ಅರಿವು ಅವನಿಗಿರಲಿಲ್ಲ ….ಪ್ರತಿಯೊಂದನ್ನು ಗಂಡನ -ಅತ್ತೆಯ ಹಕ್ಕು-ಅಧಿಕಾರಗಳಲ್ಲಿ ತೂಗಿ , ತಪ್ಪು ಹೆಕ್ಕಿ,ದಂಡನೆಗೆ ಈಡು ಮಾಡುವ ಪದ್ಧತಿ ಉಸಿರು ಕಟ್ಟಿಸುವುದು  …

ಇಲ್ಲ ಅವನು ಒಳ್ಳೆಯವನೇ… ಒಮ್ಮೊಮ್ಮೆ ಹೀಗೆಲ್ಲ ಹೆಂಡ ಕುಡಿಸಿದ ಕೋತಿಯಂತೆ ಆಡಿಬಿಡುತ್ತಾನೆ ಅಷ್ಟೇ ….
ಆದರೆ ನಾನು ಎಷ್ಟು repressionge ಒಳಗಾಗಿದ್ದೆ ….ಹೇಳಲಾಗದೆ, ಅನುಭವಿಸಲಾಗದೇ ಉಸಿರು ಕಟ್ಟಿ ಕಟ್ಟಿ ಸಾಯುತ್ತಿದ್ದೆ ..
ಅವನಿಗೆ ಅರ್ಥ ಮಾಡಿಸುವ ಮಾರ್ಗವೇ ಇರಲಿಲ್ಲ…
ಅವನು ಎದುರಿಗೆ ಬಂದರೆ ಬಾಯಿ ಕಟ್ಟಿ ಹೋಗುತ್ತಿತ್ತು … ಭಯ ಭಯ ಭಯ !!!
ಮಾತನಾಡಲು ಸಾವಿರ ಇದ್ದರು,ಸಾವಿರಬಾರಿ  ಯೋಚಿಸಿ,ಯೋಚಿಸಿ  ಹೇಗೆ ಹೇಳಬೇಕು ,ಎಷ್ಟು ಹೇಳಬೇಕು, ಅವನು ಅರ್ಥ ಮಾಡಿಕೊಳ್ಳಬಹುದಾದ ವಿಧಾನ , ಅದರ ಮುಂದಿನ ಘೋರಪರಿಣಾಮ ಎಲ್ಲವುಗಳ ಬಗ್ಗೆ ಸಮಗ್ರವಾಗಿ ಚಿಂತಿಸಿ ಮಾತು ಹೊಂದಿಸಬೇಕಿತ್ತು …ಅವನಿಗೆ ನೋವಾಗದಂತೆ, ಅವನು ಕೆರಳದಂತೆ !!
ಬಾಳಸಂಗಾತಿಯವನು, ಗೆಳೆಯನಂತೆ ಮನಸನ್ನು ಹಂಚಿಕೊಳ್ಳಲು ಸಲಿಗೆ ಇರಬೇಕಲ್ವ …
–ಅಯ್ಯೋ ಇದೆಲ್ಲ ಇಂದಿನ ಕಾಲದ ಸಾಂಗತ್ಯದ ಅವಶ್ಯಕತೆಗಳು …
ಅವರ ಮನೆಯವರ ಕಾಲ ನಿಂತು ಹೋಗಿ ಎಷ್ಟು ಜಮಾನವಾಗಿದೆ!!!!

ಅವನೇ ಅನ್ನುತ್ತಿದ್ದ ನನ್ನನ್ನು ಹ್ಯಾಂಡಲ್ ಮಾಡುವುದು ನಮ್ಮಮ್ಮನಿಗೆ ಮಾತ್ರ ಸಾಧ್ಯ….

