perspectives

ಸರಿ ತಪ್ಪು ಅಂತ ಇರೋದೆಯಿಲ್ಲ  , ಅವೆಲ್ಲ ಕೇವಲ perspectives ಅಂತಾರೆ ಕೆಲವರು .
ನಾನು ಹಾಗೆಂದುಕೊಂಡೆ ಎಷ್ಟೊಂದು ಅರ್ಥಮಾಡಿಕೊಳ್ಳಲು ಪ್ರಯತ್ನಪಟ್ಟೆ… ಈಗಲೂ ಪಡುತ್ತಲೇ ಇದ್ದೇನೆ .
ಅವನು ಎಷ್ಟೇ  ನೀಚವಾಗಿ ಯೋಚಿಸಿದ್ದರು , ಮಾತಾಡಿದ್ದರು , ನಡೆದುಕೊಂಡಿದ್ದರು ಒಂದು ಹಂತ ಅಂತ ಸಹಿಸಿಕೊಳ್ಳುತ್ತಿದ್ದೆ… ಪ್ರೀತಿಯೋ, ಗಂಡ ಎನ್ನುವ ಅಕ್ಕರೆಯೊ, ಬಿಡಲಾರದ ಅಸಹಾಯಕತೆಯೋ …ಏನೋ ಒಂದು …ನಾಲ್ಕು ಗೋಡೆಯೊಳಗೆ ನಮ್ಮಿಬ್ಬರ ನಡುವೆ ಅವೆಲ್ಲ ನಡೆದು ತೀರಬೇಕಿತ್ತು ಅಷ್ಟೇ  ..ಮತ್ತು ಅದನ್ನು  handle ಮಾಡಿಕೊಳ್ಳಲು ನನಗೆ ಪರಿಪೂರ್ಣ ಅವಕಾಶವಿದ್ದಿರಬೇಕು   …

ಅವನಿಗೆ ಅರ್ಥವಾಗಲೇ   ಇಲ್ಲ  ..

ಎಂದು ಪ್ರಯತ್ನ ಕೂಡ ಪಡಲಿಲ್ಲ !!

ಅಷ್ಟೊಂದು mishandle ಮಾಡುತ್ತಾರೆ ಎಂದರೆ ಒಂದೋ ದುರಹಂಕಾರದ ಪರಮಾವಧಿಯಲ್ಲಿ ಮುಳುಗಿ ಹೋಗಿರಬೇಕು, ಇಲ್ಲ ಕಳೆದುಕೊಳ್ಳುವ ಭಯ ಬೇಜಾರು ಇಲ್ಲದೆ ಬೇಕಾಬಿಟ್ಟೆ ಕಡೆಗಣಿಸುವವರಾಗಿರಬೇಕು , ಇಲ್ಲ ಬೇರೇನೋ ಸಾಧಿಸಿಕೊಳ್ಳಲು ನೆಪಮಾಡಿಕೊಳ್ಳುವ ದುರುದ್ದೇಶಹೊಂದಿರಬೇಕು
ಅವರ ನಿಲುವು, ಯೋಚನೆ, ನಡವಳಿಕೆ ನೆನೆಸಿಕೊಂಡರೆ  ಅಸಹ್ಯವಾಗುತ್ತದೆ ..ಅವರ ಯೋಚನಾ ಲಹರಿಗೆ  ಎಲ್ಲರು ಬೆಚ್ಚುತ್ತಾರೆ, ವಾಕರಿಸಿಕೊಳ್ಳುತ್ತಾರೆ  …   

ನಮ್ಮಗಳ  ಹಿನ್ನಲೆಗಳಲ್ಲಿ ವ್ಯತ್ಯಾಸವಿತ್ತು ನಿಜ.
ನಮ್ಮ ಮನೆಯಲ್ಲಿ ಸರಸ್ವತಿ ಫೋಟೋ, ಸರಸ್ವತಿ ಪೂಜೆ, ಹಬ್ಬ , ಆರಾಧನೆ ಎಂದರೆ ಅವರ ಮನೆಯಲ್ಲಿ ಎಲ್ಲದಕ್ಕೂ, ಎಲ್ಲವೂ  ಲಕ್ಷ್ಮಿ…
ನಮ ಮನೆಗಳಲ್ಲಿ  ಪುಸ್ತಕಗಳನ್ನು  ಆಸ್ತಿಯೆಂದು ತೋರಿಸುತ್ತಾ ಬೆಳೆಸಿದರು ..ಬುದ್ದಿ ತಲೆಗೆಹತ್ತುವ ಸಮಯದಲ್ಲಿ ಕೈಗೆ ಬಂದಿದ್ದು ಡಿಕ್ಷನರಿ , ಪುರಂದರ, ಕನಕದಾಸರ ಕೀರ್ತನೆ, ಕುವೆಂಪು ಬೇಂದ್ರೆ  ಕಾವ್ಯ  !!!
ಆದ್ಯಾತ್ಮದ ಜೊತೆ ವೈರಾಗ್ಯ , ತತ್ವಜಿಂತನೆಗಳು … ನಾ ಕೇಳಿದ ಮೊದಲ ಕತೆ ಕೃಪುಣ  ಪುರಂದರದಾಸರು ತನ್ನೆಲ್ಲ ಆಸ್ತಿ ತೊರೆದು ವೈರಾಗ್ಯ ಸ್ವೀಕರಿಸಿದ್ದು . ಪುಣ್ಯಕೋಟಿ ಕತೆ  , ಅಂಗುಲಿಮಾಲನ ಕತೆ..

