ತೆರಣಿಯ ಹುಳ ಸ್ನೇಹದಿಂದ

ಒಂದೇ ಬದಿಗೆ ಕೂತು ಅಭ್ಯಾಸವಿರದ ನಾನು ಆಯತಪ್ಪುವ ದಿಗಿಲಿಗೆ “ಭುಜದಮೇಲೆ ಕೈ ಇಟ್ಟುಕೊಳ್ಳಲೇನೋ?” ಸಂಕೋಚಿಸುತ್ತ ಕೇಳಿದೆ.ಎಂದಿನಂತೆ ಒಂದು ಕೈ ಗಾಡಿಯ ಬೆನ್ನುಮೂಳೆ ಹಿಡಿದಿತ್ತು .ಸರಕ್ ಎಂದು ಬೀಳುವ ಬ್ರೇಕ್ ಗಳಲ್ಲಿ ಹೊಡೆಯುವ ಡಿಕ್ಕಿ ತಪ್ಪಿಸಲು ಮೊದಲಿನಿಂದಲೂ ಮಾಡಿಕೊಂಡಿದ್ದ ರೂಢಿ.ಅಪ್ಪನು ಗಂಡಸೇ.ಯಾರಿಗೂ ಮುಜುಗರವಾಗಬಾರದಿತ್ತಲ್ಲ!
ನಾವಿಬ್ಬರು ಪ್ರೇಮಿಗಳಿರಬೇಕು ಎನ್ನುವ ಗುಮಾನಿಯ ಕಿಡಿಗಣ್ಣಲ್ಲೇ ಅಸೂಯೆ ಸುರಿಸುತ್ತ ಪಕ್ಕದ ಗಾಡಿಯವನು ನೋಡುತ್ತಿದ್ದ.ಸಿಗ್ನಲ್ನಲ್ಲಿ ನಿಂತಿದ್ದ ಮತ್ತೊಬ್ಬ ಬೈಕ್ ನವನು ಮಾತ್ರ ನಮ್ಮಿಬ್ಬರ ಕೆಮಿಸ್ಟ್ರಿಯಲ್ಲಿ ಅಂತದ್ದೇನು ಕಂಡುಬರುತ್ತಿಲ್ಲ ಎನ್ನುವ ಖಾತ್ರಿಯಿಂದಲೋ,ಪ್ರೇಮಿಗಳು activaಲಿ ತಿರುಗಲ್ಲ ಎನ್ನುವ ಸುಪ್ತಪ್ರಜ್ಞೆಯ ತಿಳುವಳಿಕೆಯಲ್ಲೋ ಒಂದೆರಡು ಬಾರಿ ಹೆಲ್ಮೆಟ್ ತೆಗೆದು ಮುಖದರ್ಶನ ಮಾಡಿಸಿ,ಲೈಟ್ ಆಗಿ ಶಿಳ್ಳೆಹಾಕುತ್ತ ಲೈನ್ ಹೊಡೆಯುತ್ತಿದ್ದ.
ಭುಜದ ಎತ್ತರಕ್ಕೆ ಕೈನೋಯತೊಡಗುತ್ತಿದ್ದಂತೆ ಹೊಟ್ಟೆಹಿಡಿದು ಕೂರಲ? ಕೇಳೋದು ಹೇಗೆ,ಕೇಳದೆ ಹಾಗೆ ಹಿಡಿಯೋದು ಹೇಗೆ ಚಿಂತಿಸುತ್ತಲೇ ಹೇಗೋ ಒಂದು ಕೇಳಿದೆ.”ಅದ್ಯಾಕೆ ಅಷ್ಟು ತಲೆಕೆಡಿಸಿಕೊಳ್ಳುತ್ತೀಯ, ನಿನಗೆ ಹೇಗೆ ಆರಮಾನೋ ಹಾಗೆ ಕೂತ್ಕೋ” ಅಂದ .ಕೈಯೇನೋ ಹೊಟ್ಟೆಯನ್ನು ಬಳಸಿತು.ಒಂದೇ ಕ್ಷಣ,ಅದ್ಯಾವ ಸಹಿಸದ ಭಯವೋ ಸರ್ರ್ ಅಂತ ಹಿಂತೆಗೆದುಕೊಂಡೆ.ಜೊಂಪೆಜೊಂಪೆಯಾಗಿ ಒಬ್ಬಳೇ ನಗತೊಡಗಿದೆ.ಯಾಕೆ ಅಂತ ಅವನು  ಕೇಳಲಿಲ್ಲ.”ಏನ್ಗೊತ್ತಾ,ನಾನು ಚಿಕ್ಕವಳಾಗಿದ್ದಾಗ ತೂಕಡಿಸುತ್ತಿದ್ದೆ ಅಂತ ಯಾವನೋ ಸನ್ನೆ ಮಾಡಿ ತೋರಿಸಿದನಂತೆ.ಬೆಳೆದೆ ಅಂತ ನನಗೆ ಎಷ್ಟೇ ಅನಿಸಿದರು,ನಮ್ಮಪ್ಪ ಮಗು ಬಿದ್ದೋದ್ರೆ ಅನ್ನೋ ಭಯಕ್ಕೆ ಎಷ್ಟೋವರ್ಷ ಮುಂದುಗಡೆ ನಿಲ್ಲಿಸಿಕೊಂಡೇ ಗಾಡಿ ಓಡಿಸುತ್ತಿದ್ರು.ಆಮೇಲೆ ಒಂದಿನ ನಾನೇ ಗಲಾಟೆಮಾಡಿ ಹಿಂದೆ ಕೂರೋಕೆ ಶುರುಮಾಡಿದೆ.ಡುಮ್ಮಂತ  ಬೆಳೆದುಕೊಂಡಿದ್ದ ಹೊಟ್ಟೆಯನ್ನ ಪುಟ್ಟಪುಟ್ಟ ಕೈಗಗಳಲ್ಲಿ ಸುತ್ತಿ, ಗಟ್ಟಿತಬ್ಬಿ ಬೆಲ್ಟ್ ಮಾಡುತ್ತಿದ್ದೆ “.ಅಪ್ಪನ ನೆನಪು
ನನ್ನ ಹಸ್ತದಮೇಲೆಹಸ್ತ ಇರಿಸಿ ಒಂದೆರಡುಬಾರಿ ಒತ್ತಡಹಾಕಿ ಕೆಳಗೆಜಾರಿಸಿ  ” ನಮ್ಮ ಅಮ್ಮನು ಹೀಗೆ ಕಣೆ,ಹಿಂದಕ್ಕೆ ಹಿಡಿದಿಡಿದು ಜಗ್ಗುತ್ತಿರುತ್ತಾರೆ”. ಸ್ಪೀಡ್ ಜಾಸ್ತಿಯಾದಾಗ,ಪಕ್ಕದವನು ಗುದ್ದೇಬಿಟ್ಟ ಅನಿಸುವಾಗೆಲ್ಲ, ಅರಿವಿಗೆಬಾರದೆ ಹಿಡಿಕೆ ಗಟ್ಟಿಯಾಗುತ್ತಿದ್ದಾಗ  “ನಿನಗೂ ಭಯಾನೇ”  ಅಂತ ನಗುತ್ತಿದ್ದ  ಅವನು.

ಪಾರ್ಕಿಂಗ್ ಲಾಟ್ ನಲ್ಲಿ ಗಂಟೆಗಂಟೆಗೆ ಏರುವ ಫೀಸ್ ತೆತ್ತಲು ಬಿಲ್ಲ್ಕುಲ್ ಮನಸಿರದೆ ರಸ್ತೆಬದಿಯಲ್ಲೇ ಗಾಡಿ ಒಗೆದುಬರುವ ನಾನು,ರಮ್ಯ ಸುಮ್ಮನೆ ಯಾಕೆಬೇಕು ರಿಸ್ಕ್ ,ಹೋದ್ರೆಹೋಯ್ತು ಗಾಡಿಗಿಂತ ಹೆಚ್ಚಾ ಅಂತ ಉಪದೇಶಿಸುವ  ಇವನು, ರಾಗಿಮುದ್ದೆ ಜೊತೆ ಬಿಸ್ಲರಿಬಾಟಲ್ ಬಂದಂಗೆ!ಸೀಟ್ ಒಳಗೆ ಬಿಟ್ಟಿದ್ದ ವಾಲೆಟ್ ಜ್ಞಾಪಿಸುತ್ತ, ಹಿಂಗೆ ಬರೇ ಕೇರ್ ಲೆಸ್ಸುನಿಂದು, ಹಿಂಗೆ ಮಾಡಿಕೊಂಡೆ ಎಲ್ಲಾ ಆಗಿದ್ದು ಅಂತೇನೋ ಬೈದ…ಇವನು ಬೈಯೋದು, ಹೊಗಳೋದು ಯಾವುದೂ ವ್ಯತ್ಯಾಸವೆನಿಸದೆ ಒಂದೇಸಮನೆ ಸ್ವೀಕರಿಸಿ,ಹಿತವೆನಿಸಿ,ಮತ್ತೆ ಪೆಪೆಪೆ ನಗತೊಡಗಿದೆ.

“ಅಷ್ಟೊಂದು ಕೆಟ್ಟದಾಗಿತ್ತೇನೆ ಅಲ್ಲಿ, ಎಲ್ಲಾ ಸರಿ ಇರಂಗೆ ಕಾಣಿಸುತ್ತಿತ್ತಲ್ಲ ರಮ್ಯಾ?”
ರೇಶಿಮೆ ಗೂಡಿದ್ದಂಗೆ ಕಣೋ ಹೆಣ್ಣುಮಕ್ಕಳ ಬಾಳು.ಒಳಗೆ ಸೇರಿಕೊಂಡ ಹುಳಕ್ಕೆ ಚಿಟ್ಟೆಯಾಗೋ ಕನಸು,ತವಕ.ಸೊಪ್ಪುಹಾಕುವವರಿಗೆ ಹಣ್ಣಾದ ಹುಳವನ್ನ ಗೂಡುಸಮೇತ ಬೇಯಿಸಿ ನೂಲುಸುತ್ತಿಕೊಳ್ಳುವ ಆಸೆ-ಆತುರ.ನೋಡೋರಿಗೆ ಜರತಾರಿ ರೇಶಿಮೆಯ ಗೂಡೊಳಗೆ ಬೆಚ್ಚಗೆ ಮುದುಡಿ ಮಲಗಿದ ಸುಖಚಿತ್ರಣ.ಒಳಗೊಳಗೇ ಸತ್ತಿದ್ದು, ಬೆಂದು, ಕರಗಿ, ಕೊಳೆತದ್ದು ಆಚೆ ಯಾರಿಗೂ  ಕಾಣೋದೆ ಇಲ್ಲ…ಹುಟ್ಟಿದ್ದೇ ಸತ್ತುಸಾಧಿಸಿ ಮೋಕ್ಷಗಳಿಸೋಕೆ ಅಂತ ಚಿಟ್ಟೆಜೀವನಚಕ್ರವನ್ನೇ ತಿರುಚಿ ವಾದಿಸೋ ಮನುಬಳಗ ಇನ್ನೊಂದು ಕಡೆ.extortion ….. ಇನ್ನು   ಏನೇನೋ comparisionಗಳು ಮನದಲ್ಲಿ ಮೂಡಿದರು,ಅವೆಲ್ಲ ಇವನಿಗೆ ಹೇಳಿದರೆ ಅರ್ಥವಾಗದೇ ಕಾವ್ಯವಾಗುತ್ತೆ,ಆಮೇಲೆ ತಲೆಕೆಟ್ಟ ಇವನ ಮುಖವನ್ನ  ಅನುಕಂಪದಿಂದ ನಾನೇ ನೋಡಬೇಕಾಗುತ್ತದೆ ಎನಿಸಿ, “ಊ ಮಗ,ಬೇಜಾನ್ ಟಾರ್ಚರ್ ಇತ್ತು”  ಅಂತಂದು  ಸುಮ್ಮನಾದೆ.

ಸಾಕುಸಾಕೆನಿಸುವಷ್ಟು ನಿರ್ವಾತದಲ್ಲಿ ಮನುಷ್ಯರ ಗುರುತು ಮರೆತೇಹೋಗಿ, ಜಿಗುಪ್ಸೆಗೆ  ಸತ್ತೆಹೋಗುತ್ತೀನೇನೋ  ಅನಿಸೋಕೆ ಶುರುವಾದಾಗಲೆಲ್ಲ  ಮೀಟ್ ಮಾಡೋಣ ಅಂತ  ಎಲ್ಲರನ್ನು ಕರೆಯುತ್ತಿದ್ದೆ.ಕಡೆಗೆ ಬರುತ್ತಿದ್ದವನು ಮಾತ್ರ ಇವನೊಬ್ಬನೇ.
“ನೋಡೋ ಈ ಕುರ್ತಾ,ಚೆನ್ನಾಗಿದ್ಯ ?”
“ಊ ಕಣೆ ಚೆನ್ನಾಗಿದೆ,ಅರಿಸಿನ ನಿನಗೆ ಒಪ್ಪುತ್ತೆ .. ”
” ಮಾಲ್ ಗು ಫ್ಹಾರ್ಮಲ್ ಶರ್ಟ್ ಹಾಕೊಂಡು ಬರ್ತಿಯಲ್ಲೋ,ಒಂದೆರಡು ಟಿ -ಶರ್ಟ್ ಆದರು ತಗೋ..”
“ನನ್ಹತ್ರ ಸಾಕಷ್ಟು ಇದೇ ಕಣೆ,but ಬಟ್ಟೆ ಬಗ್ಗೆ ಅಂತ ಇಂಟರೆಸ್ಟ್ ಇಲ್ಲ.ಅದೇನೋ ಹೇಳ್ತಾರಲ್ಲ  ಡ್ರೆಸ್ಸಿಂಗ್ ಸೆನ್ಸ್ ಅದು ನನಗೆ ಇಲ್ಲ ಮೊದಲ್ಲಿಂದಾನು …”
“ಅಂತಾ ಡ್ರೆಸ್ಸಿಂಗ್ ಸೆನ್ಸ್ ನಂಗೂ ಇಲ್ಲ, ಆದರೆ ಇಂಟರೆಸ್ಟ್?  ಇತ್ತು … ಅವಾಗ …
ಒಂದಿನ ಮನೆಗೆ ಬಂದವರೇ -ಇಂತಾ ಬಟ್ಟೆನೆಲ್ಲ ಹಾಕೊಂಡೋಗೋಕೆ ಬಿಟ್ಟಿದ್ದೀಯಲ್ಲ  ತಾಯಿಯಾದ ನಿನಗೆ ಬುದ್ದಿಬೇಡ್ವಾ ಅಂತೆಲ್ಲ ರಂಪಮಾಡಿ ಬೈದರು ಅಪ್ಪ ….ಬ್ಲಾಕ್ ಪ್ಯಾಂಟ್ ಮೇಲೆ,ಫುಲ್ ಸ್ಲೀವ್ಸ್ , ಕಾಲರ್ ನೆಕ್ ಇದ್ದ ಟಾಪ್ ಕಣೋ ಅದು…  ಅದರಲ್ಲೇನಿತ್ತು ಅಂತ ತಪ್ಪು? ಕಾಲೇಜ್ ನಲ್ಲಿ ಒಳ್ಳೆ compliments ಕೂಡ ಬಿದ್ದಿತ್ತು ಗೊತ್ತಾ…ಅರಿಸಿನ ಬಣ್ಣ, ಬ್ರೈಟ್ ಅಂತೆ! ಅದು ತಪ್ಪು!! ಹಂಗಾದ್ಮೇಲಂತು ಇದ್ದ ಇಂಟರೆಸ್ಟ್ ಕೂಡ ಹೊರಟೋಯ್ತೇನೋ… ಕಾರ್ ತಗೋಳೋವಾಗ ಡಾರ್ಕ್ ಕಪ್ಪು, ಬ್ರೈಟ್ ರೆಡ್ ಅಂದೇ.. ಹೆಣ್ಣುಮಕ್ಕಳು ಇಷ್ಟೊಂದು ಫಾಸ್ಟ್ ಇರಬಾರದು ಅಂತ ಬೈದ್ರು.. ಕಲರ್ ಗು ಫಾಸ್ಟ್ ಸ್ಲೋ ಅಂತ ಸ್ಪೀಡ್ ಇರುತ್ತಾ?ಇವಾಗ ನೋಡು ನನ್ನಿಷ್ಟ,ನನ್ನ ಖುಷಿ ಅಷ್ಟೇ! ಯಾರು ಕೇಳೋರು ಇಲ್ಲ! ಯಾರಿಗೂ ಕೇರ್ ಮಾಡಲ್ಲ….afterall its mylife you know ? ”

ಗೇಣುದ್ದದ ಗಿಡ್ಡ ಬರ್ಮುಡ ಚಡ್ಡಿಹಿಡಿದು ನೋಡಿಕೊಳ್ಳುತ್ತಿದ್ದೆ …
“ಲೇ ಒದೆ ತಿಂತೀಯ, ಮರ್ಯಾದೆಗೆ ಅಲ್ಲೇ ಇಟ್ಟು ಬಾ…”
ಪ್ರತಿಭಟನೆ ಇರಲಿ,ಪ್ರತ್ಯುತ್ತರವು ಇರದೇ ರಾಕ್ ಗೆ ವಾಪಸು ತೂರಿಸಿದೆ.
ಅಯ್ಯೋ ಅನಿಸಿರಬೇಕು,”ಇಂತವೆಲ್ಲ ಎಲ್ಲಿಗೆ ಹಾಕೊಂಡು ಹೋಗ್ತಿಯಾ,ಹೋಗ್ಲಿ ತಗೋ , ಹಾಕೊಂಡ್ ಬಾ ಹೆಂಗೆಕಾಣ್ತೀಯ ನೋಡಿಹೇಳ್ತೀನಿ” ಅಂತ ಜೋಕ್ ಮಾಡೋಕೆ ಟ್ರೈ ಮಾಡಿದ.
ಕುತೂಹಲಕ್ಕೂ ಏನನ್ನು ನೋಡದೆ ಅಷ್ಟು ಅಂಗಡಿ ಸುತ್ತಿದರು ಸುಮ್ಮನೆ ಬರುತ್ತಿದ್ದವನಲ್ಲಿ ಚೂರು ಅಸಮಾಧಾನವಿಲ್ಲಾ.ಪಾಪ ಅನಿಸಿ “ಏನು ಇಲ್ವೇನೋ ತಗೋಳೋದು,ಏನಾದರು ನೋಡೋ” ಅಂದೇ .
“ಎಲ್ಲಾ ಅಮ್ಮಾನೆ ತಂದುಕೊಡ್ತಾರೆ ಕಣೆ, ಯಾವತ್ತು ಒಬ್ಬನೇ ಏನು ತಗೊಂಡಿಲ್ಲ” ಅಂದ.
ನನಗ್ಯಾಕೆ ಕೋಪ ಬರಬೇಕು ಗ಼ೊತ್ತಿಲ್ಲ “ಚಡ್ಡಿನು ಅಮ್ಮನೇ ಕೊಡ್ಸ್ತಾರೆ ಅಲ್ವಾ?”  ಕೊಂಕಾಯಿತು, ಅನಗತ್ಯ ಬಿರುಸಾಯಿತು ನನ್ನ ಮಾತು ..
“ಮೊದಲಿಂದಾನು ಹಂಗೆ ಕಣೇ”  ಓಲೈಸುವಂತೆ ನುಡಿದ …

ಮೂರು ವರ್ಷದ ಕೆಳಗೆ , ಅದೇನೋ  truth and dare  ಅಂತೆ .ನನ್ನಕಡೆ ಬಾಟಲ್ ಬೊಟ್ಟು ಮಾಡಿನಿಂತ್ತಿದ್ದೆ, ನಿನ್ನ ಕ್ರುಶ್ ಯಾರು ಅಂತ ಹಿಡಿದುಕೊಂಡರು. ಅಲ್ಲಿರೋರಲ್ಲಿ ಅಂತಹವರು ಯಾರು ಇರಲಿಲ್ಲ.ಸುಳ್ಳಾದರೂ ಸುಮ್ಮಸುಮ್ಮನೆ ಯಾರ ಹೆಸರಾದರು ಹೇಳಲೇಬೇಕಿತ್ತು.
ಮೂಲೆಯಲ್ಲಿ ಇವನು ತನ್ನಪಾಡಿಗೆ ತಾನು ಕೂತ್ತಿದ್ದ . . ಬ್ರಾಹ್ಮಣರ ಹುಡುಗನ ತರಹ ಬೆಳ್ಳಗೆ ಚೆನ್ನಾಗೇನೋ ಇದ್ದ, ಆದರೆ ಬರೋದು, ಹೋಗೋದು, ಮಾತಿಲ್ಲಕತೆಯಿಲ್ಲ,ಗುಮ್ಮನಗುಸ್ಕ. ಹೇಳುದ್ರೆ ಶತ್ರುಕೂಡ ನಂಬಲ್ಲ ಅನಿಸಿ ಇವನ ಹೆಸರ ಹೇಳಿ ನಕ್ಕಿದ್ದೆ .. ಕೋಪಾನೋ, ಗಾಬರಿನೋ ಮುಖ ಕೆಂಪಗೆಮಾಡಿಕೊಂಡ. ನನಗೆ ಒಳ್ಳೆ ಮಜಾ ಅನಿಸಿತ್ತು.

ಜನರಮಧ್ಯ ಬುದ್ಧಿವಂತಿಕೆ ಪ್ರದರ್ಶಿಸಿ ಗಮನ ಸೆಳೆಯಬೇಕೆಂಬ ತರಾತುರಿ ಇಲ್ಲ, ತಾನು  ಹೇಳೋದೆಲ್ಲ ಒಪ್ಪುವಂತದ್ದೆ ಎನ್ನುವ ಗರ್ವ,ಒಪ್ಪಿಸಿ ಗಿಟ್ಟಿಸಿಕೊಳ್ಳಬೇಕು ಎನ್ನುವ ಹಪಾಹಪಿ ಎರಡು ಇಲ್ಲ.ಬಹುವೇಳೆ ಮಾತ್ತಿಲ್ಲ.ಮುಖವಾಡ ಇಟ್ಟುಕೊಳ್ಳದೆ ಮೌನದ ತೆಳುಪರದೆಯನ್ನಷ್ಟೇ ಮುಂದೆ ಒಡ್ಡಿ, ತಣ್ಣನೆ ಬದುಕನ್ನ ಸುಮ್ಮನೆ ಬದುಕುತ್ತೇನೆ ಎಂಬ ಅಮಾಯಕತೆ.ಮೂಡಿ,ಸ್ವಲ್ಪ ಸೈಕೋ ಅಂತಲೇ ಎಲ್ಲರು ಇವನ ಬಗ್ಗೆ ಹೇಳುತ್ತಿದ್ದದ್ದು… ಯಾರು ಅಷ್ಟಾಗಿ  ಗಮನಿಸುತ್ತಿರಲಿಲ್ಲ.

ಯತ್ತಕಡೆ ತಿರುಗಿಸಿನೋಡಿದರೂ ಅಪ್ಪಅಮ್ಮನ ಒಳ್ಳೆಯ ಮಗ.ಹೆಚ್ಚಗಿನ ಸಂಶೋದನೆ, ಸಾಹಸ ಮಾಡುವವನಂತೆ ಎಂದು ಕಾಣಲಿಲ್ಲ .ಒಳ್ಳೆ ಹುಡುಗರನ್ನ ಮಾತ್ರ ಹತ್ತಿರಕ್ಕೆ ಸೇರಿಸಿಕೊಳ್ಳಬೇಕು ಹೇಳಿಹೇಳಿಯೇ ಕಳಿಸುತ್ತಿದ್ದರು ಮನೆಯಲ್ಲಿ. ಇದ್ದ ಒಂದಿಬ್ಬರು ಸ್ನೇಹಿತರಲ್ಲೇ ಇವನು ಒಬ್ಬ.ಲಿಫ್ಟ್ ನಲ್ಲಿ ಹೋಗೋವಾಗ ಒಂದಿನ ಫೈವ್ ಸ್ಟಾರ್ ಚಾಕಾಲೇಟ್ ಹಿಡಿದು  ವಿಶ್ ಮಾಡಿದ್ದ,ಟೀ ಬ್ರೇಕ್ ನಲ್ಲಿ ಗೆಳತಿ ಕಾಡಿಬೇಡಿ ಗೋಗರೆದರು ಕೊಡದೆ, ಪ್ಯಾರಿಸ್ ಪೆರ್ಫ್ಯೂಮ್ ನ ನನಗೆ ಮಾತ್ರ ಕೊಟ್ಟಿದ್ದ.

ನನಗೆ ಗೊತ್ತಾಗಬೇಕಿದ್ದ ಹುಡುಗ ಇವನ  ಏರಿಯದಲ್ಲೇ ಇದ್ದಿದ್ದಕ್ಕೆ ಮಗ ನೋಡೋ ,ಸ್ವಲ್ಪ ವಿಚಾರಿಸೋಕೆ ಆಗುತ್ತೇನೋ ಅಂತ ಇವನನ್ನೇ ಕೇಳಿದ್ದೆ .. ಮತ್ತದೇ ಮಾತ್ತಿಲ್ಲದ ಕೆಂಪು ಮೌನ.ಕಾರ್ಡ್ ಹಿಡಿದು ಕೂತಾಗ ಏನು ಟೆನ್ಶನ್ ಇತ್ತೋ ಏನೋ,ನಾನೇ  ಉಮ್ಮ್ ಅಂತ್ತಿದ್ದೆ.ಎಲ್ಲಾ ಮುಗಿತ್ತಲ್ಲ,ಈಗ್ಯಾಕೆ ಹೀಗಿದ್ಯ,ಏನು ಪ್ರಯೋಜನ ಬಿಡು ಅಂತೇನೋ ಅಂದ … ಅವನ ಮಾತನ್ನ ಗಮನಿಸುವಷ್ಟು ಪುರುಸೋತ್ತು ನನಗಿರಲಿಲ್ಲ.

ಈಚೀಚೆಗೆ ಇಷ್ಟು ಮಾತು.
“ನನಗೆ ಒಂಟಿಯಾಗಿರೋದೆ ಹೆಚ್ಚು ಇಷ್ಟ ಕಣೆ, ಒಂಟಿ ಪಿಶಾಚಿ ಅಂತಾನೆ ಎಲ್ರು ಅನ್ನೋದು .. ನಿನ್ನ ತರಹ ಫ್ರೆಂಡ್ಸ್ ಫ್ರೆಂಡ್ಸ್ ಅನ್ನಲ್ಲ ನಾನು ..”
“ನನಗೂ  ಅಷ್ಟೇ ಕಣೋ , ಒಂಟಿತನ ರೂಢಿಯಷ್ಟೇ ಅಲ್ಲ ಹೆಚ್ಚೆಚ್ಚು ಇಷ್ಟ ಕೂಡ ಆಗೋಕೆ ಶುರುವಾಗಿದೆ”
ಆದರೆ ಅದು ನಿನ್ನ ಆಯ್ಕೆ, ಇದು ನನ್ನ ಅವಸ್ತೆ !
ನಾವಾಡುವ ಮಾತುಗಳಿಗೆ ಯಾವುದೇ ಹಿನ್ನಲೆ,ಚೌಕಟ್ಟು ಇರೋಲ್ಲ,ಹೆಚ್ಚಿನವೇಳೆ ಅರ್ಥ ಕೂಡಾ ..  ಅಷ್ಟಕ್ಕೂ ಎಲ್ಲಾ ಅರ್ಥಆಗಲೇಬೇಕೆಂದೇನು ಇರೋಲ್ಲ,ಹೇಳಿಕೊಳ್ಳೋದು ಮಾತ್ರ ಮುಖ್ಯ ಮತ್ತು ಪರಮಸುಖ ಕೆಲವೊಮ್ಮೆ.
ತನ್ನworkoholic ಮ್ಯಾನೇಜರ್ ನಿಂದಾಗುವ frustration,ಸೀನಿಯರ್ ಗಳ ತಲೆ ಖಾಲಿತನಗಳಂತದ್ದರಿಂದ ಹಿಡಿದು,ವಿಪರೀತ ವಯಸಿನ ಅಂತರವಿದ್ದ ಅಪ್ಪ, ಆಸ್ತಿಗೋಸ್ಕರ ಅಮ್ಮನನ್ನು  ಕಾಡಿಸಿಪೀಡಿಸಿ,ಕಾಲದಿಂದ ಹಿಂಸಿಸಿದ್ದು,complaintವರೆಗೂ ಹೋಗಿ, ಚಿಕ್ಕಪ್ಪ ಬೆದರಿಸಿ ಸಂಸಾರ ಮಾಡಿಸಿದ್ದು , bigshot ಚಿಕ್ಕಪ್ಪನಮಗ ದುಡ್ಡಿನ ಮದದಲ್ಲಿ accident ಮಾಡಿ ಬಚಾವ್ಆಗಿದು,ಅತ್ತೆಯನ್ನ ಅನುಮಾನಿಸುತ್ತಿದ್ದ ಮಾವ ಕಿಟಕಿಗೆ ಪೇಪರ್ ಅಂಟಿಸಿ,ಬಾಗಿಲಿಗೆ   ಬೀಗಹಾಕಿಕೊಂಡು ಹೋಗುತ್ತಿದ್ದದ್ದು,ಇವನ ತದ್ವಿರುದ್ದದಂತಿರುವ ತಮ್ಮ ವಿಪರೀತ ಫ್ಯಾಶನಬಲ್ ಆಗಿರೋದು ಇಂತವೆಲ್ಲ ಹೇಳುತ್ತಿರುತ್ತಾನೆ . ಅಮ್ಮ ಮ್ಯಾಗಿ ಮಾಡುತ್ತಿರುವ ಫೋಟೋತೋರಿಸಿ,ಗಂಡಸರು ಯಾಕೆ ತಮ್ಮನ್ನು ನಂಬಿಬರೋ ಹೆಣ್ಣುಮಕ್ಕಳನ್ನು  ಸರಿಯಾಗಿ  ನೋಡಿಕೊಳ್ಳೋಲ್ಲ ಅಂತ ಮರಗುತ್ತಾನೆ.,ಇನ್ಯಾರ ಮೇಲು ನನಗೆ ಅಟ್ಯಾಚ್ಮೆಂಟ್ ಇಲ್ಲ, ಅಮ್ಮನ್ನನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅಂತಾನೆ.ನಾನು  ಸಹ ಯಾವುದೇ ಪೂರ್ವಭಾವಿ ತಯಾರಿ ಇಲ್ಲದೆ ಸರಾಗವಾಗಿ ಬದುಕಿನ ಏರುಪೇರುಗಳನ್ನು, ಗೋಳುಗಳನ್ನೂ ಹೇಳುತ್ತಿರುತ್ತೇನೆ. .. ಸಿಂಪತಿ ಸಂಪಾದಿಸಿಕೊಳ್ಳಬೇಕೆಂಬ ಪ್ರಯಾಸವಿಲ್ಲ,ಸಂತೈಸಿಕೊಳ್ಳಬೇಕೆಂಬ ಅರಿವು ಮತ್ತು ಜರೂರತ್ತು ಇಬ್ಬರಲ್ಲೂ ಇಲ್ಲ.
ಅನಿಸುತ್ತದೆ ಒಮ್ಮೊಮ್ಮೆ ಎಲ್ಲರಿದ್ದು ನಾವೆಷ್ಟು ಒಂಟಿ . ಯಾರು ಇಲ್ಲ ಅಂದಾಗಲು ನಮ್ಮ ಆಯ್ಕೆ ಮಾಡಲಾಗದ ನಾವೆಷ್ಟು ಬಂಧಿ.

ಕಿರಣ ಬಂದ film ಗೆ ಹೋಗೋಣ ಅಂದಿದ್ದಕ್ಕೆ ಟೈಮ್ ಇಲ್ಲ ಅಂತ ಎಗರಾಡಿದ , ಬರ್ಗರ್ ಗೆ ಎರಡನೆ ಕೆಚಪ್  ಅಗತ್ಯಬಿದ್ದಾಗ ನೀನೆ ಹೋಗಿತಗೊಳ್ಳೇ ಅಂದ, ಮತ್ತೊಂದು fries order ಮಾಡುವಾಗ ಹೀಗೆ ತಿಂದರೆ ತೂಕಎಲ್ಲಿ ಇಳಿಯುತ್ತೆ ಅನ್ನೋ ಕಟುಸತ್ಯವನ್ನ ಒಮ್ಮಲೆ ರಾಚಿದ , ಹುಡುಗಿಯರೊಂದಿಗೆ ಶಾಪಿಂಗ್ ಮಾಡಲು ತನ್ನಲ್ಲಿ ತಾಳ್ಮೆಯಿಲ್ಲ ಅಂತ ಗುಡುಗಿದ, ಕನಸುಸುರಿದು ಕಣ್ಣುತುಂಬಿಸಿಕೊಂಡು ಹೇಳಿದ ನನ್ನ tour trip ಪ್ಲಾನ್ ಗಳನ್ನ ಕಡೆಗಣ್ನಿಂದ ನೋಡಿ ನಿರ್ಧಾಕ್ಷಿಣ್ಯವಾಗಿ ತೆಗೆದು ಬಿಸಾಕಿದ , ಗೋಳು ಹೆಚ್ಚಾಯ್ತು ಎನಿಸಿದಾಗ ಟಾಪಿಕ್ ಚೇಂಜ್ ಮಾಡೆಲೇ ಅಂತ ಮುಖಸಿಂಡರಿಸಿಕೊಂಡ …
ಇವನ ಜೊತೆ ಎಷ್ಟು comfortzone ಇತ್ತು ಅನ್ನೋದು ಅಲ್ಲಿನವರೆಗು ಗೊತ್ತಾಗಿರಲಿಲ್ಲ.
kfc chicken ಕಡೆಗೆ ಪೆಟ್ರೋಲ್ ವರೆಗೂ,ಮನೆಯವನೇನೋ ಅನ್ನೋಂಗೆ ಕೇಳೋದಕೆ ಮುಂಚೆ ಜೇಬಿಂದ ತೆಗೆದುಕೊಡುತ್ತಿದ್ದ.ಎಲಿವೇಟರ್ ಹತ್ತೋವಾಗ ಇಳಿಯೋವಾಗ ಮುಟ್ಟದೇ ಹಿಂದೆಯಿಂದ ಒಂದು ಕೈಅಡ್ಡ  ಇಟ್ಟುಕೊಳ್ಳುತ್ತಿದ್ದ,ಸಿನಿಮಾದ ಉದ್ದಕ್ಕೂ  popcorn  coke ಸಪ್ಲೈ ಮಾಡಿ ಇನ್ನು ಏನಾದರು ಬೇಕಾ ಅಂತ ಕೇಳುತ್ತಿದ್ದ,ನಾನೇ ಸಾಕಾಗಿ ಮನೆಗೆ ಹೋಗೋಣ ಅನ್ನುವವರೆಗೂ ಕೂತು ಮೊಳೆಹೊಡೆಸಿಕೊಳ್ಳುತ್ತಿದ್ದ,ತಪ್ಪದೆ ಹಬ್ಬಕ್ಕೆ ದೇವರು ಒಳ್ಳೇದು ಮಾಡಲಿ   ಅಂತ ಹಾರೈಸುತ್ತಿದ್ದ. ಎಂದಿನಂತೆ ನಾನು ಇವನನ್ನು ಗಮನಿಸಿಯೇ ಇರಲಿಲ್ಲ ..
ಹೀಗೆ ಇರಬೇಡವೇ ಮದುವೆ ಆಗೇ ಅಂತ ಫರ್ಮಾನುಹೊರಡಿಸಿ,ಘನಘೋರವಾಗಿ ಕಿರಣನ ಜೊತೆ ಚರ್ಚಿಸಿ ನಾವೇ ಒಂದು ಹುಡುಗನ್ನನ್ನುನೋಡಿ ಮದುವೆ ಮಾಡೋಣ ಅನ್ನೋವರೆಗೂ ನಿರ್ಣಯ ತೆಗೆದುಕೊಂಡು ಜವಾಬ್ದಾರಿ ಹೊತ್ತಿಕೊಂಡ … ಕಿರಣನ ಪ್ರತಿಕ್ರಿಯೆಗಳಿಗೆ ನಾನು ತಲೇನೆ ಕೆಡಿಸಿಕೊಂಡಿಲ್ಲದ್ದಿದ್ರು,ಬೇಜಾರಾಯ್ತೇನೋ ಅನ್ನುವ ಕಳಕಳಿಯಲ್ಲಿ  ಫಿಲಂರಿವ್ಯೂ  ಚೆನ್ನಾಗಿರಲಿಲ್ಲ  ಕಣೆ , ಇನ್ನೊಂದು  ದಿನ ಬೇರೆ ಪಿಕ್ಚರ್ ಗೆ ಹೋಗೋಣ, tripಗೆ ಕಿರಣನ್ನನ್ನ ಒಪ್ಪಿಸುತ್ತೇನೆ ಅಂತೆಲ್ಲ ಸಮಾಧಾನ ಮಾಡುತ್ತಾ ಬರುತ್ತಿದ್ದವನು  ರಸ್ತೆ ದಾಟುವಾಗ ಅಷ್ಟು ಸುಲಲಿತವಾಗಿ  ಕೈ ತೆಗೆದುಕೊಂಡು ಭದ್ರವಾಗಿ ಅಮುಕಿ ಹಿಡಿದಾಗಲೇ ಪ್ರೀತಿಯಲ್ಲಿ ಸ್ನೇಹವಿರಬೇಕೆಂದು ಪ್ರತಿಪಾದಿಸುತ್ತ ಉಳಿದ್ದಿದ್ದವಳಿಗೆ,ಇಷ್ಟು ದಿನ ಗಮನಿಸದೆ ಉಳಿದ್ದಿದ್ದ  ಸ್ನೇಹದಲ್ಲಿನ  ಪ್ರೀತಿ  ಮೊದಲಬಾರಿ ವಿಶೇಷವಾಗಿ ಅನುಭವಕ್ಕೆ ಬಂತು.

ಸ್ನೇಹದಲ್ಲಿನ ಪ್ರೀತಿ

ಒಂದು ಬದಿಗೆ  ಕೂತು ಅಭ್ಯಾಸವಿರದ   ನಾನು  ಆಯ ತಪ್ಪುವ  ದಿಗಿಲಿಗೆ ” ಭುಜದಮೇಲೆ ಕೈ ಇಟ್ಟುಕೊಳ್ಳಲೇನೋ ?” ಸಂಕೋಚಿಸುತ್ತ ಕೇಳಿದೆ . ಎಂದಿನಂತೆ ಒಂದು ಕೈ ಗಾಡಿಯ ಬೆನ್ನುಮೂಳೆ   ಹಿಡಿದಿತ್ತು .ಸರಕ್ ಎಂದು ಬೀಳುವ ಬ್ರೇಕ್ ಗಳಲ್ಲಿ ಹೊಡೆಯುವ ಡಿಕ್ಕಿ ತಪ್ಪಿಸಲು ಮೊದಲಿನಿಂದಲೂ  ಮಾಡಿಕೊಂಡಿದ್ದ ರೂಢಿ ಅದು.ಅಪ್ಪನು  ಗಂಡಸೇ .ಯಾರಿಗೂ ಮುಜುಗರವಾಗಬಾರದಿತ್ತಲ್ಲ!

ನಾವಿಬ್ಬರು ಪ್ರೇಮಿಗಳಿರಬೇಕು ಎನ್ನುವ ಗುಮಾನಿಯ ಕಿಡಿಗಣ್ಣಲ್ಲೇ ಅಸೂಯೆ ಸುರಿಸುತ್ತ ನೋಡುತ್ತಿದ್ದ ಪಕ್ಕದ ಗಾಡಿಯವನು. ಸಿಗ್ನಲ್ ನಲ್ಲಿ ನಿಂತಿದ್ದ ಮತ್ತೊಬ್ಬ ಬೈಕ್ ನವನು ಮಾತ್ರ  ನಮ್ಮಿಬ್ಬರ ಕೆಮಿಸ್ಟ್ರಿಯಲ್ಲಿ ಅಂತದ್ದೇನು ಕಂಡುಬರುತ್ತಿಲ್ಲ ಎನ್ನುವ ಖಾತ್ರಿಯಿಂದಲೋ, ಪ್ರೇಮಿಗಳು activaಲಿ ತಿರುಗಲ್ಲ ಎನ್ನುವ ಸುಪ್ತಪ್ರಜ್ಞೆಯ ತಿಳುವಳಿಕೆಯಲ್ಲೋ ಒಂದೆರಡು ಬಾರಿ ಹೆಲ್ಮೆಟ್ ತೆಗೆದು ಮುಖದರ್ಶನ ಮಾಡಿಸಿ , ಲೈಟ್ ಆಗಿ ಶಿಳ್ಳೆಹಾಕುತ್ತ  ಲೈನ್ ಹೊಡೆಯುತ್ತಿದ್ದ . ನಾ ತೊಟ್ಟಿದ್ದ ಗಾಜಿನ ಕನ್ನಡಕದಾಚೆಗಿನ ಪ್ರಪಂಚ ಭಿನ್ನಭಿನ್ನವಾಗಿ ಕಾಣುತ್ತಿದ್ದರೆ,ಪ್ರಪಂಚಕ್ಕೆ  ನಮ್ಮಿಬರ ಸವಾರಿ ಬಣ್ಣಬಣ್ಣವಾಗಿ ಕಾಣುಸುತ್ತಿತ್ತು.

ಭುಜದ ಎತ್ತರಕ್ಕೆ ಕೈ ನೋಯತೊಡಗುತ್ತಿದ್ದಂತೆ ಹೊಟ್ಟೆಹಿಡಿದು ಕೂರಲ? ಕೇಳೋದು ಹೇಗೆ , ಕೇಳದೆ ಹಾಗೆ  ಹಿಡಿಯೋದು ಹೇಗೆ ಚಿಂತಿಸುತ್ತಲೇ ಹೇಗೋ ಒಂದು  ಕೇಳಿದೆ . “ಅದ್ಯಾಕೆ ಅಷ್ಟು ತಲೆ ಕೆಡಿಸಿಕೊಳ್ಳುತ್ತೀಯ, ನಿನಗೆ ಹೇಗೆ ಆರಮಾನೋ ಹಾಗೆ ಕೂತ್ಕೋ ” ಅಂದ .ಕೈಯೇನೋ ಹೊಟ್ಟೆಯನ್ನು ಬಳಸಿ ತಬ್ಬಿತು . ಒಂದೇ ಕ್ಷಣ , ಅದ್ಯಾವ ಸಹಿಸದ ಭಯವೋ  ಸರ್ರ್ ಅಂತ ಹಿಂತೆಗೆದುಕೊಂಡೆ. ಜೊಂಪೆಜೊಂಪೆಯಾಗಿ ಒಬ್ಬಳೇ ನಗತೊಡಗಿದೆ . ಯಾಕೆ ಅಂತ ಅವನು  ಕೇಳಲಿಲ್ಲ  .”ಮಗ ಏನ್ಗೊತ್ತ , ನಾನು ಚಿಕ್ಕವಳಾಗಿದ್ದಾಗ ತೂಕಡಿಸುತ್ತಿದ್ದೆ ಅಂತ ಯಾವನೋ ಸನ್ನೆ ಮಾಡಿ ತೋರಿಸಿದನಂತೆ. ಅವತ್ತೇ ಲಾಸ್ಟ್ ಬೆಳೆದೆ ಅಂತ ನನಗೆ ಎಷ್ಟೇ ಅನಿಸಿದರು ,ನಮ್ಮಪ್ಪ ಮಗು ಬಿದ್ದೋದ್ರೆ ಅನ್ನೋ ಭಯಕ್ಕೆ ಮುಂದುಗಡೆ ನಿಲ್ಲಿಸಿಕೊಂಡೇ  ಗಾಡಿ ಓಡಿಸುತ್ತಿದ್ರು   .ಆಮೇಲೆ ಒಂದು ದಿನ ನಾನೇ ಗಲಾಟೆಮಾಡಿ ಹಿಂದೆ ಕೂರೋಕೆ ಶುರುಮಾಡಿದೆ . ಡುಮ್ಮಂತ  ಬೆಳೆದುಕೊಂಡಿದ್ದ ಹೊಟ್ಟೆಯನ್ನ ಪುಟ್ಟಪುಟ್ಟ ಕೈಗಳೆರಡು ಸುತ್ತಿ,  ಗಟ್ಟಿತಬ್ಬಿಕೊಂಡು ಬೆಲ್ಟ್ ಮಾಡುತ್ತಿದ್ದವು” . ಅಪ್ಪನ ನೆನಪು ನನಗೆ .
ನನ್ನ ಹಸ್ತದ ಮೇಲೆ ಹಸ್ತ ಇರಿಸಿ ಒಂದೆರಡು ಬಾರಿ ಒತ್ತಡಹಾಕಿ ಕೆಳಗೆಜಾರಿಸಿ  ” ನಮ್ಮ ಅಮ್ಮನು ಹೀಗೆ ಕಣೆ,  ಹಿಂದಕ್ಕೆ ಹಿಡಿದು ಹಿಡಿದು ಜಗ್ಗುತ್ತಿರುತ್ತಾರೆ  “.ಸ್ಪೀಡ್ ಜಾಸ್ತಿ ಆದಾಗ , ಪಕ್ಕದವನು ಗುದ್ದೇಬಿಟ್ಟ ಅನಿಸುವಾಗೆಲ್ಲ, ಅರಿವಿಗೆ ಬಾರದೆ  ಹಿಡಿಕೆ   ಗಟ್ಟಿಯಾಗುತ್ತಿದ್ದಾಗ “ನಿನಗೂ ಭಯಾನೇ”  ಅಂತ ನಗುತ್ತಿದ್ದ  ಅವನು.