ಬೆಳಗ್ಗೆ ಎದ್ದೇಳುವಾಗಲೇ ಕಠೋರತೆಯ ಸೋಗು , ರೂಮಿಂದ ನಡೆದು ಹೋಗುವಾಗ ಮಹಾರಾಜನ ಆವಾಹನೆ , ಪಾಳೆಗಾರನ ಗತ್ತು , ಯಜಮಾನಿಕೆಯ ಪ್ರತಿಷ್ಟಾಪನೆ ,ಗಂಡಸಿನ ಕಳೆ….
ಮನೆಯ ಸದಸ್ಯರನ್ನು ಸುಲಭವಾಗಿ ಮಾತಿಗೆಳೆಯುವಂತೆ ಮಾತನಾಡಿಸಲು ಸಾಧ್ಯವಾಗುತ್ತಿರಲಿಲ್ಲ ….
ಮಾತಾಡುವುದು ಕೆಟ್ಟಿತ್ತು , ರಾಜಗಾಂಭೀರ್ಯದಲ್ಲಿ ಪೇಪರ್ ಓದುತ್ತಿದ್ದವನು , ಕೂಲಿ ಆಳಂತೆ ಮನೆಗೆಲಸದಲ್ಲಿ ತೊಡಗಿರುವವಳ ‘ತಪ್ಪು’ಗಳನ್ನೂ ಅವನಮ್ಮನ ಎದುರಲ್ಲಿ ಎತ್ತಿತೋರಿಸಿ ,ಕುಕ್ಕಿ ಸೆದೆ ಬಡೆಯುದ್ದಿದರೆ ಅಂದು ನನ್ನ ಹಗಲು ಸುಮಧುರವಾಗಿ ಶುರುವಾಗುತ್ತಿತ್ತು ..
ಇನ್ನು ಆಫೀಸಿಗೆ ಹೋದಮೇಲೆ business magnet ಆಗಿಬಿಟ್ಟಿರುತ್ತಿದ್ದ..ಅವನ convinient ಟೈಮ್ ನೋಡಿಕೊಂಡು ನಾನು ಮಾತಾಡಬೇಕಿತ್ತು , ಹೆಚ್ಚೆಂದರೆ 3 ನಿಮಿಷದ ಸಂಭಾಷಣೆ ಅಷ್ಟೇ ,ಎಲ್ಲ ಚೆನ್ನಾಗಿದ್ಯ ಅಲ್ಲಿ ಅಂತ ವಿಚಾರಿಸಿಕೊಳ್ಳಬೇಕಿತ್ತು ಅಷ್ಟೇ , ಫೋನ್ ಮಾಡಿದರು ಮಾಡದ್ದಿದರು ಅವನ moodಡಿನ ಮೇಲೆ ತಪ್ಪು ಸರಿ ಸೃಷ್ಟಿ ಆಗಿಬಿಡುತ್ತಿತ್ತು ….
ಸಂಜೆಗೆ ಅವನು ದುಡಿದು ಬಂದಿರುತ್ತಿದ್ದ, ನಾನು ದುಡಿದು ಬರುತ್ತಿದ್ದೆ …
ಆದರೆ ಯುದ್ಧ ಮಾಡಿ, ರಾಜ್ಯಗೆದ್ದು ಬಂದವನನ್ನು ಆರತಿ ಎತ್ತಿ ಒಳಗೆ ಕರೆದುಕೊಳ್ಳುತಿರಲಿಲ್ಲವಷ್ಟೇ ….!!!
ಮತ್ತೆ ಅವನ ಮೂಡ್ ನೋಡಿಕೊಂಡು ವ್ಯವಹರಿಸಬೇಕಿತ್ತು ..ಮೂಡ್ ಸ್ಟಡಿ ಮಾಡಿ ನಿರ್ಧಾರಕ್ಕೆ ಬರುವಷ್ಟರಲ್ಲಿ ಒಂದೆರಡು ಗಂಟೆ ಕಳೆಯುತ್ತಿತ್ತು …ಕಲಿತುಕೊಳ್ಳುತ್ತಿದ್ದೆ ಅವನಮ್ಮ ಹೇಗೆ ಅನುಭವ ಮಾತ್ರದಿಂದ ಮಗನ ಮೂಡ್ ಗ್ರಹಿಸಿ ಮಾತು ಹೇಗೆ ತೆಗೆಯುತ್ತಾರೆ ಎಂದು… ಆದರು ನಡುಮನೆಯಲ್ಲಿ ಒಬ್ಬನನ್ನೇ ಮಾತನಾಡಿಸುವಷ್ಟು ಧೈರ್ಯ ಇನ್ನು ಬಂದಿರಲಿಲ್ಲ ಅಷ್ಟೇ ನನಗೆ !!!!
ರೂಮಿಗೆ ಬಂದವನು ,ಬೆಳಗಿನಿಂದ ನಾನು ಮಾಡಿರಬಹುದಾದ ತಪ್ಪುಗಳನ್ನು ಲಿಸ್ಟ್ ಮಾಡಿಕೊಂಡು, ಅಥವ ಅವನ investigationನಿಂದ ದೃಡವಾದ ಕೃತ್ಯಗಳನ್ನು ಬಯಲುಮಾಡಿ ಬೈಯ್ಯದೆ ,ಮುನಿಸಿಕೊಂಡು ಮಲಗದೇ , ನಗುನಗುತ್ತ ಮಲಗಿದರೆ ಅಲ್ಲಿಗೆ ನನ್ನ ದಾಂಪತ್ಯದ ಅದ್ಬುತ ಯಶಸಿನ ದಿನ ಅದಾಗಿ ಬಿಡುತ್ತಿತ್ತು…
ತಪ್ಪು ನಾನೇ ಮಾಡಿದರು , ಅವನೇ ಮಾಡಿದರು ಧೂಷಿಸಿಕೊಳ್ಳಬೇಕಾದವಳು ನಾನಷ್ಟೇ .. ಕಡಲೆಯನ್ನು ಬೆಟ್ಟ ಮಾಡಿ ಬಯ್ಯುವ ಹಕ್ಕು ಅವನಿಗಿತ್ತು, ಯಾಕೆಂದರೆ ನಾನು ಹೆಂಡತಿ … ಅವನ ತಪ್ಪನ್ನು ಕಂಡಿಸಿ ಹೆದರುಹಾಕಿಕೊಳ್ಳಲು ಸಾಧ್ಯವೇ, ಯಾಕೆಂದರೆ ಅವನು ಗಂಡ …!!
ಗಂಡ ಎಂದರೆ ಶ್ರೇಷ್ಠ , ಪರಿಶಿಷ್ಟ , ಮತ್ತು ಪರಿಪೂರ್ಣ !!!!!!
ಅಷ್ಟಕ್ಕೂ ಸರಿ ತಪ್ಪುಗಳ ಲೆಕ್ಕ ಯಾಕೆ, ಸಂಸಾರವೆಂದರೆ ಹೊಂದಾಣಿಕೆ, ಅನುಸರಣೆಗಳಲ್ಲವೇ ….?
ಅವನ ಅಮ್ಮ ಹೇಳುತ್ತಾರೆ ಎಲ್ಲಾದರೂ ಉಂಟೆ…? ಹೆಂಡತಿ ತಪ್ಪು ಮಾಡಿದರೆ ಶಿಕ್ಷೆ ಕೊಡುವುದು ಬೇಡವೇ …?
ಸಮಾನತೆಯ ಮಾತು ಅತ್ತಟ್ಟಿಗಿರಲಿ !!!!… ತೀರ ತೀರ ಅನ್ಯಾಯ ಅನಿಸಿ, ಉಸಿರು ಗಟ್ಟಿ , ಅವನಿಗೆ ಅರ್ಥಮಾಡಿಸಬೇಕು ಅನಿಸಿದಾಗ ಬೆಳಗ್ಗೆ ಆಫೀಸಿನಿಂದ ಫೋನ್ ನಲ್ಲಿ appointment ತೆಗೆದುಕೊಳ್ಳುತ್ತಿದ್ದೆ , ಇವತ್ತು ರಾತ್ರಿ ನಿನ್ನ ಹತ್ತಿರ ನಾನು ಮಾತಾಡಬೇಕು , ಪ್ಲೀಸ್ ಬೇಗ ರೂಮಿಗೆ ಬಾ …
ಅವತ್ತೇ ಅವನಿಗೆ 12 ಗಂಟೆವರೆಗೂ ಟೀ . ವಿ ನೋಡುವುದಿರುತ್ತಿತ್ತು , ತಡವಾಗಿ ಬಂದವನು, ನಿದ್ದೆ ಹೋಗದೆ ಎಚ್ಚೆತ್ತು ಕಾಯುತ್ತಿದ್ದವಳಿಗೆ ಬೆನ್ನು ಮಾಡಿ, ಕಂಬಳಿ ಮುಸುಕು ಹಾಕಿಕೊಂಡು ಮಲಗಿಬಿಡುತ್ತಿದ್ದ, ನಿದ್ದೆ ಹೋದನೇನೋ ಅನ್ನುವಂತೆ … ಅವಮಾನವಾಗಿ ಹೋಗುತ್ತಿತ್ತು , ಹೆಣದ ಮುಂದೆ ಬಾಯಿ ಬಡಿದುಕೊಂಡು ಗೋಳಾಡುವಂತೆ , ಹಿಡಿದು ಅಲುಗಾಡಿಸಿ ಅಲುಗಾಡಿಸಿ ಮಾತು ಆಡುತ್ತಿದ್ದೆ, ಅವನ ನಿರ್ಲಿಪ್ತತೆಯನ್ನು ನೋಡಿ ದನಿಯೂ ಏರುತ್ತಿತ್ತು , ಎಲ್ಲ ಗಂಡ ಹೆಂಡತಿಯ ಮಧ್ಯೆ ನಡೆಯುವಂತೆ ….
ಧಡ್ ಅಂದ ಎದ್ದು ಹೋಗಿ ನಡುಮನೆಯಲ್ಲಿ ಮಲಗಿಬಿಡುತ್ತಿದ್ದ .. ಹೆಂಡತಿ ನಿರ್ದಯಿಯಾಗಿ ಹೊರಗೆ ಹಾಕಿದಳೇನೋ ಅನ್ನುವಂತೆ…ಅವನಮ್ಮ ಎದ್ದು ಬರುತ್ತಿದ್ದರು,– ‘ಯಾಕೋ ಏನಾಯ್ತೋ…ಏನಾಯ್ತಮ್ಮ, ಏನು ಮಾಡಿದೆ..?’
ಅತ್ತೆ ಬಿಡುವನೇನೋ ಅನ್ನುವ ಹಾಗೆ ನನ್ನ ಮೇಲೆ ಚಾಡಿ ಹೇಳಿಬಿಡುತ್ತಿದ್ದ…
‘ಯಾಕಮ್ಮ, ನಾವೇನೊ ಕಡಿಮೆ ಮಾಡಿದಿವಿ,ಯಾಕೆ ಹೀಗೆ ಮಾಡಿದೆ’ ಅಂತೆಲ್ಲ ಸೂಕ್ತಿಗಳು ಶುರುವಾಗುತ್ತಿತ್ತು…
ಅಷ್ಟಕ್ಕೇ ನಿಲ್ಲದೆ ಎದೆಎದೆ ಬಡಿದುಕೊಂಡು ರುಡಾಲಿ ಪೋಸು ಕೊಡುತ್ತ ಇದ್ದ ಒಬ್ಬ ಮಗನಿಗೆ ನಾನೇ ಇಂತ ಅನ್ಯಾಯ ಮಾಡಿಬಿಟ್ಟೆ,ಇಂತ ಹುಡುಗಿಯನ್ನು ಮದುವೆ ಮಾಡಿಸಿ ಮಗನ ಜೀವನ ಹಾಳುಮಾಡಿಬಿಟ್ಟೆ ಅಂತ ಹಣೆ ಹಣೆ ಚಚ್ಚಿಕೊಳ್ಳಲು ಶುರುವಿಟ್ಟರೆ, ಹುಚ್ಚೆ ಹಿಡಿದುಬಿಡುತ್ತಿತ್ತು…
ಜೊತೆಗೆ -‘ಇಂತ ಹುಡುಗೀನೆ ಬೇಕು ಅಂತ ಒಪ್ಪಿದೆಯೇನೋ..? ಕೇಳಿದ್ದರೆ ಗಂಟೆಗೆ ಒಬ್ಬಳನ್ನು ಕರೆದು ನಿಲ್ಲಿಸುತ್ತಿದ್ದೆನಲ್ಲೋ…..’
ಕಣ್ಣಲ್ಲಿ ನೀರು … ಬಾಯಿಕೊಟ್ಟೆನೆಂದರೆ ಮುಗಿಯಿತು ,
–‘ನೋಡುದ್ಯೇನಮ್ಮ, ನಿನಗೆ!!!!!’ ಇವತ್ತು ಏನೇ ಆದರು ಅಂತ ಶುರುಮಾಡಿ ಇಬ್ಬರು ಸೇರಿಕೊಂಡು ನಡುರಾತ್ರಿಯಾಗಿದ್ದರು ನನ್ನ ಸಂಬಂಧಿಕರಿಗೆ ಕರೆಯಾನಿಸಿ ದೂರು ತಲುಪಿಸಿ , ನ್ಯಾಯ ಪಂಚಾಯ್ತಿಗೆ ಆಹ್ವಾನ ನೀಡುತ್ತಿದ್ದರು …..ಹಾಗೆ ಎಷ್ಟು ದಿನ ಅಳುತ್ತಲೇ ರಾತ್ರಿ ಮುಗಿಸಿದ್ದೆ !!!!
ಗಂಡ ಎಂದರೇನು , ಬೆತ್ತ ಹಿಡಿದು ಬುದ್ಧಿ ಕಲಿಸುವ ಟೀಚೆರಾ? ಶಿಕ್ಷೆ ಕೊಡುವ ಕಾನೂನ ?
ನನ್ನ ಮಾತನೆಲ್ಲ ಯಾವಾಗ ಹೇಳಿಕೊಳ್ಳಲಿ ….
ಆಫೀಸಿನಲ್ಲಿ ನಡೆದ ಘಟನೆ ಹಂಚಿಕೊಳ್ಳುವಾಗ ಅಲ್ಲಿ ಯಾವ ಹುಡುಗರ ಸುಳಿವು ಇರಬಾರದಿತ್ತು , ತವರು ಮನೆಯ ಸುದ್ಧಿಯಲ್ಲಿ ಅಲ್ಲಿನ ಬಡತನ,ವ್ಯವಹಾರ, ರಹಸ್ಯಗಳು ಇರಬಾರದಿತ್ತು , ಇನ್ನು ನನಗೆ t .v ನೋಡುವ ಅವಕಾಶ ಇರಲಿಲ್ಲವಾದ್ದರಿಂದ, ಹೊರಗಿನ ಪ್ರಪಂಚದ ಸುದ್ಧಿಗಳೇ ತಿಳಿಯುತ್ತಿರಲಿಲ್ಲ ಮಾತಾಡಲು… ಅಪ್ಪಿತಪ್ಪಿ ಏನಾದರು ಕನಸುಗಳನ್ನು ಹೇಳಿದ್ದೆನ, ಅವೆಲ್ಲ ವಾಂತಿಯಾಗಿ ಬಿಡುತ್ತಿದ್ದವು ನೆಂಟರೆದುರು ಗಳಗಳನೆ , ಗಬ್ಬು ವಾಸನೆಯೊಂದಿಗೆ …
ಗಂಡ ಹೆಂಡತಿ ಮಧ್ಯೆ ಚರ್ಚಿತವಾದ ಯಾವ ಸಂಭಾಷಣೆಗಳು ನಮ್ಮಿಬ್ಬರ ಮಧ್ಯೆ ನಿಲ್ಲುತ್ತಿರಲಿಲ್ಲ … ಕಾಲದಲ್ಲಿ ನೆಂಟರೆದುರು ಅನಾವರಣಗೊಂಡುಬಿಡುತ್ತಿತ್ತು , male version ನಲ್ಲಿ , fabricatedಆಗಿ ,ಮಸಾಲೆ ಸೇರಿಕೊಂಡು –ಏಕಾಏಕಿ ನಾನು ದುಷ್ಟಳಾಗಿ ಬಿಡುತ್ತಿದ್ದೆ ಎಲ್ಲರೆದುರು …
ಒಮ್ಮೆ ಮದುವೆಗೆ ಮುಂಚೆ ನನಗೆ ಅಪ್ಪನ ಹೆಸರಲ್ಲಿ ಅಮ್ಮನಿಗೆ ಮನೆ ಕಟ್ಟಿಸುವ ಕನಸು ಇದೆ ಅಂದಿದ್ದೆ ..ಅಷ್ಟೇ, ಮದುವೆ ಆದ ಮೇಲೆ ತವರಿಗೆ ದುಡ್ಡುಸಾಗಿಸುವ ಕಳ್ಳಿಯಾಗಿ ಬಿಟ್ಟಿದ್ದೆ, ಅವಳ ಮನೆ ಉದ್ದಾರ ಮಾಡಿಕೊಳ್ಳೋಕೆ ಮದುವೆ ಆಗಿರೋದು ಅಂದು ಬಿಟ್ಟಿದ್ದ !!!
ಇನ್ನೊಮ್ಮೆ ಕಿಚಾಯಿಸಲು ನಗುತ್ತ, ‘ನಮೂರ ಜಮೀನಲ್ಲಿ 40 ಸೈಟ್ ಇದೆ ನನಗೆ ಎಂದಿದ್ದೆ ‘,
 ಅದು ಜಂಭ, ದುರಾಂಕಾರದ ಪರಮಾವಧಿ ತಲುಪಿ –‘ಹೋಗೋ ಲೇ  ,ನಿಂದೇನು ಮಹಾ, ನನ್ನ ಹತ್ತಿರ 40 ಸೈಟ್ ಇದೆ ‘ ಎಂದಾಗಿತ್ತು
ಇನ್ನೊಮ್ಮೆ ಮಾತಾಡುತ್ತ, ‘ಇಷ್ಟೊಂದು ಬಳಗ ಕಟ್ಟಿಕೊಂಡು ಅಷ್ಟು ಚಿಕ್ಕ functionಗೆ ಹೋಗೋದ’, ಅಂದೇ..
‘ ನಮಗೆಲ್ಲ ತಿನ್ನೋಕೆಗತಿ ಇಲ್ಲ ಅಂತ, ಊಟಕ್ಕೆ ಹೋಗ್ತೀವಂತೆ’  ಎಂದಿದ್ದ ಎಲ್ಲರನ್ನು ಕೂಡಿಸಿಕೊಂಡು..
ಅಳಿಯನ ಉಪಚಾರ ಕಮ್ಮಿಯಾಯಿತು , ನಮ್ಮ ಚಿಕ್ಕಪ್ಪ, ಅವರ ಅಳಿಯನಿಗೆ ಹೇಗೆಲ್ಲ ಏರ್ಪಾಡು ಮಾಡುತ್ತಾರೆ ಎನ್ನುವಾಗ , ‘ನೀನು ಅಂತ ಮನೆ ನೋಡಿ, ಅಳಿಯ ಆಗಬೇಕಿತ್ತು’ ಅಂದೇ ..
ಅದೇ ಚಿಕ್ಕಪ್ಪನ ಎದುರು ‘ನಿನ್ನ ಮಗಳಿಗೆ ಐಬಿದೆ ,ಅದಕ್ಕೆ ನೀನು ಮನೆ ಅಳಿಯನನ್ನು ಮಾಡಿಕೊಂಡಿದೀಯ’ ಅಂದಳು ಅಂದುಬಿಟ್ಟ!!!
ಏನೇ ಹೇಳಿದರು ಅದು ಅರ್ಥಕ್ಕಿಂತ ಅಪಾರ್ಥವನ್ನೇ ಮಾಡಿಸುತ್ತಿತ್ತು, ಮತ್ತು ಮುಂದಿನ ಪಂಚಾಯ್ತಿಗೆ ಆಗಬಹುದಾಗಿದ್ದ ನೋಟ್ಸ್ ಪ್ರಿಪೇರ್ ಆಗುತ್ತಿತ್ತು …!!!
‘ಮಾತಿಗಿಂತ ಮೌನವೇ ಸಹ್ಯ ಮತ್ತು ಲಾಭಯುಕ್ತವಾಗಿತ್ತು ‘.
ಬಹುಶ ನಮಗೊಂದು  ಮಗುವಾದಮೇಲೆ , mental maturity ಬರುತ್ತದೇನೋ ಅಂದು ಕೊಳ್ಳುತ್ತಿದ್ದೆ …
ಯಾಕೆ ಬೇಕಿತ್ತು ಅವೆಲ್ಲ !
ಗಲಾಟೆ ,ರಂಪ!!!? ರಾಮಾಯಣವಿಲ್ಲದೆ ದಿನಗಳು ಹುರುಳಿದರೆ ಸಾಕು! ನೆಮ್ಮದಿಗಿಂತ ಅಮೂಲ್ಯ ವಸ್ತು ಯಾವುದಿದೆ ಜೀವನದಲ್ಲಿ ??
ಕೂತರು ನಿಂತರು ಸುಳಿವು ನೀಡದಂತೆ ಶುರುವಾಗಬಹುದಾಗಿದ್ದ ಸ್ಪೋಟನೆಗೆ ಹೆದರಿ,ಕೂರುವುದೋ ನಿಲ್ಲುವುದೊ ಸರಿಯಾಗಿ ತಿಳಿಯದೆ ವಿಲವಿಲ ಒದ್ದಾಡುತ್ತಾ, ಭಯಗ್ರಸ್ತಲಾಗುತ್ತಿದ್ದೆ…. ಭೀತಿ,ಭಯ ಆವರಿಸಿತ್ತು !
ಗೊತ್ತೇ ಆಗದಂತೆ ನನ್ನ ಮಾತುಗಳನ್ನು , ಸ್ಪೇಸ್ ಅನ್ನು ಕಸಿಯುತ್ತ ಹೋಗುತ್ತಿದ್ದ…
ರಗಳೆ ಆಗದಿರಲಿ ಅಂತ ಮಾತಾಡದೆ ತಳೆದ ಮೌನ , ಮನದ ಮೂಲೆಯಲ್ಲಿ ಒತ್ತಡವಾಗಿ ಶೇಕರವಾಗುತ್ತಿತ್ತು ! ಅಸ್ಪೋಟನೆಗೆ ಹಾತೊರೆದಂತೆ !
ಬರಬರುತ್ತ ಎಷ್ಟು ಒಂಟಿಯಾಗಿಬಿಟ್ಟೆ ….ಹೊಸ ಮನೆಯಲ್ಲಿ , ಹೊಸ ಜನರೊಡನೆ .. ಪ್ರೀತಿಸುವವರು, ನನ್ನವರು ಯಾರು ಇಲ್ಲವೇನೂ ಅನ್ನುವಂತೆ …
ಅವನನ್ನು ಪಡೆಯುವ ತವಕ..ಅವನ ಪ್ರೀತಿ ಬೇಕು ನನಗೆ ..ಅವನಿಗೆ ಬೇಜಾರಾಗದಿರಲಿ ಅಂತ accept ಮಾಡಿಕೊಳ್ಳುತ್ತ ಹೋಗುತ್ತಿದ್ದೆ, ನನ್ನೆಲ್ಲ ಗುರಿ ಅವನ ಸಂತೋಷವೇನೋ ಎನ್ನುವಂತೆ ಸದಾ ಅವನನ್ನು ಪ್ರಸನ್ನಳಾಗಿಸುವ ಹಾದಿ ಯೋಚಿಸುತ್ತಿದ್ದೆ…ಅಪ್ಪಿ ತಪ್ಪಿ ಅವನು ಕೊಂಚ ಹೊಗಳಿದರು, ಆನಂದಭಾಷ್ಪವೆ ಸುರಿದು ಹೋಗುತ್ತಿತ್ತು …
ಅಲ್ಲಿಗೆ ಅವನ ಉದ್ದೇಶ ಈಡೆರಿತ್ತು ..ನನ್ನ ಮನಸಿನ ಮೇಲೆ ಹಿಡಿತ ಸಾದಿಸಿದ್ದ , ಯಕ್ಷನಂತೆ!!!!!
ಆದರು ಅವನನ್ನು ತುಂಬಾ ಪ್ರೀತಿಸುತ್ತಿದ್ದೆ ….