ನಾ ಮೊದಲ ಬಾರಿ ಏನೋ ಬರೆದಾಗ ಅಕ್ಕ ಅಪ್ಪನಿಗೆ ತೋರಿಸಿ ಹೊಗಳಿಕೆಗಳಿಸಿ ಕೊಟ್ಟಿದ್ದಳು  …  ಅಪ್ಪ ,ಬರೆಯುವುದ ಹೀಗೆ  ಮುಂದುವರೆಸು ಬೆನ್ನುತಟ್ಟಿದ್ದರು ..ಇಲ್ಲಿ ಅವೆಲ್ಲ ಹಾದರದ ವಿಷಯವಾಗಿ ಹೋಗಿತ್ತು ! ಸಾಕ್ಷಿಯಾಗಿ ಹೋಗಿತ್ತು …ಅರ್ಥವಾಗದ   ಜನಕ್ಕೆ ಕೆಟ್ಟ ಅರ್ಥಮಾಡಿಸಲು   ಮುಲಾಜಿಲ್ಲದೆ  ತೋರಿಸತೊಡಗಿದರು … ಮುರಿಯುವುದು, ಗೆಲ್ಲುವುದು ಅಷ್ಟೇ ಅವರ ಉದ್ದೇಶ … blackmail !!!!

ವರ್ಷಕ್ಕೆ ಒಂದು ಅಂತ ಉಗಾದಿಗೊ ಹುಟ್ಟಿದ ಹಬ್ಬಕ್ಕೋ ಬಟ್ಟೆ ಕೊಡಿಸಿದರೆ ಅದೇ ದೊಡ್ಡಸ್ತಿಕೆ ಅನ್ನೋಷ್ಟು ಖುಷಿ ….ನಾವು ಅನುಕೂಲಸ್ತರು   ಎನ್ನುವ ಭ್ರಮೆ .
ವಸ್ತುಗಳ ಮೇಲೆ ಆಸೆ ನಿಜ, ಆದರೆ ಅದೇ ಬದುಕಲ್ಲ ಉಪದೇಶ… ಕೊಡಿಸು ಎಂದು ಪೀಡಿಸದೇ ನೀನು ಸಂಪಾದಿಸಿ ಆನಂದಿಸಬೇಕು ನೀತಿಪಾಠ  
ಏನೊಂದು  ಆಗದೆ ಕೇವಲ ಹುಟ್ಟಿ, ಬದುಕಿ ಸಾಯೋದು ಅಪ್ಪನಿಗೆ  ಇಷ್ಟವಿರಲಿಲ್ಲ .. ಸಾಧನೆ ಮಾಡಬೇಕು, ಜ್ಞಾನವೇ ಸಂಪಾದನೆ, resource ಆಗಿ ಬಾಳಬೇಕು,  ಜನಗುರುತಿಸುವಂತ   contribution ನೀಡುವಂತಾಗಬೇಕು ,ಅಂತವರಿಗೆ ಎಲ್ಲಿಯೋದರು ಘನತೆ   ಅಂತೆಲ್ಲ ನಂಬಿದ್ದರು , ನಮ್ಮನ್ನು ಹಾಗೆ  ನಂಬಿಸುತ್ತಿದ್ದರು …

ಅಲ್ಲಿ ವಸ್ತುಗಳನ್ನೇ , ಅವುಗಳು ಸೃಷ್ಟಿಮಾಡೋ ಶ್ರೀಮಂತಿಕೆ ಭ್ರಮೆಯನ್ನು ಆಸ್ತಿಯೆನ್ನುತ್ತ ಬೆಳೆಸಿದ್ದರು …ಬದುಕಲ್ಲಿ ಉಳಿಯಬೇಕು ಎಂದರೆ , ಹೋರಾಡಬೇಕು,ಗೆಲ್ಲಬೇಕು , ಬೇರೆಯವರನ್ನು ಹದ್ದುಬಸ್ತಲ್ಲಿ ಬಂದಿಸುತ್ತಾ ಉಪಯೋಗಿಸುವುದ , ಆಳುವುದ, ಕಲಿಯಬೇಕು ಬದುಕೆಂದರೆ ಹೋರಾಟ ಪಾಠ ಕಲಿಸಿದ್ದರು… ಇನ್ಯಾರಿಂದಲೋ ತೊಂದರೆ ಅನುಭವಿಸದೆ ಸೇಫ್ ಆಗಿ ಬದುಕಲು ಏನು ಬೇಕಾದರೂ ಮಾಡು ಹೇಳಿದ್ದರು ..  

ಹೆಣ್ಣುಮಕ್ಕಳಿಗೆ ಅಡಿಗೆ, ಗಂಡನನ್ನು ಒಲಿಸಿಕೊಳ್ಳೋ  ಕಲೆ, ಸಹಿಸಿಕೊಳ್ಳೋ ಬುದ್ಧಿ ಕಲಿಸಿ ಒಳ್ಳೆ ಶ್ರೀಮಂತನ ಮನೆಗೆ ಸೇರಿಸಿಬಿಟ್ಟರೆ ಅಲ್ಲಿ ಸುಖವಾಗಿದ್ದು ಬಿಡುತ್ತಾರೆ   –ಇಂತ ಸಾಮಾನ್ಯ ಕಲ್ಪನೆಗಳು ತಂದೆ, ತಾಯಿ ಇಬ್ಬರಲ್ಲೂ ಇರಲಿಲ್ಲ … ನೀ ಚೆನ್ನಾಗಿ ಓದಿದರೆ ಓದಿದವರನ್ನು ಮದುವೆಯಾಗಿ intelectuallythink ಮಾಡುತ್ತಾ ಕ್ವಾಲಿಟಿ ಲೈಫ್ ಬಾಳಬಹುದು ಎನ್ನುವುದ ಬಿಟ್ಟರೆ ಮದುವೆ  ಬಗೆಗೆ ಹೆಚ್ಚೇನೂ ಅವರ ಯೋಚನೆ ಇರಲಿಲ್ಲ
ಆದರೆ ಮದುವೆ ನನ್ನ ಪಾಲಿಗೆ ಭಾವನಾತ್ಮಕ ಹಂತ ! ನಾನು ಭಾವುಕಳು… ಟೆಕ್ನಾಲಜಿ ಗಿಂತ ಮಮತೆ , ಪ್ರೀತಿಯನ್ನು  ಹೆಚ್ಚು appreciate ಮಾಡುವವಳು ..ಘನತೆಯುತ ಖಾಸಗಿತನ ಬಯಸುವವಳು .
 