ಪಾರ್ಕಿಂಗ್ ಲಾಟ್ ನಲ್ಲಿ ಗಂಟೆಗಂಟೆಗೆ ಏರುವ ಫೀಸ್ ತೆತ್ತಲು ಬಿಲ್ಲ್ಕುಲ್ ಮನಸಿರದೆ ರಸ್ತೆಬದಿಯಲ್ಲೇ ಗಾಡಿ ಒಗೆದುಬರುವ   ನಾನು,ಯಾಕೆಬೇಕು ರಿಸ್ಕ್ ರಮ್ಯ  ,ಹೋದ್ರೆ ಹೋಯ್ತು ಗಾಡಿಗಿಂತ ಹೆಚ್ಚಾ ಅಂತ ಉಪದೇಶಿಸುವ  ಇವನು, ರಾಗಿಮುದ್ದೆ ಜೊತೆ ಬಿಸ್ಲರಿಬಾಟಲ್ ಬಂದಂಗೆ!
ಸೀಟ್ ಒಳಗೆ ಬಿಟ್ಟಿದ್ದ ವಾಲೆಟ್ ಜ್ಞಾಪಿಸುತ್ತ,  ನಿಂದು ಹಿಂಗೆ  ಬರಿ ಕೇರ್ ಲೆಸ್ಸು, ಹಿಂಗೆ ಮಾಡಿಕೊಂಡೆ ಎಲ್ಲಾ ಆಗಿದ್ದು  ಅಂತೇನೋ  ಬೈದ …  ಇವನು ಬೈಯೋದು, ಹೊಗಳೋದು ಯಾವುದೂ ವ್ಯತ್ಯಾಸವೆನಿಸದೆ ಎಲ್ಲವೂ  ಹಿತವೆನಿಸಿ ಒಂದೇಸಮನೆ  ಸ್ವೀಕರಿಸುವ ನಾನು ,ಮತ್ತೆ ಪೆಪೆಪೆ ನಗತೊಡಗಿದೆ. ನನ್ನ ಪೆದ್ದುತನ, ಮುಗ್ದತೆ , ಎಚ್ಚರವಿಲ್ಲದ ಸ್ಥಿತಿಗಳನ್ನು  ಬಯ್ಯೋಷ್ಟು ಸಲಿಗೆ ಲಭಿಸಿದೆ ಅವನಿಗೆ. ಮೌನ ಮತ್ತು  ಮಾತು ಎರಡು ಸಹಕರಿಸುತ್ತಿಲ್ಲ ಎನಿಸುವಾಗ ಹೆಚ್ಚಿನ ಸಮಯ  ಸುಮ್ಮನೆ ನಕ್ಕುಬಿಡೋದು  ಕರಗತವಾಗಿದೆ ಈಗೀಗ ನನಗೆ .

“ಅಷ್ಟೊಂದು ಕೆಟ್ಟದಾಗಿತ್ತೇನೆ  ಅಲ್ಲಿ, ಎಲ್ಲ ಸರಿ ಇರಂಗೆ ಕಾಣಿಸುತ್ತಿತ್ತಲ್ಲ ರಮ್ಯಾ?   ”

ರೇಶಿಮೆ ಗೂಡಿದ್ದಂಗೆ  ಕಣೋ ಹೆಣ್ಣುಮಕ್ಕಳ ಬಾಳು . ಒಳಗೆ ಸೇರಿಕೊಂಡ ಹುಳಕ್ಕೆ ಚಿಟ್ಟೆಯಾಗೋ ತವಕ, ಕನಸು . ಸೊಪ್ಪುಹಾಕಿ ಬೆಳೆಸುತ್ತಿರುವವರಿಗೆ ಹಣ್ಣಾದ ಹುಳವನ್ನ  ಗೂಡು ಸಮೇತ  ಬೇಯಿಸಿ ನೂಲುಸುತ್ತಿಕೊಳ್ಳುವ ,ಆಸೆ -ಆತುರ . ನೋಡೋರಿಗೆ ಜರತಾರಿ ರೇಶಿಮೆಯ ಗೂಡೊಳಗೆ ಬೆಚ್ಚಗೆ ಮುದುಡಿ ಮಲಗಿದ ಸುಖ ಚಿತ್ರಣ . ಒಳಗೊಳಗೇ ಸತ್ತಿದ್ದು, ಬೆಂದು, ಕರಗಿ, ಕೊಳೆತದ್ದು ಯಾರಿಗೂ ಆಚೆಗೆ ಕಾಣೋದೆ ಇಲ್ಲ…  ಹುಳ ಹುಟ್ಟಿದ್ದೇ ಸತ್ತುಸಾಧಿಸಿ ಮೋಕ್ಷಗಳಿಸೋಕೆ ಅಂತ  ಜೀವನಚಕ್ರವನ್ನೇ ತಿರುಚಿ ವಾದಿಸೋ ಮನುಬಳಗ extortion ….. ಇನ್ನು   ಏನೇನೋ comparisionಗಳು  ಮನದಲ್ಲಿ  ಮೂಡಿದರು ,ಇವನಿಗೆ ಅವೆಲ್ಲ  ಹೇಳಿದರೆ ಅರ್ಥವಾಗದೇ  ಕಾವ್ಯವಾಗುತ್ತೆ ,  ತಲೆಕೆಟ್ಟ ಇವನ ಮುಖವನ್ನ ಆಮೇಲೆ ಅನುಕಂಪದಿಂದ ನಾನೇ ನೋಡಬೇಕಾಗುತ್ತದೆ ಎನಿಸಿ, “ಹೂ ಮಗ , ಬೇಜಾನ್ ಟಾರ್ಚರ್ ಇತ್ತು”  ಅಂತಂದು          ಸುಮ್ಮನಾದೆ .

ಸಾಕುಸಾಕೆನಿಸುವಷ್ಟು ನಿರ್ವಾತದಲ್ಲಿ ಮನುಷ್ಯರ ಗುರುತು ಮರೆತೇ ಹೋಗಿ, ಜಿಗುಪ್ಸೆಗೆ  ಸತ್ತೆ ಹೋಗುತ್ತೀನೇನೋ  ಅನಿಸೋಕೆ ಶುರುವಾದಾಗಲೆಲ್ಲ  ಮೀಟ್ ಮಾಡೋಣ ಅಂತ ಒಂದೆರಡುಬಾರಿ ಎಲ್ಲರನ್ನು ಕರೆದಿದ್ದೆ . ಕಡೆಗೆ ಬರುತ್ತಿದ್ದವನು ಮಾತ್ರ ಇವನೊಬ್ಬನೇ .
“ನನಗೆ ಒಂಟಿಯಾಗಿರೋದೆ ಹೆಚ್ಚು ಇಷ್ಟ ಕಣೆ, ಒಂಟಿ ಪಿಶಾಚಿ ಅಂತಾನೆ ಎಲ್ರು ಅನ್ನೋದು .. ನಿನ್ನ ತರಹ ಫ್ರೆಂಡ್ಸ್ ಫ್ರೆಂಡ್ಸ್ ಅನ್ನಲ್ಲ ನಾನು ..”
“ನನಗೂ  ಅಷ್ಟೇ ಕಣೋ , ಒಂಟಿತನ ರೂಢಿಯಷ್ಟೇ ಅಲ್ಲ ಹೆಚ್ಚೆಚ್ಚು ಇಷ್ಟ ಕೂಡ ಆಗೋಕೆ ಶುರುವಾಗಿದೆ”
ಆದರೆ ಅದು ನಿನ್ನ ಆಯ್ಕೆ, ಇದು ನನ್ನ ಅವಸ್ತೆ !

“ನೋಡೋ ಈ ಕುರ್ತಾ , ಚೆನ್ನಾಗಿದ್ಯ ?”
“ಊ ಕಣೆ ಚೆನ್ನಾಗಿದೆ , ಅರಿಸಿನ ನಿನಗೆ ಒಪ್ಪುತ್ತೆ .. ”
” ಮಾಲ್ ಗು ಫ್ಹಾರ್ಮಲ್  ಶರ್ಟ್ ಹಾಕೊಂಡು ಬರ್ತಿಯಲ್ಲೋ,ಒಂದೆರಡು ಟಿ -ಶರ್ಟ್ ಆದರು ತಗೋಳೋ  ..”
“ನನ್ಹತ್ರ ಎಲ್ಲಾ ತರದ್ದು ಸಾಕಷ್ಟು ಇದೇ ಕಣೆ, but ಬಟ್ಟೆ ಬಗ್ಗೆ ಅಂತ ಇಂಟರೆಸ್ಟ್ ಇಲ್ಲ , ಅದೇನೋ ಹೇಳ್ತಾರಲ್ಲ  ಡ್ರೆಸ್ಸಿಂಗ್ ಸೆನ್ಸ್ ಮೊದಲಿನಿಂದಾನು ಅದು ನನಗೆ ಇಲ್ಲ…”

“ಅಂತಾ ಡ್ರೆಸ್ಸಿಂಗ್ ಸೆನ್ಸ್ ನಂಗೂ ಇಲ್ಲ, ಆದರೆ ಇಂಟರೆಸ್ಟ್ ? ಇತ್ತು … ಅವಾಗ …
ಒಂದಿನ ಮನೆಗೆ ಬಂದವರೇ -ಇಂತಾ ಬಟ್ಟೆನೆಲ್ಲ ಹಾಕೊಂಡು ಈಚೆ ಹೋಗೋಕೆ  ಬಿಟ್ಟಿದ್ದೀಯಲ್ಲ  ತಾಯಿಯಾದ ನಿನಗೆ ಬುದ್ದಿಬೇಡ್ವಾ ಅಂತೆಲ್ಲ  ರಂಪಮಾಡಿ ಬೈದರು ಅಪ್ಪ ….ಬ್ಲಾಕ್ ಪ್ಯಾಂಟ್ ಮೇಲೆ , ಫುಲ್ ಸ್ಲೀವ್ಸ್ , ಕಾಲರ್ ನೆಕ್ ಇದ್ದ ಟಾಪ್ ಕಣೋ ಅದು   … ಕಾಲೇಜ್ ನಲ್ಲಿ ಒಳ್ಳೆ compliments ಕೂಡ ಬಿದ್ದಿತ್ತು ಗೊತ್ತಾ…   ಅದರಲ್ಲೇನಿತ್ತು ಅಂತ ತಪ್ಪು … ಅರಿಸಿನ  ಬಣ್ಣ ಬ್ರೈಟ್ ಅಂತೆ ಅದು ತಪ್ಪು!! ಅಪ್ಪ ಆಫೀಸಿಂದ ಮನೆಗೆ ಬರೋ ಮುಂಚೆ timetable ಇರುತ್ತಿದ್ದ  ದಿನ ನೋಡ್ಕೊಂಡೆ ಪ್ಯಾಂಟ್ ಹಾಕ್ತಿದ್ದಿದ್ದು ಅವತ್ತು ಅದೆಂಗೊ  miss ಆಗೋಯ್ತು . ಹಂಗಾದ್ಮೇಲಂತು ಇದ್ದ ಇಂಟರೆಸ್ಟ್ ಕೂಡ ಹೊರಟೋಯ್ತೇನೋ… ಕಾರ್ ತಗೋಳೋವಾಗ   ಡಾರ್ಕ್ ಕಪ್ಪು, ಬ್ರೈಟ್ ರೆಡ್ ಅಂದೇ.. ಹೆಣ್ಣುಮಕ್ಕಳು ಇಷ್ಟೊಂದು ಫಾಸ್ಟ್ ಇರಬಾರದು ಅಂತ ಬೈದ್ರು.. ಕಲರ್ ಗು ಫಾಸ್ಟ್ ಸ್ಲೋ ಅಂತ  ಸ್ಪೀಡ್ ಇರುತ್ತಾ? .. ಇವಾಗ ನೋಡು ನನ್ನಿಷ್ಟ,ನನ್ನ ಖುಷಿ ಅಷ್ಟೇ,ಯಾರು ಕೇಳೋರು ಇಲ್ಲ! ಯಾರಿಗೂ  ಕೇರ್ ಮಾಡಲ್ಲ   ..ಹೆಂಗೆ ಬೇಕಾದ್ರೂ  ಹಾಕೋಬೋದು,ಧೈರ್ಯಾನು ತಗೊಂಡಿದೀನಿ. ನಾನು ಮೌಂಟ್ ಕಾರ್ಮೆಲ್ ಸ್ಟೂಡೆಂಟ್ ಗೊತ್ತಾ…. , …  afterall its ಮೈ life know ? ”

ಗೇಣುದ್ದದ  ಗಿಡ್ಡ ಬರ್ಮುಡ ಚಡ್ಡಿ ಹಿಡಿದು ನೋಡಿಕೊಳ್ಳುತ್ತಿದ್ದೆ …

“ಲೇ ಒದೆ ತಿಂತೀಯ, ಮರ್ಯಾದೆಗೆ ಅಲ್ಲೇ ಇಟ್ಟು ಬಾ…  ?”
ಪ್ರತಿಭಟನೆ ಇರಲಿ , ಪ್ರತ್ಯುತ್ತರವು ಇರದೇ ರಾಕ್ ಗೆ ವಾಪಸು ತೂರಿಸಿ ಬಂದೆ .
ಅವನಿಗೆ ಅಯ್ಯೋ ಅನಿಸಿರಬೇಕು,”ಇಂತವೆಲ್ಲ ಎಲ್ಲಿಗೆ  ಹಾಕೊಂಡು ಹೋಗ್ತಿಯಾ , ಹೋಗ್ಲಿ ತಗೋ , ಹಾಕೊಂಡ್   ಬಾ ಹೆಂಗೆ ಕಾಣ್ತೀಯ ನೋಡಿ ಹೇಳ್ತೀನಿ ” ಅಂತ ಜೋಕೆ ಮಾಡೋಕೆ ಟ್ರೈ ಮಾಡಿದ
“ನಿನ್ನ ಎದುರಿಗೆ ಯಾಕೋ ಹಾಕ್ಕೊಳ್ಳಿ ,  ಹೋಗೋ “..
ಎಷ್ಟು ಅಂಗಡಿ ಸುತ್ತಿದರು ಸುಮ್ಮನೆ ಬರುತ್ತಿದ್ದವನಲ್ಲಿ  ಚೂರು ಅಸಮಾಧಾನವಿಲ್ಲಾ  .. ನನಗೆ ಪಾಪ ಅನಿಸಿತು. ಕುತೂಹಲಕ್ಕೂ ಏನನ್ನು ನೋಡದೆ ಸುಮ್ಮನೆ ಇದ್ದವನ್ನನ್ನ
“ಏನು ತಗೋಳೋದು  ಇಲ್ವೇನೋ, ನೋಡೋ” ಅಂದೇ .

“ಎಲ್ಲಾ ಅಮ್ಮಾನೆ ತಂದುಕೊಡ್ತಾರೆ ಕಣೆ, ನಾನು ಯಾವತ್ತು ಏನು ತಗೋಳಲ್ಲ” ಅಂದ .
“ಚಡ್ಡಿನು ಅಮ್ಮನೇ ಕೊಡ್ಸ್ತಾರೆ  ಅಲ್ವಾ?”  ಕೊಂಕಾಯಿತು ಅನಗತ್ಯ ಬಿರುಸಾಯಿತು ನನ್ನ ಮಾತು ..ನನಗ್ಯಾಕೆ ಕೋಪ ಬರಬೇಕು .ಗ಼ೊತ್ತಿಲ್ಲ
“ಮೊದಲಿಂದಾನು ಹಂಗೆ ಕಣೇ”  ಓಲೈಸುವಂತೆ ನುಡಿದ …
ಮೂರು ವರ್ಷದ ಕೆಳಗೆ , ಅದೇನೋ  truth and dare  ಅಂತೆ .ಬಾಟಲ್ ನನ್ನ ಕಡೆ ಬೊಟ್ಟು ಮಾಡಿ ನಿಂತ್ತಿದ್ದೆ, ನಿನ್ನ ಕ್ರುಶ್ ಯಾರು ಅಂತ ಹಿಡಿದುಕೊಂಡರು. ಅಲ್ಲಿರೋರಲ್ಲಿ ಅಂತಹವರು ಯಾರು ಇರಲಿಲ್ಲ,ಸುಳ್ಳಾದರೂ ಸುಮ್ಮಸುಮ್ಮನೆ ಯಾರ ಹೆಸರಾದರು ಹೇಳಲೇಬೇಕಿತ್ತು.
ಮೂಲೆಯಲ್ಲಿ ಇವನು ತನ್ನಪಾಡಿಗೆ ತಾನು ಕೂತ್ತಿದ್ದ . . ಬ್ರಾಹ್ಮಣರ ಹುಡುಗನ ತರಹ ಬೆಳ್ಳಗೆ ಚೆನ್ನಾಗೇನೋ ಇದ್ದ, ಆದರೆ ಬರೋದು, ಹೋಗೋದು, ಮಾತಿಲ್ಲ ಕತೆಯಿಲ್ಲ, ಗುಮ್ಮನಗುಸ್ಕ. ಹೇಳುದ್ರೆ ಶತ್ರು ಕೂಡ ನಂಬಲ್ಲ ಅನಿಸಿ ಇವನ ಹೆಸರ ಹೇಳಿ ನಕ್ಕಿದ್ದೆ .. ಕೋಪಾನೋ, ಗಾಬರಿನೋ ಮುಖ ಕೆಂಪಗೆ ಮಾಡಿಕೊಂಡ .   ನನಗೆ ಒಳ್ಳೆ ಮಜಾ ಅನಿಸಿತ್ತು.
ಅದಾದಮೇಲೆ ಲಿಫ್ಟ್ ನಲ್ಲಿ ಹೋಗೋವಾಗ ಒಂದಿನ  ಫೈವ್ ಸ್ಟಾರ್ ಚಾಕಾಲೇಟ್ ಹಿಡಿದು  ವಿಶ್ ಮಾಡಿದ್ದ , ಟೀ ಬ್ರೇಕ್ ನಲ್ಲಿ  ಗೆಳತಿ ಕಾಡಿಬೇಡಿ ಗೋಗರೆದರು ಕೊಡದೆ, ಪ್ಯಾರಿಸ್ ಪೆರ್ಫ್ಯೂಮ್ ನ ನನಗೆ ಮಾತ್ರ ಕೊಟ್ಟಿದ್ದ. .  ಜನರ  ಮಧ್ಯ ಬುದ್ಧಿವಂತಿಕೆ ಪ್ರದರ್ಶಿಸಿ ಗಮನ ಸೆಳೆಯಬೇಕೆಂಬ ತರಾತುರಿ ಇಲ್ಲ, ತಾನು  ಹೇಳೋದೆಲ್ಲ   ಒಪ್ಪುವಂತದ್ದೆ ಎನ್ನುವ ಗರ್ವ , ಒಪ್ಪಿಸಿ ಗಿಟ್ಟಿಸಿಕೊಳ್ಳಬೇಕು ಎನ್ನುವ  ಹಪಾಹಪಿ ಇಲ್ಲ . ಬಹುವೇಳೆ ಮಾತ್ತಿಲ್ಲ . ಮುಖವಾಡ ಇಟ್ಟುಕೊಳ್ಳದೆ ಮೌನದ ತೆಳು ಪರದೆಯನ್ನಷ್ಟೇ  ಮುಂದೆ ಒಡ್ಡಿ, ತಣ್ಣನೆಯ ಬದುಕು ಎಂಬ   ಅಮಾಯಕತೆ. ಯಾರು ಗಮನಿಸದೆ ಹೋದ್ದದ್ದು ಅವವೇ ಕಾರಣಕ್ಕೆ ಇದ್ದರು ಇರಬಹುದು  . ನನಗು ಅಷ್ಟೇ ಈ  ತೋರ್ಪಡಿಕೆ   ,ಕೃತಕ ಮುಖವಾಡ  ಮೊದಲಿಂದಲೂ  ಅಸಹ್ಯ ರೇಜಿಗೆ  ಆದರೆ ಬಣ್ಣ ಇಷ್ಟ ಬಿರುಸು  ಇಷ್ಟ  ..
ಯಾರು ಅಷ್ಟಾಗಿ  ಗಮನಿಸುತ್ತಿರಲಿಲ್ಲ.ಮೂಡಿ , ಸ್ವಲ್ಪ ಸೈಕೋ ಅಂತಲೇ ಎಲ್ರು ಅವನ ಬಗ್ಗೆ ಹೇಳುತ್ತಿದ್ದದ್ದು  … ಆದರು ಮೂಡ್ ಸರಿ ಇದ್ದಾಗ ಇವನು ಮಾಡುವ ಜೋಕ್ ಗಳನ್ನ ಸಕ್ಕತ್ತು ಎಂಜಾಯ್ ಮಾಡ್ತಿದ್ವಿ . ನನಗೆ ಗೊತ್ತಾಗಬೇಕಿದ್ದ ಹುಡುಗ ಇವನ  ಏರಿಯದಲ್ಲೇ ಇದ್ದಿದ್ದಕ್ಕೆ ಮಗ ನೋಡೋ ,ಸ್ವಲ್ಪ ವಿಚಾರಿಸೋಕೆ ಆಗುತ್ತೇನೋ ಅಂತ ಇವನನ್ನೇ ಕೇಳಿದ್ದೆ .. ಮತ್ತದೇ ಮಾತ್ತಿಲ್ಲದ ಕೆಂಪು ಮೌನ

ಕಾರ್ಡ್ ಹಿಡಿದು ಕೂತಾಗ ಏನು ಟೆನ್ಶನ್ ಇತ್ತೋ ಏನೋ   ,ನಾನೇ  ಉಮ್ಮ್ ಅಂತ್ತಿದ್ದೆ  . ಎಲ್ಲಾ ಮುಗಿತ್ತಲ್ಲ , ಈಗ್ಯಾಕೆ ಹೀಗಿದ್ಯ , ಏನು ಪ್ರಯೋಜನ  ಬಿಡು ಅಂತೇನೋ ಅಂದ … ಅವನ ಮಾತನ್ನ ಗಮನಿಸುವಷ್ಟು ಪುರುಸೋತ್ತು ನನಗಿರಲಿಲ್ಲ ..

ಈಚೀಚೆಗೆ   ಇಷ್ಟು  ಆತ್ಮೀಯ  ಮಾತು  . ತನ್ನ ಮ್ಯಾನೇಜರ್ ನಿಂದಾಗುವ frustration , ಸೀನಿಯರ್ ಗಳ ತಲೆ ಖಾಲಿತನಗಳಂತಹದ್ದರಿಂದ ಹಿಡಿದು,ವಿಪರೀತ  ವಯಸಿನ  ಅಂತರವಿದ್ದ   ಅಪ್ಪ, ಅಮ್ಮನನ್ನು ಆಸ್ತಿಗೋಸ್ಕರ  ಕಾಲದಿಂದ  ಕಾಡಿಸಿಪೀಡಿಸಿ, ಹಿಂಸಿಸಿದ್ದು , complaint ವರೆಗೂ ಹೋಗಿ, ಚಿಕ್ಕಪ್ಪ ಬೆದರಿಸಿ ಸಂಸಾರ ಮಾಡಿಸಿದ್ದು , bigshot ಚಿಕ್ಕಪ್ಪನ ಮಗ  ದುಡ್ಡಿನ   ಮದದಲ್ಲಿ  accident ಮಾಡಿ ಸಿಕ್ಕಾಕಿಕೊಂಡಿದ್ದು   , ಅತ್ತೆಯನ್ನ   ಅನುಮಾನಿಸುತ್ತಿದ    ಮಾವ   ಕಿಟಕಿಗೆ   ಪೇಪರ್   ಅಂಟಿಸಿ   ಬೀಗಹಾಕಿ   ಹೋಗುತ್ತಿದ್ದದ್ದು  ಇಂತವೆಲ್ಲ ಹೇಳಿಕೊಳ್ಳುತ್ತಿರುತ್ತಾನೆ  .  ನಾನು  ಸಹ  ಯಾವುದೇ ಪೂರ್ವಭಾವಿ ತಯಾರಿ ಇಲ್ಲದೆ  ಸರಾಗವಾಗಿ ಬದುಕಿನ ಏರುಪೇರುಗಳನ್ನು, ಗೋಳುಗಳನ್ನೂ ಹೇಳುತ್ತಿರುತ್ತೇನೆ. .. ಸಿಂಪತಿ ಸಂಪಾದಿಸಿಕೊಂಡು  ಸಂತೈಸಿಕೊಳ್ಳಬೇಕೆಂಬ ಅರಿವು ಮತ್ತು ಜರೂರತ್ತು   ಮೊದಲಿನಿಂದಾನು  ನಮ್ಮಲಿ  ಕಂಡುಬಂದಿರಲಿಲ್ಲ     ನಾವಾಡುವ ಮಾತುಗಳಿಗೆ ಯಾವುದೇ ಹಿನ್ನಲೆ,  ಚೌಕಟ್ಟು ಇರೋಲ್ಲ , ಹೆಚ್ಚಿನ ವೇಳೆ ಅರ್ಥ ಕೂಡಾ ..  ಅಷ್ಟಕ್ಕೂ ಎಲ್ಲಾ ಅರ್ಥ  ಆಗಲೇಬೇಕೆಂದೇನು ಇರೋದೇ ಇಲ್ಲ  , ಹೇಳಿಕೊಳ್ಳೋದು ಮಾತ್ರ ಮುಖ್ಯ ಮತ್ತು ಪರಮಸುಖ .

ಇವನ ಜೊತೆ ಎಷ್ಟು comfortzone ಇತ್ತು ಅನ್ನೋದು ಅಲ್ಲಿಗೆ ಕಿರಣ ಬರುವವರೆಗೂ ಗೊತ್ತಾಗಿರಲಿಲ್ಲ  . ಫಿಲಂ ಗೆ ಹೋಗೋಣ ಅನ್ನೋದಕ್ಕೆ ಎಗರಾಡಿದ , ಬರ್ಗರ್ ಗೆ ಎರಡನೆ ಕೆಚಪ್  ಅಗತ್ಯಬಿದ್ದಾಗ ಹೋಗಿ ತಗೊಳ್ಳೇ ಅಂದ, ಮತ್ತೊಂದು ಫ್ರೈಸ್ order ಮಾಡುವಾಗ ಹೀಗೆ ತಿಂದರೆ ತೂಕ ಎಲ್ಲಿ ಇಳಿಯುತ್ತೆ ಅನ್ನೋ ಕಟುಸತ್ಯವನ್ನ ಒಮ್ಮಲೆ ರಾಚಿದ , ಹುಡುಗಿಯರೊಂದಿಗೆ ಶಾಪಿಂಗ್ ಮಾಡಲು ತನ್ನಲ್ಲಿ ತಾಳ್ಮೆಯಿಲ್ಲ ಅಂತ ಗುಡುಗಿದ, ಕಣ್ಣುತುಂಬಿಸಿಕೊಂಡು ಕನಸುಸುರಿದು ಹೇಳಿದ ನನ್ನ tour trip ಪ್ಲಾನ್ ಗಳನ್ನ ಕಡೆಗಣ್ನಿಂದ ನೋಡಿ ನಿರ್ಧಾಕ್ಷಿಣ್ಯವಾಗಿ ತೆಗೆದು ಬಿಸಾಕಿದ , ಗೋಳು ಹೆಚ್ಚಾಯ್ತು ಎನಿಸಿದಾಗ ಟಾಪಿಕ್ ಚೇಂಜ್ ಮಾಡೆಲೇ ಅಂತ ಮುಖಸಿಂಡರಿಸಿಕೊಂಡ …
ಪೆಟ್ರೋಲ್ ಗೆ , kfc chicken ಗೆ  ಮನೆಯವನೇನೋ ಅನ್ನೋಂಗೆ ಕೇಳೋದಕೆ ಮುಂಚೆ ಜೇಬಿಂದ ತೆಗೆದು ಕೊಡುತ್ತಿದ್ದದ್ದು, ಎಲಿವೇಟರ್ ಹತ್ತೋವಾಗ ಇಳಿಯೋವಾಗ ಮುಟ್ಟದೇ ಹಿಂದೆಯಿಂದ ಒಂದು ಕೈಅಡ್ಡ  ಇಟ್ಟುಕೊಳ್ಳುತ್ತಿದ್ದದ್ದು, ಸಿನಿಮಾದ ಉದ್ದಕ್ಕೂ  popcorn  coke ಸಪ್ಲೈ ಮಾಡಿ ಇನ್ನು ಬೇಕಾಬೇಕಾ ಅಂತ ಕೇಳುತ್ತಿದ್ದದ್ದು, ನಾನೇ ಸಾಕಾಗಿ ಮನೆಗೆ ಹೋಗೋಣ ಅನ್ನುವವರೆಗೂ ಕೂತು ಮೊಳೆ ಹೊಡೆಸಿಕೊಳ್ಳುತ್ತಿದ್ದದ್ದು , ಹಬ್ಬಕ್ಕೆ ತಪ್ಪದೆ ಒಳ್ಳೆದಾಗಲಿ ನಿನಗೆ  ಅಂತ ಹಾರೈಸುತ್ತಿದ್ದದ್ದು ಇವನಲ್ಲಿ  ನಾನು ಎಂದಿನಂತೆ ಗಮನಿಸಿಯೇ ಇರಲಿಲ್ಲ ..
ಹೀಗೆ ಇರಬೇಡವೇ ಮದುವೆ ಆಗೇ ಅಂತ ಫರ್ಮಾನು ಹೊರಡಿಸಿ   ,ಘನಘೋರವಾಗಿ    ಕಿರಣನ ಜೊತೆ ಚರ್ಚಿಸಿ ನಾವೇ ಒಂದು ಹುಡುಗನ್ನನ್ನು  ನೋಡಿ ಮದುವೆ  ಮಾಡೋಣ  ಅನ್ನೋ  ನಿರ್ಣಯ   ತೆಗೆದುಕೊಂಡು   ಜವಾಬ್ದಾರಿ   ಹೊತ್ತಿಕೊಂಡ … ನಾನು ಕಿರಣನ ಪ್ರತಿಕ್ರಿಯೆಗಳಿಗೆ  ತಲೇನೆ ಕೆಡಿಸಿಕೊಂಡಿಲ್ಲದ್ದಿದ್ರು , ಬೇಜಾರಾಯ್ತೇನೋ ಅನ್ನುವ ಕಳಕಳಿಯಲ್ಲಿ  ಫಿಲಂ ರಿವ್ಯೂ  ಚೆನ್ನಾಗಿರಲಿಲ್ಲ  ಕಣೆ , ಇನ್ನೊಂದು  ದಿನ  ಹೋಗೋಣ, trip ಗೆ ಕಿರಣನ್ನನ್ನ  ಒಪ್ಪಿಸುತ್ತೇನೆ ಅಂತೆಲ್ಲ ಹೇಳುತ್ತಾ ಬರುತ್ತಿದ್ದವನು      .. ರಸ್ತೆ ದಾಟುವಾಗ ಅಷ್ಟು ಸುಲಲಿತವಾಗಿ  ಕೈ ತೆಗೆದುಕೊಂಡು     ಭದ್ರವಾಗಿ   ಅಮುಕಿ    ಹಿಡಿದು ಎಳೆದೋಯ್ದಾಗಲೇ  ಪ್ರೀತಿಯಲ್ಲಿ  ಸ್ನೇಹವಿರಬೇಕೆಂದು  ಪ್ರತಿಪಾದಿಸುತ್ತ ಉಳಿದ್ದಿದ್ದವಳಿಗೆ  ಇಷ್ಟು ದಿನ  ಗಮನಿಸದೆ  ಉಳಿದ್ದಿದ್ದ  ಸ್ನೇಹದಲ್ಲಿನ  ಪ್ರೀತಿ  ವಿಶೇಷವಾಗಿ   ಮೊದಲಬಾರಿ ಅನುಭವಕ್ಕೆ  ಬಂದಿದ್ದು.

ಗತಿ — ನಾಟಕದ ಅನುಭವ

ಅದು ಬದುಕಿನ ಮುಸ್ಸಂಜೆಯಲ್ಲಿ ಅಸಂಖ್ಯ ಅನುಭವಗಳೊಳಗೆ ಕಾಲು ಇಳಿಬಿಟ್ಟು ಕೂತ ಇಳಿವಯಸ್ಸು. ನೆನಪುಗಳು ಸಾಕ್ಷಿಗಳಾಗಿ, ಸಾಕ್ಷಿಗಳು ಪ್ರಜ್ಞೆಯಾಗಿ ,ಪ್ರಜ್ಞೆ ಜಿಜ್ಞಾಸೆಯಾಗಿ ಅಳಿಯದ ಅಹಂಕಾರ ತಗ್ಗಿದರೂ, ಅರಳಿ ನಿಂತ ಸ್ವಾಭಿಮಾನ ಮುದುಡದೆ ಅಸಹಾಯಕತೆಯೊಂದಿಗೆ ಆತ್ಮಗೌರವ ಬದುಕಿನ ರಣಭೂಮಿಯಲ್ಲಿ ಮುಖಮುಖಿಯಾಗುವ ಕಾಲಘಟ್ಟ.ನಾಡಿ ಮಿಡಿಯುತ್ತಿದೆ, ಹೃದಯ ಬಡಿಯುತ್ತಿದೆ,ದೇಹ ಉಸಿರಾಡುತ್ತಿದೆ ಆದ್ದರಿಂದ ಮನುಷ್ಯ ಇನ್ನು ಸತ್ತಿಲ್ಲ, ಬದುಕ್ಕಿದ್ದಾನೆ .ತನ್ನೆಲ್ಲ ಸ್ಥಿತ ಪ್ರಜ್ಞೆಗಳನ್ನು ಕಳೆದುಕೊಂಡರು ಬಯಾಲಜಿಕಲ್ ಸೈಕಲ್ ಕೆಲಸ ನಿರ್ವಹಿಸುತ್ತಿದೆ ಆದ್ದರಿಂದ ಇನ್ನು ಬದುಕ್ಕಿದ್ದಾನೆ ಎನ್ನುತ್ತಾ ಸತ್ತಂತಿರುವ ಪ್ರಜ್ಞೆ,ಮತ್ತು ಜೀವಂತವಿರುವ ದೇಹದ ಕುರಿತಾಗಿ ವ್ಯಂಗ್ಯದ ಕಿಚ್ಚು ಹೊತ್ತಿಸುತ್ತ ತಾತನ ಪಾತ್ರ ಶುರುವಾಗುತ್ತದೆ .

ಮೂರು ಮೂರು ಮಕ್ಕಳ್ಳಿದ್ದರು ನಿನ್ನದೇ ಪ್ರಪಂಚ ಕಟ್ಟಿಕೊಂಡು ಈ ಕಡೆಗಾಲದಲ್ಲಿ ಒಂಟಿ ಬಾಳು ಆರಿಸಿಕೊಂಡು ಸ್ವತಂತ್ರ ಬದುಕು ಬದುಕಬಲ್ಲೆ ಎನ್ನುವ ಅಹಂಕಾರ ನಿನ್ನದು ಎಂದು ಚೇಡಿಸುತ್ತಾ ಚೇಧಿಸುತ್ತಾ ಮಮ್ಮುಲ ಮರಗುತ್ತಲೇ ತಾತನಿಗೆ ಊಟ ಹೊತ್ತುತರುವುದರಿಂದ ಮೊಮ್ಮೊಗಳ ಪಾತ್ರ ಶುರುವಾಗುತ್ತದೆ .

ಸೇವೆ ಎನ್ನುವ ಹೆಸರಲ್ಲಿ ಮರಣ ಶಯ್ಯೆಯಲ್ಲಿ ಮಲಗಿದವರ ಸಾವನ್ನು ಅಪ್ರಜ್ಞಪೂರ್ವಕವಾಗಿಯೋ ಪ್ರಜ್ಞಾಪೂರ್ವಕವಾಗಿಯೋ ಕಾಯುತ್ತಾ ನಿಲ್ಲುವ ಮಕ್ಕಳು, ಸಂಭಂದಿಕರುಗಳ ತಣ್ಣನೆಯ ಕ್ರೌರ್ಯದ ಕಟುಸತ್ಯದ ಬಿಸಿಗೆ ಸುಟ್ಟುಕೊಳ್ಳಬಯಸದ ತಾತ ತನ್ನಂತೆ ಅವಿರತ ಭಯ ,ತಲ್ಲಣ,ಜಿಗುಪ್ಸೆಗಳಲ್ಲಿ ತೊಳಲಾಡುವ ಸಮಾಜದ ಅಂತ ಎಷ್ಟೋ ಹಿರಿಜೀವಗಳ ಪ್ರತಿನಿಧಿಯಾಗಿ ನಿಲ್ಲುತ್ತಾರೆ .

ರೂಪ,ಆಕಾರ, ಆಕರ್ಷಣೆಗಳ ಬಲುವಳಿಯನ್ನು ಹುಟ್ಟಿನಿಂದ ಹೊತ್ತು ತಂದಿರದ ಕಾರಣಕ್ಕೆ ಅತ್ತ ಕೆಲಸವೂ ಸಿಗದೇ , ಇತ್ತ ಮದುವೆಗೆ ಹುಡುಗನೂ ಸಿಗದಂತಾಗಿ ಐಡೆಂಟಿಟಿ crisis ನಲ್ಲಿ ಬಳಲುತ್ತಾ, ಏರುತ್ತಿರುವ ವಯಸಿನೆದುರು ಹತಾಶಳಾಗುತ್ತ , ಪುರುಷ ಅಹಂಕಾರದ ಕರಿನೆರಳಲ್ಲಿ ನರುಳುತ್ತ ಉಳಿದ ಮೊಮ್ಮಗಳು ವಯಸು ಮೀರಿದರೂ ಮದುವೆಯಾಗದೆ ಉಳಿದ ಹೆಣ್ಣುಮಕ್ಕಳ ತವಕ, ತಾಕಲಾಟಗಳ ಪ್ರತಿನಿಧಿಯಾಗಿ ನಿಲ್ಲುತ್ತಾಳೆ .ಬದುಕಲು ತನಗೂ ಒಂದು ಸ್ವಂತದ ಬದುಕು,ಪ್ರೀತಿಸಲು ಒಲುಮೆಯ ಗಂಡ, ಹಡೆಯಲು ಮುದ್ದಾದ ಮಕ್ಕಳು,ನಡೆಸಲು ಚೆಂದದ ಸಂಸಾರಬೇಕು ಎಂದು ಹಂಬಲಿಸುತ್ತಾಳೆ ,ಕನವರಿಸುತ್ತಾಳೆ.

ಪ್ರಾಣಿ ಪಕ್ಷಿಗಳು ಸೃಷ್ಟಿಗಾಗಿ ಯೋಗ್ಯವಾದುದನ್ನು ಆರಿಸಿಕೊಂಡರೆ ,ಪುರುಷ ಮಾತ್ರ ಸುಖಕ್ಕಾಗಿಯೇ ಯೋಗ್ಯವಾದುದನ್ನು ಕೇಳುತ್ತಾನೆ ಎನ್ನುವ ಇನ್ನಿಲ್ಲದಂತ ಕೋಪ, ಸಿಟ್ಟು,ಅಕ್ರೋಶ ಅವಳದ್ದು . ತನ್ನ ಯೋಗ್ಯತೆಯ ಪರಾಮರ್ಶೆಯ ಅಗತ್ಯವನ್ನು ಎಂದೂ ಅರಿವುಮಾಡಿಕೊಳ್ಳದ ಗಂಡಸಿಗೆ ಹೊಂದಲು ಅನುಭವಿಸಲು ಕುರುಡಿ, ಕುಂಟಿ , ಮುದುಕಿ ಯಾರಾದರು ಆದೀತು , ಆದರೆ ಮದುವೆಗೆ ಮಾತ್ರ ಸುಂದರವಾದ ಹುಡುಗಿಯೇ ಬೇಕು ಎಂದು ಗುಡುಗುತ್ತಾ ,ಜಿಗುಪ್ಸೆಪಟ್ಟುಕೊಳ್ಳುತ್ತಲೇ ವ್ಯವಸ್ತೆಯನ್ನು ಮೊಮ್ಮಗಳು ಜಾಲಾಡುವಾಗ, ತಾತ ತನ್ನ ಬದುಕ ಹರಿವಾಣ ಬಿಚ್ಚುತ್ತಾ ತೆರೆದುಕೊಳ್ಳುತ್ತಾನೆ.
ಇಬ್ಬರ ನಡುವಿನ ಮಾತುಕತೆಯಲ್ಲಿ ಸಂಸಾರದ ಗುಟ್ಟುಗಳು, ಸಂಬಂಧಗಳ ಟೊಳ್ಳುಗಳು, ಕ್ರೌರ್ಯದ ಮುಖವಾಡಗಳು, ಬದುಕಿನ ಹೂರಣಗಳು ಅನಾವರಣಗೊಳ್ಳುತ್ತಾ ಹೋಗುತ್ತವೆ. ಅವರವರದೇ ಬದುಕಿನ ಅಸಹಾಯಕತೆಗಳಿಗೆ, ನೋವುಗಳಿಗೆ ಧ್ವನಿ ಬಂದಂತೆ ಸಂಭಾಷಣೆಗಳು ಬಿರುಸಾಗಿ, ಕದಡದಷ್ಟು ಓಘ ಪಡೆದುಕೊಂಡು, ಉಸಿರು ಬಿಗಿಹಿಡಿಯುವಷ್ಟು ತೀಕ್ಷ್ಣವಾಗಿ ಹಲವು ವಿಷಯಗಳ ಹೊತ್ತ ಕತೆ ದಿಬ್ಬಣ ಹೊರಡುತ್ತದೆ .

ಸಂಸಾರಕ್ಕೆ ಗಂಡ ಹಣ ಒದಗಿಸಬೇಕು, ಹೆಂಡತಿ ಬೇಯಿಸಿ ಹಾಕಬೇಕು ಎನ್ನುವ ತಾತನ ಅಪ್ಪನ ಕಾಲದಿಂದ ಹಿಡಿದು , ಗಂಡ ಹೆಂಡತಿ ಇಬ್ಬರು ಉನ್ನತ್ತ ಹುದ್ದೆಯಲ್ಲಿರುವ ತಾತನ ಮಗನ ಕಾಲದವರೆಗೂ,ಮೊಮ್ಮೊಗಳನ್ನು ಸೇರಿಸಿ ನಾಲ್ಕು ಜನರೇಶನ್ಗಳೇ ಸರಿದು ಹೋದರು ಬದಲಾಗದ ಅಪೇಕ್ಷೆ , ಮನಸ್ತಿತಿಗಳನ್ನು ವಿಶ್ಲೇಷಿಸುತ್ತದೆ .
ನನ್ನ ಸಮ ನೀನಿಲ್ಲ ಎನ್ನುವ ಗಂಡಸಿನ ಅಹಂಕಾರ ಆ ಕಾಲದ್ದಾದರೆ , ನನ್ನ ಸಮ ಅಥವ ಹೆಚ್ಚು ಓದ್ದಿದ್ದೀಯ ಎನ್ನುವ ಗಂಡಸಿನ ಅಸೂಯೆ ಈ ಕಾಲದ್ದು .ಜವಾಬ್ದಾರಿಗಳಿಂದ ನುನುಚಿಕೊಂಡು ಓಡಿ ಹೋಗುವ ಗಂಡ ಎಲ್ಲಾ ಕಾಲಕ್ಕೂ ಇದ್ದೆ ಇದ್ದಾನೆ .ನೀನು ದುಡಿಯುತ್ತೀಯ ಜವಾಬ್ದಾರಿಯನ್ನು ನೀನೂ ಹೊರಬಹುದು ಮತ್ತು ನೀನೆ ಹೊತ್ತುಬಿಡು ಎನ್ನುವ ವರ್ಗಾವಣೆಯಿಂದ ಹಿಡಿದು , ನೆಲದ ಗುಣದಷ್ಟೇ ಬೀಜದ ತಳಿಯೂ ಮುಖ್ಯವಾದರು ಹೆಗ್ಗಣ ಹೆತ್ತಿದ್ದೀಯ ಎಂದು ಹೆಣ್ಣನ್ನೇ ಆರೋಪಿಸುವ ಪುರುಷ ಪ್ರಧಾನ ಇಲ್ಲೂ ಇದ್ದಾನೆ . .

ಭಾರತೀಯ ಕೌಟಮ್ಬಿಕ ವ್ಯವಸ್ತೆಯಲ್ಲಿ ಇಲ್ಲವೇ ಇಲ್ಲ ಎನ್ನಿಸುವಷ್ಟು ತೆಳುವು ಸಾಂಗತ್ಯದ ಪರಿಕಲ್ಪನೆ.ಇಬ್ಬರು ಶಿಕ್ಷಿತರಾದರು ಸಾಂಗತ್ಯವಿಲ್ಲದೆ ಒಬ್ಬನೇ ನಡುಮನೆಯಲ್ಲಿ ಕೂತು ಟೀವಿ ರಿಮೋಟ್ ಬದಲಿಸುವ , ಬಾಲ್ಕನಿಯಲ್ಲಿ ಬಾಟಲು ಹಿಡಿದು ಒಂಟಿ ಕೂರುವ ಗಂಡ ,ಅಡುಗೆ ಮನೆಯ ಕೆಲಸದಲ್ಲಿ,ಉದ್ಯೋಗದ ಒತ್ತಡದಲ್ಲಿ ,ಮಕ್ಕಳ ಮುತುವರ್ಜಿಯಲ್ಲಿ ಒಂಟಿಯಾದ ಹೆಂಡತಿ ಕಾಣಲು ಸಿಗುತ್ತಾರೆ . ನಾಳಿನ ಭವಿಷ್ಯಕ್ಕೆ ಇಂದು ಬದುಕುವುದ ಬಿಟ್ಟು ದುಡ್ಡು ವಸ್ತುಗಳನ್ನು ಶೇಖರಿಸುವಲ್ಲಿ ಪ್ರತ್ಯೇಕವಾಗಿ ಮಗ್ನರಾದ ಅದನ್ನೇ ಸಂಸಾರದ ಸಾರ, ಬದುಕಿನ ಸಾರ ಮಾಡಿಕೊಂಡ ಆಸೆಬುರುಕ ಮನುಷ್ಯರ ವಿಡಂಬನೆ ಇಲ್ಲಿದೆ .

ತಾತ ತನ್ನ ಬಾಲ್ಯಕ್ಕೆ ಮರಳುತ್ತಾನೆ.ಕೋಪ , ಕ್ರೌರ್ಯ , ಹಿಂಸೆಗಳೇ ಮೈದಳೆದಂತ ಅಪ್ಪ ಬಡತನದ ಮನೋರಂಜನೆಗೆ ಮಗನನ್ನೇ ಹಿಡಿದು ಹೊಡೆಯುತ್ತ ಕಸಿದುಕೊಂಡ ಬಾಲ್ಯ, ತನ್ನ ವ್ಯಕ್ತಿತ್ವದಲ್ಲಿ ಬಿತ್ತಿದ ಅಂಜಿಕೆ,ಬದುಕಲ್ಲಿ ಸೇರಿಸಿದ ಅಸಹಾಯಕತೆ ಮಕ್ಕಳ ಮೇಲಿನ ಕಿರುಕುಳದ ಬಗ್ಗೆ ಹೇಳುತ್ತದೆ . ಇಂತ ಭಯಗ್ರಸ್ತ ವಾತಾವರಣದಲ್ಲಿ, ಹೆಣ್ಣಾದ ತಾಯಿಯು ತನ್ನ ಭಾವಾಸಮಾಪ್ತಿಯನ್ನು ಮಗುವಿಗೆ ಹಾಲೂಡಿಸುತ್ತ ಕಂಡುಕೊಂಡು ಮಗನನ್ನು ಬೆಳೆಸುವಲ್ಲಿ ಹೇಗೆ ಮೃದುವಾಗುತ್ತಾಳೆ ಎನ್ನುವ ಸೂಕ್ಷ್ಮ ಒಳನೋಟವಿದೆ .