ಅವನ ಈ ದಬ್ಬಾಳಿಕೆಗೆ ಕರಣ ಇಲ್ಲದಿಲ್ಲ ..
ಕಾಲ ಕಾಲಕ್ಕೆ ಕಿವಿ ಊದುತ್ತಿದ್ದರು, ಅವನನ್ನು ಎಚ್ಚರಿಸುತ್ತಿದ್ದರು —‘ ಅಕ್ಷರ ಕಲಿತ ಹೆಣ್ಣು, ವ್ಯವಹಾರ ಬಲ್ಲ ಹೆಣ್ಣು, ಅಂಕೆಯಲ್ಲಿಟ್ಟುಕೊ’ ‘ಅತ್ತೆ ಮನೆಗೆ ಜಾಸ್ತಿ ಹೋಗಬೇಡ, ನಿನಗೇನಾದರೂ ಅಲ್ಲಿ ಮರ್ಯಾದೆ ಗಳಿಸಿಕೊಟ್ಟಿದ್ದಾಳ ? ಎಲ್ಲ ವ್ಯವಹಾರಾನು ಅವಳ ಭಾವನಿಗೆ ಕೊಟ್ಟಿದ್ದಾರೆ , ನೀನೋ ಅಳಿಯ ಎಲ್ಲಿದೆ ಸಮಪಾಲು…..!!!!’
ವಿಷಪ್ರಾಶನವಾಗುತ್ತಿತ್ತು…
ಪಕ್ಕ ವ್ಯವಹಾರಸ್ತ , ಚಾಣಾಕ್ಷ್ಯ ,ಬುದ್ದಿವಂತ —ನಿನಗಿಂತ ನಾ ಚೆನ್ನಾಗಿ ತಿಳಿದವನು ,ವ್ಯವಹಾರ ಬಲ್ಲವನು ಎನ್ನುವ ಜಂಭ ,ಮೇಲರಿಮೆ ….! ಅಂತಿಮ ನಿರ್ಧಾರ ಏನೇ ಇದ್ದರು , ಸಾಮರಸ್ಯ ಕಾದುಕೊಳ್ಳಲಾದರು ನನ್ನೊಂದಿಗೆ ಚರ್ಚಿಸಬಹುದಿತ್ತು…. ಅವನ ಪ್ರಕಾರ ನಾನು ವ್ಯವಹಾರದಲ್ಲಿ ದಡ್ಡಿ .. ಅದು ಸರಿ ಎಂದು ಸುಮ್ಮನಾಗಿದ್ದೆ .ಎಲ್ಲ ನಿರ್ಧಾರವನ್ನು ಅವನಿಗೆ ಬಿಟ್ಟುಬಿಟ್ಟಿದ್ದೆ.

ಬಹುಶ ಹೆಣ್ಣುಮಕ್ಕಳು ಅಂಕೆಯಲ್ಲಿದ್ದರೆ ಎಲ್ಲಾ ಸಲೀಸಾಗಿ ಕುದುರಿಸಿಕೊಳ್ಳಬಹುದು ಎನ್ನುವುದು ತರ್ಕವಾಗಿತ್ತು.ಅಂಕೆಗೆ ತಂದುಕೊಳ್ಳಲು ಹಲವಾರು ಸೂತ್ರಗಳಿದ್ದವು ಅಲ್ಲಿ .
ನಿರಂತರ ಸಂಘರ್ಷದಲ್ಲಿರುವಂತೆ ಸದಾ ರಣೋತ್ಸಾಹಿಯಾಗಿರುತ್ತಿದ್ದ .ಕಲಹಕ್ಕೊಂದು ಕಾರಣವನ್ನು ಹುಡುಕುವುದರಲ್ಲೇ ಉತ್ಸುಕನಾಗಿರುತ್ತಿದ್ದ.ಆಗಾಗ ಕಿತಾಪತಿ ಮಾಡುವುದು ,ಮುನಿಯುವುದು ,ಮುಖತಿರುಗಿಸುವುದು ಕರಗತ ಮಾಡಿಕೊಂಡಿದ್ದ.ನಾನು ವಂಚಿಸಲ್ಪಡುತ್ತಿದ್ದೇನೆ ಎನ್ನುವ ಅಸಹನೆಯಲ್ಲಿ ಭೀಕರವಾಗಿ ಸ್ಪೊಟಿಸುತ್ತ ,ಎಲ್ಲಾ ತಪು ನಡವಳಿಕೆಗಳನ್ನು ‘ವಂಚಿಸಲ್ಪಟ್ಟಿದ್ದೇನೆ’ ಎನ್ನುವ ನೆಪವನ್ನು ಮುಂದಿಟ್ಟುಕೊಂಡು ಮುಚ್ಚಿ ಹಾಕಿ ಸಮರ್ಥಿಸುತ್ತಿದ್ದ .ಆನಂತರ ಗಾಯವನ್ನು ಮುಚ್ಚಿ ಕೊಳ್ಳಲು ,ತಪ್ಪಿಗೆ ತೇಪೆ ಹಾಕಲು ಮೇಲರಿಮೆಯನ್ನು ಬೆಳೆಸಿಕೊಂಡಿದ್ದ .ನಾನೇ ಸರಿ ಎನ್ನುವ ಧಾರ್ಷ್ಯ ತೋರಿಸಿಕೊಂಡು ,ತಮ್ಮವರನ್ನು ಬಿಟ್ಟು ಉಳಿದವರ್ಯಾರು ಸರಿ ಇಲ್ಲ ಎಂದು ದೂರುತ್ತಾ ಗೊಣಗುತ್ತ ಘಮಂಡಿತನವನ್ನು ಪ್ರದರ್ಶಿಸುತ್ತಿದ್ದ.
ನನ್ನ ಮೇಲೆ ತಪ್ಪುಗಳ ಹೊರೆಹೊರಿಸಿ ,ಕಡೆಗಣಿಸಿ ,ಕೀಳಾಗಿ ನಡೆದುಕೊಂಡು ,ಅಸ್ತಿತ್ವವೇ ಇಲ್ಲವೇನೋ ,ಮೂರು ಕಾಸಿಗೆ ಬೆಲೆ ಇಲ್ಲವೇನೋ ಅನ್ನುವಂತೆ ಒರಟಾಗಿ ಬೈಯುತ್ತ ನಡೆಸಿಕೊಳ್ಳುತ್ತಿದ್ದ…
ಎಷ್ಟು ಸುಲಭವಿತ್ತು ಅವನಿಗೆ ನನ್ನ ಮನಸನ್ನು ಘಾಸಿಗೊಳಿಸುವುದು , ಜೀವನ ಪ್ರೀತಿಯನ್ನು ಕಸಿದುಕೊಳ್ಳುವುದು , ಮನಸನ್ನು ಹೊಸಕಿ ಹಾಕಿ ಮುದುಡಿಸುವುದು…
ನೀನೆ ಎಲ್ಲದಕ್ಕೂ ಕಾರಣ, ನೀನೆ ಅರ್ಥ ಮಾಡಿಕೊಂಡು , ನೀನೆ ಹೊಂದಿಕೊಂಡು ಹೋಗಬೇಕೆನ್ನುವ ಹೊರೆ, ವ್ಯಂಗ್ಯ !!!
ರಂಪಗಳಿಗೆ ಹೆದರಿ ಸುಮ್ಮನಿದ್ದು ಬಿಡಬೇಕು ಅಥವಾ ಅವನ್ನನ್ನು ಸಂತೋಷ ಪಡೆಸುವ ಸಲುವಾಗಿ ಕೇಳುವುದ ಮೊದಲೇ ಅವನಿಗೆ ಸೌಕರ್ಯಗಳನ್ನೂ ಒದಗಿಸಿ ಬಿಡಬೇಕಿತ್ತು …..