ಸದಾ tuition , classes , exam ಅಂತೆಲ್ಲ ಒತ್ತಡದಲ್ಲಿರುತ್ತಿರುವಾಗ ನಮ್ಮಂತ ಹುಡುಗೀರು ಬೇಸತ್ತು  ಮಾತಾಡಿಕೊಳ್ಳುತ್ತಿದದ್ದು ಇತ್ತು …ಅಮ್ಮ ನೋಡು ಎಷ್ಟು ಹಾಯಾಗಿ ಮನೆಯಲ್ಲಿ ಅಡಿಗೆ ಮಾಡಿಕೊಂಡು ಇರುತ್ತಾರೆ ..ಕಾದಂಬರಿ ಓದೋಕೆ, tv ನೋಡೋಕೆ , ನಿದ್ದೆ ಮಾಡೋಕೆ ಎಷ್ಟೆಲ್ಲಾ ಸಮಯ ಸಿಗುತ್ತದೆ… ನಮಗೂ ಹಾಗೆ ಬದುಕು ಸಾದ್ಯವಾದರೆ …?
ಮುಂದಿನ ಕ್ಷಣವೇ ಅನಿಸುತ್ತಿತ್ತು ಇಲ್ಲ, ಅದೆಲ್ಲವನ್ನು ಮೀರಿ ಬೇರೆನಾದರು ಗುರುತಿಸಿಕೊಳ್ಳಬೇಕು, ಸಾಧಿಸಿ ತೋರಿಸಬೇಕು …
.. ನೌಕರಿ, ಟೆಕ್ನಾಲಜಿ , ಉದ್ಯೋಗ, ಸ್ಥಾನ, ಮನ್ನಣೆ, onsitu ಏನೇನೋ ಕನಸಿತ್ತು …
ನಿಜ ತಂದೆ ತಾಯಿ ಎಷ್ಟೆಲ್ಲಾ ಕನಸು ಕಾಣುತ್ತಾರೆ … ಈಗಲೂ ನೆನಪಿದೆ ನನಗೆ, ಮೊದಲ ಬಾರಿ  ಪ್ರಾರ್ಥನೆ ಹೇಳಿಕೊಟ್ಟಿದ್ದು   “ಒಳ್ಳೆ ವಿದ್ಯೆ , ಒಳ್ಳೆ ಬುಧ್ಹಿ , ಆಯುರಾರೋಗ್ಯ ಕೊಡಪ್ಪ ತಂದೆ  ‘ .

ಮೈಕ್ರೋಬಯಾಲಜಿ ಬೂಮ್ ಇದೆ ಎಂದು ಕೇಳಿ ದೊಡ್ದಕನನ್ನು ಸೇರಿಸಿದ್ದು , ನಾವು ಓದುವಾಗ ಇಂಜಿನಿಯರಿಂಗ್ ಬೂಮ್ ಇದೆ ಅಂತ ಅದರ ಕಡೆ ನಮ್ಮ ಗುರಿ ಸೃಷ್ಟಿಸಿದ್ದು ಅಪ್ಪ  …
ತಲೆಚಿಟ್ಟು ಹಿಡಿಯುವಷ್ಟು  ಓದೋಷ್ಟು ಗುಡ್ಡೆಹಾಕಿಕೊಂಡು  ಕೂತಾಗ , ನಿದ್ದೆ ಊಟ ಬಿಟ್ಟು , tv  ಬಿಟ್ಟು, ಎಲ್ಲಾ ಪ್ರಲೋಭನೆ ಬಿಟ್ಟು ಓದುವಾಗ ಅಮ್ಮ ನೊಂದು ನುಡಿದುಬಿಡುತ್ತಿದ್ದರು , ಯಾಕೆ ಮಕ್ಕಳು ಇಷ್ಟು ಕಷ್ಟಪಡಬೇಕು… ಏನೋ ಒಂದು ಆದರೆ ಆಯಿತಲ್ಲ….
ಹಾಗೆಲ್ಲ ದಿಕ್ಕು ತಪ್ಪಿಸಬೇಡ  ಬಯ್ದುಬಿಡುತ್ತಿದ್ದರು ಅಪ್ಪ….!!!!!
ಓದದೆ ಬಿಸಿನೆಸ್ ಮಾಡಿ ದುಡಿಯುವವರು ಎಲ್ಲರಿಗಿಂತ ಹೆಚ್ಚು ಸಂಪಾದನೆ ಮಾಡುತ್ತಾರೆ ಎನ್ನುವುದು  ನನ್ನ ಜಿಜ್ಞಾಸೆ ಆಗಿಬಿಡುತಿತ್ತು ಕೆಲವೊಮ್ಮೆ …
ಆದರೆ ಓದು, ಕೆಲಸ ಎಂದರೆ ಕೇವಲ ದುಡ್ಡು, ಸಂಬಳ ಅಲ್ಲ !!! ಅದೊಂದು ಸಾದನೆ, ಗೌರವ !!! ಎಲ್ಲರು ದುಡ್ಡು ಸಂಪಾದಿಸಬಹುದು , ಯಾರ್ಯಾರೋ ಹೇಗೇಗೋ  ಶ್ರೀಮಂತರಾಗಬಹುದು , ಇನ್ಯಾರೋ ಹಣ ಲಪಟಾಯಿಸಬಹುದು…ಆದರೆ ಅದ್ಯಾವುದು ಜ್ಞಾನಕ್ಕೆ, ವಿದ್ಯೆಗೆ ಸಮನಲ್ಲ ಅನ್ನ್ನೊದು ಅವರ ದೃಡ ನಂಬಿಕೆ