ಅಷ್ಟರಲ್ಲಿ ಮೊಮ್ಮಗಳು ವಯಸಿಗೆ ಬಂದಾಗಿನಿಂದ ತನ್ನ ತಂದೆಯ ತಮ್ಮನೆನಿಸಿಕೊಂಡ ಚಿಕ್ಕಪ್ಪನಿಂದಲೇ ದೈಹಿಕ ಅತ್ಯಾಚಾರಕ್ಕೆ ಬಲಿಯಾಗಿರುವ ದಾರುಣ ಸತ್ಯ ಬಯಲಾಗುತ್ತದೆ . ತೃಷೆಗೆ ಹೆಣ್ಣನ್ನು ಭೋಗದ ವಸ್ತು ಮಾಡಿಕೊಳ್ಳಲು ಎಲ್ಲ ಕಡೆಗೂ ಹವಣಿಸುವ ಗಂಡಸರು ಶಾಲೆಯ ಮಾಸ್ತರರಲ್ಲಿಯು ಇಣುಕ್ಕುತ್ತಾರೆ .
ನಡೆಯುತ್ತಿರುವ ಅವಘಡವನ್ನು ಮನೆಯವರಿಗೆ ಮನದಟ್ಟು ಮಾಡಿಸಲಾಗದೆ, ಯಾರನ್ನು ನಂಬಿಸಲಾರದೆ ಸತತ 15 ವರ್ಷಗಳ ಕಾಲ ನಿರಂತರ ಅತ್ಯಾಚಾರಕ್ಕೊಳಗಾಗುತ್ತ ,ಮೈಮನಸುಗಳು ಮೈಲಿಗೆಯಾದಂತೆ ಪ್ರತಿಕ್ಷಣ ತೊಳಲಾಡುವ, ನರಳಾಡುವ ಮೊಮ್ಮಗಳ ಸ್ಥಿತಿಗೆ ನೆರವಾಗದೇ ತಟಸ್ತ ನಿಲ್ಲುವ ತಾತನ ಮೌನ ಅಸಹಾಯಕತೆಯ ದ್ಯೋತಕವಷ್ಟೇ ಅಲ್ಲ ಅಹಂಕಾರದ ಧ್ಯೋತಕವೂ ಇರಬಹುದ ಎನಿಸಿ ತೊಡಗುತ್ತದೆ .
ನಾಟಕ ಪೂರ್ತಿ ಪುರುಷಹಂಕಾರದ ವಿಜೃಂಭಣೆಯಾಯಿತೇನೋ ಎನಿಸುತ್ತಿರುವಾಗಲೆ ಸ್ನೇಹಿತನೊಂದಿಗಿನ ಅಕ್ರಮ ಸಂಭಂದಕ್ಕೆ ತಾತನ ಹೆಂಡತಿ ಪಡೆದ ಅಕ್ರಮ ಸಂತಾನ ಆ ಚಿಕ್ಕಪ್ಪ ಎನ್ನುವ ರಹಸ್ಯವನ್ನು ತಾತ ಬಿಚ್ಚಿಟ್ಟಾಗ ಸಂಭಂದಗಳಲ್ಲಿನ ಮೋಸಕ್ಕೆ, ಕ್ರೌರ್ಯಕ್ಕೆ ಯಾರು ಬೇಕಾದರೂ ತುತ್ತಾಗಬಹುದು ಇದು ಯಾರೊಬ್ಬರ ಪರವಾದ ಕತೆಯು ಅಲ್ಲ ಎನಿಸುತ್ತದೆ .
ಜೊತೆನಿಂತು ಆಗುತ್ತಿರುವ ದುರಂತಗಳಿಂದ ಪಾರುಮಾಡು ಎಂದು ಮೊಮ್ಮಗಳು ಎಷ್ಟೇ ಅಂಗಾಲಾಚಿ ಬೇಡಿಕೊಂಡರು ,ಪರಿಪರಿಯಾಗಿ ಗೋಳಾಡಿದರು ಸಹ ಸಂಸಾರದ ಗುಟ್ಟುಗಳನ್ನು, ಸಂಬಂಧಗಳ ಸ್ವಾರ್ಥವನ್ನು ಹೊಟ್ಟೆಯಲ್ಲಿ ಅಡಗಿಸಿಕೊಂಡು, ಅರಗಿಸಿಕೊಂಡು ಅಸಹಾಯಕತೆಗೆ ಕೈ ಚೆಲ್ಲಿ ಇಲ್ಲಿನವರೆಗೂ ಮರ್ಯಾದೆಯಿಂದ ಬದುಕ್ಕಿದ್ದೇನೆ , ಮರ್ಯಾದೆಯಿಂದಲೇ ಸಾಯಲುಬಿಡು ಎನ್ನುತ್ತ ತಾತ ನಿರುಪಾಯನಾಗುತ್ತಾನೆ. ಅಲ್ಲಿಗೆ ಅದು ವ್ಯವಸ್ತೆಯೊಳಗಿನ ಕ್ರೌರ್ಯವನ್ನು ಬೆಳಕಿಗೊಡ್ಡುತ್ತದೆ. ಯಾರದೋ ತಪ್ಪುಗಳು, ಯಾರದೋ ಅಹಂಕಾರ, ಮತ್ಯಾರದೋ ಕ್ರೌರ್ಯ,ಇನ್ಯಾರದೋ ಹಿಂಜರಿಕೆ ದೌರ್ಬಲ್ಯಗಳು ಒಬ್ಬೊಬ್ಬರ ಬದುಕಲ್ಲೂ ಸಮಸ್ಯೆಗಳನ್ನು ಸೃಷ್ಟಿಸಿ ಒಂದಕ್ಕೊಂದು ಕಗ್ಗಂಟಾಗಿ ಬಿಡಿಸಲಾಗದಷ್ಟು ಕ್ಲಿಷ್ಟವಾಗಿ ಬದುಕನ್ನು ಸತಾಯಿಸಲು , ನಿಯಂತ್ರಿಸಲು ತೊಡಗುವ ಸಾಂಸಾರಿಕ ವ್ಯವಸ್ತೆಯ ಚಿತ್ರಣವಿದೆ.
ಮನೆ, ಮಾನ ಮರ್ಯಾದೆ ಎನ್ನುವ ಜಿಜ್ಞಾಸೆಗಳು ದುರಂತಗಳ ಕೆಂಡಕ್ಕೆ ಮುಚ್ಚಿದ ಬೂದಿಯಾಗಿ , ನಾಗರೀಕ ಸಮಾಜದ standard ಗಳು ನಿರ್ಮಿಸುವ ಭಯ, ಮಿತಿಯಲ್ಲಿ ಮನುಷ್ಯತ್ವವನ್ನು ಪ್ರಪಾತಕ್ಕೆ ದೂಡುತ್ತದೆ. ಒಳಗೊಳಗೇ ಮನಸುಗಳು ಬೇಯುತ್ತವೆ .

ಮನೆ ಹೊರಗಡೆ ನಡೆದ ಶೋಷಣೆಗಳನ್ನು, ಹೊರಗಡೆಯವರು ನಡೆಸಿದ್ದು ಎಂದು ಅಸಹ್ಯಿಸಿ ಮರೆಯಬಹುದು , ಆದರೆ ರಕ್ತಸಂಬಂಧ- ಒಳಸಂಬಂಧಗಳಲ್ಲೇ ಬಿಡಿಸಿಕೊಳ್ಳಲಾಗದ, ಉತ್ತರವಿಲ್ಲದ ಇಕ್ಕೆಲಗಳು ಹಿಡಿಚಾಚಿ ರಕ್ತ ಹೀರುವುದು ಎನ್ನುವ ಇಕ್ಕಟಿಗೆ ವಿಷಯ ತಿಳಿದ ಮೇಲೆ ಮೊಮ್ಮಗಳು ತನಗಾಗಿ ತಾನೇ ಎದ್ದು ನಿಲ್ಲುತ್ತಾಳೆ . .ಚಿಕ್ಕಪ್ಪನ ಅಸ್ತಿತ್ವವನ್ನು ಅಕ್ರಮ ಎಂದು ಘೋಷಿಸುತ್ತ ಪುರುಷಹಂಕಾರವನ್ನು ಕೊಲ್ಲುವ ನಿರ್ಣಯಮಾಡುತ್ತಾಳೆ . ವಿರೋಧದ ನಂತರವೂ ಮುಗಿಯದ್ದಿದ್ದ ಅಸಹ್ಯಕ್ಕೆ , ಒಂದು ಹಂತದಲ್ಲಿ ಒಗ್ಗಿ ಹೋದ ,ಶಾಮೀಲಾದ ಪಾಪಪ್ರಜ್ಞೆಗೆ,ಚಿಕ್ಕಪ್ಪ ಹೊರಗಡೆಯವನು ಎಂದು ನಂಬಿಸಿಕೊಳ್ಳುವ ಮೂಲಕ ಮೈಲಿಗೆಗಳಿಂದ ತನ್ನನ್ನೇ ಬಿಡುಗಡೆಗೊಳಿಸಿಕೊಳ್ಳುತ್ತಾಳೆ .
ಇತ್ತ ತಾತ ತನ್ನ ನಿರ್ಲಕ್ಷ್ಯದಿಂದ ಸತ್ತ ಅಸಹಾಯಕ ತಾಯಿಯನ್ನು ಮೊಮ್ಮಗಳಲ್ಲಿ ನೋಡಿ ಪಶ್ಚಾತಾಪ ಪಟ್ಟುಕೊಳ್ಳುತ್ತ , ಬೌಧಿಕ ವ್ಯಾಪಾರ ಮುಗಿಸುವಲ್ಲಿಗೆ ನಾಟಕಕ್ಕೆ ತೆರೆಬೀಳುತ್ತದೆ .

ಅತಿ ಸೂಕ್ಷ್ಮ ಮತ್ತು ಸಂಕೀರ್ಣ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ಮನ ಮಿಡಿಯುವಂತೆ ಬಿಂಬಿಸುವಲ್ಲಿ ಸಂಪೂರ್ಣ ಯಶಸ್ವಿಯಾಗುವ ನಾಟಕ, ಹಿಂದಿನ ಘಟನೆಗಳ ತರ್ಕದಿಂದಷ್ಟೇ ಅದರಷ್ಟಿಗೆ ಅದು ವಿಧಿವತ್ತಾದ ಪರಿಹಾರದ ಮಾರ್ಗವನ್ನು ಬಿಟ್ಟು , ಪಾತ್ರಗಳ ಮಿತಿಯನ್ನು ಮೀರಿಸಿ ಪರಿಹಾರ ಸೂಚಿಸುವಲ್ಲಿ ತೆರೆದುಕೊಂಡಿದ್ದಿದ್ದರೆ ಸಕಾರಾತ್ಮಕ ಮತ್ತು ನೈತಿಕ ಪರಿಣಾಮ ಬೀರುವಲ್ಲಿ ಮತ್ತಷ್ಟು ಯಶಸ್ವೀಯಾಗಬಹುದಾದ ಸಾಧ್ಯತೆ ಇತ್ತು ಎನಿಸುತ್ತದೆ .ಅಮ್ಮನ ನೋವು ಗೊತ್ತೇ ಆಗಲ್ಲ, ಹೆಂಡತಿ ನೋವು ಗೊತ್ತಾಗುತ್ತೆ ಆದರೆ ಅಹಂಕಾರದಲ್ಲಿ ಅರ್ಥ ಮಾಡಿಕೊಳ್ಳೋದಿಲ್ಲ, ಮಕ್ಕಳ ನೋವು ಅರ್ಥವಾಗುತ್ತೆ ಆದರೆ ತೋರಿಸಿಕೊಳ್ಳೋದಕ್ಕೇ ಹೋಗೋದಿಲ್ಲ, ಆದರೆ ಮೊಮ್ಮಕ್ಕಳ ನೋವು ಹಾಗಲ್ಲ, ಅದು ನಮ್ಮದೇ ನೋವು ಅಂತೆನ್ನುವ ತಾತ ಮೊಮ್ಮೊಗಳ ಸಮಸ್ಯೆಗೆ ಪ್ರತಿಕ್ರಿಯಿಸಬೇಕಾಗಿ ಬಂದಾಗ ವಹಿಸುವ ಮೌನ ನಿರಾಸೆ ಮೂಡಿಸುತ್ತದೆ.ಬದುಕು ಹುಳು ಹತ್ತಿದರೆ ಪರವಾಗಿಲ್ಲ ಸತ್ತ ಮೇಲೆ ಹುಳು ಹತ್ತಬಾರದು ಎನ್ನುವ ವಿಡಂಬನೆಯ ತಾತನ ಪ್ರಜ್ಞೆ ಮೊಮ್ಮಗಳ ವಿಷಯಕ್ಕೆ ಎಚ್ಚೆತ್ತುಕೊಂಡು ಸ್ಪಂದಿಸಿ ಕಾರ್ಯ ನಿರ್ವಹಿಸಿದ್ದಿದ್ದರೆ ಮತ್ತಷ್ಟು ಸಶಕ್ತವಾದ ಅಂತ್ಯ ಸಂಭವವಾಗಿರಬಹುದಿತ್ತೇನೋ ಎನಿಸುತ್ತದೆ .

ಖಾಸಗಿ ಕಂಪನಿಯಲ್ಲಿ ಕೆಲಸಗಿಟ್ಟಿಸಲು ಹೆಣ್ನಿಗಿರಬೇಕಾದ ಪ್ರಮುಖ ಮತ್ತು ಏಕೈಕ ಅರ್ಹತೆ ಸೌಂದರ್ಯ , ಐಎಎಸ್ ಅಧಿಕಾರಿಯಾದ ಗಂಡ ಹೆಂಡತಿ ಹೆಚ್ಚಿಗೆ ಓದಿದವಳೆಂದು ಪಡುವ ಅಸೂಯೆ , ಅಂತ ಗಟ್ಟಿ ಹಿನ್ನಲೆಯಲ್ಲಿದ್ದು ಮಗಳಿಗೆ ಗಂಡು ಸಿಗದೇ ಉಳಿದಿದ್ದು, ಬಾಯಿ ಕಳೆದು ವಿವರಿಸಿದಾಗಲು doctor ಸೇರಿದಂತೆ ಯಾರೊಬ್ಬರು ಅತ್ಯಾಚಾರದಂತ ಗಹನ ವಿಷಯವನ್ನು ಪರಿಗಣಿಸದೆ ಹೋದಂತಹ ಸಂಪೂರ್ಣ ಒಪ್ಪಲಾರದ ಸಣ್ಣಪುಟ್ಟ ಅಂಶಗಳು , ತಾತನ ರಕ್ತವಲ್ಲದ್ದಿದ್ದರು ಅಜ್ಜಿಯಲ್ಲಿ ಹುಟ್ಟಿದ ಮಗ ಚಿಕ್ಕಪನೆ ಆಗಬಹುದ ಎನ್ನುವ ಸಾಧ್ಯತೆ , ಹೆಣ್ಣನ್ನು ನೋಡುವ ಪ್ರತಿ ಗಂಡಸಿನ ಕಣ್ಣಲ್ಲೂ ಕಾಮ ಕೆರಳುತ್ತದೆ ಎನಿಸುವಂತಹ ಪರಿಣಾಮಗಳನ್ನು, ಎಲ್ಲರ ಮನೆಗಳಲ್ಲಿ ,ಎಲ್ಲರ ಮನಸಲ್ಲಿ ನಾಜೂಕಾಗಿ ಇರಬಹುದಾದ ಎಷ್ಟೋ ಸಮಸ್ಯೆಗಳನ್ನೂ ಒಂದೇ ಮನೆಯ ಕತೆ ಮಾಡಿ ಅಳವಡಿಸುವ ಶ್ಲಾಘನೀಯ ಪ್ರಯತ್ನದ ಭಾಗವಾಗಿ ಸುಲಭವಾಗಿ ನಿರ್ಲಕ್ಷಿಸಬಹುದು.

ಇಡಿ ನಾಟಕದ ಜೀವಾಳ ಮತ್ತು ಬಂಡವಾಳ ಸಂಭಾಷಣೆ ಮತ್ತು ಪಾತ್ರಧಾರಿಗಳ ರೋಮಾಂಚಕ ಅಭಿನಯ .
ಪುಸ್ತಕವೊಂದನ್ನು ಓದುವಾಗ ಮನದಲ್ಲಿ ಮೂಡುತ್ತಾ ಹೋಗುವ ಚಿತ್ರಣದಂತೆ , ಕೇವಲ ಎರಡು ಪಾತ್ರದಾರಿಗಳ ಮಾತುಗಳು flashback ಕತೆಗಳನ್ನು ಅತ್ಯಂತ ಮನೋಹರವಾಗಿ ನೋಡುಗನ ಮನದಲ್ಲಿ ಮೂಡಿಸುತ್ತ ಹೋಗುತ್ತದೆ . ನಾಟಕದ ರಚನೆಕಾರ ಮತ್ತು ಪಾತ್ರಧಾರಿಯಾದ ಸೇತುರಾಂ ಮತ್ತು ದೀಪರ ಮೇರು ನಟನೆ ಪ್ರತಿ ಕ್ಷಣವೂ ಪ್ರೇಕ್ಷಕ ಸೀಟಿನ ತುದಿಗೆ ಗಟ್ಟಿಕೂರುವಷ್ಟು , ಒಂದು ಮಾತನ್ನು ನಿರ್ಲಕ್ಷಿಸದಷ್ಟು ಮನೋಜ್ಞವಾಗಿ ಮೂಡಿಬಂದಿದೆ . ., ಪಾತ್ರಧಾರಿಯೇ ಪಾತ್ರವಾದಷ್ಟು ತನ್ಮಯತೆಯ ಸಹಜ ಭಾವಾಭಿನಯ,ಧ್ವನಿಯ ಏರಿಳಿತ, ಒಂದು ಪಾತ್ರಧಾರಿ ಪ್ರತಿಕ್ರಿಯಿಸುವಾಗ ಮತ್ತೊಂದು ವಹಿಸುವ ಮೌನ ಕೂಡ ಕಣ್ಣುಗಳಲ್ಲೇ ಮಾತಾಗಿ ಎಷ್ಟು ಜೋರಾಗಿ ಪ್ರತಿಧ್ವನಿಸುತ್ತದೆ ಎಂದರೆ ಅಂತಹ ಅನೂಹ್ಯ ಅನುಭವವನ್ನು ಅಸ್ವಾಧಿಸಿಯೇ ಪಡೆಯಬೇಕು . ಒಂದೇ ಅಂಕದ ಪರದೆ , ಕೆಲವೇ ಕೆಲವು ಪರಿಕರಗಳ ಮಧ್ಯೆ,ಎರಡು ಪಾತ್ರಗಳು ಸೃಷ್ಟಿಸುವ ಕತಾಲೋಕ ರೋಚಕ ಯಶಸನ್ನು ಪಡೆದ ವಿನೂತನ ಪ್ರಯೋಗ.ನಾಟಕದ ಮಧ್ಯೆಯೂ ,ನಾಟಕದ ನಂತರವೂ ಕಾಡುವ ಗಾಢ ಮೌನ ,ಅಂತರಂಗವನ್ನು ಕಲಕುವ ಪ್ರಶ್ನೆಗಳ ಅನುಭಾವಕೆ ರಂಗಾಸಕ್ತರೆಲ್ಲರು ಒಮ್ಮೆ ಯಾದರು ನೋಡಲೇಬೇಕಾದ ನಾಟಕ ಎಂದು ನಿಸಂಕೋಚವಾಗಿ ಹೇಳಬಹುದು.

ಕೆಲವೊಂದನ್ನು ಕಳಕೊಳ್ಳುವುದಕ್ಕೆ, ಮತ್ತು ಹಲವನ್ನು ಪಡೆದುಕೊಳ್ಳುವುದಕ್ಕೆ

ಶೃಂಗೇರಿ :
“ನೋಡಕ್ಕ, ತಾಳಿ ಕಾಲುಂಗುರಗಳನ್ನೆಲ್ಲಾ ಹೇಗೆ ಕಿತ್ತಾಕಿದ್ದಾಳೆ , ಅವನೇನು ಸತ್ತು ಹೋಗಿದ್ದಾನ ?” .
ಬೀಗುತ್ತಿ ಎದುರು, ಸಂಪ್ರದಾಯ ಉಲ್ಲಂಗಿಸಿದ ನಿರ್ಭಿಡೆಯಾಗುತ್ತಾಳೆ ಮಗಳು ಅನ್ನೋ ಭಯ ಧಾವಂತ ಅಮ್ಮನ ಕಾಡಿರಬೇಕು . ಪ್ರತ್ಯುತ್ತರ ನೀಡದೆ ನಿರ್ಲಕ್ಷಿಸಿದ ನನ್ನ ಸಹಾಯಕ್ಕೆ ಪಾಪ ಅವರೇ ಬಂದರು, “ಮತ್ತೇನು ಬಿಡ್ರಿ, ಅವನು ಸತ್ತಂಗೆ ಲೆಕ್ಕ ಇನ್ನು “.ಹೌದು ಅಮ್ಮ , ಕೆಲವೊಂದು ವಿಷಯಗಳಿಗೆ ಬಿಡುಗಡೆ ನೀಡದ ಹೊರತು ನಾವು ಮುಕ್ತರಾಗೋಕೆ ಸಾಧ್ಯವಿಲ್ಲ .ಹಿಂದಿನ ಹೆಜ್ಜೆ ಕೀಳದ ಹೊರತು ಮುಂದಿನ ಹೆಜ್ಜೆ ಊರಲಾಗುವುದಿಲ್ಲ . ನಿಲುಗಡೆಯಿಲ್ಲದ ನಿಲ್ದಾಣವನ್ನು ನನ್ನದೆಂದುಕೊಂಡು ಕಾಯ್ದಷ್ಟು ಪ್ರಯಾಸವೇ ;ಚಲನೆಯೇ ಬದುಕು, ನಡಿಗೆಯೇ ದಾರಿ .
********
ಮಕ್ಕಳಿಗೆ ಶಾರದಾಂಬೆಯ ಸನ್ನಿಧಿಯಲ್ಲಿ ವಿಧ್ಯಾಬ್ಯಾಸ ಮಾಡಿಸಿದರೆ ವಿದ್ಯೆ ತಲೆಗೆ ಹತ್ತುತ್ತಂತೆ .
ಕಾಲೇಜಿನಲ್ಲಿ ಪೂರಾಪೂರ ಓತ್ಲಾ ಒಡ್ಕೊಂಡು, ಅಪ್ಪನ ಆಸ್ತಿಯ ಆಸರೆಯಲ್ಲಿ ಕೆರಿಯರ್ ನ ಹಗುರವಾಗಿ ಮಾಡಿಕೊಂಡು , ಆರಾಮಾವಾಗಿ ಬದುಕುವವರು ಮಕ್ಕಳು ಐಪಿಎಸ್ ಮಾಡಬೇಕು ಎಂದು ಹಂಬಲಿಸುವುದ ಕಂಡರೆ ವಿದ್ಯೆಗೇನೋ ಮಹತ್ವವಿದೆ ಅನಿಸುತ್ತೆ .
ಹಾಗೆ ನಂಬಿದ್ದ ನನಗೆ , ಇವಗೆಲ್ಲ ಕೇವಲ ಗೊಂದಲ .ನಿಜ ನನಗೆ ಬೇಕಿದ್ದಿದ್ದು ಎದೆಯಗಲದ ಪ್ರೀತಿ, ಒಲುಮೆಯ ಜನ, ಬೆಚ್ಚನೆ ಮನೆಯಷ್ಟೇ .ಓದು, ವಿದ್ಯೆ, ಕೆರಿಯರ್ ಎಲ್ಲಾ priority wise ನಂತರದ್ದು .
ನಿಜ ,ಅಪ್ಪ ಕಲಿಸಿದ ಪ್ರಾರ್ಥನೆಯಲ್ಲಿನ ಮೊದಲನೇ ಬೇಡಿಕೆಯೇ ಒಳ್ಳೆ ವಿದ್ಯೆ ,ನಂತರ ಒಳ್ಳೆ ಬುದ್ಧಿ, ಆಯುರ್ರಾರೋಗ್ಯ.ಅಪ್ಪನ ಫೈಲ್ ಗಳ ಮೇಲೆ ಅಕ್ಕನ ಕಪಾಟಿನ ಬಾಗಿಲಲ್ಲಿ ತೂಗುತ್ತಿದ್ದ ಹಣೆಪಟ್ಟಿ “ಶ್ರದ್ಧಾಹಿ ಪರಮಾಗತಿಹಿ “.’ದ್ಧಾ’ ಒತ್ತು ತಪ್ಪಾಗಿ ಬರೆದ್ದದ್ದಕ್ಕೆ ಬಯಿಸಿಕೊಂಡಿದ್ದಳು ಅಕ್ಕ .handwriting ಚೆನ್ನಾಗಿಲ್ಲ ಅಂದಿದ್ದಕ್ಕೆ ಕೆತ್ತನೆ ಕೆಲಸ ಶುರು ಮಾಡಿದ್ದಳು, ಮಾರ್ಜಿನ್ ಹಾಕಿ ನೋಟ್ಸ್ ಬರೆಯುತ್ತಿದ್ದಳು , ಅವತ್ತಿನದು ಅವತ್ತು ಓದುತ್ತಿದಳು, syllabus ಪೂರ್ತಿ ಮುಗಿಸುತ್ತಿದ್ದಳು , study holidays ಹೊತ್ತಿಗೆ ರಿವಿಶನ್ ಶುರು ಮಾಡಿರುತ್ತಿದ್ದಳು …
ನಾನು ಅಷ್ಟು overacting ಮಾಡುತ್ತಿರಲಿಲ್ಲ , study holidays ಸಮಯಕ್ಕೆ ಪುಸ್ತಕ ಖರೀದಿ ಮಾಡುಲು ಹೋಗುತ್ತಿದ್ದೆ , ಅವಳದೇ ನೋಟ್ಸ್ ಪಡೆದುಕೊಂಡು ಕಡೆಕಡೆ ರಾತ್ರಿಗಳಲ್ಲಿ ನಿದ್ದೆಗೆಟ್ಟು ಓದುತ್ತಿದ್ದೆ, ಭಕ್ತಿಯಿಂದ ಅಲ್ಲ ಭಯದಿಂದ … fail ಆಗುವ ಭಯದಿಂದ ….

ಮಕ್ಕಳು ವಿಜಯದಶಮಿಗೆ ಸರಸ್ವತಿ ಪೂಜೆ ಮಾಡಲೇಬೇಕಿತ್ತು ಅಪ್ಪನಿಗೆ .ಕಷ್ಟದ ಸಬ್ಜೆಕ್ಟ್ ನ ಪುಸ್ತಕವನ್ನು ಪೂಜೆಗೆ ಇಟ್ಟರೆ ಒಳ್ಳೆ ಮಾರ್ಕ್ಸ್ ಬರುತ್ತೆ ಅನ್ನೋ ಐಡಿಯಾ ಕೊಟ್ಟವಳೇ ಅಕ್ಕ.ದೇವರು ಮನೆಯಲ್ಲಿ ಶಿವ ಪಾರ್ವತೀ, ಗಣೇಶರಂತೆ ಸರಸ್ವತಿಯ ದೊಡ್ಡ ಫೋಟೋ , ವಿಗ್ರಹಗಳಿದ್ದವು .ಅಪ್ಪ ಅಂತು ಸರಸ್ವತಿಯ ಪರಮ ಆರಾಧಕ, ಊರಿನ ಮಕ್ಕಳನ್ನೆಲ್ಲ ಓದಿಸುತ್ತೇನೆ ಎಂದು ಮನೆಗೆ ಕರೆದುಕೊಂಡು ಬರುತ್ತಿದ್ದರು , ಓದೋಕೆ ಅಂದರೆ ಎಷ್ಟು ಖರ್ಚು ಮಾಡಿಯಾದರೂ ಎಲ್ಲಾ ವಿಧದ ಸಹಾಯಕ್ಕೂ ನಿಲ್ಲುತ್ತಿದ್ದರು .ಅದ್ಯಾಕೋ ಲಕ್ಷ್ಮಿ ಇದ್ದೆಡೆ ಸರಸ್ವತಿ ಇರಲ್ಲ , ಸರಸ್ವತಿ ಇರುವೆಡೆ ಲಕ್ಷ್ಮಿ ಇರಲ್ಲ ಅನ್ನೋ ಮಾತನ್ನು ಆಗಿಂದಾಗೆ ಆಡುತ್ತಿದ್ದರು .
ಅಷ್ಟು ವರ್ಷಗಳ ಆಚರಣೆ, ಪರಂಪರೆ ಮುರಿಯುವ ಮನಸಾಗಲಿಲ್ಲ, ಆ ಮನೆಯಲ್ಲೂ ವಿಜಯದಶಮಿಗೆ ಪುಸ್ತಕಗಳನ್ನಿಟ್ಟು ಪೂಜಿಸಿದ್ದೆ.ಬೆಳಗ್ಗೆ ನೋಡಿದರೆ ಪುಸ್ತಕವೇ ಇಲ್ಲ, ಅವನು ಬೈದುಬಿಡುತ್ತಾನೆ ಅಂತ ತೆಗೆದುಹಾಕಿದೆ ಆ ತಾಯಿ ಕೊಟ್ಟ ಉತ್ತರ !!!!!!
ಅವರಾದರೂ ಏನು ಮಾಡುತ್ತಾರೆ, ವಾಸ್ತವ confusing ಆಗಿದೆ , ಬೆಂಗಳೂರಲ್ಲಿ ಅರ್ಧ ಸೈಟ್ ತೆಗೆದುಕೊಳ್ಳೋಕೆ ಕಡಿಮೆಯೆಂದರೂ 7 -8 ವರ್ಷಗಳು ಬೇಕೇಬೇಕು .ಸಾಧನೆ ಅಂತ ಎಲ್ಲರು ನಂಬಿಕೊಂಡಿರೋದೆ ಸೈಟು ಒಡವೆ ಮನೆ ಕಾರ್ ಕೊಳ್ಳುವ ಪ್ರಕ್ರಿಯೆಯನ್ನು .ವ್ಯಕ್ತಿಗತಗಳಿಸಿಕೊಂಡ ಇಮೇಜ್ ನ ಕ್ಷಣಾರ್ಥದಲ್ಲಿ ಹಾಳು ಮಾಡೋಕೆ ಸಾವಿರ ಜನ ತುದಿಗಾಲಲ್ಲಿ ನಿಂತಿರುತ್ತಾರೆ.

ಹೀಗಿರುವಾಗ ಶಾರದೆಯ ಬೇಡಿಕೊಳ್ಳಬೇಕೋ, ಬೈದುಕೊಳ್ಳಬೇಕೋ ತೋಚಲಿಲ್ಲ. ಕಡೆಗೆ ಎರಡನ್ನು ಮಾಡಿದೆ…..ಹೆಣ್ಣುಮಕ್ಕಳು ಓದೋದರಿಂದ ಆಗೋ ಅನುಕೂಲಕ್ಕಿಂತ , ಸಿಗುವ ಸವಲತ್ತುಗಳಿಗಿಂತ ಗೋಳುಗಳೇ ಜಾಸ್ತಿ …ಎಂತೆಂತ ಷಡ್ಯಂತ್ರ, ನಾಟಕ,ಚಕ್ರವ್ಯೂಹ ….ನನಗೆ ಅವೆಲ್ಲ ಗೊತ್ತಿಲ್ಲ, ಈಗ ಹೊಟ್ಟೆ ಹೊರೆಯಲೇ ಬೇಕಿದೆ, ಕಡೆಪಕ್ಷ ಕೆಲಸದ ಮೇಲೊಂದು ಇಂಟರೆಸ್ಟ್ , ಕಾನ್ಸಂಟ್ರೇಶನ್ ನ್ನಾದರು ಉಳಿಸು …

ಶಾರದೆಯ ಪಕ್ಕದಲ್ಲೊಂದು ದೇವಸ್ತಾನವಿದೆ, ತೆಲುಗು ಸಿನಿಮಾದಲ್ಲಿ ತೋರಿಸುವ ತರಹದ್ದು,ನಿಜವಾಗಲು ಸುಂದರವಾಗಿದೆ ..ಅದರ ಸ್ವಲ್ಪ ದೂರದ್ದಲ್ಲೇ ಪೀಠದ ಗುರುಗಳ ದೇವಸ್ತಾನ .ಆದಿ ಗುರು ಶಂಕರಾಚಾರ್ಯರದ್ದಲ್ಲ, ಈಗಿನ ಗುರುಗಳದ್ದು.ಗುರು ಪರಂಪರೆಯಲ್ಲಿ ಅಪಾರವಾದ ನಂಬಿಕೆ , ಶ್ರದ್ಧೆಗಳಿವೆಯಾದರು ಈ ತರಹ ಪೀಠದ ಗುರುಗಳಿಗೆಲ್ಲ ಒಂದೊಂದು ಗುಡಿಕಟ್ಟುತ್ತ ದೈವಮಾನವರನ್ನು ಸೃಷ್ಟಿಸುತ್ತ ಹೋದರೆ ಕಡೆಗೊಂದು ದಿನ ಮುಂದಿನ ಪೀಳಿಗೆಗೆ ದೇವರ್ಯಾರೆಂದೆ ತಿಳಿಯದೆ ಹೋಗಬಹುದು ಅನ್ನೋ ಸಣ್ಣಭಯವಿದೆ . ಮನುಷ್ಯರು ಕೆಲವೊಮ್ಮೆ ದೇವರಂತಾಗಬಹದು , ಆದರೆ ಪೂರ್ತಿಪ್ರಮಾಣದಲ್ಲಿ ದೇವರೇ ಆಗೋಕೆ ಸಾಧ್ಯವಿಲ್ಲ.ಅತಿಮಾನುಷ ಶಕ್ತಿಯೇ ದೇವರು ನನ್ನ ನಂಬಿಕೆ .

ತುಂಗೆ ಸುತ್ತಲೆಲ್ಲ ಹರಿಯುತ್ತಾಳೆ, ಕೆಲವೊಮ್ಮೆ ತೀರ್ಥ ನದಿಯಾಗಿ, ಇನ್ನೆಲ್ಲೋ ತೂಗು ಸೇತುವೆ ಕೆಳಗೆ ತೊರೆಯಾಗಿ , ಮತ್ತೆಲ್ಲೋ ಬಿಳಿ ಮರುಳರಾಶಿಯ ದಡಗಳ ನಡುವೆ ಹಾಯಾಗಿ .ಬಿಳಿ ಶುಷ್ಕ ಮರುಳಲ್ಲಿ ಗುಬ್ಬಿ ಗೂಡು ಕಟ್ಟೋಕೆ ಆಗಲ್ಲ , ಗೂಡು ಕಟ್ಟಲು ತೇವದ ಆರ್ದಮರಳು ಬೇಕು ಮರುಳೆ ..ನನ್ನ ವ್ಯರ್ಥ ಪ್ರಯತ್ನಕ್ಕೊಂದಿಷ್ಟು ತಲೆ ಮೊಟಕು ..!

ತುಂಗೆಯ ಒಡಲಲ್ಲಿ
ಮಿಸುಕಾಡೋ ಮೀನೇ
ಕಾಲು ಜಾರಿಸುವೆ
ಮುತ್ತಿಡೆ ನೀನೆ

ಸಿರಿಮನೆ ಫಾಲ್ಸ್ .ಅಡಿಯಿಡುತ್ತಿದ್ದಂತೆ ಪ್ರಪ್ಹುಲ್ಲವಾಗಿದ್ದು ಅಲ್ಲಿದ್ದ ಉಪ್ಪುಖಾರ ಹಚ್ಚಿದ pineapple , ಆರೆಂಜ್ಗಳಿಗೆ .ಮೀಡಿಯಂ ಸೈಜ್ ನ ಫಾಲ್ಸ್, ಒಳಗಿಳಿಯಬಹುದು.ಗಂಡಸರ ಎದುರು ಬಟ್ಟೆ ತೋಯಿಸಿಕೊಂಡು ನಿಲ್ಲಬೇಡ ಕಟ್ಟಪ್ಪಣೆ ಹಾಕೋಕೆ ಅಪ್ಪ ಇಲ್ಲ .ನೀರಿಗಿಳಿಯದೆ ಉಳಿಯುವ ಮನಸು ನನ್ನದ್ದಲ್ಲ .
ನೀರೆಂದರೇ ?
ನೀರೆಂದರೆ ನೀರಷ್ಟೇ ಎರಡು ಹೈಡ್ರೋಜನ್ ಮತ್ತು ಒಂದು ಆಕ್ಸಿಜನ್ ಕಣದ ಜೋಡಣೆ ! -ಕೆಮಿಸ್ಟ್ರಿ
ಹಿಡಿದ್ದಿಟ್ಟರೆ potential ಎನರ್ಜಿ , ಹರಿಯ ಬಿಟ್ಟರೆ kinetic ಎನರ್ಜಿ -ಫಿಸಿಕ್ಸ್
ಅದಕ್ಕೆ ಹರಿಯುವುದ ಕಲಿಸಿ, ಪ್ರೇರೇಪಿಸಿದವರ್ಯಾರು, ಶಕ್ತಿ ತುಂಬಿದವರ್ಯಾರು?
ನೀರು ಪ್ರಕೃತಿಯಾದರೆ, ಶಕ್ತಿ ನೀಡಿದ್ದು ಪುರುಷನ -ನನ್ನ ಕಲ್ಪನೆ !
ನೀರು ಹೆಣ್ಣಾದರೆ ,ಆತ್ಮವಿಶ್ವಾಸ ತುಂಬಬೇಕಾಗಿರುವುದು ‘ಅವನ’ ?

ಯಾವುದೊ ಗುಂಗಿನಲ್ಲಿ ಸಿಲುಕಿದಂತೆ ತಣ್ಣಗೆ ಸದ್ದಿಲ್ಲದೇ ಒಳಗೆ ಹರಿವ ಸುಪ್ತ ಶಾಲ್ಮಲೆ ,
ನದಿಯಾಗಿ ಭೋರ್ಗರೆದು ನೀಲ ಜಲವುಕ್ಕಿಸುತ್ತ ನಡೆದು ಕಡಲ ಅರಸುವ ಆಚಲೇ ,
ಧುಮ್ಮಿಕ್ಕಿ ಕುಣಿದು ಕುಪ್ಪಳಿಸಿ ಮೇಲಿಂದ ನೆಗೆದು ಸುರಿದು ಧರೆಗಿಳಿದು ನಗುವ ಜಲಧಾರೆ ,
ಕಡಲಾಗಿ ನರ್ತಿಸಿ ನೊರೆಯಾಗಿ ನೆರೆದು , ಅಲೆಯಾಗೆ ಅಪ್ಪಳಿಸಿ ದಡಕ್ಕಾಗಿ ಹಾತೊರೆಯುವ ಸಮುದ್ರ ರಾಣಿ ,
ಅಲ್ಲೆಲ್ಲೋ ನಕ್ಕು, ಮತ್ತೆಲ್ಲೋ ಅತ್ತು , ಇನ್ನೆಲ್ಲೋ ಮುನಿವ ಇಳೆಗೆ ಮಳೆ,
ಮತಿಭ್ರಮಣೆಯಾದಂತೆ , ಅರೆಹುಚ್ಚಿಯಂತೆ ಅಟ್ಟಾಡಿಸಿಕೊಂಡು ಬಂದು ಭೀಬತ್ಸದಲ್ಲಿ ಕೊಚ್ಚಿಕೊಲ್ಲುವ ಪ್ರವಾಹ ,
ಬಿಂದಿಗೆಯೊಳಗೆ ಕೂತು ನಡುಬಳಸಿ ಬಳುಕುವ, ತುಂಬಿದ ಕಣ್ಣಾಲಿಗಳಲ್ಲಿ ತುಳುಕುವ ನೀರೆ …
ಅವನ್ಯಾರೆ ?
ಶಿರದಲ್ಲಿ ಕಟ್ಟಿಕೊಂಡ ಶಿವನ, ತಪಸ್ಸು ಕೂತು ಒಲಿಸಿಕೊಂಡ ಭಾಗಿರಥನ , ಆಣೆಕಟ್ಟು ಕಟ್ಟಿದ ವಿಶ್ವೇಶ್ವರಯ್ಯನ , ಅಥವಾ ಆತ್ಮವಿಶ್ವಾಸ ತುಂಬುವ ಅವನ?
ಧುಮ್ಮಿಕ್ಕಿ ಹರಿಯುತ್ತಿದೀಯ
ಸಿರಿಮನೆ ಸುಂದರಿಯೇ
ಪಡೆದು ಅವನ ಆತ್ಮವಿಶ್ವಾಸದ ಸಾಲ
ನನಗು ಬೇಕಿದೆ
ಬೊಗಸೆಯೊಡ್ಡಿ ನಿನ್ನಲ್ಲೇ ಬೇಡಲಾ ?