ಅವನಿಗೊಂದಿಷ್ಟು ಹೇಳುವುದಿತ್ತು, ವ್ಯಕ್ತಿಗತ ಸಂಬಂಧಗಳಲ್ಲಿ ಪರಸ್ಪರರನ್ನು ಹಗುರವಾಗಿ ಪರಿಗಣಿಸುವುದರಿಂದ ಮತ್ತು ಒಬ್ಬರೊಬ್ಬರ ಸ್ವತ್ತು ಎಂದು ಕೊಳ್ಳುವುದರಿಂದ ಘರ್ಷಣೆಗಳು ನಡೆಯುತ್ತವೆ .ಸ್ವಲ್ಪವಾದರೂ ಸ್ಪೇಸ್ ಕೊಡಬೇಕು , ಎಲ್ಲವನು ಅನುಮತಿ ಪಡೆದುಮಾಡಬೇಕು, ತನಗೆ ತಿಳಿಸಿಯೇ ಮಾಡಬೇಕು ಎನ್ನುವ ಅತಿ curiosity ಹಕ್ಕು ಎನ್ನುವ ಹೆಸರಲ್ಲಿ ಚಲಾವಣೆಯಾದಾಗ ಕ್ರೌರ್ಯ ತಲೆದೋರುತ್ತವೆ.ತೀರ ಚಿಕ್ಕಪುಟ್ಟ ಅಸಮ್ಮತಿಗಳು ಅಸಹ್ಯವೆನಿಸುವ ಮಟ್ಟದ ವಾದ-ವಿವಾದಕ್ಕೆ ಕಾರಣವಾಗಿಬಿಡುತ್ತದೆ .ಹೃದಯಗಳು ಯುದ್ಧಕ್ಕೆ ನಿಲ್ಲುತ್ತವೆ .
ಸಂಗಾತಿಯನ್ನು ಅರಿಯಲು ಬಯಸದೆ , ತಾಳ್ಮೆಯನ್ನು ಇಟ್ಟುಕೊಳ್ಳದೆ ಒಂದು ವಸ್ತುವಿನಂತೆ ನೋಡುವುದು ಹಿಂಸೆಯಾಗುತ್ತದೆ …ಪರಸ್ಪರ ಸಹಾನುಬೂತಿ ಇಲ್ಲದೆ ,ಅನುಕಂಪ ಇಲ್ಲದೆ ಶಿಕ್ಷಿಸಲು ಮುಂದಾದರೆ, ಪ್ರೀತಿ ಜಾಗದಲ್ಲಿ ಭೀತಿ ಮೂಡುತ್ತದೆ .ಪರಿಹಾರಕ್ಕಾಗಿ ಪ್ರಯತ್ನಿಸಿದರೆ ಎಲ್ಲವು ತಿಳಿಯಾಗಿಬಿಡುತ್ತದೆ …………

ಸಮಸ್ಯೆ ಕೇವಲ ಅವನ ದೃಷ್ಟಿ, ನಡವಳಿಕೆಯನ್ನಷ್ಟೇ ಆಕ್ರಮಿಸಿರಲಿಲ್ಲ …
ಹೊಂದಾಣಿಕೆಯ ಸಮಸ್ಯೆ ಅಷ್ಟೇ ಆಗಿದ್ದಿದರೆ ಪೋಲಿಸ್ ವರೆಗೂ ಹೋಗುವ ಅಗತ್ಯವಿರುತ್ತಿರಲಿಲ್ಲ .. ಎಷ್ಟು ಸಂಸಾರಗಳು ಸಾಮರಸ್ಯ ಇಲ್ಲದೆ, ತೂಗಿಸುವ ಸಲುವಾಗಿ ಬದುಕುಳಿದಿಲ್ಲ… ಅವನೇನೇ ಆಗಿದ್ದರು ಸಾವರಿಸಿಕೊಂಡು ಹಾಗು ಹೀಗೂ ಮಾಡಿ ನಡೆಸಿಕೊಂಡು ಹೋಗುತ್ತಿದ್ದೆ … ಹೆತ್ತವರಿಗೆ ಹೆಗ್ಗಣ ಮುದ್ದು ಎನ್ನುವಂತೆ, ಕಟ್ಟಿಕೊಂಡವರಿಗೆ ಮನಸನ್ನು ಎಷ್ಟೇ ಘಾಸಿಗೊಳಿಸಿದರು ಗಂಡ ಮುದ್ದು !ಬಹುಬೇಗ ರಾಜಿಗೆ ಸಿದ್ದವಾಗಿ ಬಿಡುತ್ತದೆ ಸಂಗಾತಿ ಮನಸು  … ಹೆಂಡತಿಯಲ್ಲಿ ತಾಯ್ತನ ಮೂಡಿ ಹಟಮಾರಿ, ರಚ್ಚೆ ಮಗುವನ್ನು ಬಿಟ್ಟುಕೊಡಲಾಗದ ಬಂಧನವೇರ್ಪಟ್ಟು ಬಿಡುತ್ತದೆ ಗಂಡನಲ್ಲಿ  …. ಏನೇ ಅಂದರು ಪರಿತಪ್ತ ಹೃದಯ ಮೆತ್ತಗಾಗಿ ಬಿಡುತ್ತದೆ , ಕ್ಷಮಿಸಿ ಬಿಡುತ್ತದೆ!!!
 
———————————————————————————————————————————————-
ಮತ್ತೆ ನಿಜ ಸಮಸ್ಯೆ  ಏನು– ಸಾಮೂಹಿಕ ಅತ್ಯಾಚಾರ , emotional  rape  !!!!
ಅವನಿಗೆ ಯಾವೊಂದು ಸಣ್ಣ ಬಿನ್ನಾಭಿಪ್ರಾಯವನ್ನು ತಾನೊಬ್ಬನೇ handle ಮಾಡಿಕೊಳ್ಳುವಷ್ಟು ಸಾಮರ್ಥ್ಯವಿರಲಿಲ್ಲ…. ಅಷ್ಟು ಸೋಮಾರಿತನ ಅನ್ನುವುದಕ್ಕಿಂತ  , ದರ್ಪ!
ಅಮ್ಮ, ಅಕ್ಕನಿಗೆ ಒಪ್ಪಿಸಿಬಿಟ್ಟರೆ  ಅವರು ಹ್ಯಾಂಡಲ್ ಮಾಡಿಕೊಳ್ಳುತ್ತಾರೆ ….ನಾಲ್ಕು ಜನರೆದುರು ಮಾನ ತೆಗೆದರೇನೆ ಬುದ್ಧಿಬರುವುದು !!
ಹೆಂಡತಿ ತನ್ನ  ಹಿಡಿತಕ್ಕೆ ಸಿಕ್ಕಿ  ,ಅಂಕುಶಕ್ಕೊಳಪಡಬೇಕೆಂದರೆ , ಅವಳಿಗೆ ತಾನು ಕೀಳು ಎನಿಸಬೇಕು,… ಆ ಕೀಳರಿಮೆಯನ್ನು ಮನಸಲ್ಲಿ ಮೂಡಿಸಲು ತಾನು ಪತಿತೆ, ತಪ್ಪು ಮಾಡಿದ್ದೇನೆ ಎನಿಸುವಂತೆ ಮಾಡಬೇಕು .. ಜನರ ಬಾಯಿಂದ ಆ ರೀತಿ ಬರೆಸಿ ಧೃತಿಗೆಡಿಸಿದರೆ , ಅವಮಾನದ ಭಯಕ್ಕಾದರು ಬಗ್ಗುತ್ತಾಳೆ …
ಅತೀ  ಸಣ್ಣದಕ್ಕೂ ಲಾವರಸ ಉಗುಳುವಂತೆ ವಾಚಾಮಗೊಚಾರ ಬೈದು , ಕೈಗೆ ಸಿಕ್ಕಿದನ್ನು ದ್ವಂಸ ಮಾಡಿ  ,ತಪ ತಪ ಬಾಗಿಲು ಕಿಟಕಿಗಳನ್ನೂ ಬಡಿದಾಕಿ –ವ್ಯಗ್ರನಾಗಿ ಬಿಡುತ್ತಿದ್ದ .ಅವನಮ್ಮನನ್ನ್ನು    ಸೇರಿಸಿಕೊಳ್ಳುತ್ತಿದ್ದ….ಬಹುತೇಕ ಸಮಯ ಕರೆಯುವ ಮುನ್ನವೇ , ಅವರಾಗೆ ತಲೆತೂರಿಸಿಕೊಂಡು ಬಂದೇ ಬರುತ್ತಿದ್ದರು ..
ಹೆಂಡತಿ ಎನ್ನುವ ಒಂದು ಸಣ್ಣ ಎಳೆಯ ದಾಕ್ಷಿನ್ಯವು  ಇಲ್ಲದಂತೆ ನನ್ನನ್ನು ಪತಿತೆ ಮಾಡಿ ಬಿಡುತ್ತಿದ್ದ… ಕೆಲವೊಮ್ಮೆ ಮನೆಬಿಟ್ಟು ಹೋಗುವುದಾಗಿ, ನೇಣು ಹಾಕಿಕೊಂಡು ಸತ್ತುಹೋಗುವುದಾಗಿ  ಹೆದರಿಸುತ್ತಿದ್ದ… ಎಲ್ಲವು ಎಲ್ಲರೆದುರು ನಡೆಯಬೇಕಿತ್ತು.. ಹೆಂಡತಿಯನ್ನು ನಿಭಾಯಿಸುವುದು ಬೇಕೇ ಇರಲಿಲ್ಲ ಅವನಿಗೆ…ಗಂಡ ಹೆಂಡತಿಯ ಮಧ್ಯೆ ಮುಚ್ಚುಮೊರೆ ಬೇಕಿರಲಿಲ್ಲ…ಎಲ್ಲವು  ಖುಲ್ಲಂ ಖುಲ್ಲ! opensource  ನಂತೆ , ಯಾರು ಬೇಕಾದರೂ ನೋಡಿಕೊಳ್ಳಬಹುದು, ಯಾರು ಬೇಕಾದರೂ ಬರಬಹುದು .
ನಂತರ ನನ್ನ ಅನಿಸಿಕೆಯನ್ನು ಗಣನೆಗೆ ತೆಗೆದುಕೊಳ್ಳದೆ , ನನ್ನ ನಾದಿನಿಯನ್ನು ಬರಹೇಳುತ್ತಿದ್ದರು… ಅವಳೆದುರಿಗೆ ದೂರು , ಚಾಡಿ ಹರಡಿಕೊಳ್ಳುತ್ತಿದ್ದವು… ಎಷ್ಟು ಅವಮಾನ ಆಗುತ್ತಿತ್ತು !!
 ಅವಳೋ ಮಾತಿನಲ್ಲೇ ಕಾಗೆಯನ್ನು ನಾಯಿ ಮಾಡಬಲ್ಲಳು , ನಾಯಿಯನ್ನು ಹಾವು ಮಾಡಬಲ್ಲಳು !!! ನನ್ನಿಂದಲೇ  ತಪ್ಪಾಗಿದೆ  ಎನ್ನುಂತೆ ತರ್ಕ ಮಾಡಿಬಿಡುತ್ತಿದ್ದಳು.
ಅಸಲಿಗೆ ಇವನ ಈ ವಿಚಿತ್ರ ವರ್ತನೆಗಳಿಗೆ ನಾನು ದೊಡ್ಡವರನ್ನು ಸೇರಿಸಿ ಬುದ್ದಿ ಹೇಳಿಸಬೇಕಿತ್ತು.. ಆದರೆ ಗಂಡನಿಗೆ ಹಾಗೆಲ್ಲ ಅವಮಾನ  ಮಾಡೋಕೆ ಆಗೋದಿಲ್ಲ, ಆತ್ಮಗೌರವಕ್ಕೆ ಪೆಟ್ಟಾಗುತ್ತದೆ  ಅವನಾಗೇ ಅರ್ಥ ಮಾಡಿಕೊಳ್ಳಬೇಕು, ಅಲ್ಲಿನವರೆಗೂ ಕಾಯುತ್ತೇನೆ ಎನ್ನುವಷ್ಟು ಸೂಕ್ಷ್ಮವಾಗಿ ಯೋಚಿಸುತ್ತಿದ್ದೆ…..ಆದರೆ ಅವನಿಗೆ ಮುಲಾಜೆ ಇರಲಿಲ್ಲ… ಕರುಣೆಯೂ  ….

ನಂತರ  ಮೂರು ಜನ ಸೇರಿಕೊಂಡು ನಮ್ಮ ಅಕ್ಕ ಭಾವ, ಚಿಕ್ಕಪ್ಪ, ಎಲ್ಲರನ್ನು ಕರೆಯುತ್ತಿದ್ದರು …. ನಾನು ಎಷ್ಟೇ ಬೇಡವೆಂದರೂ  ಮೂರು ಜನಕ್ಕೆ ಯಾವ ತಡೆಯೂ ಇರುತ್ತಿರಲ್ಲಿಲ್ಲ  …

ಬಂದವರೆದುರು ಅವರು ಮೂರು ಜನ, ನಾನು ಒಬ್ಬಳು…ಏನೇನೋ ವಾಗ್ವಾದ, ಚಾಡಿ, ರುಜುವಾತು!! .. ನನ್ನದು ದಯನೀಯ  ಪರಿಸ್ತಿತಿ  ನನ್ನನ್ನು ನಾನು ವಹಿಸಿಕೊಂಡು ಸರಿ ಎಂದು ನಿರೂಪಣೆ ಮಾಡಬೇಕಿತ್ತು…

 ಈ ರೀತಿ ಕೆಸರೆರೆಚಾಟದಿಂದ ಏನು ಪ್ರಯೋಜನ… ಏನು ಫಲಿತಾಂಶ ನನಗಂತೂ ಅರ್ಥವಾಗುತ್ತಿರಲಿಲ್ಲ ….
 