ನಾನು ಹೊಕ್ಕ ಹೊಸ ಜಗತ್ತಿನ perspective ಬೇರೆಯೇ !!
ಅವರ ಇತಿಮಿತಿಯಲ್ಲಿ ಅವರ  ಬದುಕು ಅವರನ್ನು ಹಾಗೆ ನಡೆಸಿಕೊಂಡಿತ್ತು ಅದು ನನಗೆ ಅರ್ಥಾವೂ ಆಗುತ್ತಿತ್ತು … ….ಅಲ್ಲೂ ಅದೇ ವರ್ಷಕ್ಕೊಂದು  ಬಟ್ಟೆ …ಆದರೆ ಗುರಿಮಾತ್ರ secure  ಲೈಫ್ .. ಸುಖಿಸುತ್ತಾ, ಗಳಿಸುತ್ತಾ  ಕೇವಲ ಹಾಯಾಗಿ  ಬದುಕುವುದು ..ಬದುಕುವ ಸಂತೋಷಕ್ಕೆ ಬದುಕುವುದು …ಅದನ್ನು ಗಳಿಸುತ್ತಿದ್ದಂತೆ ತಲೆ ಹತ್ತಿಕೂತ  ಅಹಂಕಾರ , achieve ಮಾಡಿದ  ಹೆಮ್ಮೆ ….. ಇನ್ನಷ್ಟು ಬದುಕಬೇಕು  ಎನ್ನುವ ಜೀವನ ಪ್ರೀತಿ..ಕಳಕೊಂಡಿದ್ದನ್ನು ತುಂಬಲು, ಇನ್ಯಾವತ್ತು ಕಳೆದುಕೊಳ್ಳದಿರಲು ಇನ್ನಿಲ್ಲದ ಮುದ್ದು   ..ಕೇವಲ ಸಂತೋಷ, ಸುಖ, ದರ್ಪ, ಅಹಂ ಅಷ್ಟೇ  ಬದುಕು..ಗಂಡುಮಕ್ಕಳು, ಹೊಟ್ಟೆಯಲ್ಲಿ ಹುಟ್ಟಿದ ಹೆಣ್ಣುಮಕ್ಕಳು ಹಾಯಾಗಿರಬೇಕು, ಮೆರೆಯಬೇಕು ಕಣ್ಣಿಗೆ ಕುಕ್ಕುವ ಸ್ವಾರ್ಥ !!!!

ನನ್ನ perspective ಅಲುಗಾಡುವ   ಹಂತಕ್ಕೆ ತಲುಪಿಬಿಟ್ಟಿತು …. ಅಯೋಮಯ…ಕಲಸು ಮೇಲೋಗರ ..
ಎಷ್ಟು ಸುಲಭ ಬದುಕೋದು.. ಹಾಗಿದ್ದರೆ ಕಷ್ಟ ಯಾಕೆ ಪಡಬೇಕು.. ಪ್ರತಿದಿನ ಅಷ್ಟೆಲ್ಲಾ ಯಾಕೆ ಹೋರಾಟಮಾಡಬೇಕು .
ಜೀವನ ಎಷ್ಟು ಸುಲಭ ಅಂದರೆ….. ಇಷ್ಟು ಲೈಟ್ ಆಗಿ ತೆಗೆದುಕೊಂಡು   ಆರಾಮಾಗಿ , ಆನಂದವಾಗಿ ಬದುಕಬಹುದು ಎಂದರೆ… ಹಾಗೆ ಸುಮ್ಮನೆ ಹಕ್ಕು, ಅಧಿಕಾರ ಚಲಾಯಿಸಬಹುದು ಎಂದರೆ !!!!
ಯಾರಿಗೆ ಹಾಯಾಗಿ ಇದ್ದುಬಿಡಲು ಇಷ್ಟವಾಗುವುದಿಲ್ಲ …ಎಷ್ಟು  ಮಾಡಿದರು ಮುಗಿಯದ ದೂರುಗಳು ಸಿಗದ ನೆಮ್ಮದಿ ..ಶ್ರಮವನ್ನು ಯಾರು ಗುರುತಿಸುವುದಿಲ್ಲ ಕಡೆಗೆ ಬೈಗುಳವೂ ತಪ್ಪೊಲ್ಲ …

ಪೋಷಕರು ಎಷ್ಟು ಮುತುವರ್ಜಿಯಲ್ಲಿ ಸ್ಕೂಲು, ಕಾಲೇಜು ಹುಡುಕಿ ಸೇರಿಸಿ, ಕ್ಯೂ ನಿಂತು ಅಡ್ಮಿಶನ್ ಮಾಡಿರುತ್ತಾರೆ , ಸಾಲ ಮಾಡಿ ಫೀಸ್ ಕಟ್ಟಿರುತ್ತಾರೆ .ಎಂತೆಂತ ಶ್ರೀಮಂತರೂ, ಕೋಟ್ಯಾಧೀಶ್ವರರು, ರಾಜಕಾರಣಿಗಳು ಹೇಗಾದರೂ  ತಮ್ಮ ಮಕ್ಕಳು ಕೇವಲ ಇಂಜಿನಿಯರ್ ಅನಿಸಿಕೊಳ್ಳಲಿ ಎಂದು ಎಷ್ಟೆಲ್ಲಾ ಲಕ್ಷ ಖರ್ಚುಮಾಡಿ ಸೀಟುಕೊಡಿಸಿರುತ್ತಾರೆ …ಡಾಕ್ಟರ  , ಆಫೀಸೆರ್ಗಳು  ಸ್ವಂತ  ಸಮಯಕ್ಕೆ  ಬೆಲೆಕೊಡದೆ  , ಕತ್ತೆಯಂತೆ  ದುಡಿಯುತ್ತಿರುತ್ತಾರೆ    …
ನಮ್ಮಂತ ಸಾಫ್ಟ್ವೇರ್ ಇಂಜಿನಿಯರ್ ಗೆ laptop ಕೊಟ್ಟಿರುತ್ತಾರೆ , ಇಲ್ಲಿಂದ ಮತ್ಯಾವುದೋ ದೇಶದವರೊಂದಿಗೆ ಸಂಪರ್ಕಿಸಲು ಸಕಲ ಸವಲತ್ತು ಮಾಡಿಕೊಡುತ್ತಾರೆ, ಕಾರು facilities  ನೀಡುತ್ತಾರೆ ..ಆದರೆ ನಾವು 24 *7  ಲಭ್ಯವಿದ್ದು ಪರಿಪೂರ್ಣ ಕೆಲಸದಲ್ಲಿ ತೊಡಗುವಂತಿರಬೇಕು   ಅಷ್ಟೇ ….ಸದಾ ಸಂಪರ್ಕದಲ್ಲಿರಬೇಕು  ..ಮದ್ಯ ರಾತ್ರಿ issue  ಬಂದರು ಎದ್ದು ಬಗೆಹರಿಸಲು  ಸನ್ನದ್ದರಿರಬೆಕು ..ಕೊಟ್ಟ deadline ಒಳಗೆ ಕೆಲಸ ಮುಗಿಸಬೇಕು …. ಜ್ಞಾನಕ್ಕೆ ಸಂಬಳ !!!!!