ಗಿರಿಶಿಖರದ ಉತ್ತುಂಗದಲ್ಲಿ ನಿರ್ಲಿಪ್ತನಾಗಿ ನಿಂತ ಬಾಹುಬಲಿಯಾ ಜಿನಮಂಟಪ ಕುಂದಾದ್ರಿ ಬೆಟ್ಟ .ತಿರುಪತಿ ,ಧರ್ಮಸ್ತಳದ ಗಿಜಗುಡುವಿಕೆ ಇಲ್ಲದೇ ಬುದ್ಧನ ಮೌನದಷ್ಟೇ ಶಾಂತವಾಗಿತ್ತು ದೇವಾಲಯ .ಮಧ್ಯಾನದ ಹೊತ್ತಿನ ಪ್ರಸಾದ ಮೆದ್ದು, ಗುಡಿಯಲ್ಲೇ ನಿದ್ದೆಗೆ ಚಾಚಿಕೊಂಡ ಪಾಪದ ಪೂಜಾರಿಯ ಸೌಭಾಗ್ಯದ ಮೇಲೆ ನನ್ನ ಕರುಬು . .
ಬೆಟ್ಟದ ಮೇಲೆ ಕೊಂಚ ಹೊತ್ತು ಧ್ಯಾನ ..ಎಲ್ಲ ಬಂಧಗಳನ್ನು ಕಳಚಿಟ್ಟು, ನಾನು ಕೂಡ ಕೇವಲ ನಾನಾಗಿ ಉಳಿಯದೆ, ನಾನು ಏನೇನು ಆಗದೆ , ಮತ್ಯಾರು ಏನು ಅಲ್ಲದ ,ಏನು ಇಲ್ಲದ , ಏನು ಬೇಕಾಗಿಲ್ಲದ , ನಿರ್ಲಿಪ್ತ ಸ್ಥಿತಿಯಲ್ಲಿ ಮೌನದ ಧ್ಯಾನ . ಆ ನೀರವತೆಯಲ್ಲಿ ನಾನಿದ್ದೆ ,ಎಷ್ಟು ಹಗುರವಾಗಿದೆ ಈ ಸ್ಥಿತಿ .
ಬೆಟ್ಟದ ಸುತ್ತಲು ಸುಯ್ವ ಗಾಳಿಯಲ್ಲಿ , ಕೆಳಗಿನ ಕಾಡಿನ ಹಸಿರಲ್ಲಿ , ಪ್ರಪಾತದ ಅಂಚಿನಲ್ಲಿ , ಮುಗಿಲಿನ ಮೋಡದಲ್ಲಿ , ಎಲ್ಲೆಲ್ಲೊ ಆವರಿಸಿಕೊಂಡಿರುವ ದಿವ್ಯ ಮೌನ . ಮತ್ತು ಆ ಮೌನ ಘನತೆಯಲ್ಲಿ, ಗಾಂಭೀರ್ಯದಲ್ಲಿ ಉಸಿರಾಡುತ್ತಿತ್ತು .ಗೌರವ ತೊಟ್ಟು ಬೀಗುತ್ತಿತ್ತು . ತಲತಲಾಂತರದಿಂದಲೂ ಹೀಗೆ ಗಟ್ಟಿ ಇದ್ದೇನೆ ಎಂದು ಗತ್ತು ಬೀರುತ್ತಿತ್ತು .ಅಲ್ಲಿ ಕೇಳಿಸುತ್ತಿದ್ದ ಸದ್ದು ಕೇವಲ ಗಾಳಿಯದ್ದು.ಅನಾಥ ಮೊರೆತವಲ್ಲ ಅದು , ಗೆದ್ದ ಸಂಭ್ರಮ .
ಹೌದು , ಇಲ್ಲೊಂದು ಸಿಸ್ಟಮ್ ಇದೆ, ಪ್ರತಿಯೊಂದು ಚರಾಚರ ವಸ್ತುವು ಪ್ರತ್ಯೇಕವಾಗಿದ್ದುಕೊಂಡೆ, ಮೌನವಾಗಿದ್ದುಕೊಂಡೆ ಸಂಭಾಷಿಸುತ್ತ ಘನವಾಗಿ ಒಂದಾಗಿದ್ದು , ಅನ್ಯೋನ್ಯವಾಗಿ ಬದುಕಿದ್ದು .
450 ಕೋಟಿ ವರ್ಷಗಳಲ್ಲಿ ಮಾತು ಸೃಷ್ಟಿಯಾಗಿದ್ದೆ ಕೇವಲ ಒಂದು ಲಕ್ಷ ವರ್ಷಗಳಿಂದೀಚೆಗೆ ..ಅದನ್ನು ತಿರಸ್ಕರಿಸಿ ಮೌನವಾಗಿ ಬದುಕಿದೇ ಪ್ರಕೃತಿ .
ನನ್ನೊಳಗೂ ಒಂದು ಮೌನವಿತ್ತು .ಆದರೆ ಅಳಕು ಮೌನ, ದಿಕ್ಕೆಟ್ಟು , ದೃತಿಗೆಟ್ಟ ಪುಕ್ಕಲು ಮೌನ.
ಈ ಕ್ಷಣ ಒಳಗಿನ ಮೌನದೊಂದಿಗೆ, ಹೊರಗಿನ ಮೌನವನ್ನು ಬೆರೆಯಲು ಬಿಟ್ಟು , ಸಾಂಧ್ರಗೊಳಿಸಬೇಕು , equillibrium ಸಾಧಿಸಬೇಕು .
ಮೌನದಲ್ಲೂ ಮಾತಿದೆ,
ಸಂವಹನದ ಹೊಸ
ಮಾಧ್ಯಮ ದೊರಕಿದೆ ,

ಕೆಲವೊಂದು ಸ್ಥಳಗಳ ಮಹಾತ್ಮೆಯೇ ಹಾಗೆ .ನಾರುಮುಡಿ ಮುತ್ತೈದೆಯರು ಅಮ್ಮನವರ ಸನ್ನಿಧಾನದಲ್ಲಿ ಭಕ್ತಿಭಾವ ಪರವಶರಾಗಿ ಕಣ್ಣೀರಾಗುತ್ತಾರೆ ,ಸಂಜೆವೇಳೆಗೆ ಪರಮಾತ್ಮನ ಸನ್ನಿಧಾನದಲ್ಲಿ ಶಾಪಗ್ರಸ್ತ ಗಂಡಸರು ತೀರ್ಥಸೇವಿಸಿ ಮೌನಕಳೆದು , ಧೈರ್ಯಪಡೆದು ತೂರಾಡುತ್ತಾರೆ,
ನನಗು ಹೆಚ್ಚುಕಡಿಮೆ ಅಂತದ್ದೇ ರೋಮಾಂಚನವಾಗಿದ್ದು ಕುವೆಂಪುರವರ ಕುಪ್ಪಳ್ಳಿ ಮನೆ ಉದಯರವಿಯಲ್ಲಿ , ಮತ್ತು ಕವಿಶೈಲದಲ್ಲಿ .ನಮ್ಮ ರಸಋಷಿ ಕುವೆಂಪು ಬಾಳಿಬದುಕಿದ ಮನೆ, ಅವರು ಕೂತು ರಚಿಸಿದ ರಾಮಾಯಣ ದರ್ಶನಂ ಇಲ್ಲೇನ , ಹಿಡಿದ ಪೆನ್ನು , ತೊಟ್ಟ ಕೋಟು , ಟೋಪಿ ಇದೇನಾ ?
ಪೂರ್ಣಚಂದ್ರ ತೇಜಸ್ವಿ ಹುಟ್ಟಿದ್ದು ಈ ತೊಟ್ಟಿಲಲ್ಲ , ಬೆಳೆದದ್ದು ಈ ಕೋಣೆಯಲ್ಲಾ ? ಹೇಮಾವತಿಯವರು ಸಾರು ಕಾಯಿಸಿದ್ದು ಇದೆ ಸೌಟಿನಿಂದಲ?
ಅಲ್ಲೊಂದು ಕೋಣೆಯಿದೆ , ಅದರ ತುಂಬಾ ಪುಟ್ಟಪ್ಪನವರ ವಂಶವೃಕ್ಷದ ಫೋಟೋಗಳು .ಅಲ್ಲಿದ್ದ ಮೇಲ್ವಿಚಾರಕಿ ,ಇವರ್ಯಾರು ಅವರ್ಯಾರು ಎಂದು ಕೇಳುತಿದ್ದ ನನ್ನ ಕೌತುಕದ ಪ್ರಶ್ನೆಗಳಿಗೆ ವಿವರಿಸಿ ಹೇಳುತ್ತಿದ್ದಳು .ಅವಳು ಹೇಳಿದ ಕೆಲವೊಂದು ಕುತೂಹಲಭರಿತ ವಿಷಯಗಳು -ಕುವೆಂಪುರವರ ಮೂರನೆಯ ತಲೆಮಾರಿನಲ್ಲಿ ಎಲ್ಲ ಹೆಣ್ಣುಮೊಮ್ಮಕ್ಕಳೇ .ಅದರಲ್ಲಿ ನಾಲ್ಕು ಜನ ಬೆಂಗಳೂರಿನ ರಾಜಾಜಿನಗರದಲ್ಲೇ ನೆಲೆಸಿದ್ದಾರೆ.ಅವರೆಲ್ಲ software engineers . ನನ್ನ ಕುತೂಹಲಕ್ಕೆ ಕೇಳಿದೆ , ಯಾರಾದರು ಬರೆಯುತ್ತಾರ ..ಮಕ್ಕಳಲ್ಲಿ ತೇಜಸ್ವಿ, ಇಂದುಕಲ ಬಿಟ್ಟರೆ ಮತ್ಯಾರು ಬರೆಯಲೇ ಇಲ್ಲ… ಚೈತ್ರ ಹೆಣ್ಣುಮಕ್ಕಳ ಹೆಸರು, ಅದನ್ನು ಮಗನಿಗೆ ಇಟ್ಟಿದ್ದು ಕವಿ ಹೃದಯವೇ ಇರಬೇಕು .ಎಲ್ಲಿಯ ತೀರ್ಥಹಳ್ಳಿ ಎಲ್ಲಿಯ ಆಸ್ಟ್ರೇಲಿಯಾ ? ಚೈತ್ರರ ಹೆಂಡತಿ ಮರ್ಲಿನ್ ,ಅವರಿಬ್ಬರ ಮಗಳು ಸಿಮೋನ್ ಗೆ ಕನ್ನಡ ಬರುತ್ತಾ ,ಅವರುಗಳು ಕುವೆಂಪು ಕಾವ್ಯ ಓದಿದ್ದಾರ , ಅಲ್ಲಿನ dishwasher ಮತ್ತು ಇಲ್ಲಿನ ತೆಂಗಿನಚಿಪ್ಪಿನ ಸೌಟು , ಸಾಂಸ್ಕೃತಿಕ ಭಿನ್ನತೆಯನ್ನ ಹೇಗೆ ಸ್ವೀಕರಿಸಿತು ಕುಪ್ಪಳ್ಳಿ ಮನೆ.
ರಾಮಾಯಣದರ್ಶನಂಗಿಂತ ಹೆಚ್ಚಿನ ಜೀವನಪಾಠ ಕಲಿಸುತ್ತೆ ಮಲೆಗಳಲ್ಲಿ ಮದುಮಗಳು. ಅಪ್ಪನ ಶಾಸ್ತ್ರೀಯ ಶೈಲಿ ತೊರೆದು , ಯಾವುದೇ ಚೌಕಟ್ಟಿಲ್ಲದೆ ಅಪ್ಪಟ ಹಳ್ಳಿಸೊಗಡಿನ ಹಾಗೆ ಆಪ್ತವಾಗಿ ಬರೆದ ತೇಜಸ್ವಿ ಇಷ್ಟವಾಗಿಹೋಗುತ್ತಾರೆ. ತೇಜಸ್ವಿ ಮುಖದಲ್ಲೊಂದು ಮುಗ್ದತೆ ಇದೆ, ಸ್ನಿಗ್ದ ಆನಂದವಿದೆ, ಆದರೆ ಚೈತ್ರರ ಮುಖದ ಮೇಲೆ ಎಲ್ಲ ಬಲ್ಲೆನೆಂಬ ,ಏನೋ ಗೆದ್ದನೆಂಬ ನಗುವಿದೆ.
ಹೀಗೆ ಮುಳುಗಿ ಹೋಗಿದ್ದಾಗಲೇ ಮೇಲ್ವಿಚಾರಕಿ ಕೇಳಿದ ಪ್ರಶ್ನೆ ರಪ್ ಅಂತ ವಾಸ್ತವಕ್ಕೆ ಎಳೆದು ತಂದಿದ್ದು .
“ನೀವಿಬ್ಬರು ಅಕ್ಕ ತಂಗೀನ ,ಇಬ್ಬರ ಕಣ್ಣು ಒಂದೆತರಹ ಇದೆ “.ಇದಂತೂ ತೀರ ಅಸಹಜ compliment ಎನಿಸಿ ನಗು ಬಂತು ,ಮನಸಲ್ಲೇ ಹೇಳಿಕೊಂಡೆ “ಅಕ್ಕತಂಗಿಯರು ಹೌದಾದರೂ ,ಹುಡುಗಿ ಅವಳ ಕಣ್ಣಿಗೂ ನನ್ನ ಕಣ್ಣಿಗೂ ಸಾಮ್ಯತೆಇಲ್ಲ .ಅವಳದು ಭರತನಾಟ್ಯದ ಮಾತನಾಡುವ ಕಣ್ಣುಗಳು, ನನ್ನದು ಕಾಡುಪಾಪನಂತ ಮಾತುಬಾರದ ಮೂಕ ಕಣ್ಣುಗಳು …ನಿನಗೆ ಗೊತ್ತಾ ಕಣ್ಣಿನ ಕನಸೊಂದು ಹಾಗೆ ಜಾರಿ ಉದುರಿಬಿದ್ದು ಕಳೆದುಹೋಯಿತು, ಅನ್ಯಾಯವಾಗಿ ನದಿತಟದ ಮಣ್ಣು ಪಾಲಾಯಿತು. .ಅಕ್ಷರಸ್ತರ ಬಳಿ ಕಣ್ಣಿನಭಾಷೆ ಕಲಿಯಬೇಕು .”

ಅಂದು ರಾತ್ರಿಗೆ ಉಳಿಯಲು ಬೆಕ್ಕನಳ್ಳಿಯ ಸುಬ್ಬಣ್ಣನವರ ಹೋಂಸ್ಟೇ …
ಹೋಂಸ್ಟೇ ಪದ್ಧತಿಮೇಲೆ ಯಾಕೋ ನನಗೆ ಚೂರು ಮುನಿಸು . ಅಥಿತಿ ದೇವೋಭವ ಅನ್ನುವ ಉದ್ಧಾತ ಸಂಸ್ಕೃತಿ ನಮ್ಮದು, ಅದರಲ್ಲೂ ಪಶ್ಚಿಮ ಘಟ್ಟಗಳ ಸುತ್ತಲು ಹರವಿಕೊಂಡ ಕಥೆಕಾದಂಬರಿಗಳಲ್ಲಿ ಮೂಡಿಬರುವ ಅತಿಥಿ ಸತ್ಕಾರ ಹೇಗೆ ನಡೆಯುತ್ತಿತು ಎನ್ನುವ ವೈಭವ , ವರ್ಣನೆ ಓದುತ್ತ ಬೆಳೆದ ನಮಗೆ, ತಲೆಗಿಷ್ಟು ಎಂದು ದುಡ್ಡು ನಿಕ್ಕಿ ಮಾಡುವುದು ಅದರಲ್ಲೂ ಎರಡೂವರೆ ಸಾವಿರದಾಚೆಗೆ ಚಾರ್ಜ್ ಮಾಡುವುದು ಬೇಜಾರು .ಸೀಸನ್ timenalli ದಿನಾ ಬುಕ್ ಆಗುವ ಇವುಗಳು , ಇಡಿ ವರ್ಷ ವ್ಯವಸಾಯದಲ್ಲಿ ಮಾಡದ ದುಡ್ಡನ್ನು, ವ್ಯವಹಾರದಲ್ಲಿ ಮಾಡಿಕೊಡುತ್ತವೆ.ಮನೆಯ ಒಂದು ಪಾರ್ಶ್ವವನ್ನು ಅತಿಥಿಗಳಿಗೆ ಬಿಟ್ಟುಕೊಟ್ಟು ನಗುನಗುತ್ತ ಸತ್ಕರಿಸಿ ದುಡ್ಡುಪಡೆದು ಬೀಳ್ಕೊಡುತ್ತಾರೆ.ಬಿಸಿನೆಸ್ ಆಗಿಹೋಗಿರುವ ಇದನ್ನು ಬಹುಪಾಲು ಪೋಷಿಸುವವರೇ ಬೆಂಗಳೂರಿನ ಟೆಕ್ಕಿಗಳು, ಎಷ್ಟು ಹೇಳಿದರು ಮರುಮಾತಾಡದೆ worth ಇದೆ, ಕಡಿಮೆ ಇದೆ ಎಂದು ಪುಷ್ಟೀಕರಿಸುತ್ತಾ ಖಾಸಗೀಕರಣದ ಗಾಳಿಯನ್ನು ಇಲ್ಲೂ indirect ಆಗಿ ಊದಿಹೋಗುತ್ತಾರೆ .
ಇನ್ನೊಂದಿಷ್ಟು ಕುತೂಹಲದ ಸಂಗತಿಗಳು , ನಾ ಗಮನಿಸಿದ್ದು .ಇಲ್ಲೆಲ್ಲಾ ಮನೆಗಳಲ್ಲಿ ಸ್ತ್ರಿಪ್ರಧಾನ ವಾತಾವರಣ , ಮತ್ತು ಎರಡು ಮನೆಗೊಬ್ಬರಾದರು ಬೆಂಗಳೂರಿನಲ್ಲಿ ಓದುತ್ತಿರುವ ಇಂಜಿನಿಯರ್ಗಳಿರುತ್ತಾರೆ. ಎಸ್ಟೇಟ್ ಗಳಲ್ಲಿ ವ್ಯವಸಾಯ ಮಾಡಿಕೊಂಡು ರಾಜನಂತೆ ಬಾಳುವ ವೈಕರೀ ಬಿಟ್ಟು, ಇಷ್ಟೆಲ್ಲಾ ಸುಂದರ ಪ್ರಕೃತಿಯನ್ನು ತ್ಯಜಿಸಿ,ಬೆಂಗಳೂರಿನ technology ಕಾಡಿಗೆಗ್ಯಾಕೆ ಕೂಲಿ ಮಾಡಲು ಬರುತ್ತಾರೋ ಅಂತ ಮರುಗುತ್ತೇನೆ ನಾನು .ಇಲ್ಲಿನ ಗಾಳಿಗಿರುವ ತಾಕತ್ತು ಅಲ್ಲಿನ AC ಗಿದೆಯ ?
ಹೇಳಬೇಕೆನಿಸುತ್ತೆ :
ಬೆಂಗಳೂರಿನ ದಡಬಡಾಯಿಸುವ ಯಾಂತ್ರಿಕತೆ,AC ರೂಮಿನಲ್ಲಿ ಮಾತಾಡದೆ ಕೂತ ಕಂಪ್ಯೂಟರ್ಗಳು ,ಕಿವಿಗಡಚುವ ವಾಹನಗಳ ಕಿರುಚಾಟ, ಕಣ್ಣುಕುಕ್ಕುವ ಸೋಡಿಯಂ ಲೈಟ್ ಗಳು ,ಹಾಳೂರಿನ ಓಟಕ್ಕೆ ವೇಗ ಹೊಂದಿಸಲಾಗದೆ ಸೋಲುವ ಕಾಲುಗಳು , ಬೆಳಕಿನ ಮಾಲಿನ್ಯದೊಳಗೆ ಕಳೆದು ಹೋದ ಭಾನು , ಕಾಣೆಯಾದ ನಕ್ಷತ್ರ ಚಂದ್ರ,ಅರಳದ ತಾವರೆ,ದುಡ್ಡಿನ ಜಣಜಣ, ಮನಸು ಭಣಭಣ,ವ್ಯವಹಾರ-ವಂಚನೆ, ಮೈಮರೆತರೆ ಭೀಳಿಸಿ ತುಳಿವ ಸಂಚು…ದಣಿವಿದೆ ಅಲ್ಲಿ,ನನಗಂತೂ ಸಾಕಾಗಿದೆ .

ಏನೇ ಆದರು ಸುಬ್ಬನನವರ ಹೋಂಸ್ಟೇ ಸ್ವರ್ಗ ಇದ್ದಂಗಿದೆ,ಮನೆಯನ್ನು ಹೇಗೆ ಚೊಕ್ಕವಾಗಿಟ್ಟುಕೊಳ್ಳಬೇಕು, ಎಷ್ಟು ಕ್ರಿಯೇಟಿವ್ ಆಗಿ ಬದುಕಬಹುದು ಎನ್ನುವುದಕ್ಕೆ ನಿದರ್ಶನವಿದ್ದಂತ್ತಿದೆ.
ಅಷ್ಟು ರಾತ್ರಿಯಲ್ಲಿ ತೀರ್ಥಹಳ್ಳಿಗೋಗಿ ಮೊಟ್ಟೆ, ಶಾಂಪೂ, ಹಾಲು,ಮೊಸರು,ಕಾಫೀಪುಡಿ , ಚಿಕೆನ್ ಪಾರ್ಸೆಲ್ ಅಂತೆಲ್ಲ ಶಾಪ್ ಮಾಡಿಕೊಂಡು ಬರುತ್ತಿದ್ದ ನನ್ನಲ್ಲಿ ಇದ್ದಿದ್ದು ಮನೆಮಂದಿಯೆಲ್ಲ ಕೂತು ಬೆಳದಿಂಗಳೂಟ ಸವಿಯಬೇಕು , ತಡ ರಾತ್ರಿವರೆಗೂ ಹಾಡುಕೇಳಿಕೊಂಡು ಹರಟುತ್ತಾ , ಆಕಾಶ ನೋಡಿಕೊಂಡು ಕೂರಬೇಕು ಎನ್ನುವ ಆಸೆ .ಈ ತರಹ ಹುಚ್ಚುತನ ನನಗಷ್ಟೇ ಬರುತ್ತೆ ಅನಿಸುತ್ತೆ, ನಾವು ಬರುವ ವೇಳೆಗದಾಗಲೇ ಒಬ್ಬೊಬ್ಬರು ಒಂದೊಂದು ಮೂಲೆ ಹಿಡಿದು ಪವಡಿಸುತ್ತಿದ್ದರು, ಸಾಲದಕ್ಕೆ ಅಷ್ಟೊಂದು ಶಾಪ್ ಮಾಡಿಕೊಂಡು ಬಂದಿದ್ದಕ್ಕೆ ಉಗಿದರು .

ಎಲ್ಲಾ ನಿರಾಸೆಯಾದ ಬೇಸರ ನನಗೆ . ಒಬ್ಬಳೇ ಕೂತು ಯೋಚಿಸುತ್ತಿದ್ದೆ . ಸಂವೇದನೆಗಳನ್ನು ಅರಿಯುತ್ತ , ಸಾಂಗತ್ಯದ ಸವಿಯ ಅಸ್ವಾದಿಸಬಲ್ಲ , ಅದರ ಅಭಿರುಚಿ ಇರುವ ಸಂಗಾತಿ ಸಿಕ್ಕಿಹೋಗಿದ್ದಿದ್ದರೆ ಎಷ್ಟು ಚಂದೆವಿರುತ್ತಿತ್ತು ಬದುಕು .ಒಂದೇ ದಿನಕ್ಕಾದರು ಹೀಗೆಲ್ಲ ಅನಿಸಬಾರದಿತ್ತ ಈ ಮುಂಚೆ .ಒಲವ ನಾಲಿಗೆಯಲ್ಲಿ ಸವಿಯಬೇಕಾದ ಎಷ್ಟೆಲ್ಲಾ ಬದುಕಿನ ರುಚಿಗಳು ಅನ್ಯಾಯವಾಗಿ ಹಳಸಿದೆ, ಆತ್ಮದ ಕಣ್ಣುಕೋರೈಸಬೇಕಿದ್ದ ಅವೆಷ್ಟು ಬಣ್ಣಗಳು ಹಾಳುಸುರಿದೋಗಿದೆ , ರಸಹೀನ ರಾಕ್ಷಸ !
ಒತ್ತೊಟ್ಟಿ ಬಂದ ಕೋಪ, ಹತಾಶೆಗೆ ಒಬ್ಬಳೇ ಎದ್ದುಬಂದು ಅಂಗಳದ ಬೆಂಚ್ ಮೇಲೆ ಕೂತೆ . ಹೌದು ಹೀಗೆ ಚೌಕ್ಕಟ್ಟಿನಾಚೆ ಎದ್ದು ಬಂದು , ಹೆದರಿಕೆಗಳಿಗೆಲ್ಲಾ ಬೆನ್ನು ಮಾಡಿ ಭಂಡಗೆಟ್ಟು ಧೈರ್ಯವಾಗಿ ಕೂತುಬಿಡಬೇಕು.
ಆ ರುದ್ರರಮಣೀಯ ರಾತ್ರಿಯಲ್ಲಿ, ಪೊಟರೆ ಬಿಲಗಲಿಂದಾಚೆಗೆ ಭೀತಿ ಹೆಚ್ಚಿಸೋ ಸಶಬ್ದ ಚೀರಾಟ, ಗಿಜಗುಡಿವಿಕೆ,ವಟಗುಟ್ಟುವಿಕೆ ಕೂಗಾಟಗಳನೆಲ್ಲ ಆಲಿಸಬೇಕು .
ಭೀಕರತೆಯ ಹೆದರಬೇಡ ಮನವೇ, ಭಯಪಡುವಂತದ್ದೇನಿಲ್ಲ .ಕುವೆಂಪು ಕಂಡ ಖಗ,ಮಿಗ,ಮೃಗ,ಪಕ್ಷಿಗಳ ಮಾತಷ್ಟೇ ಅದು. ನಿರುಪದ್ರವಿ ಸಹಜೀವಿಗಳು ಯಾವ ಭಾವಕ್ಕೆ ಹೇಗೆ ಪ್ರತಿಕ್ರಿಯೆಸುತ್ತಿವೆಯೋ,ಅದರಲ್ಲಿ ಯಾವುದಕ್ಕೆ ನನ್ನಂತೆಯೇ ಮೋಸವಾಗಿದೆಯೋ , ಮಾತಿಗಿಳಿದಿರಬೇಕು. ಆಲಿಸುವ ಕೌತುಕ ಹೆಚ್ಚಾಗಿದೆ , ಧೈರ್ಯ ಸಹ , ಮತ್ತದ್ದನ್ನು ಮೀರುವ ಹಂಬಲ ಕೂಡ…!!

ಮುಚ್ಚಿದ ಬಾಗಿಲಿನ ಕೋಣೆಯಾ ಫ್ಯಾನ್ ಕೆಳಗೆ, ಬೆಚ್ಚಗೆ ಬ್ಲಾಂಕೆಟ್ ಹೊದ್ದು ಸುಖನಿದ್ರೆಯಲ್ಲಿ ಕನಸು ಕಾಣುತ್ತಿದ್ದವಳನ್ನು, ದಿಗ್ಗಡನೆ ಎಬ್ಬಿಸಿ ,ಕಾಡೊಳಗೆ ಕರೆತಂದು, ದಿಕ್ಕುತಪ್ಪಿಸಿ ಇಂತಹ ಭೀಕರ ರಾತ್ರಿಗಳಿಗೆ ಈಡುಮಾಡಿ , ತಾವು ಗೆದ್ದೆವೆಂದು ಬೀಗುತ್ತ ಒಬ್ಬೊಂಟಿಯಾಗಿ ಬಿಟ್ಟುಹೋದ ಪಾಪಿಗಳಿಗೆ ಈ ಗೆಲುವಿನ ಸಂತೋಷವನ್ನು ಅರ್ಪಿಸುತ್ತೇನೆ .
ಅವರಿಗೆ ಗೊತ್ತಿಲ್ಲ ನಿಧಾನವಾಗಿಯಾದರೂ ಕತ್ತಲು ಕಣ್ಣಿಗೊಗ್ಗುತ್ತದೆ .ಸೂರ್ಯನಿಲ್ಲದ್ದಿದ್ದರು , ಚಂದ್ರನಿರದ ಅಮಾವಾಸ್ಯೆಯೇ ಆದರು , ಸಾವಿರ ನಕ್ಷತ್ರಗಳಿವೆ ಮಿಣುಕು ದೀಪವಾಗಲು.

ಬೆಳಗ್ಗೆ ಹೊರಡುವಾಗ ಸುಬ್ಬಣ್ಣನವರು ನೀಡಿದ feedback ಪುಸ್ತಕದಲ್ಲಿ ಬರೆದೆ – ಕನಸುಗಳನ್ನು ಖರೀದಿಸಲು ಬರುವುದಿಲ್ಲ , ತಾನಾಗೆ ಚಿಗುರಿದವಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ , ಬೆಂಗಳೂರಿನ ಹೂಗಳಲ್ಲಿ ಇರದ ಜೀವಂತಿಕೆ ಈ ಕಾಡಿನ ಹೂಗಳಿಗಿವೇ ಅನಿಸಿದೆ .ಧನ್ಯವಾದ .
ನಿನ್ನೆಯಷ್ಟೇ ಕುಂದಾದ್ರಿ ಬೆಟ್ಟದಲ್ಲಿ ಮಾತಾಡಿದ ಮೌನ, ಎಲ್ಲಾ ಬಂಧಗಳಿಂದಲೂ ಮುಕ್ತಿ ಹೊಂದಿದ ಎನ್ನುವ ನಿರ್ಲಿಪ್ತತೆ,ರಾತ್ರಿ ಕತ್ತಲು ಗೆದ್ದ ಖುಷಿ – ಹೊಸ ಆವೇಘದ ಬಣ್ಣದ ಕನಸು ಬರೆಸಿತ್ತು – ನಮ್ಮೊರಲ್ಲೂ ಇಂತದ್ದೊಂದು ಚೆಂದದ ಕನಸಿನಮನೆ ಕಟ್ಟಿಕೊಂಡು ಸ್ವರ್ಗ ಸೃಷ್ಟಿಸಿಕೊಳ್ಳುವ ಕನಸು ,ಹೊಸದಾಗಿ ಜೀವಿಸುವ ತವಕ .

ನಿಸ್ಸಾರ್ ಅಹಮದ್ ರವರು ಕಂಡ “ಜೋಗದ ಸಿರಿ ಬೆಳಕಿ”ಗಿಂತ , ಮೂಗೂರು ಮಲ್ಲಪ್ಪನವರ “ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ” ಪ್ರಶ್ನೆಗಿಂತ ಹೆಚ್ಚು ಬೇಗ ಜ್ಞಾಪಕಕ್ಕೆ ಬರೋದು ಯೋಗರಾಜ್ ಭಟ್ಟರ ಮುಂಗಾರುಮಳೆ.ಇಲ್ಲೇ ಜೋಗದ ಗುಂಡಿಯಲ್ಲೇ ಅಲ್ವಾ ಕಣ್ಣುಮಿಟುಕಿಸಿ ಕನಸುಸೂರೆಗೊಂಡ ನನ್ನ ಹುಡುಗ ಚುಂಬಿಸಿ ಹುಡುಗಿಯನ್ನು ಪ್ರೀತಿಗೆ ಬೀಳಿಸಿಕೊಂಡಿದ್ದು ..

ಬೀಗರ ಮನೆಯ ಚಿತ್ರದುರ್ಗವೂ ಅಷ್ಟೇ ಚಂದವಿತ್ತು .ಅಜ್ಜಿಯ ನರಿಗೆ ಕೈಗಳ ಒರಟು ಬೆರಳುಗಳು ತಲೆಗೆ ತಿಕ್ಕಿದ ಹರಳೆಣ್ಣೆ ,ಹಬೆಯಾಡೋ ಹಂಡೆಯಲ್ಲಿ ಮೊಗೆದರೂ ಮುಗಿಯದ ಬಿಸಿಬಿಸಿ ನೀರು ,ಹೊಗೆ ಸುತ್ತಿ ಹಿತವಾಗಿ ಉಸಿರುಗಟ್ಟಿಸೋ ಅಭ್ಯಂಜನ ,ಕೋಳಿ ಹಿಡಿಯಲು ಓಡೋ ಮಕ್ಕಳು , ಕಲ್ಲಿನಲ್ಲಿ ಮಸಾಲೆ ಅರೆದು ಕೆಂಡದಲ್ಲಿ ಉರಿದು ಹದವಾಗಿ ಬೇಯಿಸಿದ ನಾಟಿಕೋಳಿ ಸಾರು ,ಸಿಯಾಳಾದ ತಲೆಕೊಚ್ಚಿ ಹೀರಲು ನೀಡಿದ ಸಿಹಿ ಎಳನೀರು , ದಾಳಿಂಬೆ , ಹುರಿದ ಕಡಲೆಪುರಿ, ಹೋಳಿಗೆಗೆ ಹಾಡಿ ನಾಟಿತುಪ್ಪ , ಮರದ ಸೀಬೆಹಣ್ಣು , ಗಿಡದ ಬದನೇಕಾಯಿ , ಎಮ್ಮೆಯ ಗಟ್ಟಿ ಹಾಲು –ಹಳ್ಳಿಯಲ್ಲಿ ಸೊಗಸಿದೆ .
ಆಸ್ಟ್ರೇಲಿಯಾ ಹುಡುಗ -ಅಂಕಲ್ ತೋರಿಸಿದ ಫೋಟೋ ಗೆ , ನನ್ನೊಳಗಿನ ಉತ್ತರ ,ಹುಡುಗ handsome ಆದರೆ ಅಗೋ ಮಾತಾ ಅದೆಲ್ಲ , ಅಂಕಲ್ ಆಥಿತ್ಯ ಸೊಗಸಿದೆ, ರಜಹಾಕಿ ಇನ್ನೊಂದಿಷ್ಟು ದಿನ ಇಲ್ಲೇ ಉಳಿದು ಬಿಡಲೇ ?

ಉಳಿಯಬಹುದಿತ್ತು , ಹಾಗೆ ಕರೆಂಟ್ ಸಹ ಇರದ ನಟ್ಟನಡು ಮೂರರ ಜಾವದ ರಾತ್ರಿಯಲ್ಲಿ, ಕೈಗೆ ಸಿಗದ ನನ್ನ ಸೆಲ್ಲು ನಾಲ್ಕು ಬಾರಿ ಬಡೆದುಕೊಂಡು , ಉಸಿರು ಕಳಕೊಂಡು ಸತ್ತು , ಬೆಳಗ್ಗೆ ಬೆಚ್ಚಿಬೀಳಿಸದೆ ಇರದ್ದಿದ್ದರೆ.oncall customer defect ಬಂದು ಕೂತ್ತಿತ್ತು ,immediate ಮೀಟಿಂಗ್ ನಿಗದಿಯಾಗಿತ್ತು .ಮಧ್ಯಾನದ ವೇಳೆಗೆ ಊರು ಬಿಡುವಾಗ ಮಾರಿ ಹಬ್ಬದ ತೇರಿಗುಳಿಯದೇ ಹೋಗುತ್ತಿರುವುದಕ್ಕೆ, ಆಂಟಿಗಾದ ಬೇಸರಕ್ಕೆ , ಸಾರೀ ಕೇಳಿದೆ.ಇದೇ ಕಾಲ್ ಆ ಮನೆಯಲ್ಲಿ ರಿಂಗನಿಸಿದ್ದಿದ್ದರೆ…ಬೆಳಗ್ಗೆಯೋಷ್ಟಿಗೆ ನೆಂಟರ ಕಾಪ್ ಪಂಚಾಯ್ತಿ ನೆರವೇರಿರುತಿತ್ತು.ಅಮೇರಿಕಾ ಅದರೇನು, ಅವನ್ಯಾರು ಸೊಸೆಗೆ ಮಧ್ಯ ರಾತ್ರಿಲಿ ಕಾಲ್ ಮಾಡೋಕೆ , ಬೇಕಿದ್ದರೆ ಇಂಡಿಯಾಗೆ ಬರಬೇಕು, ಮನೆಗೆ ಬಂದು ಮಾತಾಡಬೇಕು, ಅವಳಿಗೂ ಇವಳಿಗೂ ಏನು ಸಂಬಂಧ ,ಸಂಸಾರಸ್ತೆಯರಿಗೆ ,ಗರತಿಯರಿಗೆ ಹೀಗೆ ಕಾಲ್ ಬರಬಾರದು ಅವಳ ವಾದ …ಮುಗಿದಿದೆ ಅಲ್ವಾ ಎಲ್ಲ ಈಗ, ಮತ್ಯಾಕೆ ಕಹಿ ನೆನಪು !

ಅಂತು ಪ್ರವಾಸವೆಂದರೆ ಹೀಗೆ ಸಣ್ಣಸಣ್ಣ ಖುಷಿ , ಪಯಣದ ಸುಖ .ಕೆಲವೊಂದನ್ನು ಕಳಕೊಳ್ಳುವುದಕ್ಕೆ, ಮತ್ತು ಹಲವನ್ನು ಪಡೆದುಕೊಳ್ಳುವುದಕ್ಕೆ .ಜೀವನನ್ನು ಪ್ರವಾಸದಂತೆ ತೆಗೆದುಕೊಳ್ಳಬೇಕಿತ್ತು .ಗಮ್ಯದೆಡೆಗೆ ಗುರಿ ನೆಟ್ಟು , ಪಯಣದ ಅದೆಷ್ಟೋ ಖುಶಿಗಳನ್ನು ವೃತಾ ಹಾಳುಮಾಡಿಕೊಂಡ್ಡಿದ್ದಾಯ್ತು.ಅಲ್ಲಿ ತಲುಪಿದಾಗ ಅರಿವಾದದ್ದು ಸ್ವಾಗತಿಸೋಕೆ ಕೂಡ ಯಾರು ಇರಲಿಲ್ಲ .ಕೆಲವೊಮ್ಮೆ ತಲುಪಬೇಕಾದ ಗಮ್ಯಕ್ಕಿಂತ,ಸಾಗುವ ಹಾದಿಯ ಪಯಣವೇ ಚೆಂದವಿರುತ್ತೆ,ಕಣ್ಣು ತೆರೆದು ಕೂರಬೇಕಷ್ಟೇ.
ಇನ್ನಾದರು attitude ಬದಲಾವಣೆ ಮಾಡಿಕೊಳ್ಳಬೇಕು .

ಲಾಯರ್ ಜಗನಾಥ್ ಅಂಕಲ್ nomore ..!!!

lawyer

ಕಿವಿಗೆ earphone ತಗುಲಿಸಿಕೊಂಡು ,ಚಲಿಸುತ್ತಿದ್ದ ಬಸಿನಿಂದಾಚೆ ನೋಡುತ್ತಿದ್ದಾಗ bridge ಕೆಳಗಡೆ ತೂಗುಹಾಕಿದ್ದ flex ಕಂಡು ಒಂದುಕ್ಷಣ ಅವಕ್ಕಾದೆ. ಅದು ಜಗನಾಥ್ ಅಂಕಲ್ ಫೋಟೋ .ಈ ವಯಸಲ್ಲಿ ಫ್ಲೆಕ್ಸ್ ಅಂದ್ರೆ , ಅದೇ….. ಊಹಿಸಿತು ಮನಸು . ಇಣುಕಿ ನೋಡಿದೆ …ಭಾವಪೂರ್ಣ ಶ್ರದ್ಧಾಂಜಲಿ ಟೈಟಲ್…
ಅಪ್ರಯತ್ನಪೂರ್ವಕವಾಗಿ ಕೈ earphoneನನ್ನು ಕಿವಿಯಿಂದ ಕಿತ್ತುಹಾಕಿತು.. ಛೆ ..ಹೀಗಾಯ್ತ!! ಒಂದೆರಡು ಕ್ಷಣ ಪೂರಪೂರ ಸ್ಥಬ್ದ …ಮನಸು ಮೈಯೆಲ್ಲಾ ಅರೆ ಘಳಿಗೆ ತಣ್ಣಗೆ ದಿಗ್ಬ್ರಾಂತ !

ವಿಷಯ ತಿಳಿಸೋಕೆ ಅಕ್ಕನಿಗೆ ಫೋನ್..”ಲಾಯರ್ ಜಗನಾಥ್ ಅಂಕಲ್ nomore …!!ಈಗ ತಾನೇ ಫ್ಲೆಕ್ಸ್ ನೋಡಿದೆ “.
“ಓ ಹೌದ ! ಛೆ … ಮನೆಯವರಿಗೆ ತಿಳಿಸುತ್ತೇನೆ ಬಿಡು ” ಅಂದಳು …
“ಅಯ್ಯನಿಗೆ ಫೋನ್ ಮಾಡು, mostly ಗೊತ್ತಾಗಿರುತ್ತೆ , ಯಾವಾಗ ಹೀಗಾಯ್ತು ಕೇಳು, ನಿಮ್ಮ ಮಾವನಿಗೆ ತಿಳಿಸು , ಅವತ್ತಿಂದ ನೆನೆಸಿಕೊಳ್ಳುತ್ತಿದ್ರು, ಹೋಗಿ ಮಾತಾಡಿಸಿಕೊಂಡು ಬರೋಣ ಅಂತಿದ್ರು ..”
ಇನ್ನೂ ಏನೇನೋ ಹೇಳ್ತಿದ್ದೆ …
“ಹ್ಞೂ ಆಯ್ತು ಬಿಡೂ ….!!! ” ರಾಗ ಎಳೆದಳು , ಸುಮ್ಮನೆ ನೀನ್ಯಾಕೆ ಇಷ್ಟೊಂದು ಫೀಲ್ ಮಾಡ್ಕೊತಿದ್ಯ ಅನ್ನಂಗಿತ್ತು ಅವಳ ಧ್ವನಿ …

ಗೊತ್ತಿಲ್ಲ .. ವಿಷಾದದ ನಿಟ್ಟುಸಿರು , ಎಷ್ಟು ಹೊತ್ತಾದರೂ ಕಳಕೊಳ್ಳಲಾಗದ ದೀರ್ಘ ಮೌನ …
ಮಾನಸ ಪಟಲದ ಮೇಲೆ ಅವರ ಅಚ್ಚು ಹಾಗೆ ಮೂಡಿತ್ತೇನೋ , ಅಪ್ಪನ ಒಡನಾಟ ನನಗೆ ಹೆಚ್ಚಿದ್ದಿದ್ದರಿಂದ , ಅವರ ಒಡನಾಡಿಗಳ ಪರಿಚಯವೂ ಹೆಚ್ಚೇ ಇತ್ತು .. ಕತೆಗಳಲ್ಲೇ ಆಪ್ತರಾಗಿದ್ದರು ಅವರು …

ಅದೊಂದು ಜಮಾನದಲ್ಲಿ ಊರ ಹಬ್ಬ ,ಊರ ನಾಟಕ, ಮನೆಯ ಸಮಾರೋಪ ಸಮಾರಂಭಗಳಿಗೆ ಅವರು ತಪ್ಪದೇ ಬರುತ್ತಿದ್ದರು …ಆಡುವ ವಯಸಿಗೆ , ಅದು ಅಪ್ಪನ ಗೆಳೆಯನೋ ಇಲ್ಲ ಬಳಗವೋ ಇರಬೇಕು ಎನ್ನುವ ಉದಾಸೀನತೆ …
ಹತ್ತಿರ ಕರೆದು ಕೇಳಿದರು , ನಿನ್ನ ಹೆಸರೇನು ?
ಮತ್ತೆ ಏನೋ ನೋಡಿ ಕಂಡುಹಿಡಿದವರಂತೆ ಹುಮ್ಮಸು, ಆಶ್ಚರ್ಯದಲ್ಲಿ ಹೇಳುತ್ತಿದ್ರು ,”ನೋಡ್ರಿ ನಿಮ್ಮ ಮಗಳ ಹಣೆ ಎಷ್ಟು ದೊಡ್ಡದಾಗಿದೆ ,ಕಂಡಿತ ಬುದ್ದಿವಂತಳಾಗ್ತಾಳೆ”
ಮತ್ತೆ ಮತ್ತೆ ಒತ್ತಿಒತ್ತಿ ಹೇಳುತ್ತಿದ್ರು, “ಎಲ್ರುಗೂ ಹಣೆ ಹಿಂಗೆ ಇರಲ್ಲ,ಬೇಕಾದ್ರೆ ನೀವೇ ಗಮನಿಸಿ , ನಾನು ಹೇಳಿದ್ದು ಸುಳ್ಳಾಗಲ್ಲ, ಎಷ್ಟು ವಿಶಾಲವಾಗಿ , ಉದ್ದಕ್ಕೆ ಇದೆ ನೋಡಿ , ಬುದ್ಧಿವಂತಳಾಗೆ ಆಗ್ತಾಳೆ ”
ಅದ್ಯಾಕೋ ನಾನೆಂದರೆ ವಿಪರೀತ ಮುದ್ದು ಅವರಿಗೆ …
“ದೊಡ್ಡವಳಾದ ಮೇಲೆ ಓದಿ ಏನಾಗ್ತೀಯ ?” ಅವರ ಪ್ರಶ್ನೆ..
ಅವಾಗೆಲ್ಲ ಯಾರೇ ಆ ಪ್ರಶ್ನೆ ಕೇಳುದ್ರೂ ನಾನು ಅಚ್ಚುಕಟ್ಟಾಗಿ ಹೇಳ್ತಿದ್ದಿದ್ದು
“ಓದಿ ದೊಡ್ಡ ಲಾಯರ್ ಆಗ್ತೀನಿ..!! ”
ಪಿಕ್ಚರ್ ನ ಹೀರೋ ಕೋರ್ಟ್ ನಲ್ಲಿ argue ಮಾಡೋ ಸ್ಟೈಲ್ ನೋಡಿಯೋ , ಅಪ್ಪನ ಪ್ರಾಮಾಣಿಕತೆ ನೋಡುತ್ತಲೋ , ನಾನು ಅವರಂತೆ ಅನಿಸಿದ್ದರಿಂದಲೋ ,ನ್ಯಾಯದ ಪರ ,ಅನ್ಯಾಯದ ವಿರುದ್ಧ ಹೋರಾಡೋ ಲಾಯರ್ ಆಗ್ತೀನಿ ಅನ್ನೋದು ಬಾಲ್ಯದ ಮುಗ್ದ ಗುರಿ, ಮತ್ತು ಕನಸು .
ನನ್ನ ಮಾತು ಕೇಳಿ ಅವರಿಗೆ ಮತ್ತೂ ಖುಷಿಯೋ ಖುಷಿ ..
ಅಗಾ ಅಪ್ಪ ಹೇಳುತ್ತಿದ್ರು , “ಇವರ್ಯಾರು ಗೊತ್ತ, ಇವರು ಲಾಯರ್ ..”
“ನೀನು judge ಆಗಿಬಿಡು , ಇನ್ನೂ ಚೆನ್ನಾಗಿ ಓದಿ …” ಅಂಕಲ್ ಪ್ರೋತ್ಸಾಹ .

ಆಮೇಲಾಮೇಲೆ ಗೊತ್ತಾಗಿದ್ದು ಫ್ಯಾಮಿಲಿ ಡಾಕ್ಟರ ಇದ್ದಂಗೆ ,ಅವರು ಒಂತರ ನಮ್ಮ ಫ್ಯಾಮಿಲಿ ಲಾಯರ್ .
ಜೊತೆಗೆ ಫ್ಯಾಮಿಲಿ ಫ್ರೆಂಡ್ .ಅಪ್ಪನಿಗೂ ಅವರಿಗೂ ಗುರುಶಿಷ್ಯ ಸಂಬಂಧ, ಮೆಚ್ಚಿನ ಗೆಳೆಯ, ಗ್ಲಾಸ್ ಏರಿದಮೇಲೆ ಗಳಸ್ಯಕಂಟಸ್ಯ… ನಾರ್ಮಲ್ ಕ್ಲೈಂಟ್ ಗಿಂತ ವಿಭಿನ್ನ ಅವರಿಬ್ಬರ ಬಾಂಧವ್ಯ .

ಅವರ ಕಾರ್ಯ ವೈಕರಿ ನೆನೆಸಿಕೊಂಡು ಅಪ್ಪ ಹೇಳೋ ಕತೆ ಒಂದಿತ್ತು . ಇನ್ನು ನೆನಪಿದೆ .

ಕೇಸಿನ ಆಲ್ಮೋಸ್ಟ್ ಫೈನಲ್ judgement ದಿನ ಅದು . ಬೆಂಗಳೂರಿನ ದೊಡ್ಡ ಅಗರ್ಭ ಶ್ರೀಮಂತನ 100 ಎಕರೆ ಎಸ್ಟೇಟ್ ಗೆ ನಮ್ಮ ಹೊಲವನ್ನು ಹಾಯ್ದು ಹೋಗಬೇಕಿತ್ತು .ಹೋಗೋಕೆ ಜಾಗಬೇಕ್ಕಿದ್ದವನು some xxx ಅಡಿಗಳನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಅಂತ ಸುಳ್ಳು ಕೇಸ್ ಜಡಿದ್ದಿದ್ದ .ಶ್ರೀಮಂತನಾದ ಕಾರಣಕ್ಕೆ ಅವನ ಬಳಿ ಒಳ್ಳೆ ಲಾಯರ್ ಕೂಡ ಇದ್ದರು .ಸುಳ್ಳು ಕೇಸ್ ಆದ್ದರಿಂದ ಅಪ್ಪನ ಪಿತ್ತ ಕೂಡ ನೆತ್ತಿಗೇರಿತ್ತು , ಒತ್ತುವರಿ ಅನ್ನೋದೆಲ್ಲ ಊರಿನ ಪಟೇಲರ ಕುಟುಂಬಕ್ಕೆ ಅವಮಾನದ ಸಂಗತಿ .ಎಷ್ಟೋ ರಾತ್ರಿಗಳ ನೆಮ್ಮದಿ, ನಿದ್ದೆಕಳಕೊಂಡ್ಡಿದ್ದರು ಅಪ್ಪ
tention, ಪ್ರತೀಕಾರ, ದ್ವೇಷಕ್ಕೆ ಮದ್ಯ ರಾತ್ರಿಗಳವರೆಗೂ ಒಂದರ ಹಿಂದೆ ಒಂದು ಸಿಗರೇಟ್ ಬೀಡಿಗಳು ಭಸ್ಮವಾಗುತ್ತಿದ್ದವು … ಕೇಸ್ ವರ್ಗ ವೈಷಮ್ಯದ ಜೊತೆ ಪ್ರತಿಷ್ಠೆಯ ಸಂಕೇತವೂ ಆಗಿಹೋಗಿತ್ತು.