ಅವಮಾನ ಮಾಡಿ , ಭಾವನಾತ್ಮಕವಾಗಿ ಇಲ್ಲವಾಗಿಸೋದು, ಮುಗಿಸುವುದು … ಹರ್ಟ್ ಆಗುವಂತ ಸೂಕ್ಷ್ಮ ವಿಷಯಗಳಿಗೆ ವಿಪರೀತ ಹರ್ಟ್ ಮಾಡುವುದು…!ಸ್ವಂತ ಗಂಡನೇ ಬಟ್ಟೆ ಕಳಚಿ ಎಲ್ಲರೆದುರು ನಿಲ್ಲಿಸಿದಂತ ಅನುಭವ….
ಶತ್ರುವಿನ  ತರಹ ದೂರುತ್ತಿದ್ದ.. ಎಂತ ಕಟ್ಟೊರತೆಯಿರುತ್ತಿತ್ತು !…ಚಾಡಿ ಹೇಳುವಾಗ ಒಂದಿನಿತಾದರೂ ಹೆಂಡತಿ ಎನ್ನುವ ಭಾವನೆ ಇರುತ್ತಿರಲಿಲ್ಲವ? ನನನ್ನು ಅತಿಯಾಗಿ ಘಾಸಿಗೊಳಿಸುತ್ತಿದ್ದದ್ದೆ ಅದು  !!…
ಸಂಬಂಧಗಳು guarantee card ಗಳೊಂದಿಗೆ  ಬರುವುದಿಲ್ಲ.ನಂಬಿಕೆ ವಿಶ್ವಾಸಗಳನ್ನು ಇಡದೆ, ಗಳಿಸಿಕೊಳ್ಳದೆ ನೆಮ್ಮದಿಯಿಂದ ಅರೆ ಕ್ಷಣವೂ ಬದುಕಲು ಸಾಧ್ಯವಿಲ್ಲ ..
ತನ್ನ ಸ್ವತ್ತು ಎನ್ನುವಷ್ಟು possessiveness  ಇದ್ದವ, ಏರುಪೇರುಗಳನ್ನೂ ಸ್ವತ್ತು ಎಂದು ಪರಿಗಣಿಸುತ್ತಿರಲಿಲ್ಲವೇಕೆ ? 
 
ಸಾವಿರ ಬಾರಿ ಹೇಳಿದ್ದೆ- ನನ್ನದ್ದು, ನಿನ್ನದು  ಏನೇ ವ್ಯಾಜ್ಯ ಕಡತಗಳಿದ್ದರು ದಯವಿಟ್ಟು ನಾಲ್ಕು ಗೋಡೆಗಳ ಮದ್ಯದಲ್ಲಿ ಇಟ್ಟುಕೋ .ತೃಷೆ ತೀರದಿದ್ದರೆ ಒಡಿ, ಬಡಿ, ಆಡು ,ಅನ್ನು ಎಷ್ಟೇ ಆದರು  ನಾನು ನೀನು ಗಂಡ-ಹೆಂಡತಿ !!ಇನ್ನೊಬ್ಬರ ಎದುರು ದೂರು ಒಯ್ಯಬೇಡ …ನಿನ್ನ ಪ್ರಶ್ನೆಗಳೇನು , ನಿನ್ನ ದುಗುಡ,ದುಮ್ಮಾನ,ಅನುಮಾನಗಳೇನು  ಮನಸ್ಸು ಬಿಚ್ಚಿಮಾತನಾಡು..ಬಗೆಹರಿಸಲು ಶಕ್ತಿಮೀರಿ ಪ್ರಯತ್ನಪಡುತ್ತೇನೆ …. ..
ಹಾಗೆ ಎಂದಿಗೂ  ನಾನು ಮಾಡಲಾಗದಿದ್ದ   ನಿವೇದನೆಗಳಿದ್ದವು— ಹೆಂಡತಿಗೂ ಮಾತನಾಡಲು ಅವಕಾಶ ನೀಡು..ಬರಿ ಜೇನುಸುರಿದಂತೆ, ಹೂ ಅರಳಿದಂತೆ , ಮಳೆಹೂಯ್ವಂತೆ ಮಾತಾಡುತ್ತ ನಿನ್ನನ್ನು ಖುಷಿ ಪಡಿಸಬೇಕು ಎನ್ನಬೇಡ. ನಾನು ಮನುಷ್ಯಳು …ನೀ ನೀಡುವ ರೋದನೆಗಳಿಗೆ  ಮನಸ್ಸು ರೋದಿಸುತ್ತದೆ .ಹೇಳಿಕೊಳ್ಳಬೇಕು , ನಿಲ್ಲಿಸು ಎನ್ನಬೇಕು …ಸ್ವಲ್ಪ ಸ್ವಾತಂತ್ರ್ಯನೀಡು , ಚಿಟ್ಟೆಯಂತ ಮನಸ್ಸು, ಹಿಸುಕಿದರೆ ಹಸುನೀಗಿ ಬಿಡುತ್ತದೆ …..!
ಪ್ರೀತಿ ಸ್ನೇಹ ಎನ್ನುವುದು ಎಂತಹ ಗಟ್ಟಿ ಹೃದಯವನ್ನು ಮೆದುಗೊಳಿಸುತ್ತದೆ,ಸಂಗಾತಿಗಳ ಮಧ್ಯೆ ಇರಬೇಕಾದ್ದದ್ದೆ ಅದು !ಪ್ರೀತಿ ಹುಟ್ಟಲು ಬಿಡಬೇಕು, ಬೆಳೆಯಲು ಬಿಡಬೇಕು ,ಅರಳಲು ಸಹಕರಿಸಬೇಕು ..ಕಡೇಪಕ್ಷ ಚಿವುಟಬಾರದು.ಏನನ್ನು ಮಾಡದೆ ತಾಳ್ಮೆಯಿಂದ ಸುಮ್ಮನಿದ್ದು ಬಿಟ್ಟರು ಕಾಲಾಯ ತಸ್ಮಯ್ ನಮಃ ಎನ್ನುವಂತೆ ಸಮಯ ಎಲ್ಲವನ್ನು ಸೃಷ್ಟಿಸುತ್ತದೆ !! ಯಾಕಷ್ಟು ಬಳಸುದಾರಿ? ಪ್ರೀತಿಯಿಂದೊಮ್ಮೆ  ಮಾತಾಡಿಸಿ, ಬೆಚ್ಚ್ಚಗಾಗಿಸು, ನಿನ್ನ ಪಾದಗಳ ಮೇಲೆ ಬೆಚ್ಚಗೆ ಮಲಗಿಬಿಡುತ್ತೇನೆ  … ನನ್ನದೆಲ್ಲ ನಿನ್ನದೇ ಎಂದಾದ ಮೇಲೆ, sense of control  ಯಾಕೆಬೇಕು? … ಹೆದರಿಸಿ ಬೆದರಿಸಿ ಯಜಮಾನನಾಗುವುದರಲ್ಲಿ ಯಾವ ಪುರುಷಾರ್ಥವೂ ಇಲ್ಲ !! ಮನಸು ನರಳಬಾರದು, ಅರಳಬೇಕು ..

ಎಲ್ಲವೂ ನನ್ನ ಹುಚ್ಚು ಭಾವುಕತೆಯ ಪ್ರಲಾಪನೆಗಳು ಎನ್ನುವಂತೆ ಅವನ ಹತ್ತಿರ ಇವೆಲ್ಲವೂ ಅರ್ಥಹೀನ  !!!
ಅವನಿಗೆ ಅರ್ಥವಾಗುವುದೆಲ್ಲ ಒಂದೇ, ನಾಲ್ಕು ಜನರೆದುರು ಮಾನಹರಾಜು ಕೂಗಿದರೆ ಅಂಕುಶ ನಿರ್ಮಾಣವಾಗಿಬಿಡುತ್ತದೆ…ಅವನ ಮನಸಿನ ವಿಷರಾಚುತ್ತಿದ್ದದೆ ನ್ಯಾಯ ಪಂಚಾಯ್ತಿಗಳಲ್ಲಿ!  

 
 
ಮದುವೆ ಮಾಡಿಕೊಟ್ಟವರಿಗೆ, ಹೆಣ್ಣುಮಗಳನ್ನು ಬಾಳಿಸಲು, ಕರೆದಾಗ ಬರಲು ಆಗದ್ದಿದ್ದರೆ , ಯಾಕೆ ಬಂದರು ಮುಂದೆ … ದಬ್ಬಾಳಿಕೆ ಬೇರೆ!
ಅಪ್ಪ ಇಲ್ಲದ ಹುಡುಗಿಯ ಮದುವೆ ನೆಂಟರ ದಾಕ್ಷಿಣ್ಯದಲ್ಲಿ ನೆರವೇರಿದ್ದಾಗಿತ್ತು!!! ಈಗ ಸಂಸಾರ ನಡೆಸಲು ಅವರು ತಲೆ ಕೊಡಬೇಕ್ಕಿತ್ತು !!!