ಇಲ್ಲಿನ ಪದ್ದತಿಗಳು :ಕೆಲಸ ಮಾಡುವವರ ಜೊತೆ ಮಾತಾಡುವುದೋ ಬೇಡವೋ ಇವರು ನಿರ್ಧಾರ ಮಾಡುತ್ತಾರೆ … affair  ಅನ್ನೋ ನೀಚಕಳಂಕ ಕಟ್ಟಿ ಹಿಂಸಿಸುತ್ತಾರೆ… ಮನೆ ಖಾಲಿ ಮಾಡಿದ್ದಕ್ಕೆ, comapany  ಬದಲಾಯಿಸಿದ್ದಕ್ಕೆ ರಹಸ್ಯ ಕಂಡು ಹಿಡಿಯುತ್ತಾರೆ ….ಯಾವ perspective ಗಳಲ್ಲಿ ಅರ್ಥಮಾಡಿಕೊಳ್ಳೋದು  ಇವುಗಳನ್ನ  ?
ಜೀವನದ ಕುರಿತ perspectiveಗಳಲ್ಲಿ ಏನೇ ವ್ಯತ್ಯಾಸಗಳಿದ್ದರು , ಹೆಂಡತಿಯನ್ನು ಪ್ರೀತಿಸುವುದಕ್ಕೆ , ನಡೆಸಿಕೊಳ್ಳುವುದಕ್ಕೆ ಮನುಷ್ಯತ್ವ, ಭಾವನಾತ್ಮಕತೆಬೇಕು ….ಅಮಾನವೀಯವಾಗಿ, ಆಘಾತಕಾರಿಯಾಗಿ, ಅವಮಾನಕಾರಿಯಾಗಿ, ಆಕ್ರಮಣಕಾರಿಯಾಗಿ  ನಡೆಸಿಕೊಂಡು ಅದನ್ನೇ ನಾವು ಬದುಕುವ ರೀತಿ, ಹೆಣ್ಣು ಬಾಳಬೇಕೆಂದರೆ ಸಹಿಸಿಕೊಳ್ಳಬೇಕಷ್ಟೇ ಎಂದು ನಿರ್ಭಂದಿಸುವುದು ಎಷ್ಟು ಸರಿ !!!!!
ಏನೋ ಪಡೆಯಲು mindgames ಜಲಾಯಿಸುವುದು ಪ್ರೀತಿಯ ನಿಷ್ಠೆಗೆ ವಿರುದ್ದ …

ನನ್ನ ತಾಯಿಗೆ ಹೇಳುತ್ತಿದ್ದೆ …. ಹೆಣ್ಣು ಮಕ್ಕಳು ಯಾಕೆ ಓದಬೇಕು … ಹೋದಮನೆಯಲ್ಲಿ ಕೆಲಸ ಮಾಡಲು encouragement  ಸಿಗುವುದೋ ಇಲ್ಲವೋ ಖಾತ್ರಿ ಇಲ್ಲದಾಗ …
ಘನತೆಯಿಲ್ಲದೇ   ಅವೆಲ್ಲಾ ಹಾದರವಾಗುವಾಗ.. ಎಷ್ಟು ಆರಾಮಾಗಿ ಕಾಲತಳ್ಳುತ್ತ, ಶೋಕಿ ಮಾಡಿಕೊಂಡು  , ದರ್ಪ ತೋರಿಸಿಕೊಂಡು, ಚಾಡಿಹೇಳಿಕೊಂಡು ಗಂಡು  ಹೈಕಲು ಕೆಲಸವಿಲ್ಲದೆ  ಆನಂದದಲ್ಲಿ ತಿರುಗುತ್ತಾರೆ ….ಒಂದಷ್ಟು ಮನೆಕೆಲಸ, makeup , ನಗುನಗುತ್ತ ಓಡಾಡಿಕೊಂಡು , ನಾಟಕ ಮಾಡಿಕೊಂಡು ಬಾಳಬಹುದಲ್ಲ?
….. 20  ಸಾವಿರ ದುಡ್ಡಿಗೆ ಅಷ್ಟೆಲ್ಲ ದಣಿಸಿಕೊಳ್ಳುವ ಬದಲು ಆರಾಮಾಗಿ ಏನು ಮಾಡದೆ ಬಡ್ಡಿ ಎಣಿಸಬಹುದು,   ಬದುಕುವ ಸುಲಭ ವಿಧಾನವಲ್ಲವ ಅದು ?ದುಡಿಯುವುದು ಅಷ್ಟು ಸುಲಭ … ಓದ್ದಿದ್ದೆ ಮುಳುವಾಯಿತಲ್ಲ ನನ್ನ ಪಾಲಿಗೆ ….ನಾನೇನು ತಪ್ಪು ಮಾಡಿದೆ… ನನ್ನ ಬದುಕನ್ನೇ ಬಲಿಹಾಕಿದರು ..ಮಾನಕಳೆದರು … ನೆಮ್ಮದಿ ಅಳಿಸಿದರು..ಹಿಂಸೆ ಮಾಡಿದರು..ಕೇವಲ ನಾಲ್ಕು ಕಾಸಿನ ಅಧಿಕಾರಕ್ಕೆ !!!  