ಮತ್ತು ಮಾರನೆಯ ದಿನಕ್ಕೆ ಹಿಯರಿಂಗ್ ,ಅಲ್ಲಿನವರೆಗೂ ಯಾವುದೇ positive ಪಾಯಿಂಟ್ಸ್ ಇವರ ಕಡೆಗೆ ಆಗಿರದ್ದುದ್ದರಿಂದ ರಾತಿಯೆಲ್ಲ ಒತ್ತಡದಲ್ಲಿ ಒದ್ದಾಡಿ ಹೋಗಿದ್ದರು ಅಪ್ಪ.
ಬೆಳಗೆದ್ದು courtge ಕರೆದೊಯ್ಯಲು ಲಾಯರ್ ಮನೆಗೆ ಹೋದರೆ , ಭೂಪ ರಾತ್ರಿ ಕುಡಿದ್ದಿದ್ದ ನಿಷೆಯಿಂದ ಇನ್ನು ಎದ್ದೆಯಿರಲಿಲ್ಲ .ಮೈ ಮೇಲೆ ಪ್ರಜ್ಞೆಯೂ ಇರಲಿಲ್ಲ ,
ಎಷ್ಟೆಲ್ಲಾ ಸಾಹಸ ಪಟ್ಟು ಎಬ್ಬಿಸಿದ ಮೇಲೆ, ಯಾವ ಕೇಸ್ ಎಂದು ಕೇಳಿಬಿಟ್ಟರಂತೆ. ಅಪ್ಪ ಮೂರ್ಚೆ ಹೋಗೋದೊಂದೇ ಬಾಕಿ.ಎಂತ ಅಜಾಗರೂಕ ಲಾಯರ್ ನ ನಂಬಿ ಎಡವಟ್ಟು ಮಾಡಿಕೊಂಡೆ ಅಂತ ಪೆಚ್ಚಾಗಿ , ಸಿಟ್ಟಾದರು ತೋರಿಸಿಗೊಳ್ಳದೆ ಜ್ಞಾಪಕಕ್ಕೆ ತರಿಸಿ ವಿವರಿಸಿದ ಮೇಲೆ , ಸಾರೀ ಇವತ್ತು ಕೇಸ್ ಇರೋದು ಮರೆತೇ ಹೋಗಿತ್ತು , ಜಾಸ್ತಿ ಕುಡಿದುಬಿಟ್ಟಿದೆ ರಾತ್ರಿ ಎಂದರಂತೆ ಮಹಾನುಭಾವ .
ಸರಿ ಆಟೋ ಕರೆದುಕೊಂಡು ಬನ್ನಿ , ಹಾಗೆ ಒಂದು k .g ಆಪಲ್ ಕೊಂಡುಕೊಂಡು ಬನ್ನಿ , ಕೇಸ್ ನ ಫೈಲ್ ನೆಲ್ಲ ತೆಗೆದಿರಿಸಿ ಸ್ನಾನ ಮಾಡಿ ಬರ್ತೇನೆ ಎಂದು ಬಚ್ಚಲು ಮನೆಗೆ ಹೋದರಂತೆ .
ಅಪ್ಪನಿಗೆ ಹೆಂಗಾಗಿರಬೇಡ…..ಮರು ಮಾತಾಡದೆ ಹೇಳಿದ್ದೆಲ್ಲ ಮಾಡಿದರಂತೆ , ಆಟೋಲಿ ಹೋಗ್ತಾ ತರಿಸಿಕೊಂಡ ಆಪಲ್ ನ breakfast ಅಂತ ತಿಂದರಂತೆ .ಹಾಗೆ ಫೈಲ್ ಗಳನ್ನೂ ತಿರುಗಿ ಹಾಕಿದರು .
ಅಪ್ಪ . courtge ತಲುಪೋಷ್ಟರಲ್ಲಿ , ಕೇಸ್ ಸೋತಂಗೆ ಅಂತ ಆಸೆ ಬಿಟ್ಟುಬಿಟ್ರು ..
ವಾದವಿವಾದಗಳು ಶುರುವಾಗಿ ಎದುರಾಳಿಯ ಪರವಕೀಲ ದೀರ್ಘವಾದ ವಾದಮಂಡಿಸಿ ,ಇದ್ದಬದ್ದ ಸೆಕ್ಷನ್ ಗಳನೆಲ್ಲಾ quote ಮಾಡಿ ಮುಗಿಸಿದ ಮೇಲೆ , ನಿಮ್ಮ ದೇನಾದರು ಕ್ರಾಸ್ examination ಇದೆಯಾ ಎಂದು judge ಕೇಳಿದಾಗ ,”yes your honour ”
ಎಂದು ಎದ್ದು ನಿಂತು ಕೇಳಿದ್ದು ಒಂದೇ ಪ್ರಶ್ನೆ — “As my learned friend and opponent lawyer accusing my client of fencing off so and so guntas of land illegally, i would like to know to which direction of my clients land property, this acquainted land comes …”
“ಒತ್ತುವರಿ ಆರೋಪ ಮಾಡುತ್ತಿರುವ ಜಾಗ ,ಜಮೀನಿನ ಯಾವ ದಿಕ್ಕಿಗೆ ಬರುತ್ತೆ …? east west north or south ..ನನಗೆ ನಿಖರ ಮಾಹಿತಿ ಬೇಕು ! ”
ಅಖಾಢಕ್ಕೆ ಇಳಿದ ಲಾಯರ್ ಗೆ ಅದೇ ಗೊತ್ತಿಲ್ಲ ….
ಅದೇ ಗೊತ್ತಿಲ್ಲದ ಮೇಲೆ , ಮಾಡುತ್ತಿರೋ ಆರೋಪ ಸುಳ್ಳು, ಕೇಸ್ ಖುಲಾಸೆ ಅಂದರಂತೆ judge .

ಈ ಘಟನೆ ನಂತರವೆ ಫುಲ್ ಹೆಮ್ಮೆ, ಮೆಚ್ಚುಗೆ, ಗೌರವ, ವಿಶ್ವಾಸ ಅಪ್ಪನಿಗೆ ಅವರಮೇಲೆ .ಅಡ್ವೋಕೇಟ್ ಜಗನಾಥ್ ಅಂದರೆ efficient , inteligent ..ಎಷ್ಟೇ ಬೇಕಾಬಿಟ್ಟಿ ಕಂಡರೂ ಕೇಸ್ ಸೋಲೋಲ್ಲ , ಎನ್ನುವ ನಂಬಿಕೆ .ಒಂದಲ್ಲ ನಮ್ಮ ಜಮೀನಿನ ತಕರಾರುಗಳು ಮುಗಿಯದಷ್ಟಿದ್ದವು, ಅದಕೆಲ್ಲ ಅವರೇ ಅನಭಿಷಿಕ್ತ ಲಾಯರ್ .ನಮ್ಮ ಜಮೀನಿನ ತಕರಾರು ಅಷ್ಟೇ ಅಲ್ಲ, ಊರಲ್ಲಿ ಯಾರದ್ದೇ ಏನೇ ತಕರಾರಾದ್ರು ಅಪ್ಪ ಅವರನ್ನು ಲಾಯರ್ ಆಗಿ ಪರಿಚಯಿಸುತ್ತಿದ್ರು .ಬಹಳಷ್ಟು ಊರವರಿಗೂ ಅವರು ಗೌರವ ಸ್ವರೂಪರು .ಜೊತೆಗೆ ಹಳ್ಳಿ ಜನಕೆಲ್ಲ ಕಡಿಮೆ ದರದಲ್ಲಿ, ಕೆಲವೊಮ್ಮೆ ಫ್ರೀಯಾಗಿ ಸೇವೆ ಒದಗಿಸುತ್ತಾರೆ ಎನ್ನುವ ಒಳ್ಳೆ ಮಾತುಗಳು ಪ್ರಚಲಿತದ್ದಲ್ಲಿದ್ದವು . ಲಾಯರ್ ಗಳ ಬಗ್ಗೆ ಗೌರವ , ಕುತೂಹಲ, ನಾನು ಹಾಗಾಗಬೇಕು ಅನೋ ಹಂಬಲಕ್ಕೆ ಇಂಬಾದವರು ಅವರು .

ಅವರ ಮನೆಗೆ ಹೋಗಬೇಕಾದಾಗ ಕೆಲವೊಮ್ಮೆ ನನ್ನನ್ನು ಕರೆದೊಯ್ಯುತ್ತಿದ್ರು , ನೋಡು ಅವರ ಮಕ್ಕಳು ಎಷ್ಟು ಚೆನ್ನಾಗಿ ಓದಿ ಒಳ್ಳೊಳ್ಳೆ ಹುದ್ದೆಯಲ್ಲಿದ್ದಾರೆ , ಮಗಳು ಅವರ ತರಹಾನೇ ಲಾಯರ್ ಆಗಿ ಪ್ರಾಕ್ಟೀಸ್ ಮಾಡ್ತಿದ್ದಾಳೆ ,ಇನ್ನೊಬ್ಳು ಡಾಕ್ಟರ , ಮಗ ಇಂಜಿನಿಯರ್ ಅಂತೆಲ್ಲ ಹೇಳೋವಾಗ ನೀನು ಹಾಗೆ ಆಗ್ಬೇಕು ಅನ್ನೋ ಬುದ್ಧಿಮಾತು ಇರ್ತ್ತಿತ್ತು .

ಎಲ್ಲ ಮುಗಿದು ತಣ್ಣಗಾದ ಮೇಲೆ ,ಎಷ್ಟೋ ವರ್ಷಗಳ ನಂತರ ಅವರ ಮನೆಗೆ ಹೋಗಿದ್ದಾಗ ಒಂತರ ಸೂತಕದ ಛಾಯೆ ಮನೆ ತುಂಬಾ … ನಿಮಗೆ ಗೊತ್ತಿದ್ಯಲ್ಲ ಅಣ್ಣ ಅಂತ ಅವರ ಹೆಂಡತಿ ಸಂಕೋಚಪಟ್ಟುಕೊಳ್ಳುತ್ತ ಹೇಳೋವಾಗಲೇ ಏನೋ ಕೆಡುಕು ಸಂಭವಿಸಿದೆ ಅನ್ನೋ ಸುಳಿವು ಸಿಕ್ಕಿತು …

ಮನೆಗೆ ಬಂದಮೇಲೆ ಅಪ್ಪ ಮರುಗುತ್ತಿದ್ದರು .
ಮನುಷ್ಯ ಬುದ್ಧಿವಂತ , ಚೆನ್ನಾಗಿ ದುಡಿದ ..ಆದರೆ ವ್ಯವಹಾರಸ್ತ ಅಲ್ಲ .ಮನೆಮಟ ಮಾಡಿಕೊಟ್ಟಿರೋದು ಹೆಂಡತಿಯ ಅಣ್ಣ ತಮ್ಮಂದಿರು , ತವರಿನವರು ಸೌಂಡ್ ಪಾರ್ಟಿಗಳು …ಮೊದಲನೇ ಮಗಳ ಗಂಡ ಚಿಕ್ಕವಯಸಿಗೆ ತೀರಿಕೊಂಡು ಬಿಟ್ಟ ಅದೊಂದು ದುಃಖ …
ತುಂಬಾ ಪ್ರೀತಿಸುತ್ತಿದ್ದ , ತುಂಬಾ ನಂಬಿದ್ದ ಇನ್ನೊಬ್ಬ ಮಗಳು ಕ್ರಿಶ್ಚಿಯನ್ನ ಲವ್ ಮಾಡಿ ಹೇಳದೆ ಕೇಳದೆ ಮದುವೆಯಾಗಿಬಿಟ್ಟಳು… ಅವರು ಚೂರಗಿದ್ದು ಆಗಲೇ ….
ಸಮಾಜದಲ್ಲಿ,ಬಂಧುವರ್ಗದಲ್ಲಿ, ವಿಪರೀತ ಅವಮಾನಕೊಳ್ಳಗಾಗಿ ಕಿನ್ನತೆಗೆ ಒಳಗಾದರು ..ಅಷ್ಟು ಗಟ್ಟಿ ಇದ್ದ ಮನುಷ್ಯ ಮೆತ್ತಗಾಗಿ ಹೋದ . judge ಆಗೋಷ್ಟು ಕೆಪ್ಯಾಸಿಟಿ ಇತ್ತು ..ಆದರೆ ವೃತ್ತಿಯಲ್ಲಿ ಆಸಕ್ತಿ , concentration ಕಳಕೊಂಡು
ಪ್ರಾಕ್ಟೀಸ್ ಮಾಡೋದನ್ನೇ ಹೆಚ್ಚು ಕಮ್ಮಿ ಬಿಟ್ಟೆಬಿಟ್ಟರು…ಯಾವಾಗಲು ಡ್ರಿಂಕ್ಸ್ , ಇಸ್ಪೀಟ್ , ಕ್ಲಬ್ ಮನೆ ಸೇರಲ್ಲ …ಎಲ್ಲರ ಮೇಲೂ ರೇಗೋದು, ಉರಿದು ಬೀಳೋದು , ನೆಮ್ಮದಿ ಇಲ್ಲದೇ ಒದ್ದಾಡೋದು ..

ಮಗಳು ಲವ್ ಮಾಡಿ ಮದುವೆ ಆಗಿದ್ದಕ್ಕೆ ಅಷ್ಟೊಂದ್ಯಾಕೆ ಡಿಸ್ಟರ್ಬ್ ಆಗಬೇಕು..?

ಬೇರೆ ಜಾತಿ ಆದರೆ ಸರಿ , ಅಡ್ಜಸ್ಟ್ ಮಾಡ್ಕೊಬೋದು …ಹೋಗಿಹೋಗಿ ಬೇರೆ ಧರ್ಮದವನನ್ನ ಪ್ರೀತಿಸಿದಳು …ಅದು ಮನೆಯಲ್ಲಿ ಹೇಳದೆ ಕೇಳದೆ ಓಡಿ ಹೋದಳು .ಶಾಕ್ ಆಗಲ್ವ ಅಷ್ಟೆಲ್ಲ ಮರ್ಯಾದೆ, ಗೌರವ ಸಂಪಾದಿಸಿದ ತಂದೆಗೆ, ನಂಬಿದ ಮಗಳೇ ಹೀಗೆ ಮಾಡಿದರೆ .ಇನ್ಯಾರು ಸಿಗಲಿಲ್ವಾ ಅವಳಿಗೆ .. ಈ ಹೆಣ್ಣುಮಕ್ಕಳು ಅಂದ್ರೆ ಮಡಿಲಕೆಂಡದಂತೆ …..!!!! ಗುರುವಿನ ಕ್ಯಾರಿಯರ್ ಹಳ್ಳ ಹಿಡಿದ್ದಿದ್ದಕ್ಕೆ , ಕಿನ್ನತೆಗೆ ಒಳಗಾಗಿ ಚಟಕ್ಕೆ ದಾಸರಾಗಿದ್ದಕ್ಕೆ ಅಪ್ಪನ ಕೋಪ ಹೆಣ್ಣುಮಕ್ಕಳ ಮೇಲೆ …

ಚುಕಚಾಪ್ !!
ಒಬ್ಬ ಮನುಷ್ಯ ಖಾಸಗಿ ವಿಷಯಗಳಿಗೆ , ಕೌಟಮ್ಬಿಕ ಸಮಸ್ಯೆಗಳಿಗೆ ಹೇಗೆ ಕುಸಿದು, ನೆಲಕಚ್ಚಿ , ಅಘಾತಕ್ಕೊಳಗಾಗಿ ಎಲ್ಲ ಕಳಕೊಳ್ತಾನೆ… ಹೆಣ್ಣುಮಕ್ಕಳು ತಂದೆಯಂದಿರಿಗೆ ಈ ನೋವು ಕೊಡಬಾರದು ಅನಿಸಿದ್ದು ಆಗಲೇ ಇರಬೇಕು …ಭಯ ಮತ್ತು ಪಾಪ ಅನಿಸಿದ್ದು !

ಅದೆಷ್ಟೋ ವರ್ಷ ಸುದ್ದಿ ಇರಲಿಲ್ಲ .
ಆಗೊಮ್ಮೆ ಈಗೊಮ್ಮೆ ನೀವು ಕಳಿಸಿದ ನಿಮ್ಮೂರಿನ client ಸರಿಯಾಗಿ ಫೀಸ್ ಕೊಟ್ಟಿಲ್ಲ ಅಂತ ದೂರೋಕೆ ಒಂದೆರಡು ಫೋನ್ .
ಅವರನ್ನು ಕೇಳಿದರೆ ಸರಿಯಾಗಿ ಕೇಸ್ ಅಟೆಂಡ್ ಮಾಡ್ತಿಲ್ಲ ಅನ್ನೋ ಉತ್ತರ …
ಹಾಗು ಹೀಗೂ ರಾಜಿಮಾಡಿಸಿ ಏನೋ ಸೆಟ್ಲ್ ಮಾಡಿಸಿ ಬರುತ್ತಿದ್ದರು ಅಪ್ಪ .ಮತ್ತು ಅದನ್ನೆಲ್ಲಾ ನೇರಾನೇರಾ clubಗೆ ತಗೆದುಕೊಂಡು ಹೋಗಿಬಿಡ್ತಾರೆ -ಹೆಂಡತಿಯಾ complaint !

ನಮ್ಮ ಈಗಿನ ಕೇಸ್ ನು ಅಂಕಲ್ ಗೆ ಕೊಡಬಹುದಲ್ವಾ ಕೇಳಿದೆ ..
ಇಲ್ಲಪ್ಪ , ಈಗ ಅವರು ಸರಿಯಾಗಿ ಅಟೆಂಡ್ ಮಾಡಲ್ಲ . ಮತ್ತೆ ವಿಪರೀತ ಫೀಸ್ ಕೇಳ್ತಾರೆ …
almost he is retired ..

ಎಷ್ಟೋ ವರ್ಷಗಳ ನಂತರ ಅವತ್ತು ಮನೆಗೆ ಬಂದ್ದಿದ್ದರು ..
ಕೊಂಚ ನೆಮ್ಮದಿಯಿಂದ ಇರುವಂತೆ ಕಂಡರು…ಅವರೊಡನೆ ನೇರಾ ಮಾತಾಡಿ ದೊಡ್ಡ ಗ್ಯಾಪ್ ಆಗಿಹೋಗಿತ್ತು .ಈಗ ಬೆಳೆದು ದೊಡ್ಡವಳಾಗಿದ್ದೆ…
ಮತ್ತದೇ ಮುದ್ದು, ಮೆಚ್ಚುಗೆ ನನ್ನ ಮೇಲೆ …
“ಹುಡುಗಿ ಇಲ್ಲಿ ಕೇಳು, ನಿನ್ನ ಮದುವೆ ಎಲ್ಲೇ ಆದರು ಹೇಗೆ ಆದರು , ನನ್ನ ಕರೆಯೋದು ಮಿಸ್ ಮಾಡಂಗೆ ಇಲ್ಲ ..ನಿನ್ನ ಮದುವೆಗೆ ಬರಲೇಬೇಕು ನಾನು …ನನ್ನ ಮರೆತು ಬಿಟ್ಯ ಆಮೇಲೆ ” ಆರ್ಡರ್ ಹೊರಡಿಸಿದ್ದರು.
ಮದುವೆ ಮಾಡಿಸೋದು ಅಪ್ಪ, ಕರೆಯೋದ ಅವರಿಗೆ ವಹಿಸದೆ ನನಗ್ಯಾಕೆ ಹೇಳ್ತಿದ್ದಾರೆ ಅಂದುಕೊಂಡೆ .

ಮತ್ತೆ ಗಳಸ್ಯಕಂಟಸ್ಯ ಕೊಂಡಿ ಸೇರಿತು .ಅಪ್ಪ, ಊರಹಬ್ಬಕ್ಕೆ ಕರೆದುಕೊಂಡು ಹೋಗಿ, ಜೊತೆ ಕೂತುಕುಡಿದುಬಂದರು ..

ಮತ್ತೆ ಬಂದಾಗ ಸಕ್ಕತ್ ಖುಷಿಯಲ್ಲಿದ್ರು. ಮೊಮ್ಮೊಗ ಯಾವುದೊ ಹುಡುಗಿನ ಲವ್ ಮಾಡಿದಾನೆ, ಬಾಯಿಬಿಟ್ಟು ಹೇಳಿದ , ನಾವೇ ಮದುವೆ ಗೊತ್ತು ಮಾಡಿದ್ದೀವಿ …ಮಾತಾಲ್ಲಿ ಹೆಮ್ಮೆ ಇತ್ತು ..
ಲವ್ marriage ನ ಅಷ್ಟೆಲ್ಲ ತಲೆಗೆ ಹಾಕಿಕೊಂಡು ನರಳಿದ್ದ ಅದೇ ಮನುಷ್ಯ ಇವತ್ತು ಹೇಗೆ ಇಷ್ಟು ಹಗುರಾಗಿ, ಹಾಯಾಗಿ ಒಪ್ಪಿಕೊಂಡರು …ಮಾಗಿದ್ದಾರೆ ..ಬದಲಾಗಿದ್ದಾರೆ .
ಜೊತೆಗೆ –“ನೀನು ಯಾರನ್ನಾದರು ಇಷ್ಟಪಟ್ಟಿದ್ರೆ ನನ್ನ ಹತ್ರ ಹೇಳು, ನಿಮ್ಮ ಅಪ್ಪನ ನಾನು ಒಪ್ಪ್ಪುಸ್ತೇನೆ ” ಅಂದರು…
ಅವರು ಹೇಳಿದ್ರೆ ಅಪ್ಪ ಕಂಡಿತ ಒಪ್ಪುತ್ತಿದ್ರು ..ಆದರೆ ಅದರ ಅಗತ್ಯ ಇರಲಿಲ್ಲ ನನಗೆ .

ಅವಳು ನಿಶ್ಚಯಿಸಿದ್ದಳು , ಯಾರು ಬದಲಾಯಿಸಲು ಸಾಧ್ಯವಿರಲಿಲ್ಲ ಅವಳ ನಿರ್ಧಾರವನ್ನ …ಅಪ್ಪ ಕೂಡ ಗಟ್ಟಿಮನಸು ಮಾಡಿಬಿಟ್ಟಿದ್ರು ..ಆಗ ಕರೆಸಿದ್ದು ಇದೆ ಅಂಕಲ್ ನ …
ಲೀಗಲ್ ಒಪೀನಿಯನ್ ಗೆ….
ಆತುರದ ನಿರ್ಧಾರ ಬೇಡ , ಹೆಣ್ಣುಮಗಳ ಜೀವನ, ನಿಮಗೆ ತಿಳಿಯಲ್ಲ ಸುಮ್ಮನಿರಿ ಅಂದರು ..
ಅಪ್ಪ ಮೆತ್ತಗಾಗಿ ಹೋದರು …
ಮಾತಾಡಿ, ತಪ್ಪು ಮನವರಿಕೆ ಮಾಡಿಕೊಟ್ಟು, ಬುದ್ಧಿ ಹೇಳಿ ಕಾಲಿಗೆಬೀಳು ಎಂದು ಅವನಿಗೆ ಹೇಳಿದಾಗ ಅವನು ಅದಕ್ಕೂ ತಯಾರಿದ್ದ !!!
ಬೀಳಲು ಹೋದಾಗ ಅಪ್ಪ ಹೇಳಿದ್ದು ಒಂದೇ ಮಾತು, ಕಾಲಿಗೆಲ್ಲ ಬೀಳೋದು ಬೇಕಿಲ್ಲ , ಅವಳ ಕಣ್ಣಲ್ಲಿ ನೀರು ಬಾರದ ಹಾಗೆ ಬಾಳಿಸು, ಅಷ್ಟೇ ಸಾಕು ನನಗೆ .

ಅಲ್ಲಿಂದಾಚೆ ಎಲ್ಲ ಸರಿ ಹೋಯ್ತು …ಒಂದು ಸಂಸಾರ ಉಳಿಯಿತು !

ಅಪ್ಪ ಕಣ್ಣು ಮುಚ್ಚಿದಾಗ ,ಅಂಕಲ್ ಗೆ ಫೋನ್ ಮಾಡಿದ್ದು ನಾನೇ …
ಅಯ್ಯೋ, ಎಂತದ್ದು ಆಗಿ ಹೋಯ್ತು ಅಂತ ಗಾಬರಿಗೆ ಕೂಗಿದವರು ಈಗಲೇ ಬಂದೆ ಅಂದರು ಅಷ್ಟೇ …ಅಳು ಬಂದಿದ್ದು ಆಗಲೇ ನನಗೆ ..
ಪರಮ ಗುರುವಿನ ಮೆಚ್ಚಿನ ಗೆಳೆಯ ಮುಂಚಿತವಾಗಿ ಹೊರಟಿದ್ದ …ಹೂ ಹಾಕುವಾಗ ಕಣ್ಣುಗಳು ಸುರಿದ್ದಿದ್ದು ಕಣ್ಣಾರೆ ಕಂಡೆ ..ಅಂತ ಅವಿನಾಭಾವ ಸಂಬಂಧ ಅವರಿಬ್ಬರದ್ದು .

ಅವರು ಹೇಳಿದ್ದು ನಿಜ , ನೆನಪು ಇತ್ತು ಮತ್ತು ನಾನೇ ಖುದ್ದು ಕರೆಯುವ ಹಾಗಾಯಿತು …ಹೋದಾಗ ಮನೆಯಲ್ಲಿ ಯಾರು ಇರಲಿಲ್ಲ ..ಕಾರ್ಡ್ ನ .ಬಾಗಿಲಿಗೆ ಸಿಕ್ಕಿಸಿ ಬಂದಿದ್ದೆ… ಅದು ನಾನು ಅಂತ ಗೊತ್ತಾಯ್ತೋ ಇಲ್ಲವೋ ಗೊತ್ತಿಲ್ಲ..ಮದುವೆಗೆ ಬರಲಿಲ್ಲ …
ಮುಂಚೆನೇ ಎಲ್ಲ ಗೊತ್ತಾಗ್ತಿತ್ತ ಅವರಿಗೆ , ಮದುವೆಗೆ ಕರೆಯೋಕೆ ಅಪ್ಪ ಇರಲ್ಲ, ಮುರಿವ ಮದುವೆಗೆ ಹೋಗೋ ಅವಶ್ಯಕತೆ ಇರೋಲ್ಲ …

ಅವರನ್ನೇ ಕರೆಯೋಣ ನಿನ್ನ ಕೇಸ್ ಗು ಅಕ್ಕನ ಯೋಚನೆ …
NO .. I cant face him ..
ನಾನು ಲಾಯರು ಆಗಲಿಲ್ಲ , ಬುದ್ಧಿವಂತೆಯು.. ಈ ಕ್ಷಣ ನ್ಯಾಯಾಂಗ ಕಾರ್ಯಾಂಗದಲ್ಲಿ ನಂಬಿಕೆಯೂ ಉಳಿದಿಲ್ಲ .
ಬುದ್ದಿವಂತೆ ಆಗ್ತೀನಿ ಅಂದಿದ್ರು , ಈಗ ದಡ್ಡಳಾಗಿ ಹೋದೆ ಅಂತ ತೋರಿಸೋಕೆ ಎದುರು ನಿಲ್ಲೋಕೆ ಇಷ್ಟವಿಲ್ಲಾ … . ಸಂಪಾದಿಸೋದು ಸುಲಭ, ಕಳಕೊಳ್ಳೋ ಮನಸಿಲ್ಲ ..ಅವನು , ಅವನ ಮಾತು ತೂ ಏನು ಉಳಿಸಲ್ಲ, ಅವನನ್ನು ಯಾರು ತಿದ್ದಲು ಸಾಧ್ಯವಿಲ್ಲ ! ಒಪ್ಪದು ಮನಸು.

ಮತ್ತು ಇವತ್ತು ಶ್ರದ್ಧಾಂಜಲಿ flex ..ಭಾವುಕಳಾಗೋದಕ್ಕೆ ನನಗೆ ನನ್ನದೇ ಕಾರಣ ಇತ್ತು ….ಅಕ್ಕನ ನಿರಕ್ತಿ ರಾಗಕ್ಕೆ ಗೊತ್ತಿಲ್ಲದ್ದು…! RIP ಲಾಯರ್ ಜಗನಾಥ್ ಅಂಕಲ್ … 😦

ಯಾರ ದಾರಿ ಸರಿ, ಯಾರ ನಡಿಗೆ ತಪ್ಪು

92713-ayak-izleri

ಕಾಲು ಎಡವಿತು ..
ರವಿ ಅಂದ ಏನ್ ಹೇಮಾ ಎಡವಿಬಿಟ್ರಾ  , ನಮಗೆಲ್ಲ ಎಡವೋ ಟೈಮ್ ಆಗೋಗಿದೆ ಅಲ್ವಾ,  ಮದುವೆ ಆದ್ಮೇಲೆ …
ಜೋಕ್ ಅನ್ಕೊಂಡು ಮಾಡಿರಬೇಕು ಅವನು…
ನಗು ಬರಲಿಲ್ಲ ಸಂಕಟ ಆಯಿತು …
ಮನಸಲ್ಲೇ ಮೂಡಿ ಮರೆಯಾದ  ಮಾತುಗಳು  ,
 ಹೌದು ರವಿ ,ಎಡವ ಬೇಕಾದಾಗ ಎಡವಲಿಲ್ಲ , ನಡಿಗೆ ಸರೀನೆ ಇತ್ತು …
ಮದುವೆ ಆದಮೇಲೆ ಎಡವಿದ್ದು … .. ಎಲ್ಲಿ ಅಂತ ಗೊತ್ತಾಗ್ತಿಲ್ಲ … handle ಮಾಡಿಕೊಳ್ಳೋದ್ರಲ್ಲ, ಆಯ್ಕೆ ಮಾಡಿಕೊಳ್ಳೋದ್ರಲ್ಲ  , ಅಡ್ಜಸ್ಟ್ ಮಾಡಿಕೊಳ್ಳೋದ್ರಲ್ಲ  … ಎಡವಿದೆನೋ ಏಮಾರಿದೇನೋ ಎಮಾರಿಸಿದರೊ ಗೊತ್ತೇ ಆಗ್ತಿಲ್ಲ …!!

ತುಂಬಾ ಜನ ತೊಡರುತ್ತಿರೋ ಸದ್ದು ಕೇಳುಸ್ತಾ ಇದೆ ..ಏನು ಸಮಸ್ಯೆ ?
ಯಾವ ಸಮೀಕರಣಕ್ಕು  ಸಿಗದ ನಿಗೂಢ ಬದುಕು .

ಕತೆ ಒಂದು :
ಅವನು ಹಾಕೋ quoteಗಳಲ್ಲೇ ಗೊತ್ತಾಗುತ್ತೆ ಅಸಮಾದಾನದ ಹೊಗೆ ಆಡ್ತಿದೆ ಅಂತ .. …
ನೋಡಿದಾಗಲೇ ಅಂದುಕೊಂಡಿದ್ದೆ ಇದು ಮಹಾನ್ ವಯ್ಯಾರದ ಬೊಂಬೆ , ಪೋಗರ್ದಸ್ತು artificial ಅಂತ …
ಅವನ ಬಗ್ಗೆ ಗೊತ್ತಿತ್ತು ನನಗೆ.. ಸೀದಾ ಸಾದಾ ಪ್ರಾಮಾಣಿಕತೆ ಬಯಸೋ ಸಿಂಪಲ್ ಹುಡುಗ .ಅವನು ನೇರ, ಅವನು ಬಯಸೋದು ನೇರ ..ವಯ್ಯಾರ,ಕೊಂಕಣ ಸುತ್ತಿ ಮೈಲಾರ  ಆಗಿಬರೋಲ್ಲ ಅವನಿಗೆ  …
ಕೆಲವರು  ದುಡ್ಡಿನ ಸೆಕ್ಯೂರಿಟಿ ನೋಡಿ ಆಯ್ಕೆಮಾಡ್ತಾರೆ , ಇನ್ನು ಕೆಲವರು  ಅಂದ,ಚೆಂದ,ಫಿಗರ್ ನೋಡಿ ಆಯ್ಕೆ ಮಾಡ್ತಾರೆ …ದುಡ್ಡನ್ನೇ  ಭದ್ರತೆ ಅಂದುಕೊಂಡಿರ್ತಾರೆ , ಚೆಲುವಿದ್ರೆ ಸುಖ ಅನ್ಕೊತಾರೆ …….ಮೊದಮೊದಲ ಮಾತಲ್ಲಿ ಸಕ್ಕೆರೆಯೇ ತುಂಬಿರುತ್ತೆ , ಒಳಗು  ಏನು ಕಾಣಲ್ಲ …ಎಲ್ಲ ಸಿಹಿಸಿಹಿ ಕುರುಡು …ಆಂತರ್ಯ ಅರಿಯೋದು ಹೇಗೆ ?

ಕತೆ ಎರಡು :
ಅವನಿಗೆ ಆ ತರದ ಭಯ ಇತ್ತ ? Teamleader ,  ಸೂರತ್ಕಲ್ passed  ಔಟ್ ,extremely intelligent , foriegn ರಿಟರ್ನ್ , ಸಿಕ್ಕಾಪಟ್ಟೆ attitude , stylish ಹೀಗೆ ತಾನೇ ಅಂದುಕೊಂಡಿದ್ದು ಎಲ್ಲರು … ಯಾರಿಗೂ ಸಹಾಯ ಮಾಡಲ್ಲ ತುಂಬಾ strict ಅಂತೆಲ್ಲ ಹೇಳಿದ್ರು  ..ಎಷ್ಟೆಲ್ಲಾ ಹೆದರಿದ್ವಿ .. ಅಷ್ಟು handsome ಇದ್ದೋನಿಗೆ ಗರ್ಲ್ ಫ್ರೆಂಡ್ಸ್ .ಇರಲ್ವಾ,ಒಂದಲ್ಲ , ಎಷ್ಟೋ ಇರಬಹುದು , ಅದಕ್ಕೆ ಪೊಗರು … ಪ್ರಪಂಚ ನೋಡಿದವನು …ನಮ್ಮ ತರ್ಕ .

ಅವನ drawerನಲ್ಲಿ ಸಿಕ್ಕ essay  , ಸಾಫ್ಟ್ ಸ್ಕಿಲ್ ಟ್ರೇನಿಂಗನಲ್ಲಿ confess ಮಾಡಿಕೊಂಡು  ಬರೆದಿದ್ದ , “ನಾನು ಸಿಕ್ಕಾಪಟ್ಟೆ ಸಂಕೋಚ ಸ್ವಭಾವದವನು , ಯಾರ ಜೊತೆಗೂ ಬೆರೆಯೋಲ್ಲ , ಮನೆಗೆ ಅಥಿತಿಗಳು ಬಂದರೆ ರೂಮ್ನಿಂದ ಈಚೆಗೂ ತಲೆ ಹಾಕಲ್ಲ , ಆದರೆ ಟೆಕ್ನಿಕಲ್ ಕೆಲಸ ವಿಪರೀತ ಇಷ್ಟ , ಇನ್ನು ಮುಂದಕ್ಕೆ ಆದರು ನಾಚಿಕೆ ಮೀರಬೇಕಿದೆ , ಸ್ವಭಾವ ಸುದಾರಿಸಬೇಕಿದೆ …”

ಅರೆ ಅತಿ ಬುದ್ಧಿವಂತಂಗೆ ಇಂತ ಸಮಸ್ಯೆನ  ? ಅಷ್ಟೊಂದು ಮುಜುಗರನ  ?
ಹೌದು !

ಹೋಗ್ತಾ ಹೋಗ್ತಾ ಗೊತ್ತಾಗಿದ್ದು attitude ಅನ್ನೋದು ಚೂರು ಇರಲಿಲ್ಲ ಅವನಿಗೆ . ಒಂದೂವರೆ  ಲಕ್ಷ ಸಂಬಳ ತೆಗೆಯುತ್ತಿದ್ದವನು , ತಿರುಗಿ ಮುರುಗಿ ತೊಡುತ್ತಿದ್ದದ್ದು ಅವವೇ ನಾಲ್ಕು ಶರ್ಟು .. ಹುಡುಗರ ಹತ್ತಿರ ಎಷ್ಟೇ ಮಾತಾಡುದ್ರು , ಎಂದು ಕೂಡ ಹುಡುಗಿಯರ ಹತ್ತಿರ ಟೆಕ್ನಿಕಲ್ ವಿಷಯ ಬಿಟ್ಟು ಮತ್ತೇನು ಮಾತಾಡಿರಲಿಲ್ಲ ಅವನು .ಅಷ್ಟಕ್ಕೂ ನಾನು ನನ್ನ ಸೀನಿಯರ್ ಇಬ್ಬರೇ ಅಲ್ಲಿದ್ದ   ಹುಡುಗಿಯರು .ಅವಳೇ ಹೇಳಿದ್ದು ಕೆಲಸದಲ್ಲಿ ಯಾರಿಗೂ ಸಹಾಯ ಮಾಡಲ್ಲ ಅಂತ .
ಅಷ್ಟೊಂದೆಲ್ಲ ಹೇಳಿಕೊಟ್ಟನಲ್ಲ  ,ಆಗ  ಅವಳಿಗೂ ಆಶ್ಚರ್ಯ …..ಮತ್ತೆಲ್ಲರಿಗೂ !

ಎಷ್ಟೆಲ್ಲಾ ಖರ್ಚು ಮಾಡ್ತಿದ್ದ   ಟೀಂ ಲಂಚ್ಗೆ .. ಕಾರಿನ ಡೋರ್ ಸಹ ಜೂನಿಯರ್ಸ್ಗೆ  ತೆಗೆಯುತ್ತಿದ್ದ .ಹುಡುಗಿಯರನ್ನ ಆ ಪರಿ ಗೌರವಿಸುತ್ತಿದ್ದವನಿಗೆ ಯಾರು attitude ಪ್ರಾಬ್ಲಮ್  ಅಂದಿದ್ದರೋ   ಗೊತ್ತಿಲ್ಲ .
ಎರಡು ವರ್ಷದಲ್ಲಿ ಮೊದಲ ಬಾರಿಗೆ ಟೆಕ್ನಿಕಲ್ ವಿಷಯ ಬಿಟ್ಟು, ನನ್ನ  ಉದ್ದೇಶಿಸಿ ಮಾತಾಡಿದ್ದು ಒಂದೇ ಸಲ  … ಅವತ್ತು ಟ್ರಿಪ್ನಲ್ಲಿ ಕುಡಿದು ಚೂರೇ ಸೆಂಟಿ ಆಗಿ  , ಸಭ್ಯತೆ ಮೀರದೆ ಮಾತಾಡಿದ್ದು ಅವನ ಬಾಲ್ಯದ ಯಾವುದೋ ಗತನೆನಪಿನ ಬಗ್ಗೆ….  !!!!!  ……
ನಾ ಕಂಡ ಮೊದಲ perfect gentlemen ಅವನು ….
ಯಾರಾದರು ಮದುವೆ ಯಾವಾಗ ಅಂತ ಕಾಲೆಳೆದರೆ , ನನಗೆ ಯಾವ ತಂದೆ ಮಗಳನ್ನು ಕೊಡುತ್ತಾರೆ  ಅನ್ನುತ್ತಿದ್ದ …ಕಾರ್ ಕೊಂಡುಕೊಂಡಾಗ ಚಿಕ್ಕ ಮಗುವಿನ ತರಹ meetingnali ಫೋಟೋ ತೋರಿಸಿ ಸಂಭ್ರಮಿಸಿದ್ದ ….. ಬೆಂಗಳೂರಿನಲ್ಲಿ ಮನೆ ಕೊಂಡುಕೊಳ್ಳುವುದು ಅವನ ಜೀವನದ ಧ್ಯೇಯವಂತೆ  , ಅದಕ್ಕೆ ಫಾರಿನ್ ದುಡ್ಡು ದುಡಿಯಲು onsiteನಲ್ಲಿದ್ದಾನೆ …….

ಅವನಿಗೂ ಮದುವೆಯಾಗಿದೆ ಈಗ  .
ಅಲ್ಲಿಂದಲೇ ತೇಲಿಬರುವ ಸುದ್ಧಿಗಳು .. he  is  not  happy …. ಹೆಂಡತಿ ತುಂಬಾ ಅಂದರೆ ತುಂಬಾ ಎನಿಸುವಷ್ಟು   dominating … ಅವನು ದುಡಿದ ಒಂದೇ ಒಂದು ಡಾಲರನ ಖರ್ಚು ಮಾಡಲು ಅವಳ ಪರ್ಮಿಷನ್ ಪಡೆಯಬೇಕು  , ಸೇವಿಂಗ್ಸ್ ಸೇವಿಂಗ್ಸ್ ಅಂತಾಳೆ .ಗೆಳೆಯರಿಗೆ ಒಂದು ಸಿನಿಮಾದ ticketnu ಕೊಡಿಸಲು ಬಿಡುವುದಿಲ್ಲ …
ಪಾಪದ ಹುಡುಗ..ಜಗಳ ಮಾಡುವ ಸ್ವಭಾವ ಅಲ್ಲ ….ಜನ ಬಯಸುತ್ತಾನೆ …ಹೆಂಡತಿ ವಿಪರೀತ space ಕಸಿದುಕೊಂಡಿದ್ದಾಳೆ…

ಕತೆ 3 :
ರಮ್ಯನ ತಂಗಿಯಂತ ಹುಡುಗಿ ..ವಿಪರೀತ ಬ್ಯೂಟಿಫುಲ್ .ಜೊತೆಗೆ ದುಡ್ಡು, ಧಿಮಾಕು , ಇಂಗ್ಲಿಷು , ಫುಲ್ posch  …. ಅದೆಷ್ಟು ಜನ ತಲೆಕೆಡಿಸಿಕೊಂಡು ತಿರುಗಿದ್ರೊ , ಊಟ ನಿದ್ದೆಬಿಟ್ಟು ಅಲೆದ್ದಿದ್ದರೋ ಅವಳಿಗೆ ಲೆಕ್ಕ ಸಿಕ್ಕಿರಲ್ಲ  .
 ನಾವೇ ನೋಡ್ತಿದ್ವಿ  , ಅವಳು ಕ್ಲಾಸ್ ಗೆ ಬರದಿದ್ದ ದಿನ, impress ಮಾಡೋಕೆ ಅಂತಾನೇ  ಮೆಸೇಜ್ನಲ್ಲೆ ನೋಟ್ಸ್ ಕಳಿಸುವ ಫ್ಯಾನ್ಸ್ ಇದ್ರು ..ಅವಳ ಜೊತೆ ಮಾತಾಡೋದನ್ನೇ ಗೆಲುವು ಅಂದುಕೊಂಡ, ಸ್ಟೇಟಸ್ ಅಂದುಕೊಂಡ ಹುಚ್ಚು  ಹುಡುಗರಿದ್ರು  ..ಅವಳು ಆಡಿದ್ದೆ ಆಟ , ಬೈದಿದ್ದು ಮುದ್ದು … ಫಿಲಂನಲ್ಲಿ ನೋಡಿದ್ದೆವು  ಆತರ ನಾವು  , ಥೇಟ್ ಅಂತದ್ದೆ  ಚಾರ್ಮಿಂಗ್ ಹೀರೋಯಿನ್ …!!
tution sirgu ಅಂತದ್ದೇ ಒಬ್ಬ ಮಗ … ಮಹಾನ್ ಪಟಿಂಗ  ಅಂತಾನೆ ಅಂತಿದ್ದಿದ್ದು .ಅವನಿಗೂ ಸ್ಟೇಟಸ್ , ದುಡ್ಡು , handsome  ಧಿಮಾಕು .
ಅವಳಿಗೆ ಎಷ್ಟು ಜನಾನೋ , ಅವನಿಗೆ ಎಷ್ಟು ಜನಾನೋ , ಒಂದೆರಡು ಶೋ ಅಷ್ಟೇ ಅಂತಿದ್ರು ಎಲ್ಲರು …
 … ಇಬ್ಬರು  higher  studiesge ಬೇರೆ ದೇಶದಲ್ಲಿದ್ದಾರೆ ಅನ್ನೋದೆಲ್ಲ  ಗೊತ್ತಿತ್ತು..ಹೆಚ್ಚುಕಮ್ಮಿ 10  ವರ್ಷ … ಅನಧಿಕೃತ ಲಿವಿಂಗ್ together … ನೆನ್ನೆ ಜೊತೆಜೊತೆಯ  ಫೋಟೋ ಹಾಕಿದ್ದಾಳೆ… 10 ವರ್ಷ ನಡೆದು ಬಂದಿದ್ಯ ಅವರ ಪ್ರೀತಿ ? ಪರಮ ಆಶ್ಚರ್ಯ .

ಸೆಮಿಸ್ಟರ್ಗೆ  ಒಂದೊಂದು ಲವ್ ಸ್ಟೋರಿ ಅವಳದ್ದು …ಹಾಗೆ ಸೆಮಿಸ್ಟರ್ ಗೆ   ಒಂದೊಂದು breakup  .ಕಡೆಯದಾಗಿ ಬಿಟ್ಟು ಹೋದವ ಕೊಟ್ಟಕಾರಣ ಒಂದು ವರ್ಷ ಫೈಲ್ ಆಗಿದ್ದೀಯ , ನಮ್ಮ ಮನೆಯಲ್ಲಿ ಎಲ್ಲರು  highly qualified !!!!.ಅಚ್ಚುಕಟ್ಟಾಗಿ ಸ್ಟೇಟಸ್ ಹಾಕ್ತಾಳೆ , ಅದ್ಬುತ ಗಂಡ , ಇವನಿಗಿಂತ  ಹೆಚ್ಚಿನ ಕೊಡುಗೆ ಬದುಕಲ್ಲಿ ಏನು ಬೇಕು ಅಂತ .

ಏನು ಅರ್ಥ  ಆಗಲ್ಲ  ಬದುಕು…ಯಾರ ದಾರಿ ಸರಿ, ಯಾರ ನಡಿಗೆ ತಪ್ಪು !
ಎಡವೋದು ಕೂಡ ಒಳ್ಳೇದೆ ಒಮ್ಮೊಮ್ಮೆ ….
ಎಡವಬೇಕಾದಾಗ ಎಡವದೇ ಇದ್ದಿದ್ದು ಎಡವಟ್ಟು ಆಗೋಯ್ತಾ .
ಈ ವಿಷಯಕ್ಕೆ ಮಾತ್ರ i  hate  you  daddy ….  

     

 
 

 

     

 
 

 

ಸಿಂಗಲ್ ಬೆಡ್ರೂಮ್ ಮನೆ

ಮನಸಿನ ತುಂಬಾ ಮೋಡ ಕಟ್ಟಿದೆ …ಮಣಮಣ ಭಾರ ….
ಅಳೋಕೆ ಜಾಗ ಸಿಗ್ತಿಲ್ಲ …ವಾಯುಭಾರ ಕುಸಿದು ಹನಿಹನಿ ಮುತ್ತಾಗದ ಹೊರತು ಕಣ್ಣಿಗೆ ಮುಕ್ತಿಯಿಲ್ಲ….
ಬದುಕಿನ ಮೇಲೆ ಮುನಿಸು ..
ರಾಶಿ ರಾಶಿ ಕಂಡ ಕನಸುಗಳನ್ನ
ಗುಡಿಸಿ ಗುಡ್ಡೆ ಹಾಕಿ
ಯಾವ ಖಾಲಿ ಪೇಪರ್ ಶೀಶೆ
ಮಾರುವವನ ಅಂಗಡಿಯಲ್ಲಿ
ತೂಗಿಬರಲಿ ?

ಮನೆಯವರ ಮೇಲೆಲ್ಲಾ ಸಿಡಿಸಿಡಿ ಸಿಡಿಮಿಡಿ…ಮೊದಲ ಬಾರಿಗೆ ಬೇಕೆನಿಸುತ್ತಿರುವ  ಒಂಟಿತನ .ಮನೆ ತುಂಬಾ ಜನರಿರಬೇಕು, ಮಾತಿರಬೇಕು, ನಗುವಿರಬೇಕು ಅನ್ನುತ್ತಿದ್ದದ್ದು ನಾನೇ ….ಆದರೆ ಈಗ ಎಲ್ಲರನ್ನು ಹೊರಗಾಕಿ ಒಬ್ಬಳೇ ಕೂತು ಅತ್ತುಬಿಡಬೇಕು ಎನಿಸುತ್ತಿರುವುದು ದಿಟಾ   ..