ನ್ಯಾಯ ಪಂಚಾಯ್ತಿಯೂ ನಡೆದೇ ಹೋಗುತ್ತಿತ್ತು, ಯಾರು ಬಂದರು ಬರದೆ ಹೋದರು! …

ಅವನಕ್ಕನಿಗೆ ಹೇಳುತ್ತಿದ್ದೆ –ನೀನು ಮಧ್ಯೆಬರುವ ಅಗತ್ಯವಿಲ್ಲಾ  !
   —‘ಮದುವೆಗೆ ಓಡಾಡಿದ್ದು ನಾನು, ನನಗೆ ಹಕ್ಕಿದೆ ! ‘
ಹೋಗಲಿ ಅವನಿಗೆ ಬುದ್ಧಿ ಹೇಳು ..
  —‘ನನ್ನ ತಮ್ಮ ಗಂಡಸು ,ಅವನಿಗೆ ಬುದ್ದಿ ಹೇಳೋಕೆ ನನ್ನಿಂದ ಸಾಧ್ಯವಿಲ್ಲ ….
ಮತ್ತೆ ಯಾಕೆ ಬರಬೇಕು
 –‘ಬುದ್ದಿ ಹೇಳೋಕೆ  .ಕೆಟ್ಟು ತವರು ಮನೆ ಸೇರಿ ಹೆಣ್ಣು ಮಕ್ಕಳು ತಂದೆ ತಾಯಿಗೆ ಕೆಟ್ಟ ಹೆಸರು ತರಬಾರದು .ಬಯ್ಯುತ್ತಾನ ಸುಮ್ಮನೆ ಬಯ್ಯಿಸಿಕೊಂಡುಬಿಡು.ಅನುಮಾನ ಪಡುತ್ತಾನ , ಸಹಿಸಿಕೋ … ನಾನು ಹೇಳುವುದು ಒಂದೇ ,ಗಂಡ ಏನೇ ನಿರೀಕ್ಷಿದರು ಈಡೇರಿಸಿಬಿಡು  .ಗಂಡನನ್ನು ಅರ್ಥಮಾಡಿಕೊಂಡು ತೃಪ್ತಿ ಪಡಿಸಿದರೆ ಮಾತ್ರ ಮದುವೆ ನಿನ್ನನ್ನು ಬದುಕಿಸುತ್ತದೆ’
ಸಹಿಸಿಕೊಳ್ಳದೆ ಮತ್ತೇನು  ಮಾಡುತ್ತಿದ್ದೀನೆ, ಯಾರಿಗಾದರು ಹೇಳಿಕಳಿಸಿ ,ದೂರು ಕೊಟ್ಟು , ಧಮಕಿ ಹಾಕಿಸಿದೆನ?
ಈಡೇರಿಸುವುದಕ್ಕೆ, ಕೊಡುವುದಕ್ಕೆ ಏನು ಬಾಕಿ ಇದೆ, ಎಲ್ಲ ಕೊಟ್ಟಿದ್ದೀನಲ್ಲ…..!!!
–‘ಏನೇ ಆದರು ಅವನು ಬಗ್ಗುವುದಿಲ್ಲ ,ಸೋಲ್ಲೋಪ್ಪುವುದಿಲ್ಲ,ತನ್ನದು ತಪ್ಪು ಅಂತ ಒಪ್ಪುವುದಿಲ್ಲ …ಮಹಾ ಗರ್ವಿಷ್ಟ ಅವನು….ಅವನು ಇರುವುದೇ ಹಾಗೆ …ನಾವೇನು ಮಾಡಲು ಆಗುವುದಿಲ್ಲಾ …!!!’
ನೀವೇನಾದರೂ ಮಾಡಿ ಅಂತ ನಿಮ್ಮ ಬಳಿ ನಾನು ಬಂದು ಕೇಳಿಕೊಂಡಿಲ್ಲವಲ್ಲ  ?
ನಾನು ಅದೇ ಹೇಳುತ್ತಿರುವುದು ,ಗಂಡ  ಹೆಂಡತಿ ಮದ್ಯೆ ತಾನಾಗೆ ಎಲ್ಲ ಸರಿಹೋಗಲು  ಬಿಟ್ಟು ಬಿಡಿ.. ನಾ ಅತ್ತರು, ಮುನಿಸಿಕೊಂಡರು ,ಕೊಪಿಸಿಕೊಂಡರು ಅವನೇ ಹ್ಯಾಂಡಲ್ ಮಾಡಬೇಕು …
ಸುಖ ಪಡೆಯುವುದಕ್ಕೆ ಅವನು , ಜಗಳ ತೆಗೆಯುವುದಕ್ಕೆ  ಅವನು, ಬಂದು ಜಗಳ ಶಮನಗೊಳಿಸಿ ಇವನ ಸಂಸಾರದ ತಂತಿ ಬಿಗಿ ಮಾಡಿಕೊಟ್ಟು ಹೋಗೋಕೆ ನನ್ನ ನೆಂಟರು , ನೀವು ಎಲ್ಲ ಯಾಕೆ ಬರಬೇಕು…ತಾಳಿ ಕಟ್ಟಿದ ಮೇಲೆ ಸರಿಯೋ,  ಬೆಸಯೋ ಅವನ ಹೊಣೆ ಅದು …ಹೀಗೆಲ್ಲ ಬಂದು  ಪರವಹಿಸಬೇಡಿ…
–‘ಇಲ್ಲ ಅವನು ನನ್ನ ತಮ್ಮ, ಕರೆದಾಗ ಬರದೆ ಇರಲಾಗುವುದಿಲ್ಲ … ಏನೇ ಆದರು ಅವನ್ನನ್ನು ನಾನು ಬಿಟ್ಟು ಕೊಡುವುದಿಲ್ಲ ‘
ಸರಿ , ಅವನನ್ನನ್ನು ಬಿಟ್ಟುಕೊಡದ್ದಿದ್ದರೆ ಚಿಂತೆ ಇಲ್ಲ, ಆದರೆ ಅವನನ್ನನು ಎತ್ತಲು ಹೋಗಿ , ನನ್ನನ್ನು ಯಾಕೆ ತುಳಿಯುತ್ತೀರ.. ನನ್ನ ಖಾಸಗಿ ವಿಷಯವನ್ನು ಬಹಿರಂಗವಾಗಿ  ಮಾತಾಡಲು ನಿಮಗೆ ಅನುಮತಿ ಇಲ್ಲ …ಪ್ರವೇಶ  ನಿಷೇದಿಸಿದೆ!!!
ಅಷ್ಟೆಲ್ಲ ಕಟ್ಟುಕೊಂಡು ಅವಳಿಗೆ ಏನು ಆಗಬೇಕಿರಲಿಲ್ಲ… ತಮ್ಮನ ಮನಸಿನ ಪ್ರಕಾರ ನಡೆದು, ಅವನಿಗೆ ಇಂಬು ಕೊಟ್ಟು, ಗೆಲ್ಲಿಸುವುದು ಮತ್ತು ಸಹಾಯ ಮಾಡಿದ ಹಾಗೆಮಾಡಿ , ಅವನಿಂದ ಆಗಬೇಕಿದ್ದ ಸಹಾಯ ಪಡೆಯುವುದು ಅಷ್ಟೇ ಅವಳಿಗೆ ಬೇಕಿದ್ದಿದ್ದು ..ನನ್ನ ಸುಖ, ಸಂಸಾರ,ನೆಮ್ಮದಿ ಅವಳಿಗೆ ಮುಖ್ಯ ಆಗಿರಲಿಲ್ಲ …

ಆದರೆ ಮಾತು ಕಲಿತ್ತಿದ್ದಳು …ಬಹಳ ಚೆನ್ನಾಗಿ !!!
ಎಲ್ಲ ಸೇರಿದ್ದಾಗ ಅಳಲು ಶುರು ಮಾಡಿಬಿಡುತ್ತಿದ್ದಳು —‘ ನಮ್ಮಮ್ಮ ಮನೆ ಮನೆ ಅಂತ ಸಾಯುತ್ತಾರೆ..ಸೊಸೆ ಅಂತ ಎಲ್ಲ ಮಾಡಿಕೊಡುತ್ತಾರೆ …ಎಲ್ಲಾ ಇದ್ದು ಸಂಸಾರ ಮಾಡದೇ ಹೀಗೆಲ್ಲ ಮಾಡುತ್ತಾಳೆ…ಇವಳಮ್ಮ ಸರಿ ಇಲ್ಲ, ಹಣ್ಣುಮಗಳಿಗೆ ಸಂಸಾರ ಮಾಡು ಎಂದು ಬುದ್ದಿ ಹೇಳುವುದಬಿಟ್ಟು, ಪರವಹಿಸುತ್ತಾರೆ…ಅವನು ಹೆಂಡತಿಯನ್ನು ಎಷ್ಟೆಲ್ಲಾ ಪ್ರೀತಿಸುತ್ತಾನೆ ……ನಾವೆಲ್ಲಾ ಪೂಜೆ ದೇವರು ಅಂತೀವಿ, ಪೂಜೆ ಮಾಡಲ್ಲ, ಮನೆ ಕೆಲಸ ಮಾಡಲ್ಲ ,ಒಬ್ಬನೇ ಮಗ ಅಂತ ಮುದ್ದಾಗಿ ಸಾಕಿದ್ದೇವೆ , ಎದ್ದು ಹೋಗಿ ಕೈ ತೊಳಿ ಅನ್ನುತ್ತಾಳೆ, ತಟ್ಟೆಗೆ ತೊಳಿಸಲ್ಲ!! ಗಂಡಸು ಅವನು ಮರ್ಯಾದೆ ಕೊಡಲ್ಲ. ..ಅವನು ಹೇಳಿದಂಗೆ ನಡೆದುಕೊಳ್ಳ ಲಿಲ್ಲ್ಲ..ಎಂತ ಗಂಡಸಾದರು ಕುಪಿತಗೊಳ್ಳುತ್ತಾನೆ …ಸೇರಿದ ಮನೆ ಪ್ರಕಾರ ಹೊಂದಿಕೊಳ್ಳಬೇಕು ..ಒಂದು ಮೊಗು ಆದರೆ ಸರಿ ಹೋಗುತ್ತೆ ‘
ಜನರನ್ನೆಲ್ಲ ನಂಬಿಸಿಬಿಡುತಿದ್ದಳು .

ಆದರು ಎಷ್ಟು ಬಾರಿ ಹೇಳಿದ್ದೆ, ‘ನಿನ್ನ ಮನೆಗಾಗಲಿ, ಸಂಸಾರಕ್ಕಾಗಲಿ ನಾನು ಯಾವತ್ತಾದರೂ ಮೂಗು ತೋರಿಸಿ ಬಂದಿದ್ದೀನ? …ನಿನ್ನ ಮಕ್ಕಳಿಗೆ ಗದರಿಸಿದ್ದೀನ?…ನೀನು ಬಂದರೆ ನನಗೆ ಹಿಂಸೆಯಾಗುತ್ತದೆ ….ಇನ್ನೊಮ್ಮೆ ನೀನು ಬಂದರೆ ನಾನು ಪೋಲಿಸ್ ವರೆಗೂ ಹೋಗಬೇಕಾಗುತ್ತದೆ ….’

ಯಾವುದೇ ಲಗಾಮು ಇರಲಿಲ್ಲ, ಎಷ್ಟು ಸಾರಿ ಹೇಳಿದ ಮೇಲೂ ಬಂದೆ ಬರುತ್ತಿದ್ದಳು  !!!ಅವನ ಶಕ್ತಿ ಅವನ  ಅಕ್ಕ ! ಅವಳ ಹಸ್ತಕ್ಷೇಪವನ್ನು ನಾನು ವಿರೋದಿಸಿದರೆ, ಕೊಚ್ಚಿ ಪುಡಿಪುಡಿ ಮಾಡಲು ಹೇಸುತ್ತಿರಲಿಲ್ಲ…ಅವನಿಗೆ ಅವಳು, ಅವಳಿಗೆ ಅವನು ಕಾವಲು …
 
ಇನ್ನು ಅವನಮ್ಮ ದಿನಕ್ಕೆ ಏನಿಲ್ಲ ಅಂದರು 25  ಬಾರಿ ಹೆದರಿಸುತ್ತಿದ್ದರು, ಪ್ರತಿಯೊಂದರಲ್ಲೂ ..ಹೀಗೆ ಮಾಡು ಹಾಗೆ ಮಾಡು, ಇಲ್ಲಾಂದರೆ ಅವನು ಸುಮ್ಮನೆ ಬಿಡುವುದಿಲ್ಲ ,ಬೈದುಬಿಡುತ್ತಾನೆ!!!
ಎಲ್ಲದರಲ್ಲೂ ಅವರ ನಿರ್ದೇಶನ ನಡೆಯಬೇಕು…ಅದೇನು ಅಂತ ಕಷ್ಟದ್ದಾಗಿರಲಿಲ್ಲ..ನಡೆಯಲಿ ಅಂತಲೇ ಸುಮ್ಮನಾಗುತ್ತಿದ್ದೆ …
…ಚೆನ್ನಾಗಿದ್ದಾಗ ನನ್ನ ಹತ್ತಿರ ಅವನಬಗ್ಗೆ  ‘ಕಿತಾಪತಿ ನನ್ನ ಮಗ, ಯಾರನ್ನು ನೆಮ್ಮದಿಯಾಗೆ ಇರೋಕೆ ಬಿಡಲ್ಲ ,ಯಾಕಿಂಗೆ ಆಡುತ್ತಾನೋ ‘ ಎನ್ನುತ್ತಿದ್ದವರು
ಅವನೆದುರು ‘ಹುಲಿ ಇದ್ದಂಗೆ ಇದ್ದ ನನ್ನ ಮಗ , ಹೀಗೆ ಮಾಡಿಬಿಟ್ಟಳು ‘ ಅಂತ ಅಳಲು ಶುರು ಮಾಡಿಬಿಡುತ್ತಿದ್ದರು .
ಗಂಡಸು ಹೆಂಗಸು ಒಂದೇ ಸಮ ಆಗಲು ಸಾಧ್ಯವಿದೆಯ ಎಂದು ಜನಕ್ಕೆ ಪ್ರಶ್ನೆ ಹಾಕುತ್ತಿದ್ದರು…ಜನ ಏನಾದರು, ಈಗಿನ ಕಾಲದಲ್ಲಿ ದಂಪತಿಗಳು ಸ್ನೇಹಿತರಂತೆ ಇರಬೇಕು ಅಂದರೆ,-‘ ಹೇಗೋ ಇಬ್ಬರು ಸಂತೋಷವಾಗಿದ್ದರೆ ಸಾಕು  ನನಗೆ’  ಎಂದು ಬಿಡುತ್ತಿದ್ದರು .