 ಒಂದೇ ಮಾತಿನಲ್ಲಿ ಹೇಳಿದರು  ಏನು ಮಾಡದೆ ಬದುಕುವುದು ಒಂದು ಬದುಕಾ? ನಮಗೆ ನಮ್ಮ ನಂಬಿಕೆಗಳೇ ಇರಲಿ… ದುಡಿದೆ ತಿನ್ನೋಣ ….
… ಆಕೆ ಹಳೆಕಾಲದವಳು… ಆದರು ಎಷ್ಟು ದೃಡವಾಗಿ ಹೇಳುತ್ತಾಳೆ ……ನಾವ್ಯಾರು ಕಾಣದ, ಕೇಳದ ವಿಧಾನ ಅವರದು …

ನಿಜ ಎಷ್ಟೇ ದುಡ್ಡು ಕೊಪ್ಪರಿಗೆಯಲ್ಲಿ ಬಿದ್ದಿದ್ದರು , ಏನೆಲ್ಲಾ ಸವಲತ್ತುಗಳು ಇದ್ದರು ಮನುಷ್ಯನಿಗೆ ಮನೋಸಹಾಜ ಸ್ವಾಂತಂತ್ರ್ಯವಿಲ್ಲದಾಗ, ಘನತೆ ಇಲ್ಲದಾಗ , ಗೌರವ , ಬೆಲೆ ಇಲ್ಲದಾಗ , ಸದಾ ಬೈಗುಳಗಳಿಗೆ, ಇನ್ಯಾರದ್ದೋ ಕಟ್ಟಪ್ಪಣೆಗಳಿಗೆ ಹೆದರಿ  ನಡುಗಬೇಕೆಂದರೆ ಅದು ನೆಮ್ಮದಿ ಇಲ್ಲದ ದಾಸ್ಯದ ಜೀವನ …ಚಿನ್ನದ ಪಂಜರ .. ಕಿರುಕುಳ

ಅವರ perspective  ಬೇರೆ…
ಹೆಣ್ಣುಮಕ್ಕಳು ಗಂಡನ ಮನೆಯಲ್ಲಿದ್ದು ಸಾಮಾಜಿಕವಾಗಿ ಮರ್ಯಾದೆ ಉಳಿಸಿಕೊಳ್ಳಬೇಕೆಂದರೆ ಎಲ್ಲದಕ್ಕೂ ತಲೆತಗ್ಗಬೇಕು  ….
ತಾಳೆ ಕಟ್ಟಿದ ತಕ್ಷಣ ಅಸಹಾಯಕರಾಗಿ ಬಿಡುತ್ತಾರೆ … ಅಸಹಾಯಕತೆಯನ್ನು ಅಂಕೆ ಮಾಡಿಕೊಂಡು ಹೇಗೆ ಬೇಕಾದರೂ ಗಂಡಿನ ಕಡೆಯವರು ಆಡಿಸಬಹುದು …ಅವರ ಮನಸಿನ ಇಚ್ಛೆಯಂತೆ ಪ್ರತಿಯೊಂದು ನಡೆಯಬೇಕು ಅಷ್ಟೇ ..
ಇನ್ನು ಕೆಲವರ perspectiveಗಳಿವೆ , ಕೊಡುವುದೆಲ್ಲವ, ಇರುವುದೆಲ್ಲವ, ಮುಂದಕ್ಕೆ ಬರಬೇಕಾಗಿರುವುದನೆಲ್ಲ ಈಗಲೇ  ಕೊಟ್ಟುಬಿಟ್ಟರೆ , ಅದನ್ನು ನೋಡಿದ ನಂತರ ಅವರಿಗೆ ಅವಳು ಮನೆ ತುಂಬಲು ಬಂದವಳು ಎಂದು ಗ್ಯಾರಂಟಿ ಸಿಗುತ್ತದೆ… ನಿಮ್ಮ ಮಗಳಿಗೆ ಅಲ್ಲವ ಸೇರುವುದು , ಅವಳು ಸುಖವಾಗಿರಲಿ, ಎನ್ನುತ್ತಿರುತ್ತಾರೆ … ಸರಿಯೋ ತಪ್ಪೋ ಹೇಳಲಾಗದ perspective …