ಗೊತ್ತು ಮಾತು ಹರಿತವಾಗಿದೆ, ಹದ ತಪ್ಪಿದೆ   ..ಕೈಲಾಗದಾಗ ಮತ್ತೇನ್ ಮಾಡೋದು …

ಒಂದು ವರ್ಷದಿಂದ ಅದೇ ಅದೇ ಮಾತು ಆಕೆಯದ್ದು .. ಎಂತೆನ್ತವರು ಹೆಂಗೆಲ್ಲ ಬದುಕುತ್ತಿದ್ದಾರೆ ,ನಮ್ಮನೆ ಮಕ್ಕಳು ಕಲಿಲಿಲ್ಲ ಬದುಕೋದು , ಸುಮ್ಮನೆ ಲೈಫ್ ಹಾಳಾಯ್ತು ….ಅದು ಇದು…
ತುಂಬಾ  ಖಾರವಾಗೆ ಪ್ರತಿಭಟಿಸಿದೆ …you dont have  any  right to hurt me anymore ….
ಹೇಳಿದ್ದೆ ಹೇಳಿದ್ದು ಕೇಳಿದ್ದೆ ಕೇಳಿದ್ದು  ಸಾಕಾಗಿದೆ ..ಯಾರಿಗೂ ಸಮಜಾಯಿಷಿ ನೀಡುವ ಅಗತ್ಯ ನನಗಿನ್ನೂ ಉಳಿದಿಲ್ಲ..ಮನೆಯವರಾಗಿ ಅರ್ಥ ಮಾಡಿಕೊಳ್ಳಲಿಲ್ಲ ಅಂದರೆ  ಹೊರಗಿನವರು  ಇನ್ಯಾರು ಅರ್ಥ ಮಾಡಿಕೊಳ್ಳುತ್ತಾರೆ… ಅರ್ಧ  ಗಂಟೆಗೆ ಒಮ್ಮೊಮ್ಮೆ ಫೋನ್ ಮಾಡಿ ಮುದ್ದಾಡುವ ಗಂಡನ ಪಡೆದ ಸುಭಾಗ್ಯವತಿಯರಿಗೆ , ನಿರ್ಧಕ್ಷಿನ್ಯ ತಿರಸ್ಕಾರಕ್ಕೆ ಒಳಗಾದವರ ನೋವು ಅರ್ಥವಾಗಲ್ಲ …ಹೊಟ್ಟೆ ತುಂಬಿದವರಿಗೆ ಹಸಿವೆ  ತಿಳಿಯಲ್ಲ …
ಹೊಟ್ಟೆ ಸಂಕಟದ ಮಾತು ಸರಿ… ಆದರೆ ಎಷ್ಟು ಬಾರಿ ಇರಿದು ಇರಿದು ಕೊಲ್ಲುತ್ತೀರಿ …ಅದಾಗಲೇ ಸತ್ತು ಸುಮಾರು ದಿನ ಆಗಿದೆ..ಪೋಸ್ಟ್ mortem ಬೇಕಾಗಿಲ್ಲ ಈಗ..
ಪರಿಹಾರ ನೀಡಲು ಸಾದ್ಯವಿಲ್ಲದವರು , ಸಹಾಯ ಮಾಡಲು ತಯಾರಿಲ್ಲದವರು, ಒಂದು ಹೊತ್ತಿನ ಊಟಕೊಡದವರು ,  ಯಾವ ಹಕ್ಕು ಇಟ್ಟುಕೊಳ್ಳಬೇಡಿ  ಮತ್ತೆಮತ್ತೆ hurt ಮಾಡೋಕೆ …stay  away …ಯಾವ ಮಾತನ್ನು ಯಾರಿಂದಲೂ ತೆಗೆದುಕೊಳ್ಳುವ ಸ್ಥಿತಿಯಲ್ಲಿ ಇಲ್ಲ ನಾನೀಗ…ನನ್ನ ಹೆಣ  ನಾನೇ ಹೊತ್ತು ನಡೆಯಬೇಕು ಅಬೇದ್ಯ ಸತ್ಯ ..ಅರಗಿಸಿಕೊಂಡು ನಡಿಗೆ ಶುರುಮಾಡಿಯಾಗಿದೆ ..ಮತ್ತಷ್ಟು ಭಾರ ಮಾಡಬೇಡಿ please   …ಕಷ್ಟ ಆಗುತ್ತಿದ್ರೆ ತಿಳಿಸಿ  ನನ್ನ ದಾರಿ  ನಾನು ನೋಡಿಕೊಳ್ಳುತ್ತೇನೆ ..
 ಜನ ಇಷ್ಟೇ…ಸತ್ತರೆ ಎದುರಿಸಬೇಕಿತು, complaint ಕೊಡಬೇಕಿತ್ತು , ಹೊಡೆದು ಸಾಯಿಸಬೇಕಿತ್ತು ಅಂತಾರೆ…. complaint ಕೊಟ್ಟರೆ ಕೊಡಬಾರದಿತ್ತು ಅಂತಾರೆ ..ಏನು ಮಾಡಿದರು ನಾಲಿಗೆ ಚಪಲ…ಮಾತಾಡಬೇಕು ಅಷ್ಟೇ .. ಜೀವ, ಮತ್ತು ಜೀವನ ಕೊಡುವ ಹಕ್ಕಿಲ್ಲದವರು ಜೀವ ತೆಗೆಯುವ ಮಾತನ್ನು ಆಡಬಾರದು … i  am  not  your  botheration ..

ಒಂದು social ಸ್ಟೇಟಸ್ ಗ? id ಕಾರ್ಡ್ ಗ ಅವನು ಬೇಕಿರೋದು…? ಕೇವಲ ಅನಿವಾರ್ಯತೆಗೆ ಅವಲಂಬನೆಗೆ   ಬೇಡ ಬಿಡು  ಅಂತ ನಿಕೃಷ್ಟ ಬದುಕು…
ನಿಜವಾಗಲೂ ನಿಜಾನ ?ಮತ್ಯಾಕೆ ಒಂದು ವರ್ಷ ಕಾದುಕುಳಿತದ್ದು…ಚಾವಟಿ ಏಟು ..
ಯಾರಿಗೆ ಗೊತ್ತು…..

ಏಕಾಂತಕ್ಕು ಅವಕಾಶವಿಲ್ಲದ  ಹಾಳು  single bedroom ಮನೆ ..ನೀನು ತಿರುಗಿ ಬರುವೆ ಅಂತ ಯಾರಿಗೆ ಗೊತ್ತಿತ್ತು ಅಂತಾರೆ …
ಗಿಜಿಗಿಜಿ ಜನ.. ಸಾವಿರ ಪ್ರಶ್ನೆ …ಉತ್ತರ ಪಡೆದು ಏನು ಮಾಡ್ತಾರೆ ?ಎಲ್ಲ ಮುಗಿದು  ತಲೆ ಕೆಟ್ಟ ದಿನವೇ ನೀರು ಬರೋಲ್ಲ..ಕರೆಂಟು ಇರೋಲ್ಲ…ಮತ್ತಷ್ಟು ಮತ್ತಷ್ಟು ಹಿಂಡಿ ಹಿಪ್ಪೆ ಮಾಡಬೇಕಲ್ಲ …
ರಜ ಹಾಕಿ ಇಡಿ ದಿನಾ ಮಕಾಡೆ ಮಲಗಿ ಅಳುತ್ತಿರಬೇಕು ಅನಿಸುತ್ತಿತ್ತು …ಮತ್ತೆ ಅದೇ ರೂಮಿನ ಕೊರತೆ !!!!
ಎಲ್ಲಿಗೆ ಹೋಗೋದು ಓಡಿ…
ಹತಾಷೆನೆಲ್ಲ ಯಾವ ಕಸದ ಬಿಟ್ಟಿಗೆ ಸುರಿಯಲಿ
ಅವಮಾನವನೆಲ್ಲ ಯಾವ ಸಮುದ್ರದಾಳಕ್ಕೆ
ಎಸೆದು ಬರಲಿ
ದುಃಖವನೆಲ್ಲ  ಯಾವ ಮರಳುಗಾಡಿನಲ್ಲಿ
ಹೂತುಬಿಡಲಿ…
ಕೋಟಿ ಕೋಟಿ ಜನ ..
ಮಾರ್ಕೆಟ್ಟು , ಮೆಜೆಸ್ಟಿಕ್ ..ಕ್ಯಾಂಪಸ್ …
ಹರಿದು ಮುಕ್ಕುವ ಅನಾಥ ಪ್ರಜ್ಞೆ ..
ಕಾಗೆ ನಾಯಿಗಳೇ ಎಷ್ಟೋ ಮೇಲು
ಗುಂಪು ಗುಂಪಲ್ಲಿ ಆಡುತ್ತವೆ,  ಅಳುತ್ತವೆ , ಕಿತ್ತಾಡುತ್ತವೆ , ನಂಬಿ ಹಂಚಿಕೊಳ್ಳುತ್ತವೆ …

ಒಂದೇ ಒಂದು ಹೆಗಲೂ ಇಲ್ಲವ, ಖಾಲಿ ಇದೆ ತಲೆ ಇಟ್ಟು ಅತ್ತುಬಿಡು ಅನ್ನೋಕೆ ..
ಒಂದು ಮಡಿಲು ಸಮಾಧಾನ ಆಗುವವರೆಗೂ ಮಲಗಿಕೋ ಅನ್ನೋಕೆ …
ಬೆಚ್ಚನೆ ಎದೆ ತಬ್ಬಿ ಬಿಕ್ಕಳಿಸೋಕೆ …
ಮಾತಾಡೋಕು appointment ತಗೋಬೇಕು …phone ಬಿಸಿಬರೋವರೆಗೂ ಮಾತು …ಕೇಳಿದನ್ನೇ   ಎಷ್ಟು ಅಂತ ಜನ ಕೇಳ್ತಾರೆ ..ಅದೇ joke ಗೆ ಎಷ್ಟು ನಗ್ತಾರೆ, ಅದೇ ದುರಂತಕ್ಕೆ ಎಷ್ಟು ಲೊಚಗುಟ್ಟುತ್ತಾರೆ    ….ಪಾಪ ಅವರ ಮೇಲೆ ಕನಿಕರ ನನಗೆ…currency ನನ್ನದೇ ..
ಪಿಜ್ಜಾ hut ನಲ್ಲಿ ಹೋಂ ಡೆಲಿವರಿ ಕೊಡೊಂಗೆ, ಬೇಕಾದಾಗ  ಮಾತಿಗ್ಯಾರಾದ್ರು ಬರೋಂಗೆ ಇದ್ದಿದ್ರೆ …
ವೋರಗೆಯ ಹೆಣ್ಣುಮಕ್ಕಳು ಬಾರಿ ಡೇಂಜರ್  .. ಬರಿ onsite , ಹನಿಮೂನ್ ಗಳ  ಕತೆ ಹೇಳಿ ಹೊಟ್ಟೆ ಉರಿಸುತ್ತಾರೆ …
ನನ್ನ ಗಂಡನ ಯೋಚನಾ ಶೈಲಿಗೆ ಗಂಡು ಹುಡುಗರೆಲ್ಲ ಪಾಪ ಹೆದರಿ ಮೈಲಿ ದೂರದಾಚೆಗೆ ಓಡೋಗಿದ್ದಾರೆ  … ಈ ಹಾಳು  ಸಂಬಂಧಿಕರಿಗೆ ಹೆದರಿದವರ ಮೇಲೆ ಹಾವು ಎಸೆಯೋದು ಅಷ್ಟೇ ಗೊತ್ತು..ಒಳಗೊಳಗೇ ಎಷ್ಟು ತೃಪ್ತಿಗೊಳ್ಳುತ್ತಿರುತ್ತೋ  ಅಸೂಯೆ ..ಯಪ್ಪಾ !
ನೋಡ್ತೀನಿ ಸುತ್ತ ..sophesticated ಹೊರಕವಚ ತೊಟ್ಟಿಕೊಂಡ ಜನರನ್ನ , mobile ಒಳಗೆ ಏನು ಕಾಣುತ್ತಿರುತ್ತೋ , ಅದೆಷ್ಟು ಹಾಡುಗಳನ್ನು  ಕಿವಿಗೆ ಸುರುವಿಕೊಳ್ಳುತ್ತಿರುತ್ತಾರೋ, insulin ಚುಚ್ಚಿಕೊಳ್ಳುವಂತೆ .. ಮನುಷ್ಯರೆಂದರೆ ಸಂಬಂಧವೇ ಇಲ್ಲವೇನೋ ಅನ್ನೋ ತರಹ ಕಾಣುತ್ತಿರುತ್ತಾರೆ …
ಅರ್ಥಾ ಆಗದೆ ಇರೋರತ್ರ ಹೇಳಿಕೊಳ್ಳಬೇಕು …
jhony ಜ್ಞಾಪಕಕ್ಕೆ ಬರುತ್ತಿದೆ ತುಂಬಾ..
ಹೀಗೆ ಅಳುಬಂದಾಗೆಲ್ಲ ಅದರೆದುರು ಕೂತು ಅತ್ತು ಬಿಡುತ್ತಿದ್ದೆ ..ನೋಡು jhony ಅವ್ರು ಮಾಡಿದ್ದು ಸರೀನಾ ಅಂತೆಲ್ಲ ಕೇಳುತ್ತಿದ್ದೆ … ಅನಿರ್ವಚನೀಯವಾಗಿ ಅದಕೆಲ್ಲ ಅರ್ಥವಾಗಿ ಬಿಡುತ್ತಿತ್ತು …ಲೊಚ ಲೊಚ ಕಣ್ಣೀರಿನ  ಕೆನ್ನೇನೆಲ್ಲ ನೆಕ್ಕಿಬಿಡುತ್ತಿತ್ತು..ಭಾಷೆ ಬರುವವರು ನೀಡದ ಸಾಂತ್ವನವನ್ನು ತನ್ನ ಮೂಕ ಹಾವಭಾವದಲ್ಲೇ ನೀಡಿಬಿಡುತ್ತಿತ್ತು . ಅದು ಕಳೆದುಹೋದಾಗ ಯಾಕೆ ಅಷ್ಟೊಂದು ಬೀದಿಬೀದಿ ಅಲೆದೆ ಅನ್ನೋದು ನನಗು ಮತ್ತು ಅದಕ್ಕೆ ಮಾತ್ರ ಗೊತ್ತಿತ್ತು …ಎಷ್ಟೋ ಬಾರಿ ಹೇಳಿದೆ ಮತ್ತೆ ನಾಯಿ ಸಾಕ್ತೀನಿ ಅಂತ..ನಿನ್ನ ಸಾಕೋದೆ ಕಷ್ಟ ಅಂತಾರೆ..ಜೋತೆಗೀಗ ಮಗು ಬೇರೆ ..
ಅಪ್ಪನು ಇಲ್ಲ ತೋಳತೆಕ್ಕೆಗೆ ಸರಿದು ಅಳೋಕೆ ..ಅಮ್ಮನ ಮಡಿಲಲ್ಲಿ ಯಾವತ್ತು ಅತ್ತಿಲ್ಲ..ಈಗ ಅತ್ತು ಬಿಟ್ಟರೆ ಅವಳೇ ಚೂರಾಗಿ ಬಿಡುತ್ತಾಳೆ …i  cant  …
ಅಪ್ಪನ ಗೋರಿ ತಬ್ಬಿ ಅಳೋಣ ಅನಿಸುತ್ತಿದೆ ..ಮೇಲೊಂದು ಚಾವಡಿ ಹಾಕಿಸಬೇಕು..ಅಸಾಧ್ಯ ಬಿಸಿಲು..ಅದ್ಹೇಗೆ ಇಷ್ಟೆಲ್ಲಾ ಆದರು ತಣ್ಣಗೆ ಮಲಗಿದ್ದಾನೋ ಪುಣ್ಯಾತ್ಮ ಗೊತ್ತಿಲ್ಲ …
ಚಿಕ್ಕಪ್ಪನ ಕಾಟ ಬೇರೆ , ಹುಚ್ಚಿನ ನೀನು ಅಂತಾರೆ ..ಅವರಿಗೇನು ಗೊತ್ತು ಗಂಡು ಜೀವದೆದುರು ಅಳುವ ಸುಖ ?
 ಓಡೋಡಿ ಹೋಗಿ ಹೀಗೆ ಮಾತಾಡ್ತಿದ್ದೆ ಒಂದಷ್ಟು ದಿನ , ಗೋರಿ ತಬ್ಬಿ …ಪೂಜೆ ಮಾಡುವಾಗ ಸುಮ್ಮನಿದ್ದು, ಎಲ್ಲ ಹೋದ ಮೇಲೆ, ಮತ್ತೆ ಬಂದು ಏಕಾಂತದಲ್ಲಿ ತರಾಟೆಗೆ ತೆಗೆದುಕೊಳ್ಳೋದು..ಯಾಕೆ ಬಿಟ್ಟು ಹೋದೆ ನನ್ನ ಅಂತ …ಎಷ್ಟು ಹೊತ್ತು ಆತು ಕುಳಿತರು, ಉತ್ತರ ಕೇಳಿಸಲೇ ಇಲ್ಲ ಗೊರಿಯಿಂದಾಚೆ…. …ಸುಯಿ ಗುಡುವ ತೆಂಗಿನ ಗರಿ, ತೊನೆದಾಡುವ ಮಾವಿನ ಎಲೆಗಳ ಮೇಲೆಲ್ಲಾ ಅಪ್ಪನ ಉಸಿರೇ ಸುಳಿದಾಡೋದು  ಅನಿಸುತ್ತೆ …
ಮೂರನೇ ವರ್ಷ ..ಮೊದಲ ವರ್ಷದ ಹತ್ತಿರತ್ತಿರದಲ್ಲೇ ಅವನೂ ಬಂದಿದ್ದ …ಮದುವೆ ಒಂದಷ್ಟು ದಿನದ ಹೊರಗಿತ್ತು..ಬಂದವನಿಗೆ ಮತ್ತೇನೋ ಚಿಂತೆ..ನನಗೆ ಉಮ್ಮಳಿಸಿ ಬರೋ ಅಳು… ಅತ್ತೆ ಅತ್ತೆ , ತಬ್ಬಿ ಅತ್ತಿದ್ದು ಅದಕ್ಕ… ?? ನಾಯಿಯೇ ಎಷ್ಟೋ ವಾಸಿ ….

ಅಳೋದು ಅಷ್ಟು ಹೊರಗಡೆ ವಿಷಯವಲ್ಲ ನನಗೆ .. ಎಲ್ಲರೆದುರು ನಾ ಅಳಲಾರೆ ..ಸ್ವಾಭಿಮಾನ … ಒಂದಷ್ಟು ದಿನ ಹಾಡುಕೇಳಿಕೊಂಡು ಅಳೋದು ಕಲಿತ್ತಿದ್ದೆ …. ಕಣ್ಣ ಹನಿಯೊಂದಿಗೆ ಕೆನ್ನೆ ಮಾತಾಡಿದೆ ..ಮತ್ತು ಜಾಸ್ತಿ  ಅಳು..
ದಿಂಬು ಹಿಡಿದುಕೊಂಡು ಅಳೋದು , ಮನುಷ್ಯರ ತರಹ ಅಲ್ಲ ಅದು ಸುಲಭ ಹೀರುತ್ತೆ ..

ಹಾಳಾದ್ದು ಅಳಬೇಕಾದ ದಿನವೇ ಪ್ರಾಜೆಕ್ಟ್ deadlinu …senior leave … ಏನೇ ಆದರು ಇವತ್ತು ನಾನೇನು ಕೆಲಸ ಮಾಡಲ್ಲ ….
ಸಂತ ಶಿಶುನಾಳ ಶರೀಫಾ , ಅಳಬೇಡ ತಂಗಿ ಅಳಬೇಡ , ನಿನ್ನ ಕಳುಹಾಬಂದವರಿಲ್ಲಿ ಉಳಿದು ಕೊಂಬುವರಿಲ್ಲ ಅಂತಾಯಿದನೆ…
..ನಗು ಕೂಡ ಅಳುತರಹ ಕಾಣುಸ್ತಿದೆ ಅನ್ನೋ ಆಕ್ಷೇಪಣೆ teammates ದು…ನನ್ನ ನಗೂಗು ಕೂಡ ಒಂದು ಸಣ್ಣ ಸುಳ್ಳು ಹೇಳೋಕೆ ಬರಲ್ವ?  
ಬರೆಯೋದು ಗೀಳಾಗ್ತಿದೆ…ಆದರು ಅಳದೆ ಪರಿಹಾರವಿಲ್ಲ … ಒಂದು ರೂಂ ಆದರು ಬೇಕು ..!!! compensation ಕೇಳಿದ್ದೀನಿ ಅವನ್ನನ್ನ
 

    
 
 
 
 
 

ಬದುಕೋದು ಕಲೀಲಿಲ್ಲ ..

ದೆವ್ವ ಭೂತ ಪೀಡೆ ಪಿಶಾಚಿ ಅಂತೆಲ್ಲ ಪರಿಹಾರಹುಡುಕುವ ಮಾಟಾ  ಮಂತ್ರಗಳ ಜಾಗಗಳನ್ನ ಕಂಡಾಗ , ಒಂದಷ್ಟು symptoms ಗಳನ್ನು, ಅದಕ್ಕೆ ಮಾತ್ರೆಗಳನ್ನು ಹೊಂದಿಸಿಕೊಂಡು ಅದಕ್ಕೊಂದು ಹೆಸರನ್ನಿಡುವ ವಿಜ್ಞಾನ ಜಗತನ್ನು ಗಮನಿಸಿದಾಗ , ನನಗನ್ನಿಸುತ್ತಿರುವುದು  ಪರಿಹಾರಕ್ಕಿಂತ ಮೂಲ ಸಮಸ್ಯೆ ಪತ್ತೆಮಾಡಿಕೊಳ್ಳಬೇಕು  …
ಅದನ್ನು attitude , ದುರಂಕಾರ ಎನ್ನಬೇಕೋ ,abuser , sadist ಪಟ್ಟಿ ಹಾಕಬೇಕೋ , ಡಿಪ್ರೆಶನ್ ಅಂತ ಕರೆಯಬೇಕೋ, ಭೀತಿ ಎಂದು ಅರ್ಥಮಾಡಿಸಬೇಕೋ  , ಮೋಸ ವಂಚನೆ ದುಡ್ಡು ದರ್ಪ ಕ್ರೌರ್ಯ  ಎಂದೆಲ್ಲ ವರ್ಣಿಸಬೇಕೋ  ಗೊತ್ತಿಲ್ಲ …
ಮೂಲ ಸಮಸ್ಯೆ ಯಾವುದು ?? ಮನುಷ್ಯತ್ವದ ಕೊರತೆ ?, ಪ್ರಾಮಾಣಿಕತೆ ಮೌಲ್ಯ ಬದ್ದತೆಗಳ  ಕೊರತೆ? , ಅಪ್ರಬುದ್ಧತೆ? , ಎಲ್ಲವನ್ನೂ ಮೀರಿದ ಅತಿ ಬುದ್ದಿವಂತಿಕೆ  ? ದುರಾಸೆ ? ಬೌದ್ಧಿಕ ದಾರಿದ್ರ್ಯ   ?

ನಷ್ಟಕ್ಕೆ ಒಳಗಾದವಲಂತೂ  ಕಡೆಗೂ ನಾನೇ … ಏನೇ ಆದರು ಹೆಣ್ಣಿನ ಬದುಕು ಮುಳ್ಳಿನ ಮೇಲಿನ ಬಟ್ಟೆ ಅಂತ ಸಾಬೀತು ಪಡಿಸಿಗೆದ್ದ !!

gender discrimination ತೋರಿಸದ rank , award , prize , offerletters dopomine ಕೊಳ್ಳಲು ನಿಂತ ನನ್ನನ್ನು  ಗೇಲಿ ಮಾಡಿಕೊಂಡು ನಕ್ಕವು ..
ಹಿಂಸೆಯಾಗುತ್ತಿದೆ ಅಂತ ಹೋದರೆ ನನಗೆ ತಾಳ್ಮೆ, ಸಹನೆಗಳ ಪಾಠ ಮಾಡಿದರು ….
ನಾನು ಒಂದು ಹೇಳಿದರೆ ನನ್ನ ಮೇಲೆ ಮೂರು ಜನ ಸೇರಿಕೊಂಡು ನೂರು ಹೇಳಿದರು …ಮೂರು ಜನ ಹೇಳಿದ್ದನ್ನು ಮುನ್ನೂರು  ಜನ ಎಷ್ಟು ಸುಲಭವಾಗಿ ನಂಬಿದರು..ಅವರಿಗೆ ಮಾತಾಡುವುದು ಗೊತ್ತಿತ್ತು, ಅಳುವುದು, ನಗುವುದು ಗೊತ್ತಿತ್ತು , ದುಡ್ಡು ಕೊಡೋದು ಗೊತ್ತಿತ್ತು  …

ನಿಜ ಆಯ್ದುಕೊಂಡ ದಾರಿ ಕೊಂಚ ತಪ್ಪೇ ಇರಬಹುದು …ಆದರೆ ಬೇರೆ ಆಯ್ಕೆ ಏನಿತ್ತು ? ಬೆಂಕಿ ಹತ್ತಿಕೊಂಡಾಗ ಮರಳನ್ನೇ ಹುಡುಕುತ್ತಾ ಅಲೆಯೋಕೆ  ಆಗುತ್ತಾ ?

ಬುದ್ಧಿವಂತೆ ಅಂತ ತಿಳಿದಿದ್ದೆ , handle ಮಾಡಿಕೊಳ್ಳೋಕೆ ಆಗದಷ್ಟು  ಪೆದ್ದು ಆಗಿಬಿಟ್ಟೆ ಅಂತ ಮನೆಯವರೇ ಅಂದರು ..
ಎಂತೆಂತ ಅಮಾಯಕ ಹುಡುಗಿಯರು ಹಾಗು ಹೀಗೂ ಸೆಣೆಸಾಡುತ್ತ  , ಹೋರಾಡುತ್ತಾ, ಗಿಟ್ಟಿಸಿಕೊಳ್ಳುತ್ತಾರೆ  ಯಾಕೆಂದರೆ ಅವರಿಗೆ darvinnina   ವಾಸ್ತವದ ಪ್ರಾಕ್ಟಿಕಲ್  ಥಿಯರಿ  survival  of the  fittest   ಗೊತ್ತಿರುತ್ತದೆ, ಪುಸ್ತಕ ಓದಿರದ್ದಿದ್ದರು ಬದುಕು ಓದಿರ್ತಾರೆ,ಸಮಾಜ ಓದಿರ್ತಾರೆ  , ನೀನು ಬರಿ ಪುಸ್ತಕದ ಬದನೇಕಾಯಿ ಆಗುಯೇ ಉಳಿದು ಹೋದೆ ,ಲೂಸರ್ ಅಂದರು …
ತಿಂಗಳಿಗೆ ಎರಡು ಲಕ್ಷ ಸಂಪಾದಿಸಿದರೂ ಗಂಡಬಿಟ್ಟವಳು ಎನಿಸಿಕೊಂಡರೆ ಜನ ಮೂರುಕಾಸಿಗು   ಮರ್ಯಾದೆ  ಕೊಡಲ್ಲ ಅಂತ ದುಡಿಯಲು ಹೋಗದವರು ಸಹ ಅಂದು ಇದ್ದಬದ್ದ  ಆತ್ಮವಿಶ್ವಾಸವನ್ನೂ  ಕೆಡಿಸಿದರು …
ಓದಿದ್ದೇನೆ , ಬರೆದಿದ್ದೇನೆ , ದುಡಿಯುತ್ತಿದ್ದೇನೆ ಅನ್ನುವ ಜಂಭ ….ನಮ್ಮ ಹಳ್ಳಿಗೆ ಬಂದು ನೋಡು, ಗಂಡ ಕುಡಿದರು, ಬಡೆದರು, ಒಡೆದರು , ಇನ್ನೊಬ್ಬಳೊಂದಿಗೆ ಹೋದರು ಸಾವರಿಸಿಕೊಂಡು ಮರ್ಯಾದೆ ಇಂದ ಬದುಕಿ ಸೈ ಎನಿಸಿಕೊಳ್ತಾರೆ , ವಂಶದ ಮರ್ಯಾದೆ ಹೊರಟುಹೋಯ್ತು, ನಿಮ್ಮಪ್ಪನ ಮಾನಕಳೆದೆ, ನಮ್ಮ ಮನೆ ಹೆಣ್ಣುಮಕ್ಕಳಿಗೆ ತೊಂದರೆ ಆಯ್ತು ಅಂತೆಲ್ಲ ಬಾಯಿತುಂಬಾ ಮುಕ್ಕಳಿಸಿ  ಉಗಿದರು ..
ನಿಮ್ಮಮ್ಮ ನೆಗೆದುಬಿದ್ದರೆ ಬೀದಿ ಹೆಣ್ಣಾಗಿ ಹೋಗ್ತಿಯೆಲ್ಲ ಹೋಗಿ ಕಾಲಾದರು ಹಿಡಿದುಕೊಂಡು ಮನೆಸೇರಿಕೋ ಹೊತ್ತು ಮುಳುಗೋಕೆ ಮುಂಚೆ ಅಂತ ಹೆದರಿಸಿದರು …
ಎಷ್ಟೋ ವರ್ಷ ಫೋನ್ ಮಾಡದವರು ಕೂಡ ಏನೇನೋ ಪ್ರಶ್ನೆ ಕೇಳಿದರು …
ಎಲ್ಲ ರಂಪ ಮಾಡಿಕೊಂಡು ಬಂದು   ನಮ್ಮ ತಲೆಗೆ ತರ್ತೀಯ, ಎಷ್ಟು ಅಂತ ನಿಮ್ಮಮನೆಗೆ  ಮಾಡೋದು ಎಂದು ಮೂಗುಮುರಿದರು  

ಏನು ಮಾಡಿದ್ದೆ ನಾನು ??
ಯಾರ ಕೈಗೂ ಬಿದ್ದಿಲ್ಲ , ಯಾರನ್ನು ಅಂಗಲಾಚಿಲ್ಲ , ಯಾರ ಎದುರು ಹಲ್ಲುಗಿಂಜಲ್ಲಿಲ್ಲ, ಬೆರಳನ್ನು ಎತ್ತಿ ತೋರಿಸುವಂತೆ ಬದುಕಲೂ ಇಲ್ಲ , ಯಾರೆದುರು ಸಡಿಲ , ಸದರವಾಗಲೂ ಇಲ್ಲ ….
ಅಪಾತ್ರನ ಎದುರು ತಾಳಿ ಬಿಗಿಸಿಕೊಂಡು ಉಸಿರುಕಟ್ಟಿದಾಗ ನರಳಿಕೆಯಲ್ಲಿ ಹೌಹಾರಿದ್ದೆ  ಅಷ್ಟೇ  … ಹಂಗಾದರು ಯಾರಾದರು ನೋಡಿ ಸಡಿಲ ಮಾಡುತ್ತಾರೇನೋ   ಅನ್ನೋ ಕಿಂಚಿತ್ತು ಆಸೆ ..ಆದರೆ ಇನ್ನೂ ಬಿಗಿಮಾಡಿ ಅದನ್ನು ಉರುಳು ಮಾಡಿಬಿಟ್ರು !!!

ಕೆಲವರು ಅದನ್ನು ಪ್ರತಿಭಟನೆ ಅಂತ ಕರಿದರು ,ಹೋರಾಟ ಎಂದರು, ಯಾರಿಗೋ ಶಿಕ್ಷೆಕೊಡಿಸಲು ಹೋಗಿ ನೀನೆ ಸರಿಯಾಗಿ ಅನುಭವಿಸಿದೆ ಎಂದರು ,ಅನಗತ್ಯ  ಸ್ತ್ರೀವಾದಿ ಎಂದರು, ಪುರುಷದ್ವೇಶಿ ಎಂದರು ….

ಏನು ಆಗಿಲ್ಲ ಧೈರ್ಯವಾಗಿರು , ಹೇಸಿಗೆ ಕಾಲಿಗೆ ಮೆತ್ತಿಕೊಂಡರೆ ಕಾಲನ್ನು ತೊಳೆಯಬೇಕೆ ವಿನಃ ಕತ್ತರಿಸೋದಲ್ಲ , ದೈಹಿಕನ್ಯೂನ್ಯತೆ ಉಳ್ಳವರನ್ನು ಕರುಣೆಯಲ್ಲಿ ನೋಡುವಂತೆ ಮಾನಸಿಕ ವಿಕಾರವಿದ್ದವರನ್ನು ಕರುಣೆಯಿಂದ ನೋಡಿ ಕ್ಷಮಿಸಿಬಿಡು , ಮರೆತುಬಿಡು, ಬಿಟ್ಟುಬಿಡು , ಸಾಧಿಸು , ಹೆಸರುಮಾಡು, ಇಷ್ಟ ಬಂದಂಗೆ ತಿನ್ನು , ಅನಿಸಿದನ್ನು ಮಾಡು ಎಂದೆಲ್ಲ ಮೆತ್ತಗೆ ಹೇಳಿದವರಿಗೆ
ಮುಂದೆ ? ಎಂದು ಪ್ರಶ್ನೆ ಹಾಕಿದರೆ ಅಸಹಾಯಕತೆಯಲ್ಲಿ ಎದ್ದುಹೋದರು …

ಯಾವುದು ಸರಿ ಯಾವುದು ತಪ್ಪು …

ಇತ್ತೀಚೆಗೆ ಕೇಳಿದವರಿಗೆ ಕಡ್ಡಿಮುರಿದಂಗೆ ಮಾತಾಡೋದನ್ನ ಕಲಿತ್ತಿದ್ದೇನೆ… ಭ್ರಮೆ ಕಳಚಿದೆ .
ಮದುವೆ ಗಂಡಿಗೆ ಅದೇ ಇಲ್ಲ…ಅದೇ ಇಲ್ಲದಾಗ  ಎಲ್ಲ ಕಡೆಯೂ  ತುರಿಕೆ ಶುರುವಾಗುತ್ತೆ …
ಕೈನಲ್ಲಿ ಆಗದಾಗ ಮೈ ಪರಚಿಕೊಳ್ಳೋದು, ಮಾತಲ್ಲಿ ಜಟ್ಟಿತರ ಕೊಚ್ಚಿಕೊಳ್ಳೋದು..
ಉಳ್ಳವರು silent ಆಗಿ ಬದುಕ್ತಾರೆ , ಇಲ್ಲದೆ ಇರುವವರೇ ಗಿಲೀಟು ಒಡವೆ ತೊಟ್ಟು ಮೆರೆಯೋದು …
ಮನುಷ್ಯನ ಹಸಿ ರಕ್ತದರುಚಿ ಹತ್ತಿದಮೇಲೆ ಚಿರತೆಗಳು ಮತ್ತೆ ಮತ್ತೆ ಊರಿಗೆ ದಾಳಿ ಇಟ್ಟೇ ಇಡ್ತವೆ…
ಸುಲಭದ ದುಡ್ಡು , ಅಧಿಕಾರ, ಆಡಳಿತದ ಚಟಕ್ಕೆ ಬಿದ್ದ ಮೇಲೆ ಅಲ್ಲಿ ರಕ್ತಪಾತವೆ …
ಅಸಹಾಯಕತೆಯನ್ನ ಬಂಡವಾಳಮಾಡಿಕೊಂಡು ಮಾನ ಅಡ ಇಟ್ಕೊಂಡು ದುಡ್ಡುಎಣಿಸುವವರೆದುರು ಆತ್ಮಾಭಿಮಾನ, ಮನುಷ್ಯತ್ವ  ಅಂದರೆ ಅದೆಲ್ಲಿಂದಲೋ ನಕ್ಕುಬಿಡುತ್ತಾರೆ ..!!!

ನನ್ನ ಭಾಷೆ ಅವನಿಗೆ ಅರ್ಥವಾಗಲಿಲ್ಲ ..ಅರ್ಥ ಆಗೋದು ಬೇಕೂ ಇರಲಿಲ್ಲ …
ಅವನದ್ದೂ ಅವರದ್ದು ಎಲ್ಲ ಒಂದೇ ಧೋರಣೆ ….
blackmail —  ಹೆಂಡತಿ ಎನ್ನುವ id  ಕಾರ್ಡ್ ಇನ್ನಿಲ್ಲದಂತೆ  ಅಗತ್ಯವಿರುವುದು  ನಿನಗೆ ..ಗಂಡಸು ಎಲ್ಲಿಬೇಕಾದರು ಮಲಗಿ, ಎಲ್ಲಿ ಬೇಕಾದರೂ ಎದ್ದು, ಎಲ್ಲಿ ಬೇಕಾದರೂ ತಿರುಗಲು ಹೊರಡುತ್ತಾನೆ ..
ಯೋಚನೆ ಮಾಡು ..ಪ್ರೀತಿ ಎಂದರೆ ಕೊಡೋದೇ ತಾನೇ… …
ಕೊಟ್ಟ ಕೊಟ್ಟೆ ಕೊಡುತ್ತ ನೋಡಿದೆ…
ಅವನಿಗೆ ಪ್ರೀತಿ ಮೂಡಲಿ  ಎಂದೇ  ವರದಕ್ಷಿಣೆ ವಿರುದ್ಧ ಪುಟಗಟ್ಟಲೆ ಭಾಷಣ ಮಾಡುತ್ತಿದ್ದವಳು ,ಬೋನಸ್ ದುಡ್ಡಲ್ಲಿ ದೀಪಾವಳಿಗೆ ಉಂಗುರ ಮಾಡಿಸಿಕೊಟ್ಟೆ..   ಇದ್ದ ಬದ್ದದ್ದನೆಲ್ಲ ಡ್ರಾ ಮಾಡಿ ಕೊಟ್ಟೆ …
ಒಮ್ಮೆ ರುಚಿ ನೋಡಿದ ಮೇಲೆ ಪ್ರತಿ ತಿಂಗಳು ಹಸಿವೆ …ಇಲ್ಲ ಅಂದ್ರೆ ಬೆಣ್ಣೆಯಲ್ಲೂ ಕೂದಲೇ…

Repression  ಅನ್ನೋದು ಸ್ಟೇಟ್ ಆಫ್ ಮೈಂಡ್ ….!!!
ಖಿನ್ನತೆಗೆ ಅಸಾಧ್ಯ ಹೊಟ್ಟೆಯುರಿ   ತರಿಸುವ ಮಾತ್ರೆಗಳನ್ನು   ಸೇವಿಸುತ್ತಿದ್ದೆ, ಅವನ ನೋಡಿದರೆ ನಡುಗುತಿದ್ದೆ  ಅಂದ್ರೆ ನಾನೇನ ಅದು ಅಂತ ನಂಬಲೂ ಸಾಧ್ಯವಿಲ್ಲ..
 ಮಾತನಾಡಲು ನಾನು ಹೆದರುತ್ತಿದ್ದೆ ಎಂದರೆ ಸ್ವತಹ ನನ್ನ ಹುಟ್ಟಿಸಿದ ಅಪ್ಪನೇ ನಂಬೋಲ…
ಇನ್ನು ಜಗತ್ತು ಹೇಗೆ ತಾನೇ ನಂಬೀತು? ನಾನು ಹೇಗೆ ನಂಬಲು ಸಾಧ್ಯ ?
the  same girl ಅಂದು ಆತ್ಮವಿಶ್ವಾಸವನ್ನು ಬೇರೆಯವರಿಗೆ  ತುಂಬುತ್ತಿದ್ದ ಹುಡುಗಿ , ವಾಚಾಳಿ, ಬಾಯಿಬಡಕಿ, ಮಾತಿನಮಲ್ಲಿ ಅನಿಸಿಕೊಂಡ ಹುಡುಗಿ …

ಅವನು ಕಾಡು ಮೃಗ ..ಈಚೆ  ಮಾತ್ರ ಅತಿ ವಿನಯದ ದೂರ್ತ …
ಮನೆ ಹೆಣ್ಣುಮಕ್ಕಳನ್ನಲ್ಲ ಹಿಡಿದು ಚಚ್ಚಿದ ಕತೆಯನ್ನು ಪೌರುಶದ ಗಾದೆಗಳಂತೆ ಹೇಳಿಕೊಳ್ಳುತ್ತಿದ್ದ …ವಯಸಾದ ಸ್ವಂತ ಮುದುಕಿಗೆ ಮಧ್ಯ ರೋಡ್ನಲ್ಲಿ ಹೆಲ್ಮೆಟ್ ನಲ್ಲಿ ಚಚ್ಚಿದ್ದನ್ನು ಅಕ್ಕಪಕ್ಕದವರು ಇನ್ನು ಮರೆತ್ತಿಲ್ಲ…
ದಿನಕ್ಕೆ 20 ಬಾರಿ ಕೋಪ ಬರುತ್ತದೆ …ನಾಲಿಗೆಗೆ ಹಿಡಿತವಿಲ್ಲ ..ಸದಾ ಯಾವುದೊ ಅನಿರ್ವಚನೀಯ tension !!
ಅಪ್ಪಿತಪ್ಪಿ ನಕ್ಕರೆ ನನ್ನ ಕಂಗಳಲ್ಲಿ ಆನಂದಭಾಷ್ಪ…
ಅಂತ harmones ಪ್ರಾಬ್ಲಮ್ ಏನಿರಬಹುದು ?
ಕಿತಾಪತಿ ಸನ್ನಿವೇಷವಲ್ಲ , ಮನಸ್ಥಿತಿ.

ಬಾಲ ತುಳಿದರೆ ಹಾವೂ ಕೂಡ ಹೆಡೆ ಎತ್ತುತ್ತದೆ ..
ಊಟ ಕಿತ್ತುಕೊಂಡರೆ ಮನೆ ನಾಯಿ ಕೂಡ ಗುರ್ರ್ ಎನ್ನುತ್ತದೆ .
ಹೆಣ್ಣಿಗೆ ಜೀವವಿಲ್ವಾ , ಪ್ರತಿಕ್ರಯಿಸಬಾರದ ?
ನೆಟ್ಟಗೆ ಇರುವವರು , ಗಟ್ಟಿ ಇರುವವರು ಇಲ್ಲದೆ ಇರೊ ಮಾತನೆಲ್ಲ ಸಹಿಸಲ್ಲ .
ಸಹಿಸಬೇಕು ಅನ್ನೋಕೆ ಅವರಿಬ್ಬರೂ … ಅವನು ಗಂಡಸಂತೆ, ಅದು ಆ  ಮನೆಯ ಪದ್ಧತಿಯಂತೆ …
ಅವನ ಚೇಷ್ಟೆಗಳನ್ನು ಎಷ್ಟು ಸಹಜವಾಗಿ ಸಮರ್ಥಿಸಿಕೊಳ್ಳುತ್ತಾರೆ, ತಪ್ಪು ಎತ್ತಿತೋರಿಸೋಕೆ ನನ್ನನ್ನು ಬೀದಿಗೆ ಎಳಿತಾರೆ.
ಇಡಿ ಊರಿಗೆ ಊರೇ ಹೆದರುವ ಘಟವಾಣಿ ಹೆಂಗಸರಿಂದ ನೀತಿ ಪಾಠ !

ಸ್ತಳಬದಲಾಯಿಸಿದ್ದು ಒಂದು ಸಣ್ಣ powder ಡಬ್ಬದ್ದು…ಅದರಲ್ಲಿ ಬಯ್ಯೋಕೆ ಕಾರಣವಾದರು ಏನಿತ್ತು ? ಅಕ್ಕ ದಿನಾ ಮನೆಗೆ ಬಂದು ಪೌಡರ್ ಉಪಯೋಗಿಸುತ್ತಾಳೆ , ಅವಳಿಗೆ ಇರುಸುಮುರುಸಾಗಬಾರದು ಅಂತ ವಾದ ಮಾಡಿದಾಗಲೇ ಅಕ್ಕನ ಪವರ್ ತಿಳ್ಕೊಬೇಕಿತ್ತು ನಾನು ..
ತಿಳಿಹೇಳೋದು ಹಾಳುಬಿದ್ದು ಹೋಗಲಿ ,ಕಪಾಲಕ್ಕೆ ಬಿಗಿಯದಿದ್ದದ್ದು  ನನ್ನ ಪುಣ್ಯ …
ಕಳಿಸಿದ್ದು ಒಂದು ಮೆಸೇಜ್ ಬೇಜಾರಲ್ಲಿ  ..ಎಲ್ಲ ಹೆಂಡತಿಯರು  ಮಾಡೋದೇ …
ಅಮ್ಮನಿಗೆ ದೂರು ರವಾನೆ ,ಹೀಗೆ  ಮೆಸೇಜ್ ಕಳಿಸಿದ್ದಾಳೆ ..ಇನ್ನು ಮುಂದೆ ಯಾವುದೇ ಮೆಸೇಜ್ ನೂ  ಅವನಿಗೆ ಕಳಿಸುವ  ಹಾಗಿಲ್ಲ,ಅವನಿಗೆ ಬೇಜಾರು ಮಾಡುವ ಹಕ್ಕು ನಿನಗಿಲ್ಲ  software ಬರೆಯುವವಳಿಗೆ software ನ ಉಪಯೋಗ ನಿಶಿದ್ದ–ತೀರ್ಪು !!
ಅಷ್ಟಕ್ಕೇ ನಿಂತರೆ ಅದು ಮನೆಯಾದಿತೇ….ಕರೆಸೋ ಎಲ್ಲರನ್ನು, ಅಕ್ಕ, ಭಾವ, ಚಿಕಪ್ಪ, ದೊಡ್ಡಪ್ಪ, ಮಾವ, ಅತ್ತೆ ..ಏನೇ ಆದರು ಇವತ್ತು ಸುಮ್ಮನೆ ಬಿಡಬಾರದು ..ಮೆಟ್ಟಿಲ ಮೇಲೆ ನಿಂತು   ಪ್ಲಾನ್ …ಯಕ್ಷಗಾನದ ರಾಕ್ಷಸನ ಮುಖವಾಡ…
11 ಗಂಟೆ ರಾತ್ರಿಲಿ ನ್ಯಾಯಪಂಚಾಯ್ತಿಗೆ ಆಹ್ವಾನ….
ಬಾಳಿಸಬೇಕು ಎನ್ನುವ ಬದ್ದತೆ ಇಲ್ಲದಾಗ ಆಗೋ ಅವಾಂತರಗಳು…
ಬುದ್ದಿಯಾದರು ಎಲ್ಲಿತ್ತು ನನಗೆ…ರಾತ್ರಿ ಎಲ್ಲ ಸುಮ್ಮನೆ ಅಳು …
ಹರ್ಟ್ ಆಗುತ್ತೆ ಅಂತ ಗೊತ್ತಾದ ಮೇಲೆ ಅದೊಂದು logic ಆಗೋಯ್ತು …ಗಿಲ್ಟಿ ಫೀಲ್ ಮಾಡಿಸಿ ಹರ್ಟ್ ಮಾಡಿದರೆ ಅಂಕುಶ ನಿರ್ಮಾಣ …
ಹುಡುಕಬೇಕು  ತಪ್ಪು  ದುರ್ಬೀನು ಹಾಕಿಕೊಂಡು  …
ಅದೆಷ್ಟು ಬಾರಿಯೋ ಮನೆಗೆ ಸೇರಿಸಲ್ಲ ಅಂದಿದ್ದು, ಮನೆ ಬಿಟ್ಟು ಹೋಗು ಅಂದಿದ್ದು , ನಿಮ್ಮ ಹುಡುಗಿ ಬೇಡ ಕರ್ಕೊಂಡು ಹೋಗಿ ಅಂದಿದ್ದು …ಅಗತ್ಯ ಇಲ್ಲ ಅಂದ ಮೇಲೆ ತಾಳಿ ಯಾಕೆ ಕಟ್ಟಿದ್ದು …?
ಹಳೆ ಕಾಲದ ಸೀನು , ನಮ್ಮಹುಡುಗಿಯನ್ನು ಹಾಗೆಲ್ಲ ಕೈ ಬಿಡಬೇಡಪ್ಪ  ಕಾಲಿಗೆ ಬಿದ್ದು ಬೇಡಿಕೊಳ್ತಿವಿ… ..ಕಾಲ ಬದಲಾಗಿದ್ದರು ನಿರೀಕ್ಷೆಗಳು  ಬದಲಾಗೋಲ್ಲ..
20  ದಿನಕ್ಕೆ ಒಮ್ಮೆ ನಡೆಯೋ ಪಂಚಾಯ್ತಿಗಳು ….ಸಂಸಾರ ಮಾಡೋದು ಅಂದರೆ  ಏನು ಮತ್ತೆ ?