‘ನೀನೇನಾದರು ತಪ್ಪು ಮಾಡಿದರೆ ನಿನ್ನ ತವರು ಮನೆಯವರನ್ನು ಕರೆಸುತ್ತೇನೆ , ಅವನು ತಪ್ಪು ಮಾಡಿದರೆ ನನ್ನ ಹತ್ತಿರ ಹೇಳು … ನಾವು ತಿರ್ಮಾನ ಮಾಡಿ ಶಿಕ್ಷೆ ಕೊಡುತ್ತೇವೆ ಎನ್ನುತ್ತಿದ್ದರು’.
ಅವನು ಹೀಗೆ ಮಾಡುವುದು ತಪ್ಪಲ್ಲವ ಅಂತ ಕೇಳಿದರೆ , ‘ನಾನು ಬೆಳೆಸಿದ ಮಗ ಅವನು, ನಾನು ಸರಿಯಾಗಿ ಬೆಳೆಸಿಲ್ವ, ಯಾವ ಲೋಫರ್ ನನ್ಮಗ ಹೇಳಿದ್ದು ‘ ಎಂದು ರಂಪ ಮಾಡಿಬಿಡುತ್ತಿದ್ದರು…
‘ಗಂಡಸರೊಂದಿಗೆ ಯಾಕೆ ಮಾತಾಡಬೇಕು , ತಲೆ ಬಗ್ಗಿಸಿ ಕೊಂಡುಹೋಗಿ, ಹೆಣ್ಣು ಮಕ್ಕಳೊಂದಿಗೆ ಮಾತ್ರ ಮಾತಾಡಿ ಕೆಲಸಮಾಡಿಕೊಂಡು ಬರಬೇಕು.ಹೆಣ್ಣುಮಕ್ಕಳು ರಾತ್ರಿ 9  ಆಗುವಷ್ಟರಲ್ಲಿ ಮನೆಗೆ ತಲುಪಬೇಕು .ಎಲ್ಲದಕ್ಕೂ ಅತ್ತೆಯ ಪರ್ಮಿಷನ್ ತೆಗೆದುಕೊಂಡು ಹೋಗಬೇಕು ….’ ಅವರ ಯೋಚನಾಲಹರಿ ಬದಲಾಗೋದಕ್ಕೆ   ಸಾಧ್ಯವಿರಲಿಲ್ಲ .
‘ಸುಮ್ಮಸುಮ್ಮ್ಮನೆ ಅನುಮಾನ ಬೀಳುತ್ತಾನ ? ‘ ‘ಯಾರನ್ನು ಕೇಳಿ ಫ್ಯಾಮಿಲಿ ಪ್ಲಾನಿಂಗ್ ಮಾಡಿಕೊಂಡಿದ್ದೀರ  ?’ ‘ಪಾತ್ರೆ ಗುಡ್ಡೆ ಹಾಕಿ ತೊಳೆಯಮ್ಮ ಎನ್ನಬೇಕಿತ್ತು ನಾನು’ ಗಂಡನ ಬಟ್ಟೆ ಹೊಗೆಸಬೇಕಿತ್ತು ‘ ‘ಸುಮ್ಮನೆ ಅಡಿಗೆ ಮನೆಯಲ್ಲಿ ಸೌಟು ಆಡಿಸಿದರೆ ಅಡಿಗೆ ಮಾಡಿದಂಗ ?’  ‘ನಾನು 10  ಲಕ್ಷ ಖರ್ಚು ಮಾಡಿ ಮದುವೆ ಮಾಡಿದ್ದು’ ——ಶುದ್ಧ ರುದ್ರಕಾಳಿ , ಭದ್ರಕಾಳಿ !!!!!!!!!!!

ಇನ್ನು ನನ್ನ ಗಂಡ ! ಎಲ್ಲರೆದುರು ಗಳಗಳನೆ ಅಳಲು ಶುರುಮಾಡಿಬಿಡುತ್ತಿದ್ದ…ತುಂಬಾ  ನೊಂದುಬಿಟ್ಟಿದ್ದೀನಿ ನಾನು.. ಯಾವನೋ ಇವಳಿಗೆ ನನ್ನ ಬಗ್ಗೆ ಕೆಟ್ಟದಾಗಿ messageಕಳಿಸಿದ್ದ …ಓದಿರೋ ಹುಡುಗಿ ಬೇಡ ಬೇಡ ಎಂದರು ಕಟ್ಟಿ ಬಿಟ್ಟಿರಿ , ಬರಿ ಹೆಣ್ಣು ಮಕ್ಕಳಿರುವ ಮನೆ ಬೇಡಾ ಅಂದೇ .. ಈಗ ನೋಡಿ ನಾನು ಅನುಭವಿಸಬೇಕು… ನನಗು ನಮ್ಮಮನಿಗು ತಂದಿಟ್ಟುಬಿಟ್ಟಳು…ಕರದುಕೊಂಡು ಹೋಗಿಬಿಡಿ ನನಗೆ ಬೇಡ ….’ ಏನೇನೋ  ….!!!!!

ಅವನನನ್ನು  ಪ್ರಸನ್ನವಾಗಿ  ಇಟ್ಟುಕೊಳ್ಳುವುದಕ್ಕೆ ಅವನ ಪರ ನಿಂತುಬಿಡುತ್ತಿದ್ದರು ಇಬ್ಬರು … ಅವರಿಬ್ಬರೂ ಪರವಾಗಿ ನಿಲ್ಲುವುದರಿಂದ ತನ್ನದೇನು ತಪ್ಪಿಲ್ಲ  ಎಂದುಕೊಂಡು ಬಿಡುತ್ತಿದ್ದ  ಅವನು ….

ಎಷ್ಟು ಅತ್ಯಾಚಾರ ಮಾಡುತ್ತಿದ್ದಾರೆ, ನನ್ನ ಒಳೆಯತನಕ್ಕೆ ಬೆಲೆಯಿಲ್ಲವ, ಅಕ್ರಮ ಸಂಬಂಧ ಇದೆ ಎಂದು ಜನರೆದುರು ಹೇಳುತ್ತಿದ್ದಾನೆ, ಯಾವ ಹೆಣ್ಣಿನ ಮೇಲೂ ಇಂತ ಆರೋಪ ಹೊರಿಸುವುದಕ್ಕೆ ಸಾವಿರಬಾರಿ ಯೋಚಿಸಬೇಕು, ಅಂತದ್ದರಲ್ಲಿ ಹೆಂಡತಿಯ ಮೇಲೆ ಹೀಗೆಲ್ಲ ಹೇಳುತ್ತಿದ್ದಾನೆ, ಜನರಿಗೆ ಯಾವ ಅರ್ಥ ಸಿಗುತ್ತದೆ …ಹಿಂಸೆಯಾಗಿ ಬಿಡುತ್ತಿತ್ತು.  ಅಷ್ಟುದಿನ ಮೌನವಾಗಿ ಒತಿಟ್ಟುಕೊಂಡಿದ್ದ  ಒತ್ತಡ , ಮಾತುಗಳು ಸ್ಪೋಟಗೊಳ್ಳುತ್ತಿದವು    …
ನೋಡಿ ನೋಡಿ ನಿಮ್ಮೆದುರೆ ಹೇಗೆ ಗಂಡನನ್ನು  ಅಗೌರವಿಸುತ್ತಿದ್ದಾಳೆ, ನಾನೆಷ್ಟು ನಿತ್ಯ ಅನುಭವಿಸಬಹುದು ಲೆಕ್ಕ ಹಾಕಿ !!!!
ಹಾಗು ಹೀಗೂ ಅವರಕ್ಕ ಪರಿಸ್ತಿತಿ ತಣ್ಣಗೆ ಮಾಡಿ happy ending ಅನ್ನಿಸುತ್ತಿದಳು.ಎಲ್ಲಾ ಸರಿ ಹೋಯ್ತು ಇನ್ನು ಮುಂದೆ ಹ್ಯಾಪಿ ಲಿವಿಂಗ್  ಎನ್ನಿಸುತ್ತಿದಳು ….
ಇನ್ನ್ನೊಮ್ಮೆ ಪಂಚಾಯ್ತಿ ಕರೆಸಿದರೆ  ನಾನು ಸುಮ್ಮನಿರಲ್ಲ, ಇನ್ಯಾವತ್ತು ಅದು ನಡೆಯಬಾರದು ಎಂದು ಅದೆಷ್ಟನೆ  ಬಾರಿಗೆ  ಹೇಳಿದ್ದೀನೋ..!!!!
ಇನ್ನೊಂದು 20 ದಿನ ಅಷ್ಟೇ!!! ಅಲ್ಲಿಗೆ ನಿಲ್ಲುತಿರಲಿಲ್ಲ..ಮತ್ಯಾವುದೋ  ನೆಪಕ್ಕೆ ಅದೇ ರಗಳೆ, ಅದೇ ಪಂಚಾಯ್ತಿ !!!!ಎಂತೆಂತ ಕ್ಷುಲಕ ವಿಷಯಗಳು ಪೌಡರ್ ಡಬ್ಬ ಸ್ಥಳ  ಬದಲಾಯಿಸಿದಳು, ಜೊತೆಗೆ ಶಾಪಿಂಗ್ ಮಾಡಲಿಲ್ಲ, ಅಮ್ಮನ ಮನೆಗೆ ಹೋಗಬೇಕೆಂದಳು, ಮುನಿಸಿಕೊಂಡಳು , ನನಗೆ ಮೆಸೇಜ್ ಕಳಿಸಿದಳು …..ಎಲ್ಲ ಹೆಂಡತಿಯರು ಮಾಡುವಂತದ್ದೆ, ಆದರೆ ಇವನೊಬ್ಬ ಮಾತ್ರ ಅವಕೆಲ್ಲ ಜನ ಸೇರಿಸಿಕೊಂಡು ಪಂಚಾಯ್ತಿ ಮಾಡುತ್ತಿದ್ದ !!!ನಡೆದ ವಿಷಯಕ್ಕೂ ,ಪಂಚಾಯ್ತಿಗೆ ನೆರೆದ ಕಾರಣಕ್ಕೂ ಸಂಬಂಧವೇ ಇರುತ್ತಿರಲಿಲ್ಲ … ಏನೇ ಆಗಿದ್ದರು ಪ್ರತಿ ಪಂಚಾಯ್ತಿಯಲ್ಲೂ ಅದೇ  ‘ಯಾವನೋ ಗಂಡಸು … messagu …ಕಾಲ್ detailu …ಕವನ …’ ಅದದೇ ಅಪಾದನೆ !!!! ನಾನು ನೋಯುತ್ತಿದ್ದದ್ದು , hurt ಆಗುತ್ತಿದ್ದದ್ದು  ಆ  ವಿಷಯಕ್ಕೆ ಅಂತ ತಿಳಿದಮೇಲೆ ಅದೇ ಒಂದು trump card ಆಗಿಬಿಟ್ಟಿತ್ತು ……
11  ತಿಂಗಳಲ್ಲಿ   15  ಪಂಚಾಯ್ತಿಗಳು !!! ಬಹುಶ ಈ ರೀತಿ ಸಂಸಾರ ಮಾಡಿಸುವುದನ್ನು ನಾವ್ಯಾರು ಕೇಳೂ ಇರಲಿಲ್ಲ ನೋಡೂ ಇರಲಿಲ್ಲ .. 
 