ಇನ್ನು ಗಂಡಸರದ್ದು … ಅವರ ಮನಸಲ್ಲಿಯಿರುವ  ಸಿದ್ದ templateನಂತೆ ವರ್ತಿಸಬೇಕು… ಹಾಗೆ ಮಾತಾಡಬೇಕು, ಹಾಗೆ ಕೂರಬೇಕು, ಹಾಗೆ ನಡೆದುಕೊಳ್ಳಬೇಕು …
ಸಾಧ್ಯವ, ಸರಿಯ, comfortable  ಇದ್ದಾಳ ಅವೆಲ್ಲ ಯೋಚನೆಯೇ ಇಲ್ಲ … ಸ್ವತ್ತು ಎನ್ನುವಂತೆ ಉಪಯೋಗಿಸಲು ಶುರು ..
ಕೂತರು ನಿಂತರು ತಪ್ಪು ಹುಡುಕುವುದು ಸುಲಭ ..ದೂರುವುದು ಮತ್ತೂ ಸುಲಭ … ಏನು ಸಿಕ್ಕಲಿಲ್ಲ ಎಂದರೆ ಮಾನಕಳೆಯುವುದು, ಚಾರಿತ್ರ್ಯೇವಧೆಯಂತ ಹೇಯ ಕೃತ್ಯವಿದ್ದೆವಿರುತ್ತದೆ ….  ಮನೆಯಿಂದ ಓಡಿಸಿ ಸರೀಯಿರಲಿಲ್ಲ ಬೇಡ ಎಂದರೆ ಮುಗಿಯಿತು …ಮುಗಿಸಿದಂಗೆ
 ಹೆಣ್ಣು ಮಗಳನ್ನು ಸಂಸಾರದಲ್ಲಿ ಮುಂದುವರೆಯುವಂತೆ ಮಾಡಲು ಏನೇ ಆದರು ಹೆದರಿ,ಎಲ್ಲದಕ್ಕೂ ಪ್ರತೊಯೋಬ್ಬರು  ಬಗ್ಗಬೇಕು..ಗಂಡಿನ ಬೆಲೆಯಿರುವುದೆ ಅಲ್ಲಿ … … ಅವರ perspective …

ಜನರಿಗೆ ಅರ್ಥವಾಗುತ್ತದೆ .. ಗಂಡಿನಕಡೆಯವರದ್ದು  ಏನೇ ತಪ್ಪಿದ್ದರೂ ಅದನ್ನು ತಪ್ಪು ಅಂತ ಎತ್ತಿ ತೋರಿಸಲು ಆಗುವುದಿಲ್ಲ …ಅವರ ಅಹಂಗೆ ನೋವಾಗುತ್ತದೆ ..ನಾವು ತಪ್ಪು ಮಾಡಿದ್ದೇವೆ ಅಂತ ಅವರು ಒಪ್ಪಿಕೊಳ್ಳೋಲ್ಲ… ಹುಡುಗಿಯ ಜೀವನ ಹಾಳಾಗಬಾರದು ಎಂದರೆ ಹಲ್ಲುಕಚ್ಚಬೇಕು…ಅವರು ಪ್ರತಿಪಾದಿಸುವುದನ್ನೇ ಸರಿ ಎನ್ನಬೇಕು, ಹುಡುಗಿಗೆ ಬುದ್ಧಿ ಹೇಳಬೇಕು , ಅವಳನ್ನೇ ಬಲೀ ಕಾ ಬಕ್ರ ಮಾಡಬೇಕು …..ಆಗಲಷ್ಟೆ ಅವಳ ಜೀವನ ಉಳಿಯುತ್ತದೆ …
ಜನರ ಅನುಭವ ದೊಡ್ಡದು , ಯಾರು ಮೂರ್ಖರಲ್ಲ  
ಒಳಗೆ ಅದನ್ನೇ ಮಾಡಿದವರು ಈಚೆ  ಬಂದಾಗ ಮಾತು ತೆರೆದರು…   
ಹರೆಯದ ಹುಡುಗ ಸಣ್ಣಸಣ್ಣ ವಿಷಯಕ್ಕೆ ಹೆಂಡತಿಯನ್ನು ಪೀಡಿಸಿ, ಕಾಡಿಸುತ್ತಾನೆ ಎಂದರೆ ಉದ್ದೇಶ ಸ್ಪಷ್ಟ …ಕಾರಣಗಳು ಅರ್ಥವಾಗಿವೆ …ಹೆಂಡತಿಯನ್ನು ಕಳೆದುಕೊಳ್ಳುವುದು ಹೊಸದಾಗಿ ಮದುವೆಯಾದವರಿಗೆ  ಅಷ್ಟು ಸುಲಭವಲ್ಲ  ..ಅಗತ್ಯದ ಅಭಾವ ಇದ್ದರು ಇರಬಹುದು .ಅವರಿಗೆ ಬೇಕ್ಕಿದ್ದಿದ್ದು ಪಡೆದುಕೊಳ್ಳಲು ಇವೆಲ್ಲಾ ನಾಟಕ ..ಬುದ್ಧಿವಂತರ  ನಾಟಕ ..ಗುದ್ದಾಡಿ  ಆಡುವಂತದಲ್ಲ ಇವು
ಇಡೀ ಜನಾಂಗ ವಿಷಮಯವಾಗಿದೆ … ನಮ್ಮಂತ ಜನ ಇವರಲ್ಲ, ಮಾನ ಮರ್ಯಾದೆ, ಧರ್ಮ, ಕರ್ಮ, ಮನುಷ್ಯತ್ವ,ಪ್ರೀತಿ  ಎಲ್ಲಾ ಬಿಟ್ಟಾಗಿದೆ …. ಎಲ್ಲಾ ಮಟ್ಟಕ್ಕೂ ಇಳಿಯಲು , ಒಬ್ಬರನ್ನೊಬ್ಬರು ಕಾಪಾಡಲು ಅವರು ಸಿದ್ದ , ಇನ್ನೊಬ್ಬರನ್ನು ಮುಗಿಸಲು ಎಲ್ಲ ವಿಧದಲ್ಲೋ ಅವರು ಸಿದ್ದ ..
ಗುದ್ದಾಟ ಕಷ್ಟ , ನಮ್ಮ ಮೈಗೆ ರಾಚುತ್ತದೆ
ಈ ತರದ ಜನರಿಗೆ ಕಾಲವೇ ಮುಳುವಾಗುತ್ತದೆ..ಅನೀತಿ, ಅನ್ಯಾಯಗಳು ಅವರ ಮನೆಯನ್ನೇ ಹೊಡೆಯುತ್ತವೆ …
ನಿನ್ನ ಹಣೆಬರಹ ಸರಿ ಇಲ್ಲ …ತುಂಬಾ ಕಷ್ಟ ಅಂತ ಜಾಗದಲ್ಲಿ ಬದುಕೋದು  
Perspective ಬದಲಾಗಿತ್ತು ಜನರದ್ದು  ..