ಕತ್ತಿ  ಹಿಡಿದು ತಿವಿಯಲು ಬರುತ್ತಿದ್ದದ್ದು ರಾಜನೆ ಆದರೂ  ಹಿಂದೆ ನಿಂತು ಸಾರಥಿ  ಹಿಡಿದಿದ್ದು , ಹುರಿದುಂಬಿಸಿದ್ದು ಹೆಣ್ಣುಗಳು … ಕೋಪ ಕೆರಳುವ ಹಾಗೆ ಮಾಡಿದ್ದು ,ಪ್ರೀತಿಯಿದ್ದಿದ್ದರೆ ಮನೆಕಷ್ಟ ನೋಡಿಯು ಸುಮ್ಮನಿರುತ್ತಿದ್ದಳ  ಅಂತ ಅತ್ತಿದ್ದು ,ಗಂಡಸಿಗೆ ಸಿಗಬೇಕಾದ ಮರ್ಯಾದೆ ಗೌರವ ನೀಡುತ್ತಿಲ್ಲ ಅಂತ ದುಸಮುಸ ಮಾಡಿದ್ದು ,   ಹೆಣ್ಣೇ ಅಲ್ಲ ಅಂತ declare ಮಾಡಿದ್ದು ಹೆಣ್ಣುಗಳೇ …
ಅನ್ಯೋನ್ಯತೆ ಸಾಧಿಸು ಎನ್ನುವುದ ಬಿಟ್ಟು authority ಸಾಧಿಸು ಎಂದು ಬೋಧಿಸಿದ್ದು ಅವರೇ  .
ಕಂತೆಗೆ ತಕ್ಕ ಬೊಂತೆ …
ಹೆದರಿಕೊಂಡು ಕಾಲು ಹಿಡಿದರೆ ತಪ್ಪು ಮಾಡಿದ್ದಳು ಅಂತ ಪ್ರಕಟಿಸೋದು  , ಎರಡು ಬಿಟ್ಟರೆ ಹೊಡೆದಳು ಅಂತ ಊರು ತುಂಬಾ ಹೇಳಿಕೊಂಡು ಬರೋದು ..
ಹೇಗೆ ಹ್ಯಾಂಡಲ್ ಮಾಡೋದು ಮತ್ತೆ ?
ಅದನ್ನೇ ಅವನು ಟ್ರೈನ್ ಮಾಡುತ್ತಿದ್ದದ್ದು ….
ಅನ್ನಿಸಿಕೊಳ್ಳೋದು ಅಷ್ಟೇ ನಿನ್ನ ಕರ್ತವ್ಯ, ತಿರುಗಿ ಆಡೋ ಹಕ್ಕಿಲ್ಲ …ಸ್ವಾಭಿಮಾನಾನ ಮೂಟೆಕಟ್ಟಿ ತವರುಮನೇಲಿ    ಬಿಟ್ಟಿಬರಬೇಕು, ಇಲ್ಲಿ ಬಾಳಬೇಕು ಅಂದರೆ !
ಕೇಳುವ ಮೊದಲೇ ಕಾಲಿಗೆ ಅರ್ಪಿಸಿಬಿಟ್ಟರೆ ಪಾರಾಯಣ  …
ಬೇಜಾರಾಯ್ತು ಎಂದು ಹೇಳಿದರೂ ಇನ್ನೊಂದು ವಾರ ಕಪ್ಪಗೆ ಊದಿಕೊಂಡ ಮುಖ, ಬಾಗಿಲುಗಳೆಲ್ಲ  ಟಪ ಟಪ …ಸುಳ್ಳು ಸುಳ್ಳೇ ನಗಬೇಕು, ಚೆಂದ ಸಂತೋಷವಾಗ್ತಿದೆ ಅಂತ….ನೋಡ್ತಿದ್ದಂಗೆ ಪ್ರೀತಿ ಉಕ್ಕಿಹರಿತಿದೆ ಅಂತ .
ನಮ್ಮ  ಮನೆಯ  2  ವರ್ಷದ  ಮಗು  ಕೂಡ ಎಷ್ಟು  ಸುಲಭವಾಗಿ ತನಗನ್ನಿಸುತ್ತಿರುವುದನ್ನು ಹೇಳಿಕೊಂಡು ಪರಿಸ್ತಿತಿ ಸರಿ ಮಾಡಿಕೊಳ್ಳುತ್ತೆ .
ಬೆಳಗ್ಗೆ ಒಡೆದದ್ದನು ರಾತ್ರಿವರೆಗೂ ಯಾಕೆ ನನಗೆ ಒಡೆದದ್ದು ಅಂತ ಪ್ರಶ್ನಿಸುತ್ತೆ .ಬೈಯ್ಯ ಬೇಡ ನನಗೆ ಭಯ ಆಗುತ್ತೆ ಅನ್ನುತ್ತೆ .ಜಾಸ್ತಿ ಹೆದರಿಸಿದರೆ ಸತ್ತು ಹೋಗ್ತೀನಿ ಅಂದು ಬಿಡುತ್ತೆ .
ನನಗೇನಾಗಿತ್ತು ?
ಯಾಕೆ ಮನಸಿನ ಕಹಿಯನ್ನ, ನೋವನ್ನ್ನ, ಆಗುತ್ತಿದ್ದ ಹಿಂಸೆಯನ್ನ  ನುಂಗಿಕೊಂಡು  ಸುಮ್ಮನಾಗಿ ಬಿಡುತ್ತಿದ್ದೆ …ಅದು ನನ್ನ ಜಾಯಮಾನವೇ ಅಲ್ಲ ..ನಾನು ಅಲ್ಲವೇ ಅಲ್ಲ …
ಅಂತ ಭೀತಿಯನ್ನ ಅವನು create ಮಾಡಿದ್ದನ ? ಒಂದು ಚೂರು ನನ್ನ  ಮನಸಿಗೆ ಬೇಜಾರಾಗಬಾರದು, ಹಾಗೆ ನೋಡಿಕೊಳ್ಳೋದು, ನಡೆದುಕೊಳ್ಳೋದು ನಿನ್ನ ಕರ್ತವ್ಯ ಅಂತ ತಲೆಗೆ ತುಂಬಿಸಿದ್ದನ?ಪ್ರೀತಿನ ? ನಾನು ಕೋಪ ಮಾಡಿಕೊಂಡರೆ ಅದಕ್ಕೆ ಕಾರಣ ನಿನ್ನ ನಡವಳಿಕೆ ಅಂತ ನಂಬಿಸಿದ್ದನ?  ಮಾನಸಿಕವಾಗಿ ಆಶ್ರಿತವಾದವರ ಮೇಲೆ ನನ್ನ ಆತ್ಮವಿಶ್ವಾಸ ನಿಂತಿರುತ್ತೆ ಅನ್ನುವ ಸೀಕ್ರೆಟ್ ನ ತಿಳಿದುಕೊಂಡಿದ್ದನ ?
ಒಳ್ಳೆತನದಲ್ಲಿ ಗೆಲ್ಲಬೇಕು , ಅದೊಂದೇ ನನಗೆ ತಿಳಿದಿದ್ದ  ಮಾರ್ಗ …ಗಂಡ ಅನ್ನುವ ಪಾತ್ರಕ್ಕೆ ಅಷ್ಟು ಮರ್ಯಾದೆ, ಸ್ತಾನ ಕೊಟ್ಟಿದ್ದೇ ನಾನು..ಅತವ  ನನ್ನ ಪರಿಸ್ತಿತಿಯ ವಾಸ್ತವಕ್ಕೆ ಅಸಹಾಯಳಾಗಿದ್ದೆನ ..
ಎಲ್ಲವು ನಿಜ…
ಒಳಗಡೆ ಒತ್ತಿಕೊಂಡ ಭಾವನೆಗಳೆಲ್ಲ ತೀರ pressure  cooker  ನಷ್ಟು pressure ಗೆ ಒಳಪಟ್ಟಾಗ ಅಲ್ಲಿ ಹೊಟ್ಟೆಬೇಯೋಕೆ   ಶುರುವಾಗುತ್ತೆ …
yes  ,i  was in  repression …ಹೇಳಿಕೊಳ್ಳಲಾಗದ, ಅನುಭವಿಸಲಾಗದ ಒತ್ತಡ ….ನನ್ನ ಶತ್ರು ಕೂಡ ಅಂತ ಸ್ಥತಿ ತಲುಪದೇ  ಇರಲಿ ಎಂದೇ ಬೇಡಿಕೊಳ್ಳುತ್ತೇನೆ
ಆದರೆ ತೀರ ಯಾಮಾರಿಸುತ್ತಿದ್ದಾರೆ  , ಮೋಸ ಮಾಡುತ್ತಿದ್ದಾರೆ, ಒಳ್ಳೆತನಕ್ಕೆ ಬೆಲೆ ಕೊಡಲಿಲ್ಲ, exploit  ಮಾಡುತ್ತಿದ್ದಾರೆ  ಅಂತ confirm ಆದಾಗ ಸಿಡಿದ್ದೆದ್ದೆ…   ಖಾರವಾಗೆ ವರ್ತಿಸಿದೆ…. ಸ್ಪೋಟ ಸಹಜ …

ಯಾವಾಗ ಮಾತಾಡ್ತೀವಿ ನಾವು ?
approachable ಅನಿಸಿದಾಗ , ಹೇಳಿದ್ದು ಅರ್ಥವಾಗುತ್ತೆ ಅನಿಸಿದಾಗ, ಅರ್ಥಮಾಡಿಕೊಳ್ಳೋ ಇರಾದೆ ಮತ್ತು ಶಕ್ತಿ ಇದೆ ಎಂದಾದಾಗ , ವಿಶ್ವಾಸ, ಪ್ರೀತಿ, ಗೌರವ ಇದೆ ಎನಿಸಿದಾಗ, ಸೇಫ್ , secured ಅನಿಸಿದಾಗ , ಕಡೆ ಪಕ್ಷ missuse ಮಾಡಲ್ಲ ಅನಿಸುವಾಗ …
ಯಾವ criteria ಕೂಡ satisfy ಆಗದೆ ಹೋದರೆ ?
ಚಂದಿರ ತೇಲ್ತಾಇದಾನೆ  , ನಕ್ಷತ್ರ  ಮಿನುಗುತ್ತಾಇದವೆ ಆನೋದನ್ನೇ
ಹೇಗೆ ಬೇಕಾದರೂ  ಬದಲಾಯಿಸಿಕೊಳ್ಳಬಹುದು ..ಸಂತೋಷದಲ್ಲಿ ತೇಲುತ್ತಾ  ಇದ್ದಾನೆ ಇಲ್ಲ ಸತ್ತು ಹೆಣವಾಗಿ ತೇಲುತ್ತಾ ಇದಾನೆ ..
ಅದೆತರಹ ನಕ್ಷತ್ರ ನಗುತ್ತ ಮಿಂಚ್ತಾಯಿವೆ ,ಇಲ್ಲ  ಅಳುತ್ತ ಬಿಕ್ಕಳಿಸುತ್ತಿವೆ…

ನಿದ್ದೆ ಹೋದವರನ್ನ ಎಬ್ಬಿಸಬಹುದು , ನಿದ್ದೆ ಹೋದಂಗೆ ನಾಟಕವಾಡುವವರನ್ನಲ್ಲ ….
ಕಲ್ಲು ಹೊಡೆಯೋದು ಮಾವಿನ ಮರಕ್ಕೆ ಹೊರತು ಬೇವಿನಮರಕ್ಕಲ್ಲ…!!!!!
ನೇರ ಮರವನ್ನೇ ಮೊದಲು ಉರುಳಿಸುವುದಂತೆ….
ಅವನು ಸದಾ ಸಂತೋಶವಾಗಿರಬೇಕು ಅದು ಅವನ ಹುಟ್ಟಿನಿಂದಲೇ ಬಂದಹಕ್ಕು…ಅದನ್ನೇ ಮೂರು ಜನ ಪಾಲಿಸಲು ಹೇಳಿದ್ದು ….
ನಾನು ಚೂರೇ ಕಮಕ್ ಗಿಮ್ಮಿಕ್ ಅಂದ್ರು ಭೂತಬಿಡಿಸೋಕೆ ಸೊಪ್ಪು ಹಿಡಿದು ಸುತ್ತುವರಿತಾರೆ , ಸುಮ್ಮನೆ ತೃಪ್ತಿ ಪಡಿಸಿಬಿಡು, ಯಾರು ನಿನ್ನ ಟಚ್ ಮಾಡಲ್ಲ ಅಂತ ಅವನು ನೇರಾ ನೇರಾ ಹೇಳಿದ್ದು ,
ಅವನು ಹೇಳಿದಂಗೆ ಕೇಳಿಬಿಡು , ಅಮ್ಮನ ಮನೆಯಲ್ಲಿ ಉಳಿದರೆ ಜನ ಮರ್ಯಾದೆ ಕೊಡಲ್ಲ(ಕೇಳಲಿಲ್ಲ ಅಂದರೆ ನಾವು ಕಳಿಸಿಕೊಡ್ತಿವಿ) ಅಂತ ಅವರು ನೇರಾ ನೇರಾ ಹೇಳಿದ್ದು ,  
ಎಲ್ಲದರ ಅರ್ಥವೂ  ಒಂದೇ ದುಡ್ಡು …

ಅವಳಿಗೆ ಶೋಕಿ ಬೇಕು source ಇಲ್ಲ…ಪ್ರಾಣಬೇಕಾದ್ರು ಕೊಡ್ತಾಳೆ ದುಡ್ಡು ಬೇಕಷ್ಟೇ …ಇನ್ನೊಬ್ಬರಿಗೆ ಎಲ್ಲಿ ತನ್ನ ಬಿಟ್ಟು ಒಂಟಿ ಮಾಡಿಹೊರಟು ಹೋಗ್ತಾನೋ ಭಯ …
ಏನೇ ಆದರು  ಬಿಟ್ಟುಕೊಡಲ್ಲ, ಅವನು ಮಾಡಬಾರದ್ದು ಮಾಡಿದರೂ  ತೇಪೆ ಹಾಕೋದು ನಮಗೆ ಗೊತ್ತು, ನಿನ್ನ ಹಿಂದೆ ಮೂರು ಜನರಿಲ್ಲ,ಕೇಳೋರಿಲ್ಲ, ಹಾಳಾಗೋದು ನೀನೆ  ಅಂತ ಹೆದರಿಸಿದ್ದು stage ನಿರ್ಮಾಣಕ್ಕೆ .
ಹಗಲು ದರೋಡೆ !!
ಅಲ್ಲಿಗೆ ಬಕ್ರ ನಾನೇ  …
1000  ರೂಪಾಯಿಯ ಗೆಜ್ಜೆಗೆ , ಒಂದೇ ಒಂದು ಚಿನ್ನದ ಮಣಿಗೆ ತವರು ಮನೆಯ ಯೋಗ್ಯತೆಯನ್ನೇ ಅಳೆದು ಬಿಸಾಕಿದರು …
ಮದುವೆಗೆ ಅವರು ಮಾಡಿಕೊಂಡ ಸಾಲವನ್ನ ತೀರಿಸೋಕೆ ನನ್ನ ಕರ್ತವ್ಯ ಮಾಡಿಬಿಟ್ಟರು …
ಮನೆತುಂಬೋದು ಅಂದರೆ ಅದೇ ತಾನೇ …. ಕೊಟ್ಟಕುಲಕ್ಕೆ ಹೊರಗಾಗೋದು ಅಂದರೂ ಅದೇ ತಾನೇ …??

ಪೆದ್ದರಿಗೆ ಅರ್ಥಮಾಡಿಸಬಹುದು, ಸಾಮಾನ್ಯರಿಗೆ ತಿಳಿಸಿ ಹೇಳಬಹುದು , ಕಡೆಗೆ ಬುದ್ಧಿವಂತರನ್ನು ಒಪ್ಪಿಸಬಹುದು..ಆದರೆ ಅತಿ ಬುದ್ಧಿವಂತರನ್ನು ??? ಊರನ್ನೇ ರುಡಾಲಿ ಎಬ್ಬಿಸಿಬಿಡ್ತಾರೆ …
ಜೀವನ ಪ್ರೀತಿ ಸರಿ , ಸ್ವಲ್ಪ ಜಾಸ್ತಿನೆ ಆಸೆ ಇರಲಿಬಿಡಿ , ದುರಾಸೆ ಇದ್ಕೊಳ್ಳಿ, ನಾನು ಸುಖವಾಗಿರಬೇಕು ಇರು , ನಾನಷ್ಟೇ ಸುಖವಾಗಿರಬೇಕು ಅದು ಆಗಿ ಹೋಗಲಿ, ನನ್ನ ಬಿಟ್ಟು ಇನ್ಯಾರು ಎದುರಿಗೆ  ಕೂರಬಾರದು, ವಾಂತಿಬರುವಷ್ಟು , ಕಣ್ಣು ಕುಕ್ಕುವಷ್ಟು ಅತಿ ಸ್ವಾರ್ಥ ??

Afterall ದುಡ್ದುತಾನೆ, ನನ್ನದು ಬೇರೆ ಅವರದು ಬೇರೆ ಹೆಂಗಾಗುತ್ತೆ, ಕೊಡ್ತೀನಿ …
— ಗಂಡ ಹೇಳಿದಂಗೆ ಕೇಳಬೇಕು, ಅವನನ್ನು ಸಾಕಬೇಕು, ಪೊರಿಬೇಕು, ಸಂತೃಪ್ತಿಪಡಿಸಬೇಕು , ಮನೆ , ಸಮಸ್ಯೆ, ಸಾಲ ನಿನ್ನದು ಅಂದುಕೊಳ್ಳಬೇಕು…ಎಲ್ಲರು ಹೇಳೋದು ಅದೇ ನೀತಿ
ನನ್ನ  ಪ್ರಕಾರ  ಅದು  ಪ್ರೀತಿ ..ಮಾಡಬಲ್ಲೆ ಮನಸ್ಪೂರ್ತಿ …
ನಂಬಿಕೆ ಇಲ್ಲವಲ್ಲ ….
pf ಎಲ್ಲಿ, settlement  ಎಲ್ಲಿ, bonnus  ಎಲ್ಲಿ….. ನನಗಿಂತ ನನ್ನ ದುಡ್ಡಿನ ಮೇಲೆ ಪ್ರೀತಿ !!!
ಪ್ರೀತಿಸಲ್ಪಡುತ್ತಿದ್ದೇನೋ ಉಪಯೋಗಿಸಲ್ಪಡುತ್ತಿದ್ದೇನೋ ತಿಳಿಯದಷ್ಟು ದಡ್ಡಿ ಏನಲ್ಲ … ಬುದ್ಧಿ  ಅರಿಯದೆ ಹೋದರು ಆತ್ಮ ಅರಿಯುತ್ತೆ .
ಮ್ಯಾಕ್ಸಿಮಮ್ ದಕ್ಕಬೇಕು, ಎಲ್ಲ ಕಡೆ cctv ಕ್ಯಾಮೆರಾ , ಎಲ್ಲಿ ಮುಚ್ಚುಮೊರೆ ಮಾಡಿಬಿಡ್ತಿನೋ ಅಂತ … ಯಾರೊಂದಿಗೂ ಮಾತಾಡಂಗಿಲ್ಲ  , ಬೆರೆಯಂಗಿಲ್ಲ, ಓದಂಗಿಲ್ಲ, ಬರೆಯಂಗಿಲ್ಲ, ಐದು ನಿಮಿಷ ಜಾಸ್ತಿ ನಿದ್ದೆ ಮಾಡಂಗಿಲ್ಲ , ಸುಮ್ಮನೆ ಕೂರಂಗಿಲ್ಲ….
rules  regulations …
ದಾರಿ ಇತ್ತು …
ವಿಷದ ಬಟ್ಟಲನ್ನು ಎದೆಯಲ್ಲಿ ಇಟ್ಕೊಂಡು ತುಟಿಮೇಲೆ ಜೇನಸವಿರಿಕೊಂಡು ಮಾತಾಡಬೇಕಿತ್ತು …
ನಗುವಿನ ಮೇಕ್ಅಪ್ ತೊಟ್ಟುಕೊಂಡು ಚೆಂದ ಇದೀನಿ ಅಂತ ವಯ್ಯಾರ ಮಾಡಬೇಕಿತ್ತು .
ನೀನು ದುಡಿದು ಸಾಕು, ನಾನು ಬೇಯಿಸಿಹಾಕ್ತಿನಿ ಅಂತ ಬುದ್ಧಿವಂತಿಕೆ ಮಾಡಿಕೊಂಡು ಮನೆಯಲ್ಲಿ ಉಳಿಬೇಕಿತ್ತು…
ಎಲ್ಲ ಸರಿ ಇರ್ತಿತ್ತು …

ಎಂತ ಪೆದ್ದು ಹುಡಿಗೀರಪ್ಪ  ನಾವು …
ಕೆಲಸಕ್ಕೆ ಬಾರದ ತತ್ವಗಳು …
ಅದ್ಯಾವುದೋ ಸಿನಿಮಾದಲ್ಲಿ ಪಾತ್ರ ಹೇಳುವಂತೆ ಕಪ್ಪೆ, ಕಣ್ಣು, ಅಮೀಬ ಕಲಿಸಿಕೊಟ್ರು  , ಬದುಕೋದು ಹೆಂಗೆ ಅಂತಾನೆ  ಕಲಿಸಿಕೊಡ್ಲಿಲ್ಲ….
 
     

 

 
 
 

 
 
 
 
 
 
 

 

ಮುಂಚೇನೆ ಗೊತ್ತಿತ್ತು ಅಲ್ವಾ ….?

ರವಿ ನನ್ನ ಸಹೋದ್ಯೋಗಿ ಗೆಳೆಯ .ನನ್ನಂತೆ ಸ್ವಲ್ಪ ಜಾಸ್ತಿ ಮಾತು.ಇದ್ದಿದ್ದು ಎಲ್ಲ ಹೇಳಿಕೊಂಡು ಬಿಡುತ್ತಾನೆ .
ಮದುವೆ ತಯಾರಿ ಶುರುವಾದಾಗಿಂದ ಹನಿಮೂನ್ ಮುಗಿಸಿ ಬರುವ ತನಕ ಎಲ್ಲ ಹೇಳಿಕೊಂಡು ಹಗುರಾಗಿ ಬಿಡುತ್ತಿದ್ದ… ಸಂಸಾರದ ವಿಷಯ ನನ್ನ ಬಳಿಯೇ ಜಾಸ್ತಿ ಚರ್ಚಿಸೋದು…
ವಾರಕೊಮ್ಮೆ ತವರು ಮನೆಗೆ ಹೋಗಬೇಕು ಅಂತಾಳೆ .ನಮ್ಮ ಮನೆಯಲ್ಲಿ ಒಬ್ಬಳನ್ನೇ ಕಳಿಸಲ್ಲ, ನಾನು ಜೊತೆಗೆ ಕರೆದುಕೊಂಡು ಹೋಗಿ ವಾಪಸ್ಸು ಕರೆದುಕೊಂಡು ಬರಬೇಕು .ಅವಳಿಗೇನೋ ಅದು ಅಮ್ಮನ ಮನೆ ಸರಿ..ನನಗೆ ವಿಪರೀತ ಬೋರು …ವಿಪರೀತ formal ಆಗಿ ಮಾತಾಡಿಸಿದರೆ ನನಗೆ ಮುಜುಗರವಾಗುತ್ತೆ.ಎಷ್ಟು ಅಂತ t .v ನೋಡುತ್ತಾ ಕೂರೋದು…ಅಲ್ಲಿ ಯಾರು ಮಾತನಾಡಿಸೋರು ಇರೋಲ್ಲ ..ಅವನ ಅಹವಾಲು !!!

ರವಿ, ಸಹಜ ಅಲ್ವಾ …ಕೆಲಸಕ್ಕೆ ಹೋಗುವ ಹೆಣ್ಣುಮಗಳು..ಹೊಸ ಜನ, ಹೊಸ ಜಗತ್ತು…ಹೊಂದಿಕೆ ಮಾಡಿಕೊಳ್ಳೋಕೆ ಸ್ವಲ್ಪ ಸಮಯಬೇಕು… ತವರುಮನೆ ಅಂದ್ರೆ comfort ಜಾಗ…ಹೊಸಮನೆಯಲ್ಲಿ ವಾರಪೂರ್ತಿ ಆಗಿರಬಹುದಾದ ಇರುಸುಮುರುಸು ಕಳೆದುಕೊಂಡು ಒಂದು ದಿನವಾದರೂ relax ಆದರೆ ಚೂರು ನೆಮ್ಮದಿ ..ಒಂದು ವರ್ಷವಷ್ಟೇ ಆಮೇಲೆ ನಿಧಾನಾವಾಗಿ ಸೆಳೆತ ಕಮ್ಮಿ ಆಗುತ್ತೆ, ಇಲ್ಲಿಯೇ ಅಡ್ಜಸ್ಟ್ ಆಗುತ್ತೆ ….ಸಹಿಸಿಕೊಳ್ಳಿ …

ಅರೆ ಹೌದಲ್ವಾ ..? ಒಂದು ದಿನದ ಮಟ್ಟಿಗೆ ನನಗೆ ಅಲ್ಲಿ ಇರೋಕೆ ಎಷ್ಟು ಕಷ್ಟ ಆಗುತ್ತೆ..ಪಾಪ ನೀವು ಹೆಣ್ಣುಮಕ್ಕಳು ಅಷ್ಟು ವರ್ಷದ ಮನೆ ಬಿಟ್ಟು ಇಲ್ಲಿ ಬಂದು ಬದುಕಬೇಕು…

ಅದಕ್ಕೆ ಅವನಿಗೆ ನನ್ನ ಜೊತೆ ಮಾತಾಡೋದು ಅಷ್ಟು ಇಷ್ಟ ..
ಬೇಜಾನ್ ಟಿಪ್ಸ್ ಕೊಡುತ್ತಿದ್ದೆ .ನನ್ನದೇನೂ successfull ಸ್ಟೋರಿ ಎನ್ನುವ ತರಹ !!!
ನಿಮ್ಮನ್ನು ನಂಬಿ ಅವಳೇನಾದರು ತನ್ನ ಮನೆ ಬಗ್ಗೆ, ಖಾಸಗಿ ವಿಷಯಗಳ ಬಗ್ಗೆ ಹೇಳಿಕೊಂಡರೆ ಕೋಪ ಬಂದಾಗ ದಯವಿಟ್ಟು ಅದನ್ನೆಲ್ಲಾ ಈಚೆ ಎಳೆದು ಬೇರೆಯವರ ಮುಂದೆ ಹೇಳಿಬಿಡಬೇಡಿ …ನಂಬಿಕೆ ದ್ರೋಹ ಅದು…ತುಂಬಾ ದೊಡ್ಡ ಕೆಟ್ಟ ಚಾಳಿ …ಸಂಬಂಧವನ್ನು ಅನಗತ್ಯ ಘಾಸಿ ಮಾಡಿಬಿಡುತ್ತದೆ.. ಪ್ರಯೋಜನವೇನು …ದೂಷಿಸೋದ್ರಿಂದ, ಅವಮಾನ ಮಾಡೋದ್ರಿಂದ ವ್ಯಕ್ತಿ ಮೇಲಿನ ಗೌರವ , ವಿಶ್ವಾಸ ಕಡಿಮೆಯಾಗುತ್ತದೆಯೇ ವಿನಃ ಮತ್ತೇನು ಪ್ರಯೋಜನವಿಲ್ಲಾ… ನಿಮ್ಮ ಮನೆಯವರ ಕಣ್ಣಲ್ಲಿ ಅವಳನ್ನು ಸಣ್ಣವಳನ್ನಾಗಿ ಮಾಡಿದರೆ ಅವಳು ಕಂಡಿತ ನಿಮ್ಮನ್ನು ಕ್ಷಮಿಸೋಲ್ಲ …ನಿಮ್ಮ ಮನೆಯವರ ಕಣ್ಣಲ್ಲಿ ಅವಳು ಹಗುರವಾದರೆ ಅಲ್ಲಿ ಅನ್ಯೋನ್ಯತೆ ಗಿಟ್ಟುವುದಿಲ್ಲ …ಮನೆಯ ನೆಮ್ಮದಿ ಸಡಿಲವಾಗಿ ಹೋಗುತ್ತದೆ.ಆತ್ಮಗೌರವಗಳ ಸೆಣೆಸಾಟ ಸಂಸಾರ .

ಅಮ್ಮನಿಗೆ ಹುಷಾರಿಲ್ಲ ಅಂತ ಒಂದು ವಾರದ ಮಟ್ಟಿಗೆ ತವರಿನಲ್ಲಿದ್ದಾಳೆ …ಮೊನ್ನೆ ಹೋಗಿದ್ದಾಗ ನೀವು ಇರಿ ಎಂದು ಅಳಲು ಶುರು ಮಾಡಿಬಿಟ್ಟಳು …ನಾ ಹೆಂಗೆ ಒಂದು ವಾರ ಅತ್ತೆ ಮನೆಯಲ್ಲಿ ಉಳಿಯೋದು ?
ಆದರೆ ಅವಳ ಅಳು ನೋಡಿ ನನಗು ಅಳು ಬಂದುಬಿಡ್ತು …ನಿಜವಾಗಲು ತುಂಬಾ ಕೆಟ್ಟದಾಗಿ ಅವಳನ್ನು ಮಿಸ್ ಮಾಡಿಕೊಳ್ತಿದೀನಿ ..ಅವಳು ಅಷ್ಟೇ …ಎಷ್ಟೋ ವರ್ಷದ ಸಂಬಂಧದ ತರಾ ಇಬ್ಬರಿಗೂ ಫೀಲ್ ಆಗ್ತಾ ಇದೆ… ತುಂಬಾ ಹಚ್ಚಿಕೊಂಡು ಬಿಟ್ಟಿದ್ದೀವಿ …ಬಿಟ್ಟಿರೋಕೆ ಆಗ್ತಿಲ್ಲ..
ನಿಮಗೂ ಹೀಗೆಲ್ಲ ಆಗ್ತಿತ್ತಾ ?
ನಿಜ ಹೇಗೆ ಹೇಳಲಿ … ಖಂಡಿತ ಇಲ್ಲ ಅಂತ …ಅವನೂ ನನ್ನ ಮಿಸ್ ಮಾಡಿಕೊಳ್ತಿರಲಿಲ್ಲವಂತೆ …ನನಗು ಅಲ್ಲಿನ ಗೋಳು ತಪ್ಪಿ ನೆಮ್ಮದಿ ಸಿಕ್ಕರೆ ಸಾಕು ಎನಿಸಿರುತಿತ್ತು ,ವಾಪಸ್ಸು ಹೋಗಲು ಮನಸು ಬರುತ್ತಿರಲಿಲ್ಲ …
ಇಲ್ಲ ರವಿ ,ಅಷ್ಟೇನಿಲ್ಲ ಅಂತ ನಕ್ಕು ಬಿಟ್ಟೆ…

ನನ್ನ ಕತೆ ಅವನಿಗೆ ಗೊತ್ತಿಲ್ಲ ….ಪಾಪ .

ಮೊನ್ನೆ ಯಾಕೋ ವಿಪರೀತ ವ್ಯಾಕುಲತೆಗೊಳಗಾದಂತೆ ಇದ್ದ …ಇಬ್ಬರೇ ಊಟಕ್ಕೆ ಹೋಗೋಣ ಎಂದಾಗಲೇ ಏನೋ ಕತೆ ಹೇಳ್ತಾನೆ ಅನ್ನುಸ್ತು …
ಅಮ್ಮ ಒಂದು ತಿಂಗಳ ಮಟ್ಟಿಗೆ ಎಲ್ಲೋ ಹೋಗಿದ್ದಾರೆ …ತುಂಬು ಕುಟುಂಬ ..3 ಜನ ಅಣ್ಣ, ಅತ್ತಿಗೆ ಅಪ್ಪ ಅಮ್ಮನ ದೊಡ್ಡ ಫ್ಯಾಮಿಲಿ …
ಮೇಲಿನ ಫ್ಲೋರ್ ನಲ್ಲಿ ನಾವಿಬ್ಬರೇ ಇರೋವಾಗ ಎಲ್ಲ ಕೆಲಸಾನು ಮಾಡಿಕೊಡ್ತೀನಿ ….ರೂಮಿನ ಬಾತ್ರೂಮ್ ನ ಸಹ ನಾನೇ ತೊಳಿತೀನಿ…ಅಡಿಗೆ ಮನೆಯಲ್ಲೂ ಪಕ್ಕ ನಿಂತು ಮಾತಾಡ್ತಾ ಜಾಸ್ತಿ lonely ಫೀಲ್ ಆಗದೆ ಇರುವಹಾಗೆ ಮ್ಯಾನೇಜ್ ಮಾಡ್ತೀನಿ ..ಯಾರು ನೋಡುತ್ತಿಲ್ಲ ಅಂದ್ರೆ ಹೆಲ್ಪ್ ಕೂಡ ಮಾಡ್ತೀನಿ …ಆದ್ರೆ ಎಲ್ಲರೆದುರು ಅಡಿಗೆ, ಪಾತ್ರ ತೊಳೆಯೋಕೆ ಆಗುತ್ತಾ…ಪಾಪ,ನನಗೆ ಅರ್ಥ ಆಗುತ್ತೆ ಅವಳಿಗೆ ಒಂತರ ಕಷ್ಟ ….
ಕೆಲಸದವರನ್ನು ನೇಮಿಸೋಣ ಅಂತ ಅಮ್ಮಂಗೆ ಹೇಳ್ತಾ ಇದೀನಿ… ಇಷ್ಟು ಜನ ಹೆಂಗಸರು ಇರೋವಾಗ ಯಾಕೆ ಸುಮ್ಮನೆ ಅಂತ ಅವರ ಅಭಿಪ್ರಾಯಾ..ಇಷ್ಟು ದಿನ ಇರಲಿಲ್ಲ ಈಗ ಹೆಂಡತಿ ಬಂದ ಮೇಲೆ ಮನೆಕೆಲಸದವರನ್ನ ಕೇಳ್ತಾನೆ ಅಂತ ಅಂದುಕೊಂಡರು ಪರವಾಗಿಲ್ಲ, ನಾನೇ ಸಂಬಳ ಕೊಡ್ತೀನಿ ಅಂತಾ ಕೂಡ ಹೇಳಿದೀನಿ ಅಂದ .
ಇದೊಂದು ತಿಂಗಳು ಅಷ್ಟೇ ಅಮ್ಮ ವಾಪಸು ಬಂದಮೇಲೆ ಅವರೇ ಮಾಡಿಕೊಳ್ಳುತ್ತಾರೆ ..
ಕೆಲಸ ಮಾಡೋದೆಲ್ಲ ಮಾಡಿ ಬಂದು ರೂಮಲ್ಲಿ ಕೂತು ದಿನಾ ಅಳುತ್ತಾಳೆ…ನನ್ನ ಕೈನಲ್ಲಿ ಆಗ್ತಿಲ್ಲ ಇಷ್ಟೆಲ್ಲಾ ಜನರಿಗೆ ಮಾಡಿ ಹಾಕೋಕೆ ಅಂತ ಗೋಳಾಡ್ತಾಳೆ …
ಬೇರೆ ಮನೆ ಮಾಡೋಣ ಅಂತಿದ್ದಾಳೆ ..
ಮದುವೆ ಆಗಿ ಬರಿ 3 ತಿಂಗಳು !!! ಇಷ್ಟು ಬೇಗ ಬೇರೆ ಮನೆಮಾಡು ಅಂದರೆ ನನಗೆಂಗೆ ಆಗಬೇಡ ..ನೀವೇ ಹೇಳಿ …
ಅಷ್ಟಕ್ಕೇ ನಿಲಿಸಲ್ಲ , ಅವರ ಅಮ್ಮನಿಗೆ ಫೋನ್ ಮಾಡಿ ಅತ್ತುಬಿಟ್ಲು… ನೀವೆಲ್ಲ ಅಲ್ಲಿ ಆರಾಮಾಗಿ ಇದ್ದೀರಾ ನನ್ನ ಹಣೆ ಬರಹ ಸರಿ ಇಲ್ಲ, ಇಂತ ಮನೆ ಸಿಕ್ಕ್ಕಿಬಿಡ್ತು , ಸತ್ತೋಗ್ತೀನಿ ಅಂತೆಲ್ಲ ಅಂದು ಬಿಟ್ಲು …
ಅವಳು ಹೆಂಗೆ ಕೆಲಸ ಮಾಡಿಕೊಂಡುಹೋದರು ಸರಿ ಇಲ್ಲ ಅಂತ ಯಾರು ದಂಡಿಸೋಲ್ಲ …ನಮ್ಮ ಮನೆಯಲ್ಲಿ ಯಾರು rude ಇಲ್ಲ … ಹಾಗಿದ್ರೂ ಹೀಗೆ ಮಾಡಿದಳು …
ನೋವಾಗೊಲ್ವಾ ??
ಬೇರೆ ಮನೆಮಾಡು ಅಂತ ಇವಳು ಕೇಳ್ತಿದ್ದಾಳೆ ಅಂತ ಅಪ್ಪ ಅಮ್ಮಂಗೆ ಗೊತ್ತಾದ್ರೆ ಅಷ್ಟೇ ..ಅವರೇನಿಲ್ಲ ಆಯಿತು ಹೋಗಿ ಈಚೆ ಬಾಳಿಕೊಳ್ಳಿ ಅಂದು ಬಿಡುತ್ತಾರೆ ..ಮಹಾನ್ ಸ್ವಾಭಿಮಾನಿ ಅವರು ….
ನನಗು ಕೋಪ ಬಂದು ಬಿಡ್ತು …ಫೋನ್ ಈಸ್ಕೊಂಡು ಅತ್ತೆ ಮೇಲೆ ರೇಗಿಬಿಟ್ಟೆ …
ಅಪ್ಪ ಅಮ್ಮನ್ನ ಸಾಯಿಸಿ ಬಿಟ್ಟು , ನಿಮ್ಮ ಮಗಳನ್ನು ಸಂತೋಷವಾಗಿಸಲ ಅಂತ ಕೇಳಿಬಿಟ್ಟೆ ..
ಪಾಪ ಅವರು ಕಕ್ಕಾಬಿಕ್ಕಿ ಆಗಿಬಿಟ್ರು .
ಆಮೇಲೆ ನನಗೆ ಮುಜುಗರ ಆಯ್ತು .ನೆಕ್ಸ್ಟ್ ಟೈಮ್ ಅವರ ಮನೆಗೆ ಹೋದಾಗ ಹೇಗೆ ಮುಖ ತೋರಿಸೋದು ಅಂತ ಹಿಂಸೆ ಆಗ್ತಿದೆ ಅಂದ …

ಈಗಿನ ಜನರೇಶನ್ ನ ಗ್ಲೋಬಲ್ ಸಮಸ್ಯೆ ..ಮನೆಕೆಲಸ ..
ನೆನಪಾಯಿತು .. ಇಡಿ ಬಿಲ್ಡಿಂಗ್ ನ ಕಾರಿಡಾರ್ , ಮೆಟ್ಟಿಲು, ಮನೆಯ ಒಳಗಡೆ ಎಲ್ಲ ತೊಳೆದು ಹೋಗಬೇಕಿತ್ತು …ಅದು ಪ್ರತಿದಿನಾ ..
ಅವನು ಎದ್ದ ತಕ್ಷಣ ಅವನು ಹೊದ್ದಿಕೊಂಡಿದ್ದ bedsheet ನೂ ಮಡಚಬೇಕಿತ್ತು …mosquito ಕಾಯಿಲ್ , ಫ್ಯಾನ್ ಕೂಡ ನಿಲ್ಲಿಸೋದು ತನ್ನ ಗಂಡಸುತನಕ್ಕೆ ಆಗುವ ಅವಮಾನ ಅಂದು ಕೊಂಡಿದ್ದ , ನನ್ನನ್ನೇ ಕರೆದು , ಒಂದಷ್ಟು ಬೈದು ನನ್ನ ಕೈನಲ್ಲೇ off ಮಾಡಿಸುತ್ತಿದ್ದ …. ಅಡಿಗೆ ಮಾಡೋದು, ಅವನ ಬೆನ್ನು ಉಜ್ಜೋದು , ಪೌಡರ್ ಹಾಕೋದು , ತಿಂಡಿ ಪ್ಯಾಕ್ ಮಾಡೋದು , ಅವನಿಗೆ ಬಡಿಸೋದು, ಅವನ ಮೊಬೈಲ್ , ಗಾಡಿ ಕೀ , ಹೆಲ್ಮೆಟ್ ಗಳನ್ನ ಕೈಗೆ ತೆಗೆದುಕೊಡೋದು , ಈಚೆ ನಿಂತು ಕಳಿಸಿಕೊಡೋದು …ಕಡ್ಡಾಯ ಅನ್ನುವ ಹಾಗೆ ಮಾಡಲೇಬೇಕಿತ್ತು ..ಜವಾಬ್ದಾರಿಯಿಂದ ಅಲ್ಲಾಂದ್ರು ಭಯದಿಂದಲಾದರು ಮಾಡಬೇಕಿತ್ತು …
ಇಲ್ಲ ಅಂದ್ರೆ ಗ್ರಹಚಾರ ಬಿಡಿಸಿಬಿಡುತ್ತಿದ್ದ … govt lodge ಕೆಟ್ಟೋಯ್ತು , ತಿನ್ನೋದು ಮಲಗೋದು ಅಂತ ಅವರಮ್ಮನ ಎದುರಿಗೆ ಅವಮಾನ ಮಾಡಿ ಬಿಡುತ್ತಿದ್ದ …
ರಾತ್ರಿಯೂ ಹಾಗೆ , ಕಿಟಕಿ ಎಲ್ಲ ಮುಚ್ಚೋದು, ಬಾಗಿಲು ಚಿಲಕ ಹಾಕೋದು, ನಲ್ಲಿ ನಿಲ್ಸೋದು ,ಸಿಲಿಂಡರ್ ಕ್ಲೋಸ್ ಮಾಡೋದು ಮಾಡಿಲ್ಲ ಅಂದ್ರೆ ನಾಲ್ಕು ಕಾಸಿಗೂ ಬೆಲೆ ಇಲ್ಲ ಅನ್ನೋತರಹ ಆಡುತ್ತಿದ್ದ…
ಅವನು ಬೈದುಬಿಡುತ್ತಾನೆ ಬೈದುಬಿಡುತ್ತಾನೆ ಅಂತಾನೆ ಅವರಮ್ಮ ಹೆದರಿಸಿ ಕೆಲಸ ತೆಗೆಸುತ್ತಿದ್ರು …
ಅವನೆದುರು ಪೇಪರ್ ಓದುವ ಹಾಗಿರಲಿಲ್ಲ , ಬೇಕಾದ ಚಾನೆಲ್ ನೋಡುವ ಹಾಗಿರಲಿಲ್ಲ …ಕಡೆಗೆ ಮಾತಾಡುವ ಹಾಗುಇರಲಿಲ್ಲ ….ಅವೆಲ್ಲ ಗಂಡಸುತನಕ್ಕೆ ಗೌರವ ಕಡಿಮೆ ಮಾಡಿದಂಗೆ !
ಅವನುದು ಪ್ರತಿ ನಿತ್ಯ ಆಫೀಸಿಗೆ 30 ನಿಮಿಷದ ಜರ್ನಿ ..ನನ್ನದು ಹೆಚ್ಚಿ ಕಡಿಮೆ 2 .5 ಗಂಟೆಗಳ journey … ಅವನದು 7 ಗಂಟೆಗಳ ಕೆಲಸ ಅಂದರೆ ನನ್ನದು 9 ಕೆಲವೊಮ್ಮೆ 10 , 11 ಗಂಟೆಗಳ ಕೆಲಸ .
ಮನೆಗೆ ಬಂದ ಮೇಲೆ ಸೋಫಾ ಮೇಲೆ ಮಲಗಿಕೊಂಡು ಅವನು tv ನೋಡ್ತಿದ್ರೆ, ನಾನು ಬಂದವಳೇ ಮುಖ ತೊಳೆದು ಅಡಿಗೆ ಮನೆಗೆ ನುಗ್ಗ ಬೇಕಿತ್ತು ….ಅವನ ಕೈಗೆ ನೀರು ಕೊಟ್ಟು ತೊಳೆಸಿ ಊಟ ಬಡಿಸಲಿಲ್ಲ ಅಂದರೆ ನಾದಿನಿ ಜಗಳ ಮಾಡುತ್ತಿದ್ದಳು ..ಒಬ್ಬನೇ ಮಗ ಮುದ್ದಾಗಿ ಬೆಳೆಸಿದ್ದೇವೆ…ಈಗ ಬಂದು ಎದ್ದು ಹೋಗಿ ಕೈ ತೊಳೆದುಕೋ ಅಂತಾಳೆ ಅಂತ ಜನರೆದುರು ಮಾನ ತೆಗೆಯುತ್ತಿದ್ದಳು …
ಸಾರು ಕೈ ತಪ್ಪಿ ಚೆಲ್ಲಿದ್ದಕೆ ಹೊಡೆಯಲು ಬಂದಿದ್ದ ….
ಹಳೆ ನೆನಪುಗಳು…
ಕೆಲಸದವರನ್ನು ನೇಮಿಸೋಣ ಎಂದಿದ್ದೆ…ಅದೇ ಕತೆ… ಬೇಡ , ಅಗತ್ಯ ಇಲ್ಲ ..
ಕೆಮ್ಮಂಗೆ ಇರಲಿಲ್ಲ …
ಜನರ ಕರೆದು ಮಾಡಿಸುತಿದ್ದ ನ್ಯಾಯ ಪಂಚಾಯ್ತಿಲಿ ಸೊಸೆ ಕೆಲಸ ಮಾಡೋದು ಧರ್ಮ ಅಲ್ವಾ , ಈಗಲೂ ಅಮ್ಮನೇ ಮಾಡಬೇಕಾ …ತರಕಾರಿ ಕೂಡ ತರಲ್ಲ ಅನ್ನುತ್ತಿದ್ದ ?
ಹೌದು ಹೆಣ್ಣು ಮನೆಗೆ priority ಕೊಡ ಬೇಕು ಜನರ logical ಉತ್ತರ …!!!! ಅದನ್ನೆಲ್ಲಾ ನಿಧಾನವಾಗಿ ನನ್ನ ಬಳಿಯೇ ಹೇಳಿ discuss ಮಾಡಬಹುದಿತ್ತು ….ಅರ್ಥ ಮಾಡಿಕೊಳ್ಳದ ಹುಡುಗಿ ನಾನೇನಲ್ಲ …ಪರಿಹಾರ ಅಲ್ಲ ಅವನಿಗೆ ಬೇಕಿದ್ದಿದ್ದು ..ಹೆದರಿಸೋದು …
ಅದೇ ಸಂಬಳ ಕೊಟ್ಟಾಗ ಇಡಿ ತಿಂಗಳು ಚೆನ್ನಾಗಿ ನೋಡಿಕೊಂಡ..ನನಗೆ ಅರ್ಥ ಮಾಡಿಸಬೇಕಿತ್ತು..ಆ ಲಾಜಿಕ್ ನ !!!