ಅವರ ಚಿಕ್ಕಪ್ಪನನ್ನು ಕರೆಸಿ ಪಂಚಾಯ್ತಿ ಮಾಡಿಸಿದಾಗಲೇ ನನಗೆ ಸಹಿಸಿಕೊಳ್ಳಲಾಗದ ಹಿಂಸೆಯಾಗಿದ್ದು …
ಯಾವನೋ  ಮೆಸೇಜ್ ಮಾಡಿದ್ದ ಅಂತ ಇವನೆಂದರೆ, ಭೋಳಿ ಮಗನೆ ಅವತ್ತೇ ಯಾಕೆ ಹೇಳಲಿಲ್ಲವೋ ಅಂತ ಅವರು….
ಇನ್ಯಾವನೋ  ಇದ್ದ ಇವಳ ಜೀವನದಲ್ಲಿ , ಮನೆಗೆ ಒಂದು ದಿನ ತರಕಾರಿ ತಂದಿಲ್ಲ, ಹಬ್ಬಕ್ಕೆ ಇವರಮ್ಮ ಕರೆಯಲಿಲ್ಲ , ಭಾವ ರಾತ್ರಿ 11 ಕ್ಕೆ  ಫೋನ್ ಮಾಡಿ ಇವಳು ಒಬ್ಬಳನ್ನೇ ಕರೆಸಿಕೊಂಡ, ಗಾಡಿ ತರಲು ಯಾಕೆ ಅವಳ ಭಾವನ ಪರ್ಮಿಷನ್ ಕೇಳುತ್ತಾಳೆ ,ಮನೆ ಯಾಕೆ ಮದುವೆಯ ಸಮಯದಲ್ಲಿ ಖಾಲಿ ಮಾಡಿದ್ದು… ಏನೇನೋ ಅಸಹ್ಯ ಹುಟ್ಟಿಸುವ ಪ್ರಶ್ನೆಗಳು .. ಚರ್ಚೆಗಳು……
ಹುಡುಗಿ ಸರಿ ಇಲ್ಲ ಅನ್ನವವರೆಗೂ ಅವರು convince ಆದರು   !!
ಅವತ್ತು ನನ್ನ ಮನೆಯವರ್ಯಾರು ಬಂದಿರಲಿಲ್ಲ..ನಾನೊಬ್ಬಳೆ.. ಅವರು 4  ಜನ…
ಜೊತೆಗೆ ನನ್ನ ಅಮ್ಮ,ಅಕ್ಕ,ಭಾವಂದಿರು  ಯಾರು ಸರಿ ಇಲ್ಲ ಎನ್ನುವವರೆಗೂ ಅವರುಗಳ ಮಧ್ಯೆಯೇ ಡಿಸ್ಕಶನ್ ನಡೆಯಿತು ..ನನ್ನ ಮೇಲೆ ಸರಿ…. ಯಾಕೆ ಸಂಬಂಧವೇ ಇಲ್ಲದವರನ್ನು ಸೇರಿಸಿಕೊಂಡು ಅವಹೇಳನ ಮಾಡುತ್ತಿದ್ದಾರೆ…..
ಒಂದಷ್ಟು ಟಿಪ್ಸ್ ಕೂಡಕೊಟ್ಟರು ಅವರು ,’ಕೆಲಸಕ್ಕೆ ಕಳಿಸಬೇಡ , ತವರು ಮನೆಗೆ ಅವಾಗವಾಗ  ಕಳಿಸಬೇಡ, ಅವರೇ ಹೇಳಿಕೊಡುವುದು ,ಮಲಗಿಕೊಂಡುಬಿಡು, ಅವಳೇ ಎದ್ದು ಕೆಲಸ ಎಲ್ಲ ಮಾಡಿ ಗಂಡನನ್ನು ಕೆಲಸಕ್ಕೆ ಕಳಿಸಲಿ, ಹೆಣ್ಣುಮಕ್ಕಳನ್ನು ಅಳೋಕೆ  ಅಗಲ್ವೇನೋ ನಿನಗೆ……’
ನನ್ನ ಚಿಕ್ಕಪ್ಪ, ಭಾವನಿಗೆ ಫೋನ್ ಮಾಡಿ –‘ಯಾರೋ ಹುಡುಗ message ಕಳಿಸಿದ್ದನಂತೆ ,ಅವತ್ತೇ ನಾವು ಕೇಳಬೇಕಿತ್ತು ನಿಮ್ಮನ್ನು , ಈ ನನ್ನ ಮಗ  ಹೇಳಲಿಲ್ಲ ನಮಗೆ ‘  
ಎಂತ ಕ್ಷುಲ್ಲಕ ವಿಷಯಗಳು —- ಕೆಲಸಕ್ಕೆ ಬರದ ಮೆಸೇಜ್ , ಕಲೀಗ್ ಜೊತೆ ಮಾತನಾಡದೆ ಕೆಲಸಮಾಡಬೇಕು,ಹಂಗೇನಾದರು  ಇದ್ದರೆ ಮನೆಗೆ ಬಂದು ಮಾತಾಡಬೇಕು .. — ಇಲ್ಲ ಅಂದರೆ ನನಗೆಅಕ್ರಮ ಸಂಬಂಧವಿದೆ  !!! ಅದು ಒಬ್ಬನ ಜೊತೆ ಅಲ್ಲ , ಮದುವೆಗೆ ಮುಂಚೆ ಒಬ್ಬ  ಹುಡುಗನ  ಜೊತೆ, ಆಮೇಲೆ ಇನ್ನೊಬ್ಬನ ಜೊತೆ ,ನನ್ನ ಟೀಂ ನವರೆಲ್ಲರ ಜೊತೆ,ಯಾವ ಹುಡುಗನ್ನನ್ನು ಬಿಡದ ಲಾಚರೆ ನಾನು !!!!!!!!!!!!!!

ಎಷ್ಟು ದೂರ್ತನಂತೆ ಹೇಳುತ್ತಿದ್ದ ‘ ನಮ್ಮಮ್ಮ,ನಮ್ಮಕ್ಕ  ಹೇಗೆ ಬೇಕಾದರೂ ಮಾತು , ಕತೆ ತಿರುಗುಸಿ ನೀಗಿಕೊಳ್ಳುತ್ತಾರೆ …ನಾನು ಒಂದು ಚೂರು ಕೊಸರಿದರೆ ,ನಮ್ಮಮ್ಮ ಅಕ್ಕ ಸುಮ್ಮನೆ ಬಿಡಲ್ಲ ನಿನ್ನ , ನನ್ನ ನೆಂಟರ್ಯಾರು ಸುಮ್ಮನೆ ಬಿಡಲ್ಲ ನಿನ್ನ,  ನಿನ್ನ ತವರು ಮನೆಯವರೆದುರೆ ನಿನ್ನ scrap  ಮಾಡಿಬಿಡುತ್ತೀನೆ, ನೀನು  ಇಷ್ಟು ಮಾಡಿದರೆ ನಾವು ಅಷ್ಟು ಮಾಡುತ್ತೇವೆ , ಹೇಳುವುದನ್ನು ನೀನು ದೈನ್ಯವಾಗಿ ಹೇಳಿದರೆ ಮಾತ್ರ ನಾನು ಅರ್ಥ ಮಾಡಿಕೊಳ್ಳುತ್ತೇನೆ..ನನ್ನ ದಾರಿಗೆ ನೀನೆ ಬರಬೇಕು, ಬಗ್ಗೋ ಮಾತೇ ಇಲ್ಲ  !!!! ‘ –ಎಂತೆಂತ ವಂಚನೆ , ರಾಜಕೀಯ , ಅನೀತಿ …
ಕಡೆವರೆಗೂ ಹೇಳಿದ್ದು,ಕೇಳಿಕೊಂಡಿದ್ದು   ಒಂದೇ ನಾನು, ಏನೇ  ಆದರು ನೀನೊಬ್ಬನೇ ನಿಭಾಯಿಸು , ನಿಯಂತ್ರಿಸು !!!!! 
 … ಕುಸಿದುಹೋದೆ ಪಾತಾಳಕ್ಕೆ …depression ಶುರುವಾಗಿದ್ದೆ ಈ ಸಲುವಾಗಿ …tablets ತೆಗೆದುಕೊಳ್ಳದೆ ಸಂಭಾಳಿಸಿಕೊಳ್ಳದಾದೆ . ಮಾತ್ರೆಯದ್ದು ಎಂತ side effects , ಹೊಟ್ಟೆಯಲ್ಲ ಉರಿ ಉರಿ!!! ಜೀವನ ಪ್ರೀತಿ ಇರಲಿ, ಮಾಡುವ ಕೆಲಸದಲ್ಲೂ ಆಸಕ್ತಿವಹಿಸಲಾಗುತ್ತಿರಲಿಲ್ಲ , performance ಕಣ್ಣ  ಮುಂದೆಯೇ ಕುಸಿಯುತ್ತಿತ್ತು , migrane ಸಮಸ್ಯೆ ಹೆಚ್ಚಾಯಿತು…. ಅವನ ಕುಟುಂಬದಲ್ಲಿ ಹೆಂಗಸರು ಹೆದರಿಕೊಂಡಂಗೆ ನಾಟಕಮಾಡಿ ಒಳಗೆ ದೈರ್ಯವಾಗಿದ್ದುಕೊಂಡು ಬೇಕಾದಂಗೆ ಬಾಳುತ್ತಿದ್ದರು .. ನಾನು ಈಚೆ ಪ್ರತಿಭಟಿಸಿ , ಒಳಗೆ ಹೆದರಿ ಹೆದರಿ ಕೃಶವಾಗಿ ಹೋಗಿದ್ದೆ … ಅಷ್ಟೇ ವ್ಯತ್ಯಾಸ… ಕಪಟ ನಾಟಕ, ಮುಖವಾಡಗಳಿಗೆ ಇರುವ ಬೆಲೆ ನಿಜಕ್ಕೆ ಇಲ್ಲ !!!….  ಅತಿ ಸೂಕ್ಷ್ಮ ಆಗಿಬಿಟ್ಟಿತ್ತು ಮನಸು..
ಎಷ್ಟು ಜರ್ಝರಿತನಾಗಿರುವೆನೆಂದರೆ
ಬರೀ ಮುಟ್ಟಿದರೂ ಕಿತ್ತುಹೋಗುವೆ
ಇನ್ನೂ ಹೆಚ್ಚು ಹರಸಿದೆಯೆಂದರೆ
-ಸತ್ತು ಹೋಗುವೆ
 ಅಂತ ದಿನಗಳಲ್ಲೇ , ಒಂದು ಇಂಟರ್ವ್ಯೂ ಅಟೆಂಡ್ ಮಾಡಿದಕ್ಕೆ, ಅತ್ತೆ ಅಸಾದ್ಯ ಜಗಳ ಮಾಡಿ ಬೈದ್ದಿದ್ದು ನ್ಯಾಯ ಪಂಚಾಯ್ತಿಯ ಮಾತು ಮತ್ತೆ ಬಂದಿದ್ದು.. ಅಂದು ರಾತ್ರಿ ಅವನಮ್ಮ ಮತ್ತು ಅಕ್ಕ ಸೇರಿಕೊಂಡು , ಮತ್ತೆ 15  ಜನರನ್ನು ಸೇರಿಸಿಕೊಂಡು ಪಂಚಾಯ್ತಿ ಏರ್ಪಡಿಸಿದ್ದಿದ್ದು ..ಈ ಬಾರಿ ಹೊಸ ಜನ !…ಮನೆಗೆ ಹೋಗುವವರೆಗೂ ನನಗೆ ಗೊತ್ತಿರಲಿಲ್ಲ ಪಂಚಾಯ್ತಿ ಇದೆ ಎಂದು….  ಮತ್ತೆ ಅದೇ ಕತೆಗಳು ಈ ಬಾರಿ ನಾನೋಗುವ ಮುಂಚೆಯೇ ಎಲ್ಲಾ ಜನರೆದುರು 2 -3  ಗಂಟೆಗಳಿಂದ ವಿವರಿಸಲ್ಪಟ್ಟಿತ್ತು  —  ‘ ಸೂಳೆ’ ಪಟ್ಟಕಟ್ಟಿ, ನಿಕೃಷ್ಟೇ ಮಾಡಿ , ಗಂಡಸರ  ಬಾಯಲ್ಲಿ ಅದೆನ್ತದ್ದೋ ಮಾತುಗಳನೆಲ್ಲ ಆಡಿಸಿ,ಹೆಂಗಸರು ರುಡಾಲಿ ಎದ್ದು  ಕೊಂದೇಹಾಕಿದರು …ಅತ್ಯಾಚಾರ  ಮನಸಿನ ಮೇಲೆ…!!!  ಪೋಲಿಸ್ ಕಂಪ್ಲೇಂಟ್ ಕೊಟ್ಟಿದ್ದು .. ಅದಕ್ಕೆ ನನ್ನ ಗಂಡ, ಈಗ ಸಿಕ್ಕಸಿಕ್ಕಲ್ಲಿ ಹೊಡೆಯಲು, ಸಾಯಿಸಲು ಹವಣಿಸುತ್ತ , ಡೈವೋರ್ಸ್ ಕೊಡು ನಿನ್ನ ಮೇಲೆ  ನನಗೆ ಯಾವುದೇ ಪ್ರೀತಿ ಇಲ್ಲ, ನನ್ನ ಜೀವನ ನಾನು ನೋಡಿಕೊಳ್ಳಬೇಕು , ನೀ ಸತ್ತರು ನನಗೆ ಕಣ್ಣಲಿ ನೀರು ಬರುವುದಿಲ್ಲ ಎನ್ನುತ್ತಿರುವುದು !!!!!