 ಅವಳೆಂದಳು ಹೆಂಡತಿಯೆನ್ನುವ   ಚೂರೇ ಚೂರು ಸೆಂಟಿಮೆಂಟ್ , ಅಟ್ಯಾಚ್ಮೆಂಟ್ , emotion ಇದ್ದಿದ್ದರೆ ಅವನು ಹಾಗೆಲ್ಲ ಕೀಳಾಗಿ, ಕೊಳಕುಕೊಳಕಾಗಿ   ನಡೆದುಕೊಳ್ಳುತ್ತಿರಲಿಲ್ಲ   .. ಹೀನವಾಗಿ ನಡೆಸಿಕೊಳ್ಳುತ್ತಿರಲಿಲ್ಲ…
ಗೌರವ , ಘನತೆ, ನೆಮ್ಮದಿ , ಆತ್ಮವಿಶ್ವಾಸವಿಲ್ಲದ ಜಾಗದಲ್ಲಿ ಮನುಷ್ಯ ಆರೋಗ್ಯಕರವಾಗಿ ಬದುಕಲು ಸಾದ್ಯವಿಲ್ಲ … ಬದಲಾಯಿಸಲು ಸಾದ್ಯವಿಲ್ಲದ ಉದ್ಧಟ ಜನ …
ಅದೆಲ್ಲಾ ಕೆಟ್ಟಕನಸು ಎಂದು ಮರೆತುಬಿಡು …ನೆನಪು ತೊಳೆದುಕೊಂಡುಬಿಡು  …ಅವಳ perspective

ನಿಜ… .
ಅವನಿಗೆ ನನ್ನ ಮೇಲೆ ಯಾವ emotions ,attachment , ಫೀಲಿಂಗ್ಸ್ ಇಲ್ಲದಿರಬಹುದು…ಅದಕ್ಕಾಗೆ ಹಾಗೆಲ್ಲ ನಡೆದುಕೊಂಡ … ನನ್ನ ಅವನು ಪ್ರೀತಿಸಲಿಲ್ಲ ನಿಜ …. ಆದರೆ ನಾನು ಅವನ್ನನ್ನು ಪ್ರೀತಿಸಿದ್ದು ಸುಳ್ಳಲ್ಲವಲ್ಲ ….ನನ್ನ ಭಾವನೆಗೆ ಕಲ್ಮಶವಿಲ್ಲವಲ್ಲ …ನನ್ನ  innocence ಹಾಳಾಗೋದು  ನನಗೆ  ಬೇಡ ,ನನ್ನ ಭಾವುಕತೆಗೆ ಅಘಾತವಾಗೋದು ನನಗೆ ಬೇಡ  …ಅದಕ್ಕೆ  ನಾನು  ಅವನನ್ನು  ಈಗಲು ಪ್ರೀತಿಸುತ್ತೇನೆ  ..
ಪ್ರತಿ ಮನುಷ್ಯನಲ್ಲೂ ಮನುಷ್ಯತ್ವವಿರಲೇಬೇಕು…. ಅದಿಲ್ಲಾ  ಎಂದರು ಕಡೆಪಕ್ಷ ಅಗತ್ಯಗಳು ಇದ್ದೇ ಇರುತ್ತವೆ . ..ಯಾವ ಮನುಷ್ಯನು ಧೀರ್ಘವಾಗಿ ಒಂಟಿತನ, ಏಕಾಂಗಿತನ ಹೇರಿಕೊಂಡು ಬದುಕಲು ಸಾದ್ಯವಿಲ್ಲಾ…. ..
ಯಾಕೆ ಮನುಷ್ಯ ನೆಮ್ಮದಿಯನ್ನು ಹೊಂದುವ,ನೆಮ್ಮದಿಯನ್ನು ನೀಡುವ ಬಗ್ಗೆ ಪ್ರಯತ್ನ ಪಡುವುದಿಲ್ಲ …ದುಡ್ಡೇ ಯಾಕೆ ಮುಖ್ಯವಾಗಿಬಿಡುತ್ತದೆ ..ರಾಗ, ದ್ವೇಷ, ಸೇಡು ಕಾಡುತ್ತದೆ… ಸಾಂಸಾರಿಕ ಜೀವನದ ಉದ್ದೇಶ ಪ್ರೀತಿ ಮತ್ತು ಗೌರವವಾಗಿರದೇ ಏನೇನೋ ಮದ್ಯೆ ಯಾಕೆ  ಬರುತ್ತವೆ ..ಜನರಿಗೆ ತಮ್ಮ ಜವಾಬ್ದಾರಿ, ಕರ್ತವ್ಯ ಯಾಕೆ ಅರ್ತವಾಗೊಲ್ಲಾ ..ಗೆದ್ದು ಏನು ಸಾದಿಸುತ್ತಾರೆ ..ಸೋಲಿಸಿ ಏನು ಪಡೆಯುತ್ತಾರೆ …ಖಾಸಿಗಿತನ ಯಾಕೆ ದೋಚುತ್ತಾರೆ …ಮರ್ಯಾದೆ, ಮಾನ ಕಳೆಯುವ ಹೇಯ ಮಟ್ಟಕ್ಕೆ ಯಾಕೆ ಇಳಿಯುತ್ತಾರೆ ..
ಬದುಕಲು ಬೇಕಿರುವುದು ನೆಮ್ಮದಿ, ಗೌರವ, ಪ್ರೀತಿ , ವಿಶ್ವಾಸ , ನಂಬಿಕೆ ಮತ್ತು ಕೇವಲ ಮೂರು ಕಾಸು
ಇದು ನನ್ನ perspective ಯಾರಿಗೂ ಅರ್ಥವಾಗದ್ದು
 
   

 

 

Leave a comment