ರವಿ , ಬಿಡಿ ಅವಳೇನೋ frustration ನಲ್ಲಿ ಹೇಳಿದ್ದಾಳೆ ..ದೊಡ್ಡದು ಮಾಡಿಕೊಳ್ಳೋಕೆ ಹೋಗಬೇಡಿ ….ಎಲ್ಲರು ಮನುಷ್ಯರೇ …ಹತಾಶೆಯಲ್ಲಿ ಚೂರು ಮಾತು ದೊಡ್ಡದ್ದಾಗುತ್ತೆ … ಕೆರೆದು ರಂಕಳು ಮಾಡಿಕೊಳ್ಳದ ಹಾಗೆ ಮುಂದೆ ಸಾಗಿಬಿಡಿ ..ಅಡ್ಜಸ್ಟ್ ಆಗೋವರೆಗೂ ಅಷ್ಟೇ ..ಆಮೇಲೆ ಎಲ್ಲ ಸರಿ ಹೋಗುತ್ತೆ …ನನಗು ಜನ ಸೂಚಿಸಿದ್ದ ಪರಿಹಾರವನ್ನೇ ಸೂಚಿಸಿದೆ ..ಬೇಗ ಮೊಗು ಮಾಡಿ ಕೊಂಡುಬಿಡಿ …concentration ಬದಲಾಗುತ್ತೆ …priority ಬದಲಾಗುತ್ತೆ…ಹೆಣ್ಣುಮಕ್ಕಳಿಗೆ carrier , professionನ ಸೆಳೆತ ಕಮ್ಮಿ ಆಗುತ್ತೆ..ಆಗ ಎಲ್ಲ ಸರಿ ಹೋಗುತ್ತೆ …

ಅವನಿಗೆ ನೆಮ್ಮದಿ ಇಲ್ಲ …ಅದೇ ಕತೆಯನ್ನು ಪದೇಪದೇ ಹೇಳಿದ ..ಎಷ್ಟನೆ ಬಾರಿಯೋ …

ಎಷ್ಟು ಕೋಪ ಇತ್ತು ಗೊತ್ತ ನನಗೆ ಮುಂಚೆ …ಸಣ್ಣದಕ್ಕೂ ಚೇರ್ ಎತ್ತಿ ಬಿಸಾಕಿ ಬಿಡುತ್ತಿದ್ದೆ ..ಈಗ ಎಷ್ಟು ಬದಲಾಗಿದ್ದೇನೆ ಗೊತ್ತಾ ??ಅವಳಿಗೋಸ್ಕರ ..

ರವಿ ಈ ಕೋಪ ಗಂಡಸರಿಗೆ harmones related ಅ ?

ಮುಂಚೆ ಫ್ರೆಂಡ್ಸ್ ಅಂತ ಸುತ್ತೋಕೆ ಹೋಗ್ತಿದ್ದೆ ..ಈಗ ಎಲ್ಲ ಬಿಟ್ಟು ಮನೆಲಿರ್ತೀನಿ , ಅವಳಿಗೋಸ್ಕರ …
ಆದರು 3 ತಿಂಗಳಿಗೆ ಬೇರೆ ಮನೆಮಾಡು ಅಂತಾಳೆ ..ಸರೀನಾ ??

ನಮ್ಮದು 2 ಕೋಟಿ ಆಸ್ತಿಯಿದೆ …50 ಸಾವಿರ ಬಾಡಿಗೆ ಬರುತ್ತೆ… ಅಪ್ಪನಿಗೆ pention ನೆ 25 ಸಾವಿರ ಬರುತ್ತೆ ….ಅಣ್ಣಂದಿರು , ಅತ್ತಿಗೆಯರು ಡಾಕ್ಟರ , ಇಂಜಿನಿಯರ್ಗಳು ..
ಆದರು ನಮ್ಮ ಮನೇಲಿ ತುಂಬಾ ಡೌನ್ ಟು ಅರ್ಥ್ ಆಗಿ ಬೆಳೆಸಿದ್ದಾರೆ..ನಾವು ತಿಂದ ತಟ್ಟೆಯನ್ನು ನಾವೇ ಕ್ಲೀನ್ ಮಾಡ್ತಿವಿ …
ಅವಳ ಅಪ್ಪನ ಹತ್ತಿರ ಒಂದು ಸ್ವಂತ ಮನೆ ಕೂಡ ಇಲ್ಲ …ಅಣ್ಣ ರಾಜನ ತರಹ ಶೋಕಿ ಮಾಡ್ತಾನೆ …. ತಟ್ಟೆ ಕೂಡ ಎತ್ತಲ್ಲ…ಕೂತ ಜಾಗಕ್ಕೆ ಎಲ್ಲ ಬಂದು ಬೀಳಬೇಕು…

ರವಿ ಆಸ್ತಿ count ಯಾಕೆ ಈ ವಿಷಯಕ್ಕೆ…ನಿಧಾನವಾಗಿ ಅವಳಿಗೆ ನಿಮ್ಮ ಫೀಲಿಂಗ್ಸ್ ಅರ್ಥ ಮಾಡಿಸಿ..ಅಮ್ಮನಿಗೆ ಒಪ್ಪಿಸಿ ಕೆಲಸದವಳನ್ನು ನೇಮಿಸಿ …ಅವಳು ಕೇಳಿದರೆ ಖಂಡಿತ ಅವರು ಒಪ್ಪೋಲ್ಲ .ನೀವೇ ಕೆಟ್ಟವರಾದರು ಪರವಾಗಿಲ್ಲ, ಮನೆಯಲ್ಲಿನ ಸಮತೋಲ ಹಾಳಾಗಬಾರದು ಎಂದರೆ ಸ್ವಲ್ಪ initiative ತೆಗೆದುಕೊಂಡು ದೊಡ್ಡವರಿಗೆ ಅರ್ಥ ಮಾಡಿಒಪ್ಪಿಸಬೇಕು …ಕಳೆದುಕೊಳ್ಳುವ ನೋವಿಗಿಂತ ಈ ತರ ಸಣ್ಣ ನಿಷ್ಟುರು ಎಷ್ಟೋ ವಾಸಿ …!!
ಸಣ್ಣ ವಿಷಯಗಳೇ ಹೆಚ್ಚು ತೊಂದರೆಕೊಡೋದು ….ಕಂಫರ್ಟ್ ಪಡೆಯುವಷ್ಟು source ಇದೆ ಅಲ್ವಾ …..
ಯೋಚನೆ ಮಾಡಿ ಪರಿಹಾರ ಇದೆ ….ನಿಧಾನವಾಗಿ ಹೇಳಿದೆ ..

ಯಾಕೋ ವಿಪರೀತ ಡಿಸ್ಟರ್ಬ್ ಆಗಿದ್ದ …
ಸರಿ ಒಂದು ಗಂಟೆ ಆಯಿತು ಹೋಗೋಣವ ಅಂದೇ …
ಇಲ್ಲ ಹೇಮಾ ನಾ ಇನ್ನು ಮಾತಾಡ್ಬೇಕು… ಕೂತ್ಕೊಳ್ಳಿ ಅಂದ…
ಹೇಳಿದ್ದನ್ನೇ ಮತ್ತೆ ಮತ್ತೆ ಹೇಳುತ್ತಿದ್ದ …ನನಗೆ ಆಕಳಿಕೆ ಶುರುವಾಯ್ತು …

ನಮ್ಮದು ದೊಡ್ಡ ಫ್ಯಾಮಿಲಿನೆ….ಮುಂಚೆನೇ ಗೊತ್ತಿತ್ತು ಅಲ್ವಾ, ನಾವೇನು ಮುಚ್ಚಿಟ್ಟು ಮದುವೆ ಮಾಡಿಕೊಂಡೆವ ….. ಹೀಗೆಲ್ಲ ಆಗಬಹುದು ಅಂತ ಯೋಚಿಸಿ ನಿರ್ಧಾರ ತೆಗೆದುಕೊಂಡಿರಬೇಕಿತ್ತು ಅಲ್ವಾ ?
ಒಬ್ಬನೆ ಮಗನ ಸಂಬಂಧ ಬಂದಿತ್ತು, ಅಂತಾಳೆ …
ಕೋಪ ಬರಲ್ವ…
.ಅವರ ಮನೇಲಿ ಕೆಲಸ ಕಲಿಸಿಲ್ಲ ಅಂದರೆ ಚಿಕ್ಕ ಮನೆಯನ್ನು ನೋಡಿ ಮದುವೆ ಮಾಡಬೇಕಿತ್ತು ಅಲ್ವಾ …ಮೊದಲೇ ಗೊತ್ತಿರಲಿಲ್ಲವಾ ??

ಚಿಕ್ಕ ಫ್ಯಾಮಿಲಿ ದೊಡ್ಡ ಫ್ಯಾಮಿಲಿ ಅಂತ ಬರೋಲ್ಲ ರವಿ …ನಮ್ಮದು 3 ಜನರ ಪುಟ್ಟ ಫ್ಯಾಮಿಲಿ ..ಆದರು ಅಷ್ಟೆಲ್ಲ ಗೋಳಾಡಿಸಿಬಿಟ್ಟರು …ಏನೇ ಆದರು ದೊಡ್ಡವರ ಹತ್ತಿರ, ಮೂರನೆಯವರ ಹತ್ತಿರ ದೂರು ತೆಗೆದುಕೊಂಡು ಹೋಗಿ ಹಿಂಸೆ ಮಟ್ಟಕ್ಕೆ ಇಳಿಯಬಾರದು …

ಎಲ್ಲ ಲಿವಿಂಗ್ ಸ್ಟೈಲ್ ಗೂ ಅದರದೇ ಆದ pros ಅಂಡ್ cons ಇರುತ್ತೆ…ಮನಸು ಮನಸುಗಳ ನಡುವೆ ಸಹಿಷ್ಣುತೆ ಇರಬೇಕಷ್ಟೇ ….
ಇಬ್ಬರೇ ಬೇರೆ ಮನೆಮಾಡಿಕೊಂಡರೆ ಸಮಸ್ಯೆ ಬಗೆಹರಿಯುತ್ತಾ ?
ಕೆಲಸಕ್ಕೆ ಹೋಗುವ ತರಾತುರಿಯಲ್ಲಿ ಗೀಸರ್ ಆಫ್ ಮಾಡುವುದ ಮರೆತರೆ ಇಡಿ ದಿನ ಕಾಯ್ದು ಕೆಟ್ಟೋಗುತ್ತೆ ….ಸಿಲಿಂಡರ್ ನಂತದ್ದು ಏನು ಬೇಕಾದ್ರೂ ಆಗ ಬಹುದಲ್ವಾ??
ನಾವೇ ತರಕಾರಿ ತಂದು ಬೇಯಿಸಿ ತಿಂದು ತೊಳೆದು ಮಲಗಬೇಕು ಎಂದರೆ, ಸಣ್ಣ ಸಣ್ಣದು burden ಆಗಿಬಿಡುತ್ತಲ್ವಾ.. ಕಸ ಚೆಲ್ಲಲಾದರು ಯಾರಾದರು ಮನೆಯಲ್ಲಿರಬೇಕಲ್ವಾ…
ಮೊಗು ಆದರೆ ಅದನ್ನು ಕಟ್ಟಿಕೊಂಡು ಹೇಗೆ ಕೆಲಸಕ್ಕೆ ಹೋಗಿಬರೋದು ?
ನೀವೇ ನೋಡಿ … ಎಷ್ಟು ಜನ ಇದ್ದಾರೆ ನಮ್ಮ ಆಫೀಸ್ ನಲ್ಲಿ…ಇಬ್ಬರು engineersu ಲಕ್ಷಗಟ್ಟಲೆ ಸಂಪಾದನೆ ….ಬೇಬಿ ಕೇರ್ ಗೆ ಮೊಗು ಬಿಟ್ಟು ಬಂದು , ಫುಡ್ ವರ್ಲ್ಡ್ ನಲ್ಲಿ ಶಾಪ್ ಮಾಡಿ , ಮೊಗು ಕರೆದುಕೊಂಡು ವಾಪಸು ಹೋಗಿ ಸಂಸಾರ ಮಾಡಬೇಕು …ದುಡಿಯೊದೆಲ್ಲ ಬಾಡಿಗೆಗೆ , ಬೇಬಿ ಕೇರ್ ಗೆ , ಕಾರ್ ಪೆಟ್ರೋಲ್ ಗೆ , EMI ಗೆ ಮುಗಿದು ಹೋಗುತ್ತೆ…ಏನು ಲಕ್ಸುರಿ ಲಿವಿಂಗ್, ಕಂಫರ್ಟ್ ಲಿವಿಂಗ್ ಎಂದರೆ …ಎಲ್ಲಿ ಬದುಕುತ್ತಿದ್ದೇವೆ ?ಸುಮ್ಮನೆ ಸವೆಸುತ್ತಿದ್ದೇವೆ ಅಷ್ಟೇ ….
ಮೇಲಿಂದ ಎಲ್ಲ ಚೆನ್ನಾಗಿ ಕಾಣುತ್ತದೆ…. ಒಳಗೆ ಆಡದೆ ತೊಂದರೆ ತಾಪತ್ರೆಯಗಳಿರುತ್ತವೆ …alternate options ಸೀಕ್ ಮಾಡೋದ್ಕಿಂತ ಇರೋದನ್ನೇ ಬೆಟರ್ ಮಾಡಿಕೊಂಡು , ಒಬ್ಬರನ್ನು ಒಬ್ಬರು ಸಂಭಾಳಿಸೋದೆ ಜೀವನ..
ಅವಳಿಗೆ ಇದನೆಲ್ಲ ಬಿಡಿಸಿ ಹೇಳಿ ಅರ್ಥ ಮಾಡಿಸಿ..ಆದರೆ arguement ಮಾಡಿಕೊಂಡು ನೆಮ್ಮದಿ ಹಾಳು ಮಾಡಿಕೊಳ್ಳಬೇಡಿ …
…ಇದು ನಿಮ್ಮೊಬ್ಬರ ಸಮಸ್ಯೆ ಅಲ್ಲ… ಎಲ್ಲ ಜಾತಿ, ಅಂತಸ್ತು, ಓದು , ನೌಕರಿ ಮೀರಿ ಕಾಡುವ ಎಲ್ಲರ ಮನೆಯ ಸಮಸ್ಯೆ …
ಒಂದೆರಡು ವರ್ಷ ಅಷ್ಟೇ …ಆಮೇಲೆ ಎಲ್ಲ ಅಡ್ಜಸ್ಟ್ ಆಗಿ ಹದ ಮೂಡುತ್ತದೆ ….ಸಂಸಾರ ಕುದುರುತ್ತದೆ ..ಅಲ್ಲಿವರೆಗೂ ತಾಳ್ಮೆ ಇರಲಿ ಅಷ್ಟೇ …ಇಷ್ಟಕೆಲ್ಲ ಇಷ್ಟೊಂದು ತಲೆಕೆಡಿಸಿಕೊಂಡು ಒದ್ದಾಡಬೇಡಿ ..ಟೇಕ್ ಇಟ್ easy ..ಟೇಕ್ ಇಟ್ ಲೈಟ್ ಅಂದೇ …
ನನ್ನ ಅನುಭವಕ್ಕೆ ನಿಲುಕಿದ್ದು, ನಾ ಹೇಳೋಷ್ಟು ಹೇಳಿದೆ …

ಆದರು ಮುಂಚೆನೇ ಎಲ್ಲ ಗೊತ್ತಿತ್ತು ಅಲ್ವಾ, ಯಾಕೆ ಈಗ ಇಶ್ಯೂ ಮಾಡ್ತಾಳೆ ಅಂದ …

ಹನುಮಂತಾನೆ ಹಗ್ಗ ಕಡಿತಿದ್ನಂತೆ, ಯಾರೋ ಶಾವಿಗೆ ಕೇಳುದ್ರಂತೆ…. ನಾನೇಗೆ ಉತ್ತರ ಕೊಡಲಿ
ನನ್ನ ಬಳಿಯೂ ಇದೆ ಪ್ರಶ್ನೆ …
ಮುಂಚೆನೇ ಗೊತ್ತಿತ್ತು ಅಲ್ವಾ ?
ನಮ್ಮ ಮನೆಯ ಹೆಣ್ಣುಮಕ್ಕಳು sensitive ಅಂತ ಹೇಳಿದ್ದರು… ಅವನ temperment , ಸಿಟ್ಟು, ಕೋಪ ಗೊತ್ತಿತಲ್ವಾ …. ಹೊಡೆಯೋದು, ಬಡಿಯೋದು ಅವರ ಮನೆಯ ಗಂಡಸರುಗಳ ಸ್ವಭಾವ ಎಂದರೆ ಯಾಕೆ ಒಪ್ಪಿಕೊಂಡ …
ನನ್ನ ಫ್ರೆಂಡ್ಸ್ ಬಗ್ಗೆ ಹೇಳಿದ್ದೆ ಅಲ್ವಾ ಆಮೇಲೆ ಯಾಕೆ ತಕರಾರು ಮಾಡಿದ ..
ಎಷ್ಟು ಸ್ಪಷ್ಟವಾಗಿ ಹೇಳಿದ್ದೆ ..
ನನ್ನ ಸ್ವಾತಂತ್ರ್ಯ, ಆಯ್ಕೆ, ಕೆಲಸದ ಬಗ್ಗೆ ನಾನು compromise ಆಗಲ್ಲ …
ಮುಂಚೆನೇ ಎಲ್ಲ ಗೊತ್ತಿತ್ತು ಅಲ್ವಾ …?
ಈಗ outspoken ಅಂದ್ರೆ , ನಾನು ಹೇಳಿದಂಗೆ ಕೇಳಿಕೊಂಡು ಬಿದ್ದಿರಬೇಕು ಎಂದರೆ …

ಮುಂಚೆನೇ ಗೊತ್ತಿತ್ತು ಅಲ್ವಾ ? ಅಂದ
ತೂಕಡಿಕೆ ಶುರುವಾಯ್ತು …ಹೇಳಿದ್ದೆ ಎಷ್ಟುಸಾರಿ ಹೇಳ್ತಿಯೋ ಮಾರಾಯ ಅಂದುಕೊಂಡೆ…
ಊಟ ಮಾಡ್ಬೇಕು, ಕರಿತ್ತಿದ್ದಾರೆ ಅನ್ನುತ್ತಿದ್ದರು ಅರುಣ್ ಗೂ ನಾನು ಹೀಗೆ ತಲೆ ತಿನ್ನುತ್ತಿರುತ್ತೇನೆ…ಅದೆಷ್ಟು ಬೈಕೊತಾನೋ ಪಾಪದ ಹುಡುಗ …..!!!!!!!!!

ಸಿಗ್ಮಂಡ್ ಫ್ರಾಯ್ಡ್ ಮತ್ತು ಎರಡು ಲಕ್ಷ !!!!

ಎರಡು ಲಕ್ಷ ಕೊಡ್ತಾನಂತೆ ಅಂದೆ.
ಅದರಜೊತೆಗೆ ನಾನೇ ಇನ್ನೆರಡು ಲಕ್ಷ  ಕೊಡ್ತೀನಿ ಬಂದು ನಮ್ಮೂರಲ್ಲಿ ಚಾಕರಿ ಮಾಡಿಕೊಂಡು ಜೊತೆಗಿರು  ಅಂತ ಹೇಳಬೇಕಿತ್ತು  ಅಂದರು .
ಎರಡಕ್ಕೆ ಇನ್ನೆಂಟು ಸೇರಿಸಿ  ಕೊಡ್ತೀವಿ ಅವರ ಅಕ್ಕನ್ನನ್ನು ಕಳಿಸಿಕೊಡುತ್ತಾನ    ಕೇಳು ಅಂದರು .
ಅಮ್ಮ ಎಂದೆಂದಿಗೂ ಶಾಂತವಾಗಿ ಹರಿವ   ತೊರೆ …ಎಂತ ಸನ್ನಿವೇಶಕ್ಕೂ ತೀಕ್ಷ್ಣ ಪ್ರತಿಕ್ರಿಯೆ ಬರುವುದಿಲ್ಲ.ತಾಳ್ಮೆ ಕಳಕೊಂಡು ಮಾತಾಡುವುದನ್ನು ನಾನು ನೋಡಿದ್ದು ಅಪರೂಪವೇ ..
ದುಡ್ಡಿನ ವಿಷಯವಲ್ಲ ಅದು..ಅವರ  ಹೊಟ್ಟೆಯ  ಸಂಕಟ ಕುದಿ ಹತ್ತುತಿತ್ತು.
ನಟಿಗೆ ಮುರಿದು ಮುರಿದು ಶಾಪ ಹಾಕಿದಳು ..ಅಂತ ಭಾಷೆಗಳನೆಲ್ಲ ನಾನು ಅವಳ ಬಾಯಲ್ಲಿ ಕೇಳಿರಲಿಲ್ಲ ..ದಿವ್ಯ ಸಂಸ್ಕೃತ !!

ಅ ಲಾಯರ್ ಗೆ ಹೇಳು ಅವನು ಗಂಡಸೇ ಅಲ್ಲ   , **** ಅಂತ …

ಲಾಯರ್ ಅದಕ್ಕೇನು ಮಾಡೋಕಾಗುತ್ತೆ ನಾನಂದೆ ..

ಒಳ್ಳೆತನಕ್ಕೆ, ಒಳ್ಳೆ ಮಾತಿಗೆ ಬಗ್ಗುವ ಜನರಲ್ಲ..ಇಷ್ಟು ದಿನ ನೀನು ಸುಮ್ಮನೆ ಇದ್ದಿದ್ದೆ ನಿನ್ನ ವೀಕ್ನೆಸ್ಸ್– ಅಕ್ಕ ತೀರ್ಪು ಕೊಟ್ಟಳು ..

ಜೈಲ್ ಗೆ ಹಾಕಿಸು ಎಂದಳು ..
ನನಗೇನು ಸಿಗುತ್ತೆ ಅಂದೇ
ನಮ್ಮ ಎಷ್ಟೆಲ್ಲಾ ಜನರ ಹೊಟ್ಟೆ ಉರಿಸಿದ್ದಾರೆ … ಸ್ವಲ್ಪನಾದ್ರು ತಣ್ಣಗಾಗಲಿ..ಅವಮಾನ ಅಂದ್ರೆ ಏನು ಅಂತ ನಿಜವಾಗಲು ಗೊತ್ತಾಗಬೇಕು..ಇನ್ಯಾರು ಅವರಿಗೆ ಅಯ್ಯೋ ಪಾಪ ಅನ್ನಬಾರದು ..

ಚೇತನಾಗೆ ಹೇಳಿದೆ,– ಅಕ್ಕ 2   ಲಕ್ಷ ಅಂತೆ ..!
ಗಂಡಂದಿರು ಅಷ್ಟು ಸಸೂರಾಗಿ ಸಿಗುತ್ತಾರೆ ಅಂದರೆ ನಾನು ಕೊಂಡುಕೊಳ್ಳಬಹುದಲ್ವಾ ?
ಸಭ್ಯತೆಯ ಗೆರೆ ಮೀರಿತ್ತು ನನ್ನ ಭಾಷೆ ..ಆದರೆ ದಾಟಿಸಿದವರು ಯಾರು ?
ಆ ಬಿಡಿಗಾಸನ್ನು  ಬೇಡ ಅಂದು ಡೈವೋರ್ಸ್ ಬಿಸಾಕು ..ನನ್ನ ಹೆಸರಲ್ಲಿ ಬದುಕಿಕೊಳ್ಳಿ, ಗತಿಗೆಟ್ಟವರು   ಅಂತ ಹೇಳು–ಸಾತ್ವಿಕ ದ್ವೇಷ ಅವರದ್ದು ..
 ಅವನೆದುರಿಗೆ ಇನ್ನೊಬ್ಬನನ್ನು ಮದುವೆಯಾಗಿ ಸಂಸಾರ , ಪ್ರೀತಿ , ನೆಮ್ಮದಿ ಅಂದರೆ ಏನೆಂದು ಅವನಿಗೆ ತೋರಿಸಬೇಕು..
ನನಗೆ  ಸಹಾಯ ಮಾಡ್ತಿರ   ಕೇಳಿದೆ…
ಟ್ರಸ್ಟ್ me …i  promise  ಎಂದಳು ..

ಹೊಟ್ಟೆಯಲ್ಲಿ ಮತ್ತೆ ಜ್ವಾಲಾಮುಖಿ …ಸುಡುಸುಡುವ ಲಾವಾರಸ .ಕರುಳ ಒಂದೊಂದು ಸೆಲ್ ಕೂಡ ಅಕ್ಷರಸಹ ಬೇಯುತ್ತಿದ್ದವು . 2  ಲಕ್ಷ !!!!

ಮದುವೆಯ ತಯಾರಿಯ ಸಮಯದಲ್ಲಿ ಅವನ ತಲೆಮಾಸಿದ ಮಾವ ಇಡಿ ಛತ್ರಕ್ಕೆ ac ಬೇಕು ಎನ್ನುತಿದ್ದ …ಸಿಡಿಮಿಡಿಗುಟ್ಟಿದ್ದೆ…ಅವರ ಮನೆಯಲ್ಲಿ ac  ಇದೆಯಾ ? ಕೇಳಿದ್ದೆ ..
ದೊಡ್ಡ ರಂಪ ಮಾಡಿದ್ದ… ದೊಡ್ಡವರಿಗೆಲ್ಲ ಫೋನ್ ಮಾಡಿ ಕ್ಷಮೆ ಕೇಳಿ, ಬೇಕಾದರೆ ನಮ್ಮ ಆಸ್ತಿಯನ್ನು ಮಾರಿಯಾದರು ದುಡ್ಡು ಕೊಡುತ್ತೇವೆ ಎಂದಿದ್ದ …

2  ಲಕ್ಷ ..!!
ಅವನ ಕೆಪ್ಯಾಸಿಟಿ ಅಷ್ಟೇ ಅಂತೆ
ನನ್ನ 4  ತಿಂಗಳ   ಸಂಬಳ ..!
ಒಂದು ವಾಚ್ ನ ನನಗಾಗಿ ಕೊಳ್ಳಬೇಕೆಂದರು 3  ಸಾವಿರಕ್ಕಿಂತ ಹೆಚ್ಚಿನದು ನೋಡಲು ಹೋಗುತ್ತಿರಲಿಲ್ಲ..
ಅಂತದ್ದರಲ್ಲಿ ಮದುವೆಗೆ ಮುಂಚೆ ಉಡುಗೊರೆ ಅಂತ 20 ಸಾವಿರದ ವಾಚ್ ನ ಅವನಿಗೆ ಕೊಡಿಸಿದ್ದೆ … ಅವನ ಕೆಪ್ಯಾಸಿಟಿ ಅಷ್ಟಿದೆ ಅಂತ, ಕೊಡಿಸುವ ನನ್ನ   ಕೆಪ್ಯಾಸಿಟಿ ಅಷ್ಟಿದೆ ಅಂತ …  

ಮಸಾಲಪುರಿ ಕೇಳಿದರೆ ಬೇಲ್ಪುರಿ ಆರ್ಡರ್ ಮಾಡ್ತಿದ್ದ ..ವಿಚಿತ್ರ ಬುದ್ದಿ! ಹೆಂಡತಿಯ ಆಯ್ಕೆ ನಡೆಯಬಾರದು ಅಂತ..ಇನ್ನು ಹೆಚ್ಚಿಗೆ ಹಠ ಮಾಡಿದರೆ 10 ರೂಪಾಯಿ ಇಲ್ಲ ಅಂತ ಜಗಳ ಕಾಯುತಿದ್ದ ..
ಅಂದು ನಾನು ಕೇಳದೆ ಪಾನಿಪುರಿ ಕೊಡಿಸಿದ…ನಂತರ ಮತ್ತೆ ಚಿಕನ್ ಕೊಡಿಸಿದ …ಎಲ್ಲ ಒಂದೇ ದಿನಾನ ಅಂದುಕೊಳ್ಳುತ್ತಿರುವಾಗಲೇ ಜ್ಯೂಸು icecream ನೂ  ಸಹ ಕೊಡಿಸಿದ ..
ಅದೇನು ಇಷ್ಟು ಒಳ್ಳೆಯವನಾಗಿ ಹೋದ ಅಂದುಕೊಳ್ಳುತ್ತಿರುವಾಗಲೇ ಏಟಿಎಂ ಎದುರು ಕಾರು ನಿಲ್ಲಿಸಿದ ..  
ಜಂಟಲ್ಮನ್ ತರಹಾನೇ ಕೇಳಿದ … ಹಿಂದೂ ಮುಂದೂ  ಯೋಚಿಸದೆ 70 ಸಾವಿರ ಡ್ರಾ ಮಾಡಿಕೊಟ್ಟೆ …
ಮನೆಗೆ ಬಂದು ನಗುನಗುತ್ತ ತಬ್ಬಿ ಮಲಗಿದೆ..
 ನನ್ನ ಮೂರ್ಖತನದ ಬಗ್ಗೆ ಅವನಿಗೆ ತಬ್ಬಿಬ್ಬಾಗಿರಬೇಕು.. …200  ರೂಪಾಯಿಗೆ 70  ಸಾವಿರ ಕೊಟ್ಟ ನನ್ನ ಪೆದ್ದುತನಕ್ಕೆ ಅನುಕಂಪ ಮೂಡಿರಬೇಕು..ಒಂತರ ಸಿಕ್ಕಾಪಟ್ಟೆ ಒಳ್ಳೆಯವಳು ಕಣೆ ನೀನು ಅಂದ..ಬಹುಷ್ಯ ನನಗಷ್ಟೇ ಬೇಕಿತ್ತೇನೋ

ಯಮ್ಮ ಮನೆಯಂಗಳದಿ ಬೆಳೆದೊಂದ ಹೂವನ್ನು
ನಿಮ್ಮ ಮಡಿಲೊಳಗಿರಲು  ತಂದಿರುವೆವು ..
ಕೊಳ್ಲಿರೀ      ಮಗುವನ್ನು
ಯಮ್ಮ ಮನೆ ಬೆಳಕನ್ನು
ನಿಮ್ಮ ಮನೆಯನ್ನು ತುಂಬಲು ಒಪ್ಪಿಸುವೆವು
ಹೆತ್ತವರ ಮನೆಗಿಂದು ಹೊರಗಾದೆ ಓ ಮಗಳೇ ..

ಎಸ ಸೀತರಾಮಯನವರ  ಹಾಡನ್ನು ಅಪ್ಪ ಭಾವಪೂರ್ಣವಾಗಿ ಅರ್ಥಮಾಡಿಸುತ್ತಿದ್ದರು..ಬರೆದವ ಎಂದ ಸದ್ಗೃಹಸ್ತನಿರಬೇಕು  ಎಂದರು …!!

 ರೂಮಲ್ಲಿ ಕೂತು ಸರಿ ರಾತ್ರಿ ಓದುತ್ತಿರುವಾಗ ಅಪ್ಪನ ಲಯಭರಿತ ಗೊರಕೆ ಸದ್ದು …
ಒಮ್ಮೆಲೇ ನಿಂತು ಹೋಗುತ್ತಿತ್ತು .ಮಯಲ್ಲೆಲ್ಲ ನಡುಕ …
” ಎಷ್ಟೇ ಖರ್ಚಾದರು ಪರವಾಗಿಲ್ಲ ಒಳ್ಳೆ operation  ಮಾಡಿ doctor  ” ಎಂದರೆ ಅವರು ಹೇಳುತ್ತಿದ್ದರು , ಮೊದಲ ಬಾರಿ ಹೃದಯಾಘಾತ ಆದಾಗ ಆಗಿರುವ ಮಸಲ್ ಡ್ಯಾಮೇಜ್ ನಿಂದ ಹೃದಯ ಅರ್ಧ ಅದಾಗಲೇ  ಸತ್ತಿದೆ ..ಆಪರೇಷನ್ ನ ತಡೆಯುವಷ್ಟು ಶಕ್ತಿ ಕೂಡ ಇಲ್ಲಾ …
ಇಷ್ಟು  ವರ್ಷ ಅವರು ಬದುಕಿದ್ದಾರೆ ಎಂದರೆ ಅದು  science ನೆ  ಮೀರಿದ ವಿಲ್ ಪವರ್ ಮಾತ್ರ …
ಯಾವಾಗ ಏನು ಬೇಕಾದರೂ ಆಗಬಹುದು…ಇರುವಷ್ಟು ದಿನ ಚೆನ್ನಾಗಿ ನೋಡಿಕೊಳ್ಳಿ .
ಬುಕ್ಕ್ ಎಸೆದು ಓಡಿ  ಬಂದು ನೋಡುತ್ತಿದ್ದೆ  … ಬೆಡ್ ಲೈಟ್ ನ ಮಂದ ಬೆಳಕಲ್ಲಿ ಉಸಿರಾಟಕ್ಕೆ ಹೊಟ್ಟೆಯಾ ಏರಿಳಿತ ಕಂಡಮೇಲೆ ಒಂದು ಸಣ್ಣ ನಿಟ್ಟುಸಿರು ..

ಅಪ್ಪ ಹೊದ್ದುಕೊಳ್ಳುತ್ತಿದ್ದದ್ದು ಬಿಳಿ ಮೇಲುಹೊದಿಕೆ …
ಅದೊಂದು ದಿನ ತುಂಬಾ ತಡವಾಗಿತ್ತು ..ಎಬ್ಬಿಸುತ್ತಿದ್ದೆ   … ಅಲ್ಲಾಡಲಿಲ್ಲ..ಎಷ್ಟೇ ಕೊಗಿದರು ಸ್ಪಂದನೆ ಇಲ್ಲ ..
ಧ್ವನಿಯಲ್ಲಿ ಗಾಬರಿ ಶುರುವಾಯ್ತು .
ನನ್ನ  ರೇಗಿಸೋಕೆ ಬೇಕೆಂದೇ ಹಾಗೆ ಮಾಡಿದ್ದು ಅನ್ನಿಸುತ್ತೆ .
ಹೋಗಿಬಿಟ್ಟ ಅಂತ ಹೆದರಿಕೊಂಡೆಯ ?  ನೋಡು ಮೊದಲೇ ಬಿಳಿ ಹೊದಿಕೆಯನ್ನು ರೆಡಿ ಮಾಡಿಕೊಂಡಿದ್ದೇನೆ …ಎಂದರು
ಇಬ್ಬರು ಜೋರಾಗಿ ನಕ್ಕು ಬಿಟ್ಟೆವು ….
ವಿಚಿತ್ರ  ಗೆಳೆತನ  ನಮ್ಮದು …

ಒಂದೊಂದು ದಿನ ತಳ್ಳುವುದನ್ನು ಎಣಿಸುತ್ತ ಬದುಕುತ್ತಿದ್ದೇನೆ ನಿಮಗೇನು ಗೊತ್ತು ನನ್ನ ದೇಹಸ್ಥಿತಿ  ಎನ್ನುತಿದ್ದರು..ಅವರ ಯಾವುದಾದರು ಹಟಕ್ಕೆ ನಾವು ಅಡ್ಡಗಾಲು ಹಾಕಿದರೆ ಎಮೋಷನಲ್ ಆಗಿ ಹೀಗೆಲ್ಲ ಮಾತಾಡಿ ಕಟ್ಟಿಹಾಕಿಬಿಡುತ್ತಿದ್ದರು.
maths  ಮಾಡುತ್ತಾ ಕುಳಿತಿರುವಾಗ ಪಾಪು , ಬಂದು ಇಲ್ಲಿ ಫ್ಯಾನ್ ಹಾಕು ಅನ್ನುತಿದ್ದರು ..
ಕೈ ಚಾಚಿದರೆ ಸ್ವಿಚ್ ಸಿಗುತ್ತೆ, ಸೋಮಾರಿ ಆಗಿಬಿಟ್ರೆ ನೀವು ಅಂತ ಸಿಡುಕಿಕೊಂಡು ಬಂದು ಹಾಕುತ್ತಿದ್ದೆ ..
ನಾನು ಪೇಷಂಟ್ ಅಪ್ಪ, ಸುಸ್ತು ಎಂದುಬಿಡುತ್ತಿದ್ದರು..
ಚುರ್ರ್ ಅನ್ನುತಿತ್ತು ಕರುಳು …ನನ್ನ ತಪ್ಪಿಗೆ ನಾನೇ ಮರುಗಿಕೊಂಡು   ಬೈದುಕೊಳ್ಳುತ್ತಿದ್ದೆ..

 ನಿನ್ನ 2nd  puc ಹೆಂಗೋ ದಾಟಿದರೆ ಸಾಕು ..ಓದೋಕೆ break   ಆಗಬಾರದು ನಿನಗೆ …
cet ರಿಸಲ್ಟ್ ಬಂದರೆ ಸಾಕು ..
ಇಂಜಿನಿಯರಿಂಗ್ ಸೀಟು ಸಿಕ್ಕರೆ ಸಾಕು, ಆಮೇಲೆ ಹೆಂಗೋ ನೀನೆ ಲೋನ್ ನಲ್ಲಿ ಓದಿ ಪೂರ್ತಿ ಮಾಡಿಕೊಳ್ತೀಯ ..
ಅಕ್ಕನ ಮದುವೆಯಾದರೆ ಸಾಕು ..
ನಿನ್ನ ಮದುವೆಯಾದರೆ ಸಾಕು..ಅಲ್ಲಿನ ವರೆಗೂ ನಾನು ಬದುಕಿದ್ದರೆ ಸಾಕು …ಅಷ್ಟೇ ನಾನು ದೇವರಲ್ಲಿ ದಿನಾ  ಕೇಳುವುದು ..ನಾನು ಹೊರಟುಹೋದರೆ  ಯಾರು ನೋಡ್ತಾರೆ  ನಿಮ್ಮನ್ನು ..ಹೆಣ್ಣುಮಕ್ಕಳನ್ನು ಬೀದಿಯಲ್ಲಿ ಬಿಟ್ಟು  ತಬ್ಬಲಿಮಾಡಿ  ಹೊರಟುಹೋದ ಅಂತಾ ಬೈದುಕೊಳ್ಳಲ್ಲ್ವ   ಜನ ನನ್ನ ….

ನಾವೆಲ್ಲಾ ದುಡಿಯೋಕೆ ಹೋಗ್ತಿದಿವಲ್ಲ , ಹೆಂಗೋ ನಡೆಯುತ್ತೆ, ಸುಮ್ಮನೆ volentary ರಿಟೈರ್ಮೆಂಟ್ ತೆಗೆದುಕೊಂಡು ಆರಾಮಾಗಿ ಮನೇಲಿರಿ, ಸಾಕು  ಇಷ್ಟು ವರ್ಷ ದುಡಿದಿದ್ದು ಅಂತ ನಾವೆಂದರೆ
ಅಪ್ಪಟ ಗಂಡಸಿನ ಸ್ವಾಭಿಮಾನ !!
ಹೆಣ್ಣು ಮಕ್ಕಳ ಕೈಲಿ ದುಡಿಸಿಕೊಂಡು ಮನೆಯಲ್ಲಿ ಕೂತು ನಾನು ತಿನ್ನೋದ ನೋಡಿದವರು ಏನಂತಾರೆ  …
?!
ನಿನ್ನ ಮದುವೆಯೊಂದು ಆಗಿಬಿಡಲಿ…ದುಡ್ಡು ಬೇಕಲ್ವ  ಅದಕ್ಕೆ .
ಆಮೇಲೆ ರಿಟೈರ್ಮೆಂಟ್ ತೆಗೆದುಕೊಂಡು ಊರಿಗೆ ಹೋಗಿ ಸೆಟ್ಲ್ ಆಗಿಬಿಡುತ್ತೇನೆ …

 ಆ ಹುಡುಗ ಬೇಡ ಎತ್ತರ ಜಾಸ್ತಿ ಆಯಿತು, ಇವನು ನನಗಿಂತ handsome ಆಮೇಲೆ ಕೈ ಕೊಟ್ಟರೆ, ಮತ್ತವನಿಗೆ ಸ್ವಂತ ಮನೆಯಿಲ್ಲ , ಮನೆ ತುಂಬಾ ಜನ ನನಗೆ ಆಗಲ್ಲ …
ಏನೇನೋ ನೆಪ ಕೊಟ್ಟು ಬಂದವರೆಲ್ಲರನ್ನು reject  ಮಾಡುತ್ತಿದ್ದರು , ನಿಧಾನವಾಗೆ ಸರಿಯಾದ ಆಯ್ಕೆ ಮಾಡಲಿ ನನ್ನ ರಾಜಕುಮಾರಿ ಎನ್ನುತಿದ್ದರು …
ಮುಂದಿನ ವರ್ಷಕ್ಕೆ ಹೇಳದೆ ಕೇಳದೆ ಬಿಟ್ಟು ಹೊರಟೆ ಹೋದರು …
ಅವರಿವರು ಹಿಡಿದುಕೊಂಡು ಬರುವ ಗಂಡುಗಳಿಗೆಲ್ಲ ಬಿಸ್ಕೆಟ್ , ಜ್ಯೂಸು ಕೊಂಡುಕೊಳ್ಳಲು  ನಾನೇ  ಬೇಕರಿಗೆ   ಹೋಗಬೇಕಿತ್ತು ..ಇನ್ನಿಲ್ಲದಂತೆ ಅಪ್ಪನನ್ನು ಮಿಸ್ ಮಾಡಿಕೊಂಡು ಬಿಟ್ಟೆ…
ಮುಂದಿನವರ್ಷದಲ್ಲಿ  ಕಡೆಗೂ  ಆಯ್ತ್ಕೆ ಮಾಡಿದ್ದು ಇವನನ್ನ …

ಕಣ್ಣಲ್ಲಿ ನೀರು ಹಾಕಿಕೊಂಡು ಅಳುತ್ತ ಕತೆ ಹೇಳಿದರಂತೆ …
ಅಷ್ಟು ಚೆನ್ನಾಗಿ ಮಗಳಂತೆ ನೋಡಿಕೊಂಡೆ…ಹೀಗೆ ಮಾಡಿದಳು .
ಈಗ ಬೇಡ 2  ಲಕ್ಷ ಕೊಡ್ತೀವಿ …

ಕಿಟಕಿ ಮೇಲೆ ಧೂಳು ಕೂತಿದೆ , ಸಾರಿಗೆ ಉಪ್ಪು ಜೋರಾಯ್ತು, ನಲ್ಲಿ ನಿಲ್ಲಿಸಿಲ್ಲ ಅಂತ ವಾಚಾಮಗೋಚಾರ  ಬೈಯುತ್ತಿದ್ದದ್ದು, ಒಬ್ಬನೇ ಮಗ ಸರಿಯಾಗಿ ಮರ್ಯಾದೆ ಕೊಡುತ್ತಿಲ್ಲ ಅಂತ ರಂಪ ಮಾಡುತಿದ್ದದ್ದು ಅದದೇ ಕಾರಣಗಳಿಗಲ್ಲ  …ಸದಾ ಅಸಮಾಧಾನ, ಕೋಪ, ನಿಷ್ಟುರಕ್ಕೆ ಕಾರಣ ಬೇರೆ ಇತ್ತು ..ನನಗೊತ್ತು …ಅದರ ಹಿಂದೆ ನನ್ನ ಸಂಬಳ ಇರುತಿತ್ತು, ಅಪ್ಪನ ಕಾರ್ , ಗಾಡಿ ಇತ್ತು, ಜಮೀನಿತ್ತು, 20 ಲಕ್ಷ ದುಡ್ಡಿತ್ತು ..
indirect ಆಗಿ ರವಾನಿಸಿದ ನೀತಿ ಪಾಠ ಇತ್ತು …ಗಂಡ ಹೇಳಿದಂಗೆ ಕೇಳಬೇಕು, ಅವನ್ನನ್ನು ಕೇಳಿ ಎಲ್ಲ ಮಾಡಬೇಕು, ಅವನನ್ನ  ಚೆನ್ನಾಗಿ ಇಟ್ಟುಕೊಂಡರೆ ಇಲ್ಲಿ ಹೆಂಡತಿ ಎನ್ನುವ ಸ್ಥಾನದಲ್ಲಿ ಬದುಕುತ್ತೀಯ , ಇಲ್ಲ ಅಂದ್ರೆ ಸ್ಕ್ರಾಪ್ ಮಾಡಿಬಿಡುತ್ತೇವೆ ….

ಚೆನ್ನಾಗಿ ನೋಡಿಕೊಳ್ಳೋದು , ಮಗಳಂತೆ ನೋಡಿಕೊಳ್ಳೋದು ಎಂದರೇನು ಯೋಚಿಸುತ್ತಿದ್ದೆ ….ನಿದ್ದೆ ಬರಲಿಲ್ಲ ..
ಸಿಗ್ಮಂಡ್ ಫ್ರಾಡ್ ನೆನಪಾದ, ಇಡಿಪಸ್ ಥಿಯರಿ ನೆನಪಾಯ್ತು …
ಹೊರಗಡೆ ಒಳ್ಳೆ ಜನ..ಮನೆಯಲ್ಲಿ ಮೃಗ …ಅದರ ಮೇಲೆ ನನ್ನನ್ನೇ ಎಕ್ಸೆಂಟ್ರಿಕ್ ಮಾಡುತ್ತಿದ್ದರು ..
ಸ್ಚೆಜೋಫ್ರೇಣಿಯ  , spilt    ಪರ್ಸನಾಲಿಟಿ , ಬಾರ್ಡರ್ ಲೈನ್ ಡಿಸ್ಆರ್ಡರ್ , bipolaar   disease , complicated  behaviour  pattern  ಎಲ್ಲ ನೆನಪಾದವು …
ಯಾವಾಗ ನಿದ್ದೆ ಹತ್ತಿತ್ತೋ …
ವಿಚಿತ್ರ ಮತ್ತು ಭಯಾನಕ  ಕನಸು …
ಅಪ್ಪನ ಜೊತೆ ನನ್ನ ಮದುವೆಯಾದಂಗೆ  …
ಬೆಳಗ್ಗೆ ಕಣ್ಣು ಬಿಡುತ್ತಿದ್ದಂತೆ  ಮತ್ತೆ ನೆನಪಾದದ್ದು ಸಿಗ್ಮೊಂದ್ ಫ್ರಾಡ್ …ಇದ್ದಿದ್ದರೆ ಕನಸಿಗೆ ಅರ್ಥ ಹುಡುಕಬಹುದಿತ್ತೇನೋ…!!